For Quick Alerts
ALLOW NOTIFICATIONS  
For Daily Alerts

ಅಮೃತ ಸಮಾನ ಆಹಾರಗಳು ಸಹ ವಿಷವಾಗುವ ಸಮಯ!

By deepak m
|

ಆಹಾರಗಳು ಎಲ್ಲವು ಆರೋಗ್ಯಕ್ಕೆ ಒಳ್ಳೆಯದಲ್ಲ. ಹಾಗೆಂದು ಎಲ್ಲವೂ ಕೆಟ್ಟದಲ್ಲ. "ಆಲಸ್ಯಂ ಅಮೃತಂ ವಿಷಂ" ಎಂಬ ಗಾದೆ ಮಾತಿನಂತೆ ಆಹಾರಗಳನ್ನು ಸರಿಯಾದ ಸಮಯಕ್ಕೆ , ಸರಿಯಾದ ರೀತಿಯಲ್ಲಿ ಮಾಡಿ ತಿನ್ನಬೇಕು. ಕೆಲವೊಂದು ಆಹಾರಗಳು ಸೇವಿಸುವಾಗ ಮಾಡುವ ತಪ್ಪುಗಳ ಕಾರಣದಿಂದಾಗಿ ನಮ್ಮ ಆರೋಗ್ಯಕ್ಕೆ ಪ್ರತಿಕೂಲವಾಗಿ ಪರಿಣಮಿಸುತ್ತವೆ. ಅದಕ್ಕಾಗಿ ಅವುಗಳನ್ನು ಸೇವಿಸುವ ಮತ್ತು ಕಾಪಾಡುವ ಜಾಣ್ಮೆಯನ್ನು ಸಹ ನಾವು ಅರಿತಿರಬೇಕು.

ಇಲ್ಲಿ ನಾವು ಕೆಲವೊಂದು ಆರೋಗ್ಯಕಾರಿ ಆಹಾರಗಳು ಮತ್ತು ಅವುಗಳು ಯಾವಾಗ ಕೆಟ್ಟು ಹೋಗುತ್ತವೆ ಎಂಬುದರ ಕುರಿತಾಗಿ ನಿಮಗೆ ತಿಳಿಸಿದ್ದೇವೆ, ಇದನ್ನು ಓದಿಕೊಂಡು ನಿಮ್ಮ ಅಡುಗೆಮನೆಯನ್ನು ಮತ್ತು ಅಡುಗೆಯನ್ನು ಮತ್ತಷ್ಟು ಆರೋಗ್ಯಕಾರಿಯಾಗಿ ಪರಿವರ್ತಿಸಿಕೊಳ್ಳಿ. ಇದರಿಂದ ನಿಮ್ಮ ಹಣ, ಆರೋಗ್ಯ ಮತ್ತು ಆನಂದವು ವೃದ್ಧಿಯಾಗುತ್ತದೆ. ಮುಂದೆ ಓದಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ತಾಮ್ರದ ಪಾತ್ರೆಯಲ್ಲಿ ಶೇಖರಿಸಿದ ನೀರಿನ ಆರೋಗ್ಯ ಲಾಭಗಳು

ಮೊಟ್ಟೆಗಳು:

ಮೊಟ್ಟೆಗಳು:

ಕಚ್ಛಾ ಮೊಟ್ಟೆಗಳು ಮೂರರಿಂದ ಐದು ವಾರಗಳ ಕಾಲ ಬಾಳಿಕೆ ಬರುತ್ತವೆ. ಆದರೆ ಬೇಯಿಸಿದ ಮೊಟ್ಟೆಗಳು ಒಂದು ವಾರದವರೆಗೆ ಮಾತ್ರ ಬಾಳಿಕೆ ಬರುತ್ತವೆ. ಆದರೆ ಅವುಗಳನ್ನು ಬಳಸುವ ಮೊದಲು ಒಮ್ಮೆ ಪರೀಕ್ಷಿಸಿ ಬಳಸುವುದು ಉತ್ತಮ. ಹೀಗೆ ಮಾಡಿ ಮೊಟ್ಟೆಯನ್ನು ಬೇಯಿಸುವ ಮೊದಲು ಅದನ್ನು ನೀರಿನಲ್ಲಿ ಹಾಕಿ. ಅದು ಮುಳುಗಿದರೆ ಉತ್ತಮ ಮೊಟ್ಟೆಯೆಂದು ಭಾವಿಸಿ. ಒಂದು ವೇಳೆ ಕೊಳೆತ ವಾಸನೆ ಬಂದಲ್ಲಿ, ಅಥವಾ ಬಿರುಕು ಬಿಟ್ಟಿದ್ದಲ್ಲಿ ಅವುಗಳನ್ನು ಬಳಸದಿರುವುದೇ ಉತ್ತಮ.

ಕೋಳಿ ಮಾಂಸ:

ಕೋಳಿ ಮಾಂಸ:

ಕೋಳೀ ಮಾಂಸವು ಫ್ರಿಡ್ಜ್‌ನಲ್ಲಿಟ್ಟರೆ ಎರಡು ದಿನ ಬಾಳಿಕೆ ಬರುತ್ತದೆ. ಇದನ್ನು ಫ್ರೋಜನ್‍ ಸ್ಥಿತಿಯಲ್ಲಿಟ್ಟರೆ ಒಂದು ವರ್ಷದ ತನಕ ಬಾಳಿಕೆ ಬರುತ್ತದೆ. ಆದರೆ ನೆನಪಿಡಿ ಕೋಳಿ ಮಾಂಸದ ತುಣುಕುಗಳು ಕೇವಲ ಒಂಬತ್ತು ತಿಂಗಳುಗಳ ಕಾಲ ಚೆನ್ನಾಗಿರುತ್ತವೆ. ಇದರ ಜೊತೆಗೆ ನೆನಪಿನಲ್ಲಿಡಬೇಕಾದ ಮತ್ತೊಂದು ಅಂಶ ಕೋಳಿ ಮಾಂಸವನ್ನು ತೊಳೆಯಬಾರದು. ಏಕೆಂದರೆ ಅದರಲ್ಲಿರುವ ಬ್ಯಾಕ್ಟೀರಿಯಾಗಳು ಇನ್ನಿತರ ಆಹಾರ ಪದಾರ್ಥಗಳಿಗೆ ವ್ಯಾಪಿಸಿ ಅಡುಗೆಯನ್ನು ಹಾಳು ಮಾಡುತ್ತವೆ. ಅದಕ್ಕಾಗಿ ಅವುಗಳನ್ನು ಕನಿಷ್ಟ 165 ಡಿಗ್ರಿ ಬೆಂಕಿ ಅಥವಾ ಉಷ್ಣದಲ್ಲಿ ಸುಡಬೇಕು. ಆಗ ಅವುಗಳಲ್ಲಿರುವ ಕೀಟಾಣುಗಳು ಕಡಿಮೆಯಾಗುತ್ತವೆ.

ಸಮುದ್ರ ಜನ್ಯ ಆಹಾರಗಳು:

ಸಮುದ್ರ ಜನ್ಯ ಆಹಾರಗಳು:

ಯಾವಾಗಲು ತಾಜಾ ಮೀನುಗಳನ್ನೆ ಖರೀದಿಸಿ. ಅದು ಹಿಡಿದು ಎರಡು ದಿನಗಳ ಅವಧಿಯದ್ದಾಗಿರಬೇಕು. ಮ್ಯಾಕೆರೆಲ್‍ನಂತಹ ಕೊಬ್ಬಿರುವ ಮೀನುಗಳನ್ನು ಫ್ರೀಜರಿನಲ್ಲಿ ಮೂರು ತಿಂಗಳುಗಳ ಕಾಲ ಇಡಬಹುದು. ಕಪ್ಪೆ-ಚಿಪ್ಪುಗಳು, ಏಡಿಗಳನ್ನು ಎರಡು ದಿನಗಳ ಕಾಲ ಫ್ರಿಡ್ಜ್‌ನಲ್ಲಿಡಬಹುದು. ಇವುಗಳನ್ನು ಫ್ರೋಜನ್ ಸ್ಥಿತಿಯಲ್ಲಿ ಮೂರು ತಿಂಗಳುಗಳ ಕಾಲ ಸಂಗ್ರಹಿಸಿಡಬಹುದು. ಓಯಿಸ್ಟರ್ ಮತ್ತು ಸಿಗಡಿಗಳನ್ನು ಫ್ರಿಡ್ಜ್‌ನಲ್ಲಿಟ್ಟರೆ ಐದು ದಿನಗಳ ಅವಧಿಯಲ್ಲಿ ತಿನ್ನಬಹುದು ಹಾಗು ಫ್ರೀಜರಿನಲ್ಲಿಟ್ಟರೆ ಮೂರು ತಿಂಗಳ ಅವಧಿಯಲ್ಲಿ ತಿನ್ನಬಹುದು.

ಚೀಸ್:

ಚೀಸ್:

ಮೊಝ್ಝಾರೆಲ್ಲಾದಂತಹ ಮೃದುವಾದ ತೇವಾಂಶಭರಿತ ಚೀಸ್‍ಗಳು ಫ್ರಿಡ್ಜ್‌ನಲ್ಲಿ ತೆರೆಯದೆ ಇಟ್ಟ ಸ್ಥಿತಿಯಲ್ಲಿ ಎರಡು ವಾರಗಳ ಕಾಲ ಬಾಳಿಕೆ ಬರುತ್ತವೆ. ಹಾಗೆಯೆ ತೆರೆಯದೆ ಇಟ್ಟ ಪರ್ಮೆಸನ್‍ನಂತಹ ಚೀಸ್‍ಗಳು ಒಂದು ವರ್ಷದವರೆಗು ಬಾಳಿಕೆ ಬರುತ್ತವೆ. ಒಂದು ವೇಳೆ ಮೃದುವಾದ ಚೀಸ್ ಗಡ್ಡೆಯಾಗಿಬಿಟ್ಟರೆ ಹೊರಗೆ ಎಸೆಯಿರಿ. ಒಂದು ವೇಳೆ ಗಟ್ಟಿಯಾಗಿರುವ ಚೀಸ್ ಉತ್ತಮ ವಾಸನೆಯನ್ನು ಹೊಂದಿದ್ದರೆ ಪರವಾಗಿಲ್ಲ ಸೇವಿಸಬಹುದು. ಆದರೆ ಸೇವಿಸುವ ಮೊದಲು ಸುತ್ತಲು ಅರ್ಧ ಇಂಚಿನಷ್ಟು ಚೀಸನ್ನು ಕತ್ತರಿಸಿ ತೆಗೆಯಿರಿ.

ಹಾಲು, ಕ್ರೀಮ್ ಮತ್ತು ಇನ್ನಿತರ ಹೈನು ಉತ್ಪನ್ನಗಳು:

ಹಾಲು, ಕ್ರೀಮ್ ಮತ್ತು ಇನ್ನಿತರ ಹೈನು ಉತ್ಪನ್ನಗಳು:

ಹಾಲನ್ನು ಅದರ ಮೇಲೆ ನಮೂದಿಸಿದ ನಿಗದಿತ ದಿನ ಅಥವಾ ಏಳು ದಿನಗಳ ಒಳಗಾಗಿ ಸೇವಿಸಿ. ಅದನ್ನು ಕೊಳ್ಳುವಾಗ ಮತ್ತು ಸೇವಿಸುವಾಗ ಅದರ ಮೇಲಿನ ನಿಗದಿತ ದಿನಾಂಕವನ್ನು ಒಮ್ಮೆ ಪರಿಶೀಲಿಸಿ. ಹಾಲನ್ನು ಹೊರಗೆ ಕೊಠಡಿಯ ತಾಪಮಾನದಲ್ಲಿ ಬಿಡಬೇಡಿ ಮತ್ತು ಫ್ರಿಡ್ಜ್‌ನ ಬಾಗಿಲಲ್ಲಿ ಸಂಗ್ರಹಿಸಬೇಡಿ. ಕೆನೆ ಭರಿತ ಹಾಲು ಮೂರರಿಂದ ನಾಲ್ಕು ದಿನದಲ್ಲಿ ಹಾಳಾಗುತ್ತದೆಯಾದರು, ಫ್ರೀಜರ್‌ನಲ್ಲಿ ನಾಲ್ಕು ತಿಂಗಳ ಕಾಲ ಬಾಳಿಕೆ ಬರುತ್ತದೆ. ಬೆಣ್ಣೆಯು ಫ್ರಿಡ್ಜ್‌ನಲ್ಲಿ ಎರಡು ತಿಂಗಳ ಕಾಲ ಮತ್ತು ಹೆಪ್ಪುಗಟ್ಟಿದ ಸ್ಥಿತಿಯಲ್ಲಿ ಒಂಬತ್ತು ತಿಂಗಳುಗಳ ಕಾಲ ಬಾಳಿಕೆ ಬರುತ್ತದೆ.

ಫ್ರೋಝನ್ ಫುಡ್‍ಗಳು:

ಫ್ರೋಝನ್ ಫುಡ್‍ಗಳು:

ಈ ಫ್ರೋಝನ್ ಫುಡ್‍ಗಳ ಮೇಲೆ ಹೆಚ್ಚು ಅವಲಂಬಿತರಾಗಬೇಡಿ. ಅದರಲ್ಲು ನಿಮ್ಮ ರಾತ್ರಿಗಳ ಊಟಕ್ಕೆ ಇದನ್ನು ಬಳಸದಿದ್ದರೆ ನಿಮಗೆ ಒಳ್ಳೆಯದು. ಇದನ್ನು ಸಂಗ್ರಹಿಸುವಾಗ ವಿಶೇಷ ಕಾಳಜಿ ತೆಗೆದುಕೊಳ್ಳಬೇಕಾದ ಅಗತ್ಯವಿರುತ್ತದೆ. ನಿಮ್ಮ ಫ್ರಿಡ್ಜ್‌ನಲ್ಲಿನ ಉಷ್ಣಾಂಶವನ್ನು 0 ಡಿಗ್ರಿ ಫ್ಯಾರನ್ ಹೀಟ್‍ಗೆ ಇಡಲಾಗಿದೆಯೆಂದು ಖಾತ್ರಿ ಪಡಿಸಿಕೊಳ್ಳಿ. ಹಾಗೆ ಇಟ್ಟಲ್ಲಿ ಮಾತ್ರ ನಿಮ್ಮ ಆಹಾರ ಸುರಕ್ಷಿತ, ಇಲ್ಲವಾದಲ್ಲಿ ಅದು ಬೇಗ ಹಾಳಾಗುತ್ತದೆ.

ಹಣ್ಣುಗಳು:

ಹಣ್ಣುಗಳು:

ಸಿಟ್ರಸ್ ಹಣ್ಣುಗಳು ಮತ್ತು ಸೇಬುಗಳನ್ನು ಸರಿಯಾಗಿ ಫ್ರಿಡ್ಜ್‌ನಲ್ಲಿ ಸಂಗ್ರಹಿಸಿಟ್ಟರೆ ಎರಡು ವಾರಗಳಿಂದ ಹಿಡಿದು ಒಂದು ತಿಂಗಳವರೆಗು ಬಾಳಿಕೆ ಬರುತ್ತವೆ. ಅದರಂತೆಯೇ ಕಲ್ಲಂಗಡಿ, ಖರ್ಬೂಜಗಳನ್ನು ಫ್ರಿಡ್ಜ್‌ನಲ್ಲಿಟ್ಟರೆ ಒಂದು ವಾರದವರೆಗೆ ಬಾಳಿಕೆ ಬರುತ್ತವೆ. ಹಾಗೆಯೇ ಬೆರ್ರಿಗಳು ಮತ್ತು ಚೆರ್ರಿಗಳಂತಹ ಬೇಗ ಹಾಳಾಗುವ ಹಣ್ಣುಗಳು ಕೇವಲ ಮೂರು ದಿನದಲ್ಲಿ ತಮ್ಮ ರುಚಿಯನ್ನು ಕಳೆದುಕೊಳ್ಳುತ್ತವೆ. ಅದಕ್ಕಾಗಿ ಹಣ್ಣುಗಳನ್ನು ಫ್ರಿಡ್ಜನಲ್ಲಿಟ್ಟು ಕಾಪಾಡಿಕೊಳ್ಳಿ. ಆದರೆ ನೆನಪಿರಲಿ ಫ್ರಿಡ್ಜ್‌ನಲ್ಲಿಡುವುದರಿಂದ ಹಣ್ಣುಗಳಲ್ಲಿರುವ ತೇವಾಂಶವು ಹಾಳಾಗಿ ಅದರ ರಚನೆಗಳು ವಿರೂಪಗೊಳ್ಳುತ್ತವೆ.

ತರಕಾರಿಗಳು:

ತರಕಾರಿಗಳು:

ಬೀಟ್ ರೂಟ್ ಮತ್ತು ಕ್ಯಾರಟ್‍ಗಳಂತಹ ಬೇರಿನಂತಹ ತರಕಾರಿಗಳು ಫ್ರಿಡ್ಜ್‌ನಲ್ಲಿ ಕೇವಲ ಎರಡು ವಾರಗಳ ಕಾಲ ಮಾತ್ರ ಉತ್ತಮವಾಗಿರುತ್ತವೆ. ಇನ್ನು ಸೌತೆಕಾಯಿ, ಮೆಣಸು ಮತ್ತು ಟೊಮಾಟೊಗಳು ತಮ್ಮ ತಾಜಾತನವನ್ನು ಒಂದು ವಾರದವರೆಗೆ ಮಾತ್ರ ಕಾಯ್ದಿಟ್ಟುಕೊಳ್ಳಬಲ್ಲವು. ಅಸ್ಪಾರಗುಸ್, ಕಾರ್ನ್ ಮತ್ತು ಅಣಬೆಗಳು ಬೇಗ ಹಾಳಾಗುವಂತಹ ತರಕಾರಿಗಳಾಗಿರುತ್ತವೆ. ಇವುಗಳ ಆಯಸ್ಸು ಫ್ರಿಡ್ಜ್‌ನಲ್ಲಿ ಕೇವಲ ಎರಡು ದಿನಗಳು ಮಾತ್ರ.

ಪಾನೀಯಗಳು:

ಪಾನೀಯಗಳು:

ತೆರೆಯದೆ ಇರಿಸಿದ ಹಣ್ಣಿನ ರಸಗಳು ಫ್ರಿಡ್ಜ್‌ನಲ್ಲಿ ಮೂರುವಾರಗಳ ಕಾಲ ಉಳಿಯುತ್ತವೆ ಮತ್ತು ಗಡ್ಡೆ ಕಟ್ಟಿದ ಸ್ಥಿತಿಯಲ್ಲಿ 12 ತಿಂಗಳು ಬಾಳಿಕೆ ಬರುತ್ತದೆ. ಒಂದು ವೇಳೆ ಇವು ತೆರೆಯಲ್ಪಟ್ಟರೆ ಮೂರು ವಾರಗಳೊಳಗೆ ಅವುಗಳನ್ನು ಸೇವಿಸಿಬಿಡಿ. ಸಾಮಾನ್ಯವಾದ ಕ್ಯಾನ್‍ನಲ್ಲಿರುವ ಸೋಡಾಗಳು ನಿಮ್ಮ ಸಂಗ್ರಹದಲ್ಲಿ 9 ತಿಂಗಳುಗಳ ಕಾಲ ಬಾಳಿಕೆ ಬರುತ್ತವೆ. ಆದರೆ ಡಯಟ್ ಸೋಡಾವು ಕೇವಲ ನಾಲ್ಕು ತಿಂಗಳುಗಳ ಕಾಲ ಮಾತ್ರ ಅಂದರೆ ಅದರಲ್ಲಿರುವ ಕೃತಕ ಸಿಹಿಕಾರಕಗಳು ಹಳಸಿಹೋಗುವವರೆಗೆ ಮಾತ್ರ ಉತ್ತಮವಾಗಿರುತ್ತವೆ.

ಹಿಟ್ಟು, ಸಕ್ಕರೆ ಮತ್ತು ಇತರೆ ಬೇಕಿಂಗ್ ಸಾಮಗ್ರಿಗಳು:

ಹಿಟ್ಟು, ಸಕ್ಕರೆ ಮತ್ತು ಇತರೆ ಬೇಕಿಂಗ್ ಸಾಮಗ್ರಿಗಳು:

ಹಿಟ್ಟನ್ನು ಹೊರಗೆ ಆರು ತಿಂಗಳ ಅವಧಿಯವರೆಗು ಮತ್ತು ಫ್ರಿಡ್ಜ್‌ನಲ್ಲಿ ಒಂದು ವರ್ಷದವರೆಗು ಸಂಗ್ರಹಿಸಿಡಬಹುದು. ಬ್ರೌನ್ ಶುಗರ್ ಶೆಲ್ಫ್‌ನಲ್ಲಿಟ್ಟರೆ ನಾಲ್ಕು ತಿಂಗಳ ಅವಧಿಯವರೆಗು ಬಾಳಿಕೆ ಬರುತ್ತದೆ. ಸಕ್ಕರೆ ಪುಡಿಯು 18 ತಿಂಗಳು ಬಾಳಿಕೆ ಬರುತ್ತದೆ. ಸಕ್ಕರೆ ಹರಳು ಎರಡು ವರ್ಷ ಬಾಳಿಕೆ ಬರುತ್ತದೆ. ಬೇಕಿಂಗ್ ಪೌಡರ್, ಬೇಕಿಂಗ್ ಸೋಡಾ ಮತ್ತು ಕಾರ್ನ್ ಸ್ಟಾರ್ಚ್ 18 ತಿಂಗಳುಗಳಲ್ಲಿ ಹಾಳಾಗುತ್ತದೆ. ಅದಕ್ಕಾಗಿ ಹಿಟ್ಟು ಮತ್ತಿತರ ಒಣ ಸಾಮಗ್ರಿಗಳನ್ನು ತೇವಾಂಶ ರಹಿತವಾಗಿರುವ ಏರ್-ಟೈಟ್ ಕಂಟೇನರಿನಲ್ಲಿ ಹಾಕಿ ತಂಪಾದ ಸ್ಥಳದಲ್ಲಿ ಇಡಿ.

ಅಡುಗೆ ಎಣ್ಣೆಗಳು:

ಅಡುಗೆ ಎಣ್ಣೆಗಳು:

ನಿಮಗೆ ಆಶ್ಚರ್ಯವಾಗಬಹುದು, ಅಡುಗೆಗೆ ಬಳಸುವ ಕಡಲೆ ಕಾಯಿ ಮತ್ತು ಆಲೀವ್ ಎಣ್ಣೆಗಳು ಸಹ ಹಾಳಾಗುತ್ತವೆ. ಅಧಿಕ ಉಷ್ಣಾಂಶವು ಎಣ್ಣೆಯಲ್ಲಿರುವ ಕೊಬ್ಬು ಮತ್ತು ಜಿಡ್ಡಿನಾಂಶವನ್ನು ಒಡೆದು ಹಾಕಿ, ಕೆಡುವಂತೆ ಮಾಡುತ್ತದೆ. ತೆರೆಯದೆ ಇಟ್ಟ ಎಣ್ಣೆಗಳು ಒಂದು ವರ್ಷದಲ್ಲಿ ಹಾಳಾಗುತ್ತವೆ. ಆದರೆ ತೆರೆದು ಇಟ್ಟ ಎಣ್ಣೆಗಳು ಆರು ತಿಂಗಳಿನಲ್ಲಿ ಹಾಳಾಗುತ್ತವೆ. ಎಣ್ಣೆಗಳು ಅಧಿಕ ದಿನ ಬಾಳಿಕೆ ಬರಲು ಅವುಗಳನ್ನು ತಣ್ಣಗಿರುವ, ಬೆಳಕು ಬಾರದ ಜಾಗದಲ್ಲಿ ಸಂಗ್ರಹಿಸಿಡಿ. ಅದನ್ನು ಬಿಟ್ಟು ಅವುಗಳನ್ನು ಒಂದು ಡಿಶ್ ವಾಶರ್‌ನಲ್ಲಿ ಹಾಕಿ ಸ್ಟೌವ್ ಮೇಲೆ ಇಡಬೇಡಿ. ಅದರಲ್ಲೂ ಎಣ್ಣೆಯನ್ನು ಫ್ರಿಡ್ಜ್‌ನಲ್ಲಿ ಇಡಲೂ ಹೋಗಲೇ ಬೇಡಿ.

ಮಸಾಲೆ ಪದಾರ್ಥಗಳು:

ಮಸಾಲೆ ಪದಾರ್ಥಗಳು:

ಮಸಾಲೆಗಳು ಆರೋಗ್ಯಕ್ಕೆ ಉತ್ತಮ ಎಂಬ ಮಾತು ಸತ್ಯ. ಆದರೆ ಅದಕ್ಕು ಒಂದು ಆಯುಷ್ಯ ಇರುತ್ತದೆಯಲ್ಲವೆ? ಸ್ಪೈಸ್ ಮ್ಯಾನುಫ್ಯಾಕ್ಚುರರ್ ವೆಬ್‍ಸೈಟ್ ಪ್ರಕಾರ ಭೂಮಿಯಿಂದ ಉತ್ಪನ್ನವಾಗುವ ಮಸಾಲೆಗಳು ಮೂರು ವರ್ಷಕ್ಕೆ ಹಾಳಾಗುತ್ತವೆ. ಇನ್ನು ಋತುಗಳಿಗೆ ತಕ್ಕಂತೆ ದೊರೆಯುವ ಮಸಾಲೆ ಪದಾರ್ಥಗಳು ಎರಡು ವರ್ಷಗಳಲ್ಲಿ ಹಾಳಾಗುತ್ತವೆ. ಇನ್ನು ಬೀಜಗಳು ಮತ್ತು ಧಾನ್ಯ ರೂಪಿ ಮಸಾಲೆಗಳು ಹಾಗು ಅದರ ತಿರುಳುಗಳು ನಾಲ್ಕು ವರ್ಷಗಳಲ್ಲಿ ಹಾಳಾಗುತ್ತವೆ. ಅದಕ್ಕಾಗಿ ನಿಮ್ಮ ಮನೆಯಲ್ಲಿರುವ ಮಸಾಲೆಗಳನ್ನು ಒಮ್ಮೆ ಪರೀಕ್ಷಿಸಿ. ಅವುಗಳ ವಾಸನೆಯು ಮಂದವಾಗಿದ್ದಲ್ಲಿ ಅಥವಾ ಅವುಗಳ ಬಣ್ಣವು ಮಾಸಿದ್ದಲ್ಲಿ ಅವುಗಳನ್ನು ಹೊರಗೆ ಎಸೆಯುವ ಕಾಲ ಬಂದಿದೆ ಎಂದು ತಿಳಿಯಿರಿ.

ಸಾಸ್‍ಗಳು, ಜಾಮ್‍ಗಳು ಮತ್ತು ಕಾಂಡಿಮೆಂಟ್‍ಗಳು:

ಸಾಸ್‍ಗಳು, ಜಾಮ್‍ಗಳು ಮತ್ತು ಕಾಂಡಿಮೆಂಟ್‍ಗಳು:

ಇನ್ನು ಮೇಲೆ ಆ ಫಾಸ್ಟ್‌ಫುಡ್ ಕಾಂಡಿಮೆಂಟ್‍ಗಳ ಪ್ಯಾಕೆಟ್‍ಗಳನ್ನು ಎತ್ತಿ ಬಿಸಾಡಿ. ರೆಫ್ರಿಜಿರೇಟರಿನಲ್ಲಿ ತೆರೆದು ಇಡಲಾದ ಕೆಚ್‍ಅಪ್, ಚಿಲ್ಲಿ ಸಾಸ್ ಮತ್ತು ಕಾಕ್‍ಟೇಲ್ ಸಾಸ್‍ಗಳು ಆರು ತಿಂಗಳಲ್ಲಿ ಹಾಳಾಗುತ್ತವೆ. ಜೇನು ತುಪ್ಪ, ಜಾಮ್ ಮತ್ತು ಸಿರಪ್‍ಗಳು ಎಂಟು ತಿಂಗಳಲ್ಲಿ ಗಡ್ಡೆ ಕಟ್ಟುವ ಸಂಭವವಿರುತ್ತದೆ. ಮೊದಲು ಇವೆಲ್ಲವನ್ನು ಖಾಲಿ ಮಾಡಿ. ಸಿಹಿ ಮತ್ತು ಇಷ್ಟವಾಗುತ್ತವೆ ಎಂದು ಇದನ್ನು ಯಾವಾಗಲು ಬಳಸಬೇಡಿ.

English summary

Spoiler Alert: When Good Food Goes Bad

Learning how long you can really keep food will spare you from more than just a close encounter of the moldy kind.
Story first published: Saturday, March 29, 2014, 16:46 [IST]
X
Desktop Bottom Promotion