For Quick Alerts
ALLOW NOTIFICATIONS  
For Daily Alerts

11 ಅತ್ಯುತ್ತಮ ಸರ್ವಕಾಲಿಕ ಫಿಟ್ನೆಸ್ ರಹಸ್ಯಗಳು

|

ನಾಗರಿಕತೆ ಬೆಳೆಯುತ್ತಿದ್ದಂತೆ ಉತ್ತಮವಾಗುತ್ತಿರುವ ಸೌಲಭ್ಯಗಳು ನಮ್ಮನ್ನು ಹೆಚ್ಚು ಹೆಚ್ಚು ಆಲಸಿಗಳನ್ನಾಗಿಸಿದೆ. ದೇಹಕ್ಕೆ ಅಗತ್ಯವಾಗ ಕನಿಷ್ಠ ವ್ಯಾಯಾಮಕ್ಕೂ ಪ್ರತ್ಯೇಕವಾದ ಸಮಯ ಮೀಸಲಿಡಬೇಕಾದ ಪರಿಸ್ಥಿತಿ ಬಂದಿದೆ. ಈ ಸಮಯವನ್ನೂ ಹೊಂದಿಸಲಾರದವರು ಸ್ಥೂಲಕಾಯ ಹೊಂದಿದ್ದು ಆರೋಗ್ಯದ ವಿಷಯದಲ್ಲಿ ಹಿಂದುಳಿಯುತ್ತಾರೆ. ವ್ಯಾಯಾಮದ ಕೊರತೆಯ ಕಾರಣ ಮಕ್ಕಳಿಂದ ಹಿರಿಯರವರೆಗೆ ಎಲ್ಲರೂ ಒಂದಲ್ಲಾ ಒಂದು ದೇಹಸಂಬಂಧಿ ವ್ಯಾಧಿಗಳಿಗೆ ತುತ್ತಾಗುತ್ತಾರೆ.

ಆರೋಗ್ಯವೇ ಭಾಗ್ಯ ಎಂಬ ಗಾದೆ ಇಂದಿನ ದಿನದಲ್ಲಿ ಹೆಚ್ಚು ಪ್ರಸ್ತುತವಾಗಿದೆ. ಉತ್ತಮ ಆರೋಗ್ಯಕ್ಕಾಗಿ ಅಗತ್ಯವಾದ ವ್ಯಾಯಾಮಕ್ಕೆ ಸಮಯ ಹೊಂದಿಸುವುದೇ ಪ್ರಮುಖ ಸವಾಲಾಗಿದೆ. ನಡಿಗೆ, ಈಜು, ಮುಂಜಾನೆಯ ಜಾಗಿಂಗ್ (ನಿಧಾನಗತಿಯ ಓಟ), ಆಟಗಳು ಮೊದಲಾದವು ಹೆಚ್ಚಿನ ಶ್ರಮ ಮತ್ತು ಸಮಯ ಬೇಡುವುದರಿಂದ ಇಂದಿನವರಿಗೆ ಆ ಸಮಯವನ್ನು ನೀಡಲಾಗುತ್ತಿಲ್ಲ. ಪರಿಣಾಮವಾಗಿ ದಿನದ ಕೊಂಚಕಾಲ ಮಾತ್ರ ಬೇಡುವ ಆಧುನಿಕ ಪರಿಕರಗಳನ್ನು ಹೊಂದಿರುವ ಜಿಮ್ ಗಳು ತಲೆ ಎತ್ತಿವೆ.

ವ್ಯಾಯಾಮ ಶಾಲೆಗಳನ್ನು ನಡೆಸುವವರು ವೃತ್ತಿಪರರಾಗಿರುವುದರಿಂದ ಅವರ ನಿರ್ದೇಶನದಲ್ಲಿ ನಡೆದರೆ ಉತ್ತಮ ದೇಹದಾರ್ಢ್ಯ ಪಡೆಯಲು ಸಾಧ್ಯವಾದರೂ ಅದಕ್ಕಾಗಿ ತಕ್ಕ ಬೆಲೆಯನ್ನು ತೆರಬೇಕಾಗುತ್ತದೆ. ಆದರೆ ಇದರಿಂದಾಗಿ ಆರೋಗ್ಯ ಸುಧಾರಿಸಿತೇ ಎಂದು ಕೇಳಿದರೆ ಮಾತ್ರ ಖಡಾಖಂಡಿತ ಉತ್ತರ ದೊರಕುವುದಿಲ್ಲ.

ಏಕೆಂದರೆ ಜಿಮ್ ಗಳಲ್ಲಿ ಪ್ರಮುಖವಾಗಿ ಕೊಬ್ಬನ್ನು ಕರಗಿಸಿ ಮಾಂಸಖಂಡಗಳನ್ನು ಬೆಳೆಸುವ ನಿಟ್ಟಿನಲ್ಲಿಯೇ ವ್ಯಾಯಾಮ ಹೇಳಿಕೊಡಲಾಗುತ್ತದೆಯೇ ಹೊರತು ದೇಹದ ಆರೋಗ್ಯಮಾತ್ರವನ್ನು ಕುರಿತು ಅಲ್ಲ. ಚಿನ್ನದ ಆಭರಣಗಳ ಸರಮಾಲೆಯನ್ನೇ ಸುರಿದರೆ ಹೆಣ್ಣು ಸುಂದರಳಾಗಿ ಕಾಣುತ್ತಾಳೆಯೇ ಅಥವಾ ಅಗತ್ಯವಿದ್ದಷ್ಟು ಮಾತ್ರ ಸರಳವಾದ ಆಭರಣಗಳನ್ನು ತೊಟ್ಟು ನಸುನಗುವ ತರುಣಿ ಸುಂದರಳಾಗಿ ಕಾಣುತ್ತಾಳೆಯೇ?
ದೇಹದ ಆರೋಗ್ಯವನ್ನೇ ಪರಿಗಣಿಸಿ ಹಲವು ಪರಿಣಿತರಿಂದ ನಿರೂಪಿಸಲ್ಪಟ್ಟಿರುವ ಹನ್ನೊಂದು ಸುಲಭ ವ್ಯಾಯಾಮಗಳ ಸಲಹೆಗಳನ್ನು ಕೆಳಗೆ ನೀಡಲಾಗಿದೆ.

ಕಟ್ಟುಮಸ್ತಾದ ಮೈಕಟ್ಟು ಪಡೆಯಲು ಈ ಸೂತ್ರಗಳನ್ನು ಪಾಲಿಸಿ

ದಿನದ ವಿವಿಧ ಹೊತ್ತಿನಲ್ಲಿ ನಿಧಾನಗತಿಯ ಓಟ ನಡೆಸಿ

ದಿನದ ವಿವಿಧ ಹೊತ್ತಿನಲ್ಲಿ ನಿಧಾನಗತಿಯ ಓಟ ನಡೆಸಿ

ಜಾಗಿಂಗ್ ಅಥವಾ ನಿಧಾನಗತಿಯ ಓಟದಿಂದ ಶರೀರಕ್ಕೆ ಹೆಚ್ಚಿನ ಶ್ರಮವಾಗದೇ ಉತ್ತಮ ವ್ಯಾಯಾಮ ದೊರಕುತ್ತದೆ. ದಿನದ ವಿವಿಧ ಹೊತ್ತಿನಲ್ಲಿ ಅತಿ ಹೆಚ್ಚೂ ಅಲ್ಲದ ಅತಿ ಕಡಿಮೆಯೂ ಅಲ್ಲದ ದೂರವನ್ನು ಜಾಗಿಂಗ್ ಮೂಲಕ ಕ್ರಮಿಸಿದರೆ ಅತ್ಯುತ್ತಮ ವ್ಯಾಯಾಮ ದೊರಕುತ್ತದೆ. ಪ್ರತಿ ಎರಡು ಹೆಜ್ಜೆಗಳಿಗೆ ಉಸಿರನ್ನು ಪೂರ್ಣವಾಗಿ ಮೇಲೆಳೆದುಕೊಂಡು, ನಂತರದ ಎರಡು ಹೆಜ್ಜೆಗಳಿಗೆ ಉಸಿರು ಕಟ್ಟಿ ನಂತರದ ಎರಡು ಹೆಜ್ಜೆಗಳಿಗೆ ಉಸಿರು ಪೂರ್ಣವಾಗಿ ಬಿಡುವ ಅಭ್ಯಾಸವನ್ನು ಜಾಗಿಂಗ್ ಅವಧಿಯಲ್ಲಿ ನಡೆಸಿದರೆ ಅತ್ಯುತ್ತಮ ಫಲಿತಾಂಶ ದೊರಕುತ್ತದೆ.

ಈ ಅಭ್ಯಾಸದಿಂದ ದೇಹಕ್ಕೆ ಅಗತ್ಯವಾದ ಆಮ್ಲಜನಕ ಹೆಚ್ಚಿನ ಪ್ರಮಾಣದಲ್ಲಿ ದೊರಕುವುದರಿಂದ ಸಾಧಾರಣ ನೂರು ಮೀಟರ್ ಜಾಗಿಂಗಿಗೇ ಸುಸ್ತಾಗುವವರೂ ವಾರದೊಳಗೇ ಒಂದು ಕಿ.ಮೀಗೂ ಹೆಚ್ಚು ದೂರವನ್ನು ನಿರಾಯಾಸವಾಗಿ ಜಾಗಿಂಗ್ ಮೂಲಕ ಕ್ರಮಿಸಬಲ್ಲರು. ಶ್ವಾಸಕೋಶ, ಕೈಕಾಲುಗಳ, ಬೆನ್ನು, ಹೊಟ್ಟೆಗಳ ಸ್ನಾಯುಗಳು ಬಲಗೊಳ್ಳುತ್ತವೆ. ಕೊಂಚ ಅಭ್ಯಾಸವಾದಂತೆ ಎರಡು ಹೆಜ್ಜೆಗಳ ಬದಲಿಗೆ ನಾಲ್ಕು ಹೆಜ್ಜೆ ನಂತರ ಆರು ಹೆಜ್ಜೆಗಳಿಗೆ ಕ್ರಮವಾಗಿ ಏರಿಸುತ್ತಾ ಹೋದಂತೆ ಆರೋಗ್ಯವೂ ಉತ್ತಮವಾಗುತ್ತಾ ಹೋಗುತ್ತದೆ.

ವ್ಯಾಯಾಮಪೂರ್ವ ಸಿದ್ಧತೆ ನಡೆಸಿದ ಬಳಿಕವೇ ಮುಖ್ಯ ವ್ಯಾಯಾಮ ಮಾಡಿ

ವ್ಯಾಯಾಮಪೂರ್ವ ಸಿದ್ಧತೆ ನಡೆಸಿದ ಬಳಿಕವೇ ಮುಖ್ಯ ವ್ಯಾಯಾಮ ಮಾಡಿ

ಎಂದಿಗೂ ಪ್ರಮುಖ ವ್ಯಾಯಾಮಗಳನ್ನು ಮೊದಲಿಗೆ ಪ್ರಾರಂಭಿಸಬಾರದು. ದೇಹವು ಇನ್ನೂ ಹೆಚ್ಚಿನ ವ್ಯಾಯಾಮಕ್ಕೆ ಅಗತ್ಯವಾದ ಶಕ್ತಿಯನ್ನು ಪಡೆದಿರುವುದಿಲ್ಲವಾದ ಕಾರಣ ಪ್ರಮುಖ ವ್ಯಾಯಾಮ ಮಾಡಿದರೆ ತೀವ್ರ ನೋವು ಹಾಗೂ ಸುಸ್ತು ಅನುಭವಿಸಬೇಕಾಗಿ ಬರುತ್ತದೆ. ಅದಕ್ಕಾಗಿ ವ್ಯಾಯಾಮಪೂರ್ವದ ಸಿದ್ಧತೆ ನಡೆಸುವುದು ಅಗತ್ಯವಿದೆ. ಇದರಿಂದಾಗಿ ರಕ್ತಸಂಚಾರ ಹೆಚ್ಚಿ ಎಲ್ಲಾ ಮಾಂಸಖಂಡಗಳಿಗೆ ಅಗತ್ಯವಾದ ಸಕ್ಕರೆ ಮತ್ತು ಆಮ್ಲಜನಕಗಳು ಲಭ್ಯವಾಗುತ್ತವೆ. ಆ ಬಳಿಕ ಪ್ರಮುಖ ವ್ಯಾಯಾಮಗಳನ್ನು ಮಾಡಿದರೆ ಕೊಬ್ಬು ಬಳಸಲ್ಪಟ್ಟು ದೇಹ ಹೆಚ್ಚು ಬಲಿಷ್ಟವಾಗುತ್ತದೆ, ಆರೋಗ್ಯವೂ ಉತ್ತಮಗೊಳ್ಳುತ್ತದೆ.

ಕೈಗಳನ್ನು ಮುಂದೆ ಹಿಂದೆ, ಮೇಲೆ ಕೆಳಗೆ ಆಡಿಸುವುದು, ಕೆಳಗೆ ಬಗ್ಗಿ ಎದ್ದು ನಿಲ್ಲುವುದು, ನಿಂತಲ್ಲೇ ನಿಧಾನವಾಗಿ ಜಾಗಿಂಗ್ ಮಾಡುವುದು, ಎರಡೂ ಕಾಲು ಅಗಲಿಸಿ ತಲೆಯನ್ನು ಎಡ ಹಾಗೂ ಬಲ ಮೊಣಕಾಲುಗಳಿಗೆ ತಾಗಿಸಲು ಯತ್ನಿಸುವುದು ಮೊದಲಾದವು ವ್ಯಾಯಾಮಪೂರ್ವದ ಸಿದ್ಧತೆಗಳಾಗಿವೆ.

ಹಗುರವಾದ ವಸ್ತುಗಳ ಉಪಯೋಗಿಸಿ

ಹಗುರವಾದ ವಸ್ತುಗಳ ಉಪಯೋಗಿಸಿ

ವ್ಯಾಯಾಮ ಅಗತ್ಯವಿರುವ ಸ್ನಾಯುಗಳಿಗೆ ಸ್ವಲ್ಪ ಭಾರ ನೀಡಿದರೆ ಆ ಸ್ನಾಯುಗಳಿಗೆ ಹೆಚ್ಚಿನ ಹೊರೆ ಬೀಳುವ ಕಾರಣ ಹೆಚ್ಚಿನ ಕೊಬ್ಬು ಉಪಯೋಗವಾಗುತ್ತದೆ. ಜಿಮ್ ಗಳಲ್ಲಿ ವಿವಿಧ ಭಾರದ ಡಂಬೆಲ್‌ಗಳಿರುತ್ತವೆ. ಆದರೆ ಕಡಿಮೆ ಭಾರದ ಡಂಬೆಲ್ ಅಥವಾ ಸಮಾನ ವಸ್ತುಗಳನ್ನು ನಮ್ಮ ವ್ಯಾಯಾಮದಲ್ಲಿ ಅಳವಡಿಸುವ ಮೂಲಕ ಉತ್ತಮ ಫಲಿತಾಂಶವನ್ನು ಪಡೆಯಬಹುದು. ಏನೂ ಸಿಗದಿದ್ದರೆ ಮನೆಯಲ್ಲಿರುವ ಬಕೆಟ್ಟಿನಲ್ಲಿ ಅರ್ಧ ಭಾಗ ನೀರು ತುಂಬಿಸಿ ನೆಲದಿಂದ ಮೇಲೆತ್ತಿ ಕೆಳಗಿಡುವ ಮೂಲಕ ಜಿಮ್‌ನಲ್ಲಿ ಸಾಧಿಸುವುದಕ್ಕಿಂತಲೂ ಹೆಚ್ಚಿನದನ್ನು ಸಾಧಿಸಬಹುದು.

ಬರ್ಪಿ ವ್ಯಾಯಾಮ ಮಾಡಿ

ಬರ್ಪಿ ವ್ಯಾಯಾಮ ಮಾಡಿ

ಮನೆಯೊಳಗೇ ಮಾಡಬಹುದಾದ ಬರ್ಪಿ ವ್ಯಾಯಾಮ ಉತ್ತಮ ಫಲಿತಾಂಶ ನೀಡುತ್ತದೆ. ಮೊದಲು ಎರಡೂ ಕಾಲುಗಳನ್ನು ಸುಮಾರು ಎರಡು ಅಡಿ ದೂರವಿರುವಂತೆ ನಿಂದು ಉಸಿರು ಮೇಲೆಳೆದು ಕೆಳಕ್ಕೆ ಬಗ್ಗಿ ಹಸ್ತಗಳ ಮೇಲೆ ದೇಹದ ಭಾರವನ್ನು ಹಾಕಬೇಕು. ಈಗ ಉಸಿರು ಬಿಡುತ್ತಾ ಚಿಕ್ಕದಾಗಿ ನೆಗೆದು ಪಾದಗಳನ್ನು ಆದಷ್ಟು ಹಿಂದೆ ಸರಿಸಿ ದೇಹವನ್ನು ಭೂಮಿಗೆ ಸಮಾನಾಂತರವಾಗಿರಿಸಬೇಕು.

ಈಗ ಮತ್ತೊಮ್ಮೆ ಉಸಿರೆಳೆದು ಚಿಕ್ಕದಾಗಿ ನೆಗೆದು ಪಾದವನ್ನು ಮೊದಲಿನ ಸ್ಥಾನಕ್ಕೆ ತಂದ ಬಳಿಕ ಕೈಗಳನ್ನು ಮೇಲೆತ್ತಿ ಇನ್ನೊಂದು ನೆಗೆತದ ಮೂಲಕ ನೆಟ್ಟಗೆ ನಿಲ್ಲಬೇಕು. ನಿಂತ ಬಳಿಕ ಉಸಿರು ಬಿಡುತ್ತಾ ಕೈಗಳನ್ನು ಕೆಳಗಿಳಿಸಬೇಕು. ಪ್ರತಿ ಬಾರಿ ಹತ್ತು ಸಲದಂತೆ ದಿನಕ್ಕೆ ಮೂರು ನಾಲ್ಕು ಬಾರಿ ಮಾಡಿದರೆ ಉತ್ತಮ ಫಲಿತಾಂಶ ದೊರಕುತ್ತದೆ.

ವ್ಯಾಯಾಮಕ್ಕೆ ಉಪಯೋಗಿಸುವ ಭಾರಗಳು-ಪ್ರಾರಂಭದಲ್ಲಿ ಕಡಿಮೆ ಇರಬೇಕು

ವ್ಯಾಯಾಮಕ್ಕೆ ಉಪಯೋಗಿಸುವ ಭಾರಗಳು-ಪ್ರಾರಂಭದಲ್ಲಿ ಕಡಿಮೆ ಇರಬೇಕು

ಯಾವುದೇ ಭಾರವನ್ನು ವ್ಯಾಯಾಮಕ್ಕಾಗಿ ಉಪಯೋಗಿಸಬೇಕಾದರೆ ಪ್ರಾರಂಭದಲ್ಲಿ ಕಡಿಮೆ ಇರಬೇಕು. ಆ ಭಾರಕ್ಕೆ ನಮ್ಮ ಸ್ನಾಯುಗಳು ಒಗ್ಗಿಕೊಂಡ ಬಳಿಕ ಕ್ರಮೇಣ ಭಾರವನ್ನು ಕೊಂಚವಾಗಿ ಏರಿಸುತ್ತಾ ಹೋಗಬೇಕು. ಒಂದು ವೇಳೆ ಧಿಡೀರನೇ ಹೆಚ್ಚಿನ ಭಾರವನ್ನು ಎತ್ತಲು ಪ್ರಯತ್ನಿಸಿದರೆ ಸ್ನಾಯುಗಳ ಸೆಳೆತ ಉಂಟಾಬಹುದು. ತಪ್ಪಾದ ನಡೆ ಅಪಘಾತಕ್ಕೂ ಕಾರಣವಾದೀತು.

ಪ್ರತಿದಿನ ವಿಭಿನ್ನ ವ್ಯಾಯಾಮಗಳನ್ನು ಮಾಡಿ

ಪ್ರತಿದಿನ ವಿಭಿನ್ನ ವ್ಯಾಯಾಮಗಳನ್ನು ಮಾಡಿ

ಎಲ್ಲಾ ವ್ಯಾಯಾಮಗಳನ್ನು ಪ್ರತಿದಿನ ಮಾಡಬಾರದು. ಯಾವ ಯಾವ ಸ್ನಾಯುಗಳಿಗೆ ಹೆಚ್ಚಿನ ವ್ಯಾಯಾಮ ದೊರಕುತ್ತದೆಯೋ ಆ ಪ್ರಕಾರ ಸರದಿಯಲ್ಲಿ ಮಾಡುವುದು ಉತ್ತಮ. ಉದಾಹರಣೆಗೆ ಇಂದು ಕಾಲು ಮತ್ತು ಭುಜಗಳ ವ್ಯಾಯಾಮಾ ಮಾಡಿದರೆ ನಾಳೆ ಕೈಗಳು ಮತ್ತು ಹೊಟ್ಟೆಗಳ ಸ್ನಾಯುಗಳ ವ್ಯಾಯಾಮ ಮಾಡಬೇಕು.

ಸ್ಟ್ರೆಚಿಂಗ್ ಬಾಲ್(The Stretching Ball ) ಉಪಯೋಗಿಸಿ

ಸ್ಟ್ರೆಚಿಂಗ್ ಬಾಲ್(The Stretching Ball ) ಉಪಯೋಗಿಸಿ

ಈಗ ಮಾರುಕಟ್ಟೆಯಲ್ಲಿ ಸುಮಾರು ಮೂರು ಅಡಿ ವ್ಯಾಸದ ದೊಡ್ಡ ರಬ್ಬರಿನ ಚೆಂಡು ದೊರಕುತ್ತದೆ. Stretching Ball ಎಂದು ಕರೆಯಲಾಗುವ ಈ ಚೆಂಡನ್ನು ಉಪಯೋಗಿಸಿ ದೇಹವನ್ನು ಹಲವು ರೀತಿಯಲ್ಲಿ ಬಗ್ಗಿಸಿ ಚಾಚಬಹುದು. ಇದರಿಂದಾಗಿ ದೇಹದ ವಿವಿಧ ಸ್ನಾಯುಗಳಿಗೆ ನಿಂತಲ್ಲಿ ಅಥವಾ ಮಲಗಿದಲ್ಲಿ ಮಾಡಿದಾಗ ಸಿಗದ ವ್ಯಾಯಾಮ ದೊರಕಿದಂತಾಗುತ್ತದೆ. ಉದಾಹರಣೆಗೆ ಚೆಂಡಿನ ಮೇಲೆ ಕುಳಿತು ಹಿಂದೆ ಬಗ್ಗುವುದು. ಈ ವ್ಯಾಯಾಮದಿಂದ ಬೆನ್ನಿನ ಕೆಳಭಾಗದ ಹಾಗೂ ಸೊಂಟದ ಪಕ್ಕದ ಸ್ನಾಯುಗಳಿಗೆ ಉತ್ತಮ ವ್ಯಾಯಾಮ ದೊರಕುತ್ತದೆ. ನಿಂತಲ್ಲೇ ನಮಗೆ ಹಿಂದೆ ಪೂರ್ಣವಾಗಿ ಬಗ್ಗಲು ಸಾಧ್ಯವಿಲ್ಲ.

ಕೊಬ್ಬನ್ನು ಕರಗಿಸುವ ವ್ಯಾಯಾಮ

ಕೊಬ್ಬನ್ನು ಕರಗಿಸುವ ವ್ಯಾಯಾಮ

ದೇಹದಲ್ಲಿ ಅತ್ಯಂತ ಕಷ್ಟದಲ್ಲಿ ಬಲಗೊಳ್ಳುವ ಸ್ನಾಯುಗಳೆಂದರೆ ಹೊಟ್ಟೆಯ ಸ್ನಾಯುಗಳು. ಏಕೆಂದರೆ ನಮ್ಮ ದೇಹದಲ್ಲಿ ಸಂಗ್ರಹವಾಗುವ ಕೊಬ್ಬು ನಡುಭಾಗದಲ್ಲಿ ಮೊದಲುಗೊಂಡು ಬಳಿಕ ಇತರ ಭಾಗದಲ್ಲಿ ಸಂಗ್ರಹವಾಗುತ್ತವೆ. ಆದುದರಿಂದ ಹೊಟ್ಟೆಯ ಕೊಬ್ಬನ್ನು ಕರಗಿಸುವುದು ಅಷ್ಟು ಸುಲಭವಲ್ಲ. ಅದಕ್ಕಾಗಿ ಸತತ ಪ್ರಯತ್ನ, ನಿರಂತರ ವ್ಯಾಯಾಮ ಹಾಗೂ ಉತ್ತಮ ಆಹಾರ, ನಿದ್ದೆ ಅಗತ್ಯ.

ದೇಹವೆತ್ತುವ ವ್ಯಾಯಾಮಗಳನ್ನು ಮಾಡಿ

ದೇಹವೆತ್ತುವ ವ್ಯಾಯಾಮಗಳನ್ನು ಮಾಡಿ

ಸುಮಾರು ಆರು ಅಡಿ ಮೇಲೆ ಅಡ್ಡಲಾಗಿರುವ ಕಬ್ಬಿಣದ ಸರಳನ್ನು ಹಿಡಿದು ಜೋತಾಡಿ ದೇಹವನ್ನು ಕೈಗಳ ಸ್ನಾಯುಗಳ ಮೂಲಕ ಮೇಲೆತ್ತುವ ವ್ಯಾಯಾಮ ಬಹು ಪರಿಣಾಮಕಾರಿಯಾಗಿದೆ. ಇದರಿಂದ ಬೆನ್ನು, ಎದೆ, ಭುಜ, ತೋಳು ಮತ್ತು ಹೊಟ್ಟೆಯ ಸ್ನಾಯುಗಳು ಬಲಗೊಳ್ಳುತ್ತವೆ.

ಈಜು-ಒಂದು ಸಂಪೂರ್ಣ ವ್ಯಾಯಾಮ

ಈಜು-ಒಂದು ಸಂಪೂರ್ಣ ವ್ಯಾಯಾಮ

ಹೌದು, ಈಜಿನ ಮೂಲಕ ದೇಹದ ಸಕಲ ಸ್ನಾಯುಗಳು ಸಮಾನವಾಗಿ ವ್ಯಾಯಾಮ ಪಡೆಯುತ್ತವೆ. ಇದೇ ಕಾರಣದಿಂದ ಈಜನ್ನು ಸಂಪೂರ್ಣ ವ್ಯಾಯಾಮ ಎಂದು ಕರೆಯಲಾಗುತ್ತದೆ. ವಾರಕ್ಕೊಮ್ಮೆಯಾದರೂ ಕನಿಷ್ಟ ಒಂದು ಘಂಟೆ ಈಜುವುದು ಉತ್ತಮ ಫಲಿತಾಂಶ ನೀಡುತ್ತದೆ.

ದೇಹವನ್ನು ಚಾಚುವ ವ್ಯಾಯಾಮಗಳು

ದೇಹವನ್ನು ಚಾಚುವ ವ್ಯಾಯಾಮಗಳು

ದೇಹವನ್ನು ಸಾಧ್ಯವಾದಷ್ಟು ಮಟ್ಟಿಗೆ ಬಗ್ಗಿಸಿ ಸಾಧ್ಯವಾದಷ್ಟು ದೂರಕ್ಕೆ ಕೈಕಾಲುಗಳನ್ನು ಚಾಚುವ ಮೂಲಕ ಉತ್ತಮ ವ್ಯಾಯಾಮ ದೊರಕುತ್ತದೆ. ಕೊಬ್ಬು ಬೇಗನೇ ಕರಗುತ್ತದೆ. ಸ್ನಾಯುಗಳು ಧೃಢಗೊಳ್ಳುತ್ತವೆ.

English summary

The 11 Best Fitness Secrets Of All Time

Fitness and health have perhaps become the most discussed topics in today's world, especially considering the rise in health complications due to various reasons. These fitness tips for men, women and even children, go a long way in ensuring commendable health over the short lifetime of humans.
Story first published: Thursday, August 21, 2014, 10:47 [IST]
X
Desktop Bottom Promotion