For Quick Alerts
ALLOW NOTIFICATIONS  
For Daily Alerts

ಋತುಚಕ್ರದ ಅವಧಿಯಲ್ಲಿ ಸೇವಿಸಬೇಕಾದ ಆಹಾರಗಳು

|

ದೀರ್ಘಕಾಲಕ್ಕೆ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ನೀವು ಋತುಚಕ್ರಕ್ಕಾಗಿ ಆರೋಗ್ಯಕರ ಆಹಾರ ತಿನ್ನುವುದು ತುಂಬಾ ಮುಖ್ಯ. ಋತುಚಕ್ರದ ಆಹಾರ ಕ್ರಮದಿಂದಾಗಿ ನಿಮ್ಮ ಶಕ್ತಿ ಹೆಚ್ಚಾಗಿ, ನಿಮ್ಮ ಅಂಗಾಂಗಗಳು ನಯವಾಗಿ ಕೆಲಸ ಮಾಡಲು ಮತ್ತು ನೀವು ಅನುಭವಿಸುವ ನೋವು ಕಡಿಮೆ ಮಾಡಲು ನೆರವಾಗಲಿದೆ.

ಋತುಚಕ್ರ ಅಥವಾ ಅವಧಿ ನೀವು ತುಂಬಾ ಕೆರಳುವ, ದಣಿಯುವ ಮತ್ತು ಸಂಪೂರ್ಣವಾಗಿ ಹತಾಶೆಗೊಳಗಾಗುವ ತಿಂಗಳ ಅವಧಿ. ಕೆಲವು ಮಂದಿ ಅನುಭವಿಸುವ ಖಿನ್ನತೆ, ನೋವು, ಸಿಟ್ಟು ಹಾಗೂ ಆತಂಕಕ್ಕೆ ಕಾರಣವಾಗಬಹುದು.

ನಿಮ್ಮ ಋತುಚಕ್ರದ ವೇಳೆ ಶಕ್ತಿ ಪಡೆಯಲು ನೆರವಾಗುವಂತಹ ಋತುಚಕ್ರದ ಆಹಾರ ಕ್ರಮಗಳ ಬಗ್ಗೆ ಇಲ್ಲಿ ಬೋಲ್ಡ್ ಸ್ಕೈ ನಿಮಗಾಗಿ ನೀಡುತ್ತಿದೆ:

Menstruation Diet for women

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಮುಟ್ಟಿನಲ್ಲಿ ಅತಿಯಾಗಿ ರಕ್ತಸ್ರಾವವಾಗುತ್ತಿದೆಯೇ?
ಡಾರ್ಕ್ ಚಾಕಲೇಟ್:
ನಿಮ್ಮ ಆಹಾರ ಕ್ರಮದಲ್ಲಿ ಡಾರ್ಕ್ ಚಾಕಲೇಟ್ ಸೇರಿಸಲು ಇದು ಒಳ್ಳೆಯ ಸಮಯ. ಆ್ಯಂಟಿಆಕ್ಸಿಡೆಂಟ್‌ಗಳನ್ನು ಹೊಂದಿರುವ ಡಾರ್ಕ್ ಚಾಕಲೇಟ್ ಸೆರೊಟೋನಿನ್ ಹೆಚ್ಚಿಸಿ ನಿಮ್ಮ ಮನಸ್ಥಿತಿ ಉತ್ತಮಪಡಿಸುತ್ತದೆ. ಋತುಚಕ್ರದ ಆಹಾರಕ್ರಮದಲ್ಲಿ ಡಾರ್ಕ್ ಚಾಕಲೇಟ್ ನ್ನು ಕಡ್ಡಾಯವಾಗಿ ಸೇರಿಸಿಕೊಳ್ಳಿ.

ವಿಟಮಿನ್ ಇರುವ ಮೊಟ್ಟೆ:
ಋತುಚಕ್ರದ ಆಹಾರಕ್ರಮದಲ್ಲಿ ವಿಟಮಿನ್ ಸೇರಿಸುವುದು ತುಂಬಾ ಮುಖ್ಯ. ವಿಟಮಿನ್ ಇ ನಿಮ್ಮ ಪಿಎಂಎಸ್ ಲಕ್ಷಣದಿಂದ ದೂರ ಮಾಡಲಿದೆ. ವಿಟಮಿನ್ ಇ ಪಡೆಯಲು ಬೆಣ್ಣೆಹಣ್ಣು ಮತ್ತು ಮೊಟ್ಟೆಯ ಹಳದಿ ಭಾಗ ತಿನ್ನಿ. ವಿಟಮಿನ್ ಬಿ6 ಹೊಟ್ಟೆ ಉಬ್ಬರ ನಿವಾರಿಸಲು ನೆರವಾಗುತ್ತದೆ. ವಿಟಮಿನ್ ಸಿ ನಿಮ್ಮ ಸಂತಾನೋತ್ಪತ್ತಿ ವ್ಯವಸ್ಥೆಯ ಆರೋಗ್ಯವನ್ನು ಸುಧಾರಿಸುತ್ತದೆ. ವಿಟಮಿನ್ ಸಿ ಪಡೆಯಲು ದ್ರಾಕ್ಷಿ ಮತ್ತು ನಿಂಬೆಯನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿ. ವಿಟಮಿನ್ ಬಿ6 ಪಡೆಯಲು ಆಹಾರಕ್ರಮದಲ್ಲಿ ಬಟಾಟೆಗಳನ್ನು ಆಹಾರಕ್ರಮದಲ್ಲಿ ಸೇರಿಸಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ತಿಂಗಳ ಮುಟ್ಟಿನ ತಡವಾಗುವಿಕೆಗಾಗಿ ಮನೆಮದ್ದುಗಳು

ಕೆಫಿನ್ ಕಡೆಗಣಿಸಿ:
ಋತುಚಕ್ರದ ಅವಧಿಯಲ್ಲಿ ನೀವು ಕೆಫಿನ್ ಯುಕ್ತ ಆಹಾರವನ್ನು ಸಾಧ್ಯವಾದಷ್ಟು ಮಟ್ಟಿಗೆ ಕಡೆಗಣಿಸಬೇಕು. ಕೆಫಿನ್ ಸೇವನೆ ಮಾಡಿದರೆ ಆಗ ಹೊಟ್ಟೆಯ ಆಮ್ಲಗಳು ಹೆಚ್ಚಾಗಿ ಅದು ನೋವು ಹೆಚ್ಚಿಸಬಹುದು. ಕೆಫಿನ್ ಸೇವಿಸಬೇಕೆಂದು ನಿಮಗೆ ಭಾವನೆಯಾಗುತ್ತಿದ್ದರೆ ಆಗ ನೀವು ಕಾಫಿ ಬದಲಿಗೆ ಟೀ ಸೇವನೆ ಮಾಡಿ. ಟೀ ಯಾವುದೇ ಸಮಯದಲ್ಲೂ ಒಳ್ಳೆಯದು ಮತ್ತು ಕೆಫಿನ್ ಸೇವನೆಯ ಕಡುಬಯಕೆಗೆ ಇದು ಬದಲಿಯಾಗಲಿದೆ.

ಹಸಿರೆಲೆ ತರಕಾರಿಗಳು:
ಋತುಚಕ್ರದ ಸಮಯದಲ್ಲಿ ನೀವು ಹೆಚ್ಚಾಗಿ ರಕ್ತ ಕಳಕೊಳ್ಳುತ್ತೀರಿ. ಇದನ್ನು ನಿಮ್ಮ ದೇಹದಲ್ಲಿ ಮರಳಿ ಪಡೆಯಲು ಕಬ್ಬಿನಾಂಶದಿಂದ ಸಮೃದ್ಧವಾಗಿರುವ ಆಹಾರವನ್ನು ಸೇವಿಸಬೇಕು. ಕಬ್ಬಿನಾಂಶದಿಂದ ಸಮೃದ್ಧವಾಗಿರುವ ಆಹಾರದಿಂದ ನೀವು ರಕ್ತಹೀನತೆ ವಿರುದ್ಧ ಹೋರಾಡಬಹುದು ಮತ್ತು ನಷ್ಟವಾದ ಹಿಮೋಗ್ಲೊಬಿನ್ ಸರಿದೂಗಿಸಬಹುದು. ಇದರಿಂದ ನೀವು ನಿತ್ರಾಣ ಮತ್ತು ಖಿನ್ನತೆಗೊಳಗಾಗುವುದು ತಪ್ಪುತ್ತದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ನಿದ್ರೆಯ ಕೊರತೆಯೇ? ಕಾರಣಗಳನ್ನು ತಿಳಿದುಕೊಳ್ಳಿ

ಏಕದಳ ಧಾನ್ಯಗಳು:
ಧಾನ್ಯಗಳು, ಹಣ್ಣುಗಳು ಮತ್ತು ತರಕಾರಿಗಳನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಂಡರೆ ನಿಮಗೆ ಬೇಕಾಗಿರುವ ಎಲ್ಲಾ ಪೋಷಕಾಂಶಗಳು ಸಿಗುತ್ತದೆ. ಸಮತೋಲಿತ ಆಹಾರಕ್ರಮ ಪಾಲಿಸಿ. ನಿಮ್ಮ ಆಹಾರಕ್ರಮದಲ್ಲಿ ಆದಷ್ಟು ಮಟ್ಟಿಗೆ ನೀರನ್ನು ಸೇರಿಸಿ.

English summary

Menstruation Diet for women

periods are that time of the month where you are at your irritable, tired and absolutely frustrated. Some of you may even experience some depression pangs leading to anger and anxiety.
Story first published: Saturday, March 15, 2014, 11:01 [IST]
X
Desktop Bottom Promotion