For Quick Alerts
ALLOW NOTIFICATIONS  
For Daily Alerts

ಆರೋಗ್ಯವನ್ನು ವೃದ್ಧಿಸಿಕೊಳ್ಳಲು ಸುಲಭೋಪಾಯಗಳು

By Deepak M
|

"ಆರೋಗ್ಯವೇ ಮಹಾ ಭಾಗ್ಯ" ಎಂಬುದು ಲೋಕೋಕ್ತಿ. ನಾವೆಲ್ಲರು ಆರೋಗ್ಯವಾಗಿ ನೂರು ವರ್ಷಗಳ ಕಾಲ ಬದುಕಬೇಕು ಎಂದು ಇಚ್ಛಿಸುತ್ತೇವೆ. ಅದಕ್ಕಾಗಿ ಹಲವಾರು ಮಾರ್ಗೋಪಾಯಗಳನ್ನು ಮತ್ತು ಕಟ್ಟು ಪಾಡುಗಳನ್ನು ಹಾಕಿಕೊಳ್ಳುತ್ತೇವೆ. ಆದರೆ ಅದನ್ನು ಪಾಲಿಸಲು ಮಾತ್ರ ಹೋಗುವುದಿಲ್ಲ. ಈ ವಿಚಾರದಲ್ಲಿ ಮಾತ್ರ ನಮ್ಮದು ಅಯೋಮಯವಾದಂತಹ ನಡೆಯಾಗಿರುತ್ತದೆ. ಆರೋಗ್ಯ ಬೇಕು ಆದರೆ ಅದಕ್ಕಾಗಿ ಶ್ರಮ ಮಾತ್ರ ಬೇಡ ಎಂಬ ನೀತಿ ಅನುಸರಿಸುತ್ತೇವೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ರಾಗಿ ಮುದ್ದೆಯ 12 ಆರೋಗ್ಯ ಪ್ರಯೋಜನಗಳು

ಇರಲಿ ಬಿಡಿ ಆರೋಗ್ಯಕ್ಕಾಗಿ ಇರುವ ಒಂದು ಜೀವನವನ್ನು ಕಟ್ಟು ಪಾಡುಗಳ ಕೋಟೆಯಲ್ಲಿ ಏಕೆ ಬಂಧಿಸಬೇಕು. ನಿಮ್ಮಂತಹ ಆರೋಗ್ಯದ ಬಗ್ಗೆ ಕಾಳಜಿಯಿಡಬೇಕೆನ್ನುವ ಮತ್ತು ಅದಕ್ಕಾಗಿ ಕಡಿಮೆ ಸಮಯವನ್ನು ವ್ಯಯಿಸುವವರಿಗಾಗಿ ನಾವು ಇಲ್ಲಿ ಕೆಲವೊಂದು ಸುಲಭವಾದ ಉಪಾಯಗಳನ್ನು ನೀಡಿದ್ದೇವೆ, ಓದಿಕೊಳ್ಳಿ. ಇವು ನಿಮಗೆ ತತ್‍ಕ್ಷಣದಲ್ಲಿ ಆರೋಗ್ಯವನ್ನು ವೃದ್ಧಿಸಿ, ಧೀರ್ಘಕಾಲದ ಆರೋಗ್ಯವನ್ನು ಪಡೆಯಲು ನೆರವನ್ನು ನೀಡುತ್ತವೆ.

ತತ್‍ಕ್ಷಣದಲ್ಲಿ ಅಡಿಯಿಂದ ಮುಡಿಯವರೆಗೆ ಆರೋಗ್ಯವನ್ನು ಅಭಿವೃದ್ಧಿಪಡಿಸುವ ಆರೋಗ್ಯ ಸೂತ್ರಗಳು ನಿಮಗಾಗಿ ಕಾದಿವೆ. ಮುಂದೆ ಓದಿ;-

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ನೆನೆಪಿನ ಶಕ್ತಿ ಹೆಚ್ಚಿಸಬೇಕೆ? ಈ ರೀತಿ ಮಾಡಿ

ಮೀನನ್ನು ಸೇವಿಸಿ:

ಮೀನನ್ನು ಸೇವಿಸಿ:

ಅಧ್ಯಯನಗಳಿಂದ ದೃಢಪಟ್ಟಿರುವ ವಿಚಾರವೇನೆಂದರೆ ಸಾಲ್ಮನ್ ಅಥವಾ ಮ್ಯಾಕೆರೆಲ್‍ನಂತಹ ಎಣ್ಣೆಯುತವಾಗಿರುವ ಮೀನುಗಳನ್ನು ವಾರಕ್ಕೊಮ್ಮೆಯಾದರು ಆಹಾರದಲ್ಲಿ ಸೇವಿಸುವುದರಿಂದ ಮೆದುಳಿನ ಕುಗ್ಗುವಿಕೆಯ ವೇಗವನ್ನು ಕಡಿಮೆ ಮಾಡಬಹುದಂತೆ. ಈ ಮೆದುಳಿನ ಕುಗ್ಗುವಿಕೆಯು ನಾವು ಹುಟ್ಟಿದಾಗಿನಿಂದ ಮೂರುವರ್ಷದವರೆಗಿನ ಅವಧಿಯ ಮಾನಸಿಕ ಸ್ವಾಸ್ಥದ ಕುಂಠಿತಕ್ಕೆ ಕಾರಣವಾಗುತ್ತದೆ.

ನಿಮ್ಮ ಮಿತ್ರರೊಂದಿಗೆ ಉತ್ತಮ ಭಾಂದವ್ಯವನ್ನು ಹೊಂದಿ:

ನಿಮ್ಮ ಮಿತ್ರರೊಂದಿಗೆ ಉತ್ತಮ ಭಾಂದವ್ಯವನ್ನು ಹೊಂದಿ:

ಇತ್ತೀಚೆಗೆ ಆಸ್ಟ್ರೇಲಿಯಾದ ಶತಾಯುಷಿಗಳ ಮೇಲೆ ನಡೆದ ಅಧ್ಯಯನದ ಪ್ರಕಾರ ನಾವು ದೀರ್ಘ ಕಾಲ ಬಾಳುವ ಗುಟ್ಟು ನಮ್ಮ ಸ್ನೇಹಿತರ ಜೊತೆಗೆ ಉತ್ತಮ ರೀತಿಯ ಭಾಂದವ್ಯವನ್ನು ಹೊಂದುವುದರಲ್ಲಿ ಅಡಗಿದೆಯಂತೆ. ಇದಕ್ಕೆ ವಿಙ್ಞಾನಿಗಳು ನೀಡುವ ಕಾರಣವು ಸಮಂಜಸವಾಗಿ ಇದೆ. ಸ್ನೇಹಿತರು ನಮಗೆ ಮಾನಸಿಕ ಒತ್ತಡವುಂಟಾದಾಗ ಭಾವನಾತ್ಮಕವಾಗಿ ನೆರವನ್ನು ನೀಡುತ್ತಾರೆ. ಇದು ನಮ್ಮ ದೇಹದಲ್ಲಿ ಚೈತನ್ಯವನ್ನು ಹೊಮ್ಮಿಸುವ ಡೊಪಾಮಿನ್ ಮತ್ತು ಆಕ್ಸಿಟೋಸಿನ್ ಉತ್ಪಾದನೆಯಾಗಲು ಸಹಾಯ ಮಾಡುತ್ತದೆ. ಇದರ ಪರಿಣಾಮವಾಗಿ ನಮ್ಮ ಮೆದುಳು ಬೆಳವಣಿಗೆ ಹೊಂದಿ, ವಯಸ್ಸಿನೊಂದಿಗೆ ಸೆಣಸಾಡಲು ಸದೃಢಗೊಳ್ಳುತ್ತದೆ.

ಪ್ರತಿ ದಿನ ಎರಡು ಸೇಬು ಸೇವಿಸಿ:

ಪ್ರತಿ ದಿನ ಎರಡು ಸೇಬು ಸೇವಿಸಿ:

ಸೇಬನ್ನು, ಅದರಲ್ಲೂ ವಿಶೇಷವಾಗಿ ಅದರ ರಸವನ್ನು ಸೇವಿಸುವುದರಿಂದ ಮೆದುಳನ್ನು ಸದಾ ಯೌವನಯುತವಾಗಿ ಕಾಪಾಡಿಕೊಳ್ಳಬಹುದಂತೆ. ಅಲ್ಜೀಮರ್ ಕಾಯಿಲೆಯ ಮೇಲೆ ನಡೆಸಲಾದ ಇತ್ತೀಚಿನ ಸಂಶೋಧನೆಯಲ್ಲಿ , ಅಧ್ಯಯನಕಾರರು ಕಂಡು ಕೊಂಡ ವಿಚಾರವೇನೆಂದರೆ, ಪ್ರತಿದಿನ ಎರಡು ಲೋಟ ಸೇಬಿನ ರಸವನ್ನು ಸೇವಿಸುವ ಬುದ್ಧಿಮಾಂಧ್ಯರಲ್ಲಿ ಮೆದುಳಿನಲ್ಲಿ ಕಂಡುಬರುವ ಜಿಗುಟಾದ ಪ್ಲಾಕ್‍ಗಳ ಉತ್ಪಾದನೆ ಕಡಿಮೆಯಾಗಿರುತ್ತದಂತೆ. ಇನ್ನೇಕೆ ತಡ ಸೇಬಿನ ರಸವನ್ನು ತಪ್ಪದೆ ದಿನ ಸೇವಿಸಿ.

ಒಗಟುಗಳನ್ನು ಬಿಡಿಸಿ:

ಒಗಟುಗಳನ್ನು ಬಿಡಿಸಿ:

ತಜ್ಞರ ಪ್ರಕಾರ ಒಗಟುಗಳು, ಸುಡೊಕು ಮತ್ತು ಪದಬಂಧಗಳನ್ನು ಬಿಡಿಸುವಂತಹ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ನಿಮ್ಮ ಮೆದುಳಿನ ಕಾರ್ಯಕ್ಷಮತೆಯ ವೇಗವನ್ನು ಹೆಚ್ಚಿಸಿಕೊಳ್ಳಬಹುದಂತೆ. ಮಿತವ್ಯಯದಲ್ಲಿ ದೊರಕುವ ಈ ಆಟಗಳನ್ನು ಆಡದೆ ಬಿಡಬೇಡಿ. ಒಂದು ಕೈ ನೋಡಿ.

ತ್ಚಚೆಯ ಆರೋಗ್ಯಕ್ಕೆ ಕಾಮನಬಿಲ್ಲನ್ನೆ ಸೇವಿಸಿ!:

ತ್ಚಚೆಯ ಆರೋಗ್ಯಕ್ಕೆ ಕಾಮನಬಿಲ್ಲನ್ನೆ ಸೇವಿಸಿ!:

ಅದೇಗೆ ಕಾಮನಬಿಲ್ಲನ್ನು ಸೇವಿಸಲು ಸಾಧ್ಯ? ಎಂಬ ಪ್ರಶ್ನೆ ಮಾಡಬೇಡಿ. ನಾವು ಹೇಳುತ್ತಿರುವ ಕಾಮನ ಬಿಲ್ಲಿನಂತೆ ಬಣ್ಣ ಬಣ್ಣದಿಂದ ಕೂಡಿರುವ ತರಕಾರಿಗಳನ್ನು ಸೇವಿಸಿ ಎಂದು!. ಹಳದಿ, ಹಸಿರು, ಕೆಂಪು ಮತ್ತು ನೇರಳೆ ಬಣ್ಣದ ತರಕಾರಿಗಳಲ್ಲಿ ಸುಕ್ಕು ನಿವಾರಕಗಳಾದ ಆಂಟಿ ಆಕ್ಸಿಡೆಂಟ್‍ಗಳು ಯಥೇಚ್ಛವಾಗಿರುತ್ತವೆ. ಸೆಂಟ್, ಆಂಡ್ರ್ಯೂಸ್ ವಿಶ್ವವಿದ್ಯಾನಿಲಯದಲ್ಲಿ ನಡೆದ ಅಧ್ಯಯನದಲ್ಲಿ ತಿಳಿದು ಬಂದ ಅಂಶವೆಂದರೆ, ಹಳದಿ ಮತ್ತು ಕಿತ್ತಳೆ ಬಣ್ಣದ ತರಕಾರಿಗಳನ್ನು ಸೇವಿಸುವವರಲ್ಲಿ ಆರೋಗ್ಯಕರ ತ್ವಚೆಯಿರುತ್ತದೆಯಂತೆ ಮತ್ತು ಇವರ ತ್ವಚೆಯು ಅತ್ಯಂತ ಆಕರ್ಷಣೀಯವಾಗಿ ಸಹ ಇರುತ್ತದೆಯಂತೆ.

ವಾರಕ್ಕೆರಡು ಬಾರಿಯಾದರು ಹಸ್ತಮೈಥುನ ನಡೆಸಿ.

ವಾರಕ್ಕೆರಡು ಬಾರಿಯಾದರು ಹಸ್ತಮೈಥುನ ನಡೆಸಿ.

ರಾಯಲ್ ಎಡಿನ್‍ಬರ್ಗ್ ಹಾಸ್ಪಿಟಲ್‍ರವರು ನಡೆಸಿದ ಅಧ್ಯಯನದ ಪ್ರಕಾರ;- ಆರೋಗ್ಯಕರವಾದ ಲೈಂಗಿಕ ಜೀವನ ನಡೆಸುವ (ವಾರಕ್ಕೆರಡು ಅಥವಾ ಮೂರು ಬಾರಿ ) ದಂಪತಿಗಳು ಇತರರಿಗಿಂತ ಏಳು ವರ್ಷ ಚಿಕ್ಕವರಂತೆ ಕಾಣುತ್ತಾರಂತೆ. ಬಹುಶಃ ಲೈಂಗಿಕ ಕ್ರಿಯೆಯು ಒತ್ತಡವನ್ನು ಕಡಿಮೆ ಮಾಡಿ, ರಾತ್ರಿ ಉತ್ತಮ ನಿದ್ದೆ ಬರುವಂತೆ ಮಾಡಲು ಸಹಕರಿಸಬಹುದು.

ಜನನೇಂದ್ರಿಯಗಳು ; ಹಾಲನ್ನು ಸೇವಿಸಿ:

ಜನನೇಂದ್ರಿಯಗಳು ; ಹಾಲನ್ನು ಸೇವಿಸಿ:

ದಿನಕ್ಕೊಂದು ಬಾರಿ ಜಿಡ್ಡಿನಂಶವಿರುವ ಹಾಲನ್ನು ಒಂದು ಲೋಟವನ್ನು ಸೇವಿಸುವುದರ ಮೂಲಕ ಹೆಂಗಸರು ತಮ್ಮನ್ನು ಕಾಡಬಲ್ಲಂತಹ ಬಂಜೆತನದಿಂದ ಶೇ.25 ರಷ್ಟು ಭಾಗ ಪಾರಾಗಬಹುದೆಂದು ಹಾರ್ವರ್ಡ್ ವಿಶ್ವವಿದ್ಯಾನಿಲಯದ ಅಧ್ಯಯನವು ಅಭಿಪ್ರಾಯಪಟ್ಟಿದೆ. ಕಾರಣ ಹೈನು ಉತ್ಪನ್ನಗಳಲ್ಲಿರುವ ಕೊಬ್ಬು ಗರ್ಭಕೋಶದ ಕಾರ್ಯವೈಖರಿಯನ್ನು ಸುಧಾರಿಸುತ್ತದೆಯೆಂದು ನಂಬಲಾಗಿದೆ. ಇದಕ್ಕಾಗಿ ಬೆಳಗ್ಗೆ ಧಾನ್ಯಗಳ ಜೊತೆಗೆ ಸ್ವಲ್ಪ ಹಾಲನ್ನು ಸೇವಿಸಿ, ಆಹಾರದಲ್ಲಿ ಯೋಗರ್ಟ್ ಅಥವಾ ಚೀಸ್‍ನ ಸಣ್ಣ ತುಂಡನ್ನು ಸೇವಿಸಲು ಮರೆಯಬೇಡಿ.

ಒತ್ತಡವನ್ನು ಹೊಡೆದೊಡಿಸಿ:

ಒತ್ತಡವನ್ನು ಹೊಡೆದೊಡಿಸಿ:

ಒತ್ತಡವು ಹೆಂಗಸರ ಋತು ಚಕ್ರ ಮತ್ತು ಸಂತಾನ ಶಕ್ತಿಯ ಮೇಲೆ ಅಧಿಕ ಪರಿಣಾಮವನ್ನು ಬೀರುತ್ತದೆ. ಇದಲ್ಲದೆ ಇದು ಪುರುಷರ ವೀರ್ಯಾಣುಗಳ ಉತ್ಪಾದನೆ ಮತ್ತು ಕಾಮಾಸಕ್ತಿಯ ಮೇಲು ಸಹ ಪ್ರಭಾವವನ್ನು ಬೀರುತ್ತದೆ. ಅದಕ್ಕಾಗಿ ಪ್ರತಿದಿನ ವಿಶ್ರಾಂತಿಯನ್ನು ನೀಡುವ ಯಾವುದಾದರು ಚಟುವಟಿಕೆಗಳಲ್ಲಿ ಪಾಲ್ಗೊಳ್ಳಿ. ಅದು ಸಂಗೀತ ಕೇಳುವುದು ಹಾಗಿರಬಹುದು , ಪುಸ್ತಕ ಓದುವುದು ಅಥವಾ ನಿಮ್ಮ ನೆಚ್ಚಿನ ಟಿ.ವಿ ಕಾರ್ಯಕ್ರಮ ನೋಡುವುದು ಹಾಗಿರಬಹುದು. ವಿಶ್ರಾಂತಿಗೆ ಮಹತ್ವ ನೀಡಿ.

ಹೊಟ್ಟೆ; ಸಂಗೀತ ಕೇಳಿ ಕುಣಿಯಿರಿ:

ಹೊಟ್ಟೆ; ಸಂಗೀತ ಕೇಳಿ ಕುಣಿಯಿರಿ:

ಕೆನಡಾದಲ್ಲಿ ನಡೆದ ಅಧ್ಯಯನದ ಪ್ರಕಾರ ಸಂಗೀತ ಕೇಳುತ್ತ ವ್ಯಾಯಾಮ ಮಾಡಿದವರು, ಸಂಗೀತ ಕೇಳದೆ ವ್ಯಾಯಾಮ ಮಾಡಿದವರಿಗಿಂತ ಹೆಚ್ಚಿನ ತೂಕವನ್ನು ಇಳಿಸಿಕೊಂಡರಂತೆ. ಅದಕ್ಕಾಗಿ ಇನ್ನು ಮುಂದೆ ವ್ಯಾಯಾಮ ಮಾಡುವಾಗ ನಿಮ್ಮ ನೆಚ್ಚಿನ ಸಂಗೀತವನ್ನು ಕೇಳಲು ಮರೆಯಬೇಡಿ. ಅದರಲ್ಲು ಉತ್ಸಾಹ ತುಂಬುವ ಹಾಡುಗಳಿದ್ದರೆ ಮತ್ತಷ್ಟು ಉತ್ತಮ. ಐಪಾಡ್ ಅಥವಾ ಎಂ.ಪಿ3 ಯಲ್ಲ್ ಹಾಡುಗಳನ್ನು ಕೇಳುತ್ತ ಜಿಮ್‍ನಲ್ಲಿ ವ್ಯಾಯಾಮ ಮಾಡಿ ಅಥವಾ ನಡೆಯಲು ಹೋಗಿ, ನಿಮ್ಮ ದೇಹದಲ್ಲಿ ಕೊಬ್ಬು ಸದ್ದಿಲ್ಲದೆ ಕರಗಲು ಆರಂಭಿಸುತ್ತದೆ.

ಪೊಟ್ಯಾಶಿಯಂ ಇರುವ ಆಹಾರ ಪದಾರ್ಥಗಳನ್ನು ಸೇವಿಸಿ:

ಪೊಟ್ಯಾಶಿಯಂ ಇರುವ ಆಹಾರ ಪದಾರ್ಥಗಳನ್ನು ಸೇವಿಸಿ:

ಈ ಖನಿಜವು ನಮ್ಮ ದೇಹದಲ್ಲಿರುವ ದ್ರವ ಪದಾರ್ಥಗಳನ್ನು ಸಮತೋಲನದಲ್ಲಿಡಲು ಸಹಕರಿಸುತ್ತದೆ. ಇದರಿಂದ ನಿಮ್ಮ ದೇಹ ಅಕರಾಳ ವಿಕರಾಳವಾಗಿ ಉಬ್ಬುವುದು ತಪ್ಪುತ್ತದೆ. ಬಾಳೆ ಹಣ್ಣು, ಮಾವು, ಪಾಲಕ್, ಕ್ಯಾಂಟಲೌಪ್, ಟೊಮಾಟೊ, ಒಣ ಹಣ್ಣುಗಳು ಮತ್ತು ಅಸ್ಪರಾಗುಸ್‍ನಲ್ಲಿ ಈ ಪೊಟಾಶಿಯಂ ಅಧಿಕ ಪ್ರಮಾಣದಲ್ಲಿರುತ್ತದೆ. ಇದರ ಜೊತೆಗೆ ಇವುಗಳಲ್ಲಿ ಅಸ್ಪರಜೈನ್ ಎಂಬ ಅಮೈನೊ ಆಮ್ಲ ಸಹ ಇರುತ್ತದೆ. ಇವುಗಳು ಮೂತ್ರ ಉದ್ದೀಪಕಗಳಾಗಿ ಕೆಲಸ ಮಾಡಿ ನಿಮ್ಮ ದೇಹದಲ್ಲಿರುವ ಹೆಚ್ಚಿನ ದ್ರವವನ್ನು ವಿಸರ್ಜನೆ ಮಾಡಲು ನೆರವಾಗುತ್ತವೆ.

ವಿಶ್ರಾಂತಿ ತಗೊಳ್ಳಿ ಪ್ಲೀಸ್;

ವಿಶ್ರಾಂತಿ ತಗೊಳ್ಳಿ ಪ್ಲೀಸ್;

ಹಾರ್ವಾರ್ಡ್ ವಿಶ್ವವಿದ್ಯಾನಿಲಯದ ಅಧ್ಯಯನಕಾರರ ಪ್ರಕಾರ ಯೋಗ ಮತ್ತು ಧ್ಯಾನದಂತಹ ವಿಶ್ರಾಂತಿ ತಂತ್ರಗಳು ನಿಮ್ಮ ದೇಹದಲ್ಲಿನ ಹೆಚ್ಚಿನ ಕ್ಯಾಲೋರಿಗಳನ್ನು ಕರಗಿಸುತ್ತವೆಯಂತೆ. ಇದು ನೀವು ಜಿಮ್‍ಗೆ ಅಥವಾ ಓಡಿದರೆ ಕರಗುವ ಪ್ರಮಾಣಕ್ಕೆ ಸಮನಾಗಿರುವುದಿಲ್ಲವಾದರು, ಈ ತಂತ್ರಗಳು ನಿಮ್ಮಲ್ಲಿನ ಒತ್ತಡಕಾರಕ ಹಾರ್ಮೋನುಗಳನ್ನು ಹತೋಟಿಯಲ್ಲಿಡುತ್ತವೆ. ಏಕೆಂದರೆ ಈ ಹಾರ್ಮೋನುಗಳು ನಿಮ್ಮಲ್ಲಿ ಅಧಿಕವಾಗಿ ತಿನ್ನುವ ಚಟವನ್ನು ಹೆಚ್ಚಿಸುತ್ತವೆ. ಹೀಗೆ ವಿಶ್ರಾಂತಿಯು ನಿಮ್ಮ ದೇಹದ ಕೊಲೆಸ್ಟ್ರಾಲನ್ನು ನಿಯಂತ್ರಣದಲ್ಲಿಡುತ್ತದೆ.

ಕಣ್ಣುಗಳು- ಸನ್ ಗ್ಲಾಸ್ ಧರಿಸಿ- ಚಳಿಗಾಲದಲ್ಲಿ ಸಹ:

ಕಣ್ಣುಗಳು- ಸನ್ ಗ್ಲಾಸ್ ಧರಿಸಿ- ಚಳಿಗಾಲದಲ್ಲಿ ಸಹ:

ಎಷ್ಟು ಬಾರಿ ನಿಮ್ಮ ಕಣ್ಣುಗಳನ್ನು ನೇರಳಾತೀತ ಕಿರಣಗಳಿಗೆ ಒಡ್ಡಿಕೊಳ್ಳುವಿರೋ, ಅಷ್ಟು ಅಪಾಯವನ್ನು ನೀವು ನಿಮ್ಮ ಕಣ್ಣಿನ ರೆಟಿನಾದ ಮೇಲೆ ಎಳೆದುಕೊಂಡಂತೆ ಸರಿ. ಇದು ಮುಂದೆ ವಯಸ್ಸಾದಂತೆ ಕಣ್ಣಿನ ಪೊರೆ ಮತ್ತು ವಯಸ್ಸಿಗೆ ಸಂಬಂಧಿಸಿದ ಮ್ಯಾಕುಲರ್ ಡಿಜೆನರೆಷನ್ ( ಎ‍ಎಮ್‍ಡಿ) ಎಂಬ ಸಮಸ್ಯೆಯನ್ನುಂಟು ಮಾಡುತ್ತದೆ. ಹಾಗಾಗಿ ಹೊರಗೆ ಓಡಾಡುವಾಗ ಸನ್ ಗ್ಲಾಸ್ ಧರಿಸಿ. ಚಳಿಗಾಲದಲ್ಲಿ ಸಹ ಧರಿಸುವುದರಿಂದ ಸೂರ್ಯನ ನೇರಳಾತೀತ ಕಿರಣಗಳಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಬಹುದು. ನೆನಪಿಡಿ, ಮೋಡ ಕವಿದ ವಾತಾವರಣದಲ್ಲಿ ಸಹ ನೇರಳಾತೀತ ಕಿರಣಗಳು ಇರುತ್ತವೆ.

ಮೂಗು - ಮೂಗು ಕಟ್ಟಿಕೊಳ್ಳುವುದನ್ನು ಮರೆತು ಬಿಡಿ:

ಮೂಗು - ಮೂಗು ಕಟ್ಟಿಕೊಳ್ಳುವುದನ್ನು ಮರೆತು ಬಿಡಿ:

ಈ ಡಿಐವೈ ಪರಿಹಾರವನ್ನು ಪ್ರಯತ್ನಿಸಿ ಮತ್ತು ಸೈನಸ್ ಒತ್ತಡ ಮತ್ತು ಮೂಗು ಕಟ್ಟಿಕೊಳ್ಳುವುದರಿಂದ ವಿಮುಕ್ತಿ ಹೊಂದಿ. ನಿಮ್ಮ ಹುಬ್ಬಿನ ಕೆಳಗೆ ಬೆರಳನ್ನು ಇಟ್ಟು ಉಸಿರಾಡಲು ಪ್ರಯತ್ನಿಸಿ. ನಂತರ ಮೂಗಿನ ತುದಿಯಲ್ಲಿ ಬೆರಳನ್ನು ಇಟ್ಟು ಮೂಗಿನ ಮೇಲ್ಭಾಗಕ್ಕೆ ಅಭಿಮುಖವಾಗಿ ಉಸಿರಾಡಲು ಪ್ರಯತ್ನಿಸಿ. ಹೀಗೆ ಮಾಡುವುದರಿಂದ ಮೂಗಿನಲ್ಲಿ ಬಾಯಿಯ ಮೂಲಕ ಹಾದು ಹೋಗುವ ವೊಮೆರ್ ಮೂಳೆಯನ್ನು ಸ್ವಸ್ಥಿತಿಗೆ ತರಲು ಸಹಾಯಕಾವಾಗುತ್ತದೆ. ಇದು ಸಡಿಲವಾಗುವ ಮೂಲಕ ನಿಮ್ಮ ಮೂಗು ಕಟ್ಟುವಿಕೆಯು ಬಿಡುಗಡೆಯಾಗುತ್ತದೆ. ಇದಕ್ಕೆ ಕೇವಲ 20 ಸೆಕೆಂಡ್ ಅವಧಿ ತಗುಲುತ್ತದೆ.

ಕಿವಿಗಳು;

ಕಿವಿಗಳು; "ಶಬ್ದದ ಪಥ್ಯ"ವನ್ನು ಮಾಡಿ:

ವಯಸ್ಸಾದಂತೆ ನಮ್ಮ ಮೆದುಳಿನಿಂದ ಬರುವ ಶಬ್ದ ಸಂದೇಶಗಳು ನಮ್ಮ ಕಿವಿಗಳಲ್ಲಿನ ನರಗಳನ್ನು ಹಾನಿ ಮಾಡುತ್ತದೆ. ಇದರಿಂದ ಕಿವುಡುತನ ಬರುತ್ತದೆ. ಅದಕ್ಕಾಗಿ ನಿಮ್ಮ ಜೀವನದ ಭಾರವನ್ನು ಕಡಿಮೆ ಮಾಡಿಕೊಳ್ಳಿ. ಕಿವಿಯನ್ನು ಮತ್ತು ಅದರ ಕಾರ್ಯಕ್ಷಮತೆಯನ್ನು ಕಾಪಾಡಿಕೊಳ್ಳಿ.

ಹಲ್ಲುಗಳು; ಒಂದು ಗುಟುಕು ಗ್ರೀನ್ ಟೀಯನ್ನು ಸೇವಿಸಿ:

ಹಲ್ಲುಗಳು; ಒಂದು ಗುಟುಕು ಗ್ರೀನ್ ಟೀಯನ್ನು ಸೇವಿಸಿ:

ಅಧ್ಯಯನಗಳ ಪ್ರಕಾರ ಗ್ರೀನ್ ಟೀಯನ್ನು ಸೇವಿಸುವುದರಿಂದ ನಿಮ್ಮ ಹಲ್ಲುಗಳ ಮೇಲೆ ಪಾಚಿಯುಂಟು ಮಾಡುವ ಬ್ಯಾಕ್ಟೀರಿಯಾ ಬೆಳೆಯದಂತೆ ಕಾಪಾಡಬಹುದಂತೆ. ಇದು ದವಡೆಗಳ ಆರೋಗ್ಯಕ್ಕು ಸಹ ಒಳ್ಳೆಯದು. ಅದಕ್ಕಾಗಿ ಪ್ರತಿದಿನ ಒಂದು ಕಪ್ ಗ್ರೀನ್ ಟೀಯನ್ನು ಸೇವಿಸಿ.

ಹೃದಯ; ಒಂದು ಗಂಟೆ ಮೊದಲೆ ನಿದ್ದೆಗೆ ಶರಣಾಗಿ:

ಹೃದಯ; ಒಂದು ಗಂಟೆ ಮೊದಲೆ ನಿದ್ದೆಗೆ ಶರಣಾಗಿ:

ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್ ನಡೆಸಿದ ಅಧ್ಯಯನದ ಪ್ರಕಾರ ರಾತ್ರಿ ಏಳು ಗಂಟೆ ಅಥವಾ ಅದಕ್ಕಿಂತ ಕಡಿಮೆ ಅವಧಿಯಷ್ಟು ನಿದ್ದೆ ಮಾಡುವವರು ಒಂದು ಗಂಟೆ ಮೊದಲೆ ನಿದ್ದೆ ಮಾಡುವುದರಿಂದ ರಕ್ತದೊತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದಂತೆ. ಇದರಿಂದ ಹೃದಯಾಘಾತದ ಪ್ರಮಾಣವು ಇವರಲ್ಲಿ ಕಡಿಮೆಯಾಗುತ್ತದೆಯಂತೆ.

ಕಾಲುಗಳು ; ನಿಮ್ಮ ಸಮತೋಲನವನ್ನು ಒಮ್ಮೆ ಪರೀಕ್ಷಿಸಿಕೊಳ್ಳಿ:

ಕಾಲುಗಳು ; ನಿಮ್ಮ ಸಮತೋಲನವನ್ನು ಒಮ್ಮೆ ಪರೀಕ್ಷಿಸಿಕೊಳ್ಳಿ:

ನಿಮ್ಮ ದೇಹದ ಅಂಗಗಳನ್ನು ಸಮತೋಲನದಲ್ಲಿ ಕಾಯ್ದುಕೊಳ್ಳಿ. ಪ್ರತಿದಿನ ನಿಮ್ಮ ಕಾಲುಗಳ ಮೇಲೆ ದೇಹದ ಭಾರವನ್ನು ಸಮತೋಲನಗೊಳಿಸುವ ವ್ಯಾಯಾಮವನ್ನು ಮಾಡಿ. ಇದರಿಂದ ನಿಮ್ಮ ಕಾಲುಗಳಲ್ಲಿರುವ ಸ್ನಾಯುಗಳ ಶಕ್ತಿಯನ್ನು ಹೆಚ್ಚಿಸಬಹುದು. ಜೊತೆಗೆ ಇವು ತಮ್ಮ ಕಾರ್ಯಕ್ಷಮತೆಯನ್ನು ಸಹ ಹೆಚ್ಚಿಸಿಕೊಂಡು ನಿಮಗೆ ಒಳ್ಳೆಯ ನಿಲುವನ್ನು ಒದಗಿಸಲು ನೆರವಾಗುತ್ತದೆ. ಜೊತೆಗೆ ವಯಸ್ಸಾದಂತೆ, ಶಕ್ತಿ ವಿಹೀನವಾಗುವ ಅಪಾಯವನ್ನು ಸಹ ತಡೆದುಕೊಳ್ಳುತ್ತವೆ.

ಮಂಡಿ; ಮಂಡಿಯ ಉರಿಯೂತವವನ್ನು ನಿವಾರಿಸುವ ಆಹಾರ ಸೇವಿಸಿ:

ಮಂಡಿ; ಮಂಡಿಯ ಉರಿಯೂತವವನ್ನು ನಿವಾರಿಸುವ ಆಹಾರ ಸೇವಿಸಿ:

ಉರಿಯೂತವು ಕಾರ್ಟಿಲೇಜ್ ಡಿಟಿರಿಯೊರೇಷನ್ ಎಂಬ ಅರ್ಥಿರಿಟಿಸ್ ಕಾರಕ ನ್ಯೂನತೆಯಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತದೆ. ಅದಕ್ಕಾಗಿ ಉರಿಯೂತವನ್ನು ನಿವಾರಿಸುವ ಆಹಾರಗಳಾದ ಗ್ರೀನ್ ಟೀ, ಬೆರ್ರಿಗಳು, ಕೊಬ್ಬಿನಾಂಶವಿರುವ ಮೀನುಗಳು, ಎಕ್ಸ್‌ಟ್ರಾ ವರ್ಜಿನ್ ಆಲೀವ್ ಆಯಿಲ್, ಕೆಂಪು ದ್ರಾಕ್ಷಿಗಳು ಮತ್ತು ಸೇಬು, ಬೆಳ್ಳುಳ್ಳಿ, ಈರುಳ್ಳಿ, ಕಿತ್ತಳೆ, ಹಳದಿ ಹಣ್ಣುಗಳು , ತರಕಾರಿಗಳು, ಶುಂಠಿ, ಅರಿಶಿನ ಮುಂತಾದ ಮಸಾಲೆ ಪದಾರ್ಥಗಳಂತಹ ಫ್ರೀ ರಾಡಿಕಲ್ಸ್‌ಗಳನ್ನು ಸೇವಿಸುವುದು ಉತ್ತಮ.

English summary

Simple tricks to boost health

Why not try something small that will instantly boost your health while you work towards the long-term goals? Here are some instant health boosters that will leave you feeling much better top to toe
X
Desktop Bottom Promotion