For Quick Alerts
ALLOW NOTIFICATIONS  
For Daily Alerts

ಅಜೀರ್ಣ ಸಮಸ್ಯೆ ನಿವಾರಣೆಗೆ ಸೂಕ್ತ ಸಲಹೆಗಳು

|

ಅಜೀರ್ಣ ಸಾಮಾನ್ಯವಾಗಿ ಎಲ್ಲರೂ ಎದುರಿಸುವ ಸಮಸ್ಯೆ. ಸಮಸ್ಯೆ ಚಿಕ್ಕದೆಂದು ಉದಾಸೀನ ಮಾಡುವಂತಿಲ್ಲ. ಆದರೆ, ಸಮಸ್ಯೆ ಬಗ್ಗೆ ಗೆಳೆಯ/ತಿಯರಲ್ಲೂ ಹೇಳುವಂತಿಲ್ಲ. ಪ್ರತಿಷ್ಠೆ ಪ್ರಶ್ನೆ! ಅಜ್ಜಿ ಹೇಳುವ ಟಿಪ್ಸ್ ಈ ಕಾಲದವರಿಗೆ ರುಚಿಸುವುದಿಲ್ಲ. ಡಾಕ್ಟರ್ ಹತ್ತಿರ ಹೋಗಿ ಹಣ ತೆತ್ತು ಬಂದು ತಾತ್ಕಾಲಿಕ ಪರಿಹಾರ ಪಡೆಯುವುದು ತಪ್ಪುತ್ತಿಲ್ಲ.

ಜೀರ್ಣಾಂಗ ವ್ಯವಸ್ಥೆ ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ ನಮ್ಮ ದೇಹದ ಎಲ್ಲಾ ಅಂಗಗಳ ಕಾರ್ಯ ವ್ಯವಸ್ಥೆಗೆ ಅಡಚಣೆ ಉಂಟಾಗುವುದು. ಆದ್ದರಿಂದ ಜೀರ್ಣಕ್ರಿಯೆ ಸರಿಯಾಗಿ ನಡೆಯುವಂತೆ ನೋಡಿಕೊಳ್ಳುವುದು ಅವಶ್ಯಕ. ಈ ಕೆಳಗೆ ನೀಡಿದ ಟಿಪ್ಸ್ ಜೀರ್ಣಕ್ರಿಯೆ ಸರಿಯಾಗಿ ನಡೆಯಲು ಸಹಕಾರಿಯಾಗಿದೆ. ಆದಾಗ್ಯೂ ಅಜೀರ್ಣ ಸಮಸ್ಯೆ ಆಗಾಗ ಕಾಣುತ್ತಿದ್ದರೆ ವೈದ್ಯರ ಹತ್ತಿರ ಸಲಹೆ ಪಡೆಯಿರಿ.

ನಾರಿನ ಪದಾರ್ಥಗಳನ್ನು ಹೆಚ್ಚಾಗಿ ತಿನ್ನಿ:

ನಾರಿನ ಪದಾರ್ಥಗಳನ್ನು ಹೆಚ್ಚಾಗಿ ತಿನ್ನಿ:

ನಾರಿನಂಶವಿರುವ ಆಹಾರಗಳು ಜೀರ್ಣಕ್ರಿಯೆಗೆ ತುಂಬಾ ಸಹಾಯಕಾರಿ. ನಾರಿನಂಶವಿರುವ ಆಹಾರಗಳು ನಿಮ್ಮ ದಿನನಿತ್ಯದ ಆಹಾರಕ್ರಮದಲ್ಲಿ ಇರುವಂತೆ ನೋಡಿಕೊಳ್ಳಿ.

ನೀರು:

ನೀರು:

ಕಮ್ಮಿ ಪ್ರಮಾಣದಲ್ಲಿ ನೀರು ಕುಡಿದರೆ ಜೀರ್ಣಕ್ರಿಯೆಗೆ ತೊಂದರೆ ಉಂಟಾಗುವುದು. ಆದ್ದರಿಂದ ಸಾಕಷ್ಟು ನೀರು ಕುಡಿಯಿರಿ. ಊಟವಾದ ಬಳಿಕ ಒಂದು ಲೋಟ ಬಿಸಿ ನೀರು ಕುಡಿಯುವುದು ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು.

ವ್ಯಾಯಾಮ:

ವ್ಯಾಯಾಮ:

ದೇಹಕ್ಕೆ ಶ್ರಮವಿಲ್ಲದಿದ್ದರೆ ನಮ್ಮ ದೇಹದ ಅಂಗಳ ಕಾರ್ಯ ವೈಖರಿ ಕೂಡ ಕಡಿಮೆಯಾಗುವುದು. ಬೆವರು ಸುರಿಯುವಂತೆ ಕೆಲಸ ಮಾಡುವುದು ಅಥವಾ ವ್ಯಾಯಾಮ ಮಾಡುವುದು ಮಾಡಿ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.

ಊಟವನ್ನು ನಿಧಾನಕ್ಕೆ ತಿನ್ನಿ:

ಊಟವನ್ನು ನಿಧಾನಕ್ಕೆ ತಿನ್ನಿ:

ಊಟ ಮಾಡುವಾಗ ನಿಧಾನಕ್ಕೆ ಚೆನ್ನಾಗಿ ಜಗಿದು ತಿನ್ನಿ. ಹೀಗೆ ತಿಂದರೆ ಜೀರ್ಣಕ್ರಿಯೆ ಸುಲಭವಾಗುವುದು.

ಮಿತಿ ಮೀರಿ ತಿನ್ನುವುದನ್ನು ನಿಲ್ಲಿಸಿ:

ಮಿತಿ ಮೀರಿ ತಿನ್ನುವುದನ್ನು ನಿಲ್ಲಿಸಿ:

ಹೊಟ್ಟೆ ಬಿರಿಯುವಂತೆ ತಿಂದರೆ ಜೀರ್ಣಕ್ರಿಯೆಗೆ ತೊಂದರೆಯಾಗುವುದು. ಆದ್ದರಿಂದ ಯಾವಾಗಲೂ ಮಿತಿ ಆಹಾರ ಸೇವನೆ ಆರೊಗ್ಯದ ದೃಷ್ಟಿಯಿಂದ ಒಳ್ಳೆಯದು.

ಲೋಳೆಸರದ ಜ್ಯೂಸ್:

ಲೋಳೆಸರದ ಜ್ಯೂಸ್:

ಅಜೀರ್ಣ ಸಮಸ್ಯೆ ಉಂಟಾಗಿ ಹೊಟ್ಟೆ ನೋವು, ಮಲಬದ್ಧತೆ ಕಾಣಿಸಿಕೊಂಡರೆ ಲೋಳೆಸರದ ಜ್ಯೂಸ್ ಕುಡಿಯುವುದು ಒಳ್ಳೆಯದು.

ಸಕ್ಕರೆಯಂಶವಿರುವ ಆಹಾರವನ್ನು ಕಮ್ಮಿ ಮಾಡಿ:

ಸಕ್ಕರೆಯಂಶವಿರುವ ಆಹಾರವನ್ನು ಕಮ್ಮಿ ಮಾಡಿ:

ನಿಮ್ಮ ಡಯಟ್‌ನಲ್ಲಿ ಸಕ್ಕರೆಯಂಶವನ್ನು ಕಮ್ಮಿ ತಿನ್ನಿ. ಕೆಫೀನ್ ಅಂಶವನ್ನು ಕೂಡ ಮಿತಿಯಲ್ಲಿ ಸೇವಿಸಿ.

ಒತ್ತಡ:

ಒತ್ತಡ:

ನಮ್ಮನ್ನು ಕಾಡುತ್ತಿರುವ ಅನೇಕ ಸಮಸ್ಯೆಗಳಿಗೆ ಕಾರಣ ಮಾನಸಿಕ ಒತ್ತಡ. ಇದನ್ನು ಕಮ್ಮಿ ಮಾಡಿದರೆ ನಿಮ್ಮ ಅನೇಕ ಸಮಸ್ಯೆಗೆ ಪರಿಹಾರ ದೊರಕಿದಂತೆ.

ಟೊಮೇಟೊ ಸೇವನೆ:

ಟೊಮೇಟೊ ಸೇವನೆ:

ಅಜೀರ್ಣ ರೋಗ ಉಂಟಾದಾಗ ಟೊಮೇಟೊ ಸೇವನೆ ತುಂಬಾ ಹಿತಕರ. ದಿನ ನಿತ್ಯ ಟೊಮೇಟೊ ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬಹುದು.

ದ್ರಾಕ್ಷಿ ಹಣ್ಣು:

ದ್ರಾಕ್ಷಿ ಹಣ್ಣು:

ಬಿಳಿ ದ್ರಾಕ್ಷಿ ಹಣ್ಣು ದೇಹಕ್ಕೆ ತಂಪು . ಇದನ್ನು ನಿತ್ಯವೂ ಸೇವಿಸಿದರೆ ಹೊಟ್ಟೆ ಉರಿ , ಕಣ್ಣು ಉರಿ ಕಡಿಮೆ ಆಗುತ್ತದೆ. ಹುಳಿ ದ್ರಾಕ್ಷಿ ಹಣ್ಣನ್ನು ಸೇವಿಸಿದರೆ ಅಜೀರ್ಣ ಗುಣವಾಗುತ್ತದೆ .

ನೇರಳೆ ಹಣ್ಣು:

ನೇರಳೆ ಹಣ್ಣು:

ದೇಹಕ್ಕೆ ತಂಪು. ಇದರ ರಸ ಕುಡಿದರೆ ಹೊಟ್ಟೆಯ ಉರಿ, ಅಜೀರ್ಣ ಕಡಿಮೆ ಆಗುತ್ತದೆ .

ಬೆಳ್ಳುಳ್ಳಿ ರಸ:

ಬೆಳ್ಳುಳ್ಳಿ ರಸ:

ಮಿಶ್ರಿತ ಬೆಳ್ಳುಳ್ಳಿ ರಸವನ್ನು ಸಿದ್ಧಪಡಿಸಿ, ಏಳೆಂಟು ಚಮಚ ಬಿಸಿ ನೀರಿಗೆ ಅರ್ಧ ಚಮಚದಷ್ಟು ಬೆಳ್ಳುಳ್ಳಿ ರಸ ಸೇರಿಸಿ. ಈ ಮಿಶ್ರಣವನ್ನು ದಿನಕ್ಕೆರಡು ಬಾರಿ ಸೇವಿಸಿ.

ಕೊತ್ತಂಬರಿ ಬೀಜ ಮತ್ತು ಒಣಶುಂಠಿ:

ಕೊತ್ತಂಬರಿ ಬೀಜ ಮತ್ತು ಒಣಶುಂಠಿ:

ಒಂದು ದೊಡ್ಡ ಚಮಚದಷ್ಟು ಕೊತ್ತಂಬರಿ ಬೀಜ ಮತ್ತು ಅವರೆಕಾಳಿನಷ್ಟು ಗಾತ್ರದ ಒಣಶುಂಠಿ ಸ್ವಲ್ಪ ಜಜ್ಜಿ ಎರಡು ಬಟ್ಟಲು ನೀರಿಗೆ ಹಾಕಿ ಚೆನ್ನಾಗಿ ಕುದಿಸಿ, ಕಷಾಯ ಶೋಧಿಸಿ, ಜೇನುತುಪ್ಪ ಸೇರಿಸಿ ಸೇವಿಸಿ.

ಮೇಲಿನ ಕಷಾಯಕ್ಕೆ ಜೇನುತುಪ್ಪ ಬದಲು ಕಲ್ಲು ಸಕ್ಕರೆ ಬಳಸಬಹುದು, ಸಕ್ಕರೆ ಬಳಕೆ ಬೇಡ. ಕೊತ್ತಂಬರಿ ಬೀಜ ಪುಡಿಮಾಡಿಟ್ಟುಕೊಂಡರೆ ತಕ್ಷಣಕ್ಕೆ ಕಷಾಯ ತಯಾರಿಸಲು ಅನುಕೂಲವಾಗುತ್ತದೆ.

ತುಳಸಿ ರಸ,

ತುಳಸಿ ರಸ,

ಬೆಳ್ಳುಳ್ಳಿ ರಸ, ಜೇನುತುಪ್ಪ ಸಮಭಾಗ ತೆಗೆದುಕೊಂಡು ಮಿಶ್ರಣ ತಯಾರಿಸಿ. ಮೂರು ದಿನಗಳಿಗೊಮ್ಮೆ ಒಂದು ಟೀ ಚಮಚದಷ್ಟು ಸೇವಿಸುತ್ತಿದ್ದರೆ ಹೊಟ್ಟೆ ಉರಿ ಕಮ್ಮಿಯಾಗುತ್ತದೆ.

ಪರಂಗಿ ಕಾಯಿ:

ಪರಂಗಿ ಕಾಯಿ:

ಪರಂಗಿ ಕಾಯಿಗೆ ಚಾಕುವಿನಿಂದ ಇರಿದಾಗ ಬರುವ ಹಾಲಿಗೆ ಸ್ವಲ್ಪ ಪ್ರಮಾಣದಲ್ಲಿ ಅಡುಗೆ ಸೋಡಾ ಓಮಾ ಕಾಳು ಪುಡಿ ಹಾಗು ಶುಂಟಿ ರಸವನ್ನು ಬೆರೆಸಿ, ಮಿತ ಪ್ರಮಾಣದಲ್ಲಿ ದಿನವು ಸೇವಿಸುವುದರಿಂದ ಜೀರ್ಣಕ್ರಿಯೆ ಹೆಚ್ಚುತ್ತದೆ.

ಮಾವಿನ ಹಣ್ಣು:

ಮಾವಿನ ಹಣ್ಣು:

ಮಾವಿನ ಹಣ್ಣನ್ನು ದಿನ ನಿತ್ಯವೂ ಊಟದ ನಂತರ ಸೇವಿಸಿದರೆ ಜೀರ್ಣಶಕ್ತಿ ವೃದ್ಧಿಸುತ್ತದೆ.

ಧೂಮಪಾನ:

ಧೂಮಪಾನ:

ಹೊಟ್ಟೆ ನೋವು, ಉರಿ ಇದ್ದಾಗ ಕಾಫಿ, ಟೀ, ಆಲ್ಕೋಹಾಲ್, ಕೋಕ್, ಧೂಮಪಾನ ಬಿಟ್ಟು ಬಿಡಿ.

ಹೆಚ್ಚು ಬಿಗಿ ಉಡುಪುಗಳನ್ನು ಧರಿಸಬೇಡಿ.

ಹೆಚ್ಚು ಬಿಗಿ ಉಡುಪುಗಳನ್ನು ಧರಿಸಬೇಡಿ.

ರಾತ್ರಿ ಮಲಗುವುದಕ್ಕೂ ಎರಡು ಮೂರು ಗಂಟೆಗಳಿಗೆ ಮುನ್ನ ಆಹಾರ ಸೇವಿಸಿ. ಹೆಚ್ಚು ಬಿಗಿ ಉಡುಪುಗಳನ್ನು ಧರಿಸಬೇಡಿ, ರಾತ್ರಿ ಹೊತ್ತು ಕಾಫಿ, ಚಹಾ ಬೇಡ.

ಎದೆ ಉರಿ:

ಎದೆ ಉರಿ:

ಎದೆ ಉರಿ ಇದ್ದಾಗ ಮಲಗುವುದಕ್ಕಿಂತ ಎದ್ದು ಓಡಾಡಿದರೆ ಉತ್ತಮ. ಹೊಚ್ಚು ಹೊತ್ತಿನಿಂದ ತೊಂದರೆ ಅನುಭವಿಸುತ್ತಿದ್ದರೆ ವೈದ್ಯರನ್ನು ಅವಶ್ಯವಾಗಿ ಕಾಣಿರಿ.

ಬಿಸಿ ನೀರನ್ನು ಕುಡಿಯಿರಿ:

ಬಿಸಿ ನೀರನ್ನು ಕುಡಿಯಿರಿ:

ನಿಮಗೆ ತಿಂದ ಆಹಾರವನ್ನು ಜೀರ್ಣಿಸಿಕೊಳ್ಳಲು ಕಷ್ಟವಾದರೆ ಬಿಸಿ ನೀರನ್ನು ಕುಡಿಯಿರಿ.ಪ್ರತಿದಿನ ಬೆಳಗ್ಗೆ ಅಥವಾ ಊಟಕ್ಕೆ ಅರ್ಧಗಂಟೆ ಮೊದಲು ಬಿಸಿ ನೀರನ್ನು ಕುಡಿಯುವುದರಿಂದ ಜೀರ್ಣ ಕ್ರಿಯೆ ಚೆನ್ನಾಗಿ ಆಗುತ್ತದೆ ಮತ್ತು ಹೊಟ್ಟೆಯಲ್ಲಿ ಗ್ಯಾಸ್ ರಸ ಉತ್ಪತ್ತಿಯಾಗುವುದನ್ನು ತಡೆಯುತ್ತದೆ.

ಯಾವಾಗಲೂ ಕುಳಿತು ಆಹಾರ ತಿನ್ನಿ:

ಯಾವಾಗಲೂ ಕುಳಿತು ಆಹಾರ ತಿನ್ನಿ:

ನೀವು ಹೇಗೆ ತಿನ್ನುತ್ತೀರಿ ಎಂಬುದು ಕೂಡ ಜೀರ್ಣ ಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ ಆದ್ದರಿಂದ ಸದಾ ಕುಳಿತು ಆರಾಮವಾಗಿ ನಿಮ್ಮ ಊಟವನ್ನು ಆನಂದಿಸಿ.ನಾವು ಕುಳಿತು ತಿಂದಾಗ ನಮ್ಮ ಹೊಟ್ಟೆ ಆರಾಮದಾಯಕ ಭಂಗಿಯಲ್ಲಿರುತ್ತದೆ ಮತ್ತು ಇದರಿಂದ ಜೀರ್ಣಕ್ರಿಯೆ ಹೆಚ್ಚುತ್ತದೆ.

ಸಾಕಷ್ಟು ನೀರು ಕುಡಿಯಿರಿ:

ಸಾಕಷ್ಟು ನೀರು ಕುಡಿಯಿರಿ:

ಅಜೀರ್ಣ ಸಮಸ್ಯೆಗೆ ಇದು ಉತ್ತಮ ಪರಿಹಾರ.ಪ್ರತಿದಿನ 8-10 ಲೋಟ ನೀರು ಕುಡಿಯಿರಿ ಇದು ನಿಮ್ಮ ದೇಹವನ್ನು ಕ್ಲೀನ್ ಮಾಡುತ್ತದೆ ಮತ್ತು ಅಜೀರ್ಣವಾಗದಂತೆ ನೋಡಿಕೊಳ್ಳುತ್ತದೆ

ಲೆಮನ್ ಜ್ಯೂಸ್ ಕುಡಿಯಿರಿ

ಲೆಮನ್ ಜ್ಯೂಸ್ ಕುಡಿಯಿರಿ

ಮುಂಜಾನೆ ಬಿಸಿ ನೀರನ್ನು ಕುಡಿಯಲು ಇಷ್ಟವಾಗದಿದ್ದಲ್ಲಿ ಅದಕ್ಕೆ ಸ್ವಲ್ಪ ನಿಂಬೆ ರಸವನ್ನು ಸೇರಿಸಿ ಕುಡಿಯಿರಿ.ಪ್ರತಿ ದಿನ ಇದನ್ನು ಮಾಡಿದರೆ ಇದು ನಿಮ್ಮ ದೇಹವನ್ನು ಕ್ಲೀನ್ ಮಾಡುವುದರ ಜೊತೆಗೆ ದೇಹದಲ್ಲಿರುವ ಹೆಚ್ಚಿನ ಆಮ್ಲವನ್ನು ತೆಗೆಯುತ್ತದೆ.

ಮಸಾಜ್ ಮಾಡಿ:

ಮಸಾಜ್ ಮಾಡಿ:

ಜೀರ್ಣ ಕ್ರಿಯೆ ಹೆಚ್ಚಲು ಸಮಯವಿದ್ದಾಗಲೆಲ್ಲ ಹೊಟ್ಟೆ ವ್ಯಾಯಾಮ ಮತ್ತು ಮಸಾಜ್ ಮಾಡಿಕೊಳ್ಳಿ. ಪ್ರತೀದಿನ ಇದನ್ನು ಮಾಡಿದಲ್ಲಿ ನಿಮ್ಮ ಜೀರ್ಣ ಕ್ರಿಯೆ ಸುಲಭವಾಗಿಸುತ್ತದೆ.ಯಾವುದಾದರು ಎಣ್ಣೆ ಹಚ್ಚಿ ಹೊಟ್ಟೆಗೆ ಮಸಾಜ್ ಮಾಡುವುದನ್ನು ರೂಡಿಸಿಕೊಳ್ಳಿ.

ಅಗೆದು ತಿನ್ನುವುದು ನಿಮ್ಮ ಮಂತ್ರವಾಗಿರಲಿ:

ಅಗೆದು ತಿನ್ನುವುದು ನಿಮ್ಮ ಮಂತ್ರವಾಗಿರಲಿ:

ಸಣ್ಣ ತುತ್ತು ತೆಗೆದುಕೊಂಡು ಚೆನ್ನಾಗಿ ಅಗೆದು ತಿನ್ನುವುದು ನಿಮ್ಮ ಮಂತ್ರವಾಗಿರಬೇಕು.ಈ ತಂತ್ರವನ್ನು ಅಳವಡಿಸಿಕೊಂಡಲ್ಲಿ ನಿಮ್ಮ ಬಾಯಿಯಲ್ಲಿ ಕಾರ್ಬೋಹೈಡ್ರೇಟ್ಸ್ ರಚಿಸಲು ಸಹಾಯ ಮತ್ತು ಎಮಿಲೇಸ್ ಉತ್ಪಾದನೆಗೆ ಅನುವು ಮಾಡುತ್ತದೆ - ಸರಿಯಾದ ರೀತಿಯಲ್ಲಿ ಜೀರ್ಣಕ್ರಿಯೆ ಹೆಚ್ಚಿಸುತ್ತದೆ.

ಕೊಬ್ಬಿನಂಶ ಹೆಚ್ಚಿರುವ ಆಹಾರದಿಂದ ದೂರವಿರಿ:

ಕೊಬ್ಬಿನಂಶ ಹೆಚ್ಚಿರುವ ಆಹಾರದಿಂದ ದೂರವಿರಿ:

ಕೊಬ್ಬಿನಂಶ ಹೆಚ್ಚಿರುವ ಆಹಾರಗಳು ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಆದ್ದರಿಂದ ಆ ರೀತಿಯ ಆಹಾರ ತೆಗೆದುಕೊಂಡರೆ ಅಜೀರ್ಣ ತೊಂದರೆ ಪ್ರಾರಂಭವಾಗುತ್ತದೆ.ಕೊಬ್ಬಿನ ಆಹಾರಗಳು ದೇಹಕ್ಕೆ ಅಗತ್ಯ ಕೂಡ ಆದ್ದರಿಂದ ಸಂಪೂರ್ಣವಾಗಿ ಬಿಟ್ಟು ಬಿಡಬೇಡಿ.ಬೇರೆ ಆರೋಗ್ಯಯುತ ಆಹಾರದೊಂದಿಗೆ ಇದನ್ನು ಸೇರಿಸಿ ಸೇವಿಸಿದಲ್ಲ್ಲಿ ಯಾವುದೇ ತೊಂದರೆ ಇಲ್ಲ.

ವಿಟಮಿನ್ ಸಿ ಹೆಚ್ಚಿರುವ ಆಹಾರ ಉಪಯೋಗಿಸಿ:

ವಿಟಮಿನ್ ಸಿ ಹೆಚ್ಚಿರುವ ಆಹಾರ ಉಪಯೋಗಿಸಿ:

ಬ್ರೊಕೋಲಿ,ಕಿವಿ,ಸ್ಟ್ರಾಬೆರ್ರಿ ಮತ್ತು ಟೊಮೆಟೊಗಳಂತ ಹೆಚ್ಚು ವಿಟಮಿನ್ ಸಿ ಅಂಶವಿರುವ ಆಹಾರವನ್ನು ಸೇವಿಸಿ.ಹೆಚ್ಚು ಹೆಚ್ಚು ಅನ್ನುಗಳನ್ನು ತಿನ್ನುವುದರ ಮೂಲಕ ನಿಮ್ಮ ಹೊಟ್ಟೆಯನ್ನು ಕ್ಲೀನ್ ಮಾಡಿಕೊಳ್ಳಿ ಮತ್ತು ವಿಸರ್ಜನೆ ಸುಲಭವಾಗಿಸಿಕೊಳ್ಳಿ.

ಖಾರವನ್ನು ಬಳಸಿ:

ಖಾರವನ್ನು ಬಳಸಿ:

ಶುಂಠಿ,ಕಾಳು ಮೆಣಸು,ಕಲ್ಲುಪ್ಪು ಮತ್ತು ಕೊತ್ತುಂಬರಿ ಹೆಚ್ಚು ಬಳಸಿ.ಇದು ಆಹಾರದಲ್ಲಿ ಫ್ಲೇವರ್ ನೀಡುವುದರ ಜೊತೆಗೆ ಜೀರ್ಣ ಕ್ರಿಯೆ ಹೆಚ್ಚಿಸುತ್ತದೆ.

ಊಟದ ಸಮಯ ಪಾಲಿಸಿ:

ಊಟದ ಸಮಯ ಪಾಲಿಸಿ:

ಪ್ರತೀದಿನ ಸಮಯಕ್ಕೆ ಸರಿಯಾಗಿ ಊಟ ಮಾಡುವುದು ಕೂಡ ಜೀರ್ಣ ಕ್ರಿಯೆ ಮೇಲೆ ಪರಿಣಾಮ ಬೀರುತ್ತದೆ.ಪ್ರತೀದಿನ ನಿಗದಿತ ಸಮಯ ರೂಡಿಸಿಕೊಳ್ಳಿ.

ಆರೋಗ್ಯಕರ ತೂಕ ಕಾಪಾಡಿಕೊಳ್ಳಿ:

ಆರೋಗ್ಯಕರ ತೂಕ ಕಾಪಾಡಿಕೊಳ್ಳಿ:

ತೂಕ ಅತೀ ಹೆಚ್ಚು ಅಥವಾ ಕಡಿಮೆ ಇರುವುದು ಕೂಡ ಅಜೀರ್ಣ ತೊಂದರೆ ಮೂಲಕ ಎದೆ ಸುಡುವುದು ಮತ್ತು ಗ್ಯಾಸ್ ತೊಂದರೆಗಳನ್ನು ತರುತ್ತದೆ. ನಿಮ್ಮ ವೈದ್ಯರ ಸಲಹೆ ಪಡೆದು ಆರೋಗ್ಯಯುತ ತೂಕ ಕಾಪಾಡಿಕೊಳ್ಳಿ.

ತೆಳು ಮಾಂಸ ಬಳಸಿ:

ತೆಳು ಮಾಂಸ ಬಳಸಿ:

ನೀವು ಮಾಂಸ ಪ್ರಿಯರಾಗಿದ್ದಲ್ಲಿ ಕೊಬ್ಬಿನ ಭಾಗದಿಂದ ದೂರವಿರಿ ಏಕೆಂದರೆ ಇದು ಜೀರ್ಣವಾಗಲು ತೊಂದರೆ ನೀಡುತ್ತದೆ.ಆದ್ದರಿಂದ ನೀವು ಮಾಂಸ ತಿನ್ನಲೇಬೇಕಿದ್ದಲ್ಲಿ ಚರ್ಮರಹಿತ ಕೋಳಿ ಅಥವಾ ತೆಳು ಮಾಂಸವನ್ನು ಬಳಸಿ.

ಆಗಾಗ ಮೂತ್ರ ವಿಸರ್ಜನೆ ಮಾಡಿ:

ಆಗಾಗ ಮೂತ್ರ ವಿಸರ್ಜನೆ ಮಾಡಿ:

ನಿಮಗೆ ಟಾಯ್ಲೆಟ್ ಗೆ ಹೋಗುವುದು ಅರ್ಜೆಂಟ್ ಆದರೆ ತಕ್ಷಣ ಹೋಗಿಬನ್ನಿ. ತಡ ಮಾಡುವುದರಿಂದ ಗುದನಾಳಕ್ಕೆ ಪೆಟ್ಟು ಮತ್ತು ಕಷ್ಟವಾಗಬಹುದು. ಆದ್ದರಿಂದ ತಕ್ಷಣ ಹೋಗಿ ಮುಗಿಸಿ.

ಪ್ರತಿದಿನ ವ್ಯಾಯಾಮ ಮಾಡಿ:

ಪ್ರತಿದಿನ ವ್ಯಾಯಾಮ ಮಾಡಿ:

ಪ್ರತೀದಿನ ವ್ಯಾಯಾಮ ಮಾಡುವುದರಿಂದ ನಿಮ್ಮ ಜೀರ್ಣ ಕ್ರಿಯೆ ಸುಲಭವಾಗುತ್ತದೆ. ಪ್ರತೀದಿನದ ವ್ಯಾಯಾಮ ನಿಮ್ಮ ಚಯಾಪಚಯ ಕ್ರಿಯೆ ಮತ್ತು ರಕ್ತದ ಹರಿವನ್ನು ಉತ್ತಮಗೊಳಿಸುತ್ತದೆ.

ನಿಮ್ಮ ಆಹಾರದ ಅಳತೆಯನ್ನು ಗಮನದಲ್ಲಿಟ್ಟುಕೊಳ್ಳಿ:

ನಿಮ್ಮ ಆಹಾರದ ಅಳತೆಯನ್ನು ಗಮನದಲ್ಲಿಟ್ಟುಕೊಳ್ಳಿ:

ಅಳತೆ ಮೀರಿ ತಿನ್ನುವುದರಿಂದ ನಿಮ್ಮ ದೇಹಕ್ಕೆ ಪರಿಣಾಮ ಬೀರುತ್ತದೆ ಆದ್ದರಿಂದ ಸದಾ ಸ್ವಲ್ಪ ತಿನ್ನಿ ಮತ್ತು ಅತಿಯಾಗಿ ತಿನ್ನುವುದನ್ನು ಕಡಿಮೆ ಮಾಡಿ.

ಒತ್ತಡ ಕಡಿಮೆ ಮಾಡಿಕೊಳ್ಳಿ:

ಒತ್ತಡ ಕಡಿಮೆ ಮಾಡಿಕೊಳ್ಳಿ:

ಒತ್ತಡ ಕೂಡ ನಿಮ್ಮ ಜೀರ್ಣಾಂಗ ತೊಂದರೆಗೆ ಕಾರಣವಾಗಿರಬಹುದು. ಧ್ಯಾನ ಮತ್ತು ಉಸಿರಾಟದ ವ್ಯಾಯಾಮ ಮಾಡುವುದರ ಮೂಲಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ ಮತ್ತು ಜೀರ್ಣ ಕ್ರಿಯೆ ಹೆಚ್ಚಿಸಿಕೊಳ್ಳಿ.

ಜೈವಿಕ ಆಹಾರ ಬಳಸಿ:

ಜೈವಿಕ ಆಹಾರ ಬಳಸಿ:

ಕಡಿಮೆ ಕೊಬ್ಬಿನಂಶವಿರುವ ಮೊಸರನ್ನು ಪ್ರತೀದಿನ ಸೇವಿಸುವುದು ರೂಡಿಸಿಕೊಳ್ಳಿ. ಮೊಸರು ಆರೋಗ್ಯಯುತ ಜೈವಿಕ ಆಹಾರವಾಗಿದೆ. ಇದು ನಿಮ್ಮ ದೇಹವನ್ನು ಆರೋಗ್ಯಯುತವಾಗಿರಿಸುತ್ತದೆ,ಲಕ್ಟೊಸ್ ಒಡೆಯುತ್ತದೆ ಮತ್ತು ಸರಿಯಾದ ಪೌಷ್ಟಿಕಾಂಶ ಹೀರಲು ಸಹಕರಿಸುತ್ತದೆ.

ತಡ ರಾತ್ರಿ ಊಟ ಮಾಡುವುದನ್ನು ತಡೆಯುತ್ತದೆ:

ತಡ ರಾತ್ರಿ ಊಟ ಮಾಡುವುದನ್ನು ತಡೆಯುತ್ತದೆ:

ಜೀರ್ಣಕ್ರಿಯೆ ಸಂಜೆಯ ನಂತರ ನಿಧಾನವಾಗುತ್ತದೆ.ಆದ್ದರಿಂದ ಬೇಗೆ ಊಟ ಮಾಡಿ ಜೀರ್ಣ ಕ್ರಿಯೆಯ ತೊಂದರೆ ತಪ್ಪಿಸಿ.

English summary

Super Tips To Improve Digestion

Tips To To Improve Digestion Any changes in your regular diet can definitely cause bloating, nausea, irritable bowel syndrome and celiac disease. Here are some simple tips that can bring big changes in improving your digestive health.
X
Desktop Bottom Promotion