For Quick Alerts
ALLOW NOTIFICATIONS  
For Daily Alerts

ತೂಕ ಇಳಿಸುವ ಭರದಲ್ಲಿ ಇಂತಹ ತಪ್ಪುಗಳನ್ನು ಎಸಗದಿರಿ!

By Super
|

ಇಂದು ತೂಕವಿಳಿಸುವುದು ಒಂದು ದೊಡ್ಡ ಉದ್ದಿಮೆಯಾಗಿದೆ. ಆಧುನಿಕ ಜೀವನ ನೀಡಿದ ಆರಾಮಗಳು ನೀಡಿದ ಸ್ಥೂಲಕಾಯದಿಂದ ಬಿಡುಗಡೆ ಪಡೆಯಬಯಸುವವರ ಪಡೆ ಬಹಳ ದೊಡ್ಡದಿದೆ. ಇದರಲ್ಲಿ ಮಕ್ಕಳ ಸಂಖ್ಯೆಯೂ ಗಣನೀಯವಾಗಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ತೂಕವಿಳಿಸಲು ಯೋಗಾಭ್ಯಾಸದಿಂದ ಹಿಡಿದು ಅತ್ಯಾಧುನಿಕ ಮತ್ತು ಅತಿದುಬಾರಿಯಾದ ಜಿಮ್‌ಗಳೂ ನಗರಗಳಲ್ಲಿ ತಲೆಯೆತ್ತಿವೆ. ಆದರೆ ತೂಕವಿಳಿಸುವ ಭರದಲ್ಲಿ ಹಲವರು ತಪ್ಪುಗಳನ್ನು ಎಸಗುತ್ತಿದ್ದಾರೆ.

ಏಕೆಂದರೆ ಈ ತಪ್ಪುಗಳಿಂದಾಗುವ ಅಡ್ಡಪರಿಣಾಮಗಳ ಬಗ್ಗೆ ಅವರಿಗೆ ಅರಿವೇ ಇರುವುದಿಲ್ಲ. ಒಂದು ವೇಳೆ ನೀವೂ ಈ ತಪ್ಪುಗಳನ್ನು ಎಸಗುತ್ತಿದ್ದರೆ, ಅದು ಎಷ್ಟೇ ಚಿಕ್ಕದಾಗಿದ್ದರೂ ಸರಿ, ನಿಮ್ಮ ಆರೋಗ್ಯದ ಮೇಲೆ ಹಾಗೂ ತೂಕ ಇಳಿಸುವ ಪ್ರಯತ್ನದಲ್ಲಿ ದುಷ್ಪರಿಣಾಮ ಬೀರುತ್ತದೆ.

ತೂಕವಿಳಿಸಲು ಕೇವಲ ವ್ಯಾಯಾಮ ಮಾಡಿದರೆ ಸಾಲದು, ಉತ್ತಮ ಪೌಷ್ಟಿಕ ಆಹಾರವನ್ನು ಸರಿಯಾದ ಪ್ರಮಾಣದಲಿ ಕ್ಲುಪ್ತಕಾಲದಲ್ಲಿ ಸೇವಿಸುವುದೂ ಮುಖ್ಯ. ಈ ಲೇಖನದಲ್ಲಿ ತೂಕವಿಳಿಸುವ ಭರದಲ್ಲಿ ಮಾಡುವ ಸಾಮಾನ್ಯ ತಪ್ಪುಗಳು ಹಾಗೂ ಆಹಾರ ಸೇವನೆಯ ಬಗ್ಗೆ ಹತ್ತು ಪ್ರಮುಖ ಮಾಹಿತಿಗಳನ್ನು ನೀಡಲಾಗಿದೆ. ಕೇವಲ 2 ವಾರದಲ್ಲಿ ತೂಕ ಇಳಿಸುವ ಪ್ರಬಲ ವ್ಯಾಯಾಮಗಳು!

ಅಗತ್ಯಕ್ಕಿಂತಲೂ ಹೆಚ್ಚು ಪ್ರೋಟೀನ್ ಸೇವಿಸುವುದು

ಅಗತ್ಯಕ್ಕಿಂತಲೂ ಹೆಚ್ಚು ಪ್ರೋಟೀನ್ ಸೇವಿಸುವುದು

ಬಹಳ ಹಿಂದಿನಿಂದಲೂ ನಮ್ಮ ಮನಃಪಟಲದಲ್ಲಿ ಕೆತ್ತಲಾಗಿರುವ ಪೂರ್ವಾಗ್ರಹಗಳಲ್ಲಿ ಒಂದೆಂದರೆ ಉತ್ತಮ ಆರೋಗ್ಯಕ್ಕೆ ಮಾಂಸ ಸೇವಿಸಬೇಕು. ಮಾಂಸ ಎಂದರೆ ಮುಖ್ಯವಾಗಿ ಪ್ರೋಟೀನ್. ಅತ್ತ ಪೂರ್ಣ ಸಸ್ಯಾಹಾರಿಗಳೂ ಅಲ್ಲದ ಪೂರ್ಣ ಮಾಂಸಾಹಾರಿಗಳೂ ಅಲ್ಲದ ಮಿಶ್ರಾಹಾರಿಗಳಾದ ನಮಗೆ ಅತಿಹೆಚ್ಚು ಪ್ರೋಟೀನಿನ ಅಗತ್ಯವೇ ಇಲ್ಲ. ಒಂದು ವೇಳೆ ಅಗತ್ಯಕ್ಕಿಂತಲೂ ಹೆಚ್ಚು ಪ್ರೋಟೀನ್ ಸೇವಿಸಿದರೆ ಹೆಚ್ಚಿನ ಪ್ರಮಾಣ ಕರುಳುಗಳ ಮೂಲಕ ದೇಹದಲ್ಲಿ ಹೀರಲ್ಪಟ್ಟು ಕರಗದ ಕೊಬ್ಬಿನ ರೂಪ ಪಡೆದು ಶೇಖರಗೊಳ್ಳುತ್ತದೆ. ಇದು ದೇಹದ ತೂಕ ಹೆಚ್ಚಿಸಲು ಪ್ರಮುಖ ಕಾರಣವಾಗಿದೆ. ಆಹಾರ ತಜ್ಞರ ಪ್ರಕಾರ ಪ್ರತಿದಿನ ಐವತ್ತಾರು ಗ್ರಾಂ ಪ್ರೋಟೀನ್ ಅಗತ್ಯವಿದೆ. ಈ ಅಗತ್ಯವನ್ನು ಸುಮಾರು ನೂರು ಗ್ರಾಂ ನಷ್ಟು ಕೋಳಿಮಾಂಸ ನೀಡುತ್ತದೆ. ಆ ಪ್ರಕಾರ ದೊಡ್ಡ ಒಂದು ತುಂಡು ತಿಂದರೆ ಆ ದಿನಕ್ಕೆ ಅಗತ್ಯವಾದ ಪ್ರೋಟೀನ್ ಲಭ್ಯವಾಗುತ್ತದೆ.

ಭಾರೀ ಗಾತ್ರದ ಉಪಾಹಾರ ಸೇವಿಸುವುದು

ಭಾರೀ ಗಾತ್ರದ ಉಪಾಹಾರ ಸೇವಿಸುವುದು

ಸಾಮಾನ್ಯವಾಗಿ ಬೆಳಗ್ಗಿನ ವ್ಯಾಯಾಮ ಅಥವಾ ನಡಿಗೆಯ ಬಳಿಕ ಸ್ನಾನ ಮಾಡಿ ಸೇವಿಸುವ ಉಪಾಹಾರ ಚಿಕ್ಕ ಅಳತೆಯಲ್ಲಿರಬೇಕು. ಏಕೆಂದರೆ ವಾಸ್ತವವಾಗಿ ಬೆಳಗ್ಗಿನ ಹೊತ್ತು ಮೆದುಳಿಗೆ ಹೆಚ್ಚು ರಕ್ತಸಂಚಾರ ಮತ್ತು ಆಮ್ಲಜನಕದ ಅಗತ್ಯವಿದೆ. ಉಪಾಹಾರ ಮಾಡದೇ ಇರುವುದು ತುಂಬಾ ಅಪಾಯಕಾರಿ. ಆದರೆ ಹೆಚ್ಚಿನ ಪ್ರಮಾಣದಲ್ಲಿ ಉಪಾಹಾರ ಮಾಡುವುದೂ ಅಪಾಯಕಾರಿ. ಏಕೆಂದರೆ ಬೆಳಗ್ಗಿನ ಸಮಯ ಹೆಚ್ಚಿನ ಹೊಟ್ಟೆಯಲ್ಲಿ ಕರಗಿದ ಆಹಾರ ನೇರವಾಗಿ ಮೆದುಳಿಗೆ ರಕ್ತ ಪೂರೈಸಲು ನೆರವಾಗುತ್ತದೆ. ಹೆಚ್ಚಿನ ಪ್ರಮಾಣ ಕೊಬ್ಬಾಗಿ ಪರಿವರ್ತಿತವಾಗುತ್ತದೆ. ಆದುದರಿಂದ ಬೆಳಗ್ಗಿನ ಉಪಾಹಾರ ಆದಷ್ಟು ಲಘುವಾಗಿರಲಿ. ಉದಾಹರಣೆಗೆ ಒಂದು ದೋಸೆ ಮತ್ತು ಪಲ್ಯ, ಎರಡು ಅಥವಾ ಮೂರು ಇಡ್ಲಿ ಮತ್ತು ಸಾಂಬಾರ್, ಚಿಕ್ಕ ಚಪಾತಿಯಾದರೆ ಎರಡು ಸಾಕು.

ನಿಮ್ಮ ಊಟದಲ್ಲಿ ಸಾಕಷ್ಟು ಹಸಿರು ತರಕಾರಿಗಳಿಲ್ಲದೇ ಇರುವುದು

ನಿಮ್ಮ ಊಟದಲ್ಲಿ ಸಾಕಷ್ಟು ಹಸಿರು ತರಕಾರಿಗಳಿಲ್ಲದೇ ಇರುವುದು

ಉತ್ತಮ ಆರೋಗ್ಯಕ್ಕಾಗಿ ನಮ್ಮ ಆಹಾರದಲ್ಲಿ ವೈವಿಧ್ಯತೆ ಇರಬೇಕು. ಇದರಿಂದ ದೇಹದಲ್ಲಿರುವ ಕೊಬ್ಬು ಮತ್ತು ಮಾಂಸಖಂಡಗಳ ಸಮತೋಲನ ಏರ್ಪಡುತ್ತದೆ. ನಿಮ್ಮ ಊಟದಲ್ಲಿ ಸಿದ್ಧವಾಗ ಖಾದ್ಯಗಳ ಜೊತೆಗೇ ಹಸಿಯಾಗಿ ತಿನ್ನಬಹುದಾದ ತರಕಾರಿ ಮತ್ತು ಸೊಪ್ಪುಗಳನ್ನು ಸೇರಿಸುವ ಮೂಲಕ ತೂಕ ಇಳಿಸುವ ಪ್ರಕ್ರಿಯೆಗೆ ಬೆಂಬಲ ದೊರಕುತ್ತದೆ. ಏಕೆಂದರೆ ಈ ಹಸಿರು ತರಕಾರಿಗಳು ನಮ್ಮ ಕರುಳುಗಳಲ್ಲಿ ಅಷ್ಟು ಸುಲಭವಾಗಿ ಜೀರ್ಣವಾಗುವುದಿಲ್ಲ. ಅನಿವಾರ್ಯವಾಗಿ ದೇಹ ಶರೀರದಲ್ಲಿ ಶೇಖರಗೊಂಡಿದ್ದ ಕೊಬ್ಬನ್ನು ಉಪಯೋಗಿಸಲೇ ಬೇಕಾಗುತ್ತದೆ. ಪರಿಣಾಮವಾಗಿ ದೇಹದ ತೂಕ ಇಳಿಯುತ್ತದೆ.

ನಿಮ್ಮ ವೇಳಾಪಟ್ಟಿಯನ್ನು ಅನುಸರಿಸದೇ ಇರುವುದು

ನಿಮ್ಮ ವೇಳಾಪಟ್ಟಿಯನ್ನು ಅನುಸರಿಸದೇ ಇರುವುದು

ತೂಕ ಇಳಿಸಲು ಸಾಧಾರಣವಾಗಿ ದೈಹಿಕ ಶಿಕ್ಷಕರು ಒಂದು ವೇಳಾಪಟ್ಟಿಯನ್ನು ನೀಡುತ್ತಾರೆ. ಚಿಕ್ಕಂದಿನಿಂದಲೇ ನಮ್ಮ ರಕ್ತದಲ್ಲಿ ಬೆರೆತಿರುವ ಗುಣವಾದ ಉದಾಸೀನತೆಯನ್ನು ಇಲ್ಲಿಯೂ ನಾವು ಪ್ರಯೋಗಿಸುತ್ತೇವೆ. ದಿನದ ಚಟುವಟಿಕೆಗಳಲ್ಲಿ ಬೇರೆ ವಿಷಯಗಳಿಗೆ ಹೆಚ್ಚಿನ ಮಹತ್ವ ನೀಡಿ ಈ ವೇಳಾಪಟ್ಟಿಯನ್ನು ಕಡೆಗಣಿಸಿಬಿಡುತ್ತೇವೆ. ಪರಿಣಾಮವಾಗಿ ಇಳಿದ ತೂಕವೂ ಮತ್ತೆ ಏರಿಕೆಯಾಗಿ ಹಿಂದಿನ ತೂಕಕ್ಕಿಂತಲೂ ಮೇಲೇರಿಬಿಡುತ್ತೇವೆ.

ಸರಿಯಾದ ಸಮಯದಲ್ಲಿ ನಿದ್ದೆ ಮಾಡದೇ ಇರುವುದು

ಸರಿಯಾದ ಸಮಯದಲ್ಲಿ ನಿದ್ದೆ ಮಾಡದೇ ಇರುವುದು

ತೂಕ ಇಳಿಸಲು ದೇಹಕ್ಕೆ ಹಾಗೂ ಮೆದುಳಿಗೆ ಸೂಕ್ತವಾದ ವಿಶ್ರಾಂತಿಯ ಅಗತ್ಯವಿದೆ. ವಿಶ್ರಾಂತಿಯ ಸಮಯದಲ್ಲಿ ದೇಹ ಶೇಖರವಾಗಿದ್ದ ಕೊಬ್ಬನ್ನು ಉಪಯೋಗಿಸಿ ಹಲವು ಅನೈಚ್ಛಿಕ ಕಾರ್ಯಗಳನ್ನು ನಡೆಸುತ್ತಿರುತ್ತದೆ. ಒಂದು ವೇಳೆ ನಿದ್ದೆಯ ಸಮಯದಲ್ಲಿ ಭಂಗ ಉಂಟಾದರೆ ಈ ಕಾರ್ಯಕ್ಕೂ ಧಕ್ಕೆಯುಂಟಾಗಿ ಕರಗಿದ ಕೊಬ್ಬನ್ನು ಮತ್ತೆ ಸೇರಿಸಿಕೊಳ್ಳಲು ದೇಹ ಹಸಿವಿನ ಘಂಟೆ ಬಾರಿಸುತ್ತದೆ. ಅರ್ಧರಾತ್ರಿಯಲ್ಲಿ ಎಚ್ಚರವಾದರೆ ಫ್ರಿಜ್ ತೆರೆದು ತಿನ್ನಲಿಕ್ಕೇನು ಉಂಟು ಎಂದು ಬಗ್ಗಿ ನೋಡುವುದು ಇದೇ ಕಾರಣಕ್ಕಾಗಿ. ಈ ಪರಿಸ್ಥಿತಿ ಬರದೇ ಇರಲು ನಿದ್ದೆಗೆ ಪ್ರಾಮುಖ್ಯತೆ ನೀಡಿ ಸರಿಯಾದ ಸಮಯದಲ್ಲಿ ಪವಡಿಸುವುದು ಅತಿ ಮುಖ್ಯ.

ಮದ್ಯಪಾನದ ಆಹ್ವಾನಕ್ಕೆ ಒಪ್ಪಿಕೊಳ್ಳುವುದು

ಮದ್ಯಪಾನದ ಆಹ್ವಾನಕ್ಕೆ ಒಪ್ಪಿಕೊಳ್ಳುವುದು

ಮದ್ಯಪಾನ ಇಡಿಯ ಶರೀರದ ಆರೋಗ್ಯಕ್ಕೆ ಹೇಗೆ ಮಾರಕವೋ ಅಂತೆಯೇ ತೂಕ ಇಳಿಕೆಗೂ ಮಾರಕವಾಗಿದೆ. ಯಾವುದೋ ಕುಂಟುನೆಪ ಹುಡುಕಿ ಮದ್ಯಪಾನಕ್ಕೆ ತೋರುವ ಆತುರತೆಯಿಂದ ಇದುವರೆಗೆ ಕಳೆದಿದ್ದ ತೂಕ ಮತ್ತೆ ಮೈಗೇರಲು ಕಾರಣವಾಗುತ್ತದೆ.

ತೂಕ ಇಳಿಕೆಗೆ ಸಾಕಷ್ಟು ಸಮಯ ನೀಡದೇ ಇರುವುದು

ತೂಕ ಇಳಿಕೆಗೆ ಸಾಕಷ್ಟು ಸಮಯ ನೀಡದೇ ಇರುವುದು

ತೂಕ ಇಳಿಯಬೇಕಾದರೆ ಶೇಖರವಾಗಿದ್ದ ಕೊಬ್ಬು ನಿಧಾನವಾಗಿ ಕರಗಬೇಕು. ಈ ಕರಗುವಿಕೆಗೆ ಹಲವು ಅಡ್ಡಿ ಆತಂಕಗಳಿವೆ. ಒಂದು ವೇಳೆ ಶೀಘ್ರ ಕರಗಲು ಅಡ್ಡ ದಾರಿ ಹಿಡಿದರೆ ಆರೋಗ್ಯ ಏರುಪೇರಾಗಬಹುದು. ಮೂರೇ ದಿನದಲ್ಲಿ ತೂಕ ಇಳಿಯಬೇಕು ಎಂಬ ಹಠಸಾಧನೆ ಬೇಡ. ಅನುಭವಿ ದೈಹಿಕ ಶಿಕ್ಷಕರ ಪ್ರಕಾರ ಇಂದು ಮಾಡಿದ ವ್ಯಾಯಾಮದ ಪರಿಣಾಮ ಮೂರು ತಿಂಗಳ ಬಳಿಕ ಕಾಣುತ್ತದೆ. ಹಾಗಾಗಿ ಸತತವಾಗಿ ಸುಮಾರು ಆರು ತಿಂಗಳಾದರೂ ಒಂದು ಸಾಧಿಸಲು ಸಾಧ್ಯವಾದ ತೂಕವನ್ನಿಳಿಸಲು ಗುರಿಯಿಟ್ಟುಕೊಂಡು ಆ ಪ್ರಕಾರವೇ ವ್ಯಾಯಾಮ ಮಾಡಬೇಕು.

ಪ್ರತಿದಿನ ಒಂದೇ ದಿನಚರಿಯನ್ನು ಪಾಲಿಸುವುದು

ಪ್ರತಿದಿನ ಒಂದೇ ದಿನಚರಿಯನ್ನು ಪಾಲಿಸುವುದು

ನಮ್ಮ ನಾಲಿಗೆಯೂ ಹೇಗೆ ಪ್ರತಿ ಹೊತ್ತಿನ ಊಟದಲ್ಲಿ ವೈವಿಧ್ಯತೆ ಬಯಸುತ್ತದೆಯೋ, ಅಂತೆಯೇ ನಮ್ಮ ಶರೀರ ಸಹಾ ಶಾರೀರಿಕ ಚಟುವಟಿಕೆಗಳಲ್ಲಿ ವೈವಿಧ್ಯತೆಯನ್ನು ಬಯಸುತ್ತದೆ. ಪ್ರತಿದಿನ ಒಂದೇ ರೀತಿಯ ವ್ಯಾಯಾಮ ಹಾಗೂ ನಡಿಗೆಯ ದಾರಿ ತೂಕ ಇಳಿಸುವ ಬದಲು ಹೆಚ್ಚಿಸುತ್ತವೆ.

ನಿಮ್ಮ ವ್ಯಾಯಾಮ ಉಪಕರಣಗಳಲ್ಲಿ ತೂಕ ಹೆಚ್ಚಿಸದೇ ಇರುವುದು

ನಿಮ್ಮ ವ್ಯಾಯಾಮ ಉಪಕರಣಗಳಲ್ಲಿ ತೂಕ ಹೆಚ್ಚಿಸದೇ ಇರುವುದು

ಯಾವುದೇ ದೈಹಿಕ ವ್ಯಾಯಾಮವನ್ನು ಮೊದಲು ಸರಳ ತೂಕಗಳಿಂದ ಆರಂಭಿಸಬೇಕು ಕೆಲವು ದಿನಗಳ ಬಳಿಕ ತೂಕವನ್ನು ಸ್ವಲ್ಪವೇ ಏರಿಸಿ ವ್ಯಾಯಾಮ ಮುಂದುವರೆಸಬೇಕು. ಇದೇ ಪ್ರಕಾರ ದಿನಕಳೆದಂತೆ ಹೆಚ್ಚಿನ ತೂಕ ಹಾಗೂ ಕಠಿಣ ವ್ಯಾಯಾಮಗಳನ್ನು ಮಾಡುತ್ತಾ ಸ್ನಾಯುಗಳನ್ನು ಹುರಿಗಟ್ಟಿಸಿ ಕೊಬ್ಬನ್ನು ಕರಗಿಸಬೇಕು.

ಸೂಕ್ತ ಪ್ರಮಾಣದಲ್ಲಿ ನೀರು ಕುಡಿಯದೇ ಇರುವುದು

ಸೂಕ್ತ ಪ್ರಮಾಣದಲ್ಲಿ ನೀರು ಕುಡಿಯದೇ ಇರುವುದು

ತೂಕ ಇಳಿಸಲು ಅತ್ಯಗತ್ಯವಾಗಿ ಬೇಕಾದ ವಸ್ತುವೆಂದರೆ ನೀರು. ಏಕೆಂದರೆ ನೀರು ನಮ್ಮ ದೇಹಕ್ಕೆ ಅತ್ಯಂತ ಅಗತ್ಯವಾಗಿದ್ದರೂ ತೂಕವನ್ನು ಏರಿಸುವುದಿಲ್ಲ. ಬದಲಿಗೆ ಶೇಖರಗೊಂಡಿದ್ದ ಕೊಬ್ಬು ಕರಗಲು ನೀರು ಬೇಕು. ಕಾಲಕಾಲಕ್ಕೆ ಸಾಕಷ್ಟು ನೀರು ಕುಡಿಯದೇ ಇರುವುದರಿಂದ ದೇಹದ ಇತರ ಬಾಧೆಗಳಿಗೆ ಕಾರಣವಾಗುವ ಸಹಿತ ಸಾಕಷ್ಟು ನೀರಿಲ್ಲದ ಕಾರಣ ಕರಗದ ಕೊಬ್ಬಿನಿಂದಾಗಿ ತೂಕ ಇಳಿಯುವ ಪ್ರಕ್ರಿಯೆ ನಿಧಾನವಾಗುತ್ತದೆ. ಹಾಗಾಗಿ ಪ್ರತಿದಿನ ಎಂಟು ದೊಡ್ಡ ಲೋಟಗಳಷ್ಟು ನೀರು ಕುಡಿಯುವುದು ಅಗತ್ಯವಾಗಿದೆ. ತೂಕ ಇಳಿಸುವ ಜೊತೆಗೆ ದೇಹದಿಂದ ಬೆವರಿನ, ಮೂತ್ರದ ಮೂಲಕ ವಿಷಕಾರಿ ವಸ್ತುಗಳನ್ನು ವಿಸರ್ಜಿಸಲೂ ನೆರವಾಗುತ್ತದೆ.

English summary

The 10 Biggest Weight Loss Mistakes Most People Make

Many people think they are giving it their all but still fail to see tangible results. Yes, weight loss is definitely evasive if certain things aren't done the way they ought to be done. In this article, we look at some of the biggest weight loss mistakes people make.
X
Desktop Bottom Promotion