For Quick Alerts
ALLOW NOTIFICATIONS  
For Daily Alerts

ಬಾಳೆಹಣ್ಣು ಸೇವನೆಯ ಪರಿಣಾಮಕಾರಿ ಪ್ರಯೋಜನಗಳು

By Deepak M
|

ಈ ಅಂಕಣ ಓದಿದ ಮೇಲೆ ನೀವು ಬಾಳೆಹಣ್ಣನ್ನು ಮೊದಲಿನಂತೆ ನೋಡುವುದಿಲ್ಲ. ಅದರಲ್ಲಿನ ಆರೋಗ್ಯಕಾರಿ ಪ್ರಯೋಜನಗಳು ಮತ್ತು ಅವುಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಲು ಇರುವ ಕಾರಣಗಳು ನಿಮ್ಮನ್ನು ಬಾಳೆಹಣ್ಣಿನ ಅಭಿಮಾನಿಯಾಗುವಂತೆ ಮಾಡುತ್ತದೆ. ಬಾಳೆಹಣ್ಣು ಖಿನ್ನತೆಯಿಂದ ದೂರ ಮಾಡುತ್ತದೆ, ಬುದ್ಧಿಮತ್ತೆಯನ್ನು ಹೆಚ್ಚಿಸುತ್ತದೆ,

ಹ್ಯಾಂಗೋವರ್ ನಿವಾರಿಸುತ್ತದೆ, ಮುಂಜಾನೆ ಆವರಿಸುವ ಮಂದ ಬುದ್ಧಿ (ಮಾರ್ನಿಂಗ್ ಸಿಕ್‍ನೆಸ್) ದೂರ ಮಾಡುತ್ತದೆ, ಮೂತ್ರ ಪಿಂಡದ ಕ್ಯಾನ್ಸರ್‌ನಿಂದ, ಮಧುಮೇಹ, ಆಸ್ಟಿಯೊಪೊರೊಸಿಸ್ ಮತ್ತು ದೃಷ್ಟಿದೋಷದಿಂದ ನಿಮ್ಮನ್ನು ಕಾಪಾಡುತ್ತದೆ. ಇದರ ಜೊತೆಗೆ ಸೊಳ್ಳೆ ಕಡಿತದಿಂದ ಬರುವ ತುರಿತವನ್ನೂ ಇದು ನಿವಾರಿಸುತ್ತದೆ ಮತ್ತು ಶೂಗಳಿಗೆ ಅದ್ಭುತವಾದ ಹೊಳಪನ್ನು ನೀಡುತ್ತದೆ.

ಬಾಳೆಹಣ್ಣು ಖಿನ್ನತೆಯನ್ನು ಹೊರದಬ್ಬುತ್ತದೆ

ಬಾಳೆಹಣ್ಣು ಖಿನ್ನತೆಯನ್ನು ಹೊರದಬ್ಬುತ್ತದೆ

ಬಾಳೆಹಣ್ಣುಗಳಲ್ಲಿ ಹೆಚ್ಚಿನ ಮಟ್ಟದಲ್ಲಿ ಟ್ರೈಟೊಫಾನ್ ಇರುತ್ತದೆ. ಇದು ಸೆರೊಟೊನಿನ್ ಆಗಿ ಪರಿವರ್ತನೆಗೊಳ್ಳುತ್ತದೆ. ಈ ಸೆರೊಟೊನಿನ್ ಮೆದುಳಿನಲ್ಲಿನ ಸಂತೋಷಕಾರಕ ನರತಂತುಗಳನ್ನು ಉದ್ದೀಪಿಸುತ್ತದೆ. ಆ ಮೂಲಕ ಇದು ಖಿನ್ನತೆಯನ್ನು ದೂರ ಮಾಡುತ್ತದೆ.

ವ್ಯಾಯಾಮ

ವ್ಯಾಯಾಮ

ಶ್ರಮದಾಯಕವಾದ ವರ್ಕ್‍ಔಟ್ ಮಾಡುವ ಮುನ್ನ ಎರಡು ಬಾಳೆಹಣ್ಣು ಸೇವಿಸಿ. ಇದು ನಿಮ್ಮಲ್ಲಿ ಶಕ್ತಿಯನ್ನು ದ್ವಿಗುಣಗೊಳಿಸುವುದರ ಜೊತೆಗೆ, ದೇಹದಲ್ಲಿನ ಸಕ್ಕರೆ ಪ್ರಮಾಣವನ್ನು ಹಾಗೆಯೆ ಕಾಪಾಡುತ್ತದೆ. ಟೆನ್ನಿಸ್ ಪಟುಗಳ ಬ್ಯಾಗ್‍ನಲ್ಲಿ ಈ ಕಾರಣಕ್ಕಾಗಿ ಬಾಳೆಹಣ್ಣು ತಪ್ಪದೆ ಇರುತ್ತದೆ. ಬಾಳೆಹಣ್ಣು ತಿನ್ನುವುದರಿಂದ ವರ್ಕ್‍ಔಟ್ ಮಾಡುವಾಗ ಆಗುವ ಹುಳುಕು ಮತ್ತು ರಾತ್ರಿ ಹೊತ್ತು ಕಂಡು ಬರುವ ಜೋಮಿನಿಂದ ಮುಕ್ತಿ ಪಡೆಯಬಹುದು.

ಮೂಳೆಗಳನ್ನು ಸದೃಢಗೊಳಿಸುತ್ತದೆ

ಮೂಳೆಗಳನ್ನು ಸದೃಢಗೊಳಿಸುತ್ತದೆ

ಬಾಳೆಹಣ್ಣು ಮೂತ್ರ ವಿಸರ್ಜನೆಯ ಸಂದರ್ಭದಲ್ಲಿ ಉಂಟಾಗುವ ಕ್ಯಾಲ್ಸಿಯಂನ ನಷ್ಟವನ್ನು ತುಂಬುತ್ತದೆ ಹಾಗು ಮೂಳೆಗಳನ್ನು ಸದೃಢಗೊಳಿಸುತ್ತದೆ.

 ನಿಮ್ಮ ಮೂಡ್ ಸುಧಾರಿಸುತ್ತದೆ

ನಿಮ್ಮ ಮೂಡ್ ಸುಧಾರಿಸುತ್ತದೆ

ಹೌದು ಬಾಳೆಹಣ್ಣು ನಿಮ್ಮ ಮೂಡ್ ಸುಧಾರಿಸುತ್ತದೆ ಮತ್ತು ಋತುಚಕ್ರಕ್ಕೆ ಮೊದಲು ಆವರಿಸುವ ಖಿನ್ನತೆ, ಉದ್ವೇಗ ಮುಂತಾದ ಮಾನಸಿಕ ತುಮುಲಗಳನ್ನು ನಿಯಂತ್ರಿಸುತ್ತದೆ. ಇದು ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ಸರಿಪಡಿಸುತ್ತದೆ ಮತ್ತು ನಿಮಗೆ ಒತ್ತಡವನ್ನು ನಿವಾರಿಸಿ ವಿಶ್ರಾಂತಿಯನ್ನು ನೀಡುತ್ತದೆ.

ವಿಟಮಿನ್ ಬಿ-6 ಅಧಿಕ ಪ್ರಮಾಣದಲ್ಲಿರುತ್ತದೆ

ವಿಟಮಿನ್ ಬಿ-6 ಅಧಿಕ ಪ್ರಮಾಣದಲ್ಲಿರುತ್ತದೆ

ಬಾಳೆಹಣ್ಣಿನಲ್ಲಿ ವಿಟಮಿನ್ ಬಿ-6 ಅಧಿಕ ಪ್ರಮಾಣದಲ್ಲಿರುತ್ತದೆ. ಇದು ಊತವನ್ನು ಕಡಿಮೆ ಮಾಡುತ್ತದೆ, ಟೈಪ್ 2 ಮಧುಮೇಹದ ವಿರುದ್ಧ ರಕ್ಷಣೆಯನ್ನು ಒದಗಿಸುತ್ತದೆ, ತೂಕ ಇಳಿಸಿಕೊಳ್ಳಲು ಸಹಾಯಕ, ನರಕೋಶವನ್ನು ಸದೃಢಗೊಳಿಸುತ್ತದೆ ಮತ್ತು ದೇಹದಲ್ಲಿ ಬಿಳಿ ರಕ್ತ ಕಣಗಳನ್ನು ಹೆಚ್ಚಿಸುತ್ತದೆ.

 ಅನಿಮಿಯಾದಿಂದ ಮುಕ್ತಿ

ಅನಿಮಿಯಾದಿಂದ ಮುಕ್ತಿ

ಬಾಳೆಹಣ್ಣಿನಲ್ಲಿರುವ ಕಬ್ಬಿಣಾಂಶವು ರಕ್ತವನ್ನು ಬಲಗೊಳಿಸುತ್ತದೆ ಮತ್ತು ಅನಿಮಿಯಾದಿಂದ ನಮ್ಮನ್ನು ಪಾರು ಮಾಡುತ್ತದೆ.

ಹೃದ್ರೋಗ ಸಮಸ್ಯೆಯ ವಿರುದ್ಧ ಹೋರಾಟುತ್ತದೆ

ಹೃದ್ರೋಗ ಸಮಸ್ಯೆಯ ವಿರುದ್ಧ ಹೋರಾಟುತ್ತದೆ

ಬಾಳೆಹಣ್ಣುಗಳು ತನ್ನಲ್ಲಿರುವ ಅಧಿಕ ಪೊಟಾಶಿಯಂ ಮತ್ತು ಕಡಿಮೆ ಉಪ್ಪಿನಾಂಶದ ಕಾರಣದಿಂದ FDAಯಿಂದ ಅಧಿಕೃತ ಮಾನ್ಯತೆ ಪಡೆದಿದೆ. ಇದು ಕಡಿಮೆ ರಕ್ತದೊತ್ತಡ ಮತ್ತು ಹೃದ್ರೋಗ ಸಮಸ್ಯೆಯ ವಿರುದ್ಧ ರಕ್ಷಣೆಯನ್ನು ಒದಗಿಸುವ ಕಾರಣಕ್ಕೆ ಈ ಮಾನ್ಯತೆಯನ್ನು ನೀಡಲಾಗಿದೆ.

ಜೀರ್ಣ ಶಕ್ತಿಯನ್ನು ಸುಧಾರಿಸಲು

ಜೀರ್ಣ ಶಕ್ತಿಯನ್ನು ಸುಧಾರಿಸಲು

ಬಾಳೆಹಣ್ಣು ಸೇವಿಸುವುದರಿಂದ ಜೀರ್ಣ ಶಕ್ತಿ ಹೆಚ್ಚಾಗುತ್ತದೆ. ಬಾಳೆಹಣ್ಣುಗಳಲ್ಲಿ ಪೆಕ್ಟಿನ್ ಅಧಿಕ ಪ್ರಮಾಣದಲ್ಲಿ ಇರುತ್ತವೆ ಇದು ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ. ಜೊತೆಗೆ ಇದು ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಮತ್ತು ಅಧಿಕ ಭಾರದ ಖನಿಜಗಳನ್ನು ಹೊರದೂಡುತ್ತದೆ.

ಬಾಳೆಹಣ್ಣುಗಳು ಪ್ರಿಬಯೋಟಿಕ್ ಮಾದರಿಯಲ್ಲಿ ವರ್ತಿಸುತ್ತದೆ.

ಬಾಳೆಹಣ್ಣುಗಳು ಪ್ರಿಬಯೋಟಿಕ್ ಮಾದರಿಯಲ್ಲಿ ವರ್ತಿಸುತ್ತದೆ.

ಇದು ನಮ್ಮ ಕರುಳಿನಲ್ಲಿ ನಮ್ಮ ದೇಹಕ್ಕೆ ಉಪಯೋಗಕಾರಿಯಾದ ಬ್ಯಾಕ್ಟೀರಿಯಾವನ್ನು ಬೆಳೆಯುವಂತೆ ಮಾಡುತ್ತದೆ. ಇವುಗಳು ಪೋಷಕಾಂಶಗಳನ್ನು ಹೀರಿಕೊಳ್ಳುವಂತಹ ಡೈಜೆಸ್ಟಿವ್ ಎನ್‍ಜೈಮ್‍ಗಳನ್ನು ಉತ್ಪಾದಿಸುತ್ತದೆ.

ಅತಿಸಾರ ಬೇದಿಯೇ?

ಅತಿಸಾರ ಬೇದಿಯೇ?

ಬಾಳೆಹಣ್ಣುಗಳು ಕರುಳು ಮತ್ತು ಜಠರಗಳ ಕಾರ್ಯವನ್ನು ಸುಗಮಗೊಳಿಸುತ್ತದೆ. ಇದು ಡಯೇರಿಯಾ ಅಥವಾ ಅತಿಸಾರ ಬೇದಿಯ ನಂತರ ನಷ್ಟಗೊಂಡ ಎಲೆಕ್ಟ್ರೋಲೈಟ್‍ಗಳನ್ನು ಪುನರ್ ಸ್ಥಾಪಿಸುತ್ತದೆ.

ಎದೆ ಉರಿ, ಆಸಿಡಿಟಿಗೆ ಪರಿಹಾರ

ಎದೆ ಉರಿ, ಆಸಿಡಿಟಿಗೆ ಪರಿಹಾರ

ಬಾಳೆಹಣ್ಣುಗಳು ಪ್ರಾಕೃತಿಕವಾದ ಆಂಟಾಸಿಡ್‍ಗಳಾಗಿವೆ. ಇವು ಎದೆ ಉರಿ, ಆಸಿಡಿಟಿ GERD ಮುಂತಾದ ಸಮಸ್ಯೆಗಳಿಗೆ ಪರಿಹಾರವನ್ನು ನೀಡುತ್ತದೆ.

ಬಾಳೆಹಣ್ಣುಗಳು ಹೊಟ್ಟೆಯಲ್ಲಿ ಕಂಡು ಬರುವ ಅಲ್ಸರ್‌ಗೆ ರಾಮಬಾಣ

ಬಾಳೆಹಣ್ಣುಗಳು ಹೊಟ್ಟೆಯಲ್ಲಿ ಕಂಡು ಬರುವ ಅಲ್ಸರ್‌ಗೆ ರಾಮಬಾಣ

ಇದನ್ನು ಯಾವುದೇ ಗಿಡಮೂಲಿಕೆಯಿಲ್ಲದೆ ಹಾಗೆಯೇ ಕಚ್ಛಾ ಹಣ್ಣನ್ನೆ ಅಲ್ಸರ್‌ಗೆ ಔಷಧಿಯಾಗಿ ಸೇವಿಸಬಹುದು. ಬಾಳೆಹಣ್ಣು ಲೇಹ್ಯದಂತಹ ಗುಣವನ್ನು ಹೊಂದಿರುವುದರಿಂದ ಇದು ಜಠರದ ಗೋಡೆಗಳಿಗೆ ಹೋಗಿ ಅಂಟಿಕೊಳ್ಳುತ್ತದೆ. ಇದರಿಂದ ಆಮ್ಲಗಳು ಜಠರದ ಗೋಡೆ ಅಂದರೆ ಅಲ್ಸರ್‌ನ ಮೇಲೆ ಪ್ರಭಾವ ಬೀರಲು ಸಾಧ್ಯವಾಗುವುದಿಲ್ಲ.

ಮೂತ್ರಪಿಂಡದ ಕ್ಯಾನ್ಸರ್‌ಗೆ ರಾಮಬಾಣ

ಮೂತ್ರಪಿಂಡದ ಕ್ಯಾನ್ಸರ್‌ಗೆ ರಾಮಬಾಣ

ಬಾಳೆಹಣ್ಣುಗಳು ಮೂತ್ರಪಿಂಡದ ಕ್ಯಾನ್ಸರ್ ಬರದಂತೆ ತಡೆಯುತ್ತವೆ. ಅಕ್ಷಿಪಟಲದ ನ್ಯೂನತೆಗಳಿಂದ ದೃಷ್ಟಿದೋಷ ಬರದಂತೆ ಕಣ್ಣುಗಳನ್ನು ಕಾಪಾಡುತ್ತದೆ. ಕ್ಯಾಲ್ಸಿಯಂ ಅನ್ನು ನಮ್ಮ ದೇಹದಲ್ಲಿ ಹೆಚ್ಚು ಮಾಡುವ ಮೂಲಕ ಮೂಳೆಗಳನ್ನು ಗಟ್ಟಿಗೊಳಿಸುತ್ತದೆ.

ಜ್ಞಾನವು ಹೆಚ್ಚಾಗುತ್ತದೆ

ಜ್ಞಾನವು ಹೆಚ್ಚಾಗುತ್ತದೆ

ಬಾಳೆಹಣ್ಣುಗಳು ನಿಮ್ಮಲ್ಲಿ ಜಾಣತನವನ್ನು ಸಹ ಹೆಚ್ಚಿಸುತ್ತವೆ. ಇದರಿಂದ ನಿಮ್ಮ ಜ್ಞಾನವು ಹೆಚ್ಚಾಗುತ್ತದೆ. ಪರೀಕ್ಷೆಗೆ ಹೋಗುವ ಮೊದಲು ಒಂದು ಬಾಳೆಹಣ್ಣನ್ನು ಸೇವಿಸಿ, ಇದರಲ್ಲಿರುವ ಯಥೇಚ್ಛ ಪ್ರಮಾಣದ ಪೊಟಾಶಿಯಂ ನಿಮ್ಮ ಉಪಯೋಗಕ್ಕೆ ಬರುತ್ತದೆ.

ಆಂಟಿ ಆಕ್ಸಿಡೆಂಟ್‍ಗಳು

ಆಂಟಿ ಆಕ್ಸಿಡೆಂಟ್‍ಗಳು

ಬಾಳೆಹಣ್ಣುಗಳಲ್ಲಿ ಯಥೇಚ್ಛ ಪ್ರಮಾಣದ ಆಂಟಿ ಆಕ್ಸಿಡೆಂಟ್‍ಗಳು ಇರುತ್ತವೆ. ಇವು ನಿಮ್ಮ ದೇಹದ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುವ ಫ್ರೀರ‍್ಯಾಡಿಕಲ್‍ಗಳಿಂದ ರಕ್ಷಣೆಯನ್ನು ಒದಗಿಸುತ್ತವೆ.

ರಕ್ತದಲ್ಲಿ ಸಕ್ಕರೆಯ ಪ್ರಮಾಣವು ಸ್ಥಿರವಾಗಿರಿಸುತ್ತದೆ

ರಕ್ತದಲ್ಲಿ ಸಕ್ಕರೆಯ ಪ್ರಮಾಣವು ಸ್ಥಿರವಾಗಿರಿಸುತ್ತದೆ

ಬಾಳೆಹಣ್ಣನ್ನು ಊಟ ಮಾಡುವ ಅವಧಿಯ ನಡುವೆ ಸೇವಿಸುವುದರಿಂದ ರಕ್ತದಲ್ಲಿ ಸಕ್ಕರೆಯ ಪ್ರಮಾಣವು ಸ್ಥಿರವಾಗುತ್ತದೆ ಮತ್ತು ಮಾರ್ನಿಂಗ್ ಸಿಕ್‍ನೆಸ್‍ನಿಂದ ಬರುವ ನಾಸಿಯಾ ಅಥವಾ ವಾಂತಿಯಾಗುವಂತಹ ಅನುಭವವನ್ನು ತಡೆಯಬಹುದು. ಹೆಚ್ಚು ತಿನ್ನುವ ಚಪಲ ಇದ್ದಲ್ಲಿ, ಏನಾದರು ತಿನ್ನಬೇಕೆನಿಸಿದಾಗ ಬಾಳೆಹಣ್ಣು ಸೇವಿಸಿ. ನಿಮ್ಮ ದೇಹದಲ್ಲಿ ರಕ್ತದ ಸಕ್ಕರೆ ಪ್ರಮಾಣವನ್ನು ಹತೋಟಿಯಲ್ಲಿಟ್ಟುಕೊಳ್ಳಿ.

ತುರಿಕೆಯಿಂದ ಮುಕ್ತಿ

ತುರಿಕೆಯಿಂದ ಮುಕ್ತಿ

ಕೀಟಗಳು ನಿಮ್ಮನ್ನು ಕಡಿದರೆ ಆಗುವ ತುರಿಕೆಯಿಂದ ಮತ್ತು ನವೆಯಿಂದ ಪಾರಾಗಲು ಬಾಳೆಹಣ್ಣಿನ ಸಿಪ್ಪೆಯ ಒಳಭಾಗದಿಂದ ನವೆಯಾಗುವ ಭಾಗವನ್ನು ಉಜ್ಜಿ.

ದೇಹದ ಉಷ್ಟಾಂಶ

ದೇಹದ ಉಷ್ಟಾಂಶ

ಜ್ವರ ಬಂದಾಗ ಅಥವಾ ಬಿಸಿಲಿನ ಝಳ ಅಧಿಕವಾಗಿದ್ದಾಗ ಬಾಳೆಹಣ್ಣು ಸೇವಿಸಿ. ಇದರಿಂದ ನಿಮ್ಮ ದೇಹದ ಉಷ್ಟಾಂಶವು ಕಡಿಮೆಯಾಗಿ ತಂಪಾಗುತ್ತದೆ.

 ಧೂಮಪಾನದಿಂದ ಮುಕ್ತಿ ಪಡೆಯಲು

ಧೂಮಪಾನದಿಂದ ಮುಕ್ತಿ ಪಡೆಯಲು

ಧೂಮಪಾನವನ್ನು ಬಿಡಬೇಕೆ? ಬಾಳೆಹಣ್ಣಿನಲ್ಲಿ ಯಥೇಚ್ಛ ಪ್ರಮಾಣದ ವಿಟಮಿನ್-ಬಿ,ಮ್ಯಗ್ನಿಶಿಯಂ ಮತ್ತು ಪೊಟಾಶಿಯಂ ಇರುವುದರಿಂದ ತ್ವರಿತವಾಗಿ ಧೂಮಪಾನವನ್ನು ತ್ಯಜಿಸಲು ಬೇಕಾದ ದೃಢತೆಯನ್ನು ಒದಗಿಸುತ್ತದೆ.

ದೇಹದಲ್ಲಿ ಗುಳ್ಳೆಗಳು ಕಂಡುಬಂದರೆ

ದೇಹದಲ್ಲಿ ಗುಳ್ಳೆಗಳು ಕಂಡುಬಂದರೆ

ದೇಹದಲ್ಲಿ ಗುಳ್ಳೆಗಳು ಆದಾಗ ಬಾಳೆಹಣ್ಣಿನ ಸಿಪ್ಪೆಯಿಂದ ಅದಕ್ಕೆ ಉಪಶಮನವನ್ನು ಒದಗಿಸಬಹುದು. ಬಾಳೆಹಣ್ಣಿನ ಸಿಪ್ಪೆಯನ್ನು ಆ ಭಾಗದಲ್ಲಿ ಇಡಿ, ಆ ಗುಳ್ಳೆಯನ್ನು ವಿರುದ್ಧ ದಿಕ್ಕಿನಿಂದ ತಟ್ಟಿ ಸಾಕು.

ಬಾಳೆಹಣ್ಣಿನ ಸಿಪ್ಪೆಯ ಮ್ಯಾಜಿಕ್

ಬಾಳೆಹಣ್ಣಿನ ಸಿಪ್ಪೆಯ ಮ್ಯಾಜಿಕ್

ನಿಮ್ಮ ಚರ್ಮದ ಶೂ, ಬ್ಯಾಗ್ ಮುಂತಾದವುಗಳಿಗೆ ಪಾಲಿಶ್ ಹಾಕಬೇಕಾಂದಾದಲ್ಲಿ ಬಾಳೆಹಣ್ಣಿನ ಸಿಪ್ಪೆಯಿಂದ ಅದರ ಮೇಲೆ ಉಜ್ಜಿ, ಆಮೇಲೆ ಒಂದು ಒಣಗಿದ ಬಟ್ಟೆಯಿಂದ ಅದರ ಮೇಲೆ ವೇಗವಾಗಿ ಉಜ್ಜಿ. ಈಗ ನೋಡಿ ನಿಮ್ಮ ಶೂ , ಬ್ಯಾಗ್‍ಗಳು ಥಳಥಳ ಹೊಳೆಯುತ್ತವೆ.

ಹೊಳೆಯುವ ಹಲ್ಲುಗಳಿಗಾಗಿ

ಹೊಳೆಯುವ ಹಲ್ಲುಗಳಿಗಾಗಿ

ಪ್ರತಿದಿನ ಒಂದು ನಿಮಿಷಗಳ ಕಾಲ ಬಾಳೆಹಣ್ಣಿನ ಸಿಪ್ಪೆಯನ್ನು ನಿಮ್ಮ ಹಲ್ಲುಗಳ ಮೇಲೆ ಹಾಕಿ ಚೆನ್ನಾಗಿ ಉಜ್ಜಿ. ಇದರಿಂದ ನಿಮ್ಮ ಹಲ್ಲುಗಳಿಗೆ ಫಳ ಫಳ ಎನ್ನುವ ಹೊಳಪು ದೊರೆಯುತ್ತದೆ. ಇದನ್ನು ಮಾಡಲಿಲ್ಲವಾದಲ್ಲಿ ನೀವು ನಿಮ್ಮ ದಂತ ವೈಧ್ಯರಿಗೆ ಸಾವಿರಾರು ರೂಪಾಯಿಯನ್ನು ವ್ಯಯಿಸಬೇಕಾಗುತ್ತದೆ.

ನರವಲಿ ( ವಾರ್ಟ್ಸ್)

ನರವಲಿ ( ವಾರ್ಟ್ಸ್)

ನಿಮ್ಮ ತ್ವಚೆಯ ಮೇಲೆ ಉಂಟಾಗುವ ನರವಲಿಗಳನ್ನು ( ಚರ್ಮದ ಮೇಲಿನ ಗ್ರಂಥಿಗಳನ್ನು) ನಿವಾರಿಸಲು ಬಾಳೆಹಣ್ಣಿನ ಸಿಪ್ಪೆ ರಾಮಬಾಣ. ಸಿಪ್ಪೆಯನ್ನು ನರವಲಿಗಳು ಇರುವ ಭಾಗದಲ್ಲಿ ರಾತ್ರಿಯೇ ಉಜ್ಜಿ ಮಲಗಿ, ಇಲ್ಲವಾದಲ್ಲಿ ನರವಲಿಗಳು ಇರುವ ಜಾಗದಲ್ಲಿ ಸಿಪ್ಪೆಯನ್ನು ಬಟ್ಟೆಯ ಸಹಾಯದಿಂದ ಕಟ್ಟಿ ರಾತ್ರಿಯೆಲ್ಲಾ ಹಾಗೆಯೇ ಬಿಡಿ. ಇದು ಮಾಡಲು ಸುಲಭ, ಇದರ ಫಲಿತಾಂಶ ಅಷ್ಟೇ ಪರಿಣಾಮಕಾರಿ.

ಸಿಪ್ಪೆಯನ್ನು ತಿನ್ನಿ

ಸಿಪ್ಪೆಯನ್ನು ತಿನ್ನಿ

ಬಾಳೆಹಣ್ಣಿನ ಸಿಪ್ಪೆಯನ್ನು ಸಹ ತಿನ್ನಬಹುದು. ಛೇ! ಎನ್ನಬೇಡಿ. ಭಾರತೀಯ ಆಹಾರ ಪದ್ಧತಿಯಲ್ಲಿ ಇದನ್ನು ಹಾಕಿ ಹಲವಾರು ರೀತಿಯ ಆಹಾರಗಳನ್ನು ಮಾಡುತ್ತಾರೆ. ಇದರ ಜೊತೆಗೆ ಕೋಳಿ ಮಾಂಸದ ತಾಜಾತನವನ್ನು ಉಳಿಸಿಕೊಳ್ಳಲು ಬಾಳೆಹಣ್ಣಿನ ಸಿಪ್ಪೆಯನ್ನು ಅದರ ಮೇಲೆ ಇಡುತ್ತಾರೆ.

ಮೊಡವೆಗಳು

ಮೊಡವೆಗಳು

ಮೊಡವೆಗಳು ಉಂಟಾದಾಗ ಅದರ ಮೇಲೆ ಬಾಳೆಹಣ್ಣಿನ ಸಿಪ್ಪೆಯನ್ನು ಹಚ್ಚಿ. ಅದನ್ನು ಹಾಗೆಯೇ 30 ನಿಮಿಷ ಬಿಡಿ. ಇದರಿಂದ ನೋವು ಕಡಿಮೆಯಾಗುತ್ತದೆ. ಬಾಳೆಹಣ್ಣಿನ ಸಿಪ್ಪೆಯ ಜೊತೆಗೆ ಸಸ್ಯಜನ್ಯ ಎಣ್ಣೆಯನ್ನು ಬೆರೆಸಿ ಹಚ್ಚಿದರೆ ನೋವು ಮತ್ತಷ್ಟು ಕಡಿಮೆಯಾಗುತ್ತದೆ.

ಸುಕ್ಕು ನಿವಾರಕ

ಸುಕ್ಕು ನಿವಾರಕ

ಬಾಳೆಹಣ್ಣಿನ ಸಿಪ್ಪೆಯು ಚರ್ಮಕ್ಕೆ ತೇವಾಂಶವನ್ನು ಒದಗಿಸುತ್ತವೆ. ಬಾಳೆಹಣ್ಣಿನ ಸಿಪ್ಪೆಗೆ ಸ್ವಲ್ಪ ಮೊಟ್ಟೆಯ ಲೋಳೆಯನ್ನು ಬೆರೆಸಿ, ಇದನ್ನು ಮುಖಕ್ಕೆ ಹಚ್ಚಿ ಐದು ನಿಮಿಷ ಬಿಡಿ. ನಂತರ ಮುಖ ತೊಳೆಯಿರಿ. ಇದರಿಂದ ಸುಕ್ಕುನಿವಾರಣೆಯಾಗುತ್ತದೆ.

ನೋವು ನಿವಾರಕ

ನೋವು ನಿವಾರಕ

ಬಾಳೆಹಣ್ಣಿನ ಸಿಪ್ಪೆಯನ್ನು ನೇರವಾಗಿ ನೋವಾಗುತ್ತಿರುವ ಜಾಗಕ್ಕೆ ಲೇಪಿಸಿ. ಇದನ್ನು ಹಾಗೆಯೇ 30 ನಿಮಿಷ ಬಿಡಿ. ನೋವು ನಿವಾರಣೆಯಾಗುತ್ತದೆ. ಇದರ ಉತ್ತಮ ಫಲಿತಾಂಶಕ್ಕಾಗಿ ಸಸ್ಯಜನ್ಯ ಎಣ್ಣೆಯನ್ನು ಬಳಸಿ.

ಸೋರಿಯಾಸಿಸ್

ಸೋರಿಯಾಸಿಸ್

ಸೋರಿಯಾಸಿಸ್ ಉಂಟಾದ ಜಾಗಕ್ಕೆ ಬಾಳೆಹಣ್ಣಿನ ಸಿಪ್ಪೆಯನ್ನು ಹಚ್ಚಿ. ಬಾಳೆಹಣ್ಣಿನ ಸಿಪ್ಪೆಯಲ್ಲಿ ಮೊಯಿಶ್ಚರೈಸರ್ ಗುಣಗಳು ತುರಿಕೆಯನ್ನು ನಿವಾರಿಸುತ್ತವೆ. ಇದು ಸೋರಿಯಾಸಿಸ್‍ನಿಂದ ತಕ್ಷಣ ಉಪಶಮನವನ್ನು ಒದಗಿಸುತ್ತದೆ. ಅದನ್ನು ನೀವು ಕಣ್ಣಾರೆ ನೋಡಬಹುದು.

ಕ್ರಿಮಿಕೀಟಗಳ ಕಡಿತಕ್ಕೆ

ಕ್ರಿಮಿಕೀಟಗಳ ಕಡಿತಕ್ಕೆ

ಕ್ರಿಮಿಕೀಟಗಳು ಕಚ್ಚಿದ ಭಾಗಕ್ಕೆ ಬಾಳೆಹಣ್ಣಿನ ಸಿಪ್ಪೆಯಿಂದ ಮಸಾಜ್ ಮಾಡಿ. ಇದರಿಂದ ತುರಿಕೆ ಮತ್ತು ನೋವುಗಳು ತಕ್ಷಣ ನಿವಾರಣೆಯಾಗುತ್ತದೆ.

ಯು.ವಿ ಕಿರಣಗಳಿಂದ ರಕ್ಷಣೆಗೆ

ಯು.ವಿ ಕಿರಣಗಳಿಂದ ರಕ್ಷಣೆಗೆ

ಬಾಳೆಹಣ್ಣಿನ ಸಿಪ್ಪೆಯನ್ನು ಕಣ್ಣಿನ ಸುತ್ತ ಲೇಪಿಸುವುದರಿಂದ ಯು.ವಿ.ಕಿರಣಗಳಿಂದ ರಕ್ಷಣೆ ಪಡೆಯಬಹುದು. ಹೀಗೆ ಮಾಡುವ ಮೊದಲು ಬಾಳೆಹಣ್ಣಿನ ಸಿಪ್ಪೆಯನ್ನು ಸ್ವಲ್ಪ ಹೊತ್ತು ಬಿಸಿಲಿನಲ್ಲಿ ಬಿಡಿ, ನಂತರ ಹಚ್ಚಿ. ಹೀಗೆ ಮಾಡುವುದರಿಂದ ಕಣ್ಣಿನ ಪೊರೆ ಬರದಂತೆ ಸಹ ತಡೆಯಬಹುದು.

ಸುಕ್ರೀಸ್, ಫ್ರುಕ್ಟೋಸ್, ಮತ್ತು ಗ್ಲುಕೋಸ್ ಅಧಿಕವಾಗಿದೆ

ಸುಕ್ರೀಸ್, ಫ್ರುಕ್ಟೋಸ್, ಮತ್ತು ಗ್ಲುಕೋಸ್ ಅಧಿಕವಾಗಿದೆ

ಬಾಳೆಹಣ್ಣಿನಲ್ಲಿ ನೈಸರ್ಗಿಕ ಸಕ್ಕರೆ ಅಂಶಗಳಾದ ಸುಕ್ರೀಸ್, ಫ್ರುಕ್ಟೋಸ್, ಮತ್ತು ಗ್ಲುಕೋಸ್ (sucrose, fructose and glucose) ಇವೆ. ಎರಡು ಬಾಳೆಹಣ್ಣು 90 ನಿಮಿಷ ಕೆಲಸಮಾಡುವ ಶಕ್ತಿಯನ್ನು ನೀಡುತ್ತದೆ ಎಂದು ಸಂಶೋಧನೆಗಳು ತಿಳಿಸಿವೆ.

ಸೇಬು ಹಣ್ಣಿಗಿಂತ ಬಾಳೆ ಹಣ್ಣು ಉತ್ತಮ

ಸೇಬು ಹಣ್ಣಿಗಿಂತ ಬಾಳೆ ಹಣ್ಣು ಉತ್ತಮ

ಬಾಳೆಯ ಹಣ್ಣನ್ನು ಸೇಬು ಹಣ್ಣಿನೊಂದಿಗೆ ಹೋಲಿಸಿದರೆ, ಇದರಲ್ಲಿ ನಾಲ್ಕು ಪಟ್ಟು ಪ್ರೋಟೀನ್ ಇದೆ, ಎರಡು ಪಟ್ಟು ಕಾರ್ಬೋಹೈಡ್ರೇಟ್ಸ್ ಇವೆ, ಮೂರುಪಟ್ಟು ಫಾಸ್ಫರಸ್ ಇದೆ, ಐದು ಪಟ್ಟು ವಿಟಮಿನ್ ಎ ಹಾಗೂ ಕಬ್ಬಿಣಸತ್ವ ಇವೆ, ಎರಡುಪಟ್ಟು ಇತರ ವಿಟಮಿನ್ ಹಾಗೂ ಮಿನರಲ್ಸ್ ಇವೆ

ಹ್ಯಾಂಗ್ ಓವರ್

ಹ್ಯಾಂಗ್ ಓವರ್

ಹ್ಯಾಂಗ್ ಓವರ್ ನಂತಹ ಉದಾಸೀನತೆಯ ಪ್ರಸಂಗಗಳಲ್ಲಿ ಬಾಳೆಹಣ್ಣಿನ ಮಿಲ್ಕ್‍ಶೇಕ್ ಹೆಚ್ಚು ಉಪಯುಕ್ತ ಎಂದು ಪ್ರಯೋಗಗಳಿಂದ ತಿಳಿದಿದೆ.

ಖಿನ್ನೆತೆಯನ್ನು ಹೋಗಲಾಡಿಸುತ್ತದೆ

ಖಿನ್ನೆತೆಯನ್ನು ಹೋಗಲಾಡಿಸುತ್ತದೆ

ಎಮ್‌ಐಎನ್‌ಡಿ ನಡೆಸಿದ ಸರ್ವೆಯ ಪ್ರಕಾರ ಹೆಚ್ಚಿನ ಜನರು ಖಿನ್ನೆತೆಗೆ ಒಳಗಾಗಿರುವುದು ಕಂಡುಬಂದಿದೆ. ಬಾಳೆಹಣ್ಣನ್ನು ತಿನ್ನುವುದರಿಂದ ಅವರ ಈ ಸಮಸ್ಯೆ ಪರಿಹಾರವಾಗಿ ಅವರು ಸಂತೋಷದಿಂದಿರುವ ವಿಷಯ ಬೆಳಕಿಗೆ ಬಂದಿದೆ.

ಹಿಮೋಗ್ಲೋಬೀನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ

ಹಿಮೋಗ್ಲೋಬೀನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ

ರಕ್ತದಲ್ಲಿನ ಹಿಮೋಗ್ಲೋಬೀನ್ ಉತ್ಪಾದನೆಯನ್ನು ಬಾಳೆಹಣ್ಣು ಉತ್ತೇಜಿಸುವುದರಿಂದ ನಿಮಗೆ ಅನಿಮೀಯಾ ಉಂಟಾಗುವ ಸಂಭವನೀಯತೆ ಕಡಿಮೆ ಇರುತ್ತದೆ. ಇದೊಂದು ಶೀತಲೀ ಹಣ್ಣಾಗಿದ್ದು ದೈಹಿಕ ಮಾನಸಿಕ ಒತ್ತಡವನ್ನು ಇದು ಸುಧಾರಿಸುತ್ತದೆ.

ಲೈಂಗಿಕತೆ ಹೆಚ್ಚಿಸುತ್ತದೆ

ಲೈಂಗಿಕತೆ ಹೆಚ್ಚಿಸುತ್ತದೆ

ಬಾಳೆಹಣ್ಣಿನಲ್ಲಿರುವ ಪೌಷ್ಟಿಕಾಂಶ ಲೈಂಗಿಕ ಹಾರ್ಮೋನನ್ನು ಎಚ್ಚರಿಸುತ್ತದೆ. ಇದು ಸೆರೋಟೋನಿನ್ ಅನ್ನು ಬಿಡುಗಡೆ ಮಾಡಿ ಸಂಭೋಗದ ನಂತರ ಭ್ರಮಾದೀನ ಭಾವನೆ ನೀಡುತ್ತದೆ.

ಸರಿಯಾದ ನಿದ್ದೆ ಪಡೆಯಿರಿ

ಸರಿಯಾದ ನಿದ್ದೆ ಪಡೆಯಿರಿ

ಮಲಗುವ ಮೊದಲು ಬಾಳೆಹಣ್ಣು ತಿಂದರೆ ಸರಿಯಾದ ನಿದ್ದೆ ಪಡೆಯಲು ಸಹಾಯಕ.ಟ್ರಿಪ್ಟೊಫಾನ್ ಅಂಶ ಸೆರೋಟೋನಿನ್ ಆಗಿ ಪರಿವರ್ತಿತಗೊಂಡು ನಿದ್ರೆ ಬರಲು ಸಹಕರಿಸುತ್ತದೆ.ಇದು ನಿಮ್ಮ ಮೂಡ್ ಬದಲಿಸಿ ಏಕಾಗ್ರತೆಯನ್ನು ಹೆಚ್ಚಿಸಲು ಸಹಾಯಕ ಎನ್ನಲಾಗುತ್ತದೆ.

ಶಕ್ತಿ ಹೆಚ್ಚಿಸಿಕೊಳ್ಳಲು ಬಾಳೆಹಣ್ಣು ತಿನ್ನಿ

ಶಕ್ತಿ ಹೆಚ್ಚಿಸಿಕೊಳ್ಳಲು ಬಾಳೆಹಣ್ಣು ತಿನ್ನಿ

ಸರಾಸರಿ 115 ರಷ್ಟು ಕ್ಯಾಲೋರಿ ಹೊಂದಿರುವ ಬಾಳೆಹಣ್ಣು ಶಕ್ತಿ ಒದಗಿಸಲು ಅತಿ ಹೆಚ್ಚು ಸಹಾಯಕ.ವರ್ಕ್ ಔಟ್ ಮಾಡಿದ ನಂತರ ಬಾಳೆಹಣ್ಣು ತಿನ್ನುವುದರಿಂದ ರಕ್ತದಲ್ಲಿನ ಗ್ಲುಕೋಸ್ ಮಟ್ಟವನ್ನು ಸಮತೋಲನಗೊಳಿಸುತ್ತದೆ.ವರ್ಕ್ ಔಟ್ ನಂತರ ಬಲವನ್ನು ಹೆಚ್ಚಿಸಿಕೊಳ್ಳಲು ಬಾಳೆಹಣ್ಣು ಸಹಕರಿಸುತ್ತದೆ.

ದೇಹದ ರಕ್ತದೊತ್ತಡ ಕಡಿಮೆ ಮಾಡುತ್ತದೆ

ದೇಹದ ರಕ್ತದೊತ್ತಡ ಕಡಿಮೆ ಮಾಡುತ್ತದೆ

ಪೊಟಾಶಿಯಂ ಮತ್ತು ನಾರಿನಾಂಶವು ಅಧಿಕವಾಗಿರುವ ಬಾಳೆಹಣ್ಣಿನಿಂದ ನಿಮ್ಮ ದೇಹದ ರಕ್ತದೊತ್ತಡ ಕಡಿಮೆ ಮಾಡಬಹುದು, ಮೂಳೆಗಳ ಆರೋಗ್ಯ ಕಾಪಾಡಬಹುದು, ಜೀರ್ಣಾಂಗ ಕ್ರಿಯೆಯನ್ನು ಆರೋಗ್ಯವಾಗಿಟ್ಟುಕೊಳ್ಳಬಹುದು ಮತ್ತು ಕ್ಯಾನ್ಸರ್ ಬಾರದಂತೆ ತಡೆಯಬಹುದು ಎಂದು ತಜ್ಞೆ ಪೂಜಾ ಹೇಳುತ್ತಾರೆ. ಈಗ ನಿಮಗೆ ಗೊತ್ತಾಗಿರಬಹುದು ಕೋತಿಗಳು ಏಕೆ ಅಷ್ಟು ಸಂತೋಷವಾಗಿರುತ್ತವೆ. ಬಾಳೆಹಣ್ಣು ಸೇವಿಸಿ ನೀವು ಸಂತೋಷವಾಗಿರಿ!

English summary

Powerful Reasons to Eat Bananas

You’ll never look at a banana the same way again after discovering the many health benefits and reasons to add them to your diet. Bananas combat depression, make you smarter, cure hangovers, relieve morning sickness They can cure the itch of a mosquito bite and put a great shine on your shoes.
Story first published: Saturday, August 23, 2014, 13:36 [IST]
X
Desktop Bottom Promotion