For Quick Alerts
ALLOW NOTIFICATIONS  
For Daily Alerts

ಮಂಡಿ ನೋವಿಗೆ ಇಲ್ಲಿದೆ ನೋಡಿ ಸುಲಭ ಪರಿಹಾರ!

|

ಮಂಡಿ ನೋವು ಹೆಚ್ಚಾಗಿ ಎಲ್ಲರನ್ನೂ ಕಾಡುವ ಒಂದು ಸಮಸ್ಯೆಯಾಗಿದೆ. ಹೆಚ್ಚಾಗಿ ವಯಸ್ಸಾದವರನ್ನು ಹಣ್ಣು ಮಾಡುವ ಈ ಕಾಯಿಲೆ ಈಗ 30 ರ ಆಸುಪಾಸಿನವರನ್ನೂ ಕಾಡುತ್ತಿದೆ.

ಇದಕ್ಕೆ ಮುಖ್ಯ ಕಾರಣ ಮಂಡಿಯನ್ನು ಬಲವಾಗಿ ಹಿಡಿದಿಡುವಂತಹ ಧಿರಿಸುಗಳು ಮತ್ತು ಸೆಳೆತವಾಗಿದೆ. ಮೊದಲಿಗೆ ಮಂಡಿ ನೋವು ಸಾಧಾರಣವಾಗಿದ್ದು ಕ್ರಮೇಣ ಅದು ತೀವ್ರವಾಗುತ್ತದೆ ನಂತರ ಸಹಿಸಲಾಗದ ವೇದನೆಗೆ ಅದು ಮಾರ್ಪಡುತ್ತದೆ. ವಯಸ್ಸು, ಗಾಯ ಹಾಗೂ ಸಂಧಿವಾತ ಮಂಡಿ ನೋವಿಗೆ ಮುಖ್ಯ ಕಾರಣವಾಗಿದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಮೊಣಕಾಲು ನೋವು ನಿವಾರಣೆಗೆ ಸಲಹೆಗಳು

ಈ ನೋವನ್ನು ಹೋಗಲಾಡಿಸಲು ನೀವು ಕೆಲವೊಂದು ವ್ಯಾಯಾಮಗಳ ಮೊರೆ ಹೋಗುವುದು ಅತ್ಯವಶ್ಯಕವಾಗಿದೆ. ಕೆಲವೊಂದು ದೈಹಿಕ ವ್ಯಾಯಾಮಗಳು ಈ ದಿಶೆಯಲ್ಲಿ ಪರಿಣಾಮಕಾರಿಯಾಗಲಿವೆ.

ವ್ಯಾಯಾಮ ಮಾತ್ರವಲ್ಲದೆ ಕೆಲವೊಂದು ಮನೆ ಮದ್ದುಗಳ ಶುಶ್ರೂಷೆ ಕೂಡ ಮಂಡಿನೋವಿಗೆ ಅಗತ್ಯವಾಗಿರುತ್ತದೆ. ಉದಾಹರಣೆಗೆ ನಿಮ್ಮ ನಿತ್ಯದ ಆಹಾರದಲ್ಲಿ ಈರುಳ್ಳಿ, ಕ್ಯಾರೇಟ್, ಮೆಂತೆ ಬೀಜಗಳನ್ನು ಸಾಕಷ್ಟು ಪ್ರಮಾಣದಲ್ಲಿ ಸೇವಿಸುವುದೂ ಕೂಡ ಮಂಡಿ ನೋವಿಗೆ ತುರಂತ ಉಪಶಮನವನ್ನು ನೀಡುತ್ತದೆ.

ಸರಿಯಾದ ಪ್ರಮಾಣಬದ್ಧವಾದ ಡಯೆಟ್ ಅನ್ನು ಅನುಸರಿಸುವುದೂ ಕೂಡ ನೋವಿನ ಉಪಶಮನಕ್ಕೆ ಸಹಕರಿಸುತ್ತದೆ ಎಂಬುದು ನಿಮ್ಮ ಗಮನದಲ್ಲಿರಲಿ. ವೈದ್ಯರ ಸಲಹೆಗಳು ಕೆಲವೊಂದು ಮಾತ್ರೆಗಳು ಕೂಡ ಮಂಡಿ ನೋವನ್ನು ಉಪಶಮನ ಮಾಡುತ್ತದೆ. ನೈಸರ್ಗಿಕವಾಗಿ ಮಂಡಿ ನೋವನ್ನು ನಿವಾರಿಸುವ ಕೆಲವೊಂದು ಮನೆಮದ್ದುಗಳನ್ನು ನಾವಿಲ್ಲಿ ನೀಡಿದ್ದೇವೆ. ಅವುಗಳನ್ನು ಬಳಸಿ ನೋವಿನಿಂದ ಮುಕ್ತಿ ಪಡೆಯಿರಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಕಂಗಾಲಾಗದಿರಿ ಕೀಲು ನೋವಿಗೆ: ಇಲ್ಲಿದೆ ಶೀಘ್ರ ಪರಿಹಾರ

ಮೆಂತೆ ಬೀಜಗಳು:

ಮೆಂತೆ ಬೀಜಗಳು:

ರಾತ್ರಿ ಪೂರ್ತಿ ಮೆಂತೆ ಬೀಜಗಳನ್ನು ನೀರಿನಲ್ಲಿ ನೆನೆಸಿಡಿ. ನೀರನ್ನು ಬಸಿದು ಬೀಜಗಳನ್ನು ಅಗೆಯಿರಿ. ಮಂಡಿ ನೋವಿಗೆ ಇದು ಸರಳ ಪರಿಹಾರವಾಗಿದೆ. ಮೆಂತೆ ಬೀಜವನ್ನು ರುಬ್ಬಿ ಪೇಸ್ಟ್‌ನಂತೆ ಮಾಡಿಕೊಂಡು ಮಂಡಿಗೆ ಹಚ್ಚುವುದು ಕೂಡ ತಕ್ಷಣ ಶಮನವನ್ನು ನೀಡುತ್ತದೆ.

ಈರುಳ್ಳಿ ಸೇವನೆ:

ಈರುಳ್ಳಿ ಸೇವನೆ:

ಸಲ್ಫರ್ ಹಾಗೂ ಉತ್ಕರ್ಷಣ ನಿರೋಧಿ ಗುಣಗಳಿಂದ ಶ್ರೀಮಂತವಾಗಿರುವ ಈರುಳ್ಳಿ ನೋವನ್ನು ಉಂಟು ಮಾಡುವ ಎಂಜೀಮ್‌ಗಳನ್ನು ನಿಯಂತ್ರಿಸುತ್ತದೆ. ಜೀರ್ಣಕ್ರಿಯೆಯನ್ನು ಸುಲಭಗೊಳಿಸುವ ಈರುಳ್ಳಿ ಕರುಳಿನ ಚಲನೆಗೂ ಉತ್ತಮವಾಗಿದೆ.

ಕ್ಯಾರೇಟ್:

ಕ್ಯಾರೇಟ್:

ಮಂಡಿ ನೋವಿಗೆ ಕ್ಯಾರೇಟ್ ಮದ್ದೆಂಬುದು ಚೀನಾದ ಪುರಾತನ ವೈದ್ಯ ಶಾಸ್ತ್ರ ಹೇಳುತ್ತದೆ. ಕ್ಯಾರೇಟ್ ಅಸ್ಥಿರಜ್ಜುಗಳನ್ನು ಪಾಲನೆ ಮಾಡಿ ಮಂಡಿ ನೋವನ್ನು ನಿವಾರಿಸುತ್ತದೆ. ಹಸಿಯಾಗಿ ಇಲ್ಲವೇ ಬೇಯಿಸಿ ಕ್ಯಾರೇಟ್ ಅನ್ನು ಸೇವಿಸಿ.

ತೂಕ ನಿಯಂತ್ರಣ:

ತೂಕ ನಿಯಂತ್ರಣ:

ನಿಮ್ಮ ಮಂಡಿ ನೋವಿಗೆ ನೀವು ತೆಗೆದುಕೊಳ್ಳಬೇಕಾದ ಕ್ರಮವೆಂದರೆ ತೂಕ ಇಳಿಸುವುದಾಗಿದೆ. ಅತಿಯಾದ ತೂಕ ಮಂಡಿಗಳ ಮೇಲೆ ಒತ್ತಡ ಹೇರುವುದರಿಂದ ಮಂಡಿ ನೋವು ಉದ್ಭವಿಸುತ್ತದೆ. ಆದ್ದರಿಂದ ತೂಕವನ್ನು ಇಳಿಸಿಕೊಳ್ಳುವುದು ತುಂಬಾ ಮುಖ್ಯವಾಗಿದೆ.

ತೆಂಗಿನೆಣ್ಣೆಯ ಮಸಾಜ್:

ತೆಂಗಿನೆಣ್ಣೆಯ ಮಸಾಜ್:

ಬೆಚ್ಚಗಿನ ತೆಂಗಿನೆಣ್ಣೆಯನ್ನು ನೋವಿರುವ ಮಂಡಿಗೆ ಮಸಾಜ್ ಮಾಡುವುದೂ ಕೂಡ ಮಂಡಿ ನೋವಿನಿಂದ ತುರಂತ ಪರಿಹಾರವನ್ನು ಒದಗಿಸುತ್ತದೆ. ಉಗುರು ಬೆಚ್ಚನೆಯ ತೆಂಗಿನೆಣ್ಣೆಯಿಂದ ಮಸಾಜ್ ಮಾಡುವುದರಿಂದ ನೋವಿನಿಂದ ತುರ್ತು ಪರಿಹಾರ ನಿಮ್ಮದಾಗುತ್ತದೆ.

ಹರ್ಬಲ್ ಮಸಾಜ್:

ಹರ್ಬಲ್ ಮಸಾಜ್:

ಬಾತು ಎಲೆಗಳನ್ನು ಜಜ್ಜಿ ಅದರಿಂದ ರಸವನ್ನು ತೆಗೆದು ನೋವಿರುವ ಮಂಡಿಗೆ ಅದರಿಂದ ಮಸಾಜ್ ಮಾಡಿ. ಬೆಚ್ಚಗಿನ ನೀರಿನೊಂದಿಗೆ ಬಾತು ರಸವನ್ನು ನಿಮಗೆ ಸೇವಿಸಬಹುದು.

ಅರಶಿನ ಬೆರೆತ ಹಾಲು ಸೇವನೆ:

ಅರಶಿನ ಬೆರೆತ ಹಾಲು ಸೇವನೆ:

ಅರಶಿನ ಬೆರೆತ ಹಾಲು ಸೇವನೆ ಮಂಡಿ ನೋವಿಗೆ ಉಪಶಮನವನ್ನು ಒದಗಿಸುವ ಒಂದು ಮನೆಮದ್ದಾಗಿದ್ದು ನಿಮಗೆ ತಕ್ಷಣ ಆರಾಮವನ್ನು ನೀಡುತ್ತದೆ. ದಿನವೂ ಅರಶಿನ ಬೆರೆತ ಹಾಲನ್ನು ಕುಡಿಯಿರಿ. ಈ ಸಾಂಬಾರು ಪದಾರ್ಥವು ಉತ್ಕರ್ಷಣ ನಿರೋಧಿ, ಆಂಟಿಸೆಪ್ಟಿಕ್ ಆಗಿದೆ. ಹಾಲು ಮೂಳೆಗಳಿಗೆ ಅತ್ಯುತ್ತಮ.

ಯೋಗ:

ಯೋಗ:

ಮಂಡಿಯಲ್ಲಿರುವ ನೋವನ್ನು ಉಪಶಮನ ಮಾಡಲು ನೈಸರ್ಗಿಕವಾಗಿರುವ ಕೆಲವೊಂದು ಯೋಗ ಭಂಗಿಗಳನ್ನು ನಿತ್ಯವೂ ಅಭ್ಯಾಸ ಮಾಡಿ. ಯೋಗ ತಜ್ಞರು ಅಥವಾ ವೈದ್ಯರ ಮುಖೇನ ಕೆಲವೊಂದು ಯೋಗ ಭಂಗಿಗಳನ್ನು ನೋವು ನಿವಾರಣೆಗಾಗಿ ನೀವು ಅಭ್ಯಾಸ ಮಾಡಬಹುದು. ಕೆಲವೊಮ್ಮೆ ವಿಪರೀತ ಮಂಡಿ ನೋವಿರುವ ವ್ಯಕ್ತಿಗಳಿಗೆ ಆಸನಗಳನ್ನು ಮಾಡಬಾರದೆಂದು ವೈದ್ಯರು ಸೂಚಿಸಿರುತ್ತಾರೆ. ಆದ್ದರಿಂದ ವೈದ್ಯರ, ತಜ್ಞರ ಸಲಹೆ ಅತ್ಯಗತ್ಯ.

English summary

Home Remedies To Reduce Joint Knee Pain

Knee joint pain is the most common health problems of many people. Although older people suffer from it the most, these days young men in their late 30s are also becoming victims to knee joint pain.
Story first published: Friday, April 4, 2014, 12:35 [IST]
X
Desktop Bottom Promotion