For Quick Alerts
ALLOW NOTIFICATIONS  
For Daily Alerts

ಮನೆಮದ್ದುಗಳು ಮಾಡಬಹುದಾದ ಜಾದೂ

By Arpitha Rao
|

ದಿನನಿತ್ಯದ ಜಂಜಾಟದಲ್ಲಿ ಕೆಲವೊಂದು ಸಣ್ಣ ಪುಟ್ಟ ಅರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.ಆದರೆ ಇದು ಕೂಡ ಸರಿಯಾಗಿ ಕಾಳಜಿ ವಹಿಸದಿದ್ದರೆ ಕಿರಿಕಿರಿ ನೀಡುತ್ತದೆ.ಪ್ರತಿದಿನ ಮಾತ್ರೆ ತೆಗೆದುಕೊಳ್ಳುವುದು ಅಡ್ಡ ಪರಿಣಾಮ ನೀಡಬಹುದು.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ವಸಂತ ಮಾಸದಲ್ಲಿ ಈ 11 ಆಹಾರಗಳನ್ನು ಮಿಸ್ ಮಾಡಬೇಡಿ

ನಿದ್ದೆ ಬರದಿರುವುದು,ತಲೆನೋವು ಇವುಗಳೆಲ್ಲ ಆಗಾಗ ಕಾಣಿಸಿಕೊಳ್ಳುವ ಸಾಮಾನ್ಯ ಸಮಸ್ಯೆಗಳು.ಇವುಗಳ ಪರಿಹಾರಕ್ಕೆ ವೈದ್ಯರ ಮೊರೆಹೋಗಿ ಹಣ ವ್ಯಯಿಸುವ ಮೊದಲು ಮನೆಯಲ್ಲೇ ನಮ್ಮ ಕೈಗೆಟಕುವ ಕೆಲವು ಪದಾರ್ಥಗಳಿಂದ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು.

ಮಾತ್ರೆಗಳು ಮತ್ತಿತರ ವೈದ್ಯಕೀಯ ಔಷಧಿಗಳು ಬರುವ ಮೊದಲೇ ಪ್ರಾಕೃತಿಕವಾಗಿ ಸಾಕಷ್ಟು ಔಷದಿಗಳು ನಮಗೆ ದೊರೆಯುತ್ತಿತ್ತು.ಸಾಮಾನ್ಯವಾಗಿ ದಿನನಿತ್ಯದ ದಿನಗಳಲ್ಲಿ ಕಾಣಿಸಿಕೊಳ್ಳುವ ಸಮಸ್ಯೆಗಳಿಗೆ ಕೆಲವು ಮನೆಮದ್ದುಗಳ ಸಲಹೆಗಳು ಇಲ್ಲಿವೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ನ್ಯುಮೊನಿಯಕ್ಕೆ 15 ಮನೆಮದ್ದುಗಳು

ನಿದ್ರಾಹೀನತೆ:

ನಿದ್ರಾಹೀನತೆ:

ನಿಮ್ಮ ಮನೆಯಲ್ಲಿ ಥಂಡೈ ಮಿಶ್ರಣವಿದೆಯೇ?(ಇದೊಂದು ರೀತಿಯ ಪಾನೀಯ ತಯಾರಿಸುವ ಪುಡಿಗಳ ಮಿಶ್ರಣ). ಇಲ್ಲದಿದ್ದರೆ ಹೀಗೆ ಮಾಡಿ ಹತ್ತು ಬಾದಾಮಿಯನ್ನು ತೆಗೆದುಕೊಳ್ಳಿ ಅದನ್ನು ಪುಡಿ ಮಾಡಿ ಹಾಲಿಗೆ ಹಾಕಿಕೊಂಡು ಬಿಸಿ ಇರುವಾಗ, ಮಲಗುವ ಮೊದಲು ಕುಡಿಯಿರಿ.ಕೇವಲ ಬಿಸಿ ಹಾಲನ್ನು ಕುಡಿಯುವುದರಿಂದ ಕೂಡ ಚೆನ್ನಾಗಿ ನಿದ್ದೆ ಬರುತ್ತದೆ ಎನ್ನಲಾಗುತ್ತದೆ.ಮಲಗುವ ಮೊದಲು ಪಾದಗಳಿಗೆ ಶುದ್ಧ ದೇಸಿ ಹಸುವಿನ ತುಪ್ಪ ಹಚ್ಚಿಕೊಂಡು ಮಲಗುವುದರಿಂದ ಕೂಡ ನಿದ್ದೆ ಬರುತ್ತದೆ.ಅಥವಾ ತೆಂಗಿನ ಎಣ್ಣೆಯನ್ನು ನೀರಿನೊಂದಿಗೆ ಮಿಶ್ರ ಮಾಡಿ ಅದನ್ನು ತಲೆ,ಕಾಲಿನ ಪಾದಗಳಿಗೆ ಹಚ್ಚಿ ಮಲಗಿ ಇದರಿಂದ ಚೆನ್ನಾಗಿ ನಿದ್ದೆ ಬರುತ್ತದೆ.

ಸೆಳೆತ:

ಸೆಳೆತ:

ಪ್ರತಿದಿನ ಸಾಸಿವೆ ಎಣ್ಣೆಯಿಂದ ಬೆಳಿಗ್ಗೆ ಇಡೀ ದೇಹಕ್ಕೆ ಮಸಾಜ್ ಮಾಡಿ.ಕೈಯಲ್ಲಿ ಸಾಸಿವೆ ಎಣ್ಣೆಯನ್ನು ಹಾಕಿ ದೇಹಕ್ಕೆ ನಿಧಾನವಾಗಿ ಮಸಾಜ್ ಮಾಡಿ.ನಂತರ ಸ್ನಾನ ಮಾಡಿ.ಇದು ಚಳಿಗಾಲದಲ್ಲಿ ಹೆಚ್ಚು ಸಹಾಯಕವಾಗುತ್ತದೆ.ನೀರಿನೊಂದಿಗೆ ಸಾಸಿವೆ ಪುಡಿಯನ್ನು ಮಿಶ್ರಮಾಡಿ ಪೇಸ್ಟ್ ತಯಾರಿಸಿಕೊಂಡು ಅದನ್ನು ಕಾಲಿನ ಪಾದಗಳಿಗೆ ಹಚ್ಚಿ ನಂತರ ಸ್ನಾನ ಮಾಡಬಹುದು ಇದರಿಂದ ಕೂಡ ದೇಹದ ಸೆಳೆತ ಕಡಿಮೆಯಾಗುತ್ತದೆ.

ಸನ್ ಸ್ಟ್ರೋಕ್ :

ಸನ್ ಸ್ಟ್ರೋಕ್ :

ಸನ್ ಸ್ಟ್ರೋಕ್ ಹೋಗಲಾಡಿಸಲು ಮುಖ್ಯ ಮನೆ ಮದ್ದೆಂದರೆ ಮಾವಿನ ಕಾಯಿಯನ್ನು ಉಪ್ಪು ಮತ್ತು ಸಕ್ಕರೆ ಜೊತೆ ಬಳಸುವುದು. ದಿನದಲ್ಲಿ ಎರಡು ಅಥವಾ ಮೂರು ಬಾರಿ ಇದನ್ನು ಬಳಸಿ.ನಿಮ್ಮ ತಲೆ ಮತ್ತು ಹಣೆಗೆ ಈರುಳ್ಳಿ ಹೋಳುಗಳನ್ನು ಬಳಸುವುದರಿಂದ ಕೂಡ ದೇಹ ಬೇಗ ತಂಪಾಗುತ್ತದೆ.ಸಾಕಷ್ಟು ನೀರು ಕುಡಿಯುವುದು ಕೂಡ ಅಷ್ಟೇ ಮುಖ್ಯ.

ತಲೆ ನೋವು:

ತಲೆ ನೋವು:

ನಿಮಗೆ ದಿನನಿತ್ಯ ಮೈಗ್ರೇನ್ ಸಮಸ್ಯೆ ಕಾಣಿಸಿಕೊಂಡರೆ ೫ ಬಾದಾಮಿಯನ್ನು ಬಿಸಿ ಹಾಲಿನೊಂದಿಗೆ ಬಳಸಿ.ಕಾಳು ಮೆಣಸನ್ನು ಜೇನುತುಪ್ಪ ಅಥವಾ ಹಾಲಿನೊಂದಿಗೆ ದಿನದಲ್ಲಿ ಎರಡು ಅಥವಾ ಮೂರು ಬಾರಿ ತೆಗೆದುಕೊಳ್ಳುವುದರಿಂದ ಕೂಡ ತಲೆನೋವು ಕಡಿಮೆಯಾಗುತ್ತದೆ. ನೆನೆಸಿದ ಬಾದಾಮಿಯನ್ನು ಕಲ್ಲಿನಲ್ಲಿ ಜಜ್ಜಿ ಪೇಸ್ಟ್ ತಯಾರಿಸಿಕೊಳ್ಳಿ.ಇದನ್ನು ಹಣೆಗೆ ಹಚ್ಚುವುದರ ಮೂಲಕ ಕೂಡ ತಲೆನೋವು ನಿವಾರಿಸಿಕೊಳ್ಳಬಹುದು.ಬೇವಿನ ಪುಡಿಯನ್ನು ಹೆಣೆಗೆ ಹಚ್ಚುವುದರ ಮೂಲಕ ಕೂಡ ತಲೆನೋವು ಕಡಿಮೆಯಾಗುತ್ತದೆ.ಅಥವಾ ಕೆಲವು ಹನಿ ಯೂ ಡೆ ಕಲೋನ್ (eau-de-cologne)ಅನ್ನು ನೀರಿಗೆ ಬೆರೆಸಿ ಅದಕ್ಕೆ ಹತ್ತಿ ಬಟ್ಟೆ ಅದ್ದಿ ಅದನ್ನು ತಲೆಗೆ ಹಚ್ಚುವುದು ಕೂಡ ಅತ್ಯಂತ ಪರಿಣಾಮಕಾರಿ ಔಷಧಿ ಎನ್ನಬಹುದು.

ಬೆನ್ನು ನೋವು:

ಬೆನ್ನು ನೋವು:

ನಿಮಗೆ ಹೆಚ್ಚು ಬೆನ್ನು ನೋವು ಬಂದರೆ ನೀವು ಬಿಸಿಯಾದ ಆಹಾರವನ್ನು ಸೇವಿಸಿ ಮತ್ತು ಬೆಚ್ಚಗಿನ ವಾತಾವರಣದಲ್ಲಿರಿ.ಬೆಳ್ಳುಳ್ಳಿಯನ್ನು ನಿಮ್ಮ ಆಹಾರದಲ್ಲಿ ಹೆಚ್ಚು ಬಳಸಿ.ನೀಲಗಿರಿ ಎಣ್ಣೆಯನ್ನು ಬಲಸಿ ಮಸಾಜ್ ಮಾಡುವುದರಿಂದ ಕೂಡ ನೋವು ಕಡಿಮೆಯಾಗುತ್ತದೆ.ಸಾಸಿವೆ ಎಣ್ಣೆಯನ್ನು ಸೋಂಪು ಬೀಜದೊಂದಿಗೆ ಕುದಿಸಿ ಇದನ್ನು ಕೂಡ ಹಚ್ಚಬಹುದು.ಐದು ಕಾಳು ಮೆಣಸು,ಐದು ಲವಂಗ ಮತ್ತು ಶುಂಟಿಯನ್ನು ಬಳಸಿದ ಟೀಯನ್ನು ದಿನದಲ್ಲಿ ಎರಡು ಬಾರಿ ಕುಡಿಯುವುದರಿಂದ ಕೂಡ ಬೆನ್ನು ನೋವು ಕಡಿಮೆಯಾವುತ್ತದೆ.

ಅಸ್ತಮಾ:

ಅಸ್ತಮಾ:

ನಿಮ್ಮ ಆಹಾರದಲ್ಲಿ ತಂಪು ಮತ್ತು ಹುಳಿಯನ್ನು ಕಡಿಮೆ ಪ್ರಮಾಣದಲ್ಲಿ ಬಳಸಿ.ಒಂದು ಲೋಟ ನೀರಿನಲ್ಲಿ ಒಂದು ಚಮಚ ಅಜವಾನವನ್ನು ಕುದಿಸಿ.ಇದಕ್ಕೆ ಒಂದು ಚಿಟಕಿ ಉಪ್ಪು ಬಳಸಿ ದಿನದಲ್ಲಿ ಒಮ್ಮೆಯಾದರೂ ತೆಗೆದುಕೊಳ್ಳಿ ಇದರಿಂದ ಅಸ್ತಮಾ ಬೇಗ ಗುಣವಾಗುತ್ತದೆ.

ಮೂಗಿನಲ್ಲಿ ರಕ್ತ ಬರುವುದು:

ಮೂಗಿನಲ್ಲಿ ರಕ್ತ ಬರುವುದು:

ಈ ಸಮಸ್ಯೆ ಅತಿಯಾಗಿ ಕಂಡು ಬಂದಲ್ಲಿ ದಿನನಿತ್ಯ ಗುಲ್ಕಂದವನ್ನು ತೆಗೆದುಕೊಳ್ಳಬೇಕು. ಅಥವಾ ನೆಲ್ಲಿಕಾಯಿಯಿಂದ ಮುರಬ್ಬಾ ಮಾಡಿಕೊಳ್ಳಿ ಪ್ರತಿದಿನ ಬೆಳಿಗ್ಗೆ ಇದನ್ನು ತಿನ್ನಿ.ಮೂಗಿನಲ್ಲಿ ರಕ್ತ ಬರುವುದನ್ನು ತಕ್ಷಣ ನಿಲ್ಲಿಸಲು ಐಸ್ ನೀರಿನ ಬ್ಯಾಂಡೇಜ್ ಮಾಡಿ ಹಣೆಗೆ ಮತ್ತು ಮೂಗಿಗೆ ಒತ್ತಿ ಹಿಡಿಯಿರಿ.

English summary

Magic remedies at your fingertips

Much before the existence of pills and the modern antibiotics, Mother Nature offered a bountiful home remedies to cure all ills. Some home remedies to take care of your regular aches and pains
Story first published: Saturday, March 1, 2014, 11:41 [IST]
X
Desktop Bottom Promotion