For Quick Alerts
ALLOW NOTIFICATIONS  
For Daily Alerts

ದೇಹಕ್ಕೆ ವರದಾನವಾಗಿರುವ ಆಲೀವ್ ಎಣ್ಣೆಯ ವಿಶೇಷತೆ ಏನು?

By Super
|

ಇತ್ತೀಚಿನ ವರ್ಷಗಳಲ್ಲಿ ಹೃದಯಾಘಾತಕ್ಕೆ ಕಾರಣವಾಗುವ ಅಂಶಗಳನ್ನು ನಡೆಸಿದ ಸಂಶೋಧನೆಗಳಲ್ಲಿ ನಮ್ಮ ಊಟದಲ್ಲಿರುವ ಎಣ್ಣೆಯ ಪಾತ್ರ ಮಹತ್ತರ ಎಂದು ತಿಳಿದುಬಂದಿದೆ. ಸುಮಾರು ಇಪ್ಪತ್ತೈದು ವರ್ಷಗಳ ಹಿಂದೆ ಅಗ್ಗ ಎಂಬ ಕಾರಣಕ್ಕೆ ಡಾಲ್ಡಾ ಎಂಬ ವನಸ್ಪತಿ ಅತಿ ಹೆಚ್ಚಿನ ಮಾರಾಟ ಹೊಂದಿತ್ತು. ಆದರೆ ಈ ಎಣ್ಣೆ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಿಸುವ ಮೂಲಕ ಹೃದಯಾಘಾತಕ್ಕೆ ಕಾರಣವಾಗುತ್ತದೆ ಎಂಬ ಸತ್ಯ ಹೊರಬಂದ ಬಳಿಕ ಇದರ ಬಳಕೆ ಕಡಿಮೆಯಾಗಿದೆ.

ಇದೇ ರೀತಿ ಪಾಮೋಲಿನ್ ಎಣ್ಣೆ ಸಹಾ ದೇಹಕ್ಕೆ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಸೇರಿಸುತ್ತದೆ. ಆದರೆ ಮುಂದುವರೆದ ದೇಶಗಳು ಈಗಾಗಲೇ ಹಲವು ಬಡದೇಶಗಳಲ್ಲಿ ಲಕ್ಷಗಟ್ಟಲೆ ಎಕರೆ ಪಾಮ್ ಬೆಳೆಯನ್ನು ಬೆಳಿಸಿದ್ದು ಫಲ ಬರುವ ವೇಳೆಗೆ ಎಣ್ಣೆ ದೇಹಕ್ಕೆ ಅಷ್ಟೊಂದು ಒಳ್ಳೆಯದಲ್ಲ ಎಂದು ಕಂಡುಬಂದಾಗ ಭಾರತ ಸೇರಿಸಿ ಇತರ ಅಭಿವೃದ್ಧಿಶೀಲ ದೇಶಗಳಿಗೆ ರವಾನಿಸುತ್ತಿದೆ. ಹಾಗಾದರೆ ದೇಹಕ್ಕೆ ಒಳ್ಳೆಯ ಎಣ್ಣೆ ಯಾವುದು ಎಂದು ಪರಿಶೀಲಿಸಿದರೆ ಆರೋಗ್ಯದ ದೃಷ್ಟಿಯಿಂದ ಆಲಿವ್ ಎಣ್ಣೆ ಪ್ರಥಮ ಸ್ಥಾನದಲ್ಲಿ ನಿಲ್ಲುತ್ತದೆ. ಆಲೀವ್ ಎಣ್ಣೆ ನೀಡುತ್ತೆ ಕೋಮಲ ತ್ವಚೆ

ಆಮದು ಮಾಡಿಕೊಳ್ಳಬೇಕಾದ ಕಾರಣ ಬೆಲೆ ಕೊಂಚ ಹೆಚ್ಚು ಎಂಬ ಒಂದೇ ಋಣಾತ್ಮಕ ಅಂಶವನ್ನು ಕಡೆಗಣಿಸಿದರೆ ಬೇರೆಲ್ಲಾ ವಿಷಯಗಳಲ್ಲಿ ಆಲಿವ್ ಎಣ್ಣೆಗೆ ಯಾವುದೂ ಸರಿಸಾಟಿಯಲ್ಲ. ಈ ಎಣ್ಣೆಯಲ್ಲಿ ನಮ್ಮ ದೇಹಕ್ಕೆ ಅನುಕೂಲಕರವಾದ ಬಹಳಷ್ಟು ಅಂಶಗಳಿವೆ. ನಿಮ್ಮ ಮನೆಯ ಅಡುಗೆಯಲ್ಲಿ ಆಲಿವ್ ಎಣ್ಣೆಯನ್ನು ಬಳಸಲು ಪ್ರಾರಂಭಿಸಲು ಪ್ರೇರಣೆ ನೀಡುವ ಹತ್ತು ಪ್ರಮುಖ ವಿಷಯಗಳನ್ನು ಇಲ್ಲಿ ಪ್ರಸ್ತಾಪಿಸಲಾಗಿದೆ.

ಹೃದಯಕ್ಕೆ ಅತ್ಯುತ್ತಮ

ಹೃದಯಕ್ಕೆ ಅತ್ಯುತ್ತಮ

ಆಲಿವ್ ಎಣ್ಣೆಯನ್ನು ಸೇವಿಸುವುದರಿಂದ ರಕ್ತದಲ್ಲಿ ಈಗಾಗಲೇ ಶೇಖರಗೊಂಡಿರುವ ಕೆಟ್ಟ ಕೊಲೆಸ್ಟ್ರಾಲ್ ನಿಧಾನವಾಗಿ ಕಡಿಮೆಯಾಗುತ್ತಾ ಬರುತ್ತದೆ. ಆಲಿವ್ ಎಣ್ಣೆಯಲ್ಲಿ phenolic antioxidant ಎಂಬ ಪೋಷಕಾಂಶವು ರಕ್ತದಲ್ಲಿ ಮಿಳಿತಗೊಂಡಾಗ ನರಗಳ ಒಳಗೆ ಅಲ್ಲಲ್ಲಿ ಜಿಡ್ಡುಗಟ್ಟಿ ರಕ್ತಸಂಚಾರಕ್ಕೆ ತಡೆಯೊಡ್ಡುತ್ತಿದ್ದ (LDL-Low density lipoprotien) ಎಂಬ ಕೆಟ್ಟ ಕೊಲೆಸ್ಟ್ರಾಲ್ ನೊಂದಿಗೆ ಮಿಶ್ರಗೊಂಡು ಜಿಡ್ಡನ್ನು ಸಡಿಲಗೊಳಿಸುತ್ತದೆ. ಇದುವರೆಗೆ ಜಿಡ್ಡಿನಿಂದ ನರಗಳ ಒಳಭಾಗಗಳು ಕಿರಿದುಕೊಂಡಿದ್ದು ಆ ಮೂಲಕ ರಕ್ತವನ್ನು ಕಳುಹಿಸಲು ಹೃದಯಕ್ಕೆ ಹೆಚ್ಚು ಶ್ರಮ ಬೇಕಾಗಿತ್ತು. ಈಗ ಸರಾಗಗೊಂಡಿರುವ ರಕ್ತನಾಳಗಳ ಮೂಲಕ ರಕ್ತವನ್ನು ಹರಿಸಲು ಹೃದಯಕ್ಕೆ ಸಾಮಾನ್ಯವಾದ ಒತ್ತಡ ಸಾಕು. ಹಾಗಾಗಿ ಹೃದಯಕ್ಕೆ ಆಲಿವ್ ಎಣ್ಣೆ ಪರಮಾಪ್ತನಾಗಿದೆ. ಸೌಂದರ್ಯ ಮತ್ತು ಆರೋಗ್ಯಕ್ಕೆ ಕೀಲಿಕೈ ಆಲೀವ್

ಮಧುಮೇಹದ ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆ

ಮಧುಮೇಹದ ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆ

ಆಲಿವ್ ಎಣ್ಣೆಯಲ್ಲಿ monosaturated fat ಎಂಬ ತೈಲ ಅಂಶವಿದ್ದು ಇದು ಮಧುಮೇಹ ಬರುವುದನ್ನು ತಡೆಗಟ್ಟುತ್ತದೆ. ಸಾಮಾನ್ಯವಾಗಿ ಮಧುಮೇಹ ಅನುವಂಶಿಕವಾಗಿ ಬರುವ ಸಾಧ್ಯತೆ ಹೆಚ್ಚು. ಈ ಸಂದರ್ಭದಲ್ಲಿ ಪ್ರತಿದಿನ ಎರಡು ಚಮಚದಷ್ಟು ಆಲಿವ್ ಎಣ್ಣೆಯನ್ನು ಆಹಾರದೊಡನೆ ಸೇವಿಸಿದರೆ ಮಧುಮೇಹ ಬರುವ ಸಾಧ್ಯತೆ ಶೇಖಡಾ ಐವತ್ತರಷ್ಟು ಕಡಿಮೆಯಾಗುತ್ತದೆ. ಈ ಆಂಕಿ ಅಂಶಗಳನ್ನು Californian Health Agency ಧೃಢೀಕರಿಸಿದೆ.

ಕ್ಯಾನ್ಸರ್ ಬರುವುದನ್ನು ತಡೆಗಟ್ಟುತ್ತದೆ

ಕ್ಯಾನ್ಸರ್ ಬರುವುದನ್ನು ತಡೆಗಟ್ಟುತ್ತದೆ

ದೇಹದ ಯಾವುದೋ ಒಂದು ಅಂಗದ ಜೀವಕೋಶಗಳು ಅನಿಯಮಿತವಾಗಿ ಹಾಗೂ ನಿಯಂತ್ರಣವಿಲ್ಲದೇ ಅಭಿವೃದ್ಧಿಗೊಂಡಾಗ ಅಂಗದ ಕಾರ್ಯನಿರ್ವಹಿಸುವ ಜೀವಕೋಶಗಳನ್ನೇ ಕಾರ್ಯನಿರ್ವಹಿಸಲು ಅಸಾಧ್ಯವಾಗುವಂತೆ ಮಾಡುತ್ತದೆ. ಉದಾಹರಣೆಗೆ ರಕ್ತದಲ್ಲಿ ಬಿಳಿಯ ರಕ್ತಕಣಗಳು ಒಂದು ನಿರ್ದಿಷ್ಟ ಪ್ರಮಾಣದಲ್ಲಿ ಮಾತ್ರ ಇರಬೇಕು. ಒಂದು ವೇಳೆ ಈ ಪ್ರಮಾಣ ಅತಿ ಹೆಚ್ಚಾದರೆ ಅವು ಜೀವಕ್ಕೆ ಅಗತ್ಯವಾದ ಕೆಂಪುರಕ್ತಕಣಗಳ ಪ್ರಮಾಣವನ್ನೇ ಕುಗ್ಗಿಸಿ ಜೀವವನ್ನು ತೆಗೆದುಬಿಡುತ್ತವೆ. ಇದಕ್ಕೆ ರಕ್ತದ ಕ್ಯಾನ್ಸರ್ ಎನ್ನುತ್ತಾರೆ. ಈ ಅನಿಯಂತ್ರಿತ ಬೆಳವಣಿಗೆಯನ್ನು ಹತ್ತಿಕ್ಕಲು ಅತ್ಯಂತ ಅಗತ್ಯವಾಗಿ ಬೇಕಾಗಿರುವುದು ವಿಟಮಿನ್ ಇ ಹಾಗೂ alpha-tocopherol ಎಂಬ ಆಂಟಿ ಆಕ್ಸಿಡೆಂಟ್. ಇದು ಆಲಿವ್ ಎಣ್ಣೆಯಲ್ಲಿ 370 mg/kg ಯಷ್ಟು ಪ್ರಮಾಣದಲ್ಲಿದೆ. ಇದು ಕ್ಯಾನ್ಸರ್ ಕಾರಕ ಕಣಗಳು ಅತಿಹೆಚ್ಚು ಸಂಖ್ಯೆಯಲ್ಲಿ ದ್ವಿಗುಣಗೊಳ್ಳುವುದನ್ನು ತಡೆಯುತ್ತದೆ ಹಾಗೂ ದೇಹವನ್ನು ಕ್ಯಾನ್ಸರ್ ನಿಂದ ಮುಕ್ತಿಗೊಳಿಸುತ್ತದೆ. ಕೂದಲಿಗೆ ಎಣ್ಣೆ ಏಕೆ ಮತ್ತು ಹೇಗೆ ಹಚ್ಚಬೇಕು?

ಮೆದುಳಿನ ಸಾಮರ್ಥ್ಯಕ್ಕೂ ಒಳ್ಳೆಯದು

ಮೆದುಳಿನ ಸಾಮರ್ಥ್ಯಕ್ಕೂ ಒಳ್ಳೆಯದು

ಚಿಕ್ಕಂದಿನಿಂದಲೂ ಆಲಿವ್ ಎಣ್ಣೆ ಬಳಸಿದ ಆಹಾರ ಸೇವಿಸಿದವರಲ್ಲಿ ಬುದ್ಧಿಮತ್ತೆಯ ಗುಣಸೂಚಿ ಹೆಚ್ಚಿರುವುದು ಸಂಶೋಧನೆಗಳಿಂದ ಧೃಢಪಟ್ಟಿದೆ. ಸುಲಭ ವಿವರಣೆ ಎಂದರೆ ಮೆದುಳಿಗೆ ಅತಿಹೆಚ್ಚಿನ ರಕ್ತಸಂಚಾರ ಬೇಕಾಗುತ್ತದೆ. ಆಲಿವ್ ಎಣ್ಣೆಯಲ್ಲಿ ರಕ್ತಸಂಚಾರ ಸುಗಮಗೊಳಿಸಲು ಹಲವು ಪೋಷಕಾಂಶಗಳಿರುವುದರಿಂದ ಹಾಗೂ ಹೃದಯದೊತ್ತಡ ಕಡಿಮೆಯಾಗಿರುವುದರಿಂಡ ಮೆದುಳಿಗೆ ಅಗತ್ಯವಿದ್ದಷ್ಟು ರಕ್ತ ಸರಬರಾಜು ಎಂದಿಗೂ ದೊರಕುತ್ತಲೇ ಇರುತ್ತದೆ. ಪರಿಣಾಮವಾಗಿ ಮೆದುಳಿನ ಕಾರ್ಯಕ್ಷಮತೆ ಹೆಚ್ಚುತ್ತದೆ.

ನಿಮ್ಮ ಚಟುವಟಿಕೆಗಳನ್ನು ಚೂಟಿಯಾಗಿಸುತ್ತದೆ

ನಿಮ್ಮ ಚಟುವಟಿಕೆಗಳನ್ನು ಚೂಟಿಯಾಗಿಸುತ್ತದೆ

ಕ್ರಿಕೆಟ್ ಆಟದಲ್ಲಿ ಬಲಾಢ್ಯರು ಬ್ಯಾಟಿಂಗ್ ಮಾಡಿದರೆ ಬರೆಯ ಸಿಕ್ಸರ್ ಹೊಡೆದು ಪಂದ್ಯ ಗೆಲ್ಲಬಹುದಲ್ಲಾ? ಈ ಪ್ರಶ್ನೆಗೆ ಯಾವುದೇ ಕ್ರಿಕೆಟ್ ಪ್ರೇಮಿಯ ಬಳಿ ಸಿದ್ಧ ಉತ್ತರವಿದೆ. ಅದೆಂದರೆ ತಕ್ಷಣದ ನರಪ್ರಚೋದನೆಯ ಪ್ರತಿಕ್ರಿಯೆ (neural reflex system). ಅಂದರೆ ನಿಮ್ಮ ಶರೀರದ ಪ್ರತಿಯೊಂದು ಜೀವಕೋಶ ಮೆದುಳಿನ ಸೂಚನೆಗಳನ್ನು ಕ್ಷಣಾರ್ಧದಲ್ಲಿ ಗ್ರಹಿಸಿ ಆ ಪ್ರಕಾರ ಕಾರ್ಯ ನಿರ್ವಹಿಸಬೇಕು. ಹಾಗಾಗಿ ಕ್ರಿಕೆಟ್ ಸೇರಿ ಯಾವುದೇ ಆಟದಲ್ಲಿ ಮಾಂಸಖಂಡಗಳ ಬಲಾಢ್ಯತೆಗಿಂತ ಚುರುಕಾದ ಚಲನವಲನ ಮುಖ್ಯ. ಇದಕ್ಕಾಗಿ ಜೀವಕೋಶಗಳಿಂದ ಮೆದುಳಿಗೆ ತಲುಪುವ ಹಾಗೂ ಮೆದುಳಿನಿಂದ ತಿರುಗಿ ಜೀವಕೋಶಗಳಿಗೆ ತಲುಪುವ ಸೂಚನೆಗಳು ಮಿಂಚಿನ ವೇಗದಲ್ಲಿ ಕಾರ್ಯನಿರ್ವಹಿಸಬೇಕಾಗುತ್ತದೆ. ಆಲಿವ್ ಎಣ್ಣೆಯಲ್ಲಿ ಓಲಿಕ್ ಆಮ್ಲ (Oleic Acid) ಎಂಬ ಪೋಷಕಾಂಷವಿದೆ. ಇದು ನರಗಳ ಹೊರಕವಚದಲ್ಲಿ ಮೈಲಿನ್ ಎಂಬ ಕವಚವನ್ನು (myelin sheath) ಸೃಷ್ಟಿಸುತ್ತದೆ. ಈ ಕವಚದ ಮೂಲಕ ಮೆದುಳಿನ ಸೂಚನೆಗಳು ಅದ್ಭುತವಾದ ವೇಗದಲ್ಲಿ ತಮ್ಮ ಗುರಿಯನ್ನು ತಲುಪುತ್ತವೆ. ಪರಿಣಾಮ, ಈಗ ನಿಮಗೆ ಸ್ಪಷ್ಟವಾಗಿ ಅರ್ಥವಾಗಿದೆ.

ದೇಹದಲ್ಲಿ ಕಂಡುಬರುವ ಕೊಬ್ಬಿನಿಂದ ರಕ್ಷಿಸುತ್ತದೆ

ದೇಹದಲ್ಲಿ ಕಂಡುಬರುವ ಕೊಬ್ಬಿನಿಂದ ರಕ್ಷಿಸುತ್ತದೆ

ನಮ್ಮ ದೇಹದ ಪ್ರತಿ ಜೀವಕೋಶಗಳು ಸತತವಾಗಿ ಮರುಹುಟ್ಟು ಪಡೆಯುತ್ತಾ ಇರುತ್ತವೆ. ಕೆಲವು ವೈಪರೀತ್ಯಗಳ ಕಾರಣ ಸತ್ತ ಜೀವಕೋಶಗಳ ಸಮಪ್ರಮಾಣದಲ್ಲಿ ಹೊಸ ಜೀವಕೋಶಗಳು ಹುಟ್ಟದೇ ಇರುವ ಕಾರಣ ದೇಹ ಸೊರಗುತ್ತದೆ. ಇದರ ಮೂಲಕ ಪಾರ್ಕಿನ್ಸನ್ ರೋಗ, ಆಲ್ಝೀಮರ್ ರೋಗ, atherosclerosis ಮೊದಲಾದ ಕಾಯಿಲೆಗಳು ಪ್ರಾರಂಭವಾಗುತ್ತವೆ. ಆಲಿವ್ ಎಣ್ಣೆಯಲ್ಲಿ monosaturated fat ಎಂಬ ಕೊಬ್ಬು ಜೀವಕೋಶಗಳು ಸಮಪ್ರಮಾಣದಲ್ಲಿ ಮರುಹುಟ್ಟು ಪಡೆಯಲು ಸಹಕರಿಸುವುದರಿಂದ ದೇಹದ ಆರೋಗ್ಯ ಉತ್ತಮಗೊಳ್ಳುತ್ತದೆ.

ರಕ್ತಸಂಚಾರವನ್ನು ಕ್ರಮಬದ್ಧಗೊಳಿಸುತ್ತದೆ.

ರಕ್ತಸಂಚಾರವನ್ನು ಕ್ರಮಬದ್ಧಗೊಳಿಸುತ್ತದೆ.

ರಕ್ತಸಂಚಾರ ಸುಗಮವಾಗಿರಲು ನಮ್ಮ ರಕ್ತದಲ್ಲಿ ಸಾಕಷ್ಟು ಪ್ರಮಾಣದ ವಿಟಮಿನ್ ಇ ಅಗತ್ಯವಿದೆ. ಆಲಿವ್ ಎಣ್ಣೆಯಲ್ಲಿ ಇದರ ಪ್ರಮಾಣ 12.9% ರಷ್ಟಿದೆ. ವಿಟಮಿನ್ ಇ ಹೆಚ್ಚಿರುವ ಎಣ್ಣೆಗಳು ಲಭ್ಯವಿದ್ದರೂ ದೇಹಕ್ಕೆ ಅತಿಹೆಚ್ಚಿನ ವಿಟಮಿನ್ ಇ ಅಗತ್ಯವಿಲ್ಲ. ಬದಲಿಗೆ ಈ ಪ್ರಮಾಣ ಹೆಚ್ಚಾದರೆ ರಕ್ತದ ಸುಗಮ ಸಂಚಾರಕ್ಕೆ ಅಡಚಣೆಯುಂಟಾಗಬಹುದು. ಆಲಿವ್ ಎಣ್ಣೆಯಲ್ಲಿ ಇದು ಹೇಳಿ ಮಾಡಿಸಿದ ಪ್ರಮಾಣದಲ್ಲಿರುವುದರಿಂದ ರಕ್ತಸಂಚಾರ ಸುಗಮವಾಗುತ್ತದೆ. ಅಲ್ಲದೇ ಕೊಲೆಸ್ಟರಾಲ್ ಕಡಿಮೆಯಾಗುವುದರಿಂದ ರಕ್ತದೊತ್ತಡವೂ ಸುಸ್ಥಿತಿಯಲ್ಲಿರುತ್ತದೆ.

ಖಿನ್ನತೆಯನ್ನು ತಡೆಯುತ್ತದೆ ಹಾಗೂ ಖಿನ್ನತೆಯಿಂದ ಹೊರಬರಲು ಸಹಕರಿಸುತ್ತದೆ.

ಖಿನ್ನತೆಯನ್ನು ತಡೆಯುತ್ತದೆ ಹಾಗೂ ಖಿನ್ನತೆಯಿಂದ ಹೊರಬರಲು ಸಹಕರಿಸುತ್ತದೆ.

ಆಲಿವ್ ಎಣ್ಣೆಯಲ್ಲಿ oleocanthal ಎಂಬ ಪೋಷಕಾಂಶವಿದೆ. ಇದು ಖಿನ್ನತೆಗೆ ಕಾರಣವಾಗುವ ರಸಾಯನಿಕಗಳನ್ನು ಉತ್ಪತ್ತಿಯಾಗದಂತೆ ತಡೆಯುತ್ತದೆ, ಅಲ್ಲದೇ ಈಗಾಗಲೇ ಉತ್ಪತ್ತಿಯಾಗಿರುವ ಕಣಗಳನ್ನು ನೈಸರ್ಗಿಕವಾಗಿ ದೇಹದಿಂದ ಹೊರಹೋಗಲು ಸಹಕರಿಸುತ್ತದೆ. ಪರಿಣಾಮವಾಗಿ ಖಿನ್ನತೆಯಿಂದ ಬಳಲುತ್ತಿದ್ದ ಮನ ಈಗ ನಿರಾಳವಾಗುತ್ತದೆ, ಜೀವನ ಸುಂದರವಾಗಿ ಕಾಣತೊಡಗುತ್ತದೆ, ಸುತ್ತಮುತ್ತ ಸಂತೋಷ ಮೂಡುತ್ತದೆ.

ಮೂಳೆಗಳಿಗೂ ಒಳ್ಳೆಯದು

ಮೂಳೆಗಳಿಗೂ ಒಳ್ಳೆಯದು

ಮೂಳೆಗಳ ಪ್ರಮುಖ ಅಂಶವೆಂದರೆ ಕ್ಯಾಲ್ಸಿಯಂ. ಹಾಲಿನಲ್ಲಿ ಅತ್ಯುತ್ತಮ ಮಟ್ಟದ ಕ್ಯಾಲ್ಸಿಯಂ ಇದೆ. ಆದರೆ ಕ್ಯಾಲ್ಸಿಯಂ ಮೂಳೆಗಳು ಹೀರುವಂತಾಗಲು ವಿಟಮಿನ್ ಡಿ ಅಗತ್ಯವಿದೆ. ಆಲಿವ್ ಎಣ್ಣೆಯಲ್ಲಿ ಉತ್ತಮ ಮಟ್ಟದ ವಿಟಮಿನ್ ಡಿ ಲಭ್ಯವಿದ್ದು ಹಾಲು ಮತ್ತು ಇತರ ಮೂಲಗಳಿಂದ ಲಭ್ಯವಾದ ಕ್ಯಾಲ್ಸಿಯಂ ಕಣಗಳನ್ನು ಮೂಳೆಗಳು ಹೀರಿಕೊಂಡು ಧೃಢವಾಗಲು (Calcification) ಸಹಕರಿಸುತ್ತವೆ.

ಮಲಬದ್ಧತೆಯಾಗುವುದನ್ನು ತಡೆಯುತ್ತದೆ.

ಮಲಬದ್ಧತೆಯಾಗುವುದನ್ನು ತಡೆಯುತ್ತದೆ.

ಪಿತ್ತದಿಂದ ಉತ್ಪತ್ತಿಯಾಗುವ ಪಿತ್ತರಸ ನಮ್ಮ ಕರುಳುಗಳ ಒಳಗಣ ಚಲನೆಗೆ ನೈಸರ್ಗಿಕವಾದ ನುಣುಪನ್ನು ನೀಡುತ್ತದೆ. ಆಲಿವ್ ಎಣ್ಣೆಯಲ್ಲಿರುವ ಕಬ್ಬಿಣ,ವಿಟಮಿನ್ ಇ ಮತ್ತು ಕೆ, ಒಮೆಗಾ 3 ಮತ್ತು 6 fatty acid ನಂತಹ ಪ್ರಮುಖ ಪೋಷಕಾಂಶಗಳು ಸಮಗ್ರ ಜೀರ್ಣಕ್ರಿಯೆಯಲ್ಲಿ ಸಹಕರಿಸಿ ಮಲಬದ್ಧತೆಯಾಗುವುದನ್ನು ತಡೆಯುತ್ತದೆ.

English summary

Superb Health Benefits Of Olive Oil

Olive oil is a perfect ingredient that enhances taste and is replete with health boosters as well. The benefits of olive oil are far more than the normal oils used for cooking at home.
X
Desktop Bottom Promotion