For Quick Alerts
ALLOW NOTIFICATIONS  
For Daily Alerts

ಬಾಳೆಹಣ್ಣಿನಲ್ಲಿರುವ ಅದ್ಭುತ ಗುಣ ತಿಳಿದಿದೆಯೇ?

|

ಆರೋಗ್ಯದ ವಿಷಯದಲ್ಲಿ ಬಾಳೆಹಣ್ಣನ್ನು ಸೋಲಿಸಲು ಯಾವುದರಿಂದಲೂ ಸಾಧ್ಯವಿಲ್ಲ. ಬಾಳೆಹಣ್ಣು ತುಂಬಾ ರುಚಿಕರ, ಕಡಿಮೆ ಬೆಳಯಲ್ಲಿ ವರ್ಷಪೂರ್ತಿ ದೊರೆಯುವ ಹಣ್ಣು ಇದು. ಕೇವಲ ಬಾಳೆಹಣ್ಣು ಮಾತ್ರವಲ್ಲ, ಬಾಳೆಹೂವು, ಬಾಳೆದಿಂಡು, ಬಾಳೆಎಲೆ, ಬಾಳೆ ಸಿಪ್ಪೆ ಹೀಗೆ ಎಲ್ಲವೂ ಉಪಯೋಗಕರ.

ಹೌದು, ಬಾಳೆಹಣ್ಣಿನಲ್ಲಿರುವ ಮೂರು ನೈಸರ್ಗಿಕ ಸಕ್ಕರೆಗಳಾದ ಸುಕ್ರೋಸ್, ಫ್ರುಕ್ಟೋಸ್ ಮತ್ತು ಗ್ಲುಕೋಸ್ ಫೈಬರ್ ಸಮ್ಮಿಳಿತವಾಗಿದ್ದು ತ್ವರಿತವಾದ ಶಕ್ತಿಯನ್ನು ನಮಗೆ ಒದಗಿಸುತ್ತದೆ. 90 - ನಿಮಿಷದ ನಮ್ಮ ದಿನದ ಕಾರ್ಯಾಚರಣೆಗೆ 2 ಬಾಳೆಹಣ್ಣು ನಮಗೆ ಶಕ್ತಿಯನ್ನು ಒದಗಿಸುತ್ತದೆ ಎಂದು ಸಂಶೋಧನೆಗಳು ತಿಳಿಸಿವೆ.

ಕೇವಲ ಬಾಳೆ ಹಣ್ಣಿನಲ್ಲಿ ಮಾತ್ರವಲ್ಲದೆ ಅದರ ತಿರುಳಿನಲ್ಲಿ ವಿಟಮಿನ್ ಬಿ-6, ಬಿ- 12, ಮ್ಯಗ್ನೀಶಿಯಂ ಮತ್ತು ಪೊಟಾಶಿಯಂಗಳು ಅಧಿಕವಾಗಿರುತ್ತದೆ. ಅದರಲ್ಲೂ ಬಾಳೆಹಣ್ಣಿನ ತಿರುಳು ಕಪ್ಪು ಬಣ್ಣಕ್ಕೆ ತಿರುಗಿದಾಗ ಅದರಲ್ಲಿ ಸಕ್ಕರೆಯ ಪ್ರಮಾಣ ಅಧಿಕವಾಗಿರುತ್ತದೆ. ಹಾಗಾದರೆ ಬನ್ನಿ ಈ ಬಾಳೆ ಹಣ್ಣಿನಲ್ಲಿರುವ ಸದುಪಯೋಗಗಳನ್ನು ತಿಳಿದುಕೊಳ್ಳೋಣ

ನಿಮ್ಮ ಆರೋಗ್ಯಕ್ಕೆ ಬೇಕಾಗಿರುವ ಸೂಪರ್ ಫುಡ್‌‌ಗಳು ಯಾವುದು ಗೊತ್ತೇ?

ಸುಕ್ರೀಸ್, ಫ್ರುಕ್ಟೋಸ್, ಮತ್ತು ಗ್ಲುಕೋಸ್ ಅಧಿಕವಾಗಿದೆ:

ಸುಕ್ರೀಸ್, ಫ್ರುಕ್ಟೋಸ್, ಮತ್ತು ಗ್ಲುಕೋಸ್ ಅಧಿಕವಾಗಿದೆ:

ಬಾಳೆಹಣ್ಣಿನಲ್ಲಿ ನೈಸರ್ಗಿಕ ಸಕ್ಕರೆ ಅಂಶಗಳಾದ ಸುಕ್ರೀಸ್, ಫ್ರುಕ್ಟೋಸ್, ಮತ್ತು ಗ್ಲುಕೋಸ್ (sucrose, fructose and glucose) ಇವೆ. ಎರಡು ಬಾಳೆಹಣ್ಣು 90 ನಿಮಿಷ ಕೆಲಸಮಾಡುವ ಶಕ್ತಿಯನ್ನು ನೀಡುತ್ತದೆ ಎಂದು ಸಂಶೋಧನೆಗಳು ತಿಳಿಸಿವೆ.

ಸೇಬು ಹಣ್ಣಿಗಿಂತ ಬಾಳೆ ಹಣ್ಣು ಉತ್ತಮ:

ಸೇಬು ಹಣ್ಣಿಗಿಂತ ಬಾಳೆ ಹಣ್ಣು ಉತ್ತಮ:

ಬಾಳೆಯ ಹಣ್ಣನ್ನು ಸೇಬು ಹಣ್ಣಿನೊಂದಿಗೆ ಹೋಲಿಸಿದರೆ, ಇದರಲ್ಲಿ ನಾಲ್ಕು ಪಟ್ಟು ಪ್ರೋಟೀನ್ ಇದೆ, ಎರಡು ಪಟ್ಟು ಕಾರ್ಬೋಹೈಡ್ರೇಟ್ಸ್ ಇವೆ, ಮೂರುಪಟ್ಟು ಫಾಸ್ಫರಸ್ ಇದೆ, ಐದು ಪಟ್ಟು ವಿಟಮಿನ್ ಎ ಹಾಗೂ ಕಬ್ಬಿಣಸತ್ವ ಇವೆ, ಎರಡುಪಟ್ಟು ಇತರ ವಿಟಮಿನ್ ಹಾಗೂ ಮಿನರಲ್ಸ್ ಇವೆ

ಸಿಗರೇಟ್‌ನಿಂದ ಮುಕ್ತಿ ಹೊಂದಲು:

ಸಿಗರೇಟ್‌ನಿಂದ ಮುಕ್ತಿ ಹೊಂದಲು:

ಸಿಗರೇಟ್ ಅಭ್ಯಾಸವಿದ್ದವರಿಗೆ ಬಾಳೆಹಣ್ಣಿನ ಸೇವನೆಯಿಂದ ಅದನ್ನು ಕಡಿಮೆಗೊಳಿಸಲು ಸಹಾಯವಾಗಿದೆಯಂತೆ, ಇದಕ್ಕೆ ಈ ಹಣ್ಣಿನಲ್ಲಿರುವ ವಿಟಮಿನ್ ಬಿ-6, ಬಿ-12, ಪೊಟ್ಯಾಶಿಯಮ್, ಮೆಗ್ನೀಶಿಯಮ್ ಅಂಶಗಳೇ ಕಾರಣವೆನ್ನಲಾಗಿದೆ.

ಹ್ಯಾಂಗ್ ಓವರ್:

ಹ್ಯಾಂಗ್ ಓವರ್:

ಹ್ಯಾಂಗ್ ಓವರ್ ನಂತಹ ಉದಾಸೀನತೆಯ ಪ್ರಸಂಗಗಳಲ್ಲಿ ಬಾಳೆಹಣ್ಣಿನ ಮಿಲ್ಕ್‍ಶೇಕ್ ಹೆಚ್ಚು ಉಪಯುಕ್ತ ಎಂದು ಪ್ರಯೋಗಗಳಿಂದ ತಿಳಿದಿದೆ.

ಖಿನ್ನೆತೆಯನ್ನು ಹೋಗಲಾಡಿಸುತ್ತದೆ:

ಖಿನ್ನೆತೆಯನ್ನು ಹೋಗಲಾಡಿಸುತ್ತದೆ:

ಎಮ್‌ಐಎನ್‌ಡಿ ನಡೆಸಿದ ಸರ್ವೆಯ ಪ್ರಕಾರ ಹೆಚ್ಚಿನ ಜನರು ಖಿನ್ನೆತೆಗೆ ಒಳಗಾಗಿರುವುದು ಕಂಡುಬಂದಿದೆ. ಬಾಳೆಹಣ್ಣನ್ನು ತಿನ್ನುವುದರಿಂದ ಅವರ ಈ ಸಮಸ್ಯೆ ಪರಿಹಾರವಾಗಿ ಅವರು ಸಂತೋಷದಿಂದಿರುವ ವಿಷಯ ಬೆಳಕಿಗೆ ಬಂದಿದೆ.

ಹಿಮೋಗ್ಲೋಬೀನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ:

ಹಿಮೋಗ್ಲೋಬೀನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ:

ರಕ್ತದಲ್ಲಿನ ಹಿಮೋಗ್ಲೋಬೀನ್ ಉತ್ಪಾದನೆಯನ್ನು ಬಾಳೆಹಣ್ಣು ಉತ್ತೇಜಿಸುವುದರಿಂದ ನಿಮಗೆ ಅನಿಮೀಯಾ ಉಂಟಾಗುವ ಸಂಭವನೀಯತೆ ಕಡಿಮೆ ಇರುತ್ತದೆ. ಇದೊಂದು ಶೀತಲೀ ಹಣ್ಣಾಗಿದ್ದು ದೈಹಿಕ ಮಾನಸಿಕ ಒತ್ತಡವನ್ನು ಇದು ಸುಧಾರಿಸುತ್ತದೆ.

 ಲೈಂಗಿಕತೆ ಹೆಚ್ಚಿಸುತ್ತದೆ:

ಲೈಂಗಿಕತೆ ಹೆಚ್ಚಿಸುತ್ತದೆ:

ಶಿಶ್ನದ ಆಕಾರ ಹೊಂದಿರುವ ಬಾಳೆಹಣ್ಣು ಲೈಂಗಿಕ ಆಸಕ್ತಿ ಹೆಚ್ಚಲು ಸಹಕಾರಿ ಎನ್ನಲಾಗುತ್ತದೆ. ಇದು ಕೇವಲ ಆಕಾರದಿಂದ ಮಾತ್ರವಲ್ಲ. ಬಾಳೆಹಣ್ಣಿನಲ್ಲಿರುವ ಪೌಷ್ಟಿಕಾಂಶ ಲೈಂಗಿಕ ಹಾರ್ಮೋನನ್ನು ಎಚ್ಚರಿಸುತ್ತದೆ. ಇದು ಸೆರೋಟೋನಿನ್ ಅನ್ನು ಬಿಡುಗಡೆ ಮಾಡಿ ಸಂಭೋಗದ ನಂತರ ಭ್ರಮಾದೀನ ಭಾವನೆ ನೀಡುತ್ತದೆ.

ಹೊಳೆಯುವ ಚರ್ಮ ಪಡೆಯಿರಿ:

ಹೊಳೆಯುವ ಚರ್ಮ ಪಡೆಯಿರಿ:

ಸರಿಯಾದ ನಿದ್ದೆ ಒದಗಿಸುವುದರ ಜೊತೆಗೆ ಬಾಳೆಹಣ್ಣು ಸೌಂದರ್ಯವರ್ಧಕವಾಗಿ ಕೂಡ ಸಹಕರಿಸುತ್ತದೆ. ಬಾಳೆಹಣ್ಣಿನ ಮಾಸ್ಕ್ ಬಳಸುವುದರಿಂದ ತ್ವಚೆ ಹೊಳೆಯುತ್ತದೆ ಮತ್ತು ಮೃದುವಾಗುತ್ತದೆ.ಒಣಗಿದ ಚರ್ಮ ಹೊಂದಿದವರಿಗೆ ಮೋಶ್ಚರೈಸರ್ ಆಗಿ ಕೆಲಸ ಮಾಡುತ್ತದೆ.

 ಸರಿಯಾದ ನಿದ್ದೆ ಪಡೆಯಿರಿ:

ಸರಿಯಾದ ನಿದ್ದೆ ಪಡೆಯಿರಿ:

ಮಲಗುವ ಮೊದಲು ಬಾಳೆಹಣ್ಣು ತಿಂದರೆ ಸರಿಯಾದ ನಿದ್ದೆ ಪಡೆಯಲು ಸಹಾಯಕ.ಟ್ರಿಪ್ಟೊಫಾನ್ ಅಂಶ ಸೆರೋಟೋನಿನ್ ಆಗಿ ಪರಿವರ್ತಿತಗೊಂಡು ನಿದ್ರೆ ಬರಲು ಸಹಕರಿಸುತ್ತದೆ.ಇದು ನಿಮ್ಮ ಮೂಡ್ ಬದಲಿಸಿ ಏಕಾಗ್ರತೆಯನ್ನು ಹೆಚ್ಚಿಸಲು ಸಹಾಯಕ ಎನ್ನಲಾಗುತ್ತದೆ.

ನೈಸರ್ಗಿಕವಾಗಿ ಪ್ರೋಬಯಾಟಿಕ್ ಪರಿಣಾಮ ಪಡೆಯಿರಿ :

ನೈಸರ್ಗಿಕವಾಗಿ ಪ್ರೋಬಯಾಟಿಕ್ ಪರಿಣಾಮ ಪಡೆಯಿರಿ :

ಬಾಳೆಹಣ್ಣಿನಿಂದ ದೊರೆಯುತ್ತದೆ.ದೇಹದಲ್ಲಿ ಬ್ಯಾಕ್ಟೀರಿಯ ಕಡಿಮೆ ಮಾಡಿ ಗ್ಯಾಸ್ಟ್ರಿಕ್ ತೊಂದರೆಯನ್ನು ತಪ್ಪಿಸುತ್ತದೆ. ಇದು ನಿಮ್ಮ ಮೂಳೆಗಳ ಆರೋಗ್ಯಕ್ಕೂ ಕೂಡ ಸಹಾಯಕ.ಇ ದರಲ್ಲಿರುವ FOS ಅಂಶ PH ಮಟ್ಟವನ್ನು ಕಡಿಮೆ ಮಾಡಿ ದೇಹಕ್ಕೆ ಬೇಕಾಗಿರುವ ಕ್ಯಾಲ್ಸಿಯಂ ಒದಗಿಸಿ ಮೂಳೆಗಳನ್ನು ಬಲಯುತವಾಗಿ ಮಾಡುತ್ತದೆ. ದೇಹದಿಂದ ದ್ರವಗಳನ್ನು ತೆಗೆದುಹಾಕಲು ಬಾಳೆದಿಂಡು ಸಹಾಯಕ. ಜೊತೆಗೆ ದೇಹದ ಕಲ್ಮಶವನ್ನು ಹೋಗಲಾಡಿಸಿ, ಕಿಡ್ನಿ ಕಲ್ಲನ್ನು ಹೋಗಲಾಡಿಸಲು ಕೂಡ ಇದು ಸಹಕರಿಸುತ್ತದೆ. ಬಾಳೆದಿಂಡು ಕಲ್ಲನ್ನು ಕರಗಿಸುತ್ತದೆ ಎಂದು ಕೂಡ ಹೇಳಲಾಗುತ್ತದೆ.

ಮಲಬದ್ದತೆ ತಡೆಯುತ್ತದೆ :

ಮಲಬದ್ದತೆ ತಡೆಯುತ್ತದೆ :

ಬಾಳೆಹಣ್ಣು ಮತ್ತು ಬಾಳೆದಿಂಡು ಎರಡರಲ್ಲೂ ನಾರಿನಂಶವಿದ್ದು ಇದು ಚಯಾಪಚಯ ಕ್ರಿಯೆ ಹೆಚ್ಚಿಸಿ ಮಲಬದ್ದತೆಯನ್ನು ಹೋಗಲಾಡಿಸುತ್ತದೆ. ಬಾಳೆದಿಂಡಿನಿಂದ ಮಾಡಿದ ಜ್ಯೂಸ್ ಅನ್ನು ಕೂಡ ನೀವು ಆಗಾಗ ಕುಡಿಯಬಹುದು.

ಅಸಿಡಿಟಿ ಕಡಿಮೆ ಮಾಡುತ್ತದೆ :

ಅಸಿಡಿಟಿ ಕಡಿಮೆ ಮಾಡುತ್ತದೆ :

ಬಾಳೆಹಣ್ಣು ಅಸಿಡಿಟಿಗೆ ಪರಿಣಾಮಕಾರಿ ಮದ್ದು.ಇದು ಹೊಟ್ಟೆಯ ಒಳಪದರವನ್ನು ಹತೋಟಿಯಲ್ಲಿಟ್ಟು ಅಸಿಡಿಟಿ ಮತ್ತು ಅಲ್ಸರ್ ಆಗದಿರುವಂತೆ ತಡೆಯುತ್ತದೆ.

ರಕ್ತದೊತ್ತಡ ಸಮತೋಲನದಲ್ಲಿಡುತ್ತದೆ:

ರಕ್ತದೊತ್ತಡ ಸಮತೋಲನದಲ್ಲಿಡುತ್ತದೆ:

ಬಾಳೆಹಣ್ಣಿನಲ್ಲಿ ಸೋಡಿಯಂ ಅಂಶ ಕಡಿಮೆ ಇದ್ದು ಪೊಟ್ಯಾಷಿಯಂ ಅಂಶ ಅಧಿಕವಾಗಿದೆ,ಇದು ರಕ್ತದೊತ್ತಡ ಸಮತೋಲನದಲ್ಲಿ ಇಡಲು ಸಹಕಾರಿ.ಇದು ದೇಹಕ್ಕೆ ಬೇಕಾದ ನೀರಿನಂಶ ಒದಗಿಸಿ ಹೃದಯಾಘಾತ, ಮೂರ್ಚೆ ಹೊಂದುವುದನ್ನು ತಪ್ಪಿಸುತ್ತದೆ.

ಸ್ನಾಯುಸೆಳೆತದ ವಿರುದ್ಧ ಹೋರಾಡುತ್ತದೆ :

ಸ್ನಾಯುಸೆಳೆತದ ವಿರುದ್ಧ ಹೋರಾಡುತ್ತದೆ :

ರಾತ್ರಿ ಮಲಗಿದಾಗ ಇದ್ದಕ್ಕಿದ್ದಂತೆ ಕಾಲುನೋವು,ಸೆಳೆತ ಎಚ್ಚರಿಸುತ್ತಿದೆಯೇ? ಅಥವಾ ಅಧಿಕ ಕೆಲಸದಿಂದ ಸ್ನಾಯು ಸೆಳೆತ ಅನುಭವಿಸುತ್ತಿದ್ದೀರಾ? ಬಾಳೆಹಣ್ಣು ನಿಮ್ಮ ಸಮಸ್ಯೆಗೆ ಪರಿಹಾರ ಒದಗಿಸಬಹುದು. ಇದು ಸ್ನಾಯು ಸೆಳೆತವನ್ನು ತಡೆಯುತ್ತದೆ.ಬಾಳೆಹಣ್ಣಿನಲ್ಲಿರುವ ಮ್ಯಾಗ್ನಿಶಿಯಂ ಮತ್ತು ಪೊಟ್ಯಾಷಿಯಂ ಅಂಶ ದೇಹಕ್ಕೆ ಅಗತ್ಯ ಖನಿಜಾಂಶಗಳನ್ನು ಒದಗಿಸುತ್ತದೆ.ಇದು ಸ್ನಾಯುಗಳಿಗೆ ವಿರಾಮ ಒದಗಿಸಿ ಸ್ನಾಯು ಸೆಳೆತವನ್ನು ಕಡಿಮೆ ಮಾಡುತ್ತದೆ.

ಶಕ್ತಿ ಹೆಚ್ಚಿಸಿಕೊಳ್ಳಲು ಬಾಳೆಹಣ್ಣು ತಿನ್ನಿ:

ಶಕ್ತಿ ಹೆಚ್ಚಿಸಿಕೊಳ್ಳಲು ಬಾಳೆಹಣ್ಣು ತಿನ್ನಿ:

ಸರಾಸರಿ 115 ರಷ್ಟು ಕ್ಯಾಲೋರಿ ಹೊಂದಿರುವ ಬಾಳೆಹಣ್ಣು ಶಕ್ತಿ ಒದಗಿಸಲು ಅತಿ ಹೆಚ್ಚು ಸಹಾಯಕ.ವರ್ಕ್ ಔಟ್ ಮಾಡಿದ ನಂತರ ಬಾಳೆಹಣ್ಣು ತಿನ್ನುವುದರಿಂದ ರಕ್ತದಲ್ಲಿನ ಗ್ಲುಕೋಸ್ ಮಟ್ಟವನ್ನು ಸಮತೋಲನಗೊಳಿಸುತ್ತದೆ.ವರ್ಕ್ ಔಟ್ ನಂತರ ಬಲವನ್ನು ಹೆಚ್ಚಿಸಿಕೊಳ್ಳಲು ಬಾಳೆಹಣ್ಣು ಸಹಕರಿಸುತ್ತದೆ.

ದೇಹದ ರಕ್ತದೊತ್ತಡ ಕಡಿಮೆ ಮಾಡುತ್ತದೆ:

ದೇಹದ ರಕ್ತದೊತ್ತಡ ಕಡಿಮೆ ಮಾಡುತ್ತದೆ:

ಪೊಟಾಶಿಯಂ ಮತ್ತು ನಾರಿನಾಂಶವು ಅಧಿಕವಾಗಿರುವ ಬಾಳೆಹಣ್ಣಿನಿಂದ ನಿಮ್ಮ ದೇಹದ ರಕ್ತದೊತ್ತಡ ಕಡಿಮೆ ಮಾಡಬಹುದು, ಮೂಳೆಗಳ ಆರೋಗ್ಯ ಕಾಪಾಡಬಹುದು, ಜೀರ್ಣಾಂಗ ಕ್ರಿಯೆಯನ್ನು ಆರೋಗ್ಯವಾಗಿಟ್ಟುಕೊಳ್ಳಬಹುದು ಮತ್ತು ಕ್ಯಾನ್ಸರ್ ಬಾರದಂತೆ ತಡೆಯಬಹುದು ಎಂದು ತಜ್ಞೆ ಪೂಜಾ ಹೇಳುತ್ತಾರೆ.

ಬಾಳೆ ಹಣ್ಣಿನ ಸಿಪ್ಪೆ:

ಬಾಳೆ ಹಣ್ಣಿನ ಸಿಪ್ಪೆ:

ಕೇವಲ ಬಾಳೆ ಹಣ್ಣಿನಿಂದ ಮಾತ್ರವಲ್ಲದೆ, ಬಾಳೆ ಹಣ್ಣಿನ ಸಿಪ್ಪೆಯಿಂದಲೂ ಅನೇಕ ಲಾಭಗಳನ್ನು ನಾವು ಪಡೆಯಬಹುದು, ಬಾಳೆ ಹಣ್ಣಿನ ಸಿಪ್ಪೆಯ ಅದ್ಭುತ ಉಪಯೋಗಗಳಿಗಾಗಿ ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಕಣ್ಣಿನ ರಕ್ಷಣೆಗೆ:

ಕಣ್ಣಿನ ರಕ್ಷಣೆಗೆ:

ಬಾಳೆಹಣ್ಣಿನ ಸಿಪ್ಪೆಯನ್ನು ಕಣ್ಣಿನ ಸುತ್ತ ಲೇಪಿಸುವುದರಿಂದ ಕಣ್ಣಿಹೆ ಹಾನಿ ಉಂಟು ಮಾಡುವ ಯು.ವಿ.ಕಿರಣಗಳಿಂದ ಕೂಡ ರಕ್ಷಣೆ ಪಡೆಯಬಹುದು. ಹೀಗೆ ಮಾಡುವ ಮೊದಲು ಬಾಳೆಹಣ್ಣಿನ ಸಿಪ್ಪೆಯನ್ನು ಸ್ವಲ್ಪ ಹೊತ್ತು ಬಿಸಿಲಿನಲ್ಲಿ ಬಿಡಿ, ನಂತರ ಹಚ್ಚಿ. ಹೀಗೆ ಮಾಡುವುದರಿಂದ ಕಣ್ಣಿನ ಪೊರೆ ಬರದಂತೆ ಸಹ ತಡೆಯಬಹುದು.

ಪಾಲಿಶ್ ಮಾಡುವುದಕ್ಕೆ

ಪಾಲಿಶ್ ಮಾಡುವುದಕ್ಕೆ

ಬಾಳೆ ಹಣ್ಣಿನ ಸಿಪ್ಪೆಯನ್ನು ಶೂ , ಚರ್ಮದ ಉತ್ಪನ್ನ ಮತ್ತು ಬೆಳ್ಳಿಯ ವಸ್ತುಗಳಿಗೆ ತಕ್ಷಣ ಹೊಳಪು ನೀಡಲು ಬಳಸಬಹುದು. ಇದಕ್ಕಾಗಿ ಸಿಪ್ಪೆಯನ್ನು ಅವುಗಳ ಮೇಲೆ ಉಜ್ಜಿ.

ಕ್ರಿಮಿಕೀಟಗಳ ಕಡಿತಕ್ಕೆ:

ಕ್ರಿಮಿಕೀಟಗಳ ಕಡಿತಕ್ಕೆ:

ಕ್ರಿಮಿಕೀಟಗಳು ಕಚ್ಚಿದ ಭಾಗಕ್ಕೆ ಬಾಳೆಹಣ್ಣಿನ ಸಿಪ್ಪೆಯಿಂದ ಮಸಾಜ್ ಮಾಡಿ. ಇದರಿಂದ ತುರಿಕೆ ಮತ್ತು ನೋವುಗಳು ತಕ್ಷಣ ನಿವಾರಣೆಯಾಗುತ್ತದೆ.

ಸೋರಿಯಾಸಿಸ್;

ಸೋರಿಯಾಸಿಸ್;

ಸೋರಿಯಾಸಿಸ್ ಉಂಟಾದ ಜಾಗಕ್ಕೆ ಬಾಳೆಹಣ್ಣಿನ ಸಿಪ್ಪೆಯನ್ನು ಹಚ್ಚಿ. ಬಾಳೆಹಣ್ಣಿನ ಸಿಪ್ಪೆಯಲ್ಲಿ ಮೊಯಿಶ್ಚರೈಸರ್ ಗುಣಗಳು ತುರಿಕೆಯನ್ನು ನಿವಾರಿಸುತ್ತವೆ. ಇದು ಸೋರಿಯಾಸಿಸ್‍ನಿಂದ ತಕ್ಷಣ ಉಪಶಮನವನ್ನು ಒದಗಿಸುತ್ತದೆ. ಅದನ್ನು ನೀವು ಕಣ್ಣಾರೆ ನೋಡಬಹುದು.

ನೋವು ನಿವಾರಕ;

ನೋವು ನಿವಾರಕ;

ಬಾಳೆಹಣ್ಣಿನ ಸಿಪ್ಪೆಯನ್ನು ನೇರವಾಗಿ ನೋವಾಗುತ್ತಿರುವ ಜಾಗಕ್ಕೆ ಲೇಪಿಸಿ. ಇದನ್ನು ಹಾಗೆಯೇ 30 ನಿಮಿಷ ಬಿಡಿ. ನೋವು ನಿವಾರಣೆಯಾಗುತ್ತದೆ. ಇದರ ಉತ್ತಮ ಫಲಿತಾಂಶಕ್ಕಾಗಿ ಸಸ್ಯಜನ್ಯ ಎಣ್ಣೆಯನ್ನು ಬಳಸಿ.

ಸುಕ್ಕು ನಿವಾರಕ:

ಸುಕ್ಕು ನಿವಾರಕ:

ಬಾಳೆಹಣ್ಣಿನ ಸಿಪ್ಪೆಯು ಚರ್ಮಕ್ಕೆ ತೇವಾಂಶವನ್ನು ಒದಗಿಸುತ್ತವೆ. ಬಾಳೆಹಣ್ಣಿನ ಸಿಪ್ಪೆಗೆ ಸ್ವಲ್ಪ ಮೊಟ್ಟೆಯ ಲೋಳೆಯನ್ನು ಬೆರೆಸಿ, ಇದನ್ನು ಮುಖಕ್ಕೆ ಹಚ್ಚಿ ಐದು ನಿಮಿಷ ಬಿಡಿ. ನಂತರ ಮುಖ ತೊಳೆಯಿರಿ. ಇದರಿಂದ ಸುಕ್ಕುನಿವಾರಣೆಯಾಗುತ್ತದೆ.

ಮೊಡವೆಗಳು:

ಮೊಡವೆಗಳು:

ಮೊಡವೆಗಳು ಉಂಟಾದಾಗ ಅದರ ಮೇಲೆ ಬಾಳೆಹಣ್ಣಿನ ಸಿಪ್ಪೆಯನ್ನು ಹಚ್ಚಿ. ಅದನ್ನು ಹಾಗೆಯೇ 30 ನಿಮಿಷ ಬಿಡಿ. ಇದರಿಂದ ನೋವು ಕಡಿಮೆಯಾಗುತ್ತದೆ. ಬಾಳೆಹಣ್ಣಿನ ಸಿಪ್ಪೆಯ ಜೊತೆಗೆ ಸಸ್ಯಜನ್ಯ ಎಣ್ಣೆಯನ್ನು ಬೆರೆಸಿ ಹಚ್ಚಿದರೆ ನೋವು ಮತ್ತಷ್ಟು ಕಡಿಮೆಯಾಗುತ್ತದೆ.

ಸಿಪ್ಪೆಯನ್ನು ತಿನ್ನಿ.

ಸಿಪ್ಪೆಯನ್ನು ತಿನ್ನಿ.

ಬಾಳೆಹಣ್ಣಿನ ಸಿಪ್ಪೆಯನ್ನು ಸಹ ತಿನ್ನಬಹುದು. ಛೇ! ಎನ್ನಬೇಡಿ. ಭಾರತೀಯ ಆಹಾರ ಪದ್ಧತಿಯಲ್ಲಿ ಇದನ್ನು ಹಾಕಿ ಹಲವಾರು ರೀತಿಯ ಆಹಾರಗಳನ್ನು ಮಾಡುತ್ತಾರೆ. ಇದರ ಜೊತೆಗೆ ಕೋಳಿ ಮಾಂಸದ ತಾಜಾತನವನ್ನು ಉಳಿಸಿಕೊಳ್ಳಲು ಬಾಳೆಹಣ್ಣಿನ ಸಿಪ್ಪೆಯನ್ನು ಅದರ ಮೇಲೆ ಇಡುತ್ತಾರೆ.

ವಾರ್ಟ್ಸ್:

ವಾರ್ಟ್ಸ್:

ನಿಮ್ಮ ತ್ವಚೆಯ ಮೇಲೆ ಉಂಟಾಗುವ ನರವಲಿಗಳನ್ನು ( ಚರ್ಮದ ಮೇಲಿನ ಗ್ರಂಥಿಗಳನ್ನು) ನಿವಾರಿಸಲು ಬಾಳೆಹಣ್ಣಿನ ಸಿಪ್ಪೆ ರಾಮಬಾಣ. ಸಿಪ್ಪೆಯನ್ನು ನರವಲಿಗಳು ಇರುವ ಭಾಗದಲ್ಲಿ ರಾತ್ರಿಯೇ ಉಜ್ಜಿ ಮಲಗಿ, ಇಲ್ಲವಾದಲ್ಲಿ ನರವಲಿಗಳು ಇರುವ ಜಾಗದಲ್ಲಿ ಸಿಪ್ಪೆಯನ್ನು ಬಟ್ಟೆಯ ಸಹಾಯದಿಂದ ಕಟ್ಟಿ ರಾತ್ರಿಯೆಲ್ಲಾ ಹಾಗೆಯೇ ಬಿಡಿ. ಇದು ಮಾಡಲು ಸುಲಭ, ಇದರ ಫಲಿತಾಂಶ ಅಷ್ಟೇ ಪರಿಣಾಮಕಾರಿ.


X
Desktop Bottom Promotion