For Quick Alerts
ALLOW NOTIFICATIONS  
For Daily Alerts

ಡ್ರೈ ಫ್ರೂಟ್ಸ್ ನಿಂದ ತೂಕ ಇಳಿಸಿಕೊಳ್ಳುವುದು ಹೇಗೆ?

By Hemanyh P
|

ಡ್ರೈಫ್ರೂಟ್ಸ್ ತನ್ನಲ್ಲಿರುವ ತೇವಾಂಶ ಕಳಕೊಂಡಿರುತ್ತದೆ. ಈ ಹಣ್ಣುಗಳು ಪೌಷ್ಠಿಕಾಂಶ, ಕಾರ್ಬ್ರೋಹೈಡ್ರೆಟ್ ಮತ್ತು ಸಕ್ಕರೆ ಅಂಶದಿಂದ ಸಮೃದ್ಧವಾಗಿರುತ್ತದೆ. ಡ್ರೈಫ್ರೂಟ್ಸ್ ಗಳೆಂದರೆ ಬಾದಾಮಿ, ಗೋಡಂಬಿ, ಪಿಸ್ತಾ, ರೆಸಿನ್ಸ್ ಇತ್ಯಾದಿ. ಡ್ರೈಫ್ರೂಟ್ಸ್ ಗಳು ಆರೋಗ್ಯ ಮತ್ತು ಚಯಾಪಚಯಾ ಕ್ರಿಯೆ ಸುಧಾರಿಸಲು ತುಂಬಾ ಅನುಕೂಲಕಾರಿ ಎಂದು ಪರಿಗಣಿಸಲಾಗಿದೆ. ಡ್ರೈಫ್ರೂಟ್ಸ್ ನಲ್ಲಿ ಹೆಚ್ಚಿನ ಶಕ್ತಿಯಿದೆ. ಅನಾರೋಗ್ಯದಿಂದ ಬಳಲುತ್ತಿರುವವರು ಹಾಗೂ ಹೆಚ್ಚು ತೂಕ ಕಳಕೊಂಡಿರುವವರು ಡ್ರೈಫ್ರೂಟ್ಸ್ ನ್ನು ಹೆಚ್ಚು ಸೇವನೆ ಮಾಡಿ ಶಕ್ತಿ ಪಡೆಯಬೇಕೆಂದು ಸಲಹೆ ನೀಡಲಾಗುತ್ತದೆ. ಗರ್ಭಿಣಿ ಮಹಿಳೆಯರು ಮತ್ತು ಸಣ್ಣ ಮಕ್ಕಳು ಪೌಷ್ಠಿಕಾಂಶ ಪಡೆಯಲು ಹೆಚ್ಚಿನ ಡ್ರೈ ಫ್ರೂಟ್ಸ್ ಸೇವಿಸಬೇಕು.

ಡ್ರೈಫ್ರೂಟ್ಸ್ ಗಳನ್ನು ತಿಂದರೆ ತೂಕ ಹೆಚ್ಚಿಸಿಕೊಳ್ಳಬಹುದು. ಡ್ರೈ ಫ್ರೂಟ್ಸ್ ನಲ್ಲಿ ಕೊಬ್ಬು ಮತ್ತು ಶಕ್ತಿ ಸಮೃದ್ಧವಾಗಿದೆ. ಆದರೆ ಅದೇ ರೀತಿ ಡ್ರೈ ಫ್ರೂಟ್ಸ್ ತಿಂದು ತೂಕ ಕಡಿಮೆ ಮಾಡಿಕೊಳ್ಳಬಹುದು. ತೂಕ ಕಳೆದುಕೊಳ್ಳುವ ಈ ವಿಧಾನ ತುಂಬಾ ಹೊಸದು. ನಿಮ್ಮ ದೇಹದಲ್ಲಿರುವ ಯಾವುದೇ ಪೌಷ್ಠಿಕಾಂಶಗಳನ್ನು ಕಳಕೊಳ್ಳದೆ ತೂಕ ಇಳಿಸಲು ಡ್ರೈ ಫ್ರೂಟ್ಸ್ ನ ಆಹಾರ ಕ್ರಮ ಪಾಲಿಸಬಹುದು. ಡ್ರೈ ಫ್ರೂಟ್ಸ್ ತಿಂದು ನಿಮ್ಮ ತೂಕ ಕಡಿಮೆ ಮಾಡಿಕೊಳ್ಳಲು ಕೆಲವೊಂದು ಟಿಪ್ಸ್ ಗಳನ್ನು ಇಲ್ಲಿ ಚರ್ಚಿಸಲಾಗಿದೆ.

How to lose weight with only dried fruits

1. ಪ್ರಮಾಣ
ಡ್ರೈ ಫ್ರೂಟ್ಸ್ ಕಾರ್ಬ್ರೋಹೈಡ್ರೆಟ್ಸ್ ಮತ್ತು ಸಕ್ಕರೆ ಅಂಶದಿಂದ ಸಮೃದ್ಧವಾಗಿದೆ. ಅತಿಯಾಗಿ ಡ್ರೈ ಫ್ರೂಟ್ಸ್ ಸೇವಿಸುವುದರಿಂದ ನಿಮ್ಮ ದೇಹದಲ್ಲಿನ ಕೊಬ್ಬು ಹೆಚ್ಚಾಗಬಹುದು. ಇದರಿಂದ ತೂಕ ಕಡಿಮೆಯಾಗುವ ಬದಲು ಹೆಚ್ಚಾಗಬಹುದು. ಇದರಿಂದ ಈ ಸಲಹೆ ಪಾಲಿಸಿ, ಹೆಚ್ಚಿನ ಪ್ರಮಾಣದ ಡ್ರೈ ಫ್ರೂಟ್ಸ್ ಸೇವನೆ ಮಾಡಬೇಡಿ. ತೂಕ ಇಳಿಸಲು ನಿಮ್ಮ ದೈನಂದಿನ ಆಹಾರದಲ್ಲಿ ಒಂದು ಪಿಂಗಾಣಿಯಷ್ಟು ಡ್ರೈ ಫ್ರೂಟ್ಸ್ ನ್ನು ಸೇರಿಸಿ. ಒಂದು ಪಿಂಗಾಣಿ ಡ್ರೈ ಫ್ರೂಟ್ಸ್ ನಿಂದ ನಿಮ್ಮ ದೇಹದಲ್ಲಿ ಶಕ್ತಿ ಮಟ್ಟ ಮತ್ತು ಪೌಷ್ಠಿಕಾಂಶ ಮಟ್ಟ ಸಮತೋಲದಲ್ಲಿರುತ್ತದೆ.

2. ನಿಗದಿತ ಸಮಯದಲ್ಲಿ ನಿಗದಿತ ಹಣ್ಣುಗಳು
ಕೇವಲ ಡ್ರೈ ಫ್ರೂಟ್ಸ್ ಸೇವನೆ ಮಾಡಿ ತೂಕ ಕಡಿಮೆ ಮಾಡಬೇಕೆಂದರೆ ನೀವು ಒಡೆದು ಆಳುವ ನೀತಿ ಪಾಲಿಸಬೇಕು. ಡ್ರೈ ಫ್ರೂಟ್ಸ್ ಗಳನ್ನು ಯಾವುದೇ ಸಮಯದಲ್ಲೂ ತಿನ್ನಬಾರದು. ಉದಾಹರಣೆಗೆ ಬಾದಾಮಿಯಲ್ಲಿರುವ ಎಲ್ಲಾ ಪೌಷ್ಠಿಕಾಂಶಗಳನ್ನು ಪಡೆಯಲು ಅದನ್ನು ರಾತ್ರಿ ನೀರಿನಲ್ಲಿ ನೆನೆಸಲು ಹಾಕಿ ಮತ್ತು ಬೆಳಿಗ್ಗೆ ತಿನ್ನಿ. ಬಾದಾಮಿಯಲ್ಲಿ ಶಕ್ತಿ ಸಮೃದ್ಧವಾಗಿದ್ದು, ಇದು ದೇಹದ ಚಯಾಪಚಾಯ ಕ್ರಿಯೆಯನ್ನು ಬಲಗೊಳಿಸುತ್ತದೆ. ರೆಸಿನ್ಸ್ ಮತ್ತು ಅಂಜೂರದ ಹಣ್ಣನ್ನು ಮಧ್ಯಾಹ್ನ ಊಟದ ವೇಳೆ ತಿನ್ನಬೇಕು. ಪ್ರತಿಯೊಂದು ಡ್ರೈ ಫ್ರೂಟ್ಸ್ ನ್ನು ಒಡೆಯಿರಿ ಮತ್ತು ಎಲ್ಲಾ ತುಂಡುಗಳನ್ನು ಒಮ್ಮೆಲೇ ತಿನ್ನಬೇಡಿ.

3. ಪಿಸ್ತಾ
ತೂಕ ಇಳಿಸಲು ಪಿಸ್ತಾ ತುಂಬಾ ಒಳ್ಳೆಯದು ಎಂದು ಸಾಬೀತಾಗಿದೆ. ಆರೋಗ್ಯಕರ ಕೊಬ್ಬು, ಪೌಷ್ಠಿಕಾಂಶ ಮತ್ತು ಪ್ರೋಟಿನ್ ಗಳಿಂದ ಸಮೃದ್ಧವಾಗಿದೆ. ಪಿಸ್ತಾದಲ್ಲಿರುವ ಎಲ್ಲಾ ಕೊಬ್ಬನ್ನು ನಮ್ಮ ದೇಹವು ಹೀರಿಕೊಳ್ಳುದ ಕಾರಣ ಇದನ್ನು ಕಡಿಮೆ ಕ್ಯಾಲರಿ ಆಹಾರವೆಂದು ಪರಿಗಣಿಸಲಾಗಿದೆ. ತೂಕ ಕಳಕೊಳ್ಳಲು ಒಳ್ಳೆಯ ಟಿಪ್ಸ್ ಎಂದರೆ ನಿಮ್ಮ ಆಹಾರ ಕ್ರಮದಲ್ಲಿ ಹೆಚ್ಚಿನ ಪಿಸ್ತಾ ಬಳಸಿ. ನೀವು ಪಿಸ್ತಾ ಹೆಚ್ಚು ತಿಂದಷ್ಟು ಹೆಚ್ಚು ತೂಕ ಕಳಕೊಳ್ಳುತ್ತೀರಿ. ತೂಕ ಕಳಕೊಳ್ಳುವ ಆಹಾರ ಕ್ರಮದಲ್ಲಿ ಬಳಸಕೊಳ್ಳುವ ಒಳ್ಳೆಯ ಡ್ರೈ ಫ್ರೂಟ್ಸ್ ಎಂದರೆ ಅದು ಪಿಸ್ತಾ.

4. ಹಸಿವು ನೀಗಿಸುತ್ತದೆ
ಡ್ರೈ ಫ್ರೂಟ್ಸ್ ನಲ್ಲಿ ಕಾರ್ಬ್ರೋಹೈಡ್ರೆಟ್ಸ್ ಮತ್ತು ಕೊಬ್ಬು ಸಮೃದ್ಧವಾಗಿರುತ್ತದೆ. ಒಂದು ಪಿಂಗಾಣಿ ಡ್ರೈ ಫ್ರೂಟ್ಸ್ ನಿಂದ ನಿಮ್ಮ ಹಸಿವು ನೀಗಿಸಬಹುದು. ಹಸಿವು ಕಡಿಮೆ ಆದಷ್ಟು ಆಹಾರ ಸೇವನೆ ಕಡಿಮೆಯಾಗುತ್ತದೆ. ಕೆಲವೊಂದು ಕೊಬ್ಬಿನ ಆಹಾರಗಳಾದ ಚಿಪ್ಸ್, ಚೀಸ್ ಮತ್ತು ಜಂಕ್ ಫುಡ್ ಗೆ ಪರ್ಯಾಯವಾಗಿ ಡ್ರೈ ಫ್ರೂಟ್ಸ್ ತುಂಬಾ ಒಳ್ಳೆಯದು. ಡ್ರೈ ಫ್ರೂಟ್ಸ್ ಗಳು ನೀವು ಅಗತ್ಯ ಪ್ರಮಾಣದ ಆಹಾರ ಸೇವಿಸಲು ನೆರವಾಗುತ್ತದೆ. ಅಗತ್ಯ ಪ್ರಮಾಣದಲ್ಲಿ ಡ್ರೈ ಫ್ರೂಟ್ಸ್ ಸೇವಿಸಬೇಕೆನ್ನುವುದು ಅತೀ ಮುಖ್ಯ ಟಿಪ್ಸ್. ಈ ಟಿಪ್ಸ್ ಡ್ರೈ ಫ್ರೂಟ್ಸ್ ನಿಂದ ತೂಕ ಕಳಕೊಳ್ಳಲು ನೆರವಾಗುತ್ತದೆ.

5. ಇತರ ಲಾಭಗಳು
ತೂಕ ಇಳಿಸುವುದನ್ನು ಹೊರತುಪಡಿಸಿ ಡ್ರೈ ಪ್ರೂಟ್ಸ್ ನಿಂದ ಇತರ ಕೆಲವು ಲಾಭಗಳಿವೆ. ಉದಾಹರಣಿಗೆ ಬಾದಾಮಿಯಿಂದ ಮೆದುಳು ಚುರುಕಾಗಿ ಮಾನಸಿಕ ಸಾಮರ್ಥ್ಯ ಹೆಚ್ಚುತ್ತದೆ. ಅಂಜೂರದ ಹಣ್ಣುಗಳು ನಿಶಕ್ತಿ, ಮಧುಮೇಹ ಮತ್ತು ರಕ್ತ ಸಂಚಾರಕ್ಕೆ ಒಳ್ಳೆಯದು. ರೆಸಿನ್ಸ್ ಚರ್ಮ ಮತ್ತು ದೇಹದ ಚಟುವಟಿಕೆಗೆ ಒಳ್ಳೆಯದು. ರೆಸಿನ್ಸ್ ನಿಂದ ದೇಹದ ಉಷ್ಣತೆ ಕಡಿಮೆಯಾಗುತ್ತದೆ. ಬಾದಾಮಿಯಂತೆ ರೆಸಿನ್ಸ್ ನ್ನು ರಾತ್ರಿ ನೀರಿನಲ್ಲಿ ನೆನೆಸಲು ಹಾಕಿ ಬೆಳಿಗ್ಗೆ ತಿನ್ನಬೇಕು. ಗೋಡಂಬಿಯಲ್ಲಿ ಹೆಚ್ಚಿನ ಪ್ರಮಾಣದ ಕ್ಯಾಲರಿ ಹಾಗೂ ಕೊಬ್ಬು ಇರುವ ಕಾರಣ ಅದನ್ನು ಹೆಚ್ಚಿಗೆ ಸೇವನೆ ಮಾಡಬಾರದು. ತೂಕ ಇಳಿಸುವ ಆಹಾರ ಕ್ರಮದಲ್ಲಿ ಗೋಡಂಬಿ ಕಡೆಗಣಿಸಿ.

English summary

How to lose weight with only dried fruits

Dry fruits are fruits which lose all the moisture content. The fruit becomes rich in nutrients, carbohydrates and sugars. Dry fruits generally include almonds, cashew, pistachios, resins, etc.
Story first published: Saturday, January 4, 2014, 15:10 [IST]
X
Desktop Bottom Promotion