For Quick Alerts
ALLOW NOTIFICATIONS  
For Daily Alerts

ಸ್ತ್ರೀಯರಲ್ಲಿ ಕಂಡುಬರುವ ಸ್ತನ ನೋವುಗಳಿಗೆ ಕಾರಣಗಳೇನು?

By Super
|

ಹೆಣ್ಣಿನ ದೇಹದಲ್ಲಿನ ಪ್ರಮುಖವಾದ ಅಂಗಗಳಲ್ಲಿ ಸ್ತನಗಳು ಸಹ ಒಂದು. ಸ್ತನದ ಕುರಿತಾಗಿ ಹೆಂಗಸರು ವಿಪರೀತವಾದ ಕಾಳಜಿಯನ್ನು ವಹಿಸುತ್ತಾರೆ. ಇನ್ನು ಸ್ತನಕ್ಕೆ ಏನಾದರು ಹೆಚ್ಚು ಕಡಿಮೆ ಸಂಭವಿಸಿದರೆ ಸ್ತ್ರೀಯರು ತಕ್ಷಣ ವೈದ್ಯರ ಬಳಿಗೆ ಓಡುತ್ತಾರೆ.

ಸಾಮಾನ್ಯವಾಗಿ ಸ್ತನಗಳು ಹಲವಾರು ಕಾರಣಗಳಿಗಾಗಿ ನೋಯುತ್ತವೆ ಮತ್ತು ಗಾಯಗೊಳ್ಳುತ್ತವೆ. ಸ್ತನಗಳ ನೋವು ಸಾಮಾನ್ಯವಾದ ನೋವಾಗಿರುವುದಿಲ್ಲ. ಹಾಗಾಗಿ ಇದು ಶುರುವಾದ ತಕ್ಷಣ ಉದಾಸೀನ ಮಾಡದೆ ಇದಕ್ಕೆ ಚಿಕಿತ್ಸೆಯನ್ನು ಹುಡುಕಿ. ಬಹುಶಃ ಇದು ಋತು ಚಕ್ರದ ಸಮಸ್ಯೆಗೆ ನೀಡಿದ ಔಷಧಿಯ ಅಡ್ಡ ಪರಿಣಾಮದಿಂದ ಬಂದಿರಬಹುದು. ಇನ್ನೂ ಕೆಲವೊಂದು ಸಂದರ್ಭಗಳಲ್ಲಿ ಹೆಂಗಸರು ನಿರ್ದಿಷ್ಟ ವಯಸ್ಸು ತಲುಪಿದಾಗ ಅವರ ಸ್ತನಗಳಲ್ಲಿ ನೋವು ಕಂಡು ಬರುತ್ತದೆ. ಇದು ಸಹ ಅಸಡ್ಡೆ ಮಾಡಬಾರದಾದ ಸಮಸ್ಯೆಯೆಂಬುದನ್ನು ನೀವು ಮರೆಯಬಾರದು. ಹಾಗೆಂದು ಇದೇನು ದೊಡ್ಡ ಸಮಸ್ಯೆಯಲ್ಲ, ಹಾಗೆಂದು ಇದನ್ನು ಉದಾಸೀನ ಸಹ ಮಾಡುವಂತಿಲ್ಲ.

Reasons Why Your Breasts Hurt

ಕೆಲವೊಂದು ಹೆಂಗಸರಲ್ಲಿ ಸ್ತನ ನೋವು ವಿಶೇಷವಾಗಿ ಮುಟ್ಟು ನಿಲ್ಲುವ ಸಮಯದ ಆರಂಭದಲ್ಲಿ ಕಂಡುಬರುತ್ತದೆ. ದೇಹದಲ್ಲಿ ಹಾರ್ಮೋನ್ ಅಸಮತೋಲನವಿದ್ದರೆ, ಇದು ಸಾಮಾನ್ಯವಾಗಿ ಕಂಡು ಬರುತ್ತದೆ. ಇಲ್ಲಿ ನಾವು ನಿಮಗಾಗಿ ಅತಿ ಸಾಮಾನ್ಯವಾಗಿ ಕಂಡು ಬರುವ ಸ್ತನದ ನೋವಿಗೆ ಕಾರಣವಾದ ಅಂಶಗಳನ್ನು ವಿವರಿಸಿದ್ದೇವೆ, ಓದಿ ಕೊಳ್ಳಿ.

ಹಾರ್ಮೋನುಗಳ ಅಸಮತೋಲನ
ಸ್ತನದ ನೋವು ಸಾಮಾನ್ಯವಾಗಿ ನಿಮ್ಮ ದೇಹದಲ್ಲಿನ ಹಾರ್ಮೋನುಗಳ ಅಸಮತೋಲನದ ಕಾರಣವಾಗಿ ಕಂಡು ಬರುತ್ತದೆ. ಸಾಮಾನ್ಯವಾಗಿ ಋತು ಚಕ್ರ, ಗರ್ಭಧಾರಣೆ ಮತ್ತು ಮುಟ್ಟು ನಿಲ್ಲುವ ಸಮಯದ ಆರಂಭದಲ್ಲಿ ಕಂಡು ಬರುತ್ತದೆ. ಇದಕ್ಕೆಲ್ಲ ಮುಖ್ಯ ಕಾರಣ ಹೆಂಗಸರ ದೇಹದಲ್ಲಿ ಎಸ್ಟ್ರೋಜೆನ್ ಎಂಬ ಹಾರ್ಮೊನಿನ ಪ್ರಮಾಣ ಕಡಿಮೆಯಾಗುವ ಕಾರಣದಿಂದ ಇವರಿಗೆ ಸ್ತನದಲ್ಲಿ ನೋವು ಕಂಡು ಬರುತ್ತದೆ. ಇನ್ನು ಹೆಂಗಸರು ಮಾನಸಿಕ ಒತ್ತಡಕ್ಕೆ ಸಿಲುಕಿಕೊಂಡರೆ, ಆಗ ಅವರ ದೇಹದಲ್ಲಿ ಹಾರ್ಮೋನುಗಳ ಏರು ಪೇರಾಗಿ ಸ್ತನದ ನೋವು ಕಾಣಿಸಿಕೊಳ್ಳುತ್ತದೆ.

ಬಿಗಿಯಾದ ಬ್ರಾಗಳು
ಬಿಗಿಯಾದ ಬ್ರಾಗಳನ್ನು ಧರಿಸುವುದರಿಂದ ಸಹ ಸ್ತನಗಳಲ್ಲಿ ನೋವು ಕಂಡು ಬರುತ್ತದೆ. ನಿಮಗೆ ತಿಳಿದಿರಬಹುದು, ಬಿಗಿಯಾದ ಬ್ರಾಗಳು ನಿಮ್ಮ ಸ್ತನಗಳಿಗೆ ಗಾಳಿಯಾಡಲು ಬಿಡುವುದಿಲ್ಲ ಎಂಬುದು. ಈ ಕಾರಣದಿಂದಲೇ ಸ್ತನಗಳಿಗೆ ನೋವು ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಯಾವಾಗ ನಿಮ್ಮ ಸ್ತನಗಲು ದಪ್ಪಗಾಗಲು ಆರಂಭವಾಗುತ್ತವೋ, ಆಗ ನೀವು ಬ್ರಾಗಳ ಗಾತ್ರದಲ್ಲಿ ಸಹ ಹೊಂದಾಣಿಕೆ ಮಾಡಿಕೊಳ್ಳಬೇಕು. ಇದು ಮಾಡದಿದ್ದಾಗ ನಿಮ್ಮ ಸ್ತನದಲ್ಲಿ ನೋವು ಕಂಡು ಬರುತ್ತದೆ.

ವ್ಯಾಯಾಮ ಮಾಡುವಾಗ ಆಧಾರ
ಒಂದು ವೇಳೆ ನೀವು ಮನೆಯಲ್ಲಿ ವ್ಯಾಯಾಮ ಮಾಡುತ್ತಿದ್ದಲ್ಲಿ, ಬ್ರಾ ಧರಿಸುವುದನ್ನು ಉದಾಸೀನ ಮಾಡುತ್ತೀರಿ. ಆಗ ಏನಾಗುತ್ತದೆ, ನಿಮ್ಮ ವ್ಯಾಯಾಮವು ಒಂದು ಸುಸಜ್ಜಿತವಾದ ಬ್ರಾ ಅಥವಾ ಆಧಾರವಿಲ್ಲದೆ ನಡೆಯುತ್ತದೆ. ಇದರ ಪರಿಣಾಮವಾಗಿ ವ್ಯಾಯಾಮ ಮಾಡುವಾಗ ನಿಮ್ಮ ಸ್ತನಗಳು ಮೇಲಕ್ಕೆ, ಕೆಳಕ್ಕೆ ಸಾವಕಾಶವಾಗಿ ಕುಣಿಯುತ್ತವೆ. ಆಗ ಅದರಿಂದ ನೋವು ಆರಂಭವಾಗುತ್ತದೆ. ಇದು ವ್ಯಾಯಾಮ ಮಾಡುವ ಅತ್ಯಂತ ಕೆಟ್ಟ ವಿಧಾನ ಎಂಬುದನ್ನು ಮರೆಯಬೇಡಿ. ಯಾವುದೇ ಕಾರಣಕ್ಕು ನಿಮ್ಮ ಸ್ತನಗಳನ್ನು ಸಡಿಲವಾಗಿ ಬಿಡಬೇಡಿ, ವ್ಯಾಯಾಮ ಮಾಡುವಾಗ ಅವುಗಳಿಗೆ ಒಳ್ಳೆಯ ಆಧಾರವನ್ನು ನೀಡಿ.

ಅಧಿಕವಾದ ಕೆಫಿನ್
ನಿಮಗೆ ಕೆಫಿನ್ ಸೇವಿಸುವ ಹವ್ಯಾಸ ಹೆಚ್ಚಾಗಿದ್ದಲ್ಲಿ, ಸ್ತನದ ನೋವು ಸಹ ಕಂಡು ಬರುವ ಸಾಧ್ಯತೆ ಹೆಚ್ಚು. ಮಿತವಾಗಿ ಸೇವಿಸಿದರೆ ಕೆಫಿನ್ ಆರೋಗ್ಯಕ್ಕೆ ಒಳ್ಳೆಯದು, ಆದರೆ ಅದು ಮಿತಿ ಮೀರಿದರೆ ಆರೋಗ್ಯಕ್ಕೆ ಆಪತ್ತು ತಪ್ಪಿದ್ದಲ್ಲ. ಒಂದು ವೇಳೆ ನಿಮ್ಮ ಸ್ತನಗಳು ಗಟ್ಟಿಯಾದಂತಹ ಮತ್ತು ಅಧಿಕ ಪ್ರಮಾಣದ ನೋವಿನ ಅನುಭವವನ್ನು ನೀಡಿದಲ್ಲಿ, ನೀವು ಸೇವಿಸುವ ಕೆಫಿನ್ ಪ್ರಮಾಣವನ್ನು ಕಡಿಮೆ ಮಾಡಿ. ಅಂದರೆ ದಿನಕ್ಕೆ 5 ಕಪ್ ಸೇವಿಸುತ್ತಿದ್ದಲ್ಲಿ, ಅದನ್ನು 2-3 ಕಪ್‍ಗೆ ಇಳಿಸಿ. ಸ್ತ್ರೀಯರಲ್ಲಿ ಮಾತ್ರ ಕಂಡು ಬರುವ ಸ್ವಭಾವಗಳಿವು!

ಔಷಧಿಗಳ ಅಡ್ಡ ಪರಿಣಾಮ
ಸ್ತನಗಳಲ್ಲಿ ನೋವು ಕಂಡು ಬರುವುದಕ್ಕೆ ಔಷಧಿಗಳ ಅಡ್ಡಪರಿಣಾಮವು ಸಹ ಕಾರಣವಾಗಿರಬಹುದು. ಕೆಲವೊಂದು ಔಷಧಿಗಳು ನಮ್ಮ ದೇಹದಲ್ಲಿರುವ ಎಸ್ಟ್ರೋಜೆನ್ ಉತ್ಪಾದನೆಯ ಮೇಲೆ ನೇರ ಪರಿಣಾಮ ಬೀರುತ್ತವೆ. ಈ ಹಾರ್ಮೋನುಗಳು ಸ್ತನದ ಸುಗಮ ಕಾರ್ಯ ವೈಖರಿಯ ಮೇಲೆ ಪರಿಣಾಮ ಬೀರುತ್ತವೆ. ನಿಮಗೆ ಪ್ರತಿ ದಿನದ ಅಂತ್ಯಕ್ಕೆ ಸ್ತನಗಳಲ್ಲಿ ಯಾವುದೇ ವ್ಯತಿರಿಕ್ತ ಪರಿಣಾಮ ಕಂಡು ಬರಬಾರದು ಎಂದಾದಲ್ಲಿ, ಅದಕ್ಕಾಗಿ ಅಡ್ಡ ಪರಿಣಾಮ ಅಥವಾ ಅಲರ್ಜಿ ಉಂಟು ಮಾಡದ ಔಷಧಿಗಳನ್ನು ಸೇವಿಸಿ.

ಆಸಿಡಿಟಿ ಪರಿಣಾಮಗಳು
ಆಸಿಡಿಟಿ ಸಹ ಸ್ತನದ ನೋವಿಗೆ ಪ್ರಮುಖ ಕಾರಣವಾಗಿರುತ್ತದೆ. ಒಂದು ವೇಳೆ ನೀವು ಆಸಿಡಿಟಿಯ ಭಾದೆಗೆ ಒಳಪಟ್ಟಿದ್ದಲ್ಲಿ, ಆಂಟಾಸಿಡ್ ತೆಗೆದುಕೊಳ್ಳಲು ಪ್ರಯತ್ನಿಸಿ. ಇವುಗಳು ನಿಮ್ಮ ಆಸಿಡಿಟಿಯನ್ನು ನಿವಾರಿಸುತ್ತವೆ. ಆಗ ಅದರಿಂದಲೆ ನಿಮಗೆ ಗೊತ್ತಾಗುತ್ತದೆ, ನಿಮ್ಮ ಸ್ತನ ನೋಯುತ್ತಿರುವುದು ಆಸಿಡಿಟಿಯಿಂದಲೇ ಅಥವಾ ಅಲ್ಲವೇ ಎಂದು.

English summary

Reasons Why Your Breasts Hurt

Breasts are an important part of a woman’s body. When it comes to dealing with issues related to the breast, women should pay instant attention. If the breasts have any kind of trouble, women should visit the doctor at once.
Story first published: Friday, October 3, 2014, 12:56 [IST]
X
Desktop Bottom Promotion