For Quick Alerts
ALLOW NOTIFICATIONS  
For Daily Alerts

ಕೆಲಸದ ಬಳಲಿಕೆ ತಪ್ಪಿಸಲು ಹತ್ತು ಸರಳ ವಿಧಾನಗಳು

|

ನಮ್ಮ ಜೀವನದಲ್ಲಿ ಕೆಲವೊಮ್ಮೆ ಆಯಾಸವಾಗುವುದು ಸಹಜ ಮತ್ತು ಇದರ ವಿರುದ್ಧ ಹೋರಾಡಬೇಕು. ಜವಾಬ್ದಾರಿ ಮತ್ತು ಕೆಲಸ ನಮ್ಮ ಜೀವನದ ಒಂದು ಭಾಗ ಮತ್ತು ಇದರೊಂದಿಗೆ ಒತ್ತಡವೂ ಸೇರಿರುತ್ತದೆ. ಬಳಲಿಕೆಯಿಂದ ಹೊರಬರಲು ನಾವು ಹಲವಾರು ವಿಧಾನಗಳನ್ನು ಆಯ್ಕೆ ಮಾಡಬಹುದು. ಇದರಲ್ಲಿ ಕೆಲವು ಒಂದು ಬಿಯರ್ ಅಥವಾ ಕೆಫಿನ್ ಸೇವನೆ. ಕೆಲಸದಲ್ಲಿನ ಬಳಲಿಕೆ ನಿಮಗೆ ದೈಹಿಕ ಮತ್ತು ಮಾನಸಿಕವಾಗಿ ಪರಿಣಾಮ ಬೀರಬಲ್ಲದು. ಇದರಿಂದ ಕೆಲಸದಲ್ಲಿ ಉಂಟಾಗುವ ಬಳಲಿಕೆ ನಿವಾರಿಸಲು ಕೆಲವೊಂದು ವಿಧಾನಗಳನ್ನು ಪಾಲಿಸಬೇಕಾಗುತ್ತದೆ.

ಮೊದಲ ಹೆಜ್ಜೆ ಹೇಗೆ ಇಡುವುದು ಎಂದು ಚಿಂತಿಸುತ್ತಿದ್ದರೆ, ನಿಮ್ಮ ಪ್ರೀತಿಪಾತ್ರರೊಂದಿಗೆ ಈ ಬಗ್ಗೆ ಮಾತನಾಡಿ. ನಿಮ್ಮ ಪ್ರೀತಿಪಾತ್ರರು ನಿಮ್ಮ ಬಗ್ಗೆ ಚೆನ್ನಾಗಿ ತಿಳಿದಿರಬಹುದು ಮತ್ತು ಕೆಲಸದಲ್ಲಿ ನಿಮ್ಮ ಬಳಲಿಕೆ ಕಡಿಮೆ ಮಾಡಲು ನೆರವಾಗಬಹುದು. ಆದಾಗ್ಯೂ ಬಳಲಿಕೆ ವಿರುದ್ಧ ಹೋರಾಡಲು ನಾವು ಕೆಲವೊಂದು ವಿಷಯಗಳನ್ನು ಪಾಲಿಸಬೇಕಾಗುತ್ತದೆ.

ಬಳಲಿಕೆ ವಿರುದ್ಧ ಹೋರಾಡಲು ನಿಮ್ಮ ಅವಕಾಶ ಮುಕ್ತವಾಗಿರಿಸಬೇಕು. ನಿಮ್ಮ ತಲೆಯಲ್ಲಿರುವ ಎಲ್ಲಾ ನಕಾರಾತ್ಮಕ ಯೋಚನೆಗಳನ್ನು ತೆಗೆದುಹಾಕಬೇಕು ಮತ್ತು ಧನಾತ್ಮಕವಾಗಿರಬೇಕು. ಆಶಾವಾದಿ ತನ್ನ ಸುತ್ತಲಿನ ಎಲ್ಲವನ್ನೂ ಬದಲಾಯಿಸಬಲ್ಲ, ಇದನ್ನು ಪ್ರಯತ್ನಿಸಿ. ಕೆಲಸದ ವೇಳೆ ಆಗುವ ಬಳಲಿಕೆ ಹೋಗಲಾಡಿಸಲು ಕೆಲವೊಂದು ವಿಧಾನಗಳು.

ಹೃದಯಪೂರ್ವಕ ಗುಡ್ ಮಾರ್ನಿಂಗ್!

ಹೃದಯಪೂರ್ವಕ ಗುಡ್ ಮಾರ್ನಿಂಗ್!

ನೀವು ಇದನ್ನು ಪ್ರತಿ ದಿನವೂ ಮಾಡಬೇಕಾಗುತ್ತದೆ. ಕೆಲಸದ ವೇಳೆ ಬಳಲಿಕೆ ತಪ್ಪಿಸಲು ಇದು ಒಂದು ವಿಧಾನ. ನೀವು ಬೆಳಿಗ್ಗೆ ನಿಮ್ಮ ದೇಹಕ್ಕೆ ಶಕ್ತಿ ನೀಡಬೇಕು. ದಿನವನ್ನು ತುಂಬಾ ಧನಾತ್ಮಕವಾಗಿ ಆರಂಭಿಸಿ. ಎಲ್ಲವೂ ಇಂದು ಒಳ್ಳೆಯ ರೀತಿ ನಡೆಯಲಿ ಮತ್ತು ಉತ್ತಮ ರೀತಿಯಿಂದ ಎಲ್ಲವನ್ನು ಸಂಭಾಲಿಸುವಂತಾಗಲಿ ಎಂದು ಆಶಿಸಿ. ಸ್ವಲ್ಪ ಯೋಗ ಮತ್ತು ವ್ಯಾಯಾಮದ ಮೂಲಕ ನೀವು ದಿನವಿಡಿ ಫ್ರೆಶ್ ಆಗಿರಲು ಪ್ರಯತ್ನಿಸಬಹುದು.

ಉಪಹಾರ ತಪ್ಪಿಸಬೇಡಿ

ಉಪಹಾರ ತಪ್ಪಿಸಬೇಡಿ

ಕೆಲಸದಲ್ಲಿ ಬಳಲಿಕೆ ತಪ್ಪಿಸುವ ಬಗ್ಗೆ ಯೋಚಿಸುತ್ತಿದ್ದರೆ ನೀವು ಉಪಹಾರ ತಪ್ಪಿಸಬಾರದು ಎನ್ನುವುದು ನೆನಪಿರಲಿ. ಪ್ರೋಟೀನ್ ಇರುವ ಉಪಹಾರ ಸೇವಿಸಿ, ಇದು ನಿಮ್ಮ ದೇಹಕ್ಕೆ ಅತ್ಯಗತ್ಯ. ನಿಮ್ಮ ಆಹಾರದಲ್ಲಿ ಸಮ ಪ್ರಮಾಣ ಮತ್ತು ಸಮತೋಲನವಿರಲಿ. ಇದರಿಂದ ನೀವು ದಿನವಿಡಿ ಎಲ್ಲವನ್ನು ಎದುರಿಸಲು ನೆರವಾಗುತ್ತದೆ.

ಗಿಡಮೂಲಿಕೆ ಪಾನೀಯ ಪ್ರಯತ್ನಿಸಿ

ಗಿಡಮೂಲಿಕೆ ಪಾನೀಯ ಪ್ರಯತ್ನಿಸಿ

ಗಿಡಮೂಲಕೆಯ ಪಾನೀಯಗಳಾದ ಗ್ರೀನ್ ಟೀ, ಅಮ್ಲಾ ಸಿರಪ್ ಮತ್ತು ಅಲೋ ವೆರಾದ ಜ್ಯೂಸ್ ನಿಂದ ನೀವು ಫಿಟ್ ಮತ್ತು ದಿನವಿಡಿ ಉಲ್ಲಾಸದಿಂದ ಇರಲು ನೆರವಾಗುತ್ತದೆ. ಇದು ಕೆಲಸದಲ್ಲಿ ಬಳಲಿಕೆ ವಿರುದ್ಧ ಹೋರಾಡುತ್ತದೆ.

ಕೆಫಿನ್‌ಗೆ ನೋ ಹೇಳಿ

ಕೆಫಿನ್‌ಗೆ ನೋ ಹೇಳಿ

ಕೆಫಿನ್ ಬದಲಿಗೆ ನೀವು ಯಾವುದಾದರೂ ಗಿಡಮೂಲಿಕೆ ಪಾನೀಯ ಆಯ್ಕೆ ಮಾಡಿ. ಉತ್ಕರ್ಷಣ ನಿರೋಧಕಗಳಿಂದ ತುಂಬಿರುವ ಇವುಗಳು ನಿಮ್ಮ ದೇಹ ಮತ್ತು ಮನಸ್ಸಿಗೆ ಒಳ್ಳೆಯದು. ಇದು ನಿಮ್ಮ ದೇಹ ಆರಾಮವಾಗಿರುವಂತೆ ಮಾಡುತ್ತದೆ. ಕೆಲಸದಲ್ಲಿನ ಬಳಲಿಕೆ ವಿರುದ್ಧ ಹೀಗೆ ಹೋರಾಡಬಹುದು.

ಸರಿಯಾಗಿ ವಿಶ್ರಾಂತಿ ತೆಗೆದುಕೊಳ್ಳಿ

ಸರಿಯಾಗಿ ವಿಶ್ರಾಂತಿ ತೆಗೆದುಕೊಳ್ಳಿ

ನಿಮ್ಮ ಇನ್ ಬಾಕ್ಸ್ ನಲ್ಲಿ ಮೇಲ್ ತುಂಬಿರಬಹುದು ಮತ್ತು ಕೈಯಲ್ಲಿ ಮಾಡಬೇಕಾದ ಕೆಲಸ ತುಂಬಾ ಇರಬಹುದು. ನಿಮ್ಮ ವೇಳಾಪಟ್ಟಿ ತುಂಬಾ ವ್ಯಸ್ತ ಮತ್ತು ಬಾಸ್ ಜತೆಗೆ ಮೀಟಿಂಗ್ ಇರಬಹುದು. ಆದರೆ ನಿಯಮಿತವಾಗಿ ವಿಶ್ರಾಂತಿ ಪಡೆಯಲು ಮರೆಯದಿರಿ. ಕೆಲಸದಲ್ಲಿನ ಬಳಲಿಕೆ ತಪ್ಪಿಸಲು ಇದು ಅತ್ಯಂತ ಉತ್ತಮ ವಿಧಾನ

ಭೋಜನಕ್ಕೆ ಏನು ತಿನ್ನುತ್ತೀರಿ ಎನ್ನುವುದು ಗಮನಿಸಿ

ಭೋಜನಕ್ಕೆ ಏನು ತಿನ್ನುತ್ತೀರಿ ಎನ್ನುವುದು ಗಮನಿಸಿ

ಮಧ್ಯಾಹ್ನದ ಊಟ ಮಾಡಲು ಮರೆಯದಿರಿ ಮತ್ತು ತುಂಬಾ ಕಡಿಮೆ ತಿನ್ನಬೇಡಿ. ಇದರಿಂದ ಮಧ್ಯಾಹ್ನ ಮೇಲೆ ನಿಮ್ಮ ಶಕ್ತಿ ಕಡಿಮೆಯಾಗುತ್ತದೆ ಮತ್ತು ನಿಮಗೆ ಬಳಲಿಕೆಯಾಗಬಹುದು. ನೀವು ಊಟಕ್ಕೆ ಏನು ತಿನ್ನುತ್ತೀರಿ ಎಂದು ಗಮನಿಸಿ. ನಿಮ್ಮ ಆಹಾರದಲ್ಲಿ ತರಕಾರಿ ಸೇರಿಸಿ, ಇದರಿಂದ ಕೆಲಸದಲ್ಲಿ ಬಳಲಿಕೆ ತಪ್ಪಿಸಬಹುದು.

ಹೊರಗಿನ ಗಾಳಿಗೆ ಮೈಯೊಡ್ಡಿ

ಹೊರಗಿನ ಗಾಳಿಗೆ ಮೈಯೊಡ್ಡಿ

ಒಂದು ಕೋಣೆಯೊಳಗೆ ಇಡೀ ದಿನ ಕುಳಿತುಕೊಳ್ಳಬೇಡಿ. ಸ್ವಲ್ಪ ವಿಶ್ರಾಂತಿ ಪಡೆದು ಹೊರಗಿನ ತಾಜಾ ಗಾಳಿ ಸೇವಿಸಿ. ಇದರ ಮೂಲಕ ಕೆಲಸದಲ್ಲಿನ ಬಳಲಿಕೆ ತಪ್ಪಿಸಬಹುದು.

ನಿಮ್ಮ ಸಹೋದ್ಯೋಗಿಗಳೊಂದಿಗೆ ಮಾತನಾಡಿ

ನಿಮ್ಮ ಸಹೋದ್ಯೋಗಿಗಳೊಂದಿಗೆ ಮಾತನಾಡಿ

ಪ್ರತೀ ದಿನ ಸ್ವಲ್ಪ ಸಮಯ ನಿಮ್ಮ ಸಹೋದ್ಯೋಗಿಗಳೊಂದಿಗೆ ಕಳೆಯಿರಿ. ಇದರಿಂದ ನಿಮಗೆ ಆರಾಮವಾಗಲು ನೆರವಾಗಬಹುದು. ನಿಮ್ಮ ಬಿಡುವಿನ ಸಮಯದಲ್ಲಿ ಕೆಲಸ ಮತ್ತು ಅದರಲ್ಲಿನ ಒತ್ತಡದ ಬಗ್ಗೆ ಮಾತನಾಡಬೇಡಿ. ಕೆಲಸದಲ್ಲಿನ ಆಯಾಸವನ್ನು ಹೀಗೆ ಕಡಿಮೆ ಮಾಡಬಹುದು.

ಸಂಜೆ ವೇಳೆ ಆರಾಮ ಮಾಡಿ

ಸಂಜೆ ವೇಳೆ ಆರಾಮ ಮಾಡಿ

ಕಚೇರಿಯಿಂದ ಮನೆಗೆ ಬಂದ ಬಳಿಕ ನಿಮ್ಮ ಫೇವರಿಟ್ ಟಿವಿ ಶೋಗಳನ್ನು ನೋಡಿ ಅಥವಾ ಸಂಜೆಯ ವಾಕಿಂಗ್ ಗೆ ಹೋಗಿ. ಇದರ ಮೂಲಕ ಕೆಲಸದ ದಣಿವು ನಿವಾರಿಸಬಹುದು.

ಕುಟುಂಬದೊಂದಿಗೆ ಸಮಯ ಕಳೆಯಿರಿ

ಕುಟುಂಬದೊಂದಿಗೆ ಸಮಯ ಕಳೆಯಿರಿ

ಕೆಲಸದ ಸ್ಥಳದಲ್ಲಿ ಏನೇ ಆದರೂ ನೀವು ಕುಟುಂಬದೊಂದಿಗೆ ಸಮಯ ಕಳೆಯಿರಿ. ಇದರಿಂದ ನಿಮಗೆ ಭಾವನಾತ್ಮಕ ಬಲ ಮತ್ತು ಆರಾಮ ಸಿಗುತ್ತದೆ. ಕೆಲಸದಲ್ಲಿ ಬಳಲಿಕೆ ನಿವಾರಿಸಲು ಇದು ಅತ್ಯಂತ ಉತ್ತಮ ವಿಧಾನ.

Read more about: health wellness
English summary

Simple Ways To Fight Fatigue At Work

There is no particular time of the year for fatigue. It is usual for all of us to get fatigued at some time of lives and it is essential to fight fatigue work. Responsibilities and work has become a part of life and stress accompanies this. An optimist can change things around, so try it! Here are a few ways to fight fatigue at work.
X
Desktop Bottom Promotion