For Quick Alerts
ALLOW NOTIFICATIONS  
For Daily Alerts

ಚಿಕನ್‌ಗುನ್ಯಾಕ್ಕೆ ಪರಿಣಾಮಕಾರಿ ಮನೆಮದ್ದು

|

ಚಿಕನ್‌ಗುನ್ಯಾ ಎಂಬ ಕಾಯಿಲೆ ರೋಗಿಯನ್ನು ಜರ್ಝರಿತಗೊಳಿಸುತ್ತದೆ. ಗಂಟುಗಳಲ್ಲಿ ನೋವನ್ನು ತರುವ ಈ ಕಾಯಿಲೆ ಕೆಲವೊಮ್ಮೆ ತೀಕ್ಷ್ಣ ಔಷಧಕ್ಕೂ ಜಗ್ಗುವುದಿಲ್ಲ. ಮಕ್ಕಳು ವೃದ್ಧರು ಹೀಗೆ ಎಲ್ಲರನ್ನೂ ಈ ಕಾಯಿಲೆ ಆವರಿಸಿಕೊಂಡಿದೆ. ಸರ್ಕಾರ ಈ ರೋಗಕ್ಕಾಗಿ ಮಾತ್ರೆ ಔಷಧಗಳನ್ನು ನೀಡಿದ್ದರೂ ಕೆಲವೆಡೆಗಳಲ್ಲಿ ಇದು ತನ್ನ ನೋವನ್ನು ಇನ್ನೂ ಉಂಟು ಮಾಡುತ್ತಿದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಬಹುರೂಪಿ ಕ್ಯಾರೆಟ್‌ ಆರೋಗ್ಯಕ್ಕೆ ಹೇಗೆ ಸಹಕಾರಿಯಾಗಲಿದೆ?

ಭಾರತದಲ್ಲಿ ಈ ರೋಗ ಪ್ರಕಾರ ಹೆಚ್ಚು ಕಂಡುಬಂದಿದ್ದು ಇದರ ತೀವ್ರತೆ ಹೆಚ್ಚಿತ್ತು. ಚಿಕನ್‌ಗುನ್ಯಾ ಜ್ವರವು ಗಂಟು ನೋವನ್ನು ತಂದು ಅದರ ಪ್ರಾಬಲ್ಯತೆ ಕೆಲವು ತಿಂಗಳವರೆಗೆ ಮಾಯುವುದಿಲ್ಲ. ಮೈ ಕೈ ನೋವು ಈ ಸಮಯದಲ್ಲಿ ವಿಪರೀತವಾಗಿದ್ದು, ಸುಸ್ತು, ಹಸಿವೆ ಇಲ್ಲದಿರುವುದು, ನಡೆಯಲು ಸಾಧ್ಯವಾಗದೇ ಇರುವಂಥದ್ದು ಈ ರೋಗದ ಲಕ್ಷಣವಾಗಿದೆ.

ಚಿಕನ್‌ಗುನ್ಯಾಕ್ಕೆ ತಕ್ಷಣ ಪರಿಹಾರ ನೀಡುವ ಮನೆ ಮದ್ದು ಇಂದಿಗೂ ಚಾಲ್ತಿಯಲ್ಲಿದೆ. ಇವುಗಳು ಒಮ್ಮೊಮ್ಮೆ ಶಾಶ್ವತ ಪರಿಹಾರವನ್ನು ಈ ರೋಗಕ್ಕೆ ನೀಡಬಹುದು. ಅವು ಯಾವುವು ಎಂಬುದನ್ನು ಇಲ್ಲಿ ನೋಡಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಗೋಡಂಬಿಯ ವಿಸ್ಮಯಕಾರಿ 7 ಆರೋಗ್ಯ ಪ್ರಯೋಜನಗಳು

ಎಳನೀರು:

ಎಳನೀರು:

ಚಿಕನ್‌ಗುನ್ಯಾ ರೋಗಾಣು ಲಿವರ್ (ಜಠರದಲ್ಲಿ) ಅಭಿವೃದ್ಧಿಯಾಗುತ್ತದೆ. ಎಳನೀರಿಗೆ ಈ ರೋಗಾಣುವನ್ನು ಜಠರದಿಂದ ಹೊರಹಾಕುವ ಸಾಮರ್ಥ್ಯವಿದ್ದು ಚಿಕನ್‌ಗುನ್ಯಾ ಸಂದರ್ಭದಲ್ಲಿ ಉಪಶಮನ ನೀಡುತ್ತದೆ.

ತುಳಸಿ ಎಲೆಗಳು:

ತುಳಸಿ ಎಲೆಗಳು:

ತುಳಸಿ ಎಲೆಯು ರೋಗನಿರೋಧಕ ಶಕ್ತಿಯನ್ನು ವರ್ಧಿಸುತ್ತದೆ. ಇದು ರೋಗಗಳ ವಿರುದ್ಧ ಹೋರಾಡುವ ಶಕ್ತಿಯನ್ನು ನಮಗೆ ನೀಡುತ್ತದೆ. ಪ್ರತೀ ದಿನ ತುಳಸೀ ಎಲೆಗಳನ್ನು ಜಗಿದು ಅದರ ರಸ ಸೇವಿಸುವುದು ಚಿಕನ್‌ಗುನ್ಯಾದ ಜ್ವರವನ್ನು ಕಡಿಮೆ ಮಾಡುತ್ತದೆ.

ಬೀಜರಹಿತ ದ್ರಾಕ್ಷಿ:

ಬೀಜರಹಿತ ದ್ರಾಕ್ಷಿ:

ಚಿಕನ್‌ಗುನ್ಯಾದ ಲಕ್ಷಣಗಳನ್ನು ಇಳಿಕೆ ಮಾಡಿ ಶಕ್ತಿಯನ್ನು ಪುನಃ ಪಡೆಯಲು ಒಣಗಿದ ಬೀಜರಹಿತ ದ್ರಾಕ್ಷಿಯನ್ನು ಹಾಲಿನೊಂದಿಗೆ ಪ್ರತೀ ದಿನ ತೆಗೆದುಕೊಳ್ಳುವುದು ಉತ್ತಮ ಪರಿಹಾರವಾಗಿದೆ.

ಲವಂಗ ಮತ್ತು ಬೆಳ್ಳುಳ್ಳಿ:

ಲವಂಗ ಮತ್ತು ಬೆಳ್ಳುಳ್ಳಿ:

ಬೆಳ್ಳುಳ್ಳಿ ಅಥವಾ ಲವಂಗದೆಣ್ಣೆಯನ್ನು ಕಾಳುಮೆಣಸಿನ ಹುಡಿಯೊಂದಿಗೆ ಪೇಸ್ಟ್ ಮಾಡಿಕೊಳ್ಳಿ ನಂತರ ಇದನ್ನು ನೋವಿರುವ ಗಂಟುಗಳಿಗೆ ಹಚ್ಚಿಕೊಳ್ಳಿ. ಗಂಟು ನೋವನ್ನು ಈ ಮದ್ದು ಪರಿಹರಿಸಿ ಶೀಘ್ರ ಗುಣಮುಖರಾಗಲು ನಿಮಗೆ ಸಹಾಯ ಮಾಡುತ್ತದೆ.

ಮೆಗ್ನೇಶಿಯಂ ಸಲ್ಫೇಟ್ :

ಮೆಗ್ನೇಶಿಯಂ ಸಲ್ಫೇಟ್ :

ಏಪ್ಸಂ ಉಪ್ಪು (ಮೆಗ್ನೇಶಿಯಂ ಸಲ್ಫೇಟ್) ಅನ್ನು ಬೆಚ್ಚಗಿನ ನೀರಿನೊಂದಿಗೆ ಸ್ನಾನದ ಟಬ್‌ನಲ್ಲಿ ಮಿಶ್ರ ಮಾಡಿ ನಂತರ ಇದರಲ್ಲಿ ಕೆಲ ಸಮಯ ನಿಮ್ಮ ದೇಹವನ್ನು ತೋಯಿಸಿ. ಇದರೊಂದಿಗೆ ಬೇವಿನ ಎಲೆಗಳನ್ನು ನೀವು ಬಳಸಬಹುದು. ಇದು ದೇಹವನ್ನು ವಿಶ್ರಮಗೊಳಿಸಿ ನೋವಿನಿಂದ ಮುಕ್ತಿ ನೀಡುತ್ತದೆ.

ಹಸಿ ಕ್ಯಾರೇಟ್:

ಹಸಿ ಕ್ಯಾರೇಟ್:

ಚಿಕನ್‌ಗುನ್ಯಾದಿಂದ ಬಳಲುತ್ತಿರುವ ವ್ಯಕ್ತಿಗೆ ಹಸಿ ಕ್ಯಾರೇಟ್ ಉತ್ತಮ ಸಿದ್ಧೌಷಧವಾಗಿದೆ. ಇದರಲ್ಲಿರುವ ರೋಗನಿರೋಧಕ ಶಕ್ತಿ ಗಂಟು ನೋವನ್ನು ಉಪಚರಿಸಿ ದೇಹಕ್ಕೆ ಸಾಮರ್ಥ್ಯವನ್ನು ನೀಡುತ್ತದೆ.

ಅಶ್ವಗಂಧ:

ಅಶ್ವಗಂಧ:

ಚಿಕನ್‌ಗುನ್ಯಾದಿಂದ ಬಳಲುತ್ತಿರುವ ದೇಹಕ್ಕೆ ಇದು ಪ್ರತಿರಕ್ಷಣಾ ಔಷಧಿಯಾಗಿ ನೆರವಾಗುತ್ತದೆ. ಇದರಲ್ಲಿರುವ ವೈದ್ಯಕೀಯ ಅಂಶಗಳು ಸ್ವಾಸ್ಥ್ವವನ್ನು ವರ್ಗಿಸುತ್ತದೆ. ರೋಗಾಣುವಿನ ವಿರುದ್ಧ ಹೋರಾಡುವ ಪ್ರತಿರೋಧ ಶಕ್ತಿಯು ಅಶ್ವಗಂಧದ ಎಲೆಯನ್ನು ನಿತ್ಯವೂ ಸೇವಿಸುವುದರಿಂದ ದೊರೆಯುತ್ತದೆ.

English summary

Home remedies for chikungunya

The chikungunya virus develops in the liver. Coconut water has the ability to detoxify the liver and flush out the virus. Thus, drinking coconut water proves to be quite beneficial in case of 
 
 chikungunya.Basil or tulsi leaves boost our immune system, hence enhancing our ability to fight diseases. Chewing on basil leaves everyday can help to reduce fever in chikungunya.
X
Desktop Bottom Promotion