For Quick Alerts
ALLOW NOTIFICATIONS  
For Daily Alerts

ಕೇವಲ 10 ದಿನಗಳಲ್ಲಿ ನಿಮ್ಮ ದೇಹದ ತೂಕವನ್ನು ಕಡಿಮೆಮಾಡಿಕೊಳ್ಳಲು ಸರಳ ಸಲಹೆಗಳು

By Viswanath S
|

ನೀವು ಸೇವಿಸುವ ಆಹಾರದ ಬಗ್ಗೆ ಕಾಳಜಿಯಿಟ್ಟುಕೊಂಡು ಯಾವುದಾದರೂ ಪಾರ್ಟಿಗೆ ಹೋದಾಗ ಅಲ್ಲಿಟ್ಟಿರುವ ಅಕರ್ಷಕ ಆಹಾರಗಳನ್ನು ತಿನ್ನಲು ಆದಷ್ಟೂ ಬಲವಂತದಿಂದ ತಡೆದುಕೊಳ್ಳುತ್ತೀರಿ. ನೀವು ಹಾಗೆ ಸಫಲವಾದರೂ ಕೊನೆಯಲ್ಲಿ ರುಚಿಕರವಾದ ಸಿಹಿಯಾದ ಡಸರ್ಟ್‌ಅನ್ನು ತಿನ್ನದೇ ಇರಲು ಆಗುವುದಿಲ್ಲ.

ಮುಂದಿನಬಾರಿ ನೀವು ನಿಮ್ಮ ತೂಕವನ್ನು ಪರೀಕ್ಷಿಸಿದಾಗ ಅದೇನಾದರು ಕಡಿಮೆಯಾಗದಿದ್ದಲ್ಲಿ ನಿಮಗೆ ಸ್ವಲ್ಪ ಗಾಬರಿಯಾಗುವುದು ಸಹಜವೇ ಸರಿ. ಆಗ ನಿಮ್ಮ ತಪ್ಪು ಅರಿವಾಗುತ್ತದೆ. ಇದು ಪ್ರತಿಯೊಬ್ಬರಿಗೂ ಅನ್ವಯಿಸುತ್ತದೆ. ಪ್ರತಿ ಮಹಿಳೆಯೂ ತನ್ನ ತೂಕವನ್ನು ಇಳಿಸಿಕೊಂಡು ಆಕರ್ಷಕವಾಗಿ ಕಾಣಿಸಿಕೊಳ್ಳಲು ಬಯಸಿದರೂ ಅಲಂಕಾರವಾಗಿಟ್ಟಿರುವ ಖಾದ್ಯಗಳನ್ನು ನೋಡಿದಾಗ ಸ್ವಲ್ಪ ಸೋಮಾರಿತನ ಮತ್ತು ಪ್ರಲೋಭನೆಗೊಳಗಾಗುತ್ತೀರಿ.

ಹಾಗಾದರೆ ಇನ್ನೇಕೆ ತಡ ? ಕೆಲವೊಂದು ಸರಳವಾದ ಡಯಟ್ ಸಲಹೆಗಳನ್ನು ಈ ಕೆಳಗೆ ನೀಡಲಾಗಿದೆ. ಕೇವಲ 10 ದಿನಗಳಲ್ಲಿ ತೂಕಗಳನ್ನು ಕಡಿಮೆಗೊಳಿಸಲು ಬಯಸುವವರು ಖಂಡಿತವಾಗಿಯೂ ಇಂತಹ ಸಲಹೆಗಳನ್ನು ತಪ್ಪದೇ ಪಾಲಿಸಲೇಬೇಕು.

ತೂಕ ಇಳಿಸಿಕೊಳ್ಳಲು ಆಯುರ್ವೇದ ಸೂಚಿಸುವ ಸುಲಭ ವಿಧಾನಗಳು

ಬೊಜ್ಜು ಶರೀರ, ಒಂದು ಸಾಮಾನ್ಯ ಸಮಸ್ಯೆ

ಬೊಜ್ಜು ಶರೀರ, ಒಂದು ಸಾಮಾನ್ಯ ಸಮಸ್ಯೆ

ಒಮ್ಮೆ ಬೊಜ್ಜುಬಂದರೆ ಅದು ಇನ್ನಿತರ ಕಾಯಿಲೆಗಳಾದ ಮಧುಮೇಹ ಮತ್ತು ಹೃದಯಕ್ಕೆ ಸಂಬಂಧಪಟ್ಟ ದೀರ್ಘಕಾಲದ ತೀವ್ರ ಕಾಯಿಲೆಯಾಗಿ ಅದನ್ನು ಗುಣಪಡಿಸಲು ಬಹಳ ಕಷ್ಟಸಾಧ್ಯ. ಬೊಜ್ಜಿನ ಪ್ರಧಾನ ಪಾತ್ರದಿಂದ ಸಾಮಾನ್ಯವಾಗಿ ಇನ್ನಿತರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಆದ್ದರಿಂದ ಅದು ಮುಂದುವರೆಯುವುದನ್ನು ಹೇಗಾದರೂ ನಿಲ್ಲಿಸಬೇಕು. ಭವ್ಯ ಮತ್ತು ಆಕರ್ಷಕ ಹೋಟೆಲುಗಳು, ಜಂಕ್ ಆಹಾರದ ಜಾಯಿಂಟ್‌ಗಳು ಮತ್ತು ಐಸ್ಕ್ರೀಮ್ ಪಾರ್ಲರ್‌ಗಳು ಹಾಗೂ ಅಲ್ಲಿ ಪ್ರದರ್ಶಿಸುವ ಬಾಯಲ್ಲಿ ನೀರೂರಿಸುವ ಆಹಾರಗಳೇ ಈ ಪರಿಸ್ಥಿತಿಗೆ ಮುಖ್ಯಕಾರಣ. ಈ ಸಮಸ್ಯೆ ಸದ್ಯಕ್ಕಂತೂ ಬಹಳ ಹದಗೆಟ್ಟು ಹೋಗಿದೆ. ಇದರ ಪರಿಣಾಮ ಮಕ್ಕಳಿಗೆ ಆಗುವಂತೆ ವಯಸ್ಕರಿಗೂ ಆಗುತ್ತಿದೆ. ನಿಮಗೆ ಪ್ರತಿ ಮೂರನೇ ವ್ಯಕ್ತಿಯು ನಿಮ್ಮನ್ನು ನೋಡಿ ತೂಕವನ್ನಿಸಿಳಿಕೊಳ್ಳಿ ಎಂದು ಉಪದೇಶಿದರೂ ಸಹ ನೀವು ಅದಕ್ಕೆ ಕಿವಿಗೊಟ್ಟಂತಿಲ್ಲ.

ಕಾಫಿ ಅಧವಾ ಟೀ ಬದಲು ಗ್ರೀನ್ ಟೀ

ಕಾಫಿ ಅಧವಾ ಟೀ ಬದಲು ಗ್ರೀನ್ ಟೀ

ಬೆಳಗೆದ್ದತಕ್ಷಣ ಖಾಲಿಹೊಟ್ಟೆಯಲ್ಲಿ ಒಂದು ಕಪ್ ಬಿಸಿ ಬಿಸಿ ಗ್ರೀನ್ ಟೀ ಕುಡಿದರೆ ನಿಮ್ಮ ಶರೀರದಲ್ಲಿರುವ ಜೀವಾಣು ವಿಷಗಳನ್ನು ನಿವಾರಿಸುತ್ತದೆ. ಇದು ಮಲಬದ್ಧತೆಯ ಸಮಸ್ಯೆಯನ್ನೂ ಪರಿಹರಿಸುತ್ತದೆ. ಗ್ರೀನ್ ಟೀಯಲ್ಲಿ ಕಡಿಮೆ ಕ್ಯಾಲೊರಿ ಇರುವುದರಿಂದ ನಿಮ್ಮ ದಿನವನ್ನು ಟೀ ಅಥವಾ ಕಾಫೀ ಬದಲು ಗ್ರೀನ್ ಟೀ ಕುಡಿಯುವುದು ನಿಮ್ಮ ತೂಕನಷ್ಟಕ್ಕೆ ಒಂದು ಉತ್ತಮ ಸಲಹೆ.

ಬಿಸಿನೀರಲ್ಲಿ ನಿಂಬೆಹಣ್ಣಿನ ರಸ ಮತ್ತು ಜೇನುತುಪ್ಪ

ಬಿಸಿನೀರಲ್ಲಿ ನಿಂಬೆಹಣ್ಣಿನ ರಸ ಮತ್ತು ಜೇನುತುಪ್ಪ

ಬಿಸಿನೀರಲ್ಲಿ ನಿಂಬೆಹಣ್ಣಿನ ರಸ ಮತ್ತು ಜೇನುತುಪ್ಪವು ತೂಕನಷ್ಟಕ್ಕೆ ಒಂದು ದೊಡ್ಡ ತಂತ್ರ. ಇದನ್ನು ಹೀಗೆ ಮಾಡಿ:

*ಒಂದು ಚಮಚ ನಿಂಬೆರಸಕ್ಕೆ ಅರ್ಧ ಚಮಚ ಜೇನುತುಪ್ಪವನ್ನು ಬಿಸಿ ಅಥವಾ ಬೆಚ್ಚಗಿರುವ ನೀರಿಗೆ ಬೆರಸಿ.

*ಬೆಳಗ್ಗೆ ಎದ್ದಮೇಲೆ ಖಾಲಿಹೊಟ್ಟೆಯಲ್ಲಿ ಈ ಮಿಶ್ರಣವನ್ನು ಕುಡಿದರೆ 10 ದಿನಗಳಲ್ಲಿ ನಿಮ್ಮ ತೂಕನಷ್ಟಕ್ಕೆ ಸಹಾಯಮಾಡುತ್ತದೆ.

ಕಾರ್ಬೋಹೈಡ್ರೇಟ್ಸ್ ಸೇವನೆಯನ್ನು ಕಡಿಮೆಮಾಡಿ

ಕಾರ್ಬೋಹೈಡ್ರೇಟ್ಸ್ ಸೇವನೆಯನ್ನು ಕಡಿಮೆಮಾಡಿ

ಅನ್ನದಲ್ಲಿ ಬಹಳಷ್ಟು ಕ್ಯಾಲೊರಿ ಮತ್ತು ಕಾರ್ಬೋಹೈಡ್ರೇಟ್ಸ್ ಇರುತ್ತವೆ. ಅನ್ನದ ಪ್ರಮಾಣವನ್ನು ಕಡಿಮೆಮಾಡಿದರೆ ಶರೀರದ ತೂಕವನ್ನು ಕಡಿಮೆಮಾಡಲು ಸಹಕಾರಿಯಾಗುತ್ತದೆ. ಭಾರತದಲ್ಲಿ, ವಿಶೇಷವಾಗಿ ದಕ್ಷಿಣಭಾರತದಲ್ಲಿ ಜನರು ಇಡ್ಲಿ ಅಥವಾ ದೋಸೆಯಿಂದ ದಿನದ ಆಹಾರವೆಂದು ಪ್ರಾರಂಭಿಸುತ್ತಾರೆ. ಈ ಭಕ್ಷ್ಯಗಳು ಮುಖ್ಯವಾಗಿ ಅಕ್ಕಿಯಿಂದ ಮಾಡಿರುತ್ತಾರೆ. ಕೆಲವರು ಊಟಕ್ಕೂ ಸಹ ಇದನ್ನೇ ಬಳಸುತ್ತಾರೆ. ನಿಮ್ಮ ತೂಕ ಕಡಿಮೆಯಾಗಬೇಕೆಂದಿದ್ದರೆ ಕಾರ್ಬೋಹೈಡ್ರೇಟ್ಸ್ ಇರುವ ಈ ಭಕ್ಷ್ಯಗಳನ್ನು ಆದಷ್ಟೂ ಕಡಿಮೆಮಾಡುವುದು ಅತ್ಯಗತ್ಯ.

ಪ್ರೋಟೀನ್ ಸೇವನೆಯನ್ನು ಹೆಚ್ಚಿಸಿ

ಪ್ರೋಟೀನ್ ಸೇವನೆಯನ್ನು ಹೆಚ್ಚಿಸಿ

ಪ್ರೋಟೀನ್ ಸಹಾಯದಿಂದ ಮಾಂಸಖಂಡಗಳನ್ನು ವೃದ್ಧೀಕರಿಸುವುದರಿಂದ ಶರೀರದ ಕೊಬ್ಬಿನಾಂಶವನ್ನು ಕಡಿಮೆಮಾಡಲು ಸಹಾಯವಾಗುತ್ತದೆ. ಅದು ಬಿಡಿ ಬಿಡಿಯಾಗಿರುವ ಕೊಬ್ಬನ್ನು ಸ್ನಾಯುಗಳನ್ನಾಗಿ ಪರಿವರ್ತಿಸುತ್ತದೆ. ಆದ್ದರಿಂದ ತಿನ್ನುವ ಆಹಾರದಲ್ಲಿ ಕಾರ್ಬೋಹೈಡ್ರೇಟ್ಸ್ ಇರುವ ಆಹಾರವನ್ನು ಬದಲಿಸಿ ಪ್ರೋಟೀನ್ ಪ್ರಮಾಣವನ್ನು ಹೆಚ್ಚಿಸಿ ನಿಮ್ಮ ತೂಕವನ್ನು ಇಳಿಸಿಕೊಳ್ಳಿ.

ಮಲಬದ್ದತೆಯ ಸಮಸ್ಯೆಯನ್ನು ತಪ್ಪಿಸಿ

ಮಲಬದ್ದತೆಯ ಸಮಸ್ಯೆಯನ್ನು ತಪ್ಪಿಸಿ

ಮಲಬದ್ಧತೆಯಿಂದ ತೂಕವನ್ನಿಳಿಸಲು ಬಹಳಷ್ಟು ತಡಮಾಡುತ್ತದೆ. ಇದಕ್ಕೆ ಕಾರಣ ನಿಮ್ಮ ಶರೀರದಿಂದ ವಿಷಕಾರಿ ಮತ್ತು ತ್ಯಾಜ್ಯ ಘಟಕಗಳನ್ನು ಹೊರಗೆ ಹಾಕಿ ಖಾಲಿಮಾಡದೇ ಇರುವುದು. ಇದನ್ನು ಸರಿಪಡಿಸಲು ಆದಷ್ಟು ಹೆಚ್ಚಾಗಿ ನೀರು ಮತ್ತು ಪಾನೀಯಗಳನ್ನು ಕುಡಿಯಿರಿ. ಹಾಗೂ ಹೆಚ್ಚು ನಾರಿನಾಂಶವಿರುವ ಹಣ್ಣುಗಳು, ಅಂದರೆ ಸೇಬು, ಓಟ್ಸ್ ಮತ್ತು ಹಸಿರು ತರಕಾರಿಗಳು, ಇವುಗಳನ್ನು ಸೇವಿಸಿರಿ. ಬಾಳೆಹಣ್ಣು ಅಥವಾ ಪರಂಗಿ ಹಣ್ಣು ತೆಗೆದುಕೊಳ್ಳಿ; ಇವುಗಳಲ್ಲಿ ನೈಸರ್ಗಿಕ ವಿರೇಚಕ ಮತ್ತು ವಿಟಮಿನ್‌ಗಳಿರುತ್ತವೆ.

ಜಂಕ್ ಆಹಾರಗಳ ಸೇವನೆಯನ್ನು ತಪ್ಪಿಸಿ

ಜಂಕ್ ಆಹಾರಗಳ ಸೇವನೆಯನ್ನು ತಪ್ಪಿಸಿ

ನಿಮಗೆ 10 ದಿನಗಳಲ್ಲಿ ತೂಕವನ್ನಿಳಿಸಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ಜಂಕ್ ಆಹಾರಗಳನ್ನು ಪೂರ್ಣವಾಗಿ ತಪ್ಪಿಸಿ. ಜಂಕ್ ಆಅಹಾರಗಳು, ಅಂದರೆ: ಪಿಜ್ಜ, ಬರ್ಗರ್ಸ್, ಸಾಸೇಜಸ್, ಇತರೆ, ಇವೆಲ್ಲದರಲ್ಲೂ ಯಾವ ಪೌಷ್ಟಿಕ ಮೌಲ್ಯಗಳನ್ನು ಹೊಂದಿರುವುದಿಲ್ಲ. ಅವುಗಳಿಂದ ನಿಮಗೆ ಸಿಗುವುದೆಂದರೆ ಕೇವಲ ಕೊಬ್ಬು ಮತ್ತು ನಿಮ್ಮ ತೂಕ ಹೆಚ್ಚಿಸುವುದು. ಜಂಕ್ ಆಹಾರಗಳಿಂದ ತೂಕ ಹೆಚ್ಚಾಗುವುದೆಂದು ಅತ್ಯಂತ ಸಾಮಾನ್ಯ ಸಂಗತಿಯಾಗಿದೆ. ಇಂತಹ ಆಹಾರಗಳಿಂದ ದೂರವಿರುವುದು ಒಳ್ಳೆಯದು.

ಸೋಯಾ ಪ್ರೋಟೀನ್

ಸೋಯಾ ಪ್ರೋಟೀನ್

ಸೋಯಾ ಪ್ರೋಟೀನ್ ಸಸ್ಯಗಳ ಮೂಲವಾಗಿದ್ದು, ಅದರಲ್ಲಿ ಕೊಬ್ಬಿನಾಂಶ ಕಡಿಮೆಯಿರುವುದರಿಂದ ನಿಮ್ಮ ತೂಕವನ್ನಿಳಿಸಲು ಸಹಾಯಮಾಡುತ್ತದೆ. ನಿಮ್ಮ ಆಹಾರದಲ್ಲಿ ಸೋಯಾ ಪೋಟಿನ್ ಒಂದು ಸರಿಯಾದ ಪ್ರಮಾಣದಲ್ಲಿದ್ದರೆ ನಿಮ್ಮ ತೂಕವನ್ನು ಇನ್ನೂ ಕಡಿಮೆಮಾಡಲು ಸಹಾಯವಾಗುತ್ತದೆ. ನಿಮ್ಮ ಅಡುಗೆಯಲ್ಲಿ ಸೋಯಾ ಗಟ್ಟಿಗಳು, ಸೋಯಾ ಕಾಳುಗಳು, ಮಿಸೋ (ಸೋಯಬೀನನ್ನು ಹುದುಗಿಸಿ ತಯಾರಿಸಿದ ಪದಾರ್ಥ), ಟೆಂಪೆ ಮತ್ತು ಟೊಫು ಇವುಗಳೆನ್ನೆಲ್ಲ ಉಪಯೋಗಿಸಿ. ಸೋಯಾ ಪದಾರ್ಥಗಳಲ್ಲಿ ಕಡಿಮೆ ಕ್ಯಾಲೊರಿಗಳಿದ್ದು ಎಲ್ಲಾ ಅಗತ್ಯ ಅಮೀನೋ ಆಮ್ಲಗಳನ್ನು ಹೊಂದಿವೆ. ನಿಸ್ಸಂದೇಹವಾಗಿ ಸೋಯಾ ಹಾಲು ಮತ್ತು ಟೊಫು ಹೆಚ್ಚು ಪ್ರಖ್ಯಾತವಾಗಿವೆ. ಟೊಫುವನ್ನು ಸಲಾಡಿನಲ್ಲಿ ಮತ್ತು ಮಾಂಸದ ಜೊತೆಗೆ ತರಕಾರಿ ಭಕ್ಷ್ಯಗಳಲ್ಲಿ ಉಪಯೋಗಿಸಬಹುದು. ಇದರ ಬಳಕೆಯಿಂದ ಭಕ್ಷ್ಯಗಳಿಗೆ ಒಳ್ಳೆಯ ರುಚಿ ಬರುತ್ತದೆ ಮತ್ತು ನಿಮ್ಮ ತೂಕವನ್ನೂ ನಿಯಂತ್ರಿಸುತ್ತದೆ.

ದಿನಕ್ಕೆ ಎರಡುಬಾರಿ ಪ್ರೋಟೀನ್ ಊಟ

ದಿನಕ್ಕೆ ಎರಡುಬಾರಿ ಪ್ರೋಟೀನ್ ಊಟ

ಒಂದು ಪ್ರೋಟೀನ್ ಭರಿತ ಊಟವು ಅಗಾಧವಾಗಿ ತೂಕನಷ್ಟಕ್ಕೆ ಉತ್ತೇಜನಕೊಡುತ್ತದೆ. ಆದ್ದರಿಂದ ದಿನಕ್ಕೆ ಎರಡುಬಾರಿ ಅಧಿಕ ಪ್ರೋಟೀನ್ ಇರುವ ಊಟವನ್ನು ಸೇವಿಸಲು ಅನಿವಾರ್ಯವಾಗಿದೆ. ಇದನ್ನು ನಿಮ್ಮ ಬೆಳಗಿನ ತಿಂಡಿ (ಬ್ರೇಕ್ಫಾಸ್ಟ್) ಮತ್ತು ರಾತ್ರಿ ಊಟದಲ್ಲಿ ಸೇರಿಸಿಕೊಳ್ಳಿ. ಇದು ಅಧಿಕ ಪ್ರೋಟೀನ್ ಇರುವ ಪ್ರೋಟೀನ್ ಶೇಕ್ಸ್ ಅಥವಾ ಸಲಾಡ್ ಆಗಿರಬಹುದು.

ಕ್ಯಾಲೊರಿ ಕಡಿಮೆಯಿರುವ ಆಹಾರಗಳನ್ನು ಸೇವಿಸಿ

ಕ್ಯಾಲೊರಿ ಕಡಿಮೆಯಿರುವ ಆಹಾರಗಳನ್ನು ಸೇವಿಸಿ

ನಿಮ್ಮ ತೂಕವನ್ನು ಹತ್ತು ದಿನಗಳಲ್ಲಿ ಇಳಿಸಿಕೊಳ್ಳುವ ತಂತ್ರವೇನೆಂದರ ಕ್ಯಾಲೊರಿ ಇಲ್ಲದ ಆಹಾರವನ್ನು ಸೇವಿಸುವುದು. ನಿಮ್ಮ ಆಹಾರಗಳಲ್ಲಿ ಬೇಯಿಸಿದ ಆಹಾರಗಳಿರಬೇಕು. ಸಿಹಿಯಾದ ಆಹಾರಗಳು, ಹೆಚ್ಚು ಕೊಬ್ಬಿರುವ ಆಹಾರಗಳು ಮತ್ತು ಎಣ್ಣೆಯಲ್ಲಿ ಕರೆದ ಅಹಾರಗಳನ್ನೆಲ್ಲ ಸೇವಿಸುವುದನ್ನು ತಪ್ಪಿಸಿ.

ತೀವ್ರವಾಗಿ ತಿನ್ನಲು ಬಯಸುವುದನ್ನು ತೊಡೆದುಹಾಕಿ

ತೀವ್ರವಾಗಿ ತಿನ್ನಲು ಬಯಸುವುದನ್ನು ತೊಡೆದುಹಾಕಿ

ಬೊಜ್ಜು ಜನರಿಗೆ ತೀವ್ರವಾಗಿ ಆಹಾರವನ್ನು ತಿನ್ನಬಯಸುವುದು ಸಾಮಾನ್ಯವಾಗಿರುತ್ತದೆ ಮತ್ತು ಅವರಿಗೆ ಇದನ್ನು ನಿಯಂತ್ರಣೆಯಲ್ಲಿಟ್ಟುಕೊಳ್ಳಲು ಸಾಧ್ಯವಾಗುವುದಿಲ್ಲ. ನಿಮಗೆ ತಿನ್ನುವ ಬಯಕೆಯಾದಾಗ ಲಘು ತಿಂಡಿಗಳು ಮತ್ತು ಆಹಾರಗಳನ್ನು ತಿನ್ನದೇ ಹಸಿವನ್ನು ತಡೆಯಲು ಹೆಚ್ಚಾಗಿ ನೀರನ್ನು ಕುಡಿಯಿರಿ.

ಲಘು ತಿಂಡಿಗಳಗೆ ಬದಲಾಗಿ ಮೊಳಕೆಯೊಡೆದ ಕಾಳುಗಳಿಗೆ ಆದ್ಯತೆ ನೀಡಿ

ಲಘು ತಿಂಡಿಗಳಗೆ ಬದಲಾಗಿ ಮೊಳಕೆಯೊಡೆದ ಕಾಳುಗಳಿಗೆ ಆದ್ಯತೆ ನೀಡಿ

ಬೇಯಿಸಿದ ಮೊಳಕೆಕಾಳುಗಳಲ್ಲಿ ಹೆಚ್ಚಿನ ಪೋಷಕಾಂಶಗಳಿರುತ್ತವೆ ಮತ್ತು ಕಡಿಮೆ ಕ್ಯಾಲೊರಿ ಇರುತ್ತದೆ. ಈ ಆಹಾರವನ್ನು ಬೆಳಗಿನ ಆಹಾರದಲ್ಲಿಯೂ ಮತ್ತು ಸಂಜೆಯ ಊಟದಲ್ಲಿಯೂ ಎರಡುಗಂಟೆಗಳ ಮುಂಚೆ ಸೇವಿಸಿರಿ. ನಿಮಗೆ ಇತರೆ ಲಘುತಿಂಡಿಗಳಿಗಿಂತ ಉತ್ತಮ ಪೋಷಾಕಾಂಶಗಳನ್ನು ಒದಗಿಸುತ್ತದೆ. ಹಾಗೂ ನಿಮ್ಮ ತೂಕವನ್ನು ಇಳಿಸಲು ಸಹಾಯಮಾಡುತ್ತದೆ.

 ಒಂದು ದಿನದಲ್ಲಿ ಮೂರುಬಾರಿಗಿಂತಾ ಹೆಚ್ಚುಬಾರಿ ಊಟಮಾಡಬೇಡಿರಿ

ಒಂದು ದಿನದಲ್ಲಿ ಮೂರುಬಾರಿಗಿಂತಾ ಹೆಚ್ಚುಬಾರಿ ಊಟಮಾಡಬೇಡಿರಿ

ಒಂದು ದಿನದಲ್ಲಿ ಸರಿಯಾದ ಊಟವನ್ನು ಮೂರುಬಾರಿಗಿಂತಾ ಹೆಚ್ಚುಬಾರಿ ಮಾಡಬೇಡಿ. ಇದಕ್ಕೂ ಮೇಲಾಗಿ ನಿಮ್ಮ ಮಧ್ಯಾಹ್ನದ ಊಟ ಭಾರಿಯಾಗಿದ್ದು, ಬ್ರೇಕ್ಫಾಸ್ಟ್ ಮತ್ತು ರಾತ್ರಿ ಊಟ ಹಗುರವಾಗಿರಬೇಕು. ನೀವು ಹತ್ತು ದಿನಗಳಲ್ಲಿ ತೂಕವನ್ನಿಳಿಸಲು ಇದು ಸಲಹೆಗಳ ಪಟ್ಟಿಯಲ್ಲಿ ಅತ್ಯಂತ ಮುಖ್ಯವಾಗಿದೆ.

ಸರಿಯಾದ ವ್ಯಾಯಾಮ

ಸರಿಯಾದ ವ್ಯಾಯಾಮ

ಸರಿಯಾದ ವ್ಯಾಯಾಮ ಮಾಡುವುದು ನಿಮ್ಮ ತೂಕವನ್ನಿಳಿಸಲು ಬಹಳ ಮುಖ್ಯವಾದುದು. ನೀವು ಯೋಗ್ಯವಾದ ಶರೀರವನ್ನುಳಿಸಿಕೊಳ್ಳಲು ಸರಳವಾದ ಪರಿಹಾರ: ಸರಿಯಾದ ಆಹಾರ + ಸರಿಯಾದ ವ್ಯಾಯಾಮ = ಯೋಗ್ಯವಾದ ಶರೀರ. ನೀವು ಅನಗತ್ಯವಾಗಿ ವ್ಯಾಯಾಮಮಾಡಲು ಜಿಮ್ಮಿಗೇ ಹೋಗಬೇಕೆಂದಿಲ್ಲ. ಮನೆಯಲ್ಲಿಯೇ ಸರಳ ವ್ಯಾಯಾಮಗಳಿಂದ ಅಂದರೆ ಸಿಟ್‌ಅಪ್ಸ್ (ಯೋಗಾಸನಗಳು ಇತ್ಯಾದಿ), ಹಗ್ಗ ಹಾರುವುದು (ಸ್ಕಿಪ್ಪಿಂಗ್), ಇವುಗಳನ್ನು ದಿನದಲ್ಲಿ ಸುಮಾರು 10 -15 ನಿಮಿಷಗಳ ಕಾಲದಿಂದ ಪ್ರಾರಂಭಿಸಿರಿ. ನೀವು ಬೆಳಗ್ಗೆ ಅಥವ ಸಂಜೆ ವಾಕಿಂಗ್ ಅಥವ ಜಾಗಿಂಗ್ ಮಾಡಲೂ ಬಹುದು.

ಹೆಚ್ಚು ನೀರಿನಾಂಶ ಮತ್ತು ಕಡಿಮೆ ಕ್ಯಾಲೊರಿ ಹೊಂದಿರುವ ಹಣ್ಣುಗಳನ್ನು ಸೇವಿಸಿರಿ

ಹೆಚ್ಚು ನೀರಿನಾಂಶ ಮತ್ತು ಕಡಿಮೆ ಕ್ಯಾಲೊರಿ ಹೊಂದಿರುವ ಹಣ್ಣುಗಳನ್ನು ಸೇವಿಸಿರಿ

ಕಲ್ಲಂಗಡಿ, ಸೌತೆಕಾಯಿ, ಪಪ್ಪಾಯಿ ಮುಂತಾದ ಹಣ್ಣು ತರಕಾರಿಗಳಲ್ಲಿ ಕ್ಯಾಲೊರಿ ಅಂಶವು ಕಡಿಮೆಯಿರುತ್ತದೆ. ಇವುಗಳನ್ನು ನೀವು ಬೆಳಗ್ಗೆ ಅಥವ ಸಂಜೆ ಸಲಾಡ್ ಮಾಡಿಕೊಂಡು ತಿಂದರೆ ನಿಮಗೆ ಬೇಗ ಹೊಟ್ಟೆತುಂಬಿದಂತಿರುತ್ತದೆ. ಈ ತರಹದ ಹಣ್ಣುಗಳಲ್ಲಿ ನೀರಿನಾಂಶ ಹೆಚ್ಚಾಗಿರುತ್ತದೆ ಮತ್ತು ಕ್ಯಾಲೊರಿ ಕಡಿಮೆಯಿರುತ್ತದೆ. ಆದ್ದರಿಂದ ಈ ಹಣ್ಣುಗಳು ನಿಮಗೆ ತೂಕವನ್ನಿಳಿಸಲು ಅತ್ಯಂತ ಸೂಕ್ತವಾಗಿರುತ್ತದೆ.

ಕೆಂಪು ಮಾಂಸವನ್ನು ನಿಷೇಧಿಸಿ

ಕೆಂಪು ಮಾಂಸವನ್ನು ನಿಷೇಧಿಸಿ

ಬೊಜ್ಜಿಗೆ ಕಾರಣವಾಗಿರುವ ಮತ್ತು ಕ್ಯಾನ್ಸರ್‌ನಂತಹ ರೋಗಗಳು ಕೆಂಪು ಮಾಂಸ (ರೆಡ್ ಮೀಟ್) ಬಳಕೆಯಿಂದ ಬರುವುದರಿಂದ ಅತ್ಯಂತ ಅಪಾಯಕಾರಿ. ಆದ್ದರಿಂದ ನೀವು ತೂಕವನ್ನು ಇಳಿಸುವ ಕಾರ್ಯದಲ್ಲಿ ತೊಡಗಿರುವಾಗಲೀ ಅಥವಾ ಹಾಗಿಲ್ಲದಿದ್ದರೂ ಸಹ ಕೆಂಪುಮಾಂಸವನ್ನು ಸಂಪೂರ್ಣವಾಗಿ ನಿಷೇಧಿಸಿ.

ರಸಗಳಬದಲು ಸಲಾಡ್‌ಗೆ ಆದ್ಯತೆ ನೀಡಿ

ರಸಗಳಬದಲು ಸಲಾಡ್‌ಗೆ ಆದ್ಯತೆ ನೀಡಿ

ರಸದ ಆಹಾರಗಳು ಬಹಳ ಶೀಘ್ರ ಜೀರ್ಣವಾಗಿ ದೇಹದಲ್ಲಿ ಉಳಿಯುವುದಿಲ್ಲ ಆದರೆ ಸಲಾಡ್‌ಗಳು ಸುಮಾರು 6 ಗಂಟೆಗಳು ದೇಹದಲ್ಲಿ ನಿಲ್ಲುತ್ತದೆ. ಹೀಗಾಗುವುದರಿಂದ ನಿಮಗೆ ಬಹಳಕಾಲ ಹೊಟ್ಟೆ ತುಂಬಿದಂತಿರುತ್ತದೆ. ರಸದ ಆಹಾರಗಳಿಗೆ ಬದಲಾಗಿ ಸಲಾಡ್‌ಗಳನ್ನು ಸೇವಿಸಿ, ಆದರೆ ಅದಕ್ಕೆ ಬಾಳೆಹಣ್ಣು, ಅನಾನಸ್, ಹಲಸಿನ ಹಣ್ಣು ಅಥವಾ ಇತರ ಹೆಚ್ಚು ಕ್ಯಾಲೊರಿಭರಿತ ಹಣ್ಣುಗಳನ್ನು ಸೇರಿಸಬೇಡಿ.

 ನಿಮ್ಮ ರಕ್ತದಲ್ಲಿನ ಸಕ್ಕರೆಅಂಶದ ಮಟ್ಟವನ್ನು ನಿರ್ವಹಿಸಿ

ನಿಮ್ಮ ರಕ್ತದಲ್ಲಿನ ಸಕ್ಕರೆಅಂಶದ ಮಟ್ಟವನ್ನು ನಿರ್ವಹಿಸಿ

ನಿಮ್ಮ ರಕ್ತದಲ್ಲಿನ ಸಕ್ಕರೆಅಂಶದ ಮಟ್ಟವನ್ನು 140 ರಲ್ಲೇ ಉಳಿಸಿಕೊಳ್ಳಿ. ನಿಮ್ಮ ಸಕ್ಕರೆಅಂಶದ ಮಟ್ಟ 140 ಕ್ಕಿಂತಾ ಹೆಚ್ಚಾದರೆ ನಿಮ್ಮ ಮೇದೋಜ್ಜೀರಕ ಗ್ರಂಥಿಯು ಸಕ್ಕರೆಯನ್ನು ಕೊಬ್ಬಿಗೆ ಪರಿವರ್ತಿಸಲು ಹೆಚ್ಚು ಪ್ರಮಾಣದ ಇನ್ಸುಲಿನ್ ಉತ್ಪಾದಿಸುತ್ತದೆ. ನೀವು ಪ್ರತಿಬಾರಿ ಆಹಾರಸೇವನೆ ಮಾಡಿದಾಗ ಈ ರೀತಿ ಆಗುತ್ತಿರುತ್ತದೆ. ಆದ್ದರಿಂದ ಈ ಕಾರ್ಯವನ್ನು ನಿರ್ವಹಿಸಲು ಸಕ್ಕರೆ ಮಟ್ಟವನ್ನು ಕಾಪಾಡುವ ಆಹಾರಗಳನ್ನೇ ನೀವು ಸೇವಿಸಬೇಕು.

ನೀವು ಬಳಸುವ ಆಹಾರದ ಪ್ರಮಾಣವನ್ನು ಮೂರನೆ ಒಂದು ಭಾಗಕ್ಕೆ ಇಳಿಸಿ

ನೀವು ಬಳಸುವ ಆಹಾರದ ಪ್ರಮಾಣವನ್ನು ಮೂರನೆ ಒಂದು ಭಾಗಕ್ಕೆ ಇಳಿಸಿ

ನೀವು ಈಗ ಸೇವಿಸುವ ಆಹಾರ ಬೊಜ್ಜಿಗೆ ಕಾರಣವಾಗಿದೆಯೆಂದು ನಿಮಗೆ ಮನವರಿಕೆಯಾಗಿರಬಹುದು. ಆದ್ದರಿಂದ ನೀವು ಬಳಸುವ ಆಹಾರದ ಪ್ರಮಾಣವನ್ನು ಮೂರನೆ ಒಂದು ಭಾಗಕ್ಕೆ ತಗ್ಗಿಸಬೇಕು. ನಿಮ್ಮ ಹಸಿವು ಇನ್ನೂ ಕಾಡಿದರೆ, ನಾರಿನಾಂಶ ಅಧಿಕವಾಗಿರುವ ಹಣ್ಣುಗಳು ಅಥವಾ ತರಕಾರಿಗಳನ್ನೇ ದಸರ್ಟ್‌ನಲ್ಲಿ ಸೇರಿಸಬೇಕು.

ಊಟಮಾಡುವುದನ್ನು ಎಂದೂ ನಿಲ್ಲಿಸಬೇಡಿ

ಊಟಮಾಡುವುದನ್ನು ಎಂದೂ ನಿಲ್ಲಿಸಬೇಡಿ

ನೀವು ನಿಮ್ಮ ತೂಕ ತಗ್ಗಿಸಬೇಕೆಂದೆಣಿಸಿ ಊಟಮಾಡುವುದನ್ನು ಎಂದೂ ಬಿಡಬೇಡಿ. ಹೀಗೆ ಮಾಡಿದಾಗ ನಿಮ್ಮ ಹಸಿವು ನಿಮ್ಮಲ್ಲಿಯೇ ಇದ್ದು ಮತ್ತೆ ಆಹಾರ ಸೇವಿಸುವಾಗ ಎರಡುಪಟ್ಟು ಪ್ರಮಾಣದಲ್ಲಿ ತಿಂದುಬಿಡುವಿರಿ. ನಿಮ್ಮ ತೂಕವನ್ನು 10 ದಿನಗಳಲ್ಲಿ ನೈಸರ್ಗಿಕವಾಗಿ ಕಡಿಮೆ ಮಾಡಲು ಹೊರಟಿದ್ದಾಗ ಈ ನಿರ್ದಿಷ್ಟವಾದ ಹೆಜ್ಜೆ ಮತ್ತೊಂದು ಮುಖ್ಯ ಸಲಹೆ.

ನೀರಿನ ಅವಶ್ಯಕತೆ

ನೀರಿನ ಅವಶ್ಯಕತೆ

ಎಂತಹ ತೂಕ ಕಡಿತ ಕಾರ್ಯಕ್ರಮದಲ್ಲಿಯೂ ನೀರು ಒಂದು ಪ್ರಮುಖ ಪಾತ್ರವನ್ನು ಹೊಂದಿದೆ. ನೀರಿನ ಬಳಕೆಯಿಂದ ಶರೀರದಲ್ಲಿರುವ ಜೀವಾಣು ವಿಷವನ್ನು ಮೂತ್ರದ ಮೂಲಕ ಹೊರಗೆಹಾಕಿ ಶುದ್ಧೀಕರಿಸುತ್ತದೆ. ಪ್ರತಿದಿನವೂ 4 ರಿಂದ 5 ಲೀಟರ್ ನೀರನ್ನು ಕುಡಿಯಿರಿ. ನಿಮ್ಮ ಶರೀರಕ್ಕೆ ದಿನಕ್ಕೆ ಎಷ್ಟು ಲೀಟರ್ ನೀರಿನ ಅವಶ್ಯಕತೆಯನ್ನು ಸುಲಭವಾಗಿ ಕಂಡು ಹಿಡಿಯಲು ನಿಮ್ಮ ಶರೀರದ ತೂಕವನ್ನು 20 ರಿಂದ ಭಾಗಿಸಿ. ಈ ಲೆಕ್ಕದ ಉತ್ತರದಿಂದ ನೀವು ದಿನಕ್ಕೆ ಎಷ್ಟು ಲೀಟರ್ ನೀರು ಕುಡಿಯಲೇಬೇಕೆಂದು ತಿಳಿಯುತ್ತದೆ. ಉದಾಹರಣೆಗೆ: ನಿಮ್ಮ ತೂಕ 70 ಕೆ.ಜಿ. ಇದ್ದರೆ ಅದನ್ನು 20 ರಿಂದ ಭಾಗಿಸಿದಾಗ 3.5 ಉತ್ತರಬರುತ್ತದೆ. ಹಾಗಿದ್ದಾಗ ನೀವು ಪ್ರತಿದಿನ ಕನಿಷ್ಟಪಕ್ಷ 3.5 ಲೀಟರ್ ನೀರನ್ನು ಕುಡಿಯಬೇಕು. ನಿಮ್ಮ ತೂಕವನ್ನು 10 ದಿನಗಳೊಳಗಾಗಿ ಕಡಿಮೆಮಾಡಲು ಇದು ಒಂದು ಪ್ರಮುಖ ಹೆಜ್ಜೆ.

ತರಕಾರಿಗಳು

ತರಕಾರಿಗಳು

ಕೇವಲ 10 ದಿನಗಳಲ್ಲಿ ನಿಮ್ಮ ದೇಹದ ತೂಕವನ್ನು ಕಡಿಮೆಮಾಡಿಕೊಳ್ಳಲು ನೀವು ಬಯಸುವುದಾದರೆ, ನೀವು ಕಟ್ಟುನಿಟ್ಟಾಗಿ ತರಕಾರಿಗಳನ್ನು ಮಾತ್ರ ಬಳಸಬೇಕು. ನಿಮ್ಮ ಊಟವನ್ನು ಇನ್ನಷ್ಟು ಸ್ವಾದಿಷ್ಟಕರವನ್ನಾಗಿಸಲು, ನೀವು ತರಕಾರಿಯಿಂದ ಮಾಡಲಾಗಿರುವ ಆರೋಗ್ಯಯುಕ್ತವಾಗಿರುವ ಸಲಾಡ್ ಅನ್ನು ಸೇವಿಸಿ. ಬೇಯಿಸಲಾಗಿರುವ ಅಥವಾ ಹಸಿ ತರಕಾರಿಯು ತೂಕವನ್ನು ಕಡಿಮೆಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಆಲೂಗಡ್ಡೆ ಸೇರಿದಂತೆ ನೀವು ಎಲ್ಲಾ ರೀತಿಯ ತರಕಾರಗಳನ್ನು ಸೇವಿಸಬಹುದು, ಆದರೆ ಆಲೂಗಡ್ಡೆ ಅನ್ನು ಬೇಯಿಸಿ ತಿನ್ನುವುದು ಅತ್ಯಗತ್ಯ. ಇದರ ಜೊತೆಗೆ 8 ಗ್ಲಾಸ್ ನೀರು ಕುಡಿಯುವುದನ್ನು ಮರೆಯಬೇಡಿ.

ರಾತ್ರಿ ಎಂಟು ಗಂಟೆಯ ನಂತರ ಊಟ ಮಾಡಬೇಡಿ

ರಾತ್ರಿ ಎಂಟು ಗಂಟೆಯ ನಂತರ ಊಟ ಮಾಡಬೇಡಿ

ಆದಷ್ಟು ರಾತ್ರಿ ಎಂಟು ಗಂಟೆಯ ಒಳಗಾಗಿ ನಿಮ್ಮ ಊಟವನ್ನು ಸೇವಿಸಿ. ಇದರಿಂದ ಸಂಜೆ ಅಂದರೆ ರಾತ್ರಿ ಊಟಕ್ಕಿಂತ ಮೊದಲು ನೀವು ಯಾವುದಾದರು ಕುರುಕಲು ತಿಂಡಿ ತಿನ್ನುವ ಚಟವನ್ನು ನಿಯಂತ್ರಿಸಬಹುದು. ಒಂದು ವೇಳೆ ಇದು ನಿಮ್ಮಿಂದ ಸಾಧ್ಯವಾಗದೇ ಹೋದಲ್ಲಿ ಯಾವುದಾದರು ಒಂದು ಹರ್ಬಲ್ ಟೀಯನ್ನು ಸೇವಿಸಿ. ನಂತರ ಹಲ್ಲುಜ್ಜಿ, ಬಾಯಿಯನ್ನು ತೊಳೆಯಿರಿ. ಇದರಿಂದ ನಿಮ್ಮ ತಿನ್ನುವ ಬಯಕೆಗೆ ಕಡಿವಾಣ ಬೀಳುತ್ತದೆ.

ಮಾಂಸಾಹಾರವನ್ನು ತ್ಯಜಿಸಿ

ಮಾಂಸಾಹಾರವನ್ನು ತ್ಯಜಿಸಿ

ಆದಷ್ಟು ಸಸ್ಯಾಹಾರವನ್ನು ಸೇವಿಸುವುದರಿಂದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಸಸ್ಯಾಹಾರಿಗಳು ಮಾಂಸಾಹಾರಿಗಳಿಗಿಂತ ಕಡಿಮೆ ತೂಕವನ್ನು ಹೊಂದಿರುತ್ತಾರೆ. ಇದಕ್ಕೆ ಹಲವಾರು ಕಾರಣಗಳು ಇರಬಹುದು. ಆದರೆ ಇದರಲ್ಲಿ ಲೆಗ್ಯುಮೆಗಳು ಪ್ರಧಾನ ಪಾತ್ರವನ್ನುವಹಿಸುತ್ತವೆ. ಬೀನ್ ಬರ್ಗರ್, ಲೆಂಟಿಲ್ ಸೂಪ್ ಮತ್ತು ಇನ್ನಿತರ ಲೆಗುಮೆ ಇರುವ ಆಹಾರಗಳಲ್ಲಿ ನಾರಿನಂಶ ಅಧಿಕವಾಗಿರುತ್ತದೆ.

ರೆಡ್ ಸಾಸ್ ತೆಗೆದುಕೊಳ್ಳಿ

ರೆಡ್ ಸಾಸ್ ತೆಗೆದುಕೊಳ್ಳಿ

ಕ್ರೀಮ್ ಇರುವ ಇತರ ಸಾಸ್‍ಗಳಿಗಿಂತ ಟೊಮಾಟೊ ಸಾಸ್ ಉತ್ತಮವಾದ ಆಯ್ಕೆಯಾಗಿರುತ್ತದೆ. ಇದರಲ್ಲಿ ಕಡಿಮೆ ಕ್ಯಾಲೋರಿಗಳು ಇರುತ್ತವೆ. ಆದರೆ ಸೇವಿಸುವಾಗ ಪ್ರಮಾಣ ಬದ್ಧತೆಯ ಬಗ್ಗೆ ಮಾತ್ರ ಮರೆಯಬೇಡಿ.

ಊಟಕ್ಕೆ ಮೊದಲು ಹಣ್ಣುಗಳನ್ನು ಸೇವಿಸಿ

ಊಟಕ್ಕೆ ಮೊದಲು ಹಣ್ಣುಗಳನ್ನು ಸೇವಿಸಿ

ಊಟಕ್ಕೆ ಅರ್ಧ ಗಂಟೆ ಮೊದಲು ಹಣ್ಣನ್ನು ಸೇವಿಸುವುದು ಉತ್ತಮ. ಇದರಿಂದ ಹಣ್ಣುಗಳು ಬೇಗ ಜೀರ್ಣವಾಗುತ್ತವೆ. ಖಾಲಿ ಹೊಟ್ಟೆಯಲ್ಲಿ ಹಣ್ಣುಗಳನ್ನು ಸೇವಿಸುವುದರಿಂದ ನಿಮ್ಮ ಜಠರದಲ್ಲಿರುವ ವಿಷಕಾರಿ ಅಂಶಗಳು ತೊಲಗಿ ಹೋಗುತ್ತವೆ. ಇದರಿಂದಾಗಿ ನಿಮ್ಮ ದೇಹಕ್ಕೆ ಅಗತ್ಯವಾದ ಶಕ್ತಿಯು ಲಭಿಸಿ, ನಿಮ್ಮ ತೂಕ ಕಡಿಮೆಯಾಗುತ್ತದೆ.

ನಿಮ್ಮ ಆಹಾರವನ್ನು ಅತಿಯಾಗಿ ಬೇಯಿಸಬೇಡಿ

ನಿಮ್ಮ ಆಹಾರವನ್ನು ಅತಿಯಾಗಿ ಬೇಯಿಸಬೇಡಿ

ನಿಮ್ಮ ಆಹಾರವನ್ನು ಅತಿಯಾಗಿ ಬೇಯಿಸುವುದರಿಂದ ಅವುಗಳಲ್ಲಿರುವ ಪೋಷಕಾಂಶಗಳು ಕಡಿಮೆಯಾಗುತ್ತವೆ. ಇದರಿಂದ ನಿಮ್ಮ ದೇಹಕ್ಕೆ ಕಡಿಮೆ ಪೋಷಕಾಂಶ ಸೇರುತ್ತದೆ. ಆಗ ಇದನ್ನು ಸರಿದೂಗಿಸಿಕೊಳ್ಳಲು ದೇಹವು ಇತರೆ ಕುರುಕಲು ತಿಂಡಿಗಳ ಕಡೆಗೆ ವಾಲಲು ಶುರು ಮಾಡುತ್ತದೆ. ಹಾಗಾಗಿ ಆದಷ್ಟು ಸುಶಿ ಮತ್ತು ಸಲಾಡ್‍ಗಳನ್ನು ಸೇವಿಸಿ. ಹಬೆಯಲ್ಲಿ ಬೇಯಿಸಿದ, ಸುಟ್ಟ ಆಹಾರ ಮತ್ತು ತರಕಾರಿಗಳನ್ನು ಸೇವಿಸಿ. ಮೈಕ್ರೋ ವೇವ್ ಓವೆನ್‍ನಲ್ಲಿ ಆಹಾರಗಳನ್ನು ಬಿಸಿ ಮಾಡುವುದನ್ನು ನಿಯಂತ್ರಿಸಿ.

ನೀವು ಬಡಿಸಿಕೊಳ್ಳುವ ಆಹಾರದ ಪ್ರಮಾಣವನ್ನು ತಗ್ಗಿಸಿ

ನೀವು ಬಡಿಸಿಕೊಳ್ಳುವ ಆಹಾರದ ಪ್ರಮಾಣವನ್ನು ತಗ್ಗಿಸಿ

ಮನೆಯಲ್ಲಾಗಲಿ ಅಥವಾ ರೆಸ್ಟೌರೆಂಟ್‍ ಆಗಲಿ ನಮಗೆ ಅಗತ್ಯವಾದ ಆಹಾರ ಪ್ರಮಾಣಕ್ಕಿಂತ ಹೆಚ್ಚಿಗೆ ಬಡಿಸಲು ಅವಕಾಶ ಕೊಡಬೇಡಿ. ಆದಷ್ಟು ಕಡಿಮೆ ಹಾಕಿಸಿಕೊಂಡು ಊಟಮಾಡಿ. ಹೀಗೆ ಶೇ.10% ರಿಂದ 20% ಕಡಿಮೆ ಮಾಡಿದ್ದಾದಲ್ಲಿ ನಿಮ್ಮ ತೂಕ ಸುಲಭವಾಗಿ ಇಳಿದು ಹೋಗುತ್ತದೆ. ಆದಷ್ಟು ಪಲ್ಯ ಮುಂತಾದವುಗಳನ್ನು ಬಟ್ಟಲಿನಲ್ಲಿ ಹಾಕಿಸಿಕೊಳ್ಳಬೇಡಿ. ನಿಮ್ಮ ತಟ್ಟೆಯಲ್ಲಿ ಯಾವುದೇ ತೆರನಾದ ಅಳತೆ ಮಾಡಬಹುದಾದ ವಸ್ತುಗಳು ಇರದಂತೆ ನೋಡಿಕೊಳ್ಳಿ.

ನಿಮ್ಮ ತಟ್ಟೆಯ ಗಾತ್ರದಲ್ಲಿ ಬದಲಾವಣೆ ತನ್ನಿ

ನಿಮ್ಮ ತಟ್ಟೆಯ ಗಾತ್ರದಲ್ಲಿ ಬದಲಾವಣೆ ತನ್ನಿ

12 ಇಂಚಿನ ತಟ್ಟೆಯ ಬದಲಿಗೆ 10 ಇಂಚಿನ ತಟ್ಟೆಯನ್ನು ಬಳಸಿ. ಇದರಿಂದ ನಿಮ್ಮ ಆಹಾರ ಸೇವನೆಯ ಪ್ರಮಾಣ ಆಟೊ ಮೆಟಿಕ್ ಆಗಿ ಕಡಿಮೆಯಾಗುವುದನ್ನು ನೀವೇ ಗಮನಿಸುವಿರಿ. ಕಾರ್ನೆಲ್ಸ್ ಬ್ರೈನ್ ವಾನ್‍ಸಿಂಕ್, ಪಿಎಚ್‍ಡಿ ಯವರು ತಮ್ಮ ಅಧ್ಯಯನದಲ್ಲಿ ಈ ಅಂಶವನ್ನು ಕುರಿತು ವಿವರವಾಗಿ ವಿವರಿಸಿದ್ದಾರೆ. ಅವರ ಪ್ರಕಾರ ತಟ್ಟೆ ಬಟ್ಟಲುಗಳು ದೊಡ್ಡದಾಗಿದ್ದಷ್ಟು, ಜನರು ಅದಕ್ಕೆ ಹೆಚ್ಚಾಗಿ ಆಹಾರವನ್ನು ಬಡಿಸುತ್ತಾರಂತೆ.

ಯೋಗ ಮಾಡಿ

ಯೋಗ ಮಾಡಿ

ತೂಕ ಕಡಿಮೆ ಮಾಡಿಕೊಳ್ಳಲು ಬಯಸುವ ಹೆಂಗಸರಿಗೆ ಯೋಗ ಒಂದು ಅತ್ಯಂತ ಸರಳ ಮತ್ತು ಸುಲಭವಾದ ಮಾರ್ಗವಾಗಿರುತ್ತವೆ. ಯೋಗವು ಆಹಾರವನ್ನು ಸೇವಿಸುವ ಕ್ರಮಕ್ಕೆ ಒಂದು ಕ್ರಮಬದ್ಧತೆ ತಂದು ಕೊಡುತ್ತದೆ. ಯೋಗವು ಮನಸ್ಸಿನಲ್ಲಿ ಒಂದು ಸ್ಥಿತ ಪ್ರಙ್ಞೆಯ ಮನೋಭಾವವನ್ನು ತಂದು ಕೊಡುವುದರಿಂದ ಆಹಾರವನ್ನು ಜೊ ಯೋಚನೆ ಮಾಡಿ ಸೇವಿಸುತ್ತವೆ. ಜೊತೆಗೆ ಯೋಗದಿಂದ ಪ್ರಶಾಂತವಾದ ಮನಸ್ಥಿತಿ ಸಹ ದೊರೆಯುತ್ತದೆ. ಇದರಿಂದ ಸಹ ನಾವು ಕಂಡಾಪಟ್ಟೆ ತಿನ್ನುವುದು ಕಡಿಮೆಯಾಗುತ್ತದೆ

ಅಧಿಕ ಪ್ರಮಾಣದಲ್ಲಿ ತರಕಾರಿಗಳನ್ನು ಸೇವಿಸಿ

ಅಧಿಕ ಪ್ರಮಾಣದಲ್ಲಿ ತರಕಾರಿಗಳನ್ನು ಸೇವಿಸಿ

ಈ ದಿನ ರಾತ್ರಿ ಊಟಕ್ಕೆ ಒಂದು ತರಕಾರಿಯ ಬದಲಿಗೆ ಮೂರು ತರಕಾರಿಯನ್ನು ಬಳಸಿ. ನೀವು ಆರಾಮವಾಗಿ ಆ ಮೂರನ್ನು ತಿನ್ನುತ್ತೀರಿ. ತಿನ್ನುವುದರಲ್ಲಿ ಎಲ್ಲರೂ ವಿವಿಧ ಪ್ರಯೋಗಗಳನ್ನು ಮಾಡಲು ಬಯಸುತ್ತಾರೆ. ಹೆಚ್ಚಾಗಿ ತರಕಾರಿ ಮತ್ತು ಹಣ್ಣುಗಳನ್ನು ಸೇವಿಸುವುದರಿಂದ ತೂಕವನ್ನು ಇಳಿಸಿಕೊಳ್ಳಬಹುದು.

ಸೋಡಿಯಂನ ಪ್ರಮಾಣ

ಸೋಡಿಯಂನ ಪ್ರಮಾಣ

ನೀವು ಸೇವಿಸುವ ಸೋಡಿಯಂನ ಪ್ರಮಾಣವು ನಿಜಕ್ಕೂ ಕಡಿಮೆ ಪ್ರಮಾಣದಲ್ಲಿರಲಿ ಹಾಗೂ ನಿಮ್ಮ ಆಹಾರಕ್ಕೆ ಯಾವುದೇ ರೀತಿಯಲ್ಲಿ ಹೆಚ್ಚಿನ ಉಪ್ಪನ್ನು ಸೇರಿಸಬೇಡಿರಿ.

English summary

Simple Tips To Lose Weight In Just 10 Days

You go to a party and try to resist all the good food around. You succeed mostly but then a helping of extra cheese or that delicious dessert piece cannot be prevented! This is an essential step for weight loss in 10 days hav a look
X
Desktop Bottom Promotion