For Quick Alerts
ALLOW NOTIFICATIONS  
For Daily Alerts

ಗ್ರೀನ್ ಟೀ ಹೊಟ್ಟೆಯ ಸಮಸ್ಯೆಗಳಿಗೆ ಉತ್ತಮವೇ?

|

ಗ್ರೀನ್ ಟೀ ಮಾರುಕಟ್ಟೆಗಳಲ್ಲಿ ಇತರ ಟೀ ಗಳಿಗಿಂತ ಜನಪ್ರಿಯವಾದುದು. ಹಲವಾರು ಕಾರಣಗಳಿಗಾಗಿ ವಿಶ್ವದ ಹೆಚ್ಚಿನ ಜನರು ಈ ಚಹಾವನ್ನು ದಿನವೂ ಸೇವಿಸುತ್ತಾರೆ. ಬ್ಲಾಕ್ ಟೀ ಮತ್ತು ಹಾಲಿನ ಟೀ ಕೂಡ ಗ್ರೀನ್ ಟೀ ಯಿಂದಾಗಿ ಮೂಲೆಗುಂಪಾಗಿದೆ ಎಂಬುದು ನಂಬುವ ವಿಷಯವಾಗಿದೆ. ಅಷ್ಟು ಜನಪ್ರಿಯತೆ ಮೆಚ್ಚುಗೆ ಈ ಗ್ರೀನ್ ಟೀ ಗೆ ಇದೆ. ನಿತ್ಯವೂ ಗ್ರೀನ್ ಟೀ ಯನ್ನು ಸೇವಿಸುವವರು ಇತರರಿಗಿಂತ ಆರೋಗ್ಯವಂತರು ಮತ್ತು ಉತ್ಸಾಹಿತರಾಗಿರುತ್ತಾರೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ದೇಹಕ್ಕೆ ಚೈತನ್ಯ ತುಂಬುತ್ತೆ ಗ್ರೀನ್ ಟೀ

ಸಂಶೋಧನೆಗಳ ಪ್ರಕಾರ ಗ್ರೀನ್ ಟೀ ನಿಮ್ಮ ತೂಕವನ್ನು ಇಳಿಸುವಲ್ಲಿ ಸಹಕಾರಿ, ಕ್ಯಾನ್ಸರ್ ರೋಗವನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಮತ್ತು ದೇಹದ ನಿರೋಧಕ ವ್ಯವಸ್ಥೆಯನ್ನು ಸುದೃಢಗೊಳಿಸುತ್ತದೆ ಎಂಬುದು ಸಾಬೀತಾಗಿದೆ. ಇಂದು ಬೋಲ್ಡ್ ಸ್ಕೈ ನಿಮ್ಮೊಂದಿಗೆ ಗ್ರೀನ್ ಟೀ ಹೊಟ್ಟೆಯ ಸಮಸ್ಯೆಯನ್ನು ಹೋಗಲಾಡಿಸುವಲ್ಲಿ ಹೇಗೆ ಪರಿಣಾಮಕಾರಿಯಾಗಿದೆ ಎಂಬುದನ್ನು ಕುರಿತು ಚರ್ಚಿಸಲಿದೆ. ನೀವು ಯಾವುದೇ ವಿಧಧ ಹೊಟ್ಟೆಯ ತೊಂದರೆಗಳಿಂದ ಬಳಲುತ್ತಿದ್ದೀರಿ ಎಂದರೆ ಗ್ರೀನ್ ಟೀ ನಿಮಗೆ ತ್ವರಿತ ಉಪಶಮನವನ್ನು ನೀಡುತ್ತದೆ.

ಗ್ರೀನ್ ಟೀಯು ನಿಮ್ಮ ಕರುಳಿನಲ್ಲಿರುವ ಕೆಟ್ಟ ಬ್ಯಾಕ್ಟೀರಿಯಾಗಳನ್ನು ಕೊಂದು ಸೋಂಕುಗಳ ವಿರುದ್ಧ ಹೋರಾಡುವ ಒಳ್ಳೆಯ ಬ್ಯಾಕ್ಟೀರಿಯಾಗಳನ್ನು ಅದರ ಬದಲಿಗೆ ಸ್ಥಾನಾಂತರಿಸುತ್ತದೆ. ನಿತ್ಯವೂ 2 ಲೋಟಗಳಷ್ಟು ಗ್ರೀನ್ ಟೀಯನ್ನು ಸೇವಿಸುವುದು ಪರಿಣಾಮಕಾರಿ ಚಿಕಿತ್ಸೆಯಾಗಿದೆ. ನೀರಿನೊಂದಿಗೆ ಜೇನು ಬೆರೆಸಿ ಖಾಲಿ ಹೊಟ್ಟೆಯಲ್ಲಿ ಬೆಳಗ್ಗೆ ಸೇವಿಸುವುದು ಮತ್ತು ಸಂಜೆಯ ಸಮಯದಲ್ಲಿ ಅಂದರೆ ಊಟದ ನಂತರ ಸೇವಿಸುವುದು ಒಳ್ಳೆಯದು.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಅದ್ಭುತ ಗುಣದ ಈ 12 ಬಗೆಯ ಟೀ ಟೇಸ್ಟ್ ಮಾಡಿರುವಿರಾ?

ಗ್ರೀನ್ ಟೀ ಹೊಟ್ಟೆಯ ಸಮಸ್ಯೆಯನ್ನು ಹೇಗೆ ನೀಗಿಸುತ್ತದೆ ಎಂಬುದನ್ನು ತಿಳಿಯಲು ಮುಂದೆ ಓದಿ:

1.ಹೊಟ್ಟೆ ನೋವಿಗಾಗಿ ಗ್ರೀನ್ ಟೀ

1.ಹೊಟ್ಟೆ ನೋವಿಗಾಗಿ ಗ್ರೀನ್ ಟೀ

ಹಾಲಿನ ಚಹಾದ ಬದಲಿಗೆ ಗ್ರೀನ್ ಟೀಯನ್ನು ಸೇವಿಸುವುದು ಹೊಟ್ಟೆ ನೋವನ್ನು ಹೋಗಲಾಡಿಸುತ್ತದೆ. ಗ್ರೀನ್ ಟೀಯೊಂದಿಗೆ ಸಣ್ಣ ತುಂಡು ಶುಂಠಿಯನ್ನು ಬೆರೆಸಿ ಸೇವಿಸುವುದು ಆರೋಗ್ಯಕ್ಕೆ ಉತ್ತಮ.

2.ಹೊಟ್ಟೆಯ ಅಲ್ಸರ್‌ಗಾಗಿ ಗ್ರೀನ್ ಟೀ

2.ಹೊಟ್ಟೆಯ ಅಲ್ಸರ್‌ಗಾಗಿ ಗ್ರೀನ್ ಟೀ

ಹೊಟ್ಟೆಯ ಅಲ್ಸರ್‌ನಿಂದ ಬಳಲುತ್ತಿರುವ ಹೆಚ್ಚಿನ ಜನರು ಗ್ರೀನ್ ಚಹಾವನ್ನು ತಮ್ಮ ಆಯ್ಕೆಯನ್ನಾಗಿಸಿಕೊಂಡಿದ್ದಾರೆ. ತಂಪಾದ ಗ್ರೀನ್ ಟೀಯಲ್ಲಿ ಉತ್ಕರ್ಷಣ ನಿರೋಧಿ ಅಂಶಗಳಿರುವುದರಿಂದ ಹೊಟ್ಟೆಯ ಅಲ್ಸರ್ ಅನ್ನು ಇದು ದೂರಮಾಡುತ್ತದೆ.

3.ಹೊಟ್ಟೆಯ ಅಸಮಾಧಾನಕ್ಕಾಗಿ ಗ್ರೀನ್ ಟೀ

3.ಹೊಟ್ಟೆಯ ಅಸಮಾಧಾನಕ್ಕಾಗಿ ಗ್ರೀನ್ ಟೀ

ಹೊಟ್ಟೆಯ ಅಸಮಾಧಾನವನ್ನು ಕ್ಷಣ ಮಾತ್ರದಲ್ಲಿ ನೀಗಿಸುವ ಶಕ್ತಿ ಗ್ರೀನ್ ಟೀಗಿದೆ. ಜೇನು ಅಥವಾ ದಾಲ್ಚಿನ್ನಿ ಬೆರೆತ ಗ್ರೀನ್ ಟೀಯ ಸೇವನೆ ನಿಮ್ಮ ಹೊಟ್ಟೆಯ ಅಸಮಾಧಾನವನ್ನು ನೀಗಿಸಿ ಸ್ವಾಸ್ಥ್ಯವಾಗಿಡುತ್ತದೆ.

4.ಹೊಟ್ಟೆಯ ಫ್ಲುಗಾಗಿ

4.ಹೊಟ್ಟೆಯ ಫ್ಲುಗಾಗಿ

ಇತರ ಟೀ ಗಳಿಗಿಂತ ಹೆಚ್ಚಾಗಿ ಜೈವಿಕ ಆಹಾರಗಳು ಗ್ರೀನ್ ಟೀಯಲ್ಲಿ ಇರುವುದರಿಂದ ಗ್ರೀನ್ ಟೀ ಉದರದ ಯಾವುದೇ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ಹೊಟ್ಟೆಯ ಫ್ಲು ನಿಮ್ಮನ್ನು ಕಂಗೆಡಿಸಿದ್ದರೆ, ಬಿಸಿಯಾದ ಗ್ರೀನ್ ಟೀಯನ್ನು ಹೀರುವುದು ಫ್ಲುವನ್ನುಂಟು ಮಾಡುವ ಕೆಟ್ಟ ಬ್ಯಾಕ್ಟಿರೀಯಾವನ್ನು ಕೊಂದು ಫ್ಲುವನ್ನು ನೀಗಿಸುತ್ತದೆ.

5.ಹೊಟ್ಟೆಯ ಉರಿಗಾಗಿ ಗ್ರೀನ್ ಟೀ

5.ಹೊಟ್ಟೆಯ ಉರಿಗಾಗಿ ಗ್ರೀನ್ ಟೀ

ಹೊಟ್ಟೆಯ ಉರಿಯನ್ನು ಶಮನ ಮಾಡುವಲ್ಲಿ ಗ್ರೀನ್ ಟೀ ಒಂದು ಉತ್ತಮ ಔಷಧವಾಗಿದೆ. ಎರಡು ಟೇಬಲ್ ಸ್ಫೂನ್ ಮಿಂಟ್‌ನೊಂದಿಗೆ ಒಂದು ಕಪ್ ಗ್ರೀನ್ ಟೀಯನ್ನು ಸೇವಿಸುವುದು ಹೊಟ್ಟೆಯ ಉರಿಯನ್ನು ನೀಗಿಸುತ್ತದೆ.

6.ಹೊಟ್ಟೆಯ ಸೆಳೆತಕ್ಕಾಗಿ

6.ಹೊಟ್ಟೆಯ ಸೆಳೆತಕ್ಕಾಗಿ

ನಿಮ್ಮ ತಿಂಗಳ ಮುಟ್ಟಿನ ಸೆಳೆತವನ್ನು ದೂರಮಾಡುವಲ್ಲಿ ರಾಮಬಾಣವಾಗಿದೆ ಗ್ರೀನ್ ಟೀ. ಕರುಳನ್ನು ಸ್ವಚ್ಛ ಮಾಡುವ ಉತ್ಕರ್ಷಣ ನಿರೋಧಿ ಅಂಶಗಳು ಗ್ರೀನ್ ಟೀಯಲ್ಲಿದ್ದು ಇದು ನೋವನ್ನು ಪರಿಹರಿಸುತ್ತದೆ.

7.ಹೊಟ್ಟೆ ಊದುವಿಕೆಗೆ ಗ್ರೀನ್ ಟೀ ಸಹಕಾರಿ

7.ಹೊಟ್ಟೆ ಊದುವಿಕೆಗೆ ಗ್ರೀನ್ ಟೀ ಸಹಕಾರಿ

ಪುದೀನಾದೊಂದಿಗೆ ಗ್ರೀನ್ ಟೀಯನ್ನು ಸೇವಿಸುವುದು ಹೊಟ್ಟೆಯ ಊದುವಿಕೆಯನ್ನು ನೀಗಿಸುತ್ತದೆ. ಖಾಲಿ ಹೊಟ್ಟೆಯಲ್ಲಿ ಬೆಳಗ್ಗೆ ಎದ್ದೊಡನೆ ಗ್ರೀನ್ ಟೀ ಯನ್ನು ಸೇವಿಸುವುದು ಗ್ಯಾಸ್ ಸಮಸ್ಯೆಯನ್ನು ಹೋಗಲಾಡಿಸುತ್ತದೆ.

English summary

Is Green Tea Good For Stomach Problems?

One of the best teas in the market is green tea. This special tea is the favourite of thousands of people who drink it every day for various purposes. It is believed that after green tea was introduced to many, black tea and milk tea took a backseat.
Story first published: Saturday, February 15, 2014, 12:08 [IST]
X
Desktop Bottom Promotion