For Quick Alerts
ALLOW NOTIFICATIONS  
For Daily Alerts

ಇಂತಹ ಸೂಪರ್ ಫುಡ್ ಅನ್ನು ಮಿಸ್ ಮಾಡದೇ ಸೇವಿಸಿ

|

ಇಂದು ಆಧುನಿಕ ಜೀವನ ಶೈಲಿಯು ವೇಗವಾಗಿ ಸಾಗುತ್ತಿದ್ದು ಹಾಗೂ ಅಷ್ಟೇ ತಲೆ ನೋವಿಂದ ಕೂಡಿದೆ. ಹೆಚ್ಚಿನವರು ಇದರ ಪರಿಣಾಮದ ಕುರಿತು ಆಲೋಚನೆ ಮಾಡಿರುವುದಿಲ್ಲ. ಆರೋಗ್ಯದಲ್ಲಿ ಉಂಟಾಗುವ ಅನೇಕ ರೀತಿಯ ಸಮಸ್ಯೆಗೆ ಕೂಡ ಇದು ಪ್ರಮುಖ ಪಾತ್ರ ವಹಿಸುತ್ತದೆ, ಎಂಬುದು ಇನ್ನೊಂದು ಆತಂಕಕಾರಿ ವಿಷಯವಾಗಿದೆ. ಅದು ಯಾವುದೇ ರೀತಿಯಲ್ಲಿ ಇರಬಹುದು, ಕೆಲಸದ ಒತ್ತಡ, ಓದುವುದು, ಯಾವುದೇ ಇರಲಿ, ಹಲವಾರು ರೀತಿಯ ಒತ್ತಡದಿಂದ ನಾವು ಪ್ರತಿ ದಿನ ಬಳಲುತ್ತೇವೆ.

ಹಾಗಾಗಿ ದಿನನಿತ್ಯ ಒಂದಲ್ಲ, ಒಂದು ರೀತಿಯ ಆರೋಗ್ಯದ ಸಮಸ್ಯೆಗೆ ಗುರಿಯಾಗುತ್ತಿರುತ್ತೇವೆ. ಆರೋಗ್ಯವಿದ್ದರೆ ಜಗತ್ತಿನ ಎಲ್ಲಾ ಐಶ್ವರ್ಯ, ಸೌಲಭ್ಯ, ಸುಖಗಳಿಗೆ ಅರ್ಥವಿದೆ. ಉತ್ತಮ ಆರೋಗ್ಯವಿಲ್ಲದೆ ಜೀವನದ ಹೆಚ್ಚಿನ ಸಂತೋಷಗಳನ್ನು ಅನುಭವಿಸಲು ಸಾಧ್ಯವಿಲ್ಲ. ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ ಎಂಬುದೊಂದು ಗಾದೆ. ಅಂದರೆ ಕಾಲಕಾಲಕ್ಕೆ ಆರೋಗ್ಯಕ್ಕೆ ಉತ್ತಮವಾದ ಆಹಾರವನ್ನು ಸೇವಿಸುವ ಹಾಗೂ ಶರೀರಕ್ಕೆ ಅಗತ್ಯವಾದ ವ್ಯಾಯಾಮ, ಆರಾಮ ಹಾಗೂ ಮಾನಸಿಕವಾಗಿ ಶಾಂತವಾಗಿರುವ ಮೂಲಕ ಉತ್ತಮ ಆರೋಗ್ಯವನ್ನು ಹೊಂದಬಹುದು.

ಕೊಬ್ಬು ಕಡಿಮೆ ಇರುವ ಉತ್ತಮ ಕೊಲೆಸ್ಟ್ರಾಲ್‌ಗಳನ್ನು ಹೊಂದಿರುವ ಕೆಲವೊಂದು ಆಹಾರಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ. ನಿಮ್ಮನ್ನು ಆರೋಗ್ಯಕರವಾಗಿಸಲು ಅಗತ್ಯವಾಗಿರುವ ನ್ಯೂಟ್ರಿಯಂಟ್ಸ್‌ಗಳನ್ನು ಇವುಗಳು ಒಳಗೊಂಡಿವೆ. ದಿನವೂ ಈ ಆಹಾರಗಳನ್ನು ನಿಮಗೆ ಸೇವಿಸಬಹುದು...

ಆಲೀವ್ ಎಣ್ಣೆ

ಆಲೀವ್ ಎಣ್ಣೆ

ಆಲಿವ್ ಎಣ್ಣೆಯನ್ನು ಸೇವಿಸುವುದರಿಂದ ರಕ್ತದಲ್ಲಿ ಈಗಾಗಲೇ ಶೇಖರಗೊಂಡಿರುವ ಕೆಟ್ಟ ಕೊಲೆಸ್ಟ್ರಾಲ್ ನಿಧಾನವಾಗಿ ಕಡಿಮೆಯಾಗುತ್ತಾ ಬರುತ್ತದೆ. ಆಲಿವ್ ಎಣ್ಣೆಯಲ್ಲಿ phenolic antioxidant ಎಂಬ ಪೋಷಕಾಂಶವು ರಕ್ತದಲ್ಲಿ ಮಿಳಿತಗೊಂಡಾಗ ನರಗಳ ಒಳಗೆ ಅಲ್ಲಲ್ಲಿ ಜಿಡ್ಡುಗಟ್ಟಿ ರಕ್ತಸಂಚಾರಕ್ಕೆ ತಡೆಯೊಡ್ಡುತ್ತಿದ್ದ (LDL-Low density lipoprotien) ಎಂಬ ಕೆಟ್ಟ ಕೊಲೆಸ್ಟ್ರಾಲ್ ನೊಂದಿಗೆ ಮಿಶ್ರಗೊಂಡು ಜಿಡ್ಡನ್ನು ಸಡಿಲಗೊಳಿಸುತ್ತದೆ. ಇದುವರೆಗೆ ಜಿಡ್ಡಿನಿಂದ ನರಗಳ ಒಳಭಾಗಗಳು ಕಿರಿದುಕೊಂಡಿದ್ದು ಆ ಮೂಲಕ ರಕ್ತವನ್ನು ಕಳುಹಿಸಲು ಹೃದಯಕ್ಕೆ ಹೆಚ್ಚು ಶ್ರಮ ಬೇಕಾಗಿತ್ತು. ಈಗ ಸರಾಗಗೊಂಡಿರುವ ರಕ್ತನಾಳಗಳ ಮೂಲಕ ರಕ್ತವನ್ನು ಹರಿಸಲು ಹೃದಯಕ್ಕೆ ಸಾಮಾನ್ಯವಾದ ಒತ್ತಡ ಸಾಕು. ಹಾಗಾಗಿ ಹೃದಯಕ್ಕೆ ಆಲಿವ್ ಎಣ್ಣೆ ಪರಮಾಪ್ತನಾಗಿದೆ

ಗ್ರೀನ್ ಟೀ

ಗ್ರೀನ್ ಟೀ

ಗ್ರೀನ್ ಟೀ ಒಂದು ಪೇಯವಾಗಿದ್ದು ಅತ್ಯದ್ಭುತ ಆರೋಗ್ಯ ಸಹಾಯಕ ಅಂಶಗಳನ್ನು ಒಳಗೊಂಡಿದೆ. ಗ್ರೀನ್ ಟೀ ಯನ್ನು ಸೇವಿಸುವುದೆಂದರೆ ಒಳಗಿನ ಸ್ನಾನವನ್ನು ನೀವು ಮಾಡುವುದು ಅಂದರೆ ದೇಹದ ಒಳಗಿನ ಸ್ವಚ್ಛತೆ. ಇದರಲ್ಲಿರುವ ಉತ್ಕರ್ಷಣ ವಿರೋಧಿ ಅಂಶಗಳು ದೇಹದಲ್ಲಿನ ವಿಷವನ್ನು ಹೊರಹಾಕಲು ಸಹಕಾರಿ. ಕ್ಯಾನ್ಸರ್ ವಿರುದ್ಧ ಹೋರಾಡುವ ಸಾಮರ್ಥ್ಯ ಕೂಡ ಗ್ರೀನ್ ಟೀಗಿದೆ.

ಓಟ್ಸ್

ಓಟ್ಸ್

ಸಾಮಾನ್ಯವಾಗಿ ಓಟ್ಸ್ ಅನ್ನು ಬ್ರೇಕ್‌ಫಾಸ್ಟ್ ಸಿರೆಲ್ಸ್ ಎಂದೇ ಕರೆಯುತ್ತಾರೆ. ನಿಮ್ಮ ನಿತ್ಯದ ಆಹಾರವಾದ ರೋಟಿ ಮತ್ತು ಅನ್ನಕ್ಕೆ ಬದಲಾಗಿ ಕೊಲೆಸ್ಟ್ರಾಲ್ ಇಳಿಕೆ ಮಾಡುವ ಓಟ್ಸ್ ಅನ್ನು ಸೇವಿಸಿ.

ಬೆಳ್ಳುಳ್ಳಿ

ಬೆಳ್ಳುಳ್ಳಿ

ಕಟು ವಾಸನೆಯಿಂದ ಕೂಡಿದ ಬೆಳ್ಳುಳ್ಳಿಯನ್ನು ಸಾಮಾನ್ಯವಾಗಿ ಸಣ್ಣ ಪುಟ್ಟ ಕಾಯಿಲೆಗಳಿಗೆ ಹಿಂದಿನ ಕಾಲದಿಂದಲು ಸಹ ಬಳಸಿಕೊಂಡು ಬರಲಾಗುತ್ತಿದೆ. ಇದನ್ನು ಹಲವಾರು ಆಹಾರಗಳಿಗೆ ರುಚಿಯನ್ನು ನೀಡಲು ಬಳಸಲಾಗುತ್ತದೆ. ಬೆಳ್ಳುಳ್ಳಿಯಲ್ಲಿ ಹಲವಾರು ಆರೋಗ್ಯಕಾರಿ ಪ್ರಯೋಜನಗಳು ಇರುತ್ತವೆ. ಇದರಲ್ಲಿ ಜ್ವರ, ಕೆಮ್ಮು, ಶೀತ, ಹೊಟ್ಟೆನೋವು, ತಲೆ ನೋವು, ಸಿನುಸಿಟಿಸ್, ಉಸಿರಾಟದ ಸಮಸ್ಯೆಗಳು, ಕಡಿಮೆ ರಕ್ತದೊತ್ತಡ, ಅಧಿಕ ರಕ್ತದೊತ್ತಡ, ರಕ್ತದಲ್ಲಿ ಅಧಿಕ ಸಕ್ಕರೆ ಪ್ರಮಾಣ, ರಕ್ತದಲ್ಲಿ ಕಡಿಮೆ ರಕ್ತದ ಪ್ರಮಾಣ, ಅಧಿಕ ಕೊಲೆಸ್ಟ್ರಾಲ್ ಮತ್ತು ಹಾವಿನ ಕಡಿತವನ್ನು ಸಹ ವಾಸಿ ಮಾಡುವಂತಹ ಅಂಶಗಳು ಇವೆಯೆಂದು ಅಧ್ಯಯನಗಳು ಖಚಿತಪಡಿಸಿವೆ

ಹಾಲು

ಹಾಲು

ಹಾಲು ಎಲ್ಲರಿಗೂ ಮೆಚ್ಚಿಗೆಯಾಗುವುದಿಲ್ಲ. ಹಾಲನ್ನು ನಿತ್ಯವೂ ಸೇವಿಸಿ ಜೀರ್ಣಿಸುವ ಶಕ್ತಿಯನ್ನು ಹೊಂದಿದವರಾಗಿದ್ದರೆ ಅದೃಷ್ಟಶಾಲಿಗಳೆಂದೇ ನೀವು ಪರಿಗಣಿಸಲ್ಪಡುತ್ತೀರಿ. ಬೇಸಿಗೆಯಲ್ಲಿ ತಂಪಾಗಿ ಮತ್ತು ಚಳಿಗಾಲದಲ್ಲಿ ಹಾಗೆಯೇ ಹಾಲನ್ನು ಸೇವಿಸುವುದು ಕ್ಯಾಲ್ಶಿಯಂ ಪೂರೈಕೆಯನ್ನು ಮಾಡುತ್ತದೆ.

ನಟ್ಸ್

ನಟ್ಸ್

ನಟ್ಸ್‌ಗಳು ಶಕ್ತಿ ವರ್ಧಕ ಆಹಾರಗಳಾಗಿದ್ದು ತೂಕ ಏರಿಕೆಗೆ ಸಹಾಯಕ. ದಿನವಿಡೀ ಶಕ್ತಿಯನ್ನು ಪಡೆಯಲು ಒಂದು ಮುಷ್ಟಿಯಷ್ಟು ನಟ್ಸ್ ಸಹಕಾರಿ. ಬಾದಾಮಿ, ವಾಲ್‌ನಟ್ಸ್ ಹಾಗೂ ಗೇರುಬೀಜವನ್ನು ನಿತ್ಯವೂ ಸೇವಿಸಬಹುದು.

ಮೊಟ್ಟೆ

ಮೊಟ್ಟೆ

ಎಲ್ಲಾ ಕಾಲದಲ್ಲೂ ಮೊಟ್ಟೆ ಸಿಗುತ್ತದೆ. ಎರಡು ಬೇಯಿಸಿದ ಮೊಟ್ಟೆಗಳನ್ನು ನಿತ್ಯವೂ ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಅತೀ ಉತ್ತಮ. ಬಲವನ್ನು ವರ್ಧಿಸಿ ಉತ್ತಮ ಕೊಲೆಸ್ಟ್ರಾಲ್ ಅನ್ನು ಮೊಟ್ಟೆ ಪೂರೈಸುತ್ತದೆ.

ಸಾಲ್ಮನ್ ಮತ್ತು ಟ್ಯೂನ ಮೀನುಗಳು

ಸಾಲ್ಮನ್ ಮತ್ತು ಟ್ಯೂನ ಮೀನುಗಳು

ನೀವು ಮೀನುಗಳನ್ನು ಇಷ್ಟಪಡುವುದಾದರೆ, ಸ್ನಾಯು ಬಲವನ್ನು ಹೆಚ್ಚಿಸಬಲ್ಲ ಆಹಾರಗಳಾದ ಸಾಲ್ಮನ್ ಮತ್ತು ಟ್ಯೂನ ಮೀನುಗಳನ್ನು ಸೇವಿಸಿ. ಟ್ಯೂನ, ನಿಮ್ಮಲ್ಲಿರುವ ಕ್ಯಾಲೊರಿಗಳನ್ನು ಕಡಿಮೆ ಮಾಡಿ ನಿಜವಾದ ಸ್ನಾಯುಬಲವನ್ನು ಹೆಚ್ಚಿಸವ ನಿಮ್ಮ ಬಯಕೆಯನ್ನು ಪೂರೈಸುತ್ತದೆ. ಟ್ಯೂನ ಒಂದು ಗ್ರಾಂ ಕೊಬ್ಬು, ಮತ್ತು ಪ್ರತಿ 3 ಔನ್ಸ್ ಗೆ 99 ಕ್ಯಾಲೋರಿಯನ್ನು ಹೊಂದಿರುತ್ತದೆ. ಸಾಲ್ಮನ್, ಪ್ರತಿ 3 ಔನ್ಸ್ ಗೆ 155 ಕ್ಯಾಲೊರಿಗಳನ್ನು ನೀಡುತ್ತದೆ . ಸಾಲ್ಮನ್ ಒಮೆಗಾ -3 ಕೊಬ್ಬಿನ ಆಮ್ಲಗಳನ್ನು ಹೊಂದಿರುತ್ತದೆ ಮತ್ತು ಇದರ ಸೇವನೆ ಆರೋಗ್ಯಕರ ಹೃದಯ ನಿಮ್ಮದಾಗುತ್ತದೆ.

ಮೊಸರು

ಮೊಸರು

ಮೊಸರು ಒಂದು ಸರಳ ಆಹಾರವಾಗಿದ್ದರೂ ನಿಮ್ಮ ಸ್ನಾಯು ಬಲವನ್ನು ಹೆಚ್ಚಿಸುವಲ್ಲಿ ಸೇವಿಸಲೇಬೇಕಾದ ಅತ್ಯುತ್ತಮ ಆಹಾರ. ಮೊಸರು ಸ್ನಾಯು ಬೆಳವಣಿಗೆಗೆ ಪ್ರೋತ್ಸಾಹದಾಯಕವಾಗಿದೆ ಉತ್ತಮ ಗುಣಮಟ್ಟದ ಪ್ರೋಟೀನ್ ಪುಷ್ಟೀಕರಿಸಿದ ಮೊಸರು ಆರೋಗ್ಯಕ್ಕೆ ಒಳ್ಳೆಯದು. ಒಂದು ಲೋಟ ಮೊಸರು ಸುಮಾರು 20 ಗ್ರಾಂ ಪ್ರೋಟೀನ್ ಹೊಂದಿರುತ್ತದೆ. ಇದು ಮೂಳೆಗಳ ಬಲಕ್ಕೂ ಸಹಾಯಕವಾಗಿದೆ.

ಚಿಕನ್

ಚಿಕನ್

ನಿಮ್ಮ ದೇಹದ ಸದೃಢತೆಗೆ ಮುಂದಿನ ಆಹಾರದ ಪಟ್ಟಿಯಲ್ಲಿ ಕೋಳಿಯನ್ನು ಸೇರಿಸಿ. ಕ್ರೀಡಾಪಟುಗಳಿಗೆ ಹೆಚ್ಚುವರಿ ಪ್ರೋಟೀನ್ ಮಾಡಬೇಕಾಗುತ್ತದೆ ಮತ್ತು ಅವರು ಚಿಕನ್ ಸೇವಿಸಿ ಅದರಿಂದ ಹೆಚ್ಚುವರಿ ಪ್ರೋಟೀನ್ ಪಡೆಯಬಹುದು.

 ಬಾದಾಮಿ

ಬಾದಾಮಿ

ಬಾದಾಮಿ ನಿಮ್ಮನ್ನು ಪ್ರಬಲರನ್ನಾಗಿ ಮಾಡಬಹುದು ! ಇದು ಅತ್ಯುತ್ತಮ ವಿಟಮಿನ್ ಇ ಯ ಮೂಲಗಳನ್ನು ಹೊಂದಿದೆ. ಬಾದಾಮಿ ಆಂಟಿ ಆಕ್ಸಿಡೆಂಟ್ ( ಉತ್ಕರ್ಷಣ ನಿರೋಧಕ) ಗುಣಲಕ್ಷಣಗಳನ್ನು ಹೊಂದಿರುತ್ತವೆ ಮತ್ತು ಆಮೂಲಾಗ್ರ ಹಾನಿಯಿಂದ ಯನ್ನು ನಿಮ್ಮ ದೇಹದವನ್ನು ಕಾಪಾಡುತ್ತವೆ.

ಟೊಮೆಟೊ

ಟೊಮೆಟೊ

ಟೊಮೆಟೊ ಹಣ್ಣನ್ನು ತಮ್ಮ ದಿನನಿತ್ಯದ ಆಹಾರಕ್ರಮದಲ್ಲಿ ಸೇರಿಸುವುದು ತುಂಬಾ ಒಳ್ಳೆಯದು. ಲೈಕೋಪೆನೆ ಅಧಿಕವಿರುವ ಆಹಾರ ತಿಂದರೆ ಕರುಳಿನ ಕ್ಯಾನ್ಸರ್, ಹೃದಯದ ಸಮಸ್ಯೆ, ಕೊಲೆಸ್ಟ್ರಾಲ್ ಇವುಗಳ ವಿರುದ್ಧ ಹೋರಾಡುತ್ತದೆ ಎಂದು ಸಂಶೋಧನೆಯಿಂದ ತಿಳಿದು ಬಂದಿದೆ.

ಎಲೆಕೋಸು

ಎಲೆಕೋಸು

ಎಲೆಕೋಸು, ಬ್ರೊಕೋಲಿ ಇವೆಲ್ಲಾ ನೀವು ಪ್ರತೀ ದಿನಾ ತಿನ್ನಲೇಬೇಕಾದ ಆಹಾರವಾಗಿದೆ. ಇದರಲ್ಲಿ ಕ್ಯಾನ್ಸರ್ ವಿರುದ್ಧ ಹೋರಾಡುವ ಅಂಶವಿದೆ.

ಬೆರ್ರಿ ಹಣ್ಣುಗಳು

ಬೆರ್ರಿ ಹಣ್ಣುಗಳು

ಇದು ಹೃದಯದ ಆರೋಗ್ಯಕ್ಕೆ ಒಳ್ಳೆಯದು, ಟೈಪ್ 2 ಡಯಾಬಿಟಿಸ್ ಅನ್ನು ನಿಯಂತ್ರಣದಲ್ಲಿಡುತ್ತದೆ. ಈ ಹಣ್ಣುಗಳು ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚು ಪ್ರಭಾವ ಬೀರುತ್ತದೆ.

ದಾಳಿಂಬೆ

ದಾಳಿಂಬೆ

ದಾಳಿಂಬೆಯಲ್ಲಿ antioxidants ಅಧಿಕವಿದೆ. ದಾಳಿಂಬೆಯನ್ನು ಪ್ರತಿದಿನ ತಿಂದರೆ ಕೊಲೆಸ್ಟ್ರಾಲ್ ಬರುವುದಿಲ್ಲ ಎಂದು ಸಂಶೋಧನೆಯಿಂದ ದೃಢಪಟ್ಟಿದೆ.

ದವಸಧಾನ್ಯಗಳು

ದವಸಧಾನ್ಯಗಳು

ದವಸ ಧಾನ್ಯಗಳಲ್ಲಿ ವಿಟಮಿನ್ ಬಿ. ಅಧಿಕ ಪ್ರಮಾಣದಲ್ಲಿದ್ದು, ಪ್ರತೀ ನಿತ್ಯ ನಿಮ್ಮ ಆಹಾರದ ಪಟ್ಟಿಯಲ್ಲಿ ಇದನ್ನು ಸೇರಿಸಿಕೊಳ್ಳಿ. ಮೊಳೆಕೆ ಬರಿಸಿದ ಧಾನ್ಯಗಳನ್ನು ಹೆಚ್ಚಾಗಿ ತಿನ್ನಿ.

ಕಾರ್ನ್

ಕಾರ್ನ್

ಕಾರ್ನ್‌‌ನಲ್ಲಿ ನಿಮ್ಮ ದೇಹ ಹೊಂದಿಕೊಳ್ಳುವಂತಹ ಕಾರ್ಬೋಹೈಡ್ರೇಟ್ಸ್ ಅಂಶ ಅಧಿಕ ಪ್ರಮಾಣದಲ್ಲಿದ್ದು, ಕೆಲವೇ ನಿಮಿಷಗಳಲ್ಲಿ ನಿಮ್ಮ ದೇಹದ ಶಕ್ತಿಯನ್ನು ಹೆಚ್ಚಿಸಲು ಸಹಾಯಕವಾಗಲಿದೆ.

ಕುಂಬಳಕಾಯಿ

ಕುಂಬಳಕಾಯಿ

ಕುಂಬಳಕಾಯಿ ನಿಮಗೆ ಸಂಪೂರ್ಣ ಆರೋಗ್ಯವನ್ನು ಕೊಡುವ ಒಂದು ತರಕಾರಿಯಾಗಿದೆ. ಇದು ಕ್ಯಾಲೋರಿಯಿಂದ ಭರಿತವಾಗಿಲ್ಲದಿದ್ದರೂ ನಿಮ್ಮ ಹೊಟ್ಟೆಯನ್ನು ಭರ್ತಿಗೊಳಿಸುತ್ತದೆ ಮತ್ತು ನಿಮ್ಮ ಹಾರ್ಮೋನ್‌ಗಳನ್ನು ನಿಯಂತ್ರಿಸುತ್ತದೆ ಇದರಿಂದ ನೀವು ಸಮರ್ಥರು ಮತ್ತು ಸಾಮರ್ಥ್ಯವುಳ್ಳವರಾಗಿ ಪರಿವರ್ತಿತರಾಗುತ್ತೀರಿ.

ಡ್ರೈ ಫ್ರುಟ್ಸ್

ಡ್ರೈ ಫ್ರುಟ್ಸ್

ಡ್ರೈ ಫ್ರುಟ್ಸ್ ಹೇರಳವಾದ ಪೋಷಕಾಂಶಗಳಿಂದ ಭರಿತವಾಗಿದೆ. ಇದರಲ್ಲಿರುವ ಒಮೇಗಾ - 3 ಕೊಬ್ಬು ನಿಮಗೆ ಸಾಕಷ್ಟು ಶಕ್ತಿಯನ್ನು ನೀಡುತ್ತದೆ.

ಸೋಯಾಬೀನ್:

ಸೋಯಾಬೀನ್:

ಸ್ನಾಯು ರಚನೆಯಲ್ಲಿ ಸೋಯಾಬೀನ್‌ನ ಪಾತ್ರ ಅತ್ಯಂತ ಹಿರಿದು. ದೈಹಿಕ ಕೆಲಸಗಳನ್ನು ಮಾಡಲು ಬೇಕಾದ ದೀರ್ಘ ಸಮಯ ಆರೋಗ್ಯ ಸಾಮರ್ಥ್ಯವನ್ನು ಸೋಯಾ ಒದಗಿಸುತ್ತದೆ.

ಬಾದಾಮಿ

ಬಾದಾಮಿ

ಬಾದಾಮಿ ಬೀಜಗಳು ವಿಟಮಿನ್ E ಯನ್ನು ಸಮೃದ್ಧವಾಗಿ ಒಳಗೊ೦ಡಿರುವುದರಿ೦ದ, ಅವು ಶರೀರದ ಅನಾರೋಗ್ಯಕರ ಕೊಲೆಸ್ಟ್ರಾಲ್ ಅನ್ನು ತಗ್ಗಿಸುತ್ತವೆ. ಇದರ ನೇರ ಪರಿಣಾಮವು ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳುವುದರ ಮೇಲೆ ಧನಾತ್ಮಕವಾಗಿ ಆಗುತ್ತದೆ. ನೀರಿನಲ್ಲಿ ನೆನೆಸಿಟ್ಟಿರುವ ಬಾದಾಮಿ ಬೀಜಗಳ ಬಳಕೆಯ ಮತ್ತೊ೦ದು ಪ್ರಯೋಜನವೆ೦ದರೆ, ಈ ಕಾಳುಗಳು ನಾವು ವಿಪರೀತವಾಗಿ ಹೊಟ್ಟೆಬಾಕರ೦ತೆ ಆಹಾರವನ್ನು ಸೇವಿಸದ೦ತೆ ಅವು ನಮ್ಮನ್ನು ತಡೆಹಿಡಿಯುತ್ತವೆ.

ಸೇಬು

ಸೇಬು

ದಿನಕ್ಕೊಂದು ಸೇಬು ವೈದ್ಯರನ್ನು ದೂರವಿಡುವುದು" ಈ ವಾಕ್ಯವನ್ನು ಚಿಕ್ಕಂದಿನಿಂದಲೂ ಕೇಳುತ್ತಲೇ ಬಂದಿದ್ದೇವೆ. ಬೇರೆಲ್ಲಾ ಹಣ್ಣುಗಳಿಗಿಂತ ಸೇಬಿನಲ್ಲಿರುವ ಪೋಷಕಾಂಶಗಳ ಆಗರವೇ ಇದಕ್ಕೆ ಕಾರಣ. ಪ್ರತಿದಿನ ಸೇಬು ಹಣ್ಣೊಂದನ್ನು ತಿನ್ನುವ ಮೂಲಕ ದೇಹಕ್ಕೆ ಅಗತ್ಯವಾದ ಪ್ರಮಾಣದ ಪ್ರೋಟೀನುಗಳು, ವಿಟಮಿನ್ ಗಳು, ಆಂಟಿ ಆಕ್ಸಿಡೆಂಟುಗಳು ಹಾಗೂ ಮುಖ್ಯವಾಗಿ ವಿಟಮಿನ್ ಸಿ ಲಭ್ಯವಿರುವುದರಿಂದ ಉತ್ತಮ ಆರೋಗ್ಯ ಕಾಪಾಡಿಕೊಂಡು ಬರುವ ಕಾರಣ ಸೇಬಿಗೆ ವೈದ್ಯರನ್ನು ದೂರ ಅಟ್ಟಿದ ಅತಿಶಯೋಕ್ತಿ ಲಭ್ಯವಾಗಿದೆ.

ಕೆಂಪು ಅಕ್ಕಿ

ಕೆಂಪು ಅಕ್ಕಿ

ಒಂದು ಕಪ್ ಕುಚ್ಚಲಕ್ಕಿಯಲ್ಲಿ ನಮ್ಮ ದೇಹಕ್ಕೆ ಅಗತ್ಯವಾದ ಶೇ.80%ರಷ್ಟು ಮ್ಯಾಂಗನೀಸ್ ಇರುತ್ತದೆ. ಇದು ನಮ್ಮ ದೇಹದಲ್ಲಿರುವ ಕೊಬ್ಬನ್ನು ಕರಗಿಸುತ್ತದೆ. ನಂತರ ಇದರಲ್ಲಿರುವ ಕಾರ್ಬೋಹೈಡ್ರೇಟ್‍ಗಳಿಂದ ನಮ್ಮ ದೇಹದಲ್ಲಿ ಕೊಬ್ಬು ಸಂಗ್ರಹಗೊಳ್ಳುವುದು ತಪ್ಪುತ್ತದೆ.

ಸಿಟ್ರಸ್ ಹಣ್ಣುಗಳು

ಸಿಟ್ರಸ್ ಹಣ್ಣುಗಳು

ಸಿಟ್ರಸ್ ಹಣ್ಣುಗಳು ನಿಮ್ಮ ಸಾಮರ್ಥ್ಯ ಮಟ್ಟಗಳನ್ನು ಏರಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ದೇಹದಲ್ಲಿನ ವಿಷಕಾರಿ ಅಂಶಗಳನ್ನು ಹೊರಹಾಕಿ ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಹಸಿರು ತರಕಾರಿಗಳು

ಹಸಿರು ತರಕಾರಿಗಳು

ಹಸಿರು ಎಲೆಗಳ ತರಕಾರಿಗಳು ಹೆಚ್ಚಿನ ಫೈಬರ್ ಮತ್ತು ವಿಟಮಿನ್ ಸಿ ಯಿಂದ ಸಮೃದ್ಧಿಗೊಂಡಿದೆ.

ಬೀನ್ಸ್

ಬೀನ್ಸ್

ಬೀನ್ಸ್ ಸಾಕಷ್ಟು ಪ್ರಮಾಣದ ಐರನ್ ಅನ್ನು ಒಳಗೊಂಡಿದ್ದು ರಕ್ತದ ಆಮ್ಲಜನಕ ಹೊತ್ತೊಯ್ಯುವ ಪ್ರಮಾಣವನ್ನು ಹೆಚ್ಚಿಸುತ್ತದೆ.

ಕಾಫಿ

ಕಾಫಿ

ಕಾಫಿ ಇಲ್ಲವೇ ಕೆಫೀನ್ ಇದು ತ್ವರಿತ ಶಕ್ತಿದಾಯಕವಾಗಿದೆ. ಇದು ನಿಮ್ಮ ಮೆದುಳನ್ನು ಮರುಸಶಕ್ತೀಕರಣಗೊಳಿಸಿ ನಿಮ್ಮನ್ನು ಉತ್ಸುಕರನ್ನಾಗಿರಿಸುತ್ತದೆ. ಇದರ ಅಧಿಕ ಸೇವನೆಯೂ ಹಾನಿಕರ. ಆದರೆ ಕಾಫಿ ಮೈಗ್ರೇನ್ ಅನ್ನು ನಿವಾರಿಸಿ ಶಕ್ತಿಯನ್ನು ಒದಗಿಸುತ್ತದೆ.

 ಓಟ್‌ಮೀಲ್

ಓಟ್‌ಮೀಲ್

ಓಟ್‌ಮೀಲ್‌ ಸಾಕಷ್ಟು ಕಾರ್ಬೊಹೈಡ್ರೇಟ್‌ಗಳ ವರ್ಗಗಳನ್ನು ಒಳಗೊಂಡಿದೆ. ಕೆಲವು ಗಂಟೆಗಳವರೆಗಿನ ಶಕ್ತಿ ಸಾಮರ್ಥ್ಯವನ್ನು ಇದು ನಿಮಗೆ ಒದಗಿಸುತ್ತದೆ.

ಕೆಂಪು ದ್ರಾಕ್ಷಿ

ಕೆಂಪು ದ್ರಾಕ್ಷಿ

ಕೆಂಪು ದ್ರಾಕ್ಷಿಯು ನೈಸರ್ಗಿಕ ಸಕ್ಕರೆಯನ್ನು ಹೊಂದಿದ್ದು ಇದನ್ನು ತ್ವರಿತವಾಗಿ ಶಕ್ತಿಯನ್ನಾಗಿ ಪರಿವರ್ತಿಸುತ್ತದೆ. ದೀರ್ಘ ಕಾಲದವರೆಗೆ ಸಾಮರ್ಥ್ಯವನ್ನು ರಚಿಸುವ ರಿಸರ್ವಟೋಲ್ ರಾಸಾಯನಿಕವನ್ನು ದ್ರಾಕ್ಷಿ ಒಳಗೊಂಡಿದೆ.

ನೀರು

ನೀರು

ನಿಮ್ಮ ದೇಹ ಹೈಡ್ರೇಟ್ ಆಗಿರದಿದ್ದರೆ, ನಿಮಗೆ ಸಾಮರ್ಥ್ಯವಿರುವಂತೆ ಭಾಸವಾಗುವುದಿಲ್ಲ. ನೀರು ನಿಮ್ಮ ದೇಹದಿಂದ ಎಲ್ಲಾ ವಿಷ ಅಂಶಗಳನ್ನು ಹೊರತೆಗೆಯುವಲ್ಲಿ ಸಹಕಾರಿ ಆದ್ದರಿಂದ ನಿಮಗೆ ಸಾಧ್ಯವಿರುವಷ್ಟು ನೀರು ಕುಡಿಯಲು ಪ್ರಯತ್ನಿಸಿ.

ಬೀಟ್‌ರೋಟ್ ಜ್ಯೂಸ್:

ಬೀಟ್‌ರೋಟ್ ಜ್ಯೂಸ್:

ಬೀಟ್‌ರೋಟ್ ಜ್ಯೂಸ್ ಅನ್ನು "ಕೊಬ್ಬು ಕೊಲ್ಲವಂಥದ್ದು" ಎಂದೂ ಸಹ ಕರೆಯಲಾಗುತ್ತದೆ. ನೀವು ವರ್ಕ್ಔಟ್ ಮಾಡುವ ಮುನ್ನ ಈ ಜ್ಯೂಸ್ ಅನ್ನು ಸೇವಿಸುವುದು ನಿಮ್ಮ ದೈಹಿಕ ವ್ಯಾಯಾಮವನ್ನು ವಿಸ್ತರಿಸಲು ಸಹಾಯ ಮಾಡುತ್ತದೆ. ಬೀಟ್‌ರೋಟ್ ವಿಟಮಿನ್ ಎ ಮತ್ತು ವಿಟಮಿನ್ ಸಿ ಯನ್ನು ಒಳಗೊಂಡಿದೆ. ಇವುಗಳು ಸಾಮರ್ಥ್ಯವನ್ನು ವೃದ್ಧಿಸುತ್ತದೆ.

ನೆಲಗಡಲೆ ಬೆಣ್ಣೆ:

ನೆಲಗಡಲೆ ಬೆಣ್ಣೆ:

ನೆಲಗಡಲೆ ಬೆಣ್ಣೆಯು ಒಮೇಗಾ - 3 ಫ್ಯಾಟಿ ಏಸಿಡ್ ಅನ್ನು ಒಳಗೊಂಡಿದೆ. ಇದು ಉತ್ತಮ ಆರೋಗ್ಯಕಾರಿ ಕೊಬ್ಬಾಗಿದೆ. ನಿಮ್ಮ ಹೃದಯವನ್ನು ರಕ್ಷಿಸುತ್ತದೆ, ನೋವಿನ ಶಮನ ಮಾಡುತ್ತದೆ ಮತ್ತು ದೀರ್ಘ ಸಮಯದವರೆಗೆ ನಿಮಗೆ ಶಕ್ತಿಯನ್ನು ಒದಗಿಸುತ್ತದೆ.

ಬಾಳೆಹಣ್ಣು

ಬಾಳೆಹಣ್ಣು

ಬಾಳೆಹಣ್ಣು ಫೈಬರ್ ಮತ್ತು ಸರಳ ಫ್ರುಕ್ಟೋಸ್ ಅಥವಾ ನೈಸರ್ಗಿಕ ಸಕ್ಕರೆಯನ್ನು ಒಳಗೊಂಡಿದೆ. ಇದು ನಿಮ್ಮ ಸಾಮರ್ಥ್ಯವನ್ನು ಹೆಚ್ಚಿಸುವುದು ಮಾತ್ರವಲ್ಲ ನಿಮ್ಮನ್ನು ಆರೋಗ್ಯವಂತರನ್ನಾಗಿಸುತ್ತದೆ.

ಹಸಿರು ತರಕಾರಿಗಳು

ಹಸಿರು ತರಕಾರಿಗಳು

ಹಸಿರು ತರಕಾರಿಗಳು, ಕೆಂಪು ತರಕಾರಿಗಳು ಅಥವ ಕಿತ್ತಳೆ ಮತ್ತು ಹಳದಿ ಬಣ್ಣದವುಗಳಲ್ಲಿ ಹೆಚ್ಚಿನ ಆ್ಯಂಟಿಆ್ಯಂಕ್ಸಿಡೆಂಟ್ಗಳು ಮತ್ತು ವಿಟಮಿನ್ಗಳಿರುತ್ತವೆ. ಇವುಗಲ್ಲಿ ಹೆಚ್ಚಿನ ನೀರಿನಂಶವಿರುತ್ತದೆ. ನೀರಿನಂಶ ಹೆಚ್ಚಿರುವ ತರಕಾರಿಗಳನ್ನು ತಿನ್ನುವುದರಿಂದ ದೇಹದಲ್ಲಿ ನೀರಿನಂಶವನ್ನು ಕಾಪಾಡಿಕೊಳ್ಳಬಹುದು.

ಸೊಪ್ಪು

ಸೊಪ್ಪು

ಇದರಲ್ಲಿ ಆ್ಯಂಟಿಆ್ಯಕ್ಸಿಡೆಂಟ್ಗಳು ಹೆಚ್ಚಿದ್ದು ಪಾರ್ಶ್ವವಾಯು, ಹೃದಯಸಂಬಂಧಿ ಖಾಯಿಲೆಗಳು ಮತ್ತು ರಕ್ತದೊತ್ತಡವನ್ನು ತಡೆಗಟ್ಟುತ್ತದೆ. ಇದು 10 ಅತ್ಯುತ್ತಮ ಆಹಾರಗಳಲ್ಲಿ ಒಂದು. ಇದರಲ್ಲಿ ಲ್ಯುಟೆನ್ ಆ್ಯಂಟಿ ಏಜಿಂಗ್ ಅಂಶ ಹೆಚ್ಚಿರುತ್ತದೆ.

ಈರುಳ್ಳಿ

ಈರುಳ್ಳಿ

ಉರಿಯೂತಗಳನ್ನು ಕಡಿಮೆಗೊಳಿಸುತ್ತದೆ, ಇದರಲ್ಲಿ ಆ್ಯಂಟಿ ಬ್ಯಾಕ್ಟಿರಿಯಲ್, ಆ್ಯಂಟಿ ಫಂಗಲ್ ಮತ್ತು ಆ್ಯಂಟಿ ವೈರಲ್ ಗುಣವಿದೆ. ಈರುಳ್ಳಿಯಲ್ಲಿ ಜೀರ್ಣಕಾರಿ ಎಂಜೈಮ್ಗಳಿವೆ. ಇದು ವಿಷಕಾರಿ ವಸ್ತುಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಕೆಂಪು ಈರುಳ್ಳಿ ಹೆಚ್ಚು ಉತ್ತಮವಾದದ್ದು.

ಕಾಳುಗಳು

ಕಾಳುಗಳು

ಕಾಳುಗಳ ಸಿಪ್ಪೆಯಲ್ಲಿ ಆ್ಯಂಟಿಏಜಿಂಗ್ ಅಂಶ ಹೆಚ್ಚಿರುತ್ತದೆ. ಎಲ್ಲ ಕಾಳುಗಳಲ್ಲೂ ಪ್ರೊಟೀನ್, ಫೈಬರ್, ಅಗತ್ಯವಾದ ಕೊಬ್ಬಿನಂಶ, ವಿಟಮಿನ್ಗಳು ಮತ್ತು ಖನಿಜಾಂಶಗಳಿರುತ್ತವೆ. ಇದರೊಂದಿಗೆ ಮೆಗ್ನಿಶಿಯಂ ಕೂಡ ಇರುತ್ತದೆ.

ಐಸ್ಬರ್ಗ್ ಲೆಟ್ಟ್ಯೂಸ್

ಐಸ್ಬರ್ಗ್ ಲೆಟ್ಟ್ಯೂಸ್

ಇದು ಹಾನಿಕಾರಕ ಕಣಗಳೊಂದಿಗೆ ಹೋರಾಡುತ್ತದೆ. ಇದರಲ್ಲಿ ಮ್ಯಾಂಗನೀಸ್, ಮೆಗ್ನಿಶಿಯಂ, ಪೊಟ್ಯಾಶಿಯಂ, ಐ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಜೇನುತುಪ್ಪ

ಜೇನುತುಪ್ಪ

ದಿನವೂ ½ ಚಮಚ ಜೇನುತುಪ್ಪವನ್ನು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು. ಜೇನುತುಪ್ಪವನ್ನು ತಣ್ಣಗೆ ಬಳಸಬೇಕೆ ಹೊರತು ಕಾಯಿಸಬಾರದು. ಅದರಲ್ಲಿನ ಅಗತ್ಯ ವಿಟಮಿನ್ ಗಳು ಕಾಯಿಸುವುದರಿಂದ ನಷ್ಟವಾಗುತ್ತದೆ.

ಡಾರ್ಕ್ ಚಾಕೊಲೆಟ್:

ಡಾರ್ಕ್ ಚಾಕೊಲೆಟ್:

ಈ ತಿಂಡಿಯಲ್ಲಿ ಆ್ಯಂಟಿಆ್ಯಂಕ್ಸಿಡೆಂಟ್ಗಳು ಹೆಚ್ಚಿದ್ದು ಇದು ಜೀವಕೋಶಗಳ ಹಾನಿಯ ವಿರುದ್ಧ ಹೋರಾಡುತ್ತದೆ. ಇದರಲ್ಲಿ ವಿಟಮಿನ್ B6 ಮತ್ತು ಟ್ರೈಪೊಟೊಫ್ಯಾನ್ ಇರುತ್ತದೆ. ಇದು ಸೆರೊಟೊನಿನ್ ಆಗಿ ಪರಿವರ್ತಿತವಾಗುತ್ತದೆ. ಇದು ಖಿನ್ನತೆಯ ವಿರುದ್ಧ ಹೋರಾಡಲು ಸಹಕಾರಿ.

ಕ್ಯಾರೆಟ್ ಜ್ಯೂಸ್

ಕ್ಯಾರೆಟ್ ಜ್ಯೂಸ್

ಕ್ಯಾರೆಟ್ ಜ್ಯೂಸ್ ಅನ್ನು ಪ್ರತಿ ನಿತ್ಯ ಸೇವಿಸುವುದರಿಂದ ಕೊಲೆಸ್ಟ್ರಾಲ್ ಕಡಿಮೆಗೊಳಿಸುತ್ತದೆ. ಇದರಲ್ಲಿರುವ ಕಿತ್ತಳೆ ಬಣ್ಣವು ರೋಗ ನಿರೋಧಕತೆಯನ್ನು ಹೆಚ್ಚಿಸುತ್ತದೆ. ಇದರಲ್ಲಿನ ಬೀಟಾಕ್ಯಾರೋಟೆನೆ ವಯಸ್ಸಾಗುವಿಕೆಯೊಂದಿಗೆ ಕಣ್ಣುಗಳಿಗೆ ಬರಬಹುದಾದ ರೋಗಗಳಿಂದ ರಕ್ಷಿಸುತ್ತದೆ. ಇದು ಕಣ್ಣಿನ ದೃಷ್ಟಿಗೆ ಒಳ್ಳೆಯದು.

ಕೊತ್ತೊಂಬರಿ ಸೊಪ್ಪು

ಕೊತ್ತೊಂಬರಿ ಸೊಪ್ಪು

ಇದು ಜೀರ್ಣಾಂಗಗಳನ್ನು ಸ್ವಚ್ಛಗೊಳಿಸುವಲ್ಲಿ ಸಹಕಾರಿ. ಇದರಲ್ಲಿ ವಿಟಮಿನ್ ಸಿ, ಎ ಮತ್ತು ಬಿ ಇದೆ. ಇದರೊಂದಿಗೆ ಕಬ್ಬಿಣದಂಶ, ಕ್ಯಾಲ್ಸಿಯಂ ಮತ್ತು ಪೊಟ್ಯಾಶಿಯಂ ಇರುತ್ತದೆ. ಇದರಲ್ಲಿ ಸಹಜ ಮೂತ್ರವರ್ಧಕ ಅಂಶವಿದೆ.

ವಾಲ್ನಟ್ಸ್

ವಾಲ್ನಟ್ಸ್

ಇದರಲ್ಲಿ ಕಾಪರ್ ಅಂಶ ಹೆಚ್ಚಿರುತ್ತದೆ. ಇದು ಕೂದಲು ಬೆಳ್ಳಗಾಗುವುದನ್ನು ತಪ್ಪಿಸುತ್ತದೆ ಮತ್ತು ಕೂದಲ ನೈಸರ್ಗಿಕ ಬಣ್ಣವನ್ನು ಕಾಪಾಡಿಕೊಳ್ಳಲು ಸಹಕಾರಿ.

ಸೌತೆಕಾಯಿ

ಸೌತೆಕಾಯಿ

ಇದನ್ನು ಎಲ್ಲ ಬಗೆಯ ಸಲಾಡ್ ಗಳಲ್ಲಿ ಕಾಣಬಹುದು. ಹಸಿಯಾಗಿ ತಿನ್ನಬಹುದಾದ ತರಕಾರಿಗಳೆಲೆಲ್ಲ ಇದು ಉತ್ತಮ. ನೀವು ತೂಕ ಕಳೆದುಕೊಳ್ಳಲು ಪ್ರಯತ್ನಿಸುತ್ತಿದ್ದಲ್ಲಿ ಇದನ್ನು ಹೆಚ್ಚಾಗಿ ತಿನ್ನಿ. ಇದರಲ್ಲಿ ನೀರಿನ ಅಂಶ ಹೆಚ್ಚಾಗಿರುವುದರಿಂದ ಇದು ನಿಮ್ಮ ಹೊಟ್ಟೆಯನ್ನು ತುಂಬಿಸುತ್ತದೆ.

ಕೊಬ್ಬರಿ

ಕೊಬ್ಬರಿ

ಪರಿಣಿತರ ಪ್ರಕಾರ ಕೊಬ್ಬರಿ ತಿನ್ನುವುದರಿಂದ ದೇಹದಲ್ಲಿನ ಕೀಟಾಣುಗಳು ನಾಶವಾಗುತ್ತದೆಯಂತೆ. ನಿಮಗೆ ಹೊಟ್ಟೆಯ ಇನ್ ಫೆಕ್ಷನ್ ಕಾಡುತ್ತಿದ್ದಲ್ಲಿ ಕೊಬ್ಬರಿಯನ್ನು ತಿನ್ನುವುದರಿಂದ ಈ ಸಮಸ್ಯೆಯಿಂದ

ಮುಕ್ತರಾಗಬಹುದು.

ಜೋಳ

ಜೋಳ

ಜೋಳವನ್ನು ತಿನ್ನುವುದರಿಂದ ತೂಕವನ್ನು ವೇಗವಾಗಿ ಕಳೆದುಕೊಳ್ಳಬಹುದು. ಇದರಲ್ಲಿ ಹೆಚ್ಚು ಪ್ರೊಟೀನ್ ಇರುತ್ತದೆ. ಇದು ಆರೋಗ್ಯಕ್ಕೆ ಒಳ್ಳೆಯದು

English summary

super foods for a healthy life

These foods packed with nutrients and are considered great not only at fending off serious diseases but are also known to fortify your immune system
X
Desktop Bottom Promotion