For Quick Alerts
ALLOW NOTIFICATIONS  
For Daily Alerts

ಬಾಯಿ ದುರ್ಗಂಧವನ್ನು ನಿವಾರಿಸಿ ನಂತರ ಹೆಣ್ಣಿಗೆ ಚುಂಬಿಸಿ!

|

ವ್ಯಾಲಂಟೇನ್ ದಿನದ ಹಿಂದಿನ ದಿನವೇ ಅಂದರೆ ಫೆಬ್ರವರಿ 13 ಚುಂಬನ ದಿನವಾಗಿದೆ. ಪರಸ್ಪರ ಆಂತರಿಕ ಸಮಯವನ್ನು ಕಳೆಯಲು ಕಿಸ್ ಡೇ ತುಂಬಾ ವಿಶೇಷವಾಗಿದೆ. ನಿಮ್ಮ ಬಾಯಿಯ ದುರ್ವಾಸನೆಯಿಂದ ನಿಮ್ಮ ಸಂಗಾತಿಗೆ ನೀವು ನೀಡುವ ಕಿಸ್ ಅನ್ನು ವೃಥಾ ಹಾಳುಮಾಡಿಕೊಳ್ಳದಿರಿ!

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ನೀವು ಪ್ರೇಮ ದಿನವನ್ನು ಈ ರೀತಿಯಾಗಿ ಆಚರಿಸಿ!

ಚೆನ್ನಾಗಿ ಧಿರಿಸು ಧರಿಸಿಕೊಂಡು ಸುಗಂಧ ದ್ರವ್ಯವನ್ನು ಲೇಪಿಸಿಕೊಂಡು ವ್ಯಾಲಂಟೇನ್ ದಿನವನ್ನು ನಿಮ್ಮ ಸಂಗಾತಿಯೊಂದಿಗೆ ಆಚರಿಸಿದರೆ ಮಾತ್ರ ಸಾಲದು, ನಿಮ್ಮ ಬಾಯಿಯ ಸ್ವಚ್ಛತೆಯ ಕಡೆಗೂ ನೀವು ಗಮನ ನೀಡುವುದು ಅನಿವಾರ್ಯ. ನಿಮ್ಮ ಬಾಯಿಯ ದುರ್ನಾತ ಅಸಹ್ಯ ಭಾವನೆಯನ್ನು ಉಂಟುಮಾಡಬಹುದು. ನೀವು ಸಂಗಾತಿಯೊಡನೆ ಸಮಯ ಕಳೆಯಬೇಕೆಂದು ಅಂದುಕೊಂಡಲ್ಲಿ ಮೊದಲು ಬಾಯಿಯ ಕಡೆಗೆ ಗಮನ ನೀಡಿ.

ಬಾಯಿ ವಾಸನೆ ಬರಲು ಹಲವಾರು ಕಾರಣಗಳಿವೆ. ಧೂಮಪಾನದಿಂದ ಹಿಡಿದು ಬಾಯಿಯ ಸ್ವಚ್ಛತೆಯಲ್ಲಿ ನಿಗಾ ವಹಿಸದಿರುವುದೂ ಕೂಡ ಇದಕ್ಕೆ ಕಾರಣವಾಗಿದೆ ವ್ಯಕ್ತಿಯಿಂದ ವ್ಯಕ್ತಿಗೆ ಈ ಸಮಸ್ಯೆಯ ಮೂಲ ಬೇರೆ ಬೇರೆಯದಾಗಿರುತ್ತದೆ. ಬಾಯಿಯ ದುರ್ವಾಸನೆಯನ್ನು ಕೆಲವೊಂದು ನೈಸರ್ಗಿಕ ಪರಿಹಾರಗಳ ಮೂಲಕ ನೀಗಿಸಬಹುದು.

ಕೆಟ್ಟ ದುರ್ಗಂಧವನ್ನು ಹೋಗಲಾಡಿಸಲು ಮನೆ ಮದ್ದು ನಿಮ್ಮ ಬಳಿ ಇರುವುದರಿಂದ ಆಧುನಿಕ ಔಷಧ ಪದ್ಧತಿಯ ಕಡೆಗೆ ವೃಥಾ ಗಮನ ಹರಿಸದಿರಿ. ಏಲಕ್ಕಿಯನ್ನು ಬಾಯಲ್ಲಿ ಹಾಕಿಕೊಂಡಿದ್ದರೆ ಈ ದುರ್ವಾಸನೆಯನ್ನು ತಡೆಗಟ್ಟಬಹುದು. ನಿಮ್ಮ ಈ ಸಮಸ್ಯೆಯನ್ನು ನೀಗಿಸುವ ಕೆಲವೊಂದು ಮನೆಮದ್ದುಗಳು ಇಲ್ಲಿವೆ. ಇದರಿಂದ ಯಾವುದೇ ರೀತಿಯ ಅಡ್ಡಪರಿಣಾಮಗಳಿಲ್ಲ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ವ್ಯಾಲಂಟೇನ್ ದಿನಕ್ಕಾಗಿ ಬಾದಾಮಿ ಚಾಕಲೇಟ್ ರೆಸಿಪಿ

1.ಏಲಕ್ಕಿ ಜಗಿಯಿರಿ

1.ಏಲಕ್ಕಿ ಜಗಿಯಿರಿ

ಏಲಕ್ಕಿ ನೈಸರ್ಗಿಕ ಬಾಯಿ ಸುವಾಸಕ ಆಗಿರುವುದರಿಂದ ಒಂದೆರಡು ಏಲಕ್ಕಿಯನ್ನು ಬಾಯಲ್ಲಿ ಹಾಕಿಕೊಂಡು ಜಗಿಯಿರಿ. ಇದು ಬಾಯಿ ದುರ್ಗಂಧವನ್ನು ಕೂಡಲೇ ತಡೆಯುತ್ತದೆ.

2.ಲವಂಗ

2.ಲವಂಗ

ಶೀತ ಮತ್ತು ಕೆಮ್ಮಿಗೆ ನೈಸರ್ಗಿಕ ಚಿಕಿತ್ಸಕವಾಗಿರುವ ಲವಂಗ ಬಾಯಿಯ ದುರ್ವಾಸನೆಯನ್ನು ಹೋಗಲಾಡಿಸುವಲ್ಲಿ ಸಹಾಯ ಮಾಡುತ್ತದೆ.

3.ನಕ್ಷತ್ರ ಮೊಗ್ಗು

3.ನಕ್ಷತ್ರ ಮೊಗ್ಗು

ಚೈನೀಸ್ ಮಸಾಲಾ ಪದಾರ್ಥವಾಗಿರುವ ಇದು ನಿಮ್ಮ ಬಾಯಿಯ ವಾಸನೆಯನ್ನು ಹೋಗಲಾಡಿಸಿ ಚುಂಬಿಸಲು ನಿಮ್ಮನ್ನು ಸಿದ್ಧಗೊಳಿಸುತ್ತದೆ.

4.ಮಿಂಟ್ ಎಲೆಗಳು

4.ಮಿಂಟ್ ಎಲೆಗಳು

ಹೆಚ್ಚಿನ ಬಾಯಿ ಸ್ವಚ್ಛಕಗಳು ಮಿಂಟ್ ಅನ್ನು ಹೊಂದಿರುತ್ತವೆ. ಈ ರಾಸಾಯನಿಕ ಪದಾರ್ಥಗಳ ಮೇಲೆ ವೃಥಾ ಏಕೆ ದುಡ್ಡು ಸುರಿಯುತ್ತೀರಿ? ಸ್ವಚ್ಛವಾದ ಮಿಂಟ್ ಎಲೆಗಳನ್ನು ಜಗಿಯಿರಿ ಮತ್ತು ನೈಸರ್ಗಿಕವಾಗಿ ಬಾಯಿ ದುರ್ಗಂಧವನ್ನು ತಡೆಗಟ್ಟಿ.

5.ಕ್ಯಾನ್‌ಬೆರ್ರೀಸ್

5.ಕ್ಯಾನ್‌ಬೆರ್ರೀಸ್

ಬಾಯಿಯ ವಾಸನೆ, ಕೆಟ್ಟ ಉಸಿರು ವಸಡಿನ ಸಮಸ್ಯೆಯನ್ನು ಕ್ಯಾನ್‌ಬೆರ್ರೀಸ್ ದೂರಮಾಡುತ್ತದೆ. ಹಲ್ಲನ್ನು ಬಿಳಿ ಮಾಡುವ ಅಂಶ ಕೂಡ ಇದರಲ್ಲಿದೆ.

6.ಸಿಟ್ರಸ್ ಹಣ್ಣುಗಳು

6.ಸಿಟ್ರಸ್ ಹಣ್ಣುಗಳು

ಸಿಟ್ರಸ್ ಹಣ್ಣುಗಳು ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿರುತ್ತವೆ. ತೂಕ ಇಳಿಸುವಲ್ಲಿ ಪರಿಣಾಮಕಾರಿಯಾಗಿರುವುದನ್ನು ಹೊರತುಪಡಿಸಿ ಸಿಟ್ರಸ್ ಹಣ್ಣುಗಳು ಸೂಕ್ತವಾದ ಬಾಯಿಯ ಸ್ವಚ್ಛತೆಯನ್ನೂ ಇದು ಕಾಪಾಡುತ್ತದೆ. ಲಿಂಬೆ, ದ್ರಾಕ್ಷಿ ಇತರ ಸಿಟ್ರಸ್ ಅಂಶವುಳ್ಳ ಹಣ್ಣುಗಳನ್ನು ಸೇವಿಸುವುದು ಉತ್ತಮವಾಗಿರುತ್ತದೆ.

7.ಪೇರಳೆ

7.ಪೇರಳೆ

ಪೇರಳೆ ಹಣ್ಣಿನ ಬೀಜಗಳು ಬಾಯಿಯ ಕೆಟ್ಟ ವಾಸನೆಯನ್ನು ನೈಸರ್ಗಿಕವಾಗಿ ದೂರಮಾಡುತ್ತದೆ. ಇದು ಬಾಯಿಗೆ ಮಾತ್ರವಲ್ಲದೆ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.

8.ಈರುಳ್ಳಿ ಮತ್ತು ಬೆಳ್ಳುಳ್ಳಿ ಸೇವನೆ ಬೇಡ

8.ಈರುಳ್ಳಿ ಮತ್ತು ಬೆಳ್ಳುಳ್ಳಿ ಸೇವನೆ ಬೇಡ

ಈರುಳ್ಳಿ ಮತ್ತು ಬೆಳ್ಳುಳ್ಳಿ ನಿಮ್ಮ ಆಹಾರದಲ್ಲಿ ವಿಶೇಷ ರುಚಿಯನ್ನು ಬೆರೆಸುತ್ತದೆ. ಆದರೆ ಅವುಗಳು ಕೆಟ್ಟ ಬಾಯಿ ವಾಸನೆಯನ್ನು ಹಾಗೆಯೇ ಉಳಿಸುತ್ತವೆ. ನೀವು ಚುಂಬಿಸಲು ಸಿದ್ಧರಾದಾಗ, ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಇಡೀ ದಿನ ಸೇವಿಸದಿರಿ.


English summary

Prevent Mouth Odour: Be Kiss Ready!

Kiss Day is on 13th February, just a day before the big Valentine's Day. Kiss Day is a very special day for couples as they get to share some intimate time with each other. You do not want to spoil that special moment of kissing your partner by goofing up!
Story first published: Thursday, February 13, 2014, 16:58 [IST]
X
Desktop Bottom Promotion