For Quick Alerts
ALLOW NOTIFICATIONS  
For Daily Alerts

ನ್ಯಾಪ್‌ಕಿನ್ ಚರ್ಮ ತೊಂದರೆಗಳು: ಪರಿಹಾರ

By Manohar.V
|

ಹೆಂಗಳೆಯರನ್ನು ಹೆಚ್ಚಾಗಿ ಕಾಡುವ ಸಮಸ್ಯೆಯೆಂದರೆ ಒಳಉಡುಪುಗಳ ಸಮಸ್ಯೆಯಾಗಿದೆ. ಅದರ ಬಿಗಿತ ತುರಿತದಿಂದಾಗಿ ಕೆಲವೊಮ್ಮೆ ಕಿರಿಕಿರಿಯನ್ನು ಅನುಭವಿಸಬೇಕಾಗುತ್ತದೆ. ಈ ಸಮಸ್ಯೆಯು ಹೆಚ್ಚಾಗಿ ಕಾಡುವುದು ಬೇಸಿಗೆಯಲ್ಲಿ ಏಕೆಂದರೆ ಅತಿಯಾದ ಬೆವರುವಿಕೆಯು ಆ ಜಾಗಗಳಲ್ಲಿ ಹೆಚ್ಚಾಗಿರುವುದರಿಂದ ತ್ವಚೆಯು ಒಡೆದು ಈ ಸಮಸ್ಯೆಯು ಹೆಚ್ಚಾಗುತ್ತದೆ.

ತೊಡೆ ಸಂದುಗಳಲ್ಲಿ ಅತಿಯಾದ ಬೆವರುವಿಕೆಯು ಒಳುಡುಪುಗಳನ್ನು ಒದ್ದೆಯಾಗಿಸುತ್ತದೆ, ಇದರಿಂದ ನವೆ ಕೆರೆತ ಉರಿತ ಉಂಟಾಗಿ ಅದನ್ನು ಧರಿಸಲಾರದ ಸಮಸ್ಯೆ ಹೆಚ್ಚುತ್ತದೆ. ಆದ್ದರಿಂದ ಬಿಗಿಯಾದ ಒಳಉಡುಪು ಮತ್ತು ಕಾಟನ್ ಅಲ್ಲದ ಒಳಉಡುಪನ್ನು ಧರಿಸಲೇ ಬಾರದು.

Napkin Skin Rashes: Remedies

ಈ ಸಮಸ್ಯೆಯ ಮೂಲ ಕಾರಣ ಸ್ಯಾನಿಟರಿ ನ್ಯಾಪ್‌ಕಿನ್ ಆಗಿದೆ. ಸ್ಯಾನಿಟರಿ ನ್ಯಾಪ್‌ಕಿನ್ ಅಥವಾ ಪ್ಯಾಡ್‌ಗಳು ಒಳಗೊಂಡಿರುವ ಪ್ಲಾಸ್ಟಿಕ್ ಅಥವಾ ಸುಗಂಧ ದ್ರವ್ಯವು ಸೂಕ್ಷ್ಮ ಚರ್ಮವನ್ನು ಘಾಸಿಗೊಳಿಸುತ್ತದೆ. ಈ ಬಗೆಯ ತೊಂದರೆಗಳನ್ನು ನಿವಾರಿಸಲು ಇಲ್ಲಿದೆ ಕೆಲವು ಸುಲಭ ಪರಿಹಾರಗಳು:

ಹಗುರ ಉಡುಪುಗಳು:
ಹಗುರವಾದ ಒಳುಡುಪುಗಳನ್ನು ಧರಿಸುವುದು ಚರ್ಮದ ಈ ಬಗೆಯ ತೊಂದರೆಯನ್ನು ನಿವಾರಿಸುತ್ತದೆ. ಹಗುರವಾದ ಬಟ್ಟೆಗಳು ಸುಲಭವಾಗಿ ಗಾಳಿಯಾಡುವುದಕ್ಕೆ ಒಳಿತಾಗಿರುತ್ತದೆ. ಮತ್ತು ಧರಿಸಲು ಉತ್ತಮವಾಗಿರುತ್ತದೆ.

ಎಣ್ಣೆ ಹಚ್ಚುವುದು:
ಒಳಉಡುಪಿನ ತೊಂದರೆಗಳು ಹೆಚ್ಚಾದಾಗ ಎಣ್ಣೆ ಹಚ್ಚುವುದು ಒಳಿತು. ತುರಿಕೆ ನವೆ ಉಂಟಾದಾಗ ತೆಂಗಿನ ಎಣ್ಣೆಯನ್ನು ಹಚ್ಚಿ. ಸ್ವಲ್ಪ ಸಮಯ ಆ ಜಾಗಕ್ಕೆ ಗಾಳಿಯಾಡಲಿ. ಇದು ತ್ವಚೆಗುಂಟಾದ ಉರಿತವನ್ನು ಕಡಿಮೆಗೊಳಿಸಿ ಸಮಾಧಾನವನ್ನುಂಟು ಮಾಡುತ್ತದೆ.

ಟಾಲ್ಕಂ ಪೌಡರ್:
ನ್ಯಾಪ್‌ಕಿನ್ ತೊಂದರೆಯುಂಟಾದ ಜಾಗದಲ್ಲಿ ಟಾಲ್ಕಂ ಪೌಡರ್ ಅನ್ನು ಹಚ್ಚುವುದು ಕೂಡ ಉತ್ತಮ ಪರಿಹಾರವಾಗಿದೆ. ಇದು ಮಾಯಿಶ್ಚರೈಸರ್ ಅನ್ನು ಹೀರಿ ತೇವವನ್ನು ಕಡಿಮೆಗೊಳಿಸುತ್ತದೆ. ಟಾಲ್ಕಂ ಪೌಡರ್‌ನ ಬಳಕೆ ಸ್ನಾನದ ನಂತರವಾದರೆ ಒಳ್ಳೆಯದು.

ನ್ಯಾಪ್‌ಕಿನ್‌ಗಳನ್ನು ಧರಿಸದಿರುವುದು:
ನ್ಯಾಪ್‌ಕಿನ್ ಅಥವಾ ಒಳಉಡುಪಿನ ತೊಂದರೆ ನಿಮಗುಂಟಾದಾಗ ಸ್ವಲ್ಪ ಹೊತ್ತಿನವರೆಗೆ ಅದನ್ನು ತೆಗೆದಿರಿಸಿ. ಒಳಉಡುಪಿನ ತೊಂದರೆ ಕಡಿಮೆಯಾಗುವವರೆಗೆ ಮೆನ್‌ಸ್ಟ್ರಲ್ ಕಪ್ಸ್, ಟ್ಯಾಂಪೋನ್ಸ್ ಅಥವಾ ಬಟ್ಟೆಯ ಪ್ಯಾಡ್‌ಗಳನ್ನು ಬಳಸಿ.

ಹೀಗೆ ನಿಮ್ಮ ತುರಿತ ನವೆಯನ್ನು ಕಡಿಮೆ ಮಾಡುವ ಹಲವಾರು ಮನೆಮದ್ದುಗಳಿದ್ದು, ಅದರಿಂದ ಪರಿಹಾರವನ್ನು ಪಡೆದುಕೊಳ್ಳಬಹುದು. ಈ ತೊಂದರೆ ಹೆಚ್ಚಾದಾಗ ನೀವು ವೈದ್ಯರನ್ನು ಸಂಪರ್ಕಿಸಲೇಬೇಕು.

English summary

Napkin Skin Rashes: Remedies

A woman often suffers from bikini line rashes. It is one of the most inflammatory and discomforting skin problems which can be really troublesome.
Story first published: Monday, January 6, 2014, 15:34 [IST]
X
Desktop Bottom Promotion