For Quick Alerts
ALLOW NOTIFICATIONS  
For Daily Alerts

ಚಳಿಗಾಲದಲ್ಲಿ ಸುರಕ್ಷಿತ ವ್ಯಾಯಾಮ ಸಲಹೆಗಳು

By Poornima Heggade
|

ಚಳಿಗಾಲ ಮತ್ತು ವ್ಯಾಯಾಮದ ಹೆಸರು ಒಟ್ಟಿಗೆ ತೆಗೆದುಕೊಳ್ಳುವುದು ಸ್ವಲ್ಪ ಕಷ್ಟ ಸಾಧ್ಯ. ಚಳಿಗೆ ಬೆಳಗ್ಗೆ ಗಂಟೆ ಒಂಬತ್ತಾದರೂ ಎದ್ದೇಳುವುದೇ ಕಷ್ಟ ಇನ್ನು ವ್ಯಾಯಾಮಮ ಮಾತೆಲ್ಲಿ ಎನ್ನುವವರೇ ಹೆಚ್ಚು. ಬೆಳಗ್ಗೆ ಎದ್ದಾಗಲೇ ಚಳಿ ನಡುಗುವ ಮೈ ಇದ್ದರೆ ಮತ್ತೆ ವ್ಯಾಯಾಮದ ಮಾತು ಇಲ್ಲವೇ ಇಲ್ಲ. ಇದರಿಂದಾಗಿ ಉತ್ಸಾಹಿಗಳೂ ಆಲಸಿಗಳಾಗುವ ಸಾಧ್ಯತೆ ಬಹಳ ಹೆಚ್ಚು. ಬೆಳಗ್ಗಿನ ಮಾತು ದೂರವಿರಲಿ ಸಂಜೆಯ ವೇಳೆಯೂ ವ್ಯಾಯಮ ಸಾಧ್ಯವಿಲ್ಲ. ಇದರ ಜೊತೆಗೆ ಇರುವ ಗಾಳಿ ನಿಮ್ಮ ಇರುವ ಚೂರು ಪಾರು ಆಸಕ್ತಿಯ ಮೇಲೂ ತಣ್ಣೀರು ಹಾಕುತ್ತದೆ.

ಚಳಿಗಾಲದಲ್ಲಿ ನಮ್ಮ ಮೈಯಲ್ಲಿ ಶಕ್ತಿಯ ಸಂಚಾರವೂ ಕಡಿಮೆ ಅನ್ನಿಸುತ್ತದೆ ಇದನ್ನು ಮರಳಿ ಪಡೆಯಲು ವ್ಯಾಯಾಮ ಬಹಳ ಸಹಾಯಕ. ನಮ್ಮ ದೇಹವನ್ನು ವ್ಯಾಯಾಮ ಬಡಿದೆಬ್ಬಿಸಿದಂತೆ ಮಾಡುತ್ತದೆ. ನಮ್ಮ ದೇಹದ ಚಟುವಟಿಕೆಗಳು ಹೆಚ್ಚಾದಂತೆ ನಮ್ಮ ಜೀರ್ಣಕ್ರಿಯೆಯೂ ಉತ್ತಮಗೊಳ್ಳುತ್ತದೆ. ವ್ಯಾಯಾಮ ಹೆಚ್ಚಾಗಿ ಮಾಡಿದಂತೆ ದೇಹ ಬಿಸಿಯಾಗಿರುತ್ತದೆ. ಬೆಳಗ್ಗೆ ಎದ್ದು ವ್ಯಾಯಾಮ ಮಾಡಿದರೆ ಇಡಿ ದಿನದ ಚಟುವಟಿಕೆಗಳಿಗೆ ದೇಹ ಅಣಿಗೊಳ್ಳುತ್ತದೆ.

ವ್ಯಾಯಾಮ ಆರಂಭ ಮಾಡಿದ ಮೇಲೆ ಪ್ರತಿ ದಿನ ಇದನ್ನು ಮಾಡಬೇಕು ಮತ್ತು ಸರಿಯಾಗಿ ಮಾಡಬೇಕು. ಇದರ ಜೊತೆಗೆ ಕೆಲವು ಸುರಕ್ಷತೆಯ ನಿಯಮಗಳ ಮೇಲೂ ಗಮನ ಕೊಡಬೇಕು. ನಿಮ್ಮ ಸಾಮಾನ್ಯ ವ್ಯಾಯಾಮ ನಿಯಮಗಳು ಚಳಿಗಾಲದ ಅವಧಿಗೆ ಸೂಕ್ತವಾಗಲಿಕ್ಕಿಲ್ಲ. ಚಳಿಗಾಲದ ಸಮಯದಲ್ಲಿ ಚರ್ಮ ಓಣಗಿದ್ದು ಇದರಿಂದಾಗಿ ನಿಮಗೆ ವ್ಯಾಯಾಮದ ಅವಧಿಯಲ್ಲಿ ಚರ್ಮದ ಮೇಲೆ ಬೇಗನೆ ಗಾಯಗಳಾಗಬಹುದು.

ಹೀಗಾಗಿ ಚಳಿಗಾಲದಲ್ಲಿ ಪಾಲಿಸಬೇಕಾದ ನಿಯಮಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.

1.ಬೆಚ್ಚಗಿನ ಬಟ್ಟೆಗಳು

1.ಬೆಚ್ಚಗಿನ ಬಟ್ಟೆಗಳು

ಚಳಿಗಾಲದ ಅವಧಿ ನಮ್ಮ ಚರ್ಮ ಮತ್ತು ಆರೋಗ್ಯಕ್ಕೆ ಬಹಳ ಹಾನಿಕರ. ನಿಮ್ಮ ದೇಹವನ್ನು ಸರಿಯಾಗಿ ಮುಚ್ಚಿರದಿದ್ದರೆ ನಿಮಗೆ ನೆಗಡಿ ಮತ್ತು ಕಫದ ಸಮಸ್ಯೆ ಬರಬಹುದು. ಮಫ್ಲರ್ ಮತ್ತು ಸ್ಕಾರ್ಫ್ ನಿಮಗೆ ಈ ಸಮಯದಲ್ಲಿ ಅಗತ್ಯ. ತೆರೆದ ಸ್ಥಳಗಳಲ್ಲಿ ಮತ್ತು ಸರಿಯಾದ ರಕ್ಷಣೆ ಇಲ್ಲದೆ ವ್ಯಾಯಾಮ ಮಾಡಬೇಡಿ. ಜಾಕೆಟ್ ಮತ್ತು ಇತರೆ ಚಳಿಯಿಂದ ರಕ್ಷಣೆ ಪಡೆಯುವ ಉಡುಗೆ ಇರಲಿ. ಚಳಿ ಗಾಳಿ ಜೋರಾಗಿದ್ದರೆ ಮತ್ತಷ್ಟು ಎಚ್ಚರಿಕೆ ವಹಿಸಿ.

2.ಲಘುವಾಗಿ ವ್ಯಾಯಾಮ ಮಾಡಿ

2.ಲಘುವಾಗಿ ವ್ಯಾಯಾಮ ಮಾಡಿ

ನಮ್ಮ ದೇಹದ ಕೀಲುಗಳು ಚಳಿಯ ಸಮಯದಲ್ಲಿ ಗಟ್ಟಿಯಾಗಿರುತ್ತವೆ. ನೀವು ಬೇರೆ ಅವಧಿಯಲ್ಲಿ ಮಾಡಿದಂತೆ ತೀವ್ರವಾಗಿ ವ್ಯಾಯಾಮ ಮಾಡಿದರೆ ಈ ಕೀಲುಗಳಲ್ಲಿ ನೋವಾಗಬಹುದು. ಹೀಗಾಗಿ ನಿಮಗೆ ಸುಲಭವಾಗಿ ಮಾಡಲು ಆಗುವಷ್ಟೇ ವ್ಯಾಯಾಮ ಮಾಡಿ. ಒಂದು ವೇಳೆ ನೋವು ಕಂಡುಬಂದಲ್ಲಿ ಅದನ್ನು ನಿರ್ಲಕ್ಷಿಸಬೇಡಿ. ಸ್ನಾಯುಗಳು ಮತ್ತು ಮೂಳೆಗಳ ನೋವನ್ನು ಆದಷ್ಟು ಬೇಗ ಗುಣಪಡಿಸಿಕೊಳ್ಳಿ.

3.ಸಾಕಷ್ಟು ನೀರನ್ನು ಕುಡಿಯಿರಿ

3.ಸಾಕಷ್ಟು ನೀರನ್ನು ಕುಡಿಯಿರಿ

ವಾತಾವರಣದಲ್ಲಿರುವ ಕಡಿಮೆ ಆದ್ರತೆಯ ಕಾರಣ ನೀವು ವ್ಯಾಯಾಮ ಮಾಡುವಾಗ ನಿಮಗೆ ಬಾಯಾರಿಕೆ ಆಗಬಹುದು. ಸಾಕಷ್ಟು ದಣಿವಾಗಬಹುದು. ಹೀಗಾಗಿ ಚಳಿಗಾಲದಲ್ಲೂ ಸಾಮಾನ್ಯ ಸಮಯಗಳಂತೆ ನೀರನ್ನು ಕುಡಿಯಿರಿ. ಒಂದೇ ಸಲಕ್ಕೆ ಹೆಚ್ಚು ನೀರು ಕುಡಿಯಲು ಆಗದಿದ್ದರೆ ಸಣ್ಣ ಪ್ರಮಾಣದಲ್ಲಿ ಕುಡಿಯಿರಿ ಆದರೆ ದೇಹದಲ್ಲಿ ನೀರಿನ ಅಂಶ ಕಡಿಮೆ ಆಗದಂರೆ ಎಚ್ಚರ ವಹಿಸಿ.

4.ಲಘು ವ್ಯಾಯಾಮಗಳು

4.ಲಘು ವ್ಯಾಯಾಮಗಳು

ಚಳಿಗಾಲದ ಅವಧಿಯಲ್ಲಿ ತೀವ್ರವಾದ ವ್ಯಾಯಾಮಗಳನ್ನು ಮಾಡುವುದನ್ನು ಬಿಟ್ಟು ಕೆಲವು ಸುಲಭವಾದ ಮತ್ತು ಅಷ್ಟೇನೂ ದಣಿವಾಗದ ವ್ಯಾಯಾಮಗಳನ್ನು ಮಾಡಿ. ಯೋಗ, ಧ್ಯಾನ ಮತ್ತು ನೃತ್ಯ ದಂತಹ ವ್ಯಾಯಾಮಗಳು ಬಹಳ ನೆರವಾಗಬಹುದು. ಇಂತಹ ವ್ಯಾಯಾಮಗಳು ನಿಮ್ಮ ದೇಹ ಮತ್ತು ಚರ್ಮಕ್ಕೂ ಬಹಳ ನೆರವಾಗುತ್ತವೆ.

5.ಒತ್ತಡದಿಂದ ದೂರವಿರಿ

5.ಒತ್ತಡದಿಂದ ದೂರವಿರಿ

ವ್ಯಾಯಾಮಗಳಿಂದ ನಿಮ್ಮನ್ನು ನೀವೆ ಬಹಳ ಒತ್ತಡಕ್ಕೆ ನಿಲುಕಿಸಿಕೊಳ್ಳಬೇಡಿ. ಮೇಷಿನ್ನು ಮತ್ತು ಭಾರ ಎತ್ತುವ ವ್ಯಾಯಾಮಗಳಿಗಿಂತ ನೆಲದ ಮೇಲೆ ಕುಳಿತು ಮಾಡುವ ವ್ಯಾಯಾಮಗಳನ್ನು ಹೆಚ್ಚಾಗಿ ಪಾಲಿಸಿ. ಇದರಿಂದಾಗಿ ಕೀಲುಗಳು ಮತ್ತು ಸ್ನಾಯುಗಳಲ್ಲಿ ನೋವು ಕಾಣಿಸಿಕೊಳ್ಳಬಹುದು. ಚಳಿಗಾಲದಲ್ ಸಮಯದಲ್ಲಿ ಒತ್ತಡ ಮತ್ತು ಬಳಲಿಕೆ ಬಹಳ ಕಿರಿಕಿರಿ ಮಾಡುತ್ತದೆ.

English summary

Safe Exercising Tips For Winter

A cold and chilly morning is never an encouragement to go out and exercise. Winter mornings are usually lethargic and lazy.
Story first published: Saturday, January 4, 2014, 15:18 [IST]
X
Desktop Bottom Promotion