For Quick Alerts
ALLOW NOTIFICATIONS  
For Daily Alerts

ನಿಮ್ಮ ಮಾನಸಿಕ ಆರೋಗ್ಯವನ್ನು ಹೀಗೆ ಸುಧಾರಿಸಿ

|

ಜೀವನದಲ್ಲಿ ಮಾನಸಿಕ ಆರೋಗ್ಯ ಮತ್ತು ದೈಹಿಕ ಆರೋಗ್ಯವಿದ್ದರೆ ಮಾತ್ರ ಆ ಜೀವನ ಸುಂದರವಾಗಿರುತ್ತದೆ. ಮಾನಸಿಕವಾಗಿ ನಾವು ಬಳಲಿದ್ದರೆ ಆ ಜೀವನ ಸಪ್ಪೆಯಾಗುತ್ತದೆ ಮತ್ತು ಜೀವನ ಶೂನ್ಯ ಎಂದೇ ನಮ್ಮ ಮನದಲ್ಲಿ ಮೂಡುತ್ತದೆ. ಹಾಗಿದ್ದರೆ ಮಾನಸಿಕ ನೆಮ್ಮದಿ ಪಡೆದುಕೊಳ್ಳಲು ನಾವು ಮಾಡಬೇಕಾದ್ದು ಏನು ಎನ್ನುವ ಪ್ರಶ್ನೆ ನಿಮ್ಮನ್ನು ಕಾಡುತ್ತಿದೆಯೇ? ಹಾಗಾದರೆ ಇಲ್ಲಿದೆ ನೋಡಿ ಸೂಕ್ತ ಸಲಹೆ

ದೈಹಿಕ ಹಾಗೂ ಮಾನಸಿಕ ಸಮಸ್ಯೆಗೆ ಮದ್ದು-ಜಾಗಿಂಗ್

ಪ್ರಶಾಂತವಾಗಿರುವ ಮನಸ್ಸು ಕೂಡ ಒಮ್ಮೊಮ್ಮೆ ಅಲ್ಲೋಲ ಕಲ್ಲೋಲವಾಗುತ್ತದೆ. ಜೀವನವೇ ಬೇಡವೆಂಬ ಜಿಗುಪ್ಸೆ ಮನದಲ್ಲಿ ಮೂಡುತ್ತದೆ. ಆಗ ನಮ್ಮ ನೆರವಿಗೆ ಬರುವುದು ಮಾನಸಿಕ ಆರೋಗ್ಯವಾಗಿದೆ.

ಈ ಶಾಂತಿಯನ್ನು ಕಾಪಾಡಲು ಹಾಗೂ ಮಾನಸಿಕವಾಗಿ ಸುದೃಢವಾಗಿರಲು ನಾವು ಚಿಂತನೆಯನ್ನು ನಡೆಸಬೇಕಾಗುತ್ತದೆ. ಹಾಗಿದ್ದರೆ ಮಾನಸಿಕ ಶಾಂತಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹೇಗೆ ಎಂಬುದನ್ನು ಈ ಸರಳವಾದ ಲೇಖನದಲ್ಲಿ ನಾವು ಸರಳವಾದ ವಿಧಾನದಲ್ಲಿ ತೋರಿಸುತ್ತಿದ್ದೇವೆ.

ತೀವ್ರ ಮಾನಸಿಕ ಒತ್ತಡವನ್ನು ಹೊರದಬ್ಬುವ 10 ಮಸಾಜ್

ಹೊರಗೆ ಅಡ್ಡಾಡುವುದು:

ಹೊರಗೆ ಅಡ್ಡಾಡುವುದು:

ಜಿಮ್‌ನ ಬಂಧಿಸುವ ವಾತಾವರಣಕ್ಕೆ ಸ್ವಲ್ಪ ಹೊತ್ತಾದರೂ ವಿದಾಯ ಹೇಳಿ. ಸ್ವಚ್ಛ ಪರಿಸರದಲ್ಲಿ ಓಡಾಡಿ. ಹೊರಗೆ ಅಡ್ಡಾಡುವುದು ನಿಮಗೆ ಮಾನಸಿಕ ಆರೋಗ್ಯದೊಂದಿಗೆ ದೈಹಿಕ ಆರೋಗ್ಯವನ್ನೂ ನೀಡುತ್ತದೆ. ಇದರಿಂದ ನಿಮ್ಮ ಮನಸ್ಸು ಹಗುರಾಗಿ ಹೃದಯ ಶುಭ್ರವಾಗುತ್ತದೆ. ಮಾನಸಿಕ ತುಮುಲ ಒತ್ತಡ ದೂರಾಗುತ್ತದೆ.

ವಿಟಮಿನ್ ಬಿ12 ತೆಗೆದುಕೊಳ್ಳಿ:

ವಿಟಮಿನ್ ಬಿ12 ತೆಗೆದುಕೊಳ್ಳಿ:

ವಿಟಮಿನ್‌ಗಳ ಸೇವನೆ ದೇಹಕ್ಕೆ ಅತ್ಯವಶ್ಯಕವಾದುದು ಎಂಬುದು ನಮಗೆಲ್ಲಾ ತಿಳಿದಿದೆ ಆದರೆ ಬಿ12 ಮಾತ್ರೆಯ ಬಗ್ಗೆ ತಿಳಿದಿದ್ದೀರಾ. ಈ ವಿಟಮಿನ್ ಮಾತ್ರೆ ಮಾನಸಿಕ ಒತ್ತಡವನ್ನು ದೂರಾಗಿಸಿ ನಿಮಗೆ ಸುದೃಢ ಚಿಂತನೆಯನ್ನು ನೀಡುತ್ತದೆ. ಇದರೊಂದಿಗೆ ಇತರ ಆಹಾರಗಳಾದ ಹಾಲು, ತರಕಾರಿ ಮೊಟ್ಟೆಯನ್ನೂ ಕೂಡ ನೀವು ಸೇವಿಸಬೇಕು.

ಗುರಿ ನಿಶ್ಚಿತವಾಗಿರಲಿ:

ಗುರಿ ನಿಶ್ಚಿತವಾಗಿರಲಿ:

ನಿಮ್ಮ ಜೀವನದಲ್ಲಿ ಯಶಸ್ಸು ನಿಮ್ಮ ಸೋಪಾನವಾಗಿರಲಿ. ನಿಮ್ಮ ಜೀವನದ ಗುರಿ ನಿಮ್ಮನ್ನು ಮುಂದಕ್ಕೆ ಕೊಂಡೊಯ್ಯುವಲ್ಲಿ ಸಹಕಾರಿಯಾಗಿರುತ್ತದೆ. ಗುರಿಯಿಲ್ಲದ ಜೀವನ ಸೂತ್ರವಿಲ್ಲದ ಗಾಳಿಪಟದಂತೆ. ಆದ್ದರಿಂದ ನಿರ್ದಿಷ್ಟ ಗುರಿಯನ್ನು ಜೀವನದಲ್ಲಿ ಇರಿಸಿಕೊಂಡು ಮುಂದುವರೆಯಿರಿ.

ಸಮಧುರ ಸಂಗೀತ ಆಲಿಸಿ:

ಸಮಧುರ ಸಂಗೀತ ಆಲಿಸಿ:

ನಿಮ್ಮ ಮನಸ್ಸಿಗೆ ಮುದ ನೀಡುವ ಸಂಗೀತ ಖಂಡಿತ ನಿಮ್ಮ ಮಾನಸಿಕ ಒತ್ತಡವನ್ನು ದೂರಾಗಿಸುತ್ತದೆ. ಆದ್ದರಿಂದ ಸುಮಧುರವಾದ ಸಂಗೀತವನ್ನು ಆಲಿಸಿ. ಸಂಗೀತ ಕಛೇರಿಗೆ ಭೇಟಿ ನೀಡಿ. ಅಲ್ಲಿನ ವಾತಾವರಣ ಖಂಡಿತ ನಿಮ್ಮ ಮನಸ್ಸನ್ನು ಮಾರ್ಪಡಿಸಿ ಅಲ್ಲಿ ಸಂತೋಷ ನೆಲೆಗೊಳ್ಳುವಂತೆ ಮಾಡುತ್ತದೆ.

ಲೇವೆಂಡರ್ ಎಣ್ಣೆ ಬಳಸಿ:

ಲೇವೆಂಡರ್ ಎಣ್ಣೆ ಬಳಸಿ:

ನೀವು ಮಲಗುವಾಗ ದಿಂಬಿಗೆ ಲೇವೆಂಡರ್ ಎಣ್ಣೆಯನ್ನು ಹಚ್ಚಿ ಮಲಗಿ. ಇದು ನಿಮ್ಮ ಮಾನಸಿ ತುಮುಲವನ್ನು ದೂರಾಗಿಸಿ ಒಳ್ಳೆಯ ನಿದ್ದೆಯನ್ನು ದಯಪಾಲಿಸುತ್ತದೆ ಎಂದು ಅಧ್ಯಯನಗಳು ದೃಢಪಡಿಸಿವೆ. ಅಥವಾ ಲೇವೆಂಡರ್ ಟೀಯನ್ನು ಸೇವಿಸುವುದೂ ಕೂಡ ಆರೋಗ್ಯದ ದೃಷ್ಟಿಯಿಂದ ಉತ್ತಮವೇ.

ಹಣ ವಿನಿಯೋಗ:

ಹಣ ವಿನಿಯೋಗ:

ನಿಮ್ಮ ಮನಕ್ಕೆ ಸಂತೋಷ ಕೊಡುವುದರ ಮೇಲೆ ನಿಮ್ಮಲ್ಲಿರುವ ದುಡ್ಡನ್ನು ವಿನಿಯೋಗಿಸಿ. ದುಂದು ವೆಚ್ಚ ಮಾಡಿ ನಂತರ ಅದಕ್ಕಾಗಿ ಕೊರಗದಿರಿ. ನೀವು ಯಾವುದಕ್ಕೆ ಹಣ ವಿನಿಯೋಗಿಸುತ್ತಿದ್ದೀರಿ ಎಂಬುದರ ಮೇಲೆ ನಿಮ್ಮ ಗಮನವಿರಲಿ. ಇದು ನಿಮಗೆ ಸಂತೋಷ ಕೊಡುವುದಿದ್ದರೆ ಮಾತ್ರ ಅದಕ್ಕೆ ಮುಂದುವರೆಯಿರಿ.

ಧ್ಯಾನ:

ಧ್ಯಾನ:

ಧ್ಯಾನ ನಮ್ಮ ಮಾನಸಿಕ ಸ್ವಾಸ್ಥ್ಯಕ್ಕೆ ಅತಿ ಮುಖ್ಯವಾದುದು. ಧ್ಯಾನ ಹಾಗೂ ಯೋಗ ಜೀವನದ ಪ್ರತೀ ಕ್ಷಣವನ್ನೂ ಸುಖದಿಂದಿರುವಂತೆ ನೋಡಿಕೊಳ್ಳುತ್ತದೆ. ಆದ್ದರಿಂದ ಮಾನಸಿಕ ಹಾಗೂ ದೈಹಿಕ ಸ್ವಾಸ್ಥ್ಯಕ್ಕೆ ಧ್ಯಾನ ಯೋಗ ಅತಿ ಪ್ರಧಾನವಾದುದು.

Story first published: Thursday, May 8, 2014, 10:30 [IST]
X
Desktop Bottom Promotion