For Quick Alerts
ALLOW NOTIFICATIONS  
For Daily Alerts

ತೂಕ ಇಳಿಸಿಕೊಳ್ಳುವ ರಹಸ್ಯ ಅಡುಗೆ ಮನೆಯಲ್ಲಿಯೇ ಇದೆ!

By Deepak M
|

ತೂಕ ಇಳಿಸಿಕೊಳ್ಳಲು ಹೊರಟಿರುವಿರೆ, ಹಾಗಾದರೆ ಮೊದಲು ನಿಮ್ಮ ಅಡುಗೆ ಮನೆಯಲ್ಲಿ ಒಂದು 10 ಬದಲಾವಣೆಗಳನ್ನು ತನ್ನಿ, ಇದರಿಂದ ನಿಮ್ಮ ಹಂಬಲ ಬೇಗ ಈಡೇರುತ್ತದೆ.ತೂಕ ಇಳಿಸಿಕೊಳ್ಳಲು ಹೊರಡುವವರು ತಾವು ದಿನ ನಿತ್ಯ ಸೇವಿಸಬೇಕಾದ ಆಹಾರವನ್ನು ಪಟ್ಟಿಮಾಡಿಕೊಂಡು ತಿನ್ನಲು ಆರಂಭಿಸುತ್ತಾರೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ತೂಕ ಇಳಿಕೆಗಾಗಿ ಲಿಂಬೆ ಚಹಾ

ಆದರೆ ನಮ್ಮ ಅಡುಗೆ ಮನೆಯು ಈ ತೂಕ ಇಳಿಸುವ ತಪಸ್ಸನ್ನು ಭಂಗ ಮಾಡುವ ಅಪ್ಸರೆಯಂತೆ ನಾನಾ ಆಸೆ- ಆಮಿಷಗಳನ್ನು ತೋರಿಸಿ ಮತ್ತೆ ನಮ್ಮನ್ನು ಅದೇ ಕುರುಬು ತಿಂಡಿಗಳು- ಜಂಕ್ ಪುಡ್‍ಗಳನ್ನು ತಿನ್ನುವಂತೆ ಮಾಡಿಬಿಡುತ್ತದೆ. ಮತ್ತೆ ಇದಕ್ಕೆ ದಾರಿಯೇನು? ಎಂಬ ಚಿಂತೆಯೇ ಇದೆ. ಮೊದಲು ಈ ಸಮಸ್ಯೆಯನ್ನು ಮೂಲದಲ್ಲಿಯೇ ಬಗೆಹರಿಸಬೇಕು. ಮನೆಗೆ ಅಡುಗೆಯ ಪದಾರ್ಥಗಳನ್ನು ಕೊಳ್ಳುವಾಗಲೇ ಆರೋಗ್ಯಕರವಾದ ಪದಾರ್ಥಗಳನ್ನು ನಾವು ಕೊಳ್ಳುವ ಮೂಲಕ ಈ ಸಮಸ್ಯೆಗೆ ಪರಿಷ್ಕಾರವನ್ನು ಪಡೆಯಬಹುದು.

ನಿಮ್ಮ ಮನೆಯಲ್ಲಿ ಒಂದು ವೇಳೆ ಹೆಚ್ಚು ಜನರಿದ್ದು ನೀವು ಮಾತ್ರ ತೂಕ ಇಳಿಸಿಕೊಳ್ಳುವ ಪ್ರಯತ್ನದಲ್ಲಿದ್ದರೆ, ನಿಮಗೆ ಸುಲಭವಾಗಿ ಕಾಣುವಂತೆ ಮತ್ತು ಸಿಗುವಂತೆ ಆರೋಗ್ಯಕರವಾದ ಪದಾರ್ಥಗಳನ್ನೆ ಇಡಿ. ಅನಾರೋಗ್ಯಕರ ಪದಾರ್ಥಗಳು ನಿಮ್ಮ ಕೈಗೆಟುಕದಂತೆ ಮತ್ತು ಕಣ್ಣಿಗೆ ಕಾಣದಂತೆ ಎಚ್ಚರವಹಿಸಿ. ಅದು ಹೇಗೆ ಎಂದು ನಿಮ್ಮ ಸಂದೇಹವೇ ಅದಕ್ಕಾಗಿ ನಾವು ನಿಮಗಾಗಿ ಕೆಲವು ಸಲಹೆಗಳನ್ನು ತಂದಿದ್ದೇವೆ ಓದಿಕೊಳ್ಳಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ತೂಕ ತಗ್ಗಲು ನೆರವಾಗುವ ಅಡುಗೆಮನೆ ಸಾಮಗ್ರಿಗಳು

ನಿಮ್ಮ ಕೌಂಟರ್‌ಗಳನ್ನು ಖಾಲಿ ಮಾಡಿ.

ನಿಮ್ಮ ಕೌಂಟರ್‌ಗಳನ್ನು ಖಾಲಿ ಮಾಡಿ.

ನಿಮಗೆ ಕಾಣುವಂತೆ ಮತ್ತು ಕೈಗೆ ಸುಲಭವಾಗಿ ಸಿಗುವಂತೆ ಇರುವ ಆಹಾರ ಪದಾರ್ಥಗಳು ತಿನ್ನುವ ಚಪಲವನ್ನು ಹೆಚ್ಚಿಸುತ್ತವೆ. ಅದಕ್ಕಾಗಿ ಸ್ನಾಕ್ಸ್‌ನಂತಹ ಪದಾರ್ಥಗಳು ನಿಮ್ಮ ಕೈಗೆ ಸಿಗದಂತೆ ದೂರವಿಡಿ. ನಿಮ್ಮ ಕೌಂಟರಿನಲ್ಲಿರುವ ಕುಕಿ ಜಾರನ್ನು ತೆಗೆದು ದೂರದಲ್ಲಿಡುವುದನ್ನು ಮರೆಯಲೇಬೇಡಿ.

ಹಣ್ಣಿನ ಬೌಲನ್ನು ಖರೀದಿಸಿ.

ಹಣ್ಣಿನ ಬೌಲನ್ನು ಖರೀದಿಸಿ.

ಹಣ್ಣು ಮತ್ತು ತರಕಾರಿಗಳು ನಿಮ್ಮ ಕಣ್ಣಿಗೆ ಕಾಣುವಂತಿದ್ದರೆ ಖಂಡಿತವಾಗಿ ನೀವು ಅದನ್ನು ಸೇವಿಸುತ್ತೀರಿ. ಅದಕಾಗಿ ಒಂದು ಹಣ್ಣಿನ ಬೌಲ್ ಖರೀದಿಸಿ, ಅದರಲ್ಲಿ ಸೇಬು, ಕಿತ್ತಳೆ, ಬಾಳೆ ಹಣ್ಣು , ಅನಾನಸ್, ಮಾವು ಮತ್ತು ದ್ರಾಕ್ಷಿಗಳನ್ನು ಇಡಿ, ಆಗಾಗ ಸೇವಿಸಿ ಇದರಿಂದ ನಿಮ್ಮ ಆರೋಗ್ಯಕ್ಕೆ ಒಳ್ಳೆಯದು.

ಸಿಂಗಲ್- ಸರ್ವಿಂಗ್ ಕಂಟೈನರ್‌ಗಳನ್ನು ಕೊಂಡುಕೊಳ್ಳಿ.

ಸಿಂಗಲ್- ಸರ್ವಿಂಗ್ ಕಂಟೈನರ್‌ಗಳನ್ನು ಕೊಂಡುಕೊಳ್ಳಿ.

ಅಳಿದುಳಿದ ಆಹಾರ ಪದಾರ್ಥಗಳನ್ನು ಉಳಿಸಿಟ್ಟುಕೊಂಡು ತಿನ್ನುವ ಚಾಳಿಯನ್ನು ತಪ್ಪಿಸಿ. ಏಕೆಂದರೆ ರಾತ್ರಿ ಉಳಿದ ಊಟದ ಭಾಗವನ್ನು ನಾಳಿನ ಮಧ್ಯಾಹ್ನದ ಊಟಕ್ಕೆ ತಿನ್ನುವಾಗ ಆ ಭಾಗದಲ್ಲಿ ತಿನ್ನಬೇಕಾದ ಕ್ಯಾರಟ್ ಮುಂತಾದ ಸಲಾಡ್‍ಗಳು ಕಡಿಮೆಯಾಗುತ್ತವೆ. ಈ ರೀತಿ ಕ್ಯಾಲೋರಿ ಕಡಿಮೆ ಇರುವ ಊಟವನ್ನು ಮಧ್ಯಾಹ್ನ ಸೇವಿಸಿದರೆ, ಸಂಜೆಗೆ ನಿಮಗೆ ಏನಾದರು ಸ್ನಾಕ್ಸ್‌ ತಿನ್ನಬೇಕೆಂಬ ಬಯಕೆಯುಂಟಾಗುತ್ತದೆ. ಅದಕ್ಕಾಗಿ ಯಾವುದೇ ರೀತಿಯ ಅಳಿದುಳಿದ ಆಹಾರವನ್ನು ಸಂಗ್ರಹಿಸಿಡುವ ಕಂಟೇನರ್‌ಗಳನ್ನು ಖರೀದಿಸಬೇಡಿ. ಅಗತ್ಯಕ್ಕೆ ತಕ್ಕ ಆಹಾರ ತಯಾರಿಸಿ ಸೇವಿಸಿ, ಮುಂದಿನ ಊಟದ ಸಮಯಕ್ಕೆ ನಿಮಗೆ ಹಸಿವಾಗಿರಬೇಕು ಮತ್ತು ಆ ಸಮಯಕ್ಕೆ ನಿಮ್ಮ ಹಸಿವು ನೀಗಿಸುವ ಹಾಗು ಆ ಹೊತ್ತಿಗೆ ಸಾಕೆನಿಸುವ ಸಿಂಗಲ್- ಸರ್ವಿಂಗ್ ಕಂಟೈನರ್‌ನಲ್ಲಿ ನಿಮ್ಮ ಆಹಾರ ಸಿದ್ಧವಾಗಿರುವಂತೆ ನೋಡಿಕೊಳ್ಳಿ.

ಪಾರದರ್ಶಕ ಜಾರ್‌ಗಳು:

ಪಾರದರ್ಶಕ ಜಾರ್‌ಗಳು:

ಆಹಾರ ಸೇವಿಸಲು ಶಾಲೆಗಳು ಮಾಡುವ ಶಿಫಾರಸ್ಸುಗಳನ್ನು ಪಾಲಿಸಿ. ಹೇಗೆ ಶಾಲೆಗಳಲ್ಲಿ ಹೆಚ್ಚಿನ ಕ್ಯಾಲೋರಿ ಇರುವ ಸಂಕೀರ್ಣ ಪಿಷ್ಟಗಳು, ಕೊಬ್ಬುಗಳು ಕಡಿಮೆ ಇರುವ ಹಣ್ಣು ಮತ್ತು ತರಕಾರಿಗಳನ್ನು ಹೆಚ್ಚು ತರಲು ಮಕ್ಕಳಿಗೆ ಹೇಳುತ್ತಾರೋ, ಹಾಗೆಯೇ ನೀವು ಸಹ ನಿಮ್ಮ ಮನೆಗೆ ಇಂತಹ ಆರೋಗ್ಯಕಾರಿ ಹಣ್ಣು - ತರಕಾರಿಗಳನ್ನೆ ತನ್ನಿ. ಕೆಲವು ಹಣ್ಣು ಮತ್ತು ತರಕಾರಿಗಳನ್ನು ಸುಲಿದು, ಕತ್ತರಿಸಿ ಇಡಬೇಕು. ಇವುಗಳನ್ನು ಬಿಡುವಿದ್ದಾಗ ಕತ್ತರಿಸಿ, ಪಾರದರ್ಶಕ ಜಾರ್‌ನಲ್ಲಿ ಹಾಕಿ ರೆಫ್ರಿಜಿರೇಟರಿನಲ್ಲಿಟ್ಟರೆ, ಹಸಿವಾದಾಗ ತಪ್ಪದೆ ತಿನ್ನಬಹುದು.

ನಿಮ್ಮ ಫ್ರೀಜರನ್ನು ಹೆಚ್ಚು ಬಳಸಿ:

ನಿಮ್ಮ ಫ್ರೀಜರನ್ನು ಹೆಚ್ಚು ಬಳಸಿ:

ನಿಮ್ಮ ಮನೆಯಲ್ಲಿ ಅಳಿದುಳಿದ ಆಹಾರವನ್ನು ಸಂಗ್ರಹಿಸಲು ಯಾವುದೇ ಯೋಜನೆಗಳು ನಿಮ್ಮ ಬಳಿ ಇಲ್ಲವೇ? ಹಾಗಾದರೆ ಅವುಗಳನ್ನು ಯಾವುದೇ ಕಾರಣಕ್ಕು ನಿಮ್ಮ ರೆಫ್ರಿಜಿರೇಟರಿನಲ್ಲಿ ಇಡಬೇಡಿ. ಏಕೆಂದರೆ ನಿಮ್ಮ ಊಟದಲ್ಲಿ ಉಳಿದ ಕೋಳಿ ಮಾಂಸ ಅಥವಾ ಲಾಸಂಜಾಗಳನ್ನು ಫ್ರೀಜರಿನಲ್ಲಿಟ್ಟರೆ, ನಿಮಗೆ ಹಸಿವಾದಾಗ ಅವುಗಳನ್ನು ಸೇವಿಸಲು ಹಾತೊರಿಯುತ್ತೀರೆ ಹೊರತು ಸೇಬು ಅಥವಾ ಹಣ್ಣುಗಳನ್ನು ತಿನ್ನಲು ಮನಸ್ಸು ಮಾಡುವುದಿಲ್ಲ. ಹೀಗೆ ನೀವು ಅಳಿದುಳಿದ ಆಹಾರವನ್ನು ಸಂಗ್ರಹಿಸುವ ಪ್ರಕ್ರಿಯೆ ಕೈಬಿಟ್ಟರೆ, ಒಳ್ಳೆಯ ಊಟವನ್ನು ತಯಾರಿಸುವ ಯೋಜನೆ ಮಾಡಲು ಸಹಾಯಕವಾಗುತ್ತದೆ.

ಆರೋಗ್ಯಕರವಾದ ಆಹಾರಗಳು ನಿಮ್ಮ ದೃಷ್ಟಿಗೆ ನಿಲುಕವಂತಿರಲಿ:

ಆರೋಗ್ಯಕರವಾದ ಆಹಾರಗಳು ನಿಮ್ಮ ದೃಷ್ಟಿಗೆ ನಿಲುಕವಂತಿರಲಿ:

ನಿಮ್ಮ ರೆಫ್ರಿಜಿರೇಟರಿನ ಗಾತ್ರಕ್ಕೆ ತಕ್ಕಂತೆ ನೀವು ನಿಮ್ಮ ಆಹಾರ ಪದಾರ್ಥಗಳನ್ನು ಪುನಃ ಜೋಡಿಸಿಟ್ಟುಕೊಳ್ಳಬಹುದು. ಇದರಿಂದ ನಿಮಗೆ ಕೆಲವು ಅನುಕೂಲಗಳು ದೊರೆಯುತ್ತವೆ.

ಕೆಲವು ರೆಫ್ರಿಜಿರೇಟರುಗಳಲ್ಲಿ ಪ್ರೀಜರುಗಳು ಕೆಳಮಟ್ಟದಲ್ಲಿದ್ದು, ತರಕಾರಿ ಬಿನ್‍ಗಳು ನಿಮ್ಮ ದೃಷ್ಟಿಗೆ ನಿಲುಕುವ ಮಟ್ಟದಲ್ಲಿರುತ್ತವೆ. ಆದರೆ ನಿಮ್ಮ ಬಳಿ ಏನಾದರು ಫ್ರೀಜರುಗಳು ಮೇಲ್ಮಟ್ಟದಲ್ಲಿರುವ ಮತ್ತು ತರಕಾರಿ ಬಿನ್ ಮೊಣಕಾಲು ಮಟ್ಟದಲ್ಲಿರುವ ರೆಫ್ರಿಜಿರೇಟರ್ ಇದ್ದಲ್ಲಿ ಒಳ್ಳೆಯದೇ. ಇದರಿಂದ ತರಕಾರಿಗಳನ್ನು ಡ್ರಾಯರಿನಲ್ಲಿ ಹಾಕಿ ಇಡುವ ಪ್ರಮೇಯ ತಪ್ಪುತ್ತದೆ. ಏಕೆಂದರೆ ಅಪಾರದರ್ಶಕ ಬಿನ್‍ಗಳು ನಿಮ್ಮ ಆರೋಗ್ಯಕರವಾದ ಆಹಾರವನ್ನು ಕಾಣದಂತೆ ಮರೆಮಾಚುವ ಜೊತೆಗೆ ಕೊಳೆಯುವಂತೆ ಮಾಡಿಬಿಡುತ್ತವೆ. ಹಾಗಾಗಿ ನಿಮ್ಮ ಬಳಿ ಇಂತಹ ರೆಫ್ರಿಜಿರೇಟರೇನಾದರು ಇದ್ದಲ್ಲಿ, ಹಣ್ಣು- ತರಕಾರಿಗಳನ್ನು ಕ್ರಿಸ್ಪರ್‌ನಲ್ಲಿ ಹಾಕಿ ಇಡುವ ಬದಲು ಅವುಗಳು ಕಾಣುವಂತೆ ಮೇಲ್ಮಟ್ಟದಲ್ಲಿ ಇಡುಲು ಆರಂಭಿಸಿ.

ಹಣ್ಣು ಮತ್ತು ಇನ್ನಿತರ ಸ್ನಾಕ್ಸ್‌ಗಳನ್ನು ಮೊದಲೇ ತಯಾರಿಸಿಡಿ:

ಹಣ್ಣು ಮತ್ತು ಇನ್ನಿತರ ಸ್ನಾಕ್ಸ್‌ಗಳನ್ನು ಮೊದಲೇ ತಯಾರಿಸಿಡಿ:

ಸ್ನಾಕ್ಸ್‌ಗಳನ್ನು ಸೇವಿಸುವುದನ್ನು ನೀವು ಎಷ್ಟೇ ತಡೆದರು ಅವುಗಳನ್ನು ಸೇವಿಸಬೇಕೆಂಬ ಹಂಬಲ ಹೆಚ್ಚುತ್ತಲೇ ಹೋಗುತ್ತದೆ. ಅದಕ್ಕಾಗಿ ಒಂದು ವೇಳೆ ಸೇವಿಸಲೇ ಬೇಕೆನಿಸಿದಲ್ಲಿ ಕಡಿಮೆ ಪ್ರಮಾಣದ ಸ್ನಾಕ್ಸ್‌ ಪ್ಯಾಕ್‍ಗಳನ್ನು ಖರೀದಿಸಿ. ಇದರಿಂದ ನೀವು ತಿನ್ನುವ ಚಪಲವು ತೀರುತ್ತದೆ, ಅನಾರೋಗ್ಯವು ಕಡಿಮೆಯಾಗುತ್ತದೆ. ಜೊತೆಗೆ ನೀವು ಏನು ಸೇವಿಸುತ್ತಿದ್ದೀರಿ ಎಂದು ನಿಮಗೆ ಖಚಿತವಾಗಿ ತಿಳಿಯುತ್ತದೆ.

ನಿಮ್ಮ ಅಡುಗೆ ಮನೆಯಲ್ಲಿ ಆಹಾರೇತರ ವಸ್ತುಗಳನ್ನು ತೊಲಗಿಸಿ.

ನಿಮ್ಮ ಅಡುಗೆ ಮನೆಯಲ್ಲಿ ಆಹಾರೇತರ ವಸ್ತುಗಳನ್ನು ತೊಲಗಿಸಿ.

ಮನೆಯಲ್ಲಿ ತಯಾರಿಸುವ ಆಹಾರಕ್ಕೆ ಸಾಟಿಯಾದ ಅಂಶಗಳು ಯಾವುದು ಇಲ್ಲ. ಹಾಗಾಗಿ ಮನೆಯಲ್ಲಿ ಅಡುಗೆ ಮಾಡಲು ಅಗತ್ಯವಾಗಿರುವ ವಾತಾವರಣವನ್ನು ನಿರ್ಮಿಸಿ.

ನಿಮ್ಮ ಅಡುಗೆ ಮನೆಯ ಕೌಂಟರುಗಳಲ್ಲಿ ಪುಸ್ತಕಗಳು, ಬ್ಯಾಗ್‍ಗಳು ಮತ್ತು ಪತ್ರಿಕೆಗಳು ಇದ್ದಲ್ಲಿ ತೆರವು ಮಾಡಿ. ಅದರಲ್ಲಿ ಆಹಾರ ಪದಾರ್ಥಗಳನ್ನು ನಿಮ್ಮ ಅಗತ್ಯಕ್ಕೆ ತಕ್ಕಂತೆ ಜೋಡಿಸಿಕೊಳ್ಳಿ. ಇದರಿಂದ ನಿಮ್ಮ ಅಡುಗೆ ತಯಾರಿಸುವ ಪ್ರಕ್ರಿಯೆಗೆ ಅನುಕೂಲವಾಗುತ್ತದೆ. ನೀವು ಅಡುಗೆ ಮಾಡುವುದನ್ನು ಆನಂದಿಸುತ್ತೀರಿ.

ಅಡುಗೆ ಮನೆಯಲ್ಲಿಯೇ ಊಟವನ್ನು ಸೇವಿಸಿ:

ಅಡುಗೆ ಮನೆಯಲ್ಲಿಯೇ ಊಟವನ್ನು ಸೇವಿಸಿ:

ಮನೆಯ ಯಾವುದೋ ಮೂಲೆಯಲ್ಲಿ, ಯಾವುದೋ ಚಟುವಟಿಕೆಯಲ್ಲಿ ತೊಡಗಿಕೊಂಡು ಊಟವನ್ನು ಸೇವಿಸುವುದರಿಂದ ಮೆದುಳಿಗೆ ಊಟ ಸೇವಿಸುವ ಸಂದೇಶ ತಲುಪದೆ, ಹೆಚ್ಚು ಹೆಚ್ಚು ಆಹಾರವನ್ನು ಸೇವಿಸುವಂತಾಗುತ್ತದೆ.ಬಹಳಷ್ಟು ಮಂದಿ ಟಿ.ವಿ ನೋಡುತ್ತ, ಸುಮ್ಮನೆ ಸ್ನಾಕ್ಸ್‌ ತಿನ್ನುತ್ತಿರುತ್ತಾರೆ. ಎಲ್ಲವನ್ನು ಮಿತಿಯಲ್ಲಿ ತಿನ್ನಬೇಕು ಎಂದಾದಲ್ಲಿ ಮೊದಲು ಅಡುಗೆ ಮನೆಯಲ್ಲಿಯೇ ನಿಮ್ಮ ಆಹಾರವನ್ನು ಸೇವಿಸಲು ಆರಂಭಿಸಿ.

ಕಡಿಮೆ ಗಾತ್ರದ ತಟ್ಟೆಗಳು ಮತ್ತು ನೇರವಾಗಿ, ಉದ್ದವಾಗಿರುವ ಲೋಟಗಳನ್ನು ಬಳಸಿ.

ಕಡಿಮೆ ಗಾತ್ರದ ತಟ್ಟೆಗಳು ಮತ್ತು ನೇರವಾಗಿ, ಉದ್ದವಾಗಿರುವ ಲೋಟಗಳನ್ನು ಬಳಸಿ.

ಇತ್ತೀಚಿನ ಅಧ್ಯಯನಗಳ ಪ್ರಕಾರ ತಿಳಿದು ಬಂದಿರುವ ಅಂಶವೇನೆಂದರೆ;- ನಾವು ಏನನ್ನು ಮತ್ತು ಎಷ್ಟು ಆಹಾರವನ್ನು ಸೇವಿಸುತ್ತೇವೆ ಎಂಬುದು, ನಾವು ಬಳಸುವ ತಟ್ಟೆಗಳ ಮೇಲೆ ಅವಲಂಬಿತವಾಗಿರುತ್ತವೆಯಂತೆ.

ದೊಡ್ಡ ತಟ್ಟೆಗಳು ದೊಡ್ಡ ಮಟ್ಟದ ಆಹಾರವನ್ನು ಸೇವಿಸಲು ಪ್ರೇರೇಪಿಸುತ್ತವೆ. ಏಕೆಂದರೆ ತಟ್ಟೆಯಲ್ಲಿ ಬಡಿಸಿರುವುದನ್ನೆಲ್ಲ ಮುಗಿಸಬೇಕೆಂಬ ಬಯಕೆ ಎಲ್ಲರಿಗು ಇರುತ್ತದೆಯಲ್ಲವೇ?

ನಾವು ಬಳಸುವ ತಟ್ಟೆಗಳ ಗಾತ್ರವು ನಮ್ಮ ಆಹಾರದ ಪ್ರಮಾಣವನ್ನು ನಿರ್ಧರಿಸುತ್ತವೆ. ಅದಕ್ಕಾಗಿ ಸಣ್ಣ ತಟ್ಟೆಗಳನ್ನು ಬಳಸಿ ಕಡಿಮೆ ತಿನ್ನಿ, ಕೆಲವೊಂದು ಲೋಟಗಳಲ್ಲಿ ನಾವು ಸೇವಿಸುವ ಪದಾರ್ಥಗಳ ಕ್ಯಾಲೋರಿಗಳನ್ನು ಸಹ ನಮೂದಿಸಿರುತ್ತಾರೆ. ಇವುಗಳು ನಮ್ಮನ್ನು ಆಗಾಗ ಎಚ್ಚರಿಸುತ್ತಿರುತ್ತವೆ.

English summary

Secret to your weight loss lies in the kitchen

While eating healthier is on the to-do list for many, our kitchen can make it harder to eat healthy, and easier to fill ourselves with snacks and junk food. But there are ways to make the home more conducive to better eating.
Story first published: Saturday, March 22, 2014, 15:40 [IST]
X
Desktop Bottom Promotion