For Quick Alerts
ALLOW NOTIFICATIONS  
For Daily Alerts

ಮಧುಮೇಹ, ಹೃದಯ ರೋಗಕ್ಕೆ ನಾರಿನ ಬೀಜಗಳು ಹೇಗೆ ಸಹಾಯಕಾರಿ?

By Poornima Heggade
|

ಆರೋಗ್ಯಕರ ಜೀವನಕ್ಕಾಗಿ ನಾವು ಸೇವಿಸುವ ಆಹಾರದ ಮೇಲೆ ಹೆಚ್ಚಿನ ಗಮನ ಹರಿಸಬೇಕಾದದ್ದು ಅತ್ಯಗತ್ಯ. ಇಂತಹ ಆರೋಗ್ಯಕರ ಆಹಾರಗಳು ಸಾಕಷ್ಟಿದ್ದು, ಅವುಗಳನ್ನು ನಮ್ಮ ನಿತ್ಯದ ಆಹಾರದಲ್ಲಿ ಅಳವಡಿಸಿಕೊಳ್ಳಬೇಕಾದದ್ದು ಅತಿ ಮುಖ್ಯ! ನಾರಿನ ಬೀಜಗಳೂ (ಅಗಸೆ ಬೀಜಗಳಂತಹ ನಾರಿನ ಬೀಜಗಳು) ಸೇರಿದಂತೆ ಹಲವು ಆರೋಗ್ಯಕರ ಪದಾರ್ಥಗಳನ್ನು ನಾವು ನಿತ್ಯದ ಜೀವನದಲ್ಲಿ ಬಳಸಬೇಕು.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಮಧುಮೇಹಿಗಳಿಗಾಗಿ ಪೋಷಕಾಂಶ ಭರಿತ ಸಸ್ಯಾಹಾರಿ

ತೆಳ್ಳಗಿರುವ, ಕಂದು ಬಣ್ಣದ, ಸಮೃದ್ಧ ಪೋಷಕಾಂಶಗಳನ್ನು ಒಳಗೊಂಡಿರುವ ನಾರಿನ ಬೀಜಗಳು, ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಅನೇಕ ಜೀವನಶೈಲಿ ರೋಗಗಳನ್ನು ನಿರ್ಮೂಲನೆ ಮಾಡಲು ಸಹಾಯಕವಾಗಿದೆ!

'ಉತ್ತಮ ಕೊಬ್ಬು ' ಎಂದು ಕರೆಯಲ್ಪಡುವ ನಾರಿನ ಬೀಜಗಳು, ಅವುಗಳಲ್ಲಿರುವ ಆಂಟಿಆಕ್ಸಿಡೆಂಟ್ಸ್ ( ಉತ್ಕರ್ಷಣ) ಮತ್ತು ಈಸ್ಟ್ರೊಜೆನ್ ಭರಿತ, ಒಮೆಗಾ -3 ಕೊಬ್ಬಿನ ಆಮ್ಲಗಳನ್ನು, ನಾರಿನ ಅಂಶವನ್ನು ಹೊಂದಿರುವುದರಿಂದ ಇದನ್ನು ವಾಸ್ತವವಾಗಿ ಆರೋಗ್ಯಕರವಾದದ್ದು ಎಂದು ಪರಿಗಣಿಸಲಾಗಿದೆ. ನಾರಿನ ಬೀಜಗಳನ್ನು ಬಳಸಿ ಹೋಗಲಾಡಿಸಬಹುದಾದ ಕೆಲವು ಖಾಯಿಲೆಗಳ ಬಗ್ಗೆ ಇಲ್ಲಿ ಹೇಳಲಾಗಿದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಇನ್ನು ಡಯಾಬಿಟಿಸ್ ಕಾಯಿಲೆಗೆ ಗುಡ್ ಬೈ ಹೇಳಿ!

ಡಯಾಬಿಟಿಸ್ (ಮಧುಮೇಹ):

ಡಯಾಬಿಟಿಸ್ (ಮಧುಮೇಹ):

ನಾರಿನ ಬೀಜಗಳಲ್ಲಿರುವ ಲಿಗ್ನಿನ್ ( Lignans), ಎರಡು ರೀತಿಯ ಮಧುಮೇಹ ಖಾಯಿಲೆಯಿರುವವರಲ್ಲಿ, ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ನಾರಿನ ಬೀಜಗಳನ್ನು ದೈನಿಕ ಆಹಾರದೊಂದಿಂಗೆ ಸೇವಿಸುವುದರಿಂದ, ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಸಮತೋಲಿತವಾಗಿ ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ. ಮಧುಮೇಹ ತಡೆಗಟ್ಟಲು ಹೆಚ್ಚಿನ ಸಲಹೆಗಳ ಬಗ್ಗೆ ಓದಿ.

ಹೃದಯ ಸಮಸ್ಯೆ/ಖಾಯಿಲೆ;

ಹೃದಯ ಸಮಸ್ಯೆ/ಖಾಯಿಲೆ;

ನಾರಿನ ಬೀಜಗಳ ಇನ್ನೊಂದು ಪ್ರಮುಖ ಪ್ರಯೋಜನವೆಂದರೆ ಇದರಲ್ಲಿರುವ ಆಂಟಿಆಕ್ಸಿಡೆಂಟ್ಸ್ (ಉತ್ಕರ್ಷಣ) ಗುಣ ರಕ್ತದೊತ್ತಡ ಪರಿಣಾಮಗಳನ್ನು ಕಡಿಮೆ ಮಾಡಿ, ವ್ಯಕ್ತಿಯ ಹೃದಯ ಬಡಿತವನ್ನು ಸುಸ್ತಿತಿಯಲ್ಲಿಡಲು ಸಹಾಯ ಮಾಡುತ್ತದೆ. ನಾರಿನಬೀಜಗಳು ಅಪಧಮನಿಗಳಲ್ಲಿ ಪ್ಲೇಕ್ ರಚನೆಯನ್ನು ಕಡಿಮೆ ಮಾಡುತ್ತವೆ ಮತ್ತು ಅಪಧಮನಿಗಳ ಗಟ್ಟಿಯಾಗುವ (ಕಠಿಣವಾಗುವ) ಅಪಾಯವನ್ನು ಕಡಿಮೆ ಮಾಡುತ್ತವೆ. ಅಲ್ಲದೆ ಎಲ್ ಡಿಎಲ್ ಮಟ್ಟ ಅಥವಾ 'ಕೆಟ್ಟ ಕೊಲೆಸ್ಟ್ರಾಲ್ ' ಮಟ್ಟವನ್ನು ಕಡಿಮೆ ಮಾಡುವುದರ ಮೂಲಕ ನಿಮ್ಮ ದೇಹವನ್ನು ಮಧುಮೇಹ, ಬೊಜ್ಜು ಮತ್ತು ಹೃದಯ ರೋಗಗಳಂತ ಖಾಯಿಲೆಯಿಂದ ಬಳಲುವುದನ್ನು ತಪ್ಪಿಸುತ್ತದೆ.

ಕ್ಯಾನ್ಸರ್:

ಕ್ಯಾನ್ಸರ್:

ನಾರಿನ ಬೀಜಗಳಲ್ಲಿರುವ ಆಂಟಿಆಕ್ಸಿಡೆಂಟ್ (ಉತ್ಕರ್ಷಣ) ಮತ್ತು ಒಮೆಗಾ -3 ಕೊಬ್ಬಿನ ಆಮ್ಲಗಳ ಅಂಶ, ಸ್ತನ ಕ್ಯಾನ್ಸರ್, ಪ್ರಾಸ್ಟೇಟ್ ಕ್ಯಾನ್ಸರ್ ಮತ್ತು ಕರುಳಿನ ಕ್ಯಾನ್ಸರ್ ವಿರುದ್ಧ ಹೋರಾಡಲು ಸಹಾಯಕವಾಗಿದೆ. ನಾರಿನ ಬೀಜಗಳಲ್ಲಿರುವ ಲಿಗ್ನಿನ್ ಅಂಶ ವಿಶೇಷವಾಗಿ ಹಾರ್ಮೋನ್ ಸೂಕ್ಷ್ಮ ಗಡ್ಡೆಗಳು ಉಂಟಾಗದಂತೆ ತಡೆಯುತ್ತವೆ. ಉದಾಹರಣೆಗೆ: ಈಸ್ಟ್ರೊಜೆನ್ ಸೆನ್ಸಿಟಿವ್ ಸ್ತನ ಗೆಡ್ಡೆಗಳನ್ನು ತಡೆಯುವುದು. ಇಲ್ಲಿ ಕ್ಯಾನ್ಸರ್ ಬಗೆಗಿನ ಎಲ್ಲಾ ಸಾಮಾನ್ಯ ಪ್ರಶ್ನೆಗಳಿಗೂ ತಜ್ಞ ವೈದ್ಯರ ಉತ್ತರ ಇಲ್ಲಿದೆ.

ಉರಿಯೂತ:

ಉರಿಯೂತ:

ನಾರಿನ ಬೀಜಗಳಲ್ಲಿ, ಒಮೇಗಾ 3 ಕೊಬ್ಬಿನ ಆಮ್ಲ, ಮತ್ತು ಲಿಗ್ನಿನ್ ಅಂಶಗಳ ಜೊತೆಗೆ ಇದರಲ್ಲಿರುವ ಎಎಲ್ಎ/ ALA (ಆಲ್ಫಾ ಲಿನೋಲೆನಿಕ್ ಆಮ್ಲ ) ಎಂಬ ಘಟಕ ದೇಹದಲ್ಲಿ ಉರಿಯೂತ ಮೇಲೆ ಪರಿಣಾಮ ಬೀರುತ್ತದೆ. ಇದು ಉರಿಯೂತವನ್ನು ಹೋಗಲಾಡಿಸುವುದರ ಜೊತೆಗೆ, ವಿಶೇಷವಾಗಿ ಸಂಧಿವಾತ ಮತ್ತು ಪಾರ್ಕಿನ್ಸನ್ ಖಾಯಿಲೆಯಂತಹ ಸಮಸ್ಯೆಯಿಂದ ನರಳುವ ರೋಗಿಗಳಿಗೆ ಪ್ರಯೋಜನಕಾರಿ.

ಹಾಟ್ ಫ್ಲಾಶಸ್:

ಹಾಟ್ ಫ್ಲಾಶಸ್:

ಹಾಟ್ ಫ್ಲಾಶಸ್, ಸಾಮಾನ್ಯವಾಗಿ ಮುಟ್ಟು ನಿಲ್ಲುತ್ತಿರುವ ಮಹಿಳೆಯರಿಗೆ ಸಂಬಂಧಿಸಿದ ಒಂದು ಸಮಸ್ಯೆ. ಈ ಸಮಸ್ಯೆಯನ್ನು ನಿಮ್ಮ ಆಹಾರದಲ್ಲಿ ಒಂದು ಚಮಚ ನಾರಿನ ಬೀಜಗಳನ್ನು ಸೇರಿಸಿ ಸೇವಿಸುವುದರ ಮೂಲಕ ಕಡಿಮೆ ಮಾಡಬಹುದು! ಒಂದು ಅಧ್ಯಯನದ ಪ್ರಕಾರ, ಈ ಮನೆಮದ್ದನ್ನು ಉಪಯೋಗಿಸುವುದರ ಮೂಲಕ ಹಾಟ್ ಫ್ಲಾಶಸ್ ಸಂಭವನೀಯತೆಯ ತೀವ್ರತೆಯನ್ನು 57% ನಷ್ಟು ಕಡಿಮೆಯಾಗಿದೆ ಎಂದು ತೋರಿಸಲಾಗಿದೆ. ಮತ್ತೆ, ನಾರಿನ ಬೀಜಗಳಲ್ಲಿರುವ ಆಂಟಿ ಆಕ್ಸಿಡೆಂಟ್ಸ್ (ಉತ್ಕರ್ಷಣ ನಿರೋಧಕ) ಗುಣ, ಹಾಟ್ ಫ್ಲಾಶಸ್ ಸಂಭವಕ್ಕೆ ಕಾರಣವಾಗುವ ಹಾರ್ಮೋನುಗಳ ಅಸಮತೋಲನವನ್ನು ನಿಯಂತ್ರಿಸುವಲ್ಲಿ ಸಹಾಯಕವಾಗಿದೆ. ಇಲ್ಲಿ ಋತುಬಂಧ ಲಕ್ಷಣಗಳ ಬಗ್ಗೆ ಕೆಲವು ಸಲಹೆಗಳನ್ನು ನೀಡಲಾಗಿದೆ.

ನಿಮ್ಮ ಆಹಾರದಲ್ಲಿ ನಾರಿನ ಬೀಜಗಳನ್ನು ಸೇರಿಸಲು ಸಲಹೆಗಳು:

ನಿಮ್ಮ ಆಹಾರದಲ್ಲಿ ನಾರಿನ ಬೀಜಗಳನ್ನು ಸೇರಿಸಲು ಸಲಹೆಗಳು:

ನೀವು ಹೆಚ್ಚು ಆರೋಗ್ಯಕರ ಪ್ರಯೋಜನಗಳನ್ನು ಪಡೆಯಲು, ಪ್ರತಿ ದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಚಮಚ ನಾರಗಸೆ/ಅಗಸೆ ಬೀಜದ ಪುಡಿಯನ್ನು ಸೇವಿಸಿ. ಅಥವಾ ಇದಕ್ಕೆ ಪರ್ಯಾಯವಾಗಿ, ನಿಮ್ಮ ಶಕ್ತಿ ಪಾನೀಯ (ಎನರ್ಜಿ ಪಾನೀಯ) ಅಥವಾ ತಾಜಾ ಹಣ್ಣಿನ ರಸದೊಂದಿಗೂ ಇದನ್ನು ಸೇರಿಸಿ ಸವಿಯಬಹುದು. ನಿಮ್ಮ ಅಡುಗೆಯಲ್ಲಿ ಇದನ್ನು ಸೇರಿಸಲು ಬಯಸಿದರೆ, ನೀವು ತಯಾರು ಮಾಡಿದ ಭಕ್ಷ್ಯಗಳ ಮೇಲೆ ನಾರಿನ ಬೀಜದ ಪುಡಿಯನ್ನು ಒಂದು ಚಮಚದಷ್ಟು ಸಿಂಪಡಿಸಿ. ಈ ಪುಡಿಯನ್ನು ನೇರವಾಗಿ ಬಿಸಿ ಎಣ್ಣೆಯೊಂದಿಗೆ ಸೇರಿಸಬೇಡಿ. ಏಕೆಂದರೆ ಇದು ಈ ನಿಮ್ಮ ಅಡುಗೆಯಲ್ಲಿ ಅಸಾಮಾನ್ಯ ಪರಿಮಳವನ್ನು ಉಂಟು ಮಾಡಬಹುದು. ಹಾಗೆಯೇ ಅಧಿಕ ಶಾಖದಲ್ಲಿ ನಾರಿನ ಬೀಜಗಳ ಪುಡಿಯನ್ನು ಬೆರೆಸಿದರೆ, ಈ ಪುಡಿಯಲ್ಲಿರುವ ಅನುಕೂಲಕರ ಲಕ್ಷಣಗಳನ್ನು ನಿಷ್ಕ್ರಿಯಗೊಳಿಸುತ್ತದೆ. ತಜ್ಞರು, ದಿನದಲ್ಲಿ ಎರಡು ಚಮಚಕ್ಕಿಂತ ಅಧಿಕವಾಗಿ ಈ ಪುಡಿಯನ್ನು ಆಹಾರದಲ್ಲಿ ಸೇರಿಸಬಾರದು ಎಂದು ಸಲಹೆ ನೀಡುತ್ತಾರೆ.

English summary

How flaxseeds can help control diabetes heart disease

Flaxseed is considered healthy due to the fact that they contain Omega-3 fatty acids, also known as ‘good fat’, Lignans, rich in antioxidants and estrogen content; and Fiber. Here are a few ailments flaxseed can help fight:
Story first published: Saturday, March 29, 2014, 16:51 [IST]
X
Desktop Bottom Promotion