For Quick Alerts
ALLOW NOTIFICATIONS  
For Daily Alerts

ಲೈಂಗಿಕ ಜೀವನದಲ್ಲಿ ಕಾಮಾಸಕ್ತಿ ಕಡಿಮೆ ಮಾಡುವ ಆಹಾರಗಳು

|

ಒಂದು ವೇಳೆ ನೀವು ಮತ್ತು ನಿಮ್ಮ ಸಂಗಾತಿಯು ಹಾಸಿಗೆಯಲ್ಲಿ ಸರಿಯಾಗಿ ಆನಂದವನ್ನು ಪಡೆಯುತ್ತಿಲ್ಲವೆಂದಾದಲ್ಲಿ, ನೀವಿಬ್ಬರು ನಿಮ್ಮ ಜೀವನದ ಅತ್ಯಂತ ನಿಕೃಷ್ಟವಾದ ಲೈಂಗಿಕ ಜೀವನವನ್ನು ಅನುಭವಿಸುತ್ತಿದ್ದೀರಿ ಎಂದರ್ಥ.

ನಿಮ್ಮ ಕಾಮಾಸಕ್ತಿಯನ್ನು ಹೆಚ್ಚಿಸುವ ಹಲವಾರು ಕಾಮೊತ್ತೇಜಕಗಳು ಮಾರುಕಟ್ಟೆಯಲ್ಲಿ ದೊರೆಯುತ್ತವೆ. ಇವು ಹಾಸಿಗೆಯಲ್ಲಿ ನೀವು ಮತ್ತಷ್ಟು ಕ್ರಿಯಾಶೀಲರಾಗುವಂತೆ ಮಾಡುತ್ತವೆ. ಆದರೆ ನಿಮಗೆ ಕಾಮಾಸಕ್ತಿಯನ್ನು ಕಡಿಮೆ ಮಾಡುವಂತಹ ಅಂಶಗಳ ಬಗ್ಗೆ ತಿಳಿದಿರುವಿರಾ?

ಹೌದು ಇಂತಹ ಆಹಾರ ಪದಾರ್ಥಗಳು ನಿಮ್ಮ ಲೈಂಗಿಕ ಜೀವನದ ಆನಂದವನ್ನೆ ಕಸಿದು ಹಾಕಿ ಬಿಡುತ್ತವೆ. ಇದರಿಂದ ನೀವು ನಿಮ್ಮ ಸಂಗಾತಿಗೆ ಸರಿಯಾದ ಲೈಂಗಿಕ ಸುಖವನ್ನು ಸಹ ನೀಡಲಾಗುವುದಿಲ್ಲ. ಇದರಿಂದ ನಿಮ್ಮಿಬ್ಬರ ಮಧ್ಯೆ ಕಂದಕವೇರ್ಪಡುತ್ತದೆ. ಇದು ಮುಂದೆ ನಿಮ್ಮಿಬ್ಬರನ್ನು ಬೇರೆ ಸಹ ಮಾಡಲು ಕಾರಣವಾಗಬಹುದು. ಲೈಂಗಿಕ ಜೀವನಕ್ಕೆ ಅಡ್ಡಿಯಾಗುವ 15 ಆರೋಗ್ಯ ಸಮಸ್ಯೆಗಳು

ಬಹುತೇಕ ಸಂದರ್ಭದಲ್ಲಿ ನಿಮಗೆ ಅನುಭವವಾಗಿರಬಹುದು. ನಿಮಗೆ ಲೈಂಗಿಕ ಕ್ರಿಯೆಯಲ್ಲಿ ಭಾಗವಹಿಸಬೇಕೆಂಬ ಇಚ್ಛೆಯಿರುತ್ತದೆ, ಆದರೆ ನಿಮ್ಮ ಸಂಗಾತಿ ನಿಮಗೆ ಸಹಕರಿಸದೆ ದೂರ ಸರಿಯುತ್ತಾರೆ. ಕೆಲವೊಮ್ಮೆ ನಿಮಗಿಬ್ಬರಿಗು ಸಹ ಲೈಂಗಿಕ ಕ್ರಿಯೆಯಲ್ಲಿ ಭಾಗವಹಿಸುವ ಇಚ್ಛೆ ಇರುವುದಿಲ್ಲ. ಅದಕ್ಕಾಗಿ ನಿಮ್ಮ ಲೈಂಗಿಕ ಜೀವನದ ಮೇಲೆ ನಕಾರಾತ್ಮಕ ಪ್ರಭಾವ ಬೀರುವ ಆಹಾರ ಪದಾರ್ಥಗಳನ್ನು ದೂರವಿರಿಸಿ, ನಿಮ್ಮ ಕಾಮಾಸಕ್ತಿಯನ್ನು ಮತ್ತು ಲೈಂಗಿಕ ಜೀವನವನ್ನು ಕಾಯ್ದಿಟ್ಟುಕೊಳ್ಳಬೇಕಾದ ಅಗತ್ಯ ನಿಮಗೆ ಇದೆ ಎಂಬುದನ್ನು ನೆನಪಿಡಿ. ಪ್ರೀತಿಯ ಭಾವನೆಗಳನ್ನು ಕೆರಳಿಸುವ ಆಹಾರಗಳು

ಇಲ್ಲಿ ನಾವು ನಿಮ್ಮ ಲೈಂಗಿಕ ಜೀವನದ ದೃಷ್ಟಿಯಿಂದ ದೂರವಿಡಬೇಕಾದ ಆಹಾರ ಪದಾರ್ಥಗಳ ಪಟ್ಟಿಯನ್ನು ನೀಡಿದ್ದೇವೆ. ಈ ಆಹಾರ ಪದಾರ್ಥಗಳನ್ನು ನೀವು ಮತ್ತು ನಿಮ್ಮ ಸಂಗಾತಿ ಇಬ್ಬರು ಸೇವಿಸದಿದ್ದರೆ, ನೀವು ಉತ್ತಮವಾದ ಲೈಂಗಿಕ ಜೀವನ ನಡೆಸುವುದರಲ್ಲಿ ಸಂಶಯವೇ ಇಲ್ಲ. ಹಾಗಾದರೆ ನೀವು ಸೇವಿಸಬಾರದಾದ ಆ ಆಹಾರ ಪದಾರ್ಥಗಳಾವುವು ಬನ್ನಿ ನೋಡೋಣ.

ಮದ್ಯಪಾನ

ಮದ್ಯಪಾನ

ಲೈಂಗಿಕ ಕ್ರಿಯೆಗಿಂತ ಮೊದಲು ಮಧ್ಯಪಾನ ಮಾಡುವುದರಿಂದ ಸಂಗಾತಿಗಳ ನಡುವಿನ ಮುಜುಗರ ಮತ್ತು ಸಂಕೋಚ ದೂರವಾಗಿ ಉತ್ತಮ ಲೈಂಗಿಕ ಕ್ರಿಯೆ ನಡೆಸಬಹುದೆಂಬುದು ಬಹುತೇಕ ಮಂದಿಯ

ನಂಬಿಕೆಯಾಗಿದೆ. ಇನ್ನೂ ಕೆಲವರ ಪ್ರಕಾರ ಲೈಂಗಿಕ ಕ್ರಿಯೆಗಿಂತ ಮೊದಲು ಸ್ವಲ್ಪ ಪ್ರಮಾಣದ ಮದ್ಯಪಾನ ಮಾಡುವುದರಿಂದ ಅವರ ಲೈಂಗಿಕಾಸಕ್ತಿ ಹೆಚ್ಚುವುದರ ಜೊತೆಗೆ, ಹಾಸಿಗೆಯಲ್ಲಿ ಒಳ್ಳೆಯ ಸಾಮರ್ಥ್ಯವನ್ನು ಸಹ ತೋರಿಸಬಹುದಂತೆ.ಆದರೆ ಬಹುತೇಕ ಸಂದರ್ಭಗಳಲ್ಲಿ ಜನರು ಕೇವಲ ಒಂದು ಪೆಗ್‍ಗೆ ಮಾತ್ರ ತಮ್ಮ ಕುಡಿತವನ್ನು ನಿಲ್ಲಿಸುವುದಿಲ್ಲ. ಮೂರು, ನಾಲ್ಕು ಪೆಗ್ ಏರಿಸಿದ ನಂತರ ಅವರು ತಮ್ಮ ಸಂಗಾತಿಯ ಜೊತೆಗೆ ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಳ್ಳಬೇಕೆಂಬ ಇಚ್ಛೆ ಹೊರಟು ಹೋಗಿರುತ್ತದೆ. ಅಧಿಕ ಮದ್ಯಪಾನ ಸೇವನೆಯು ಖಿನ್ನತೆಗೆ ಕಾರಣವಾಗುತ್ತದೆ. ಜೊತೆಗೆ ಇದರಿಂದ ನಿಮಗೆ ಮಾನಸಿಕ ವ್ಯಾಧಿಗಳು ಭಾದಿಸಬಹುದು.ಇದು ಗಂಡಸರಲ್ಲಿ ಟೆಸ್ಟೊಸ್ಟೆರೊನ್‍ನ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ. ಆದ್ದರಿಂದ ನಿಮ್ಮ ಸಂಗಾತಿಗೆ ಹಾಸಿಗೆಯಲ್ಲಿ ತೃಪ್ತಿ ನೀಡಲು ಸಾಧ್ಯವಾಗುವಷ್ಟರ ಮಟ್ಟಿಗೆ ಹಿತ-ಮಿತವಾಗಿ ಮಧ್ಯಪಾನ ಮಾಡಿ. ಮಾಡದೆ ಇದ್ದಲ್ಲಿ ಇನ್ನೂ ಉತ್ತಮ.

ಕಾಫಿ

ಕಾಫಿ

ಒಂದು ವೇಳೆ ನೀವು ಕಾಫಿ ಪ್ರಿಯರಾಗಿದ್ದಲ್ಲಿ, ನಿಮ್ಮ ಸಂಗಾತಿಗೊಸ್ಕರ ನಿಮ್ಮ ಅಧಿಕ ಕಾಫಿ ಸೇವನೆಯನ್ನು ಕಡಿಮೆ ಮಾಡಿಕೊಳ್ಳಿ. ಪ್ರತಿ ದಿನ 5-6 ಕಪ್ ಕಾಫಿ ಸೇವನೆಯು ನಿಮ್ಮ ಅಡ್ರಿನಲ್ ಗ್ಲ್ಯಾಂಡ್‍ಗಳಿಗೆ ಹಾನಿಯನ್ನು ಮಾಡುತ್ತದೆ. ಅಧಿಕ ಕಾಫಿ ಸೇವನೆಯಿಂದ ಒತ್ತಡಕಾರಿ ಹಾರ್ಮೋನುಗಳು ಅಧಿಕಗೊಳ್ಳುತ್ತದೆ. ಒಂದು ವೇಳೆ ನೀವು ಒತ್ತಡದಲ್ಲಿ ಕಾಲ ತಳ್ಳುತ್ತಿದ್ದರೆ, ನಿಮ್ಮ ಸಂಗಾತಿಯ ಮುಂದೆ ಹಾಸಿಗೆಯಲ್ಲಿ ಸೋಲನ್ನೊಪ್ಪುತ್ತೀರಿ. ಇದರಿಂದ ಲೈಂಗಿಕ ಕ್ರಿಯೆಯು ಸಮತೋಲನ ತಪ್ಪುತ್ತದೆ. ಆದ್ದರಿಂದ ಪ್ರತಿದಿನ ಒಂದು ಅಥವಾ ಎರಡು ಕಪ್‍ ಕಾಫಿಗೆ ನಿಮ್ಮನ್ನು ನೀವು ಸೀಮಿತ ಮಾಡಿಕೊಳ್ಳಿ. ನಿಮ್ಮ ಸಂಗಾತಿಗೆ ಸುಖ ನೀಡಿ.

ಪುದಿನಾ

ಪುದಿನಾ

ಬಹುತೇಕ ಮಂದಿ ಲೈಂಗಿಕ ಕ್ರಿಯೆಗಿಂತ ಮೊದಲು ಪುದಿನಾಯುಕ್ತವಾದ ಚ್ಯೂಯಿಂಗ್ ಗಮ್ ಸೇವನೆಯನ್ನು ಮಾಡುತ್ತಾರೆ ಅಥವಾ ತಮ್ಮ ಉಸಿರಿನ ದುರ್ವಾಸನೆಯನ್ನು ಹೋಗಲಾಡಿಸಿಕೊಳ್ಳಲು ಪುದಿನಾವನ್ನು ಸೇವಿಸುತ್ತಾರೆ. ಆದರೆ ನಿಮಗೆ ಗೊತ್ತೆ, ಪುದಿನಾವು ನಿಮ್ಮ ಲೈಂಗಿಕ ಜೀವನದ ಮೇಲೆ ದುಷ್ಪರಿಣಾಮ ಬೀರುತ್ತದೆಯೆಂದು? ಹೌದು, ಪುದಿನಾದಲ್ಲಿರುವ ಮೆಂಥಲ್ ನಿಮ್ಮ ಟೆಸ್ಟ್ರೊಸ್ಟೆರೋನ್ ಅನ್ನು ಕಡಿಮೆ ಮಾಡುತ್ತದೆ. ಇದರಿಂದ ನೀವು ಹಾಸಿಗೆಯಲ್ಲಿ ಸರಿಯಾಗಿ ಸಾಮರ್ಥ್ಯ ತೋರಲು ಸಾಧ್ಯವಾಗುವುದಿಲ್ಲ. ಒಂದು ವೇಳೆ ಉಸಿರಿನ ದುರ್ವಾಸನೆಯಿಂದ ನಿಮಗೆ ಕಿರಿ ಕಿರಿಯಾಗುತ್ತಿದ್ದಲ್ಲಿ, ಒಂದು ಶುಂಠಿಯ ತುಂಡನ್ನು ಸೇವಿಸಿ.

ಸೋಡಾಗಳು ಮತ್ತು ಕೋಲಾಗಳು

ಸೋಡಾಗಳು ಮತ್ತು ಕೋಲಾಗಳು

ಲೈಂಗಿಕ ದೌರ್ಬಲ್ಯಗಳಿಗೆ ಕಾರಣವಾಗುವ ಆಹಾರ ಪದಾರ್ಥಗಳಲ್ಲಿ ಸೋಡಾಗಳು ಸಹ ಸೇರಿವೆ. ಲೈಂಗಿಕ ಕ್ರಿಯೆಗೆ ಮೊದಲು ಇಂತಹ ಪಾನೀಯಗಳನ್ನು ಖಂಡಿತವಾಗಿ ಸೇವಿಸಬಾರದು. ನಿಮ್ಮ ಸಂಗಾತಿಯನ್ನು ಖುಷಿಪಡಿಸಲೆಂದು ಮಿತವಾಗಿ ಸಹ ಇದನ್ನು ಸೇವಿಸಲು ಹೋಗಬೇಡಿ. ಇವುಗಳ ಸೇವನೆಯಿಂದ ನಿರ್ಜಲೀಕರಣ, ಸ್ಥೂಲಕಾಯ ಮತ್ತು ದಂತ ಸಮಸ್ಯೆಗಳು ಕಂಡು ಬರುತ್ತವೆ. ಹಾಗಾಗಿ ಇಂತಹ ಪಾನೀಯಗಳಿಂದ ಕಡ್ಡಾಯವಾಗಿ ದೂರವಿರಿ.

ಕಾರ್ನ್‍ಫ್ಲ್ಯಾಕ್‍ಗಳು

ಕಾರ್ನ್‍ಫ್ಲ್ಯಾಕ್‍ಗಳು

ನಿಮಗೆ ಜಾನ್ ಹಾರ್ವೇ ಕೆಲ್ಲಾಕ್ಸ್ ಗೊತ್ತೇ, ಇವರೇ ಕೆಲ್ಲಾಗ್ಸ್ ಸೀರಿಯಲ್ಸ್ ಸೃಷ್ಟಿಸಿದವರು. ಇದರ ಸೇವನೆಯಿಂದ ಸ್ತ್ರೀ ಮತ್ತು ಪುರುಷರಲ್ಲಿ ಲೈಂಗಿಕಾಸಕ್ತಿ ಕಡಿಮೆಯಾಗಲೆಂದೆ ಇದನ್ನು ಕಂಡುಹಿಡಿದರೇನು? ಈ ಧಾನ್ಯಗಳಲ್ಲಿರುವ ಸಕ್ಕರೆ ಪ್ರಮಾಣವು ರಕ್ತದಲ್ಲಿ ಅಲ್ಲೋಲ ಕಲ್ಲೋಲ ಉಂಟು ಮಾಡುತ್ತದೆ. ಇದರಿಂದ ಟೆಸ್ಟೊಸ್ಟೆರೊನ್ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಇದರಿಂದ ಹಾಸಿಗೆಯಲ್ಲಿ ನಿಮ್ಮ ಸಾಮರ್ಥ್ಯ ಕುಂಠಿತವಾಗುತ್ತದೆ. ಆದ್ದರಿಂದ ನಿಮ್ಮ ಸಂಗಾತಿಗೆ ಸಂಪೂರ್ಣ ತೃಪ್ತಿ ನೀಡಲು ಇಂತಹ ಆಹಾರ ಪದಾರ್ಥಗಳನ್ನು ಸೇವಿಸಬೇಡಿ.

English summary

SURPRISING FOODS THAT KILL YOUR SEX LIFE

If you are not able to perform at your bed, then you and your partner are in from the worst sex session of your lives. There are a lot of aphrodisiacs that are available in the market that can help you to boost your libido and make you a big performer in bed.
Story first published: Monday, October 27, 2014, 17:47 [IST]
X
Desktop Bottom Promotion