For Quick Alerts
ALLOW NOTIFICATIONS  
For Daily Alerts

ದೇಹದ ಆರೋಗ್ಯಕಾರಿ ಬೆಳವಣಿಗೆಗೆ ಸಲಹೆಗಳು

By Arpitha Rao
|

ಫಿಟ್ ದೇಹವನ್ನು ಹೊಂದಿರುವುದು ಆರೋಗ್ಯದ ಲಕ್ಷಣ.ದೇಹವನ್ನು ಫಿಟ್ ಆಗಿರಿಸಿಕೊಳ್ಳಲು ಆಹಾರ ಮತ್ತು ಜೀವನ ಶೈಲಿ ಇವೆರಡೂ ಮುಖ್ಯವಾಗುತ್ತವೆ.ಜೊತೆಗೆ ವ್ಯಾಯಾಮ ಕೂಡ ಅಷ್ಟೇ ಮುಖ್ಯವಾಗುತ್ತದೆ.ಆರೋಗ್ಯಯುತವಾದ ದೇಹ ಹೊಂದಲು ಫಿಟ್ ಆಗಿರುವ ಮನಸ್ಸು ಕೂಡ ಅಷ್ಟೇ ಮುಖ್ಯ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ:ಆರೋಗ್ಯ ಉತ್ತಮಪಡಿಸುವಲ್ಲಿ ನುಗ್ಗೆ ಸೊಪ್ಪಿನ ಮಹತ್ವ

ನಾವು ಆರೋಗ್ಯಯುತವಾಗಿದ್ದಲ್ಲಿ ನಮ್ಮ ದೇಹ ಫಿಟ್ ಆಗಿರುತ್ತದೆ ಅದಕ್ಕೆಂದೇ ಸಾಕಷ್ಟು ಹಣ ಖರ್ಚು ಮಾಡುವ ಅಗತ್ಯವಿಲ್ಲ.ಮನೆಯಲ್ಲಿಯೇ ದೊರೆಯುವ ಸಾಕಷ್ಟು ಪದಾರ್ಥಗಳಿಂದ ದೇಹವನ್ನು ಫಿಟ್ ಆಗಿ ಇರಿಸಿಕೊಳ್ಳಬಹುದು. ಇಲ್ಲಿ ಕೆಲವು ಮನೆಮದ್ದುಗಳನ್ನು ನೀಡಲಾಗಿದೆ ಇದರಿಂದ ನೀವು ಫಿಟ್ ಆಗಿ ಇರಬಹುದು.ಇದು ಆಹಾರ,ಜೀವನ ಶೈಲಿ ಮತ್ತು ವ್ಯಾಯಮ ಎಲ್ಲವುಗಳನ್ನು ಒಳಗೊಂಡಿದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಏಲಕ್ಕಿಯ ಚಮತ್ಕಾರೀ ಪ್ರಯೋಜನಗಳು

ಫಿಟ್ ಆಗಿರಲು ತಜ್ಞರು ಹೇಳುವ ಕೆಲವು ಟಿಪ್ಸ್:

ತಾರುಣ್ಯತೆ ಕಾಪಾಡಲು ಸಮುದ್ರಾಹಾರಗಳು:

ತಾರುಣ್ಯತೆ ಕಾಪಾಡಲು ಸಮುದ್ರಾಹಾರಗಳು:

ಸಮುದ್ರಾಹಾರದಲ್ಲಿ ಪ್ರೋಟೀನ್,ಖನಿಜಾಂಶ ಮತ್ತು ಒಮೇಗಾ - ೩ ಇರುವುದರಿಂದ ವಾರದಲ್ಲಿ ಮೂರು ಬಾರಿ ಮೀನನ್ನು ತಿನ್ನುವುದರಿಂದ ಮುಖ ಸುಕ್ಕುಗಟ್ಟುವುದು ಶೇಖಡಾ ೩೦ ರಷ್ಟು ಕಡಿಮೆಯಾಗುತ್ತದೆ.ಸಮುದ್ರಾಹಾರದಲ್ಲಿರುವ ಪೋಷಕಾಂಶಗಳು ಚರ್ಮವನ್ನು ಮೃದುವಾಗಿಸುವಲ್ಲಿ ಸಹಕರಿಸುತ್ತದೆ.ಸಾಲ್ಮನ್ ನಲ್ಲಿರುವ ಅಸ್ತಾಕ್ಸಾಂತಿನ್ ಅಂಶ ಸುಕ್ಕನ್ನು ಕಡಿಮೆ ಮಾಡಿ ಚರ್ಮವನ್ನು ನುಣುಪಾಗಿಸುತ್ತದೆ.

ಒತ್ತಡ ಕಡಿಮೆ ಮಾಡಲು ಗ್ರೀನ್ ಟೀ:

ಒತ್ತಡ ಕಡಿಮೆ ಮಾಡಲು ಗ್ರೀನ್ ಟೀ:

ಗ್ರೀನ್ ಟೀ ಯಲ್ಲಿರುವ ಸಂಯುಕ್ತಗಳು ಮೆದುಳಿನಲ್ಲಿ ಸಕ್ಕರೆ ಅಂಶ ಕಡಿಮೆ ಮಾಡಿ ಎನ್ದೊರ್ಫಿನ್ ಎಂಬ ಹಾರ್ಮೋನನ್ನು ಉತ್ತೇಜಿಸುತ್ತದೆ.ಆದ್ದರಿಂದ ನೀವು ನಿಶ್ಯಕ್ತಿ ಅನುಭವಿಸುತ್ತಿದ್ದರೆ ಗ್ರೀನ್ ಟೀ ಕುಡಿಯಲು ವೈದ್ಯರು ಸಲಹೆ ನೀಡುತ್ತಾರೆ.

ಹೃದಯವನ್ನು ಬಲಯುತವಾಗಿರಿಸಲು ವಾಲ್ನಟ್:

ಹೃದಯವನ್ನು ಬಲಯುತವಾಗಿರಿಸಲು ವಾಲ್ನಟ್:

ಹೃದಯ ತಜ್ಞರ ಪ್ರಕಾರ ಪ್ರತಿದಿನ ಐದರಿಂದ ಆರು ವಾಲ್ನಟ್ ತಿನ್ನುವುದರಿಂದ ಹೃದಯವನ್ನು ಶಕ್ತಿಯುತವಾಗಿರಿಸಿಕೊಳ್ಳಬಹುದು ಮತ್ತು ಸುಮಾರು ಮೂರು ವರ್ಷ ಹೆಚ್ಚು ಆಯಸ್ಸು ಪಡೆಯಬಹುದು ಎನ್ನುತ್ತಾರೆ.ಈ ಕುರುಕಲು ವಾಲ್ನಟ್ ತಿನ್ನುವುದರಿಂದ ಅಪಧಮನಿಯ ಏಕ ಪರ್ಯಾಪ್ತ ಕೊಬ್ಬುಗಳು ನೈಸರ್ಗಿಕವಾಗಿ ಸಮತೋಲನ ಪಡೆಯುತ್ತದೆ.

ನೆನಪಿನ ಶಕ್ತಿಗೆ ಅರಿಶಿಣ:

ನೆನಪಿನ ಶಕ್ತಿಗೆ ಅರಿಶಿಣ:

ತಜ್ಞರು ಹೇಳುವ ಪ್ರಕಾರ ನಿಮ್ಮ ಆಹಾರದಲ್ಲಿ ಅರಿಶಿನವನ್ನು ಬಳಸುವುದರಿಂದ ಶೇಖಡಾ ೩೦ ರಷ್ಟು ಜ್ಞಾಪಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು.ಅರಿಶಿನದಲ್ಲಿರುವ ಕರ್ಕ್ಯುಮಿನ್ ಅಂಶ ಮೆದುಳಿನ ಪೋಷಣೆಗೆ ಸಹಾಯಕವಾಗುವ ಪರಿಣಾಮಕಾರಿ ಅಂಶ.

ಉಸಿರಾಟದ ಮೂಲಕ ಒತ್ತಡ ನಿವಾರಿಸಿಕೊಳ್ಳಿ:

ಉಸಿರಾಟದ ಮೂಲಕ ಒತ್ತಡ ನಿವಾರಿಸಿಕೊಳ್ಳಿ:

ಆತಂಕ ಮತ್ತು ಒತ್ತಡವನ್ನು ನಿವಾರಿಸಿಕೊಳ್ಳಲು ಉಸಿರನ್ನು ಹೊಟ್ಟೆಯಿಂದ ಪ್ರಾರಂಭಿಸಿ.ನಿಮ್ಮ ಹೊಟ್ಟೆಯ ಮೂಲಕ ಉಸಿರನ್ನು ತೆಗೆದುಕೊಂಡು ಆರು ಬಾರಿ ಉಚ್ವಾಸ ಮತ್ತು ನಿಶ್ವಾಸವನ್ನು ಮಾಡಿ.ನಾಲ್ಕು ಬಾರಿ ಮೂಗಿನ ಮೂಲಕ ಉಸಿರೆಳೆದುಕೊಂಡು ಬಾಯಿಯ ಮೂಲಕ ಹೊರಗೆ ಬಿಡಿ.ನಿಮ್ಮ ಒತ್ತಡ ಕಡಿಮೆಯಾಗಿದೆ ಎನಿಸುವವರೆಗೆ ಹೀಗೆ ಮುಂದುವರೆಸಿ.

ನೋವುಗಳನ್ನು ಸಣ್ಣ ನಿದ್ರೆಯ ಮೂಲಕ ಹೋಗಲಾಡಿಸಿ:

ನೋವುಗಳನ್ನು ಸಣ್ಣ ನಿದ್ರೆಯ ಮೂಲಕ ಹೋಗಲಾಡಿಸಿ:

ತಲೆನೋವು,ಬೆನ್ನುನೋವು,ಗಂಟಲು ನೋವು ಇವುಗಳಿಂದ ಬೇಸತ್ತಿದ್ದೀರ?ಚಿಂತೆ ಬಿಡಿ ಸ್ವಲ್ಪ ಸಮಯ ನಿದ್ದೆ ಮಾಡಿ.ಅಧ್ಯಯನದ ಪ್ರಕಾರ ಸ್ವಲ್ಪ ಸಮಯ ನಿದ್ದೆ ಮಾಡುವುದರಿಂದ ಒಂದು ತಿಂಗಳಲ್ಲಿ ಅರ್ಧದಷ್ಟು ನೋವುಗಳನ್ನು ಕಡಿಮೆ ಮಾಡಿಕೊಳ್ಳಬಹುದು ಎಂದು ಸಾಬೀತಾಗಿದೆ.ನಿದ್ದೆ ಹಾನಿಗೊಳಗಾದ ಅಂಗಾಂಶವನ್ನು ಸರಿಪಡಿಸಲು ಸಹಕರಿಸುತ್ತದೆ.

ಬಿ ಪಿ ನಿರ್ವಹಿಸಲು ದಾಲ್ಚಿನ್ನಿ ಬಳಸಿ:

ಬಿ ಪಿ ನಿರ್ವಹಿಸಲು ದಾಲ್ಚಿನ್ನಿ ಬಳಸಿ:

ಸಂಶೋಧಕರ ಪ್ರಕಾರ ನಿಮ್ಮ ಪ್ರತಿನಿತ್ಯದ ಆಹಾರದಲ್ಲಿ ಅರ್ಧ ಚಮಚ ದಾಲ್ಚಿನ್ನಿ ಚಕ್ಕೆ/ಪುಡಿ ಬಳಸುವುದರಿಂದ ರಕ್ತದಲ್ಲಿ ಸಕ್ಕರೆ ಅಂಶ ಶೇಖಡಾ ೨೯ ರಷ್ಟು ಕಡಿಮೆಯಾಗುತ್ತದೆ.ಇದು ಸಣ್ಣ ಕರುಳು ಕಾರ್ಬೋಹೈಡ್ರೇಟ್ ಹೀರುವಿಕೆಯನ್ನು ಕಡಿಮೆ ಮಾಡುತ್ತದೆ.

ತರಕಾರಿಗಳು ಬಲಯುತವಾಗಿಸುತ್ತದೆ:

ತರಕಾರಿಗಳು ಬಲಯುತವಾಗಿಸುತ್ತದೆ:

ರೋಗವನ್ನು ತಡೆಯಲು ಸಾಕಷ್ಟು ಬೇರೆಬೇರೆ ರೀತಿಯ ತರಕಾರಿಗಳನ್ನು ಬಳಸಿ.ಕ್ಯಾರೆಟ್,ದೊಣ್ಣೆ ಮೆಣಸು,ಬೆಂಡೆಕಾಯಿ ಇವುಗಳೆಲ್ಲಾ ದೇಹಕ್ಕೆ ಬಲವನ್ನು ನೀಡಲು ಹೆಚ್ಚು ಸಹಾಯಕ.ಬೇರೆ ಬೇರೆ ರೀತಿಯ ಹೆಚ್ಚು ತರಕಾರಿಗಳನ್ನು ಬಳಸುವುದರಿಂದ ವೈರಸ್ ಗಳು ನಿಮ್ಮ ದೇಹದೊಳಗೆ ಸೇರದಂತೆ ತಡೆಯುತ್ತವೆ.

ವೈರಸ್ ಕೊಲ್ಲಲು ಜೇನು:

ವೈರಸ್ ಕೊಲ್ಲಲು ಜೇನು:

ಶುದ್ಧ ಜೇನಿನಲ್ಲಿ ನೈಸರ್ಗಿಕ ಪ್ರತಿರೋಧಕ ಅಂಶವಿರುತ್ತದೆ.ನೀವು ಅನಾರೋಗ್ಯ ಹೊಂದಿದಾಗ ಜೇನನ್ನು ಬಳಸುವುದರಿಂದ ಮೂರು ದಿನ ಬೇಗ ಗುಣಮುಖರಾಗಬಹುದು.ತಂಡಿ ಮತ್ತಿರರ ಸೈನಸ್ ತೊಂದರೆಯನ್ನು ಜೇನು ನಿವಾರಿಸುತ್ತದೆ.

English summary

Remedies to stay super fit

Fit body is a sign of health. For a fit body food and life style combo should work together. And one more important thing is exercise. For a fit body fit mind is also important.
Story first published: Saturday, March 1, 2014, 11:46 [IST]
X
Desktop Bottom Promotion