For Quick Alerts
ALLOW NOTIFICATIONS  
For Daily Alerts

ಎಣ್ಣೆಯ ಪುನರ್ಬಳಕೆ ಆರೋಗ್ಯಕ್ಕೆ ಏಕೆ ಹಾನಿಕಾರಕ ?

By Arpitha Rao
|

ಎಣ್ಣೆ ಅಡುಗೆಯಲ್ಲಿ ಮುಖ್ಯವಾಗಿ ಬಳಸಲಾಗುತ್ತದೆ,ಅದರಲ್ಲೂ ಭಾರತೀಯ ಖಾದ್ಯಗಳಲ್ಲಿ ಎಣ್ಣೆಗಳ ಬಳಕೆ ಅಧಿಕ.ಒಗ್ಗರಣೆಯಿಂದ ಪ್ರಾರಂಭಿಸಿ ಪ್ರತಿಯೊಂದರಲ್ಲೂ ಎಣ್ಣೆ ಮುಖ್ಯವಾಗಿ ಬೇಕೇಬೇಕು.ಬಾಣಲೆಯನ್ನು ಒಲೆಯ ಮೇಲಿಟ್ಟು ಎಣ್ಣೆ ಹೊಯ್ಯುವುದು ಸಾಮಾನ್ಯ,ಕೆಲವೊಮ್ಮೆ ಅದೇ ಎಣ್ಣೆಯನ್ನು ಪುನರ್ಬಳಕೆ ಕೂಡ ಮಾಡಲಾಗುತ್ತದೆ.ಇದು ಆರೋಗ್ಯಕ್ಕೆ ಹಾನಿ ಉಂಟುಮಾಡುತ್ತದೆಯೇ?ನೋಡೋಣ ಬನ್ನಿ.

ನೀವು ಬಳಸಿದ ಎಣ್ಣೆಯನ್ನೇ ಮತ್ತೆ ಕರಿಯಲು ಬಳಸಿದಾಗ ಏನಾಗುತ್ತದೆ? ಕರಿದ ಎಣ್ಣೆಯನ್ನು ಪುನಃ ಬಳಸುವುದರಿಂದ ಮುಕ್ತ ರಡಿಕಲ್ಸ್ ಹೆಚ್ಚಿಸಿ ಆರೋಗ್ಯದಲ್ಲಿ ದೀರ್ಘಾವದಿ ತೊಂದರೆಗಳು ಕಾಣಿಸಿಕೊಳ್ಳುವಂತೆ ಮಾಡುತ್ತದೆ. ಆಹಾರ ತಜ್ಞರ ಪ್ರಕಾರ ಮುಕ್ತ ರಾಡಿಕಲ್ಸ್ ಆರೋಗ್ಯಯುತ ಜೀವಸತ್ವಗಳ ಜೊತೆ ಸೇರಿ ಆರೋಗ್ಯವನ್ನು ಹದಗೆಡಿಸುತ್ತದೆ.ಇದರಿಂದ ಕ್ಯಾನ್ಸರ್ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಿಸುವ ಎಥೆರೋಜೆನಿಕ್ ಕೂಡ ಕಾಣಿಸಿಕೊಳ್ಳಬಹುದು.

ಕಡಿಮೆ ಕೊಬ್ಬಿನೊಂದಿಗೆ ಫಾಸ್ಟ್ ಫುಡ್ ಅನ್ನು ಸವಿಯುವ ಉಪಾಯಗಳು

ಎಣ್ಣೆಯನ್ನು ಪುನರ್ಬಳಕೆ ಮಾಡುವುದರಿಂದ ಉಂಟಾಗುವ ಇತರ ಆರೋಗ್ಯ ಸಮಸ್ಯೆಗಳು
ಅಸಿಡಿಟಿ , ಹೃದಯ ತೊಂದರೆ ಅಲ್ಜಮೀರ್ ಮತ್ತು ಪರ್ಕಿನ್ಸೋನ್ ಕಾಯಿಲೆಗಳು , ಗಂಟಲು ಕೆರೆತ (ಉಸಿರಾಟದ ತೊಂದರೆಯಿಂದ)

Reusing oil — why is it dangerous for your health?

ಎಣ್ಣೆಯನ್ನು ಎಷ್ಟು ಭಾರಿ ಪುನಃ ಅಡುಗೆಯಲ್ಲಿ ಉಪಯೋಗಿಸಬಹುದು?
ಪೌಷ್ಟಿಕ ತಜ್ಞರು ಹೇಳುವ ಪ್ರಕಾರ ಎಣ್ಣೆ ಕರಿಯಲು ಬಳಸಿದ್ದಾರ?ಯಾವ ರೀತಿ ಬಳಸಿದ್ದಾರೆ?ಯಾವ ಎಣ್ಣೆ ಎಂಬುದರ ಮೇಲೆ ಇದು ಅವಲಂಬಿತವಾಗಿದೆ ಎನ್ನುತ್ತಾರೆ.'

ಆದರೆ ಒಮ್ಮೆ ಬಳಸಿದ ಎಣ್ಣೆಯನ್ನು ಮತ್ತೆ ಬಳಸದಿರುವುದು ಸೂಕ್ತ ಎನ್ನಲಾಗುತ್ತದೆ.ಇದು ಸ್ವಲ್ಪ ಕಷ್ಟವಾದರೂ ಕೂಡ ಹೀಗೆ ಎಣ್ಣೆಯನ್ನು ಒಮ್ಮೆ ಮಾತ್ರ ಬಳಸುವುದರಿಂದ ಇತರ ಕಾಯಿಲೆಗಳು ಬರುತ್ತವೆ ಎಂಬ ಅಪಾಯವನ್ನು ತಪ್ಪಿಸುವುದು ಸಾಧ್ಯವಾಗುತ್ತದೆ ಎನ್ನಲಾಗುತ್ತದೆ.ಈ ಕೆಳಗೆ ಕೆಲವು ಸಲಹೆಗಳನ್ನು ನೀಡಲಾಗಿದೆ.

ತಣ್ಣೀರು ಸ್ನಾನದ 12 ಪ್ರಯೋಜನಗಳು ನಿಮಗೆ ಗೊತ್ತೇ?

1.ಒಮೆ ನೀವು ಬಳಸಿದ ಎಣ್ಣೆಯನ್ನು ತಣಿಯಲು ಬಿಡಿ,ನಂತರ ಅದನ್ನು ಸೋಸಿ ಗಟ್ಟಿ ಮುಚ್ಚಲು ಇರುವ ಡಬ್ಬದಲ್ಲಿ ಶೇಖರಿಸಿಡಿ.ಹೀಗೆ ಮಾಡುವುದರಿಂದ ಈ ಎಣ್ಣೆಯನ್ನು ಮೊದಲು ಮಾಡಿದ ಆಹಾರ ಕಣಗಳು ಉಳಿದುಕೊಳ್ಳುವುದಿಲ್ಲ ಮತ್ತು ಸಮಸ್ಯೆ ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಬಹುದು.

2.ಪ್ರತಿಭಾರಿ ಇದನ್ನು ಬಳಸುವಾಗ ಅದರ ಬಣ್ಣ ಮತ್ತು ಹೇಗಿದೆ ಎಂಬುದನ್ನು ನೋಡಿಕೊಳ್ಳಿ.ಇದು ಮೊದಲ ಬಾರಿ ಬಳಸಿದ್ದಕ್ಕಿಂತ ಹೆಚ್ಚು ಘಾಡ ಬಣ್ಣ ಹೊಂದಿದ್ದು,ಹೆಚ್ಚು ಗ್ರೀಸಿ ಎಂದೆನಿಸಿದರೆ,ಬಳಕೆಗೆ ಸೂಕ್ತವಲ್ಲ ಎಂದರ್ಥ.

3.ನೀವು ಎಣ್ಣೆಯನ್ನು ಕಾಯಲು ಇಟ್ಟಾಗ ಇದರಲ್ಲಿ ಮೊದಲಿಗಿಂತ ಹೆಚ್ಚು ಹೊಗೆ ಕಾಣಿಸಿಕೊಂಡರೆ ಇದನ್ನು ಎಸೆಯುವುದು ಸೂಕ್ತ.ಇದರಿಂದ ಅಲ್ಜಮೀರ್,ಪರ್ಕಿನ್ಸೋನ್,ಯಕೃತ್ತು ಕಾಯಿಲೆಗಳು,ಮೂರ್ಚೆ ರೋಗಗಳು ಕಾಣಿಸಿಕೊಳ್ಳುವ ಸಂಭವ ಇರುತ್ತದೆ.

ಬ್ಲ್ಯಾಕ್ ಕಾಫಿ VS ಸಾಮಾನ್ಯ ಕಾಫಿ ಇದರಲ್ಲಿ ಯಾವುದು ಆರೋಗ್ಯಕಾರಿ?

4.ಎಲ್ಲಾ ಎಣ್ಣೆಗಳು ಒಂದೇ ರೀತಿ ಇರುವುದಿಲ್ಲ.ಕೆಲವು ಎಣ್ಣೆಗಳು ಹೆಚ್ಚು ಹೊಗೆ ಹೊರಡಿಸುತ್ತವೆ.ಸೂರ್ಯಕಾಂತಿ, ಕುಸುಬೆ,ಸೊಯಾಬೀನ್,ಅಕ್ಕಿ ಹೊಟ್ಟು,ಕಡಲೆಕಾಯಿ,ಎಳ್ಳು,ಸಾಸಿವೆ ಈ ಎಣ್ಣೆಗಳು ಹೆಚ್ಹು ಬಿಸಿಯಾದರೂ ಸಹಿಸುತ್ತವೆ.ಆದರೆ ಅಲೀವ್ ಎಣ್ಣೆ ಇನ್ನಿತರ ಎಣ್ಣೆಗಳು ಬಿಸಿಯನ್ನು ಸಹಿಸುವುದಿಲ್ಲ.ಆದ್ದರಿಂದ ಬಳಸುವ ಮೊದಲು ಇದರ ಬಗ್ಗೆ ಗಮನವಿರಲಿ. ಅದರಲ್ಲೂ ಕರಿದ ಎಣ್ಣೆಯನ್ನು ಮತ್ತೆ ಬಳಸುವುದನ್ನು ತಪ್ಪಿಸಿ.

English summary

Reusing oil — why is it dangerous for your health?

Oil is a very essential part of cooking, especially Indian cooking. Right from the tadka to the sautéing of vegetables, oil comes into play. It is usually the first step of cooking. Place a pan on the gas and pour some oil into it.
Story first published: Tuesday, June 3, 2014, 14:50 [IST]
X
Desktop Bottom Promotion