For Quick Alerts
ALLOW NOTIFICATIONS  
For Daily Alerts

ತಿಂಗಳ ಮುಟ್ಟಿನ ತಡವಾಗುವಿಕೆಗಾಗಿ ಮನೆಮದ್ದುಗಳು

|

ಕೆಲವು ಧಾರ್ಮಿಕ ಸಮಾರಂಭ, ಪ್ರವಾಸಕ್ಕೆ ಹೋಗಲು ಹೆಣ್ಣು ತಾನು ಹೊರಗಾಗುವುದು ತಡವಾಗಲಿ ಎಂದು ಬಯಸುತ್ತಾಳೆ. ಹೀಗೆ ಬಯಸುವುದು ಸಮಾರಂಭದಲ್ಲಿ ತಾನೂ ಭಾಗಿಯಾಗಬೇಕೆಂಬ ಆಸೆಯಿಂದ ಮತ್ತು ಸಮಾರಂಭವಿರುವ ಮನೆಯಲ್ಲಿ ಹೆಣ್ಣು ಹೊರಗಾಗುತ್ತಾಳೆ ಎಂದರೆ ಅಪಶಕುನವೆಂದೇ ಭಾವಿಸುತ್ತಾರೆ.

ಆದರೆ ಕೆಲವು ಹೆಂಗಸರಿಗೆ ತಿಂಗಳ ಮುಟ್ಟಿನ ಸಮಯ ಮೀರುವುದು ಸಾಮಾನ್ಯವಾಗಿರುತ್ತದೆ. ಇದರಿಂದ ಅವರಿಗೆ ತಾವು ಬಯಸಿದಲ್ಲೆಲ್ಲಾ ಹೋಗಲು ಸಾಧ್ಯವಾಗುವುದಿಲ್ಲ ಏಕೆಂದರೆ ತಾವು ಯಾವಾಗ ಹೊರಗಾಗುತ್ತೇವೆ ಎಂಬುದೇ ಅವರಿಗೆ ತಿಳಿದಿರುವುದಿಲ್ಲ.

ಅನಿಯಮಿತ ಅಥವಾ ತಡವಾಗುವ ಮುಟ್ಟಿನ ಸಮಸ್ಯೆಗೆ ಕಾರಣ ಹಾರ್ಮೋನ್‌ ಆಗಿದೆ. ಒತ್ತಡ, ಹಾರ್ಮೋನಲ್ ಅಸಮತೋಲನ ನಿಯಮಿತ ತಿಂಗಳ ಚಕ್ರದಲ್ಲಿ ತಡೆಯನ್ನು ಉಂಟು ಮಾಡುತ್ತದೆ. ಸೂಕ್ತವಲ್ಲದ ದೈಹಿಕ ಸ್ಥಿತಿಯಿಂದಾಗಿ ಕೂಡ, ಹೆಂಗಸರು ಮುಟ್ಟು ತಡವಾಗುವ ತೊಂದರೆಯನ್ನು ಅನುಭವಿಸುತ್ತಾರೆ.ನೀವು ವಿವಾಹಿತರಾಗಿದ್ದರೆ, ಮುಟ್ಟಿನ ತಡವಾಗುವಿಕೆಯು ನಿಮ್ಮ ಗರ್ಭಧಾರಣೆಗೆ ಸಮಸ್ಯೆಯನ್ನು ತಂದೊಡ್ಡುತ್ತದೆ. ತಿಂಗಳಿಂದ ನಿಮ್ಮ ಮುಟ್ಟು ವಿಳಂಬಗೊಂಡಲ್ಲಿ, ನೀವು ಅದನ್ನು ಗರ್ಭಧಾರಣೆಯ ಚಿಹ್ನೆ ಎಂದು ಭಾವಿಸಿ.

ಮುಟ್ಟು ವಿಳಂಬವಾಗುವುದು ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪ್ರಭಾವವನ್ನು ಬೀರುತ್ತದೆ. ಇದರಿಂದ ಅಡ್ಡ ಪರಿಣಾಮಗಳು ಉಂಟಾಗಬಹುದು ಉದಾಹರಣೆಗೆ ಮೊಡವೆ, ವಾಕರಿಕೆ, ಭಾರೀ ಹೊಟ್ಟೆ ಮತ್ತು ಭೇದಿ ಮುಂತಾದ ಸಮಸ್ಯೆಗಳು ತಲೆದೋರಬಹುದು.ಮುಟ್ಟು ನಿಮಗೆ ಕ್ರಮಪ್ರಕಾರವಾಗಿ ಆಗದಿದ್ದರೆ ಕೆಲವೊಂದು ಮನೆಮದ್ದುಗಳನ್ನು ನಿವಾರಣೆಗಾಗಿ ತೆಗೆದುಕೊಳ್ಳಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಋತುಚಕ್ರದ ಸಮಯದಲ್ಲಿ ರಾಷಸ್ ತಡೆಯುವ 5 ಟಿಪ್ಸ್

ಆಲದ ಮರದ ಬೇರುಗಳು

ಆಲದ ಮರದ ಬೇರುಗಳು

ಆಲದ ಮರದ ಬೇರುಗಳನ್ನು, ಬೀಳಲುಗಳನ್ನು ಸಂಗ್ರಹಿಸಿ. ಇದನ್ನು ನೀರಿನಲ್ಲಿ ಕುದಿಸಿ ಕಷಾಯ ಮಾಡಿಕೊಳ್ಳಿ. ದನದ ಹಾಲಿನಲ್ಲಿ ಕಷಾಯವನ್ನು ಮಿಶ್ರ ಮಾಡಿಕೊಂಡು ಮಲಗುವ ಮುಂಚೆ ತೆಗೆದುಕೊಳ್ಳಿ.

ಪಪ್ಪಾಯಿ ಜ್ಯೂಸ್

ಪಪ್ಪಾಯಿ ಜ್ಯೂಸ್

ವಿಳಂಬಿತ ಮುಟ್ಟಿನ ದಿನಗಳನ್ನು ನಿವಾರಣೆ ಮಾಡಲು ಹೆಚ್ಚು ಜನಪ್ರಿಯವಾದ ಮನೆ ಮದ್ದು ಪಪ್ಪಾಯಿ ಜ್ಯೂಸ್ ಆಗಿದೆ. ಸಿಪ್ಪೆ ತೆಗೆದ ಪಪ್ಪಾಯಿ ಜ್ಯೂಸ್ ಅಥವಾ ಬೇಯಿಸಿದ ಇಲ್ಲವೇ ಸಿಪ್ಪೆ ಇರುವ ಪಪ್ಪಯಿ ಜ್ಯೂಸ್ ಅನ್ನು ಮುಟ್ಟಿನ ದಿನಕ್ಕಿಂತ ಒಂದು ವಾರ ಮುಂಚಿತವಾಗಿ ತೆಗೆದುಕೊಳ್ಳಿ. ಇದು ನಿಮ್ಮ ಮುಟ್ಟಿನ ತಡವಾಗುವಿಕೆಯನ್ನು ನೈಸರ್ಗಿಕವಾಗಿ ಗುಣಪಡಿಸುತ್ತದೆ.

ಭಾರತೀಯ ನೆಲ್ಲಿಕಾಯಿ

ಭಾರತೀಯ ನೆಲ್ಲಿಕಾಯಿ

ಇದನ್ನು ಆಮ್ಲಾ ಎಂದೂ ಕರೆಯುತ್ತಾರೆ. ತಡವಾಗುವ ಮುಟ್ಟಿನ ಸಮಸ್ಯೆಯನ್ನು ನಿವಾರಿಸಲು ಒಂದು ಉತ್ತಮ ಮನೆಮದ್ದಾಗಿದೆ. ಪ್ರತೀ ದಿನ ಬೆಳಗ್ಗೆ ಖಾಲೀ ಹೊಟ್ಟೆಯಲ್ಲಿ ನೆಲ್ಲಿಕಾಯಿ ಜ್ಯೂಸ್ ಸೇವಿಸಿ. ಮುಂದಿನ ಒಂದು ಗಂಟೆಗಳವರೆಗೆ ಏನನ್ನೂ ಸೇವಿಸಬೇಡಿ. ನಿಮಗೆ ನೆಲ್ಲಿಕಾಯಿ ಜ್ಯೂಸ್ ಮಾಡಿಕೊಳ್ಳಲಾಗದಿದ್ದರೆ, ನೆಲ್ಲಿಕಾಯಿ ಹುಡಿಯನ್ನು ಜೇನಿನೊಂದಿಗೆ ಮಿಶ್ರ ಮಾಡಿಕೊಂಡು ಊಟದ ನಂತರ ಸೇವಿಸಿ.

ಹಾಗಲಕಾಯಿ ಜ್ಯೂಸ್

ಹಾಗಲಕಾಯಿ ಜ್ಯೂಸ್

ಮುಟ್ಟಿನ ವಿಳಂಬವನ್ನು ನಿವಾರಿಸಲು, ಪ್ರತೀ ದಿನ ಎರಡು ಲೋಟಗಳಷ್ಟು ಹಾಗಲಕಾಯಿ ಜ್ಯೂಸ್ ಸೇವಿಸಿ.

.ಅಲೋವೇರಾ ಜ್ಯೂಸ್

.ಅಲೋವೇರಾ ಜ್ಯೂಸ್

ಮುಟ್ಟಿನ ಚಕ್ರವನ್ನು ನಿಯಂತ್ರಿಸಲು ಮತ್ತು ನಿರ್ವಹಿಸಲು ಪ್ರತೀ ದಿನ ಅಲೋವೇರಾ ಜ್ಯೂಸ್ ಅನ್ನು ಸೇವಿಸಿ. ಅಲೋವೇರಾ ಜ್ಯೂಸ್ ಸೇವಿಸುವುದು ತ್ವಚೆಗೂ ಉತ್ತಮ.

ದ್ರಾಕ್ಷಿ ಹಣ್ಣುಗಳು

ದ್ರಾಕ್ಷಿ ಹಣ್ಣುಗಳು

ಮುಟ್ಟಿನ ಸಮಸ್ಯೆಯನ್ನು ನಿವಾರಿಸಲು ಕಪ್ಪು ದ್ರಾಕ್ಷಿ ರಸವನ್ನು ಸೇವಿಸುವುದು ಉತ್ತಮ ಮನೆಮದ್ದಾಗಿದೆ. ನಿಯಮಿತವಾಗಿ ದ್ರಾಕ್ಷಾ ಜ್ಯೂಸ್ ಅನ್ನು ತೆಗೆದುಕೊಳ್ಳುವುದು ಮುಟ್ಟಿನ ಚಕ್ರವನ್ನು ಸರಿಪಡಿಸಿ ಬ್ಯಾಕ್ಟೀರಿಯಾ ಸೋಂಕುಗಳಿಂದ ರಕ್ಷಿಸುತ್ತದೆ.

ಹುರುಳಿ

ಹುರುಳಿ

ದಕ್ಷಿಣ ಭಾರತದಲ್ಲಿ ಹೆಚ್ಚು ಜನಪ್ರಿಯವಾಗಿರುವ ಮನೆಮದ್ದು ಹುರುಳಿ ಆಗಿದೆ. ಹಿಂದಿಯಲ್ಲಿ ಇದನ್ನು ಕುಲತ್ ಎಂದೂ ತಮಿಳಿನಲ್ಲಿ ಕೊಲ್ಲು ಮತ್ತು ಕನ್ನಡದಲ್ಲಿ ಹುರುಳಿ ಸಾರು ಎಂದೂ ಕರೆಯುತ್ತಾರೆ. ಇದೊಂದು ಶಾಖ -ಉತ್ಪಾದಿಸುವ ಧಾನ್ಯವಾಗಿದ್ದು ಮುಟ್ಟಿನ ವಿಳಂಬತೆಯನ್ನು ಹೋಗಲಾಡಿಸುತ್ತದೆ.

ಎಳ್ಳು

ಎಳ್ಳು

ಬಿಳಿ ಎಳ್ಳನ್ನು ಮುಟ್ಟಿನ ತಡವಾಗುವಿಕೆಗೆ ತೆಗೆದುಕೊಳ್ಳುವುದು ಅಜ್ಜಿಯ ಮನೆಮದ್ದಿನ ಪಟ್ಟಿಯಲ್ಲಿರುವ ಅಂಶವಾಗಿದೆ. ಎಳ್ಳಿನ ಬೀಜಗಳನ್ನು ನೀರಿನೊಂದಿಗೆ ಅಥವಾ ರಾತ್ರಿಪೂರ್ತಿ ನೀರಿನೊಂದಿಗೆ ನೆನೆಸಿಡಿ. ಬೆಳಗ್ಗೆ ಬರೀ ಹೊಟ್ಟೆಯಲ್ಲಿ ಈ ನೀರನ್ನು ತೆಗೆದುಕೊಳ್ಳಿ.

English summary

Home Remedies For Delayed Periods

There are times when a woman wishes to delay her monthly period. It can be to go for a trip or for some spiritual reason. However, the worst condition comes when you suffer from delayed menstruation. There are many women who do not get regular periods. In this Article we mentioned such kind of Home Remedies for Delayed Periods. Read on:
X
Desktop Bottom Promotion