For Quick Alerts
ALLOW NOTIFICATIONS  
For Daily Alerts

ವೈನ್ ರುಚಿ ಸವಿಯಲು ಕೆಲವೊಂದು ಟಿಪ್ಸ್

By Hemanth P
|

ವೈನ್ ಸೇವನೆ ಒಂದು ಕಲೆ, ಇದನ್ನು ತಿಳಿಯಲು ಮತ್ತು ಕರಗತ ಮಾಡಿಕೊಳ್ಳಲು ಸಮಯ ತಗಲುತ್ತದೆ. ಆದರೆ ಸಾಂದರ್ಭಿಕವಾಗಿ ವೈನ್ ಕುಡಿಯುವವರು ಆಳವಾದ ವಿವರಣೆಗೆ ಹೋಗದೆ ವೈನ್ ರುಚಿ ಪಡೆಯುವುದು ಹೇಗೆಂದು ತಿಳಿಯಲು ಬಯಸುತ್ತೇವೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ರೆಡ್ ವೈನ್ ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು

ಇಲ್ಲಿ ಯಾವುದೇ ಕಷ್ಟವಿಲ್ಲದೆ ವೈನ್ ರುಚಿ ಸವಿಯುವುದು ಹೇಗೆಂದು ಕಲಿಯಬಹುದು ಮತ್ತು ಕೆಲವೇ ನಿಮಿಷಗಳಲ್ಲಿ ಹವ್ಯಾಸಿಗಳು ಇದನ್ನು ಬಳಸಬಹುದು. ಆದರೆ ಪ್ರಮುಖ ಅಂಶವೆಂದರೆ ಇತರರು ಹೇಳುವುದಕ್ಕಿಂತ ವೈಯಕ್ತಿಕ ರುಚಿ ತುಂಬಾ ಮುಖ್ಯ. ನೀವು ವೈಟ್ ವೈನ್ ಜತೆ ಚಿಕನ್ ಎಂಜಾಯ್ ಮಾಡದಿದ್ದರೆ ಅದು ಒಳ್ಳೆಯದು.

How to Taste Wine – Wine Tasting Tips

ಯಾರೋ ಹೇಳಿದ್ದಾರೆ ಎನ್ನುವ ಕಾರಣಕ್ಕೆ ನೀವು ನಿಮಗೆ ಇಷ್ಟವಾಗದೆ ಇರುವುದನ್ನು ಸೇವಿಸಬೇಡಿ.ವೈನ್ ರುಚಿಯ ಕಲೆ ತುಂಬಾ ಅತ್ಯಾಧುನಿಕವಾಗಿದೆ ಮತ್ತು ಇದನ್ನು ಸಮಯಕ್ಕೆ ತಕ್ಕಂತೆ ಕಲಿಯುತ್ತಿರಬೇಕು. ಆದರೆ ಡಿನ್ನರ್ ಡೇಟ್ ಗೆ ನಾವಿಲ್ಲಿ ನಿಮಗೆ ಕೆಲವೊಂದು ಟಿಪ್ಸ್ ನೀಡುತ್ತಿದ್ದೇವೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ವೈನ್ ಬಳಸಿ ಸೌಂದರ್ಯ ಹೆಚ್ಚಿಸಿಕೊಳ್ಳಿ

ಟಿಪ್ಸ್-1
ವೈನ್‌ನ ಬಣ್ಣವು ವೈನ್ ನ ಗುಣಮಟ್ಟವನ್ನು ಪ್ರತಿಫಲಿಸುತ್ತದೆ. ರೆಡ್ ವೈನ್ ಸಮಯ ಕಳೆದಂತೆ ಲಘುವಾಗುತ್ತದೆ ಮತ್ತು ಅದಕ್ಕೆ ತುಂಬಾ ರುಚಿ ಬರುತ್ತದೆ. ಆದರೆ ವೈಟ್ ವೈನ್ ಸಮಯ ಕಳೆದಂತೆ ಅದರ ರುಚಿ ಕಳೆದುಕೊಳ್ಳುತ್ತದೆ.

ಟಿಪ್ಸ್-2
ಡೇಟ್ ವೇಳೆ ನೀವು ಆಕರ್ಷಿಸುವುದನ್ನು ಕಲಿಯಬೇಕು. ಯಾವಾಗಲೂ ಗ್ಲಾಸ್ ನ್ನು ಅದರ ಕೆಳಭಾಗದಲ್ಲಿ ಹಿಡಿಯಿರಿ. ಒಂದು ವೈನ್ ಕಾನಸರ್ ಯಾವಾಗಲೂ ಗಾಜಿನ ಉಬ್ಬು ಹೊಂದಿರುತ್ತದೆ. ನಿಮ್ಮ ಕೈಯ ಬಿಸಿ ಅದರ ರುಚಿ ಮೇಲೆ ಪರಿಣಾಮ ಬೀರುತ್ತದೆ. ಇದರಿಂದಾಗಿ ವೈನ್ ಸೇವಿಸುವಾಗ ಕೈಬೆರಳಿನ ಬಗ್ಗೆ ತುಂಬಾ ಎಚ್ಚರಿಕೆಯಿಂದ ಇರಬೇಕು.

ಟಿಪ್ಸ್-3
ನೀವು ಒಂದು ಗ್ಲಾಸ್ ವೈನ್ ಸೇವಿಸುವ ಮೊದಲು ಗ್ಲಾಸ್ ನ್ನು ಒಂದು ಸುತ್ತು ತಿರುಗಿಸಿ ಇದರಿಂದ ವೈನ್ ನ ಭಿನ್ನ ರುಚಿ ಮತ್ತು ಸುವಾಸನೆ ಬಿಡುಗಡೆಯಾಗುತ್ತದೆ. ನೀವು ವೈನ್ ನ ಸುವಾಸನೆ ಪಡೆಯಲು ಸಮಯ ತೆಗೆದುಕೊಂಡಂತೆ ನಿಮ್ಮ ರುಚಿ ಮೊಗ್ಗುಗಳು ಒಳ್ಳೆಯ ವೈನ್ ಪರಿಮಳವನ್ನು ಸೂಕ್ಷ್ಮ ಸುಳಿವು ಪಡೆಯಲು ನೆರವಾಗುತ್ತದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಇವುಗಳಲ್ಲಿ ಯಾವೆಲ್ಲಾ ವೈನ್ ಟೇಸ್ಟ್ ಮಾಡಿರುವಿರಿ?

ಟಿಪ್ಸ್-4
ವೈನ್‌ನ ಸುವಾಸನೆ ಎರಡು ರೀತಿಯಿಂದ ಪಡೆಯಬಹುದು. ಕ್ಷಿಪ್ರಗತಿಯಲ್ಲಿ ಸುವಾಸನೆ ಪಡೆಯಬಹುದು ಮತ್ತು ಇದರ ಬಳಿಕ ಹಿಂದೆ ಕುಳಿತು ವೈನ್ ನೀಡಿರುವ ಮೊದಲ ಪ್ರಭಾವ ತಿಳಿಯಬಹುದು. ಇದರ ಬಳಿಕ ನೀವು ದೀರ್ಘ, ಆಳವಾಗಿ ಸುವಾಸನೆ ಪಡೆದುಕೊಂಡು ಅದರ ಪ್ರಭಾವಕ್ಕೊಳಗಾಗಬಹದು. ನೀವು ದೀರ್ಘವಾಗಿ ಸುವಾಸನೆ ಪಡೆಯಬಹುದು. ವ್ಯಕ್ತಿಯ ಆದ್ಯತೆ ಮೇಲೆ ಇದು ಅವಲಂಬಿತವಾಗಿದೆ. ಇದರಿಂದ ನೀವು ಯಾವುದಕ್ಕೆ ಪ್ರಾಮುಖ್ಯತೆ ಕೊಡುತ್ತೀರಿ ಎಂದು ತಿಳಿದು ಅದನ್ನು ಪ್ರಯತ್ನಿಸಿ. ಆದಾಗ್ಯೂ ಯಾವುದೇ ವೈನ್ ನ ಸುವಾಸನೆಯನ್ನು ಪಡೆಯದೆ ನೀವು ವೈನ್ ನ್ನು ಸೇವಿಸಲೇಬಾರದು.

ಟಿಪ್ಸ್-5
ನೀವು ಒಂದು ಗುಟುಕು ವೈನ್ ಕುಡಿದಾಗ ಅದು ನಿಮ್ಮ ಬಾಯಿಯಲ್ಲಿ ಸಂಪೂರ್ಣವಾಗಿ ಸುತ್ತಾಡುವಂತೆ ಮಾಡಿದರೆ ಅದರ ರುಚಿ ಹೆಚ್ಚುತ್ತದೆ. ನಾಲಗೆಯ ಅಡಿಭಾಗದಲ್ಲಿರುವ ರುಚಿಯ ಮೊಗ್ಗುಗಳ ಸಹಿತ ಎಲ್ಲಾ ರುಚಿಯ ಮೊಗ್ಗುಗಳೊಂದಿಗೆ ವೈನ್ ಸಂಪರ್ಕಕ್ಕೆ ಬರುತ್ತದೆ.

ಟಿಪ್ಸ್-6
ಮೊದಲ ಸಲ ನೀವು ವೈನ್ ನ್ನು ಬಾಯಿಯಲ್ಲಿ ಎಲ್ಲಾ ಕಡೆ ಹರಡಿಸಿದಾಗ ರುಚಿಯ ಮೊಗ್ಗುಗಳು ಎದ್ದುಕೊಂಡು ಅದು ಕಾರ್ಯಚಟುವಟಿಕೆಗಳಲ್ಲಿ ತೊಡಗುವಂತೆ ಮಾಡುತ್ತದೆ. ನೀವು ಬಾಯಿಯಲ್ಲಿ ವೈನ್ ನ್ನು ಎಲ್ಲಾ ಕಡೆ ತಿರುಗಿಸುವಾಗ ಗಾಳಿ ಬಾಯಿಯೊಳಗೆ ಹೋಗುವಂತೆ ಮಾಡಿ. ವೈನ್ ನ್ನು ನೋಡಿ. ಅದು ಮೃದು ಮತ್ತು ಸಮೃದ್ಧವೇ ಅಥವಾ ಲಘು ಮತ್ತು ಮೃದುವೇ ಎಂದು ತಿಳಿಯಿರಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಕೆಂಪು ವೈನ್ ಕುಡಿದರೆ ಆರೋಗ್ಯಕ್ಕೆ ಒಳ್ಳೆಯದಂತೆ!

ಮತ್ತೊಂದು ಗುಟುಕು ಸೇವಿಸುವ ಮೊದಲು ಆರಾಮ ಮಾಡಿ ಮತ್ತು ಅದರ ರುಚಿ ಹೇಗಿದೆಯೆಂದು ತಿಳಿಯಿರಿ. ವೈನ್ ರುಚಿ ನಿಮ್ಮ ಬಾಯಿಯಲ್ಲಿ ಎಷ್ಟು ಹೊತ್ತು ನಿಲ್ಲುತ್ತದೆ ಎಂದು ನೋಡಿ. ಇದು ತುಂಬಾ ಒಳ್ಳೆಯ ಅನುಭವ.ವೈನ್ ರುಚಿ ಪಡೆಯುವುದು ವೈಯಕ್ತಿಕ ಅನುಭವ, ಇದು ಯಾವುದೇ ವಿಧಿ-ವಿಧಾನಗಳನ್ನು ಅವಲಂಬಿಸಿಲ್ಲ ಎಂದು ತಿಳಿದುಕೊಳ್ಳಿ. ಇದರ ರುಚಿ ಸವಿಯುವುದು ನಾವು ನಿಮಗೆ ಬಿಟ್ಟಿದ್ದೇವೆ.

English summary

How to Taste Wine – Wine Tasting Tips

Wine tasting is an art that takes time to understand and acquire. But most of us casual wine drinkers want to know how to taste wine without really getting into the deeper details.
Story first published: Saturday, February 15, 2014, 9:38 [IST]
X
Desktop Bottom Promotion