For Quick Alerts
ALLOW NOTIFICATIONS  
For Daily Alerts

ಕಿಡ್ನಿ ಸ್ಟೋನ್‌ಗೆ ನೈಸರ್ಗಿಕ ಪರಿಹಾರಗಳು

|

ಇಂದು ಮಾನವನನ್ನು ಹಲವಾರು ರೋಗಗಳು ಮುತ್ತಿಕೊಳ್ಳುತ್ತಿವೆ. ವೈದ್ಯಕೀಯ ಲೋಕದಲ್ಲಿ ಸವಾಲು ಉಂಟು ಮಾಡುವ ಹಲವಾರು ರೋಗಗಳು ಸಾಕಷ್ಟಿದ್ದು ಅವುಗಳ ನಿವಾರಣೆಗಾಗಿ ಔಷಧಗಳನ್ನು ಕಂಡುಹುಡುಕಲಾಗಿದೆ. ಆದರೆ ಇಂದಿನ ಧಾವಂತದ ಬದುಕಿನಲ್ಲಿ ಕೆಲವೊಂದು ರೋಗಗಳಿಗೆ ಚಿಕಿತ್ಸೆಯನ್ನು ನಾವೇ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಇದೆ. ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಗಾದೆಯಂತೆ ಕೆಲವೊಂದು ರೋಗಗಳಿಗೆ ಸೂಕ್ತ ಚಿಕಿತ್ಸೆ ನಮಗೆ ಗೊತ್ತಿದ್ದರೆ ಅದರ ನಿವಾರಣೆ ಚಿಟಿಕೆ ಹೊಡೆಯುವಷ್ಟರಲ್ಲಿ ಸಾಧ್ಯ.

ನಮ್ಮ ಸಣ್ಣ ನಿರ್ಲಕ್ಷ್ಯಗಳು ಇಂದು ದೊಡ್ಡ ರೋಗಕ್ಕೆ ಆಹ್ವಾನವನ್ನು ನೀಡುತ್ತಿವೆ. ನಾವು ಅನುಸರಿಸುತ್ತಿರುವ ಆರೋಗ್ಯ ವಿಧಾನಗಳು ಸರಿಯಾಗಿಲ್ಲದೇ ಇರುವುದರಿಂದ ರೋಗಗಳಿಗೆ ನಾವು ಬಲಿಯಾಗುತ್ತಿದ್ದೇವೆ. ಇಂದು ನಾವಿಲ್ಲಿ ನಿಮಗೆ ತಿಳಿಸುತ್ತಿರುವ ರೋಗದ ಪ್ರತ್ಯೌಷಧಿ ಕಿಡ್ನಿ ಕಲ್ಲುಗಳಿಗೆ ಸಂಬಂಧಿಸಿದವುಗಳಾಗಿದೆ.

Natural Remedies For Kidney Stones

ನೀರು ಕುಡಿಯದಿರುವುದು, ಹೊತ್ತು ಹೊತ್ತಿಗೆ ಆಹಾರ ಸೇವಿಸದಿರುವುದು ಈ ರೋಗವನ್ನು ಉಲ್ಭಣಿಸುತ್ತದೆ. ಅತಿಯಾದ ಕೆಲಸದ ನಡುವಿನಲ್ಲಿ ನಾವು ಮೂತ್ರವನ್ನು ಮಾಡುವುದಿಲ್ಲ. ಹೀಗೆ ಕಟ್ಟಿಕೊಂಡ ಮೂತ್ರ ಕಲ್ಲುಗಳಾಗಿ ಕಿಡ್ನಿಯಲ್ಲಿ ಮಾರ್ಪಡುತ್ತದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಕಿಡ್ನಿಸ್ಟೋನ್ ನಿವಾರಣೆಗೆ ಮನೆಮದ್ದು

ಆದರೂ ಇವುಗಳ ನಿವಾರಣೆಯನ್ನು ವೈದ್ಯರ ಮೊರೆ ಹೋಗದೆ ನಮಗೆ ಮಾಡಿಕೊಳ್ಳಬಹುದು. ಉಲ್ಭಣಿಸಿದ್ದಲ್ಲಿ ವೈದ್ಯರ ನೆರವು ಅಗತ್ಯ. ಇಲ್ಲದಿದ್ದಲ್ಲಿ ಇದಕ್ಕಿರುವ ಪರಿಹಾರಗಳನ್ನು ನಾವೇ ಮಾಡಿಕೊಳ್ಳಬಹುದು.

ಕೆಲವೊಂದು ವಿಧಾನಗಳನ್ನು ಅನುಸರಿಸುವುದರಿಂದ ಕೆಲವು ಆಹಾರವಿಧಾನಗಳನ್ನು ಅಳವಡಿಸಿಕೊಳ್ಳುವುದರಿಂದ ಕಿಡ್ನಿ ಸ್ಟೋನ್ ಅನ್ನು ನಿವಾರಿಸಿಕೊಳ್ಳಬಹುದು. ಅವು ಯಾವುದು ಎಂಬುದನ್ನು ನೋಡೋಣ.

ನೀರು ಕುಡಿಯುವುದನ್ನು ಹೆಚ್ಚು ಮಾಡಿ:

ನೀವು ಹೊಂದಿರುವ ಯಾವುದೇ ತರಹದ ಕಿಡ್ನಿ ಸ್ಟೋನ್‌ಗೆ ಪರಿಹಾರ ಚೆನ್ನಾಗಿ ನೀರು ಕುಡಿಯುವುದಾಗಿದೆ. ದಿನಂಪ್ರತಿ 10 ಲೋಟಗಳಷ್ಟಾದರೂ ನೀರನ್ನು ಕಿಡ್ನಿ ಸ್ಟೋನ್ ಹೊಂದಿರುವ ವ್ಯಕ್ತಿ ತೆಗೆದುಕೊಳ್ಳಬೇಕು.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಮೂತ್ರಕೋಶ (ಕಿಡ್ನಿ) ಸಮಸ್ಯೆ ನಿವಾರಣೆಗೆ 3 ವಿಧಾನ

ಲಿಂಬೆ ರಸ:

ನೀರಿನಲ್ಲಿರುವ ಕ್ಯಾಲ್ಶಿಯಂ ಅಂಶಗಳು ಕಿಡ್ನಿಯ ಕಲ್ಲು ರಚನೆಯಾಗುವಲ್ಲಿ ನಿರ್ಬಂಧವನ್ನು ಹೇರುತ್ತವೆ. ಲಿಂಬೆ ರಸವನ್ನು (ದಿನಂಪ್ರತಿ ಅರ್ಧ ಕಪ್) ನಿಮ್ಮ ನೀರು ಅಥವಾ ಆಹಾರಕ್ಕೆ ಸೇರಿಸಿಕೊಳ್ಳುವುದು ಅದ್ಭುತ ಪರಿಹಾರವಾಗಿದೆ. ಲಿಂಬೆಯಲ್ಲಿತುವ ಸಿಟ್ರಿಕ್ ಆಸಿಡ್ ಕಿಡ್ನಿ ಸ್ಟೋನ್‌ಗೆ ರಾಮಬಾಣವಿದ್ದಂತೆ.

ದಾಳಿಂಬೆ:

ದಾಳಿಂಬೆಯಲ್ಲಿ ಪೊಟ್ಯಾಶಿಯಂ ಕಡಿಮೆ ಇರುವುದರಿಂದ, ಮೂತ್ರಪಿಂಡಗಳ ಸಮಸ್ಯೆ ಹೊಂದಿರುವ ವ್ಯಕ್ತಿಗಳ ಆಹಾರದಲ್ಲಿ ಅವುಗಳು ವರದಾಯಕವಾಗಿವೆ. ಮೂತ್ರಪಿಂಡಗಳ ಸಮಸ್ಯೆಯಿರುವ ವ್ಯಕ್ತಿಯ ಆಹಾರ ಕ್ರಮದಲ್ಲಿ ಪ್ರೋಟೀನ್ ಕಡಿಮೆ ಪ್ರಮಾಣದಲ್ಲಿರಬೇಕು, ಉಪ್ಪು, ಫೋಸ್‌ಫೋರಸ್ ಹಾಗೂ ಪೊಟ್ಯಾಶಿಯಂ ಅನ್ನು ಆಹಾರ ಹೊಂದಿರಬಾರದು. ನೀವು ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಬಳಲುತ್ತಿದ್ದರೆ ದಿನಂಪ್ರತಿ ದಾಳಿಂಬೆ ಜ್ಯೂಸ್ ಕುಡಿಯುವ ಕ್ರಮವನ್ನು ರೂಢಿಸಿಕೊಳ್ಳಿ ಇಲ್ಲವೇ ದಾಳಿಂಬೆಯನ್ನು ಹಾಗೆಯೇ ತಿನ್ನಿ.

ತುಳಸಿ:

ನಮ್ಮ ಮನೆಯಂಗಳದ ಸಸ್ಯ ಔಷಧೀಯ ಗುಣಗಳಿರುವ ತುಳಸಿಯಾಗಿದೆ, ನಿಮಗೆ ತಿಳಿದಿದೆಯೇ ಕಿಡ್ನಿ ಸ್ಟೋನ್‌ಗೆ ನೈಸರ್ಗಿಕ ಪರಿಹಾರ ಈ ತುಳಸಿಯಿಂದ ದೊರೆಯುತ್ತದೆ. ತುಳಸಿಯು ನಮ್ಮ ಕಿಡ್ನಿಗಳನ್ನು ಬಲಪಡಿಸುತ್ತದೆ. ತುಳಸಿ ಎಲೆಗಳಿಗೆ ಜೇನನ್ನು ಸೇರಿಸಿ ಚಹಾ ಅಥವಾ ಜ್ಯೂಸ್ ಮಾಡಿಕೊಳ್ಳಿ. ದಿನಂಪ್ರತಿ ಇದರ ಚಹಾ ಅಥವಾ ಜ್ಯೂಸ್ ಮಾಡಿ ಕುಡಿಯುವುದು ಕಿಡ್ನಿ ಸಮಸ್ಯೆಗಳಿಂದ ಮುಕ್ತಿ ನೀಡುತ್ತದೆ.

ದ್ರಾಕ್ಷಿ ಹಣ್ಣಿನ ಜ್ಯೂಸ್:

ಕ್ಯಾಲ್ಶಿಯಂ ಆಕ್ಸಲೇಟ್ ಅನ್ನು ಕಡಿಮೆಗೊಳಿಸುವ ಅಂಶವನ್ನು ತನ್ನಲ್ಲಿ ಹೊಂದಿರುವ ಇನ್ನೊಂದು ಶಕ್ತಿಶಾಲಿ ಹಣ್ಣು ದ್ರಾಕ್ಷಿ ಹಣ್ಣಾಗಿದೆ. ನ್ಯೂಟ್ರಿಶಿಯನ್‌ನ ಬ್ರಿಟಿಷ್ ಅಧ್ಯಯನ ಪತ್ರಿಕೆಯೊಂದರ ವರದಿಯೊಂದು ದ್ರಾಕ್ಷಿ ರಸದ ಮಹತ್ವವವನ್ನು ಮನವರಿಕೆ ಮಾಡಿಕೊಟ್ಟಿತು. ಸ್ಟೋನ್ ರಚನೆಗೆ ಸಹಕಾರಿಯಾಗಿರುವ ಕ್ಯಾಲ್ಶಿಯಂ ಆಕ್ಸಲೇಟ್ ಅನ್ನು ತನ್ನ ಔಷಧೀಯ ಗುಣಗಳಿಂದ ಕಡಿಮೆ ಮಾಡಿಕೊಳ್ಳುವ ಶಕ್ತಿ ದ್ರಾಕ್ಷಿಗಿದೆ. ಯೂರಿನ್ ಪಿಎಚ್ ಹಾಗೂ ಸಿಟ್ರೇಟ್ ಮಟ್ಟವು ಏರಿಕೆಗೊಂಡಲ್ಲಿ ಅರ್ಧದಿಂದ ಒಂದು ಲೀಟರ್‌ವರೆಗೆ ದ್ರಾಕ್ಷಿ ಜ್ಯೂಸ್ ಅನ್ನು ಕುಡಿಯುವ ವ್ಯಕ್ತಿಗೆ ಕಿಡ್ನಿ ಸ್ಟೋನ್ ಉಂಟಾಗುವುದಿಲ್ಲ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಇದು ನಿಜ, ಹೃದ್ರೋಗದ ಮೂಲ ಕಿಡ್ನಿಯಲ್ಲಿದೆ!

ಗ್ರೀನ್ ಟೀ:

ಗ್ರೀನ್ ಟೀ ಒಂದು ಉತ್ತಮ ಔಷಧೀಯ ಪೇಯವಾಗಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ. ಗ್ರೀನ್ ಟೀಯಲ್ಲಿರುವ ಉತ್ಕರ್ಷಣ ನಿರೋಧಕ ಅಂಶಗಳು ಕ್ಯಾಲ್ಶಿಯಂ ಆಕ್ಸಲೇಟ್ ಯೂರೋಲಿಥಾಸಿಸ್ ಅನ್ನು ನಿರ್ಬಂಧಿಸುತ್ತಾ ಕ್ಯಾಲ್ಶಿಯಂ ಆಕ್ಸಲೇಟ್ ರಚನೆಯನ್ನು ಕಡಿಮೆ ಮಾಡುತ್ತವೆ. ನಗೋಯಾ ಸಿಟಿ ಯೂನಿವರ್ಸಿಟಿಯ ಗ್ರಾಜ್ಯುಯೇಟ್ ಸ್ಕೂಲ್ ಆಫ್ ಮೆಡಿಕಲ್ ಸೈನ್ಸಸ್ 2005ರಲ್ಲಿ ಮಾಡಿದ ಅಧ್ಯಯನವು ಮೂತ್ರಪಿಂಡಗಳ ರಚನೆಯಲ್ಲಿ ಗ್ರೀನ್ ಟೀ ಯ ವ್ಯಾಧಿ ನಿರೋಧಕ ಪರಿಣಾಮಗಳನ್ನು ಪರಿಶೋಧಿಸಿ ಗ್ರೀನ್ ಟೀ ಕಿಡ್ನಿ ಸ್ಟೋನ್‌ಗೆ ಉತ್ತಮ ಪರಿಹಾರವಾಗಿದೆ ಎಂಬುದನ್ನು ಸಾಧಿಸಿದೆ. ಕ್ಯಾಫೇನ್ ಅಂಶವಿಲ್ಲದ ಗ್ರೀನ್ ಟೀಗೆ ಒಗ್ಗಿಕೊಂಡು ದಿನದಲ್ಲಿ ಕನಿಷ್ಟ ಪಕ್ಷ 2-3 ಲೋಟ ಗ್ರೀನ್ ಟೀ ಸೇವಿಸಿ.

ಕ್ಯಾರೇಟ್ :

ವೈಲ್ಡ್ ಕ್ಯಾರೇಟ್ (ಎಲೆಗಳು ಮತ್ತು ಬೀಜಗಳು) - ನೈಸರ್ಗಿಕ ಗಿಡಮೂಲಿಕೆಯಾದ, ವೈಲ್ಡ್ ಕ್ಯಾರೇಟ್ (ಡೌಕಸ್ ಕ್ಯಾರೊಟಾ) ಸಾಮಾನ್ಯ ಕ್ಯಾರೇಟ್‌‌ಗೆ ಪ್ರತಿಸ್ಪರ್ಧಿಯಲ್ಲ. ವೈಲ್ಡ್ ಕ್ಯಾರೇಟ್ ಮೂತ್ರವರ್ಧಕವಾಗಿದ್ದು, ಟಾಕ್ಸಿನ್‌ಗಳು ಮತ್ತು ಕಿಡ್ನಿಯಲ್ಲಿರುವ ತ್ಯಾಜ್ಯ ಹೊರಹೋಗುವಂತೆ ಮಾಡುತ್ತದೆ.

ನಿಮ್ಮ ಕಿಡ್ನಿಗಳ ಆರೋಗ್ಯಕ್ಕಾಗಿ ನೀವು ತೆಗೆದುಕೊಳ್ಳಬೇಕಾದ ಆಹಾರಗಳು :

ಅತೀ ಉಪ್ಪು, ಮದ್ಯಸಾರ ಮತ್ತು ಸಂರಕ್ಷಕ ಆಹಾರ ಪದಾರ್ಥಗಳ ಸೇವನೆಯನ್ನು ವರ್ಜಿಸಬೇಕು. ಕನಿಷ್ಟ ಉಪ್ಪು ಮತ್ತು ತಾಜಾ ಸಾಮಾಗ್ರಿಗಳಿಂದ ತಯಾರಿಸಲಾದ ಆಹಾರ ಪದಾರ್ಥಗಳ ಸೇವನೆಯನ್ನು ಮಾಡಿ. ಸಿದ್ಧಪಡಿಸಿದ ವಸ್ತುಗಳನ್ನು ಖರೀದಿಸುವುದು ದುಬಾರಿ ಮಾತ್ರವಲ್ಲದೆ ನಿಮ್ಮ ಕಿಡ್ನಿಗಳಿಗೆ ಹಾನಿಕಾರಕ. ಹೆಚ್ಚು ಆಂಟಿಯೋಕ್ಸಿಡೆಂಟ್ ಸತ್ವಗಳನ್ನು ಹೊಂದಿರುವ ತರಕಾರಿ ಹಣ್ಣುಗಳಾದ ಟೊಮೇಟೊ, ಬ್ಲುಬೆರ್ರಿ, ಸ್ಕ್ವಾಷಸ್ ಮತ್ತು ಕ್ಯಾರೇಟ್‌ಗಳಿಗೆ ಹೆಚ್ಚು ಹಣ ಹಾಕಿ ಖರೀದಿಸಿ.

ಮಾಂಸಗಳಾದ (ಪೋರ್ಕ್ ಹಾಗೂ ಬೀಫ್), ಆಕ್ಸಲೇಟ್ ಅಂಶವುಳ್ಳ (ನಟ್ಸ್, ಸ್ಪಿನಾಂಚ್ ಮತ್ತು ಬೀನ್ಸ್) ಶೀತ ನೀರಿನ ಮೀನು, ರೀಫೈಂಡ್ ಆಹಾರ ಪದಾರ್ಥಗಳಾದ ವೈಟ್ ಬ್ರೆಡ್ ಮತ್ತು ವಾಣಿಜ್ಯ ಫಾಸ್ಟ್ ಫುಡ್‌ಗಳಾದ ಫ್ರೆಂಚ್ ಫ್ರೈ ಹಾಗೂ ಬರ್ಗರ್ ಬಗ್ಗೆ ಎಚ್ಚರವಿರಲಿ.

ಆರೋಗ್ಯಕರ ಜೀವನಶೈಲಿಯೆಂದರೆ ಆರೋಗ್ಯಕರ ಕಿಡ್ನಿಗಳು:

ಯಾವುದೇ ಮಾತ್ರೆಗಳು ಔಷಧಗಳನ್ನು ತೆಗೆದುಕೊಳ್ಳುವ ಮುನ್ನ ನಿಮ್ಮ ವೈದ್ಯರನ್ನು ಮೊದಲು ಭೇಟಿಯಾಗಿ. ಕೆಲವೊಂದು ಔಷಧಗಳು ನಿಮ್ಮ ಕಿಡ್ನಿಗೆ ಹೆಚ್ಚು ಹಾನಿಯುಂಟು ಮಾಡುತ್ತವೆ. ಪ್ರತೀ ದಿನ 30 ನಿಮಿಷಗಳಷ್ಟು ಕಾಲ ವ್ಯಾಯಾಮವನ್ನು ಮಾಡುವ ಅಭ್ಯಾಸವನ್ನು ರೂಢಿಸಿಕೊಳ್ಳಿ - ಇದು ನಿಮ್ಮ ದೇಹದ ದ್ರವಗಳಿಗೆ ಚಾಲನೆಗೊಳ್ಳಲು ಸಹಾಯ ಮಾಡಿ ನಿಮ್ಮ ದೇಹದ ವ್ಯವಸ್ಥೆಯನ್ನು ಕಿಡ್ನಿಸ್ಟೋನ್‌ಗಳಿಂದ ಮುಕ್ತಗೊಳಿಸುತ್ತದೆ.

English summary

Natural Remedies For Kidney Stones

Kidney stones also tend to run in families, so individuals with a close relative who has been through a stone episode should be careful. Kidney stones may be present for years and never produce symptoms.
X
Desktop Bottom Promotion