For Quick Alerts
ALLOW NOTIFICATIONS  
For Daily Alerts

ತಲೆನೋವಿಗೆ ನೈಸರ್ಗಿಕ ಪರಿಹಾರ ಹೀಗೆ ಮಾಡಿ!!

|

ಶೀತ, ನೆಗಡಿ, ಕೆಮ್ಮು ನಮ್ಮನ್ನು ಕಾಡುವ ಸರ್ವೇಸಾಮಾನ್ಯ ಕಾಯಿಲೆಗಳು. ತಿಂಗಳಲ್ಲಿ ಹಲವಾರು ಬಾರಿ ಇವುಗಳು ತಮ್ಮ ಅಸ್ತಿತ್ವವನ್ನು ನಮಗೆ ನೆನಪಿಸುತ್ತವೆ. ಸಾಮಾನ್ಯ ರೋಗಗಳಾದರೂ ಇವುಗಳು ನಮಗೆ ಮಾಡುವ ತೊಂದರೆ ಅಸಾಮಾನ್ಯವಾದದ್ದು. ಈ ರೋಗಗಳು ನಮಗೆ ಉಂಟಾದಾಗ ಒತ್ತಡ, ಸಿಟ್ಟು, ಬಾಯಾರಿಕೆ, ಬಳಲಿಕೆ ನಮ್ಮನ್ನು ಕಾಡುತ್ತದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಊಟದ ನಂತರದ 7 ಅಪಾಯಕಾರಿ ಕ್ರಿಯೆಗಳು!

ಅದರಲ್ಲೂ ತಲೆನೋವು ನಮಗೆ ಅಪಾರ ಯಾತನೆಯನ್ನು ನೀಡುತ್ತದೆ. ತಲೆಯೊಂದಿಗೆ ಮೈ ಕೂಡ ಸಿಡಿಯುವ ಅನುಭವ ತಲೆನೋವಾದಾಗ ಉಂಟಾಗುತ್ತದೆ. ಮಾತ್ರೆಗಳು, ಕ್ಯಾಪ್ಸೂಲ್‌ಗಳ ಮೊರೆಹೋದರೂ ಇದರಿಂದ ಮುಕ್ತಿ ಸಿಗಲು ಹಲವಾರು ಗಂಟೆಗಳೇ ತಗಲುತ್ತದೆ.

Natural Therapy For Headaches !!

ತಲೆನೋವು ಕುತ್ತಿಗೆ ಮತ್ತು ತಲೆಯ ಭಾಗದಲ್ಲಿ ಕಂಡುಬರುತ್ತದೆ. ಅತಿಯಾದ ಒತ್ತಡ, ಮಾನಸಿಕ ತಳಮಳ ಉಂಟಾದಾಗ ತಲೆನೋವು ಸಂಭವಿಸುತ್ತದೆ. ಇದರ ಕಿರಿಕಿರಿಯಿಂದ ಮುಕ್ತಿ ಪಡೆಯಲು ಇಲ್ಲಿದೆ ಕೆಲವೊಂದು ವಿಧಾನಗಳು.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಮೈಗ್ರೇನ್‌ಗೆ ಏಳು ಅಚ್ಚರಿಯ ಕಾರಣಗಳು

ತಲೆನೋವಿನಿಂದ ಮುಕ್ತಿ ಪಡೆಯಲು ಕೇವಲ ವೈದ್ಯರ ಮಾತ್ರೆ ಮಾತ್ರ ಸಾಲದು, ನೈಸರ್ಗಿಕ ಪರಿಹಾರವನ್ನು ನಾವು ಇದಕ್ಕೆ ಕಂಡುಕೊಳ್ಳಬೇಕು. ಅವು ಯಾವುವು ಎಂಬುದನ್ನು ತಿಳಿದುಕೊಳ್ಳೋಣ

ಕೇವಲ 5ನಿಮಿಷಗಳಲ್ಲಿ ನಿಮ್ಮ ತಲೆನೋವನ್ನು ಹೇಳಹೆಸರಿಲ್ಲದಂತೆ ನಿವಾರಿಸಬಹುದು. ನಿಮ್ಮ ಮೂಗು ಎಡ ಹಾಗೂ ಬಲ ಬದಿಗಳನ್ನು ಹೊಂದಿದೆ. ಉಚ್ವಾಸ ನಿಶ್ವಾಸಕ್ಕಾಗಿ ನಾವು ಎರಡೂ ಬದಿಗಳನ್ನು ಬಳಸುತ್ತೇವೆ. ನಿಜವಾಗಿ ಅವುಗಳು ಭಿನ್ನವಾಗಿವೆ. ಇವುಗಳ ವ್ಯತ್ಯಾಸವನ್ನು ನಿಮಗೆ ತಿಳಿದುಕೊಳ್ಳಬಹುದು. ಬಲ ಬದಿಯು ಸೂರ್ಯನನ್ನು ಪ್ರತಿನಿಧಿಸಿದರೆ ಎಡ ಭಾಗವು ಚಂದ್ರನನ್ನು ಪ್ರತಿನಿಧಿಸುತ್ತದೆ. ತಲೆನೋವಿನ ಸಂದರ್ಭದಲ್ಲಿ ನಿಮ್ಮ ಬಲ ಬದಿಯ ಮೂಗನ್ನು ಮುಚ್ಚಿ ಉಸಿರಾಡಲು ಎಡ ಮೂಗನ್ನು ಬಳಸಿ. ಕೇವಲ 5 ನಿಮಿಷದಲ್ಲಿ ನಿಮ್ಮ ತಲೆನೋವು ಮಾಯವಾಗುತ್ತದೆ.

ನೀವು ದಣಿದಿದ್ದರೆ, ವ್ಯತಿರಿಕ್ತವಾಗಿ ಮಾಡಿ ಅಂದರೆ ನಿಮ್ಮ ಎಡ ಮೂಗನ್ನು ಮುಚ್ಚಿ ಬಲ ಬದಿಯ ಮೂಗಿನ ಮೂಲಕ ಉಸಿರಾಡಿ. ಸ್ವಲ್ಪ ಸಮಯದ ನಂತರ, ನಿಮ್ಮ ಮನಸ್ಸು ಉಲ್ಲಾಸಗೊಂಡ ಅನುಭವ ನಿಮಗಾಗುತ್ತದೆ. ಬಲಬದಿಯು ''ಬಿಸಿ'' ಅನುಭವವನ್ನು ಹೊಂದಿದ್ದರೆ ಎಡಗಡೆಯು "ತಂಪಿನ" ಅನುಭವವನ್ನು ಹೊಂದಿರುತ್ತದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಆರೋಗ್ಯಭರಿತ ಸಿಹಿ ಆಲೂಗಡ್ಡೆ ಸೇವನೆಯ ಪ್ರಯೋಜನ

ಹೆಚ್ಚಿನ ಮಹಿಳೆಯರು ತಮ್ಮ ಎಡ ಬದಿಯ ಮೂಗಿನಿಂದ ಉಸಿರಾಡುತ್ತಾರೆ ಇದರಿಂದ ಅವರು ಕೂಡಲೇ ತಣ್ಣಗಾಗುತ್ತಾರೆ. ಹೆಚ್ಚಿನ ಗಂಡಸರು ತಮ್ಮ ಬಲ ಮೂಗಿನಿಂದ ಉಸಿರಾಡುತ್ತಾರೆ ಹಾಗಾಗಿ ಅವುಗಳು ತಮ್ಮ ಬಿಸಿ ಯ ಅನುಭವವನ್ನು ಅವರಿಗೆ ಮಾಡಿಸುತ್ತದೆ. ನಿಮಗೆ ದಣಿವಾಗಿದ್ದರೆ ನಿಮ್ಮ ಎಡಗಡೆಯ ಮೂಗನ್ನು ಮುಚ್ಚಿ ಉಸಿರಾಡಲು ಬಲ ಬದಿಯನ್ನು ಬಳಸಿ. ನೀವು ತ್ವರಿತವಾಗಿ ತಾಜಾಗೊಳ್ಳುತ್ತೀರಿ.

ನೀವು ನಿರಂತರ ತಲೆನೋವಿನಿಂದ ಬಳಲುತ್ತಿದ್ದರೆ ಈ ಉಸಿರಾಟ ಚಿಕಿತ್ಸೆಯನ್ನು ಪ್ರಯತ್ನಿಸಿ. ನಿಮ್ಮ ಬಲ ಮೂಗನ್ನು ಮುಚ್ಚಿ ಮತ್ತು ಎಡ ಮೂಗಿನಿಂದ ಉಸಿರಾಡಿ. ನಿಮ್ಮ ತಲೆನೋವು ಮಾಯವಾಗುತ್ತದೆ. ಈ ವ್ಯಾಯಾಮವನ್ನು ಒಂದು ತಿಂಗಳು ಮುಂದುವರಿಸಿ. ಯಾವುದೇ ಔಷಧವಿಲ್ಲದ ಈ ನೈಸರ್ಗಿಕ ಪರಿಹಾರವನ್ನು ನಿಮಗೆ ಪ್ರಯತ್ನಿಸಬಹುದಲ್ಲವೇ...

English summary

Natural Therapy For Headaches !!

In about 5 mins, your headache will go....... The nose has a left and a right side. We use both to inhale and exhale. Actually they are different. You'll be able to feel the difference. The right side represents the sun. The left side represents the moon. During a headache, try to close your right nose and use your left nose to breathe. In about 5 mins, your headache will go.
X
Desktop Bottom Promotion