For Quick Alerts
ALLOW NOTIFICATIONS  
For Daily Alerts

ಸಸ್ಯಾಹಾರಿಯಾಗಿರುವುದರ ಅಡ್ಡ ಪರಿಣಾಮಗಳು

|

ಇಂದು ಹೆಚ್ಚಿನ ಜನರು ಹಲವಾರು ಕಾರಣಗಳಿಗಾಗಿ ಸಸ್ಯಹಾರಿಗಳಾಗಿದ್ದಾರೆ. ಆರೋಗ್ಯ, ಧಾರ್ಮಿಕ ನಂಬಿಕೆಗಳು, ಮತ್ತು ಪ್ರಾಣಿಗಳ ಮೇಲಿನ ಮಮತೆಯಿಂದಾಗಿ ಸಸ್ಯಾಹಾರಿಗಳಾಗುತ್ತಿದ್ದಾರೆ. ದೀರ್ಘ ಪ್ರಮಾಣದ ಮತ್ತು ಕಟ್ಟುನಿಟ್ಟಿನ ಸಸ್ಯಾಹಾರಿ ಆಹಾರವನ್ನು ತೆಗೆದುಕೊಳ್ಳುವುದು ಹಾಗೂ ಮಾಂಸಹಾರವನ್ನು ತೆಗೆದುಕೊಳ್ಳದಿರುವುದು ಆರೋಗ್ಯದ ಮೇಲೆ ಪರಿಣಾಮವನ್ನು ಬೀರುತ್ತದೆ.

ಸಸ್ಯಾಹಾರದೊಂದಿಗೆ ಮಾಂಸಹಾರವನ್ನೂ ಸೇವಿಸುವುದು ಆರೋಗ್ಯದ ಮೇಲೆ ಪ್ರಮಾಣ ಬದ್ಧ ಹಿಡಿತವನ್ನು ಸಾಧಿಸಲು ಸಹಾಯ ಮಾಡುತ್ತದೆ. ಒಂದು ಮಾತಿದೆ, ಸಸ್ಯಾಹಾರಿಗಳು ಮಾಂಸಾಹಾರಿಗಳಿಗಿಂತ ದೀರ್ಘಕಾಲ ಬದುಕುತ್ತಾರೆ ಎಂದು. ಆದರೆ ಬೋಲ್ಡ್ ಸ್ಕೈ ಇಂದು ನಿಮ್ಮೊಂದಿಗೆ ಹಂಚಿಕೊಳ್ಳಲಿರುವ ಕೆಲವು ವಿಚಾರಗಳು ನಿಮ್ಮ ಆಲೋಚನೆಯನ್ನೇ ತಲೆಕೆಳಗು ಮಾಡಿಬಿಡಬಹದು. ನಿಮ್ಮ ಜೀವನದಲ್ಲಿ ಸಸ್ಯಾಹಾರ ಮತ್ತು ಮಾಂಸಹಾರ ಇವೆರಡರ ಸಮತೋಲನ ಹೇಗೆ ಮಾಡಬೇಕು ಎಂದೂ ಕೂಡ ಈ ಅಂಶಗಳು ನಿಮಗೆ ತಿಳಿಸುತ್ತವೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಜೀರ್ಣಕ್ರಿಯೆ ಸಮಸ್ಯೆಯನ್ನು ಬಗೆಹರಿಸುವುದು ಹೇಗೆ?

ಕೊಲೆಸ್ಟ್ರಾಲ್

ಕೊಲೆಸ್ಟ್ರಾಲ್

ವೈದ್ಯಕೀಯ ಅಧ್ಯಯನದ ಪ್ರಕಾರ, ಮಾನವನ ದೇಹಕ್ಕೆ ಒಳ್ಳೆಯದಲ್ಲದ ಲೋ ಕೊಲೆಸ್ಟ್ರಾಲ್ ಮಟ್ಟಗಳನ್ನು ಸಸ್ಯಾಹಾರಿಗಳು ಹೊಂದಿರುತ್ತಾರೆ ಎಂದಾಗಿದೆ. ಲೋ ಕೊಲಸ್ಟ್ರಾಲ್ ಮಟ್ಟವನ್ನು ದೇಹದಲ್ಲಿ ಹೊಂದುವುದು ಬೇಗನೇ ಸಾಯುವುದಕ್ಕೆ ಕಾರಣವಾಗುತ್ತದೆ.ಸಸ್ಯಾಹಾರಿಯಾಗಿರುವುದರ ಒಂದು ಅಡ್ಡ ಪರಿಣಾಮ ಇದಾಗಿದೆ.

ವಿಟಮಿನ್ ಬಿ12

ವಿಟಮಿನ್ ಬಿ12

ಚಯಾಪಚಯದೊಂದಿಗೆ ಬಿ12 ಸಹಾಯ ಮಾಡುತ್ತದೆ, ಇದು ಆಹಾರವನ್ನು ಸುದೃಢ ಶಕ್ತಿಯನ್ನಾಗಿಸುತ್ತದೆ. ಸಸ್ಯಾಹಾರಿ ಆಹಾರಗಳು ಕಡಿಮೆ ಪ್ರಮಾಣದ ವಿಟಮಿನ್ ಬಿ12 ಹೊಂದಿದ್ದು, ನಿಮಗೆ ಸಾಕಾಗುವಷ್ಟು ಶಕ್ತಿಯನ್ನು ಇದು ನೀಡುವುದಿಲ್ಲ, ಇದರಿಂದ ನೀವು ಆಲಸಿಗಳಾಗುತ್ತೀರಿ.

ಮೂಳೆ ಸಾಂದ್ರತೆ

ಮೂಳೆ ಸಾಂದ್ರತೆ

ಪ್ರತಿಯೊಬ್ಬ ಮನುಷ್ಯನೂ ಮೂಳೆಗಳ ಸುದೃಢತೆಗಾಗಿ ಸಾಕಷ್ಟು ಪ್ರಮಾಣದ ವಿಟಮಿನ್ ಅನ್ನು ಸೇವಿಸಬೇಕು. ಮಾಂಸಹಾರಿ ಆಹಾರಗಳಲ್ಲಿರುವಷ್ಟು ವಿಟಮಿನ್ ಪ್ರಮಾಣ ಸಸ್ಯಾಹಾರಿ ಆಹಾರಗಳಲ್ಲಿರುವುದಿಲ್ಲ. ಆದ್ದರಿಂದ ಸಸ್ಯಾ ಹಾರಿಯಾಗಿರುವುದರ ಒಂದು ಅಡ್ಡಪರಿಣಾಮ ಇದಾಗಿದೆ.

ಒಮೆಗಾ ಫ್ಯಾಟ್‌ಗಳ ಮಟ್ಟಗಳು

ಒಮೆಗಾ ಫ್ಯಾಟ್‌ಗಳ ಮಟ್ಟಗಳು

ಕಾರ್ಡಿಓಸ್ಕಲರ್ ಆರೋಗ್ಯಕ್ಕಾಗಿ ಅಗತ್ಯವಿರುವ ದೀರ್ಘ ಪ್ರಮಾಣದ ಒಮೆಗಾ-3 ಎಸ್ ಸಾಕಷ್ಟು ಮಟ್ಟಗಳು ಸಸ್ಯಾಹಾರಿ ಆಹಾರಗಳಲ್ಲಿ ಇರುವುದಿಲ್ಲ. ಆದ್ದರಿಂದ ಇದು ಆರೋಗ್ಯಕ್ಕೆ ಅಪಾಯಕರವಾಗಿದ್ದು, ಸಸ್ಯಾಹಾರಿಯಾಗಿರುವುದರಿಂದ ಉಂಟಾಗುವುದಾಗಿದೆ.

ಐರನ್ ಕೊರತೆ

ಐರನ್ ಕೊರತೆ

ರೆಡ್ ಮೀಟ್ ಅಥವಾ ಮಾಂಸಗಳಲ್ಲಿ ಸಾಕಷ್ಟು ಪ್ರಮಾಣದ ಐರನ್ ಇದ್ದು ಸಸ್ಯಾಹಾರಿ ಆಹಾರಗಳಲ್ಲಿ ಇರುವುದಿಲ್ಲ. ಐರನ್ ಕೊರತೆಯು ನಿಮ್ಮಲ್ಲಿ ಅನೀಮಿಯಾವನ್ನುಂಟು ಮಾಡಿ ನಿಮ್ಮನ್ನು ಬಲಹೀನಗೊಳಿಸುತ್ತದೆ.

ಕ್ಯಾಲ್ಶಿಯಂ ಕೊರತೆ

ಕ್ಯಾಲ್ಶಿಯಂ ಕೊರತೆ

ಹೆಚ್ಚಿನ ಸಸ್ಯಾಹಾರಿಗಳು ಹಾಲು ಹಾಗೂ ಮೊಸರನ್ನು ಸೇವಿಸುವುದಿಲ್ಲ. ಈ ಆಹಾರ ಪದಾರ್ಥಗಳನ್ನು ಸೇವಿಸದಿರುವುದು ಕ್ಯಾಲ್ಶಿಯಂ ಕೊರತೆಗೆ ಕಾರಣವಾಗುತ್ತದೆ ಇದರಿಂದ ಹಲ್ಲಿನ ಸಮಸ್ಯೆ ಹಾಗೂ ಮೂಳೆ ಸವೆತ ಉಂಟಾಗುತ್ತದೆ.

ಜಿಂಕ್ ಕೊರತೆ

ಜಿಂಕ್ ಕೊರತೆ

ನಿಮ್ಮ ರೋಗನಿರೋಧಕ ಶಕ್ತಿಯನ್ನು ಸುಸ್ಥಿಯಲ್ಲಿಡಲು ಜಿಂಕ್ ಅಗತ್ಯವಿದೆ. ಮಾಂಸ ಮತ್ತು ಇತರ ಸಸ್ಯಾಹಾರವಲ್ಲದ ಆಹಾರಗಳಲ್ಲಿ ಹೆಚ್ಚಿನ ಪ್ರಮಾಣದ ಜಿಂಕ್ ಇರುವುದರಿಂದ ಸಸ್ಯಾಹಾರಿಯು ಜಿಂಕ್ ಕೊರತೆಯಿಂದ ಬಳಲುತ್ತಾನೆ.

ಹೃದಯ ಕಾಯಿಲೆಗಳು

ಹೃದಯ ಕಾಯಿಲೆಗಳು

ಸಸ್ಯಾಹಾರಿಯಾಗಿರುವುದು ನಿಮ್ಮ ಹೃದಯ ಕಾಯಿಲೆಗಳನ್ನು ಹೆಚ್ಚು ಮಾಡುತ್ತದೆ ಎಂಬ ಅಂಶ ನಿಮಗೆ ತಿಳಿದಿದೆಯೇ? ರೀಫೈಂಡ್ ಕಾರ್ಬೋಹೈಡ್ರೇಟ್‌ಗಳು ಮತ್ತು ಆಲೂಗಡ್ಡೆ ಹಾಗೂ ಕೆಂಪಕ್ಕಿ ಅನ್ನದಲ್ಲಿರುವ ಪಿಷ್ಟ ಅಂಶವು ರಕ್ತದಲ್ಲಿ ಸಕ್ಕರೆ ಅಂಶವನ್ನು ಹೆಚ್ಚು ಮಾಡುವುದರಿಂದ ಹೃದಯಾಘಾತ ಮತ್ತು ಹೃದಯ ರೋಗಗಳು ನಿಮಗೆ ಹೆಚ್ಚು ಕಂಡುಬರಬಹುದು.

ಮಧುಮೇಹ

ಮಧುಮೇಹ

ಹೌದು, ಸಸ್ಯಾಹಾರಿಯಾಗಿರುವುದು ಮಧುಮೇಹಕ್ಕೆ ಆಹ್ವಾನವಿತ್ತಂತೆ. ಸಸ್ಯಾಹಾರಿ ಆಹಾರಗಳು ಬೆಣ್ಣೆ, ಚೀಸ್, ಸಾಸ್‌ಯುಕ್ತವಾಗಿದ್ದು ಇದರ ಹೆಚ್ಚಿನ ಸೇವನೆಯು ಮಧುಮೇಹಕ್ಕೆ ಕಾರಣವಾಗುತ್ತದೆ.

ಕ್ಯಾನ್ಸರ್

ಕ್ಯಾನ್ಸರ್

ಸಸ್ಯಾಹಾರಿಯಾಗಿರುವುದರ ಒಂದು ಅಡ್ಡಪರಿಣಾಮವೆಂದರೆ ಕರುಳಿನ ಕ್ಯಾನ್ಸರ್ ಅನ್ನು ಇದು ಹೆಚ್ಚುಮಾಡುವ ಸಾಧ್ಯತೆ ಇರುತ್ತದೆ. ಸಂಶೋಧನೆಗಳ ಪ್ರಕಾರ, ಮಾಂಸಹಾರಿಗಳಿಗಿಂತ ಸಸ್ಯಾಹಾರಿಗಳಲ್ಲಿ ಕರುಳಿನ ಕ್ಯಾನ್ಸರ್ ಹೆಚ್ಚಾಗಿರುತ್ತದೆ.

English summary

Side Effects Of Becoming A Vegetarian

Today, there are a number of people who have become vegetarians for many reasons. These reasons are because of health, religious convictions and also the concern for animal welfare. Following a largely and strict vegetarian diet and avoiding meat at any cost does have an effect on ones health.
X
Desktop Bottom Promotion