For Quick Alerts
ALLOW NOTIFICATIONS  
For Daily Alerts

ಆರೋಗ್ಯಕರ ಶಿವರಾತ್ರಿ ವೃತಕ್ಕಾಗಿ ಕೆಲವೊಂದು ಸಲಹೆಗಳು

|

ಮಹಾಶಿವರಾತ್ರಿಯನ್ನು ಹಿಂದೂಧರ್ಮದಲ್ಲಿ ನಂಬಿಕೆ ಶ್ರದ್ಧೆಯಿಂದ ಆಚರಿಸಲಾಗುತ್ತದೆ. ವೃತಾಧಾರಿಗಳು ದಿನಪೂರ್ತಿ ಕಡಿಮೆ ಆಹಾರವನ್ನು ಸೇವಿಸಿ ದೇವರ ನಾಮಸ್ಮರಣೆಯನ್ನು ಮಾಡುತ್ತಾರೆ. ಶಿವರಾತ್ರಿ ವೃತಾಚರಣೆಯಂದು, ವೃತಾಧಾರಿಗಳು ಆಲೂಗಡ್ಡೆ, ಹಣ್ಣುಗಳು, ಸಾಬಕ್ಕಿ ಮೊದಲಾದ ಆಹಾರಗಳನ್ನು ಸೇವಿಸುತ್ತಾರೆ. ಆದರೂ ವೃತವನ್ನು ಆಚರಿಸುವಾಗ ಆರೋಗ್ಯಪೂರ್ಣ ಆಹಾರವನ್ನು ಸೇವಿಸುವುದು ಅತ್ಯಗತ್ಯ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಮಹಾಶಿವರಾತ್ರಿ ವೃತ: ರುಚಿಕರವಾದ ಸ್ಪೆಶಲ್ ರೆಸಿಪಿ

ಆರೋಗ್ಯಪೂರ್ಣ ಆಹಾರಗಳು ವೃತದ ಸಮಯದಲ್ಲಿ ಉಂಟಾಗುವ ತೊಂದರೆಗಳನ್ನು ನಿವಾರಿಸುವಲ್ಲಿ ನಮಗೆ ನೆರವಾಗಿವೆ. ಅತಿಯಾದ ಖಾರವಿರುವ ಪದಾರ್ಥಗಳನ್ನು ಸೇವಿಸುವುದು, ಮಸಾಲೆಯುಕ್ತ ಆಹಾರವನ್ನು ತಿನ್ನುವುದು ಕೂಡ ನಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತವೆ. ಅತಿ ಹೆಚ್ಚು ನೀರು ಕುಡಿದು ನಿಮ್ಮ ದೇಹವನ್ನು ಹೈಡ್ರೇಟ್ ಆಗಿ ಮಾಡಿಕೊಳ್ಳುವುದು ಅತೀ ಅವಶ್ಯಕ.

ಈರುಳ್ಳಿ ಬೆಳ್ಳುಳ್ಳಿ ರಹಿತ ಆಹಾರಗಳನ್ನು ವೃತದ ಸಮಯದಲ್ಲಿ ಸೇವಿಸದೇ ಇರುವುದರಿಂದ ಆಹಾರದಲ್ಲಿನ ರುಚಿ ಸ್ವಲ್ಪ ನಷ್ಟವಾಗಬಹುದು ಅದಕ್ಕಾಗಿ ಮಸಾಲೆಗಳನ್ನು ಸೇರಿಸುವುದು ದೈಹಿಕ ಸಮಸ್ಯೆಯನ್ನು ಉಂಟುಮಾಡಬಹುದು. ವೃತದ ಸಮಯದಲ್ಲಿ ತಲೆಸುತ್ತು, ವಾಂತಿ, ವಾಕರಿಕೆ, ಸುಸ್ತು, ಬಳಲಿಕೆ ಮುಂತಾದ ತೊಂದರೆಗಳು ಈ ಆಹಾರಗಳಿಂದ ಉಂಟಾಗಬಹುದು.
ಅದಕ್ಕಾಗಿ ಬೋಲ್ಡ್ ಸ್ಕೈ ಇಂದು ನಿಮ್ಮೊಂದಿಗೆ ಕೆಲವೊಂದು ಆರೋಗ್ಯಪೂರ್ಣ ಆಹಾರಗಳನ್ನು ಇಲ್ಲಿ ನೀಡುತ್ತಿದೆ ಇದರೊಂದಿಗೆ ಕೆಲವೊಂದು ಮಾರ್ಗದರ್ಶನಗಳನ್ನು ಸೂಚಿಸುತ್ತಿದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಶಿವರಾತ್ರಿಗಾಗಿ ಬಾಯಲ್ಲಿ ನೀರೂರಿಸುವ ವಿಶೇಷ ಸಿಹಿತಿಂಡಿಗಳು

1.ರಾತ್ರಿ ಸಮಯದಲ್ಲಿ ಆರೋಗ್ಯಪೂರ್ಣ ಆಹಾರಗಳನ್ನು ಸೇವಿಸಿ

1.ರಾತ್ರಿ ಸಮಯದಲ್ಲಿ ಆರೋಗ್ಯಪೂರ್ಣ ಆಹಾರಗಳನ್ನು ಸೇವಿಸಿ

ಉಪವಾಸ ಮಾಡುವ ಹಿಂದಿನ ದಿನ ಆರೋಗ್ಯ ಪೂರ್ಣ ಆಹಾರಗಳನ್ನು ಸೇವಿಸಿ ಇದರಿಂದ ವೃತದ ದಿನ ಸಾಕಷ್ಟು ಶಕ್ತಿ ನಿಮಗುಂಟಾಗುತ್ತದೆ. ವೃತದ ದಿನದಂದು ಆರೋಗ್ಯಪೂರ್ಣ ಜೀರ್ಣಕ್ರಿಯೆಗೆ ಇದು ಸಹಕಾರಿ.

2.ಖಾರದ ಆಹಾರಗಳನ್ನು ನಿರ್ಲಕ್ಷಿಸಿ

2.ಖಾರದ ಆಹಾರಗಳನ್ನು ನಿರ್ಲಕ್ಷಿಸಿ

ಊಟದ ಮೊದಲು ಖಾರ ಆಹಾರಗಳನ್ನು ಸೇವಿಸುವುದು ಏಸಿಡಿಟಿ, ಅಜೀರ್ಣ ಮೊದಲಾದ ಸಮಸ್ಯೆಗಳನ್ನು ತಂದೊಡ್ಡುತ್ತವೆ. ಆದ್ದರಿಂದ ತಾಜಾ ತರಕಾರಿ ಹಣ್ಣುಗಳು ನಿಮ್ಮ ಆಯ್ಕೆಯಾಗಿರಲಿ.

3.ಹೈಡ್ರೇಟ್ ಆಗಿರಿ

3.ಹೈಡ್ರೇಟ್ ಆಗಿರಿ

ಆರೋಗ್ಯಕರ ಉಪವಾಸಕ್ಕಾಗಿ ಇದೊಂದು ಒಳ್ಳೆಯ ಸಲಹೆಯಾಗಿದೆ. ಏನನ್ನೂ ತಿನ್ನದೆ ವೃತವನ್ನು ಹಿಡಿಯುವ ಭಕ್ತಾದಿಗಳು ಸಾಕಷ್ಟು ನೀರನ್ನು ಕುಡಿಯಲೇಬೇಕು. ಇದು ನಿಮ್ಮನ್ನು ಹೊಟ್ಟೆ ಭರ್ತಿಯಾಗಿರುವಂತೆ ಮಾಡುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

4.ತಾಜಾ ಹಣ್ಣುಗಳನ್ನು ಸೇವಿಸಿ

4.ತಾಜಾ ಹಣ್ಣುಗಳನ್ನು ಸೇವಿಸಿ

ಉಪವಾಸದ ಸಮಯದಲ್ಲಿ ನೀವು ಸೇವಿಸುವ ಹಣ್ಣುಗಳು ತಾಜಾ ಆಗಿರಲಿ. ದೇಹಕ್ಕೆ ಅಗತ್ಯವಿರುವ ನ್ಯೂಟ್ರೀನ್ ಪ್ರೊಟೀನ್‌ಗಳನ್ನು ಇದು ಒದಗಿಸುತ್ತದೆ. ಬಾಳೆಹಣ್ಣನ್ನು ಒಂದು ಲೋಟ ಹಾಲಿನೊಂದಿಗೆ ಸ್ವೀಕರಿಸುವುದು ಹೊಟ್ಟೆಯನ್ನು ತುಂಬಿಸುತ್ತದೆ.

5.ತಟ್ಟೆ ಪೂರ್ತಿ ಖಾಲಿಯಾಗುವಂತೆ ಆಹಾರ ಸೇವಿಸದಿರಿ

5.ತಟ್ಟೆ ಪೂರ್ತಿ ಖಾಲಿಯಾಗುವಂತೆ ಆಹಾರ ಸೇವಿಸದಿರಿ

ವೃತವನ್ನು ಆಚರಿಸುವವರು ಆಗಾಗ್ಗೆ ತಿನ್ನುವ ಅಭ್ಯಾಸವನ್ನು ರೂಢಿಸಿಕೊಂಡಿರುತ್ತಾರೆ. ಹೀಗೆ ಮಾಡುವುದು ಒಮ್ಮೊಮ್ಮೆ ಜೀರ್ಣಕ್ರಿಯೆಯ ಸಮಸ್ಯೆಯನ್ನು ತಂದೊಡ್ಡಬಹುದು. ಪ್ಲೇಟ್ ಪೂರ್ತಿ ಖಾಲಿಯಾಗುವಂತೆ ಆಹಾರ ಸೇವಿಸದಿರಿ.

6.ಹುರಿದ ಆಹಾರಗಳು ಬೇಡ

6.ಹುರಿದ ಆಹಾರಗಳು ಬೇಡ

ವೃತದ ಸಂದರ್ಭದಲ್ಲಿ, ಜನರು ಹುರಿದ ಆಹಾರಗಳನ್ನು ಸಾಕಷ್ಟು ತೆಗೆದುಕೊಳ್ಳುತ್ತಾರೆ. ಅತಿಯಾದ ತೂಕವನ್ನು ನಿವಾರಿಸಲು ಈ ರೀತಿಯ ಆಹಾರಪದ್ಧತಿಯನ್ನು ಅನುಸರಿಸದಿರಿ.

7.ಸಕ್ಕರೆ ಪ್ರಮಾಣವನ್ನು ನಿಯಂತ್ರಣದಲ್ಲಿಡಿ

7.ಸಕ್ಕರೆ ಪ್ರಮಾಣವನ್ನು ನಿಯಂತ್ರಣದಲ್ಲಿಡಿ

ಉಪವಾಸದ ಸಮಯದಲ್ಲಿ ಸಕ್ಕರೆ ಮಟ್ಟ ಕೆಳಗಿಳಿಯಬಹುದು. ಸಕ್ಕರೆಯ ಪ್ರಮಾಣ ಕಡಿಮೆಯಾಗುವುದು ನಿಮ್ಮ ದೇಹದಲ್ಲಿ ನಿಶ್ಯಕ್ತಿಯನ್ನು ಉಂಟುಮಾಡಬಹುದು. ಈ ಸಮಯದಲ್ಲಿ ಸ್ವಲ್ಪ ಸಿಹಿಯನ್ನು ಹಾಲಿನೊಂದಿಗೆ ತೆಗೆದುಕೊಳ್ಳುವುದು ಉತ್ತಮವಾದ.

8.ನೀವು ತಿನ್ನುವುದರ ಮೇಲೆ ಗಮನ ನೀಡಿ

8.ನೀವು ತಿನ್ನುವುದರ ಮೇಲೆ ಗಮನ ನೀಡಿ

ಕಲ್ಲುಪ್ಪಿನಿಂದ ತಯಾರಿಸಲಾದ ಚಿಪ್ಸ್ ಮತ್ತು ಪಕೋಡಾವನ್ನು ಶಿವರಾತ್ರಿಯ ದಿನ ವೃತಧಾರಿಗಳು ಸೇವಿಸುತ್ತಾರೆ. ಹುರಿದ ತಿಂಡಿಗಳು ಗ್ಯಾಸ್ ಸಮಸ್ಯೆಯನ್ನು ತಂದೊಡ್ಡಬಹುದು. ನೀವೇನು ಸೇವಿಸುತ್ತೀರಿ ಎಂಬುದರ ಮೇಲೆ ನಿಮ್ಮ ಗಮನವಿರಲಿ.

9.ಹಣ್ಣಿನ ರಸ

9.ಹಣ್ಣಿನ ರಸ

ತಾಜಾ ಹಣ್ಣಿನ ರಸವನ್ನು ಸೇವಿಸಿ. ಮಿಲ್ಕ್ ಶೇಕ್ ಅನ್ನು ಸೇವಿಸುವುದು ನಿಮ್ಮ ಹೊಟ್ಟೆ ತುಂಬುವಂತೆ ಮಾಡುತ್ತದೆ.


English summary

Shivratri Vrat: Tips For Healthy Fasting

Maha Shivratri is one of the most popular Hindu festivals which is celebrated with great vigour and devotion. Devotees of Lord Shiva observe whole day fast. However, Shivratri fasts are not very strict when compared to the other ones like Navratri and Karwa Chauth.
Story first published: Thursday, February 27, 2014, 12:29 [IST]
X
Desktop Bottom Promotion