For Quick Alerts
ALLOW NOTIFICATIONS  
For Daily Alerts

ನೈಸರ್ಗಿಕ ಶಕ್ತಿಯನ್ನು ಒದಗಿಸುವ ಸೊಪ್ಪಿನ ಜ್ಯೂಸ್

|

ದೇಹಕ್ಕೆ ಪೌಷ್ಠಿಕಾಂಶ ಮತ್ತು ಶಕ್ತಿ ಪಡೆಯಲು ಹಸಿರು ಆಹಾರ ಯಾವಾಗಲೂ ಆರೋಗ್ಯಕಾರಿ ಆಯ್ಕೆಯೆಂದು ಪರಿಗಣಿಸಲಾಗಿದೆ. ಪಾಲಕ, ಕೋಸುಗಡ್ಡೆ ಸೊಪ್ಪು, ಕೊತ್ತಂಬರಿ ಮತ್ತು ಪುದೀನಾ ಒಳ್ಳೆಯ ಪ್ರೋಟಿನ್, ಕಾಬ್ರೋಹೈಡ್ರೇಟ್ಸ್, ಮಿನರಲ್ಸ್ ಮತ್ತು ಪೌಷ್ಠಿಕಾಂಶಗಳನ್ನು ಹೊಂದಿರುವ ಹಸಿರು ತರಕಾರಿಗಳು. ಹಸಿರು ತರಕಾರಿಗಳಲ್ಲಿ ಅತ್ಯುತ್ತಮ ಆರೋಗ್ಯ ಲಾಭಗಳಿವೆ. ಪ್ರತೀ ದಿನದ ಆಹಾರ ಕ್ರಮದಲ್ಲಿ ಯಾವುದಾದರೂ ಒಂದು ಹಸಿರು ತರಕಾರಿ ಸೇರಿಸುವಂತೆ ವೈದ್ಯರು ಕೂಡ ಸಲಹೆ ಮಾಡುತ್ತಾರೆ.

ಹಸಿರು ತರಕಾರಿಗಳನ್ನು ಬೇಯಿಸಿ ಅಥವಾ ಜ್ಯೂಸ್ ಮೂಲಕ ಸೇವಿಸಬೇಕು. ನಿಮ್ಮ ದೇಹಕ್ಕೆ ಶಕ್ತಿ ಒದಗಿಸುವಂತಹ ಕೆಲವೊಂದು ಹಸಿರು ಜ್ಯೂಸ್ ಗಳಿವೆ. ನಿಯಮಿತವಾಗಿ ಹಸಿರು ಜ್ಯೂಸ್ ಕುಡಿಯುವುದರಿಂದ ನಿಮ್ಮ ದೇಹದಲ್ಲಿ ಕಡಿಮೆಯಿರುವ ಪೌಷ್ಠಿಕಾಂಶಗಳನ್ನು ಇದು ತುಂಬುತ್ತದೆ ಮತ್ತು ದೇಹದಲ್ಲಿನ ಪ್ರತಿರಕ್ಷಣಾ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಇದು ಹಸಿರುವ ಜ್ಯೂಸ್‌ನ ಕೆಲವೊಂದು ಲಾಭಗಳು. ಸುಲಭವಾಗಿ ಮಾಡಬಹುದಾದ ಮತ್ತು ದೇಹದ ಆರೋಗ್ಯಕ್ಕೆ ಉತ್ತಮವಾಗಿರುವಂತಹ ಕೆಲವೊಂದು ಹಸಿರು ಜ್ಯೂಸ್‌ಗಳ ಬಗ್ಗೆ ಈ ಲೇಖನದಲ್ಲಿ ಚರ್ಚಿಸಲಾಗಿದೆ. ನೈಸರ್ಗಿಕ ಪಾನೀಯ ಎಳನೀರಿನ ಆರೋಗ್ಯಕಾರಿ ಪ್ರಯೋಜನಗಳು

ಸೌತೆಕಾಯಿ ಮತ್ತು ಪಾಲಕ್ ಸೊಪ್ಪು

ಸೌತೆಕಾಯಿ ಮತ್ತು ಪಾಲಕ್ ಸೊಪ್ಪು

ಈ ಜ್ಯೂಸ್ ಮಾಡಲು ಹದ ಮಾಡಿದ ಪಾಲಕ ಎಲೆಗಳು ಮತ್ತು ಕತ್ತರಿಸಿದ ಸೌತೆಕಾಯಿಯ ಮಿಶ್ರಣ ಮಾಡಿ. ಸ್ವಲ್ಪ ಉಪ್ಪು, ಮೆಣಸು ಮತ್ತು ಸ್ವಲ್ಪ ರುಚಿಗೆ ದಾಲ್ಚಿನಿ ಹಾಕಿ. ಇದೆಲ್ಲವನ್ನು ಮಿಶ್ರಣ ಮಾಡಿ ಬ್ಲೆಂಡರ್ ಗೆ ಹಾಕಿದಾಗ ಸ್ವಲ್ಪ ನೀರು ಹಾಕಿ. ಸೌತೆಕಾಯಿ ದೇಹವನ್ನು ಶುದ್ಧೀಕರಿಸುತ್ತದೆ ಮತ್ತು ಇದರಲ್ಲಿ ಉನ್ನತ ಮಟ್ಟದ ಪ್ರೋಟೀನ್ ಇದೆ. ಪಾಲಕ್ ಸೊಪ್ಪಿನಲ್ಲಿ ಹಲವಾರು ಆ್ಯಂಟಿ ಆಕ್ಸಿಡೆಂಟ್, ಪ್ರೋಟೀನ್ ಮತ್ತು ಇತರ ಪೌಷ್ಠಿಕಾಂಶಗಳಿವೆ. ಇದರಿಂದ ಈ ಜ್ಯೂಸ್ ಆರೋಗ್ಯಕಾರಿ ಮತ್ತು ಶಕ್ತಿಯ ಮೂಲ.

ಅಲೋವೆರಾ ಜ್ಯೂಸ್

ಅಲೋವೆರಾ ಜ್ಯೂಸ್

ಅಲೋವೆರಾ ಜ್ಯೂಸ್ ಶಕ್ತಿ ಒದಗಿಸುವುದು ಮಾತ್ರವಲ್ಲದೆ ಹಲವಾರು ರೀತಿಯ ಆರೋಗ್ಯ ಲಾಭಗಳಿವೆ. ಅಲೋವೆರಾ ಜ್ಯೂಸ್ ನಲ್ಲಿ ದೇಹದಲ್ಲಿರುವ ವಿಷಕಾರಿ ಅಂಶವನ್ನು ಹೊರಹಾಕುವ ಗುಣವಿದೆ. ಇದು ದೇಹವನ್ನು ಶುದ್ದೀಕರಿಸಿ, ದೇಹದ ಚಟುವಟಿಕೆ ವೃದ್ಧಿಸುತ್ತದೆ. ಇದು ದೇಹದ ಪುನರ್ಜಲೀಕರಣಕ್ಕೆ ಒಳ್ಳೆಯದು. ಅಲೋವೆರಾದ ಎಲೆಯ ಒಳಗಿರುವ ಲೋಳೆಯನ್ನು ಬಳಸಿ ಜ್ಯೂಸ್ ಮಾಡಲಾಗುತ್ತದೆ.

ಪಾಲಕ್ ಸೊಪ್ಪು ಮತ್ತು ತೆಂಗಿನಕಾಯಿ ಜ್ಯೂಸ್

ಪಾಲಕ್ ಸೊಪ್ಪು ಮತ್ತು ತೆಂಗಿನಕಾಯಿ ಜ್ಯೂಸ್

ಈ ಜ್ಯೂಸ್ ಮಾಡಲು ನಿಮಗೆ ಒಂದು ಕಪ್ ತೆಂಗಿನಕಾಯಿ ಹಾಲು, ಹದ ಮಾಡಿದ ಪಾಲಕ್ ಸೊಪ್ಪು, ಒಂದು ಕಪ್ ಕೊತ್ತಂಬರಿ ಸೊಪ್ಪು, ಸೆಲರಿ ತುಂಡುಗಳು, ಒಂದು ಬಾಳೆಹಣ್ಣು ಮತ್ತು ದಾಲ್ಚಿನಿ ಚಕ್ಕೆ. ಎಲ್ಲವನ್ನು ಮಿಕ್ಸ್ ಮಾಡಿ ಬ್ಲೆಂಡರ್ ಬಳಸಿ ಜ್ಯೂಸ್ ಮಾಡಿ. ಹಸಿರು ಜ್ಯೂಸ್ ಬಾಳೆಹಣ್ಣು ಮತ್ತು ದಾಲ್ಚಿನಿಯಿಂದಾಗಿ ಸಿಹಿಯಾಗುತ್ತದೆ. ಜ್ಯೂಸ್ ನಿಮ್ಮ ದೇಹಕ್ಕೆ ಶಕ್ತಿ, ಪ್ರೋಟೀನ್ ಮತ್ತು ಆ್ಯಂಟಿ ಆಕ್ಸಿಡೆಂಟ್ ಅನ್ನು ಒದಗಿಸುತ್ತದೆ. ಇದು ದೇಹ ಮತ್ತು ಜೀರ್ಣಾಂಗ ವ್ಯವಸ್ಥೆ ಶುದ್ದೀಕರಿಸುತ್ತದೆ ಮತ್ತು ದೇಹದ ಚಟುವಟಿಕೆಯನ್ನು ಉತ್ತೇಜಿಸುತ್ತದೆ.

ಪುದೀನಾ ಮತ್ತು ನಿಂಬೆ

ಪುದೀನಾ ಮತ್ತು ನಿಂಬೆ

ಪುದೀನಾ ಚೇತೋಹಾರಿ ಮತ್ತು ಪುನಶ್ಚೇತನಗೊಳಿಸುವ ಗುಣ ಹೊಂದಿದೆ. ಪುದೀನಾದೊಂದಿಗೆ ನಿಂಬೆ ಜ್ಯೂಸ್ ಕುಡಿದರೆ ಅದು ನಮ್ಮನ್ನು ಚೇತೋಹಾರಿ ಮಾಡಿ, ಶಕ್ತಿ ಒದಗಿಸುತ್ತದೆ ಮತ್ತು ದೇಹವನ್ನು ಮತ್ತೆ ಪುನರ್ಜಲೀಕರಿಸುತ್ತದೆ. ಈ ಜ್ಯೂಸ್ ನಲ್ಲಿರುವ ಪ್ರೋಟೀನ್ ಮತ್ತು ಆ್ಯಂಟಿ ಆಕ್ಸಿಡೆಂಟ್ ಗುಣವು ದೇಹಕ್ಕೆ ಶಕ್ತಿ ಒದಗಿಸುತ್ತದೆ. ಈ ಜ್ಯೂಸ್ ಮಾಡಲು ಪುದೀನಾವನ್ನು ಅರೆದು ಪೇಸ್ಟ್ ಮಾಡಿ. ಅದಕ್ಕೆ ನಿಂಬೆ ರಸ, ಉಪ್ಪು, ಸಕ್ಕರೆ ಮತ್ತು ದಾಲ್ಚಿನಿ ಹಾಕಿ. ಇದು ತುಂಬಾ ಆರೋಗ್ಯಕಾರಿ ಮತ್ತು ತಯಾರಿಸಲು ಸುಲಭ.

ಹಸಿರು ಸೊಪ್ಪಿನ ಜ್ಯೂಸ್

ಹಸಿರು ಸೊಪ್ಪಿನ ಜ್ಯೂಸ್

ಈ ಜ್ಯೂಸ್ ಮಾಡಲು ನಾಲ್ಕು ಕೋಸುಗಡ್ಡೆ ಸೊಪ್ಪಿನ ಎಲೆಗಳು, ಒಂದು ಕಪ್ ಕತ್ತರಿಸಿದ ಸೌತೆಕಾಯಿ, ಒಂದು ಕಪ್ ಪಾಲಕ್ ಸೊಪ್ಪು, ಸೆಲರಿ ಮತ್ತು ಪಾರ್ಸ್ಲಿ. ಎಲ್ಲವನ್ನು ಮಿಶ್ರಣ ಮಾಡಿ ಮತ್ತು ಸ್ವಲ್ಪ ನೀರು, ಉಪ್ಪು ಮತ್ತು ಮೆಣಸು ಹಾಕಿ ಮಿಕ್ಸಿಗೆ ಹಾಕಿ. ಜ್ಯೂಸ್ ಎಲ್ಲಾ ಪೌಷ್ಠಿಕಾಂಶಗಳಿಂದ ಸಮೃದ್ಧವಾಗಿದೆ ಮತ್ತು ಇದನ್ನು ಒಂದು ಪರಿಪೂರ್ಣ ಶಕ್ತಿ ಪೇಯವಾಗಿ ಮಾಡಬಹುದು. ಇದನ್ನು ಬೆಳಗ್ಗೆ ಶಕ್ತಿ ಪೇಯವಾಗಿ ಕುಡಿಯಬಹುದು. ನೈಸರ್ಗಿಕವಾಗಿ ಮಾಡಬಹುದಾದಂತಹ ಅತ್ಯುತ್ತಮ ಹಸಿರು ಜ್ಯೂಸ್ ಗಳಲ್ಲಿ ಇದು ಒಂದಾಗಿದೆ.

English summary

NATURAL ENERGY GREEN JUICE Drinks

Green juices also rehydrate the body, reviving the body organs. Green juices are excellent detox agents and helps flush the unwanted toxins from the body. These were a few advantages of green juices. A few green juices that are easy to make and are healthy for the body are further discussed in the article.
Story first published: Friday, November 7, 2014, 14:52 [IST]
X
Desktop Bottom Promotion