For Quick Alerts
ALLOW NOTIFICATIONS  
For Daily Alerts

ಜೀರ್ಣಕ್ರಿಯೆ ಸಮಸ್ಯೆಯನ್ನು ಮನೆಮದ್ದು ಮೂಲಕ ಬಗೆಹರಿಸಿಕೊಳ್ಳಿ!

|

ನಿಮ್ಮ ಮೂತ್ರ ಪಿಂಕ್/ಕೆಂಪು ಬಣ್ಣಕ್ಕೆ ತಿರುಗಿದರೆ ನಿಮಗೆ ಲೋ ಸ್ಟಮಕ್ ಆಸಿಡ್ ಅಥವಾ ಹೊಟ್ಟೆಯ ಕಡಿಮೆ ಆಮ್ಲೀಯತೆ ಇದ್ದಂತೆ. ಜೀರ್ಣಕ್ರಿಯೆಯಲ್ಲಿ ಮುಖ್ಯವಾದ ಮೊದಲ ಹಂತ ಹೊಟ್ಟೆ ಆಮ್ಲೀಯತೆಯಾಗಿದೆ. ಇದು ಸಾಕಷ್ಟಿಲ್ಲದಿದ್ದರೆ ನಿಮಗೆ ಬಿ12 ಅನ್ನು ಹೀರಿಕೊಳ್ಳಲಾಗುವಿದಿಲ್ಲ, ಮತ್ತು ಝಿಂಕ್ ಮತ್ತು ಇತರ ಕೆಲವು ನ್ಯೂಟ್ರಿಯಂಟ್ಸ್‌ಗಳನ್ನು ಗ್ರಹಿಸುವಲ್ಲಿ ನಿಮಗೆ ಸಮಸ್ಯೆ ತಲೆದೋರುತ್ತದೆ.

ಹೊಟ್ಟೆಯಲ್ಲಿ ಕಡಿಮೆ ಆಮ್ಲೀಯತೆ ಉಂಟಾಗುವುದಕ್ಕೆ ಹಲವಾರು ಕಾರಣಗಳಿದ್ದು, ದೈಹಿಕ ಚಟುವಟಿಕೆಗೆ ಇದು ನಿರ್ಬಂಧವನ್ನು ಹೇರುತ್ತದೆ. ಪೋಷಕಾಂಶಗಳ ಅಭಾವ ನಿಮ್ಮನ್ನು ಕಾಡಬಹುದು. ಆಮ್ಲೀಯತೆಯ ಪ್ರಮಾಣ ಕಡಿಮೆಯಾದರೆ ಹಲವಾರು ಸಮಸ್ಯೆಗಳು ನಿಮ್ಮ ಆರೋಗ್ಯದ ಮೇಲೆ ಉಂಟಾಗುತ್ತವೆ.

ಆಹಾರದಲ್ಲಿನ ಮೂಲ ಅಂಶಗಳನ್ನು ಗ್ರಹಿಸುವಲ್ಲಿ ಕಡಿಮೆ ಆಮ್ಲೀಯತೆ ವಿಫಲಗೊಳ್ಳುತ್ತದೆ. ಜೀರ್ಣಕ್ರಿಯೆ ನಿಧಾನಗೊಂಡು ಮಲಬದ್ಧತೆ, ವಾಯು, ಹೊಟ್ಟೆ ಊದುವಿಕೆ ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ಇಲ್ಲಿ ನಾವು ನೀಡಿರುವ ಕೆಲವು ವಿಧಾನಗಳನ್ನು ಅನುಸರಿಸುವ ಮೂಲಕ ಆಮ್ಲೀಯತೆ ಸಮಸ್ಯೆಯನ್ನು ನಿಮಗೆ ನಿಯಂತ್ರಿಸಬಹುದಾಗಿದೆ.

Home Remedies For Low Stomach Acid

ಜೀರ್ಣಕ್ರಿಯೆ ಸುಧಾರಿಸುವ ಉತ್ತಮ ಆಹಾರಗಳು

ನಿಮ್ಮ ಹೊಟ್ಡೆಯಲ್ಲಿ ಆಮ್ಲೀಯತೆ ಸಾಕಷ್ಟಿಲ್ಲದಿದ್ದರೆ, ಪ್ರೋಟೀನ್‌ಗಳು ಸೂಕ್ತವಾಗಿ ಕರಗುವುದಿಲ್ಲ, ಹಾಗೂ ಸಣ್ಣ ಕರುಳಲ್ಲಿ ಅವುಗಳು ತೊಂದರೆಯನ್ನುಂಟು ಮಾಡಿ ರಕ್ತಪ್ರವಾಹದಲ್ಲಿ ಪೂರ್ಣವಾಗಿ ಹೀರಲ್ಪಡುತ್ತವೆ.

ಆರೋಗ್ಯ ಸಮಸ್ಯೆಗಳನ್ನು ಹೆಚ್ಚು ಮಾಡುವ ಮಿನರಲ್ ಕೊರತೆಗೆ ಲೋ ಸ್ಟಮಕ್ ಆಸಿಟ್ ಹೊಟ್ಟೆಯ ಕಡಿಮೆ ಆಮ್ಲೀಯತೆ ಕಾರಣವಾಗುತ್ತದೆ. ನಿಮ್ಮ ದೇಹದ ಆರೋಗ್ಯಕ್ಕೆ ಬೇಕಾಗಿರುವುದು ಸೂಕ್ತ ಹಾಗೂ ಪ್ರಮಾಣಬದ್ಧವಾದ ಹೊಟ್ಟೆಯ ಆಮ್ಲೀಯ ಮಟ್ಟವಾಗಿದೆ.

ಕಡಿಮೆ ಆಮ್ಲೀಯತೆಯ ಸಾಮಾನ್ಯ ರೋಗಲಕ್ಷಣಗಳೆಂದರೆ ವಿಪರೀತ ಬೆಲ್ಚಿಂಗ್ ಅಥವಾ ವಾಯು ನಿರ್ದಿಷ್ಟವಾಗಿ ಊಟದ ನಂತರ, ಮಲ ಅವ್ಯವಸ್ಥೆ, ಹೊಟ್ಟೆ ಊದುವುದು, ಎದೆಯುರಿ (ಹೆಚ್ಚು ಪ್ರಮಾಣದ ಹೊಟ್ಟೆ ಆಮ್ಲೀಯತೆಯಿಂದ ಉಂಟಾಗಬಹುದು), ಒಣ ತ್ವಚೆ, ಕಬ್ಬಿಣದ ಕೊರತೆ, ಮಲದಲ್ಲಿ ಕರಗದ ಆಹಾರಗಳು, ತೀವ್ರ ಬಳಲಿಕೆ ಇತ್ಯಾದಿ.

ಆಹಾರದಲ್ಲಿ ಸಕ್ಕರೆಯ ಪ್ರಮಾಣವನ್ನು ಕಡಿಮೆಯಾಗುವುದು ನೈಸರ್ಗಿಕವಾಗಿ ಹೊಟ್ಟೆಯ ಆಮ್ಲೀಯತೆಯನ್ನು ಸುಧಾರಿಸುವ ಉತ್ತಮ ವಿಧಾನವಾಗಿದೆ, ಹೆಚ್ಚು ಪ್ರಕ್ರಿಯಿಸಿದ ಆಹಾರಗಳು ಅಂದರೆ ಫಾಸ್ಟ್ ಫುಡ್‌ಗಳನ್ನು ನಿರ್ಲಕ್ಷಿಸಬೇಕು ಮತ್ತು ಪೋಷಕಾಂಶವುಳ್ಳ ಆಹಾರ ಹಾಗೂ ಪಾನೀಯವನ್ನು ನಿಮ್ಮ ಆಹಾರದಲ್ಲಿ ತೆಗೆದುಕೊಳ್ಳಿ.

ಜೀರ್ಣಕ್ರಿಯೆ ಸರಿಯಾಗಿ ನಡೆಯಲು ಟಾಪ್ 20 ಟಿಪ್ಸ್

ಈ ವಿಧಾನದಲ್ಲಿ ನಿಮ್ಮ ಆಹಾರ ಪದ್ಧತಿಯನ್ನು ಬದಲಾಯಿಸುವುದು ಮತ್ತು ಸುಧಾರಿಸುವುದು ಕ್ಲುಪ್ತತೆ ಹಾಗೂ ನಿಮ್ಮ ಹೊಟ್ಟೆಯನ್ನು ಬಲಪಡಿಸುತ್ತದೆ, ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.

ನೈಸರ್ಗಿಕ ಕ್ಷಾರೀಯ/ಇಲೆಕ್ಟ್ರೋಲೈಟ್ ಅಂಶವನ್ನು ದೇಹಕ್ಕೆ ತೆಗೆದುಕೊಳ್ಳುವುದು, ಅಂದರೆ ಕೋರಲ್ ಕ್ಯಾಲ್ಶಿಯಂ, ಹೊಟ್ಟೆ ಹಾಗೂ ದೇಹವನ್ನು ಬಲಯುತಗೊಳಿಸುವಲ್ಲಿ ಸಹಕಾರಿಯಾಗಿವೆ, ಕಡಿಮೆ ಆಮ್ಲೀಯತೆ ಸಮಸ್ಯೆ ಉಂಟಾದಾಗ ಸಂಭವಿಸುವ ಯಾವುದೇ ಸಮಸ್ಯೆಗಳನ್ನು ಸಹ ಸಂಪೂರ್ಣ ವ್ಯವಸ್ಥೆಯನ್ನು ನಿಯಂತ್ರಿಸುವ ಮೂಲಕ, ಈ ಆಹಾರ ಪದ್ಧತಿಯು ಕಾಪಾಡುತ್ತದೆ.

ನಿಮಗುಂಟಾಗಿರುವ ಸಮಸ್ಯೆ ಇದಾಗಿದ್ದರೆ ಅಥವಾ ಪದೇ ಪದೇ ದೀರ್ಘಕಾಲದ ಅನಾರೋಗ್ಯ ಮತ್ತು ಕಿರಿಕಿರಿ ನಿಮಗುಂಟಾದರೆ, ಸಮಸ್ಯೆಯು ಅಂತಿಮವಾಗಿ ನಿಮ್ಮ ಆರೋಗ್ಯ, ಅಥವಾ ನಿಮ್ಮ ಹೊಟ್ಟೆಯ ಅನಾರೋಗ್ಯ, ಮತ್ತು ನಿಮ್ಮ ಪ್ರಸ್ತುತ ಆರೋಗ್ಯವನ್ನು ಲೆಕ್ಕಿಸದೆ ಕಾಡುತ್ತದೆ ಈ ಆಹಾರ ಪದ್ಧತಿಗಳನ್ನು ಅನುಸರಿಸುವುದು ನಿಮ್ಮ ಆರೋಗ್ಯವನ್ನು ಸುಧಾರಿಸಿ ನಿಮ್ಮ ಭವಿಷ್ಯದ ಆರೋಗ್ಯವನ್ನೂ ಉತ್ತಮಗೊಳಿಸುತ್ತದೆ.

English summary

Home Remedies For Low Stomach Acid

Stomach acid is play a very important first step in digestion. Without enough, you can't absorb B12, and you have trouble absorbing zinc as well as several other nutrients.
Story first published: Wednesday, April 23, 2014, 18:01 [IST]
X
Desktop Bottom Promotion