For Quick Alerts
ALLOW NOTIFICATIONS  
For Daily Alerts

ದೇಹದಲ್ಲಿ ಕಂಡುಬರುವ ಸಣ್ಣ ಗಂಟುಗಳಿಂದ ಬೇಸತ್ತು ಹೋಗಿರುವಿರಾ?

By Arpitha Rao
|

ದೇದಲ್ಲಿ ಸಣ್ಣ ಗಂಟುಗಳ ರೀತಿ ಆಗುವುದು ದೊಡ್ಡವರು ಮತ್ತು ಮಕ್ಕಳಲ್ಲೂ ಕೂಡ ಸಾಮಾನ್ಯವಾಗಿಬಿಟ್ಟಿದೆ. ಮಾನವ ದೇಹದ ವೈರಸ್‌ಗಳು ಹಾನಿಕಾರಕವಲ್ಲದಿದ್ದರೂ ಈ ವಾರ್ಟ್ಸ್ ಬೇರೆಡೆಗೆಲ್ಲ ಹರಡುವ ಸಾಧ್ಯತೆ ಹೆಚ್ಚು. ಇವು ಚರ್ಮ,ಬಾಯಿ, ಜನನಾಂಗ, ಗುದನಾಳ ಎಲ್ಲಿ ಬೇಕಾದರೂ ಆಗಬಹುದು. ಚರ್ಮದ ಗಡ್ಡೆಗಳು ಎಂದು ಕರೆಯಲಾಗುವ ಈ ವಾರ್ಟ್ಸ್ ವಿವಿಧ ರೀತಿಯಲ್ಲಿ ಅಂದರೆ ಸಾಮಾನ್ಯ ವಾರ್ಟ್ಸ್, ಕಾಲಿನ ವಾರ್ಟ್ಸ್, ಫ್ಲಾಟ್ ವಾರ್ಟ್ಸ್, ಜನನಾಂಗ ಗಂಟು ಹೀಗೆ ಬೇರೆಬೇರೆ ರೀತಿಯಲ್ಲಿ ಕಾಣಿಸಿಕೊಳ್ಳಬಹುದು.

ಡಯಟಿಂಗ್ ಪ್ರಭಾವ ಬೀರದಿರಲು ಏಳು ಕಾರಣಗಳು

ಈ ಗಂಟುಗಳು ಒರಟಾಗಿ ಚರ್ಮದಿಂದ ಎದ್ದು ಬರುವಂತೆ ಪ್ರಾರಂಭವಾಗುತ್ತವೆ, ಇವುಗಳು ಕೈ,ಭುಜ,ಕಾಲುಗಳು,ಮುಖ ಮತ್ತು ನೆತ್ತಿಯ ಮೇಲೆ ಕೂಡ ಕಾಣಿಸಿಕೊಳ್ಳಬಹುದು.ಪ್ರಾಥಮಿಕವಾಗಿ ವೈರಸ್ ನಿಂದ ಹುಟ್ಟಿಕೊಳ್ಳುವ ಈ ಗಂಟುಗಳು, ಚರ್ಮದ ಮೇಲೆ ಸರಿಯಾಗಿ ಬೆಳೆಯಲು ಸಾಧ್ಯವಾಗದಿದ್ದಾಗ ಕೂಡ ಕಂಡುಬರುತ್ತದೆ. ಈ ರೀತಿ ಸಣ್ಣ ಗಂಟುಗಳು ಕಾಣಿಸಿಕೊಂಡಾಗ ಮನೆ ಮದ್ದಿನ ಮೂಲಕ ಕೂಡ ಗುಣಪಡಿಸಬಹುದು. ಅವುಗಳಲ್ಲಿ ಕೆಲವು ಮನೆಮದ್ದನ್ನು ಇಲ್ಲಿ ನೀಡಿದ್ದೇವೆ ಓದಿ ನೋಡಿ.

ಹೊಟ್ಟೆಯ ಕೊಬ್ಬು ಕರಗಿಸುವ ಅತ್ಯುತ್ತಮ 10 ಉಪಾಯಗಳು

ಅಗಸೆಬೀಜ:

ಅಗಸೆಬೀಜ:

ಸಣ್ಣ ಗಂಟುಗಳನ್ನು ಹೋಗಲಾಡಿಸಲು ಸಹಾಯಕ. ಅಗಸೇಪುಡಿಗೆ ಅಗಸೆ ಎಣ್ಣೆ ಬೆರಸಿ, ಜೇನು ಸೇರಿಸಿ ಗಂಟು ಇರುವ ಜಾಗಕ್ಕೆ ಹಚ್ಚಿ ನಂತರ ಬಟ್ಟೆಯಲ್ಲಿ ಸುತ್ತಿ. ಪ್ರತಿದಿನ ಹೀಗೆ ಹೊಸದಾಗಿ ತಯಾರಿಸಿಕೊಂಡು ಹಚ್ಚಬೇಕು.

ಬೆಳ್ಳುಳ್ಳಿ:

ಬೆಳ್ಳುಳ್ಳಿ:

ಇದಕ್ಕೆ ಇನ್ನೊಂದು ಪರಿಣಾಮಕಾರಿ ಮದ್ದೆಂದರೆ ಬೆಳ್ಳುಳ್ಳಿ, ಬೆಳ್ಳುಳ್ಳಿಯನ್ನು ಗಂಟು ಇರುವ ಜಾಗಕ್ಕೆ ಹಚ್ಚಿ, ಮತ್ತು ಬಟ್ಟೆಯಿಂದ ಸುತ್ತಿ.

ಪೈನಾಪಲ್:

ಪೈನಾಪಲ್:

ಪೈನಾಪಲ್ ಹಣ್ಣನ್ನು ಕತ್ತರಿಸಿದ ತಕ್ಷಣ ಗಂಟು ಇರುವ ಜಾಗಕ್ಕೆ ಹಚ್ಚಿ.ದಿನಕ್ಕೆ ಸಾಕಷ್ಟು ಬಾರಿ ಹಚ್ಚಿ ಇದರಿಂದ ಗಂಟು ಬೇಗ ಗುಣವಾಗುತ್ತದೆ.

ಅಂಜೂರ

ಅಂಜೂರ

ಅಂಜೂರದ ಬೇರನ್ನು ಹಚ್ಚಿ.ಇದರಿಂದ ಸಣ್ಣ ಗಂಟು(ವಾರ್ಟ್ಸ್)ಹೋಗಲಾಡಿಸಬಹುದು.

ಈರುಳ್ಳಿ:

ಈರುಳ್ಳಿ:

ಒಂದು ರಾತ್ರಿಪೂರ್ತಿ ವಿನೆಗರ್ ನಲ್ಲಿ ಈರುಳ್ಳಿಯನ್ನು ನೆನೆಸಿಡಿ.ಬೆಳಗ್ಗೆ ನೆನೆಸಿಟ್ಟ ಈರುಳ್ಳಿ ಹೋಳನ್ನು ಗಂಟಿನ ಮೇಲಿಟ್ಟು ಬಟ್ಟೆ ಸುತ್ತಿ.

ಕರ್ಪೂರದ ತೈಲ:

ಕರ್ಪೂರದ ತೈಲ:

ಕರ್ಪೂರದ ತೈಲವನ್ನು ದಿನದಲ್ಲಿ ಸಾಕಷ್ಟು ಬಾರಿ ಸವರುವುದರಿಂದ ಗಂಟು ಹೋಗುತ್ತವೆ.

ಕ್ಯಾಸ್ಟರ್ ಎಣ್ಣೆ:

ಕ್ಯಾಸ್ಟರ್ ಎಣ್ಣೆ:

ದಿನದಲ್ಲಿ ಎರಡು ಬಾರಿ ಕ್ಯಾಸ್ಟರ್ ಎಣ್ಣೆಯನ್ನು ಹಚ್ಚುವುದರಿಂದ ಚರ್ಮ ಮೃದುವಾಗುತ್ತದೆ ಮತ್ತು ಗಂಟು ಕರಗುತ್ತದೆ.

ಸೀಮೆಸುಣ್ಣ ಅಥವಾ ಆಲೂಗಡ್ಡೆ:

ಸೀಮೆಸುಣ್ಣ ಅಥವಾ ಆಲೂಗಡ್ಡೆ:

ಸೀಮೆಸುಣ್ಣ ಅಥವಾ ಆಲೂಗಡ್ಡೆಯಿಂದ ಉಜ್ಜುವುದರಿಂದ ಗಂಟು ಹೋಗಲಾಡಿಸಬಹುದು.

ಚಹಾ ಸೊಪ್ಪಿನ ಎಣ್ಣೆ:

ಚಹಾ ಸೊಪ್ಪಿನ ಎಣ್ಣೆ:

ಚಹಾ ಸೊಪ್ಪಿನ ಎಣ್ಣೆಯನ್ನು ಪ್ರತಿದಿನ ವಾರ್ಟ್ಸ್ ಇರುವ ಜಾಗಕ್ಕೆ ಹಚ್ಚಿದರೆ,ಬೇಗ ಕಡಿಮೆಯಾಗುತ್ತದೆ.

ಬಿಸಿನೀರು:

ಬಿಸಿನೀರು:

ಪ್ರತಿದಿನ ಸಣ್ಣ ಗಂಟಾಗಿರುವ ಜಾಗವನ್ನು ಬಿಸಿನೀರಿನಲ್ಲಿ 15 ರಿಂದ 20 ನಿಮಿಷ ಅದ್ದಿಡಿ, ನಂತರ ವಿನೆಗರ್ ಅನ್ನು ಹತ್ತಿಯಲ್ಲಿ ನೆನೆಸಿ ಈ ಜಾಗಕ್ಕೆ ಸವರಿ, ಒಣಗಲು ಬಿಡಿ. ನಂತರ ನೀರಿನಲ್ಲಿ ತೊಳೆದು ಒರೆಸಿಕೊಳ್ಳಿ.

ಬಾಳೆಹಣ್ಣಿನ ಸಿಪ್ಪೆ:

ಬಾಳೆಹಣ್ಣಿನ ಸಿಪ್ಪೆ:

ಸೋಂಕು ತಗುಲಿದ ಭಾಗಕ್ಕೆ ಬಾಳೆಹಣ್ಣಿನ ಸಿಪ್ಪೆಯನ್ನು ಸುತ್ತಿ.ಪ್ರತಿ 12 ರಿಂದ 24 ಗಂಟೆಗಳಿಗೊಮ್ಮೆ ಸಿಪ್ಪೆಯನ್ನು ಬದಲಾಯಿಸಿ.

English summary

Home Remedy for Warts

Warts have become a common problem among adults as well as children. classified within the Human Papilloma Viruses, though harmless, warts have the capability of spreading to all the parts of the body.
Story first published: Tuesday, May 13, 2014, 12:43 [IST]
X
Desktop Bottom Promotion