For Quick Alerts
ALLOW NOTIFICATIONS  
For Daily Alerts

10 ದಿನದೊಳಗೆ ಬೊಜ್ಜು ತುಂಬಿದ ಹೊಟ್ಟೆ ಕರಗಿಸುವುದು ಹೇಗೆ?

|

ಹೊಟ್ಟೆಯಲ್ಲಿ ತುಂಬಿದ ಕೊಬ್ಬನ್ನು ಕೇವಲ 10 ದಿನದಲ್ಲಿ ಕರಗಿಸುವುದು ಅಸಾಧ್ಯದ ಕೆಲಸವೇನು ಅಲ್ಲ. ಸರಿಯಾದ ಡಯಟ್, ಜೀವನ ಶೈಲಿ ಮತ್ತು ವ್ಯಾಯಾಮವನ್ನು ಅನುಸರಿಸುವ ಮೂಲಕ ಇದನ್ನು ಸಾಧ್ಯವಾಗಿಸಿಕೊಳ್ಳಬಹುದು.

ವಿಶೇಷವಾಗಿ ಹೊಟ್ಟೆ ಭಾಗವನ್ನು ಕರಗಿಸುವಂತಹ ವ್ಯಾಯಾಮಗಳನ್ನು ಮಾಡುವ ಮೂಲಕ ಹಾಗೂ ನಿರ್ದಿಷ್ಟ ಡಯಟ್ ಪಾಲಿಸುವ ಮೂಲಕ ಬೊಜ್ಜು ಹೊಟ್ಟೆಯನ್ನು ಕರಗಿಸಬಹುದು. ಜೀರ್ಣಕ್ರಿಯೆಯನ್ನು ಹೆಚ್ಚಿಸುವ ಮೂಲಕ ದೇಹದಲ್ಲಿರುವ ಕೊಬ್ಬನ್ನು ಕರಗಿಸಬಹುದು. ಈ ಕೆಳಗೆ ನೀಡಲಾಗಿರುವ ಕ್ರಮವನ್ನು ಅನುಸರಿಸಿ, 10 ದಿನಗಳಲ್ಲಿ ನಿಮ್ಮ ಬೊಜ್ಜು ತುಂಬಿದ ಹೊಟ್ಟೆಯನ್ನು ತೆಳ್ಳಗೆ ಮಾಡಿಕೊಳ್ಳಿ.

ದಿನ 1

ದಿನ 1

ಮೊದಲನೆ ದಿನ ನೀವು ಮಾಡಬೇಕಾದ ಬಹುಮುಖ್ಯ ಕೆಲಸವೆಂದರೆ, ನಿಮ್ಮ ಮನೆಯಲ್ಲಿರುವ ಎಲ್ಲಾ ಜಂಕ್ ಫುಡ್‍ಗಳನ್ನು ತೆಗೆದು ಹಾಕಬೇಕು. ಈ ಜಂಕ್ ಫುಡ್ ಜಾಗದಲ್ಲಿ ಒಳ್ಳೆಯ ಪೋಷಕಾಂಶಗಳನ್ನು ಹೊಂದಿರುವ ಆಹಾರ ಪದಾರ್ಥಗಳನ್ನು ಇರಿಸಬೇಕು. ಅವುಗಳಲ್ಲಿ ಹಣ್ಣುಗಳು, ತರಕಾರಿಗಳು, ಕೋಳಿ ಮಾಂಸ, ಕಡಿಮೆ ಕೊಬ್ಬು ಇರುವ ಹೈನು ಉತ್ಪನ್ನಗಳು, ಬೀನ್ಸ್, ಒಣ ಹಣ್ಣುಗಳು, ಕಾಳುಗಳು ಇತ್ಯಾದಿಗಳು ಇರಬೇಕು.

ಯಾವುದೇ ಕಾರಣಕ್ಕು ನಿಮ್ಮ ಮನೆಯಲ್ಲಿ ಹಾಟ್ ಡಾಗ್ಸ್ ಅಥವಾ ಸಾಸೇಜ್ ಅಥವಾ ಕ್ಯಾಂಡಿಗಳನ್ನು ಇರಿಸಬಾರದು. ಮೊದಲ ದಿನ ಕಾರ್ಬೊಹೈಡ್ರೇಟ್ ಸೇವಿಸುವುದನ್ನು ನಿಯಂತ್ರಿಸಿ. 10-12 ಲೋಟ ನೀರನ್ನು ಕುಡಿಯಿರಿ, ಇದರಿಂದ ದೇಹದಲ್ಲಿರುವ ಹೆಚ್ಚಿನ ಪ್ರಮಾಣದ ಕೊಬ್ಬು ಕರಗುತ್ತದೆ. ಜೊತೆಗೆ ಕೊಬ್ಬು ಕರಗಿಸಲು ಆರಂಭಿಸುವ ಒಂದರಿಂದ ಮೂರು ದಿನಗಳ ಮೊದಲು ಉಪವಾಸವನ್ನು ಮಾಡಬಹುದು. ಈ ಉಪವಾಸ ಮಾಡುವಾಗ ಕೇವಲ ಸೇಬು ಹಣ್ಣಿನ ಸಿಡೆರ್ ವಿನೆಗರ್‌ನ ರಸವನ್ನು 3-5 ಬಾರಿ ಸೇವಿಸಿ.

* ಎರಡು ಚಮದಷ್ಟು ಆರ್ಗ್ಯಾನಿಕ್ ಸೇಬು ಹಣ್ಣಿನ ವಿನೆಗರ್ ಮತ್ತು ಒಂದು ಚಮದಷ್ಟು ಜೇನು ತುಪ್ಪ ಹಾಗು 8 ಔನ್ಸ್ ಶುದ್ಧ ನೀರನ್ನು ತೆಗೆದುಕೊಳ್ಳಿ.

* ಕೊಬ್ಬು ಕರಗಿಸುವ ಕಾರ್ಯಕ್ರಮವು ಸುಗಮವಾಗಿ ಸಾಗಲು ಇದನ್ನು ಪ್ರತಿ ದಿನ 2-3 ಬಾರಿ ತೆಗೆದುಕೊಳ್ಳಿ.

ದಿನ -2

ದಿನ -2

ಈ ದಿನ ಅತಿ ಹೆಚ್ಚು ಬೇಯಿಸಿದ ಅಥವಾ ಕಚ್ಛಾ ತರಕಾರಿಗಳನ್ನು ಸೇವಿಸಿ. ನಿಮ್ಮ ಹೊಟ್ಟೆಯ ಭಾಗವನ್ನು ಕರಗಿಸಲು ನಿಮಗೆ ಅವಶ್ಯಕತೆಯಿದ್ದಲ್ಲಿ, ತರಕಾರಿಯ ಅಥವಾ ಕೋಳಿ ಮಾಂಸದ ಸೂಪನ್ನು ಸೇವಿಸಬಹುದು. ಇದು ನಿಮ್ಮ ಜೀರ್ಣ ಕ್ರಿಯೆಯನ್ನು ಹೆಚ್ಚಿಸುವುದರ ಜೊತೆಗೆ ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ಸ್ಥಿರಗೊಳಿಸುತ್ತದೆ. ಈ ದಿನ ಐದರಿಂದ ಆರು ಬಾರಿ ಹಣ್ಣು ಮತ್ತು ತರಕಾರಿಗಳನ್ನು ಸೇವಿಸುವುದರಿಂದ ಊಟ ಮಾಡಬೇಕೆನ್ನುವ ಮನಸ್ಸು ಆಗುವುದಿಲ್ಲ.

ಹಾಗೆಂದು ಎಲ್ಲಾ ಹಣ್ಣುಗಳನ್ನು ಸೇವಿಸಬೇಡಿ. ಬಾಳೆಹಣ್ಣು , ಸೇಬು ಮುಂತಾದ ಹೆಚ್ಚಿನ ಕಾರ್ಬೋಹೈಡ್ರೇಟ್‍ಗಳಿರುವ ಹಣ್ಣುಗಳನ್ನು ಸೇವಿಸಬೇಡಿ. ಈ ಹಣ್ಣು ಮತ್ತು ತರಕಾರಿಗಳನ್ನು ಸೇವಿಸುವುದರ ಜೊತೆಗೆ ವ್ಯಾಯಾಮವನ್ನು ಮಾಡುವುದನ್ನು ಮುಂದುವರಿಸಿರಿ. ನೀವು ಈ ಮೊದಲು ವ್ಯಾಯಾಮ ಮಾಡದಿದ್ದಲ್ಲಿ, ಆದಷ್ಟು ಲಘು ವ್ಯಾಯಾಮವನ್ನು ಮಾಡುವ ಮೂಲಕ ವ್ಯಾಯಾಮ ಆರಂಭಿಸಿ. ಒಂದು 20 ನಿಮಿಷ ನಡೆದಾಡುವಂತಹ ವ್ಯಾಯಾಮ ಮಾಡಿ.

ದಿನ 3

ದಿನ 3

ಈ ದಿನ ನಿಮ್ಮ ಉಪಾಹಾರದಲ್ಲಿ 50 ಗ್ರಾಂಗಿಂತ ಅಧಿಕವಾದ ಕಾರ್ಬೋಹೈಡ್ರೇಟ್‍ಗಳನ್ನು ಸೇವಿಸಿ. ಕಡಿಮೆ ಕಾರ್ಬ್ ಇರುವ ಡಯಟ್‍ಗಳು ತೂಕವನ್ನು ಬೇಗ ಇಳಿಸಿಕೊಳ್ಳಲು ಸಹಕರಿಸುತ್ತವೆ. ಒಂದು ಕಪ್ ಓಟ್ ಮೀಲ್‍ನಲ್ಲಿ 50 ಗ್ರಾಂನಷ್ಟು ಕಾರ್ಬೋಹೈಡ್ರೇಟ್‍ಗಳಿರುತ್ತವೆ. ಇನ್ನು ಈ ದಿನ ಸೇವಿಸುವ ಇತರ ಆಹಾರದಲ್ಲಿ ಪ್ರೋಟಿನ್ ಅಂಶಗಳು ಸ್ವಲ್ಪ ಕಡಿಮೆ ಇರುವಂತೆ ನೋಡಿಕೊಳ್ಳಿ. ಯೋಗರ್ಟ್, ತಾಜಾ ಹಣ್ಣುಗಳು ಮತ್ತು ತರಕಾರಿಗಳನ್ನು ನಿಮ್ಮ ಸ್ನ್ಯಾಕ್ಸ್ ಆಗಿ ಬಳಸಿ.

ಆಲಿವ್ ಎಣ್ಣೆ ಅಥವಾ ಮೀನೆಣ್ಣೆಯಂತಹ ಕೊಬ್ಬಿನಿಂದ ಕೂಡಿದ ಎಣ್ಣೆಗಳನ್ನು ಬಳಸಬೇಡಿ. ಪದ್ಮಾಸನದಲ್ಲಿ ಕುಳಿತು ಉಸಿರಾಟ ನಿಯಂತ್ರಿಸುವ ವ್ಯಾಯಾಮ ಮಾಡುವ ಮೂಲಕ ನೀವು ನಿಮ್ಮ ಹೊಟ್ಟೆ ಭಾಗವನ್ನು ಕರಗಿಸಬಹುದು.

* ಪದ್ಮಾಸನದಲ್ಲಿ ಕುಳಿತು ನಿಮ್ಮ ಸೊಂಟದ ಭಾಗವನ್ನು ಆದಷ್ಟು ಕೆಳಗೆ ಹೋಗುವಂತೆ ಉಸಿರನ್ನು ಮೆಲ್ಲಗೆ ಎಳೆದುಕೊಳ್ಳಿ. ನಂತರ ಅದೇ ಸ್ಥಿತಿಯಲ್ಲಿ ಸ್ವಲ್ಪ ಹೊತ್ತು ಇದ್ದು, ಉಸಿರನ್ನು ಬಿಡುತ್ತ ನೇರವಾಗಿ ಕುಳಿತುಕೊಳ್ಳಿ.

* ಈ ವ್ಯಾಯಾಮವನ್ನು 10 ಬಾರಿ ಪುನರಾವರ್ತಿಸಿ.

ದಿನ 4

ದಿನ 4

ಈ ದಿನ ನೀವು ಮೂರು ಮೊಟ್ಟೆಗಳ ಬಿಳಿ ಭಾಗದಿಂದ ಹಾಗು ತರಕಾರಿ ಸೇರಿಸಿ ಮಾಡಿದ ಆಮ್ಲೆಟ್ ಅನ್ನು ಉಪಹಾರವಾಗಿ ಸೇವಿಸಿ. ತರಕಾರಿಗಳು, ಕೋಳಿ, ಆಲೀವ್ ಎಣ್ಣೆ ಇತ್ಯಾದಿಗಳಿಂದ ಮಾಡಲಾದ ಸಲಾಡ್‍ಗಳನ್ನು ಮಧ್ಯಾಹ್ನ ಸೇವಿಸಿ. ಕೋಳಿ ಮಾಂಸ ಸೇವಿಸುವಾಗ ಯಾವುದೇ ಕಾರಣಕ್ಕು 150 ಗ್ರಾಂ.ಗಿಂತ ಅಧಿಕವಾಗಿ ಸೇವಿಸಬೇಡಿ.

ಹೊಟ್ಟೆ ಹಸಿವಾದರೆ ಒಂದು ಹಿಡಿಯಷ್ಟು ಒಣ ಹಣ್ಣುಗಳನ್ನು ನೀವು ಸೇವಿಸಬಹುದು. ಇವುಗಳು ನಿಮ್ಮ ಹಸಿವನ್ನು ನೀಗಿಸುತ್ತವೆ. ಇದರ ಜೊತೆಗೆ ಸೊಂಟದ ಸುತ್ತ ಇರುವ ಕೊಬ್ಬನ್ನು ಕರಗಿಸಲು ಕೆಲವೊಂದು ವ್ಯಾಯಾಮಗಳನ್ನು ಮಾಡಿ.

* ಬೆನ್ನನ್ನು ಕೆಳಗೆ ಮಾಡಿ ನೆಲದ ಮೇಲೆ ಮಲಗಿಕೊಳ್ಳಿ. ನಿಮ್ಮ ಕೈಗಳು ತಲೆಯ ಕೆಳಗೆ ಇರಲಿ. ಮೊಣಕಾಲನ್ನು ನೇರವಾಗಿ ಮಡಚಿ, ಪಾದಗಳು ನೆಲದ ಮೇಲೆ ಧೃಡವಾಗಿ ಇರಲಿ.

* ಈಗ ತಲೆಯ ಸಮೇತ ಕೈಗಳನ್ನು ಎತ್ತಿ, ಮೊಣಕಾಲನ್ನು, ಮೊಣಕೈಯಿಂದ ಸ್ಪರ್ಶಿಸಲು ಆರಂಭಿಸಿ.

* ಹೀಗೆ ಕನಿಷ್ಟ ಮೂರು ಬಾರಿ ಮಾಡಿ.

 ದಿನ 5

ದಿನ 5

ಈ ದಿನ ನೀವು ಕಡಿಮೆ ಕೊಬ್ಬು ಇರುವ ಹಾಲು ಮತ್ತು ಹಣ್ಣುಗಳನ್ನು ಸೇವಿಸಬಹುದು. ನಿಮಗೆ ಬೇಕಾದಲ್ಲಿ ಒಂದು ಅಥವಾ ಎರಡು ಬಾಳೆಹಣ್ಣುಗಳನ್ನು ಸಹ ಸೇವಿಸಬಹುದು. ಇದು ನಿಮ್ಮ ದೇಹಕ್ಕೆ ಅಗತ್ಯವಾಗಿರುವ ಕಾರ್ಬೋಹೈಡ್ರೇಟ್‍ಗಳನ್ನು ಒದಗಿಸುತ್ತದೆ. ನಿಮ್ಮ ಹೊಟ್ಟೆಯನ್ನು ತುಂಬಿಸಲು ಮತ್ತು ನಿಮಗೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸಲು ಸೂಪ್ ಅಥವಾ ಸಲಾಡ್‍ಗಳನ್ನು ಸೇವಿಸಿ. ಆದಷ್ಟು ಚೆನ್ನಾಗಿ ನೀರನ್ನು ಸೇವಿಸಿ. ನಿಮ್ಮ ವ್ಯಾಯಾಮದಲ್ಲಿ ಬಸ್ಕಿಗಳನ್ನು ಸಹ ಮಾಡಲು ಆರಂಭಿಸಿ.

* ಬೆನ್ನನ್ನು ಕೆಳಗೆ ಮಾಡಿ ಮಲಗಿ, ನಿಮ್ಮ ಮೊಣಕಾಲುಗಳು ಮಡಿಚಿ. ಪಾದಗಳು ನೆಲದ ಮೇಲೆ ಇರಲಿ. ಈಗ ನಿಮ್ಮ ಕೈಗಳನ್ನು ಆಕಾಶದತ್ತ ಚಾಚಿ, ಬೆರಳುಗಳು ಮೇಲ್ಮುಖವಾಗಿರಲಿ.

* ಉಸಿರನ್ನು ಬಿಡುತ್ತ ಅದೇ ಸ್ಥಿತಿಯಿಂದ ಮೇಲೆ ಬರಲು ಪ್ರಯತ್ನಿಸಿ.

* ಉಸಿರನ್ನು ಎಳೆದುಕೊಳ್ಳುತ್ತ ಮತ್ತೆ ಮೊದಲಿನ ಸ್ಥಿತಿಗೆ ಬನ್ನಿ.

ದಿನ 6

ದಿನ 6

ಈ ದಿನ ಉಪಾಹಾರಕ್ಕಾಗಿ ಹಸಿರು ಬೀನ್ಸ್, ಒಂದು ಪೂರ್ಣ ಮೊಟ್ಟೆ ಮತ್ತು ಎರಡು ಮೊಟ್ಟೆಯ ಬಿಳಿ ಭಾಗ ಹಾಗು ಟೊಮೇಟೊಗಳಿಂದ ಮಾಡಿದ ಪಲ್ಯವನ್ನು ಸೇವಿಸಬಹುದು. ಸ್ನ್ಯಾಕ್ಸ್ ಆಗಿ ಉರಿದ ಕೋಳಿಯ ಎದೆಯ ಮಾಂಸವನ್ನು ಸೇವಿಸಬಹುದು. ಮೀನನ್ನು ಸಹ ಸೇವಿಸಲು ಅಡ್ಡಿಯಿಲ್ಲ. ಆದರೆ ಯಾವುದೇ ಕಾರಣಕ್ಕು ಐದು ಬಾರಿ ಹಣ್ಣು ಮತ್ತು ತರಕಾರಿಗಳನ್ನು ಸೇವಿಸುವುದನ್ನು ಮರೆಯಬೇಡಿ. ನಡೆಯುವುದರಿಂದ ಹಿಡಿದು ಬಸ್ಕಿಗಳವರೆಗೆ ಎಲ್ಲಾ ವ್ಯಾಯಾಮಗಳನ್ನು ಮಾಡಿ.

* ನೀವು ಇದುವರೆಗು ಮಾಡುತ್ತಿದ್ದ ಮಲಗಿ ಮಾಡುವ ವ್ಯಾಯಾಮಗಳನ್ನು ಮತ್ತು ಬಸ್ಕಿಗಳ ಸಂಖ್ಯೆಯನ್ನು ಹೆಚ್ಚಿಸುವ ಮೂಲಕ ಕೊಬ್ಬನ್ನು ಬೇಗ ಕರಗಿಸಬಹುದು.

ದಿನ 7

ದಿನ 7

ಈ ದಿನ ಉಪಾಹಾರವಾಗಿ ಬೇಯಿಸಿದ ಸೊಪ್ಪು ಅಥವಾ ಟೊಮೇಟೊ ಜೊತೆಗೆ ಬೇಯಿಸಿದ ಅಥವಾ ಉರಿದ ಕೋಳಿ ಅಥವಾ ಬಾತು ಕೋಳಿಯ ಎದೆ ಮಾಂಸವನ್ನು ಸೇವಿಸಬಹುದು. ಬ್ರೆಜಿಲ್ ನಟ್ ಅಥವಾ ಕಲ್ಲಂಗಡಿ ಬೀಜ ಅಥವಾ ಉಗಿಯಲ್ಲಿ ಬೇಯಿಸಿದ ಬ್ರೊಕ್ಕೊಲಿಗಳನ್ನು ಸ್ನ್ಯಾಕ್ಸ್ ಆಗಿ ಸೇವಿಸಿ. ಈ ದಿನ ನಿಮ್ಮ ವ್ಯಾಯಾಮವನ್ನು ಏರೋಬಿಕ್ ವ್ಯಾಯಾಮವಾಗಿ ಬದಲಾಯಿಸಿಕೊಳ್ಳಬಹುದು.

* ವ್ಯಾಯಾಮವನ್ನು ಬದಲಾಯಿಸುವುದರಿಂದ ದೇಹದಲ್ಲಿ ಬದಲಾವಣೆಯಾಗುತ್ತದೆ. ಆಗ ಅದರಿಂದ ಜೀರ್ಣ ಕ್ರಿಯೆಯ ವೇಗವು ಇಮ್ಮಡಿಗೊಳ್ಳುತ್ತದೆ. ಇದರಿಂದ ಹೊಟ್ಟೆಯಲ್ಲಿರುವ ಕೊಬ್ಬು ಬೇಗ ಕರಗುತ್ತದೆ.

* 30 ನಿಮಿಷಗಳ ಕಾಲ ಏರೋಬಿಕ್ ವ್ಯಾಯಾಮವನ್ನು ಮಾಡಿ.

ದಿನ 8

ದಿನ 8

ಈ ದಿನ ಕಡಿಮೆ ಪೋಷಕಾಂಶವಿರುವ ಆಹಾರವನ್ನು ಸೇವಿಸಬೇಡಿ. ಈ ದಿನ ಉಪಾಹಾರಕ್ಕೆ ವೋಲ್ ವೀಟ್ ಬ್ರೆಡ್ ಮತ್ತು ಎರಡು ಮೊಟ್ಟೆಗಳ ಬಿಳಿ ಭಾಗದಿಂದ ಮಾಡಲಾದ ಆಮ್ಲೆಟ್ ಸೇವಿಸಿ. 10-12 ಲೋಟ ನೀರನ್ನು ಸೇವಿಸುವುದನ್ನು ಮುಂದುವರಿಸಿ ಹಣ್ಣುಗಳು ಇತ್ಯಾದಿಗಳಂತಹ ಆರೋಗ್ಯಕಾರಿ ಆಹಾರಗಳನ್ನು ಸೇವಿಸಿ.

* ಈ ದಿನ ನಿಮ್ಮ ವ್ಯಾಯಾಮದ ಬದಲಿಗೆ ಈಜಾಡಲು ಹೊರಡಬಹುದು.

ದಿನ 9

ದಿನ 9

ಈ ದಿನ ಮತ್ತೆ ಸಸ್ಯಾಹಾರಿ ದಿನ. ಕಡಿಮೆ ಕ್ಯಾಲೋರಿ ಇರುವ ತರಕಾರಿಗಳನ್ನು ಇವತ್ತು ಇಡೀ ದಿನ ಸೇವಿಸಬಹುದು. ಇದು ನಿಮ್ಮ ಜೀರ್ಣಾಂಗ ವ್ಯೂಹವನ್ನು ಸ್ವಚ್ಛಗೊಳಿಸುತ್ತದೆ. ಕೊಬ್ಬನ್ನು ಹೊರಹಾಕುತ್ತದೆ. ಒಳ್ಳೆಯ ಫಲಿತಾಂಶಕ್ಕಾಗಿ ಹೆಚ್ಚಿನ ನಾರಿನಂಶವಿರುವ ತರಕಾರಿಗಳನ್ನು ಸೇವಿಸಿ.

* ನಡೆದಾಡುವುದನ್ನು 40 ನಿಮಿಷಗಳವರೆಗೆ ಮುಂದುವರಿಸಿ.

* ಮಲಗಿ ಮಾಡುವ ವ್ಯಾಯಾಮ ಅಥವಾ ಬಸ್ಕಿ ಇಲ್ಲವೇ ಈಜು ಅಥವಾ ಏರೋಬಿಕ್ ಇವುಗಳಲ್ಲಿ ನಿಮಗೆ ಯಾವುದು ಬೇಕೋ ಅದನ್ನು ಆಯ್ಕೆ ಮಾಡಿಕೊಳ್ಳಬಹುದು.

ದಿನ 10

ದಿನ 10

ಈ ದಿನ ಉಪಾಹಾರಕ್ಕೆ ವೋಲ್ ಗ್ರೇನ್ ಆಹಾರವನ್ನು ಮತ್ತು ಹಣ್ಣುಗಳನ್ನು ಸೇವಿಸಬಹುದು. ಕಡಿಮೆ ಕೊಬ್ಬಿನ, ಹೆಚ್ಚಿನ ನಾರಿನಂಶವಿರುವ ಆಹಾರಗಳನ್ನು ಮತ್ತು ಸೂಪ್‍ಗಳನ್ನು ಸೇವಿಸುವುದನ್ನು ಮುಂದುವರಿಸಿ. ನಿಮ್ಮ ವರ್ಕ್‍ಔಟ್‍ಗೆ ವೈವಿಧ್ಯತೆಯನ್ನು ಅಳವಡಿಸಿಕೊಳ್ಳಿ. ಹಗ್ಗದ ಜೊತೆಗೆ ಜಂಪ್ ಮಾಡುವುದು ಅಥವಾ ಕಾಲು ಕಟ್ಟಿಕೊಂಡು ವ್ಯಾಯಾಮವನ್ನು ಮಾಡಬಹುದು. ಕಡಿಮೆ ಸಕ್ಕರೆ ಅಂಶ, ಕಡಿಮೆ ಕಾರ್ಬೋಹೈಡ್ರೇಟ್ ಇರುವ ಆಹಾರವನ್ನು ಸೇವಿಸಿ ನಿಮಗೆ ಬೇಕಾದ ಫಲಿತಾಂಶವನ್ನು ಪಡೆಯಬಹುದು.

ಹೀಗೆ 10 ದಿನದಲ್ಲಿ ನಿಮ್ಮ ಬೊಜ್ಜು ತುಂಬಿದ ಹೊಟ್ಟೆಯನ್ನು ಕರಗಿಸಿಕೊಳ್ಳಬೇಕೆ? ನಿಮ್ಮ ಇಡೀ ದೇಹಕ್ಕೆ ಒಂದು ಒಳ್ಳೆಯ ಸೌಂದರ್ಯ ನೀಡಬೇಕೆ? ಹಾಗಾದರೆ ಈ ಮೇಲೆ ನೀಡಲಾಗಿರುವ ಎಲ್ಲಾ ಅಂಶಗಳನ್ನು ಚಾಚೂ ತಪ್ಪದೆ ಪಾಲಿಸಿ, ಸುಂದರವಾಗಿ ಕಾಣುವಂತಹ ಸೌಂದರ್ಯ ನಿಮ್ಮದಾಗಿಸಿಕೊಳ್ಳಿ. ಕೇವಲ 10 ದಿನದ ಶ್ರಮದ ಮೂಲಕ ನಿಮ್ಮ ಬೊಜ್ಜು ಹೊಟ್ಟೆಯನ್ನು ಕರಗಿಸಿಕೊಳ್ಳಿ.

English summary

How To Get Flat Tummy In 10 Days

Losing tummy fat in 10 days is not an impossible task. With the proper changes in the diet, lifestyle and exercise it is possible to get a flat tummy within 10 days. It is necessary to use specific dietary and exercise strategies which target the abdominal area to lose tummy fat.
X
Desktop Bottom Promotion