For Quick Alerts
ALLOW NOTIFICATIONS  
For Daily Alerts

ಪಪ್ಪಾಯ ನಿಜವಾಗಿಯೂ ಮುಟ್ಟಾಗುವಂತೆ ಮಾಡುತ್ತದೆಯಾ?

By Hemanth P
|

ಋತುಚಕ್ರವು ಮುಂದೆ ಹೋಗುವುದು ನೋವು ಮತ್ತು ಒತ್ತಡವನ್ನು ಉಂಟುಮಾಡುತ್ತದೆ. ಋತುಚಕ್ರವಾಗಲು ಪಪ್ಪಾಯ ಸೇವನೆ ಮಾಡುವುದನ್ನು ಹಿಂದಿನಿಂದಲೂ ಅನುಸರಿಸಿಕೊಂಡು ಬರಲಾಗುತ್ತಿದೆ. ಇದು ಕಟ್ಟುಕತೆಯೇ ಅಥವಾ ನಿಜವಾಗಿಯೂ ಇದರಲ್ಲಿ ಏನಾದರೂ ಅಂಶವಿದೆಯಾ? ನಾವು ಇದನ್ನು ತುಂಬಾ ಹತ್ತಿರದಿಂದ ಪರೀಕ್ಷಿಸುತ್ತಿದ್ದೇವೆ.

ಋತುಚಕ್ರದ ವೇಳೆ ಆಗುವ ಬದಲಾವಣೆಗಳು

ಮೊದಲನೇಯದಾಗಿ ಪಪ್ಪಾಯದಲ್ಲಿ ವಿಟಮಿನ್ ಎ, ಕ್ಯಾಲ್ಸಿಯಂ, ಪೊಟಾಸಿಯಂ ಸಮೃದ್ಧವಾಗಿದೆ. ಪಾಲಿಕ್ ಆಮ್ಲದ ರೂಪದಲ್ಲಿ ವಿಟಮಿನ್ ಬಿ ಇದರಲ್ಲಿದೆ. ವಿಟಮಿನ್ ಬಿ-6, ವಿಟಮಿನ್ ಬಿ-1 ಮತ್ತು ರಿಬೋಫ್ಲಾವಿನ್ ಇದರಲ್ಲಿದೆ. ಈ ವಿಟಮಿನ್ ಮತ್ತು ಮಿನರಲ್ ಗಳಿಂದ ಪಪ್ಪಾಯ ಒಂದು ಅದ್ಭುತ ಆಹಾರ. ಇದು ಹಲವಾರು ರೀತಿಯ ಅನಾರೋಗ್ಯಗಳನ್ನು ನಿಯಂತ್ರಿಸುತ್ತದೆ.

Missed Menstruation: Can Papaya Really Induce A Period?

ಪಪ್ಪಾಯದಲ್ಲಿ ಒಳ್ಳೆಯ ಗುಣಮಟ್ಟದ ನಾರಿನಾಂಶವಿದೆ. ಇದು ಮಲಬದ್ಧತೆ ನಿವಾರಿಸಿ ಜೀರ್ಣಕ್ರಿಯೆಗೆ ನೆರವಾಗುತ್ತದೆ. ಇದು ಕಡಿಮೆ ಕ್ಯಾಲರಿ, ಹೆಚ್ಚಿನ ನಾರಿನಾಂಶ ಮತ್ತು ವಿಟಮಿನ್ ಗಳಿಂದ ಸಮೃದ್ಧವಾಗಿರುವ ಕಾರಣ ತೂಕ ಇಳಿಸುವ ಆಹಾರ ಕ್ರಮದಲ್ಲಿ ಇದನ್ನು ಅಳವಡಿಸಬಹುದು. ಇದರಲ್ಲಿನ ಉರಿಯೂತ ನಿವಾರಣ ಗುಣಗಳು ಸಂಧಿವಾತ ಮತ್ತು ಅಸ್ಥಿರಂಧ್ರತೆಯಿಂದ ಬಳಲುತ್ತಿದ್ದರೆ ನೋವನ್ನು ತಡೆಗಟ್ಟುತ್ತದೆ. ಪಪ್ಪಾಯದಲ್ಲಿ ವಿಟಮಿನ್ ಸಿ ಉನ್ನತ ಮಟ್ಟದಲ್ಲಿದೆ.

ತಿಂಗಳ ಮುಟ್ಟಿನ ತಡವಾಗುವಿಕೆಗಾಗಿ ಮನೆಮದ್ದುಗಳು

ಇದು ಪ್ರತಿರಕ್ಷಣಾ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಪಪ್ಪಾಯದ ಬೀಜಗಳಲ್ಲಿ ಸೂಕ್ಷ್ಮಾಣು ವಿರೋಧಿ ಗುಣಗಳಿವೆ. ಇದು ಕಿಡ್ನಿ ವೈಫಲ್ಯ ತಡೆಯುತ್ತದೆ. ಪಿತ್ತಜನಕಾಂಗ ಶುದ್ದೀಕರಣ ಮಾಡುತ್ತದೆ ಮತ್ತು ವಿಷಕಾರಿ ಅಂಶಗಳನ್ನು ಹೊರಹಾಕುತ್ತದೆ.

ಪಪ್ಪಾಯದ ಹಲವಾರು ರೀತಿಯ ಲಾಭಗಳನ್ನು ನಾವೀಗ ತಿಳಿದುಕೊಂಡಿದ್ದೇವೆ ಮತ್ತು ಇದು ಋತುಚಕ್ರ ಉಂಟುಮಾಡುತ್ತದೆಯಾ ಎಂದು ತಿಳಿಯಬೇಕು. ಪಪ್ಪಾಯ ಋತುಚಕ್ರ ನಿಯಮಿತವಾಗಿ ಆಗುವಂತೆ ನೆರವಾಗುತ್ತದೆ. ಹಸಿ ಪಪ್ಪಾಯದಲ್ಲಿ ಹೆಚ್ಚಿನ ಉಷ್ಣತೆಯಿದ್ದು, ಇದು ದೇಹದಲ್ಲಿ ಇಸ್ಟ್ರೇಜನ್ ಉತ್ಪಾದಿಸುತ್ತದೆ ಮತ್ತು ಇದರ ಪರಿಣಾಮ ಋತುಚಕ್ರವನ್ನು ಸಾಮಾನ್ಯವಾಗಿಸುತ್ತದೆ.

ಹಸಿ ಪಪ್ಪಾಯ ಋತುಚಕ್ರದ ವೇಳೆ ರಕ್ತದ ಹರಿವು ಹೆಚ್ಚಿಸುತ್ತದೆ. ಇದು ಗರ್ಭಾಶಯದ ಸ್ನಾಯುಗಳು ಸರಿಯಾಗಿ ಕಾರ್ಯನಿರ್ವಹಿಸುವಂತೆ ಮಾಡುತ್ತದೆ. ಇದರಿಂದ ನೈಸರ್ಗಿಕವಾಗಿ ಋತುಚಕ್ರವಾಗುವಂತೆ ಮಾಡುತ್ತದೆ.

ಋತುಚಕ್ರದ ಸಮಯದಲ್ಲಿ ರಾಷಸ್ ತಡೆಯುವ 5 ಟಿಪ್ಸ್

ಆದಾಗ್ಯೂ ಹಸಿ ಪಪ್ಪಾಯ ಋತುಚಕ್ರ ನಿಯಮಿತವಾಗಿ ಆಗುವಂತೆ ಮಾಡುತ್ತದೆ. ಆದರೆ ಹಣ್ಣು ಪಪ್ಪಾಯವಲ್ಲ ಎನ್ನುವುದು ನೆನಪಿರಲಿ. ಹಸಿ ಪಪ್ಪಾಯ ತಿನ್ನಲು ಹಲವಾರು ವಿಧಾನಗಳಿವೆ. ಆದರೆ ಇದನ್ನು ಸಲಾಡ್ ರೂಪದಲ್ಲಿ ತಿನ್ನಬೇಕು. ಋತುಚಕ್ರವಾಗಲು ಹಸಿರು ಪಪ್ಪಾಯ ಪ್ರಯತ್ನಿಸಿ.

English summary

Missed Menstruation: Can Papaya Really Induce A Period?

Missed menstruation can cause panic and unwanted stress. An age old custom to induce a period is by consuming copious amounts of papaya. So, is this just some myth or does this have any substance to it, we examine this closely.
X
Desktop Bottom Promotion