For Quick Alerts
ALLOW NOTIFICATIONS  
For Daily Alerts

ನಿಯಮಿತ ಮೊಟ್ಟೆ ಸೇವನೆ ದೇಹಕ್ಕೆ ಆರೋಗ್ಯಕರವೇ?

By Super
|

ಒಂದು ವೇಳೆ ರಕ್ತದಲ್ಲಿ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಿದ್ದರೆ ವೈದ್ಯರು ಕೊಲೆಸ್ಟ್ರಾಲ್ ಹೆಚ್ಚಿಸುವ ಆಹಾರಗಳನ್ನು ಕಡಿಮೆಗೊಳಿಸಲು ಸೂಚನೆ ನೀಡುತ್ತಾರೆ. ಈ ಆಹಾರಗಳಲ್ಲಿ ಮೊಟ್ಟೆಯೂ ಒಂದು. ಈ ವಿಷಯವನ್ನು ಕಿವಿಯಿಂದ ಕಿವಿಗೆ ಹರಡಿ ಕೇಳಿದ ನಾವು ಮೊಟ್ಟೆ ತಿನಿನ್ನುವುದರಿಂದಲೇ ಕೊಲೆಸ್ಟ್ರಾಲ್ ಬರುತ್ತದೆ ಎಂಬ ನಿರ್ಣಯಕ್ಕೆ ಬಂದುಬಿಟ್ಟಿದ್ದೇವೆ.

ಸ್ವಲ್ಪ ಸ್ಥೂಲಕಾಯವಿರುವವರಂತೂ ಮೊಟ್ಟೆ ತಿನ್ನುವುದನ್ನೇ ಬಿಟ್ಟುಬಿಟ್ಟಿದ್ದಾರೆ. ಆದರೆ ಮೊಟ್ಟೆಯ ಬಗೆಗಿನ ವಾಸ್ತವಗಳನ್ನು ಅರಿತ ಬಳಿಕ ನಮ್ಮ ಪೂರ್ವಾಗ್ರಹಗಳ ನಂಬಿಕೆಗಳು ಬದಲಾಗುವುದಂತೂ ಸತ್ಯ. ಆದರೆ ನಿಜವಾಗಿಯೂ ಮೊಟ್ಟೆ ಅನಾರೋಗ್ಯಕರವೇ? ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಮೊದಲು ಮೊಟ್ಟೆಯ ಪೌಷ್ಟಿಕಾಂಶಗಳ ಬಗ್ಗೆ ತಿಳಿದುಕೊಳ್ಳುವುದು ಅಗತ್ಯ. ಮೊಟ್ಟೆಯಲ್ಲಿ ಉತ್ತಮ ಪ್ರಮಾಣದ ಸತು, ವಿಟಮಿನ್ ಎ,( ಪ್ರತಿದಿನದ ಅಗತ್ಯದ 6%), ಫೋಲೇಟ್ ವಿಟಮಿನ್ ಬಿ5 ವಿಟಮಿನ್ ಬಿ 12, ವಿಟಮಿನ್ ಬಿ2, ರಂಜಕ, ಸೆಲೆನಿಯಂ ಹಾಗೂ ಕಡಿಮೆ ಪ್ರಮಾಣದಲ್ಲಿ ವಿಟಮಿನ್ ಡಿ, ವಿಟಮಿನ್ ಇ, ವಿಟಮಿನ್ ಕೆ, ವಿಟಮಿನ್ ಬಿ6 ಇವೆ.

Is Eating Eggs Every Day Healthy?

ದೊಡ್ಡಗಾತ್ರದ ಮೊಟ್ಟೆಯಲ್ಲಿ 250 ಮಿ.ಲೀ. ಕೊಲೆಸ್ಟ್ರಾಲ್ ಇರುವುದು ನಿಜ. (ಮೀಡಿಯಂ ಅಂದರೆ ಸಾಧಾರಣ ಮೊಟ್ಟೆಯಲ್ಲಿ 186 ಮಿ.ಲೀ, ಚಿಕ್ಕ ಮೊಟ್ಟೆಯಲ್ಲಿ ಸುಮಾರು 125 ಮಿ.ಲೀ). ಆದರೆ ನಮಗೆ ಪ್ರತಿದಿನ ಸುಮಾರು ಮುನ್ನೂರೈವತ್ತು ಮಿ.ಲೀ ಕೊಲೆಸ್ಟ್ರಾಲ್ ಅಗತ್ಯವಿದೆ. ಕೊಲೆಸ್ಟ್ರಾಲ್ ಅಂದಾಕ್ಷಣ ಅದನ್ನೊಂದು ಮೃತ್ಯುವಿನ ಏಜೆಂಟನಂತೆ ಕಾಣುವುದೇ ನಮ್ಮ ದೊಡ್ಡ ತಪ್ಪು. ನಮ್ಮ ದೇಹಕ್ಕೆ ಅತ್ಯಂತ ಅಗತ್ಯವಾದ ಹಾರ್ಮೋನುಗಳಾದ ಟೆಸ್ಟೋಸ್ಟೆರೋನ್ (ಪುರುಷರಲ್ಲಿ) ಈಸ್ಟ್ರೋಜೆನ್ (ಮಹಿಳೆಯರಲ್ಲಿ) ಮತ್ತು ಕಾರ್ಟಿಸೋಲ್ (ಮೆದುಳಿನಲ್ಲಿ) ಮೊದಲಾದವು ತಯಾರಾಗಲು, ಪ್ರತಿ ಜೀವಕೋಶದ ಅಣು ರಚನೆಗೂ ಕೊಲೆಸ್ಟ್ರಾಲ್ ಬೇಕೇ ಬೇಕು. ನೀವು ಪ್ರತೀ ದಿನ ಸೇವಿಸಬಹುದಾದ 10 ಆಹಾರಗಳು

ಈ ಮುನ್ನೂರೈವತ್ತು ಮಿ.ಲೀ. ಕೊಲೆಸ್ಟ್ರಾಲ್ ನಮ್ಮ ಆಹಾರದ ಮೂಲಕ ಬರದಿದ್ದರೆ ಯಕೃತ್ತು (liver) ಅಗತ್ಯ ಪ್ರಮಾಣವನ್ನು ಉತ್ಪಾದಿಸಿಕೊಳ್ಳುವುದೂ ಒಂದು ವಿಸ್ಮಯ. ಆದರೆ ಮುನ್ನೂರೈವತ್ತು ಮಿ.ಲೀ. ಬದಲಿಗೆ ಒಂದು ಸಾವಿರ ಮಿ.ಲೀ ಕೊಲೆಸ್ಟ್ರಾಲ್ ನಮ್ಮ ಆಹಾರದ ಮೂಲಕ ಬಂದು ಗೋದಾಮಿನಲ್ಲಿಳಿದರೆ? ಆಗಲೇ ಬರುವುದು ತೊಂದರೆ. ಮುನ್ನೂರೈವತ್ತಕ್ಕೂ ಹೆಚ್ಚಿನ ಕೊಲೆಸ್ಟ್ರಾಲ್ ರಕ್ತದಲ್ಲಿ ಸೇರಿ ಎಲ್ಲಾ ತೊಂದರೆಗಳಿಗೆ ಕಾರಣವಾಗುತ್ತದೆ. ಒಂದು ವೇಳೆ ನಾವು ಮೊಟ್ಟೆಯಿಂದ ಇನ್ನೂರೈವತ್ತು ಹಾಗೂ ಇನ್ನಿತರ ಆಹಾರಗಳಿಂದ ನೂರು ಮಿ.ಲೀ ಕೊಲೆಸ್ಟ್ರಾಲ್ ಪಡೆದರೆ ಅತ್ಯಂತ ಆರೋಗ್ಯಕರ ಆಹಾರ ನಮ್ಮದಾಗುತ್ತದೆ.

ಹೃದಯದ ಬಗ್ಗೆ ಗಾಢವಾಗಿ ಸಂಶೋಧನೆ ನಡೆಸಿದ ಬಳಿಕ ಹೃದಯ ಸಂಬಂಧಿಕಾಯಿಲೆಗಳಿಗೆ ಮೊಟ್ಟೆಯ ಮೇಲೆ ಗೂಬೆ ಕೂರಿಸುವುದು ತಪ್ಪು ಎಂದು ಈಗ ಧೃಢಪಟ್ಟಿದೆ. ಒಂದು ವಾರಕ್ಕೆ ಆರದಿಂದ ಏಳು ಮೊಟ್ಟೆಗಳನ್ನು ಸೇವಿಸಿದರೆ ಯಾವುದೇ ತೊಂದರೆ ಇಲ್ಲ ಎಂದು ಈ ಸಂಶೋಧನೆಗಳ ಮೂಲಕ ತಿಳಿದುಬಂದಿದೆ. ಆ ಪ್ರಕಾರ ಪ್ರತಿದಿನ ಒಂದು ಮೊಟ್ಟೆ ಸೇವಿಸುವುದು ಆರೋಗ್ಯಕರ. ಹೃದಯ ಸಂಬಂಧಿ ತೊಂದರೆ ಇರುವವರೂ ಪ್ರತಿವಾರ ನಾಲ್ಕು ಮೊಟ್ಟೆಗಳನ್ನು ಸೇವಿಸಬಹುದು.

ಅಷ್ಟಕ್ಕೂ ಮೊಟ್ಟೆಯ ಕೊಲೆಸ್ಟ್ರಾಲ್ ಬಗ್ಗೆ ಅಪಸ್ವರವೇಕೆ? ಮೊಟ್ಟೆಯಲ್ಲಿರುವುದು ಉತ್ತಮ ಕೊಲೆಸ್ಟ್ರಾಲ್ (HDL-High density lipids) ಹೊರತು ಕೆಟ್ಟ ಕೊಲೆಸ್ಟ್ರಾಲ್ (LDL-Lod density lipids) ಅಲ್ಲ. ಮೊಟ್ಟೆಯ ಮೇಲೆ ಇರುವ ಒಂದೇ ಅಪವಾದವೆಂದರೆ ಇದು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆಗೊಳಿಸುವುದಿಲ್ಲ. ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಗೊಳಿಸಲು ಮೊಟ್ಟೆಯ ಹಳದಿ ಭಾಗವನ್ನು ಬಿಟ್ಟು ಬಿಳಿಯ ಭಾಗವನ್ನು ಮಾತ್ರ ಸೇವಿಸುವುದು ಉತ್ತಮವಾದರೂ ಹಳದಿ ಭಾಗದಲ್ಲಿರುವ ಕೆಲವು ಪೌಷ್ಟಿಕಾಂಶಗಳು ನಮಗೆ ಸಿಗದೇ ಹೋಗುತ್ತವೆ.

ಆದುದರಿಂದ ಹೆಚ್ಚಿನ ಹೃದಯಸಂಬಂಧಿ ತೊಂದರೆ ಇಲ್ಲದಿದ್ದರೆ ಮೊಟ್ಟೆಯ ಇಡಿಯ ದ್ರವಪದಾರ್ಥ ಆರೋಗ್ಯಕ್ಕೆ ಒಳ್ಳೆಯದು. ಮೊಟ್ಟೆಯನ್ನು ಕೆಲವರು ಹಸಿಯಾಗಿ ತಿನ್ನುತ್ತಾರೆ. ಆದರೆ ಬೇಯಿಸಿ ಅಥವಾ ಎಣ್ಣೆಯಲ್ಲಿ ಹುರಿದು ಸೇವಿಸುವುದು ಉತ್ತಮ. ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುವ ಆಲಿವ್ ಎಣ್ಣೆಯಲ್ಲಿ ಮೊಟ್ಟೆಯನ್ನು ಸುಡದಂತೆ ಹುರಿದು ಸೇವಿಸುವ ಮೂಲಕ ಉತ್ತಮವಾದ ಎರಡು ಆಹಾರಗಳ ಜೋಡಿಯ ಮೂಲಕ ನಮ್ಮ ರಕ್ತದ ಕೆಟ್ಟ ಕೊಲೆಸ್ಟ್ರಾಲ್ ನಿಗ್ರಹಿಸಲು ಸಾಧ್ಯವಾಗುತ್ತದೆ.

English summary

Is Eating Eggs Every Day Healthy?

It is true that eggs have cholesterol in large amounts. One egg has about 200 mls of cholesterol. But your daily intake of cholesterol from food should be more than 350 mls. So, you are just having a lot of essential cholesterol at once.
X
Desktop Bottom Promotion