For Quick Alerts
ALLOW NOTIFICATIONS  
For Daily Alerts

ಒತ್ತಡವನ್ನು ನಿಯಂತ್ರಿಸಬಹುದಾದ ಸುಲಭ ಮಾರ್ಗಗಳು

|

ಒತ್ತಡವು ಜೀವನವನ್ನು ವಿಮುಖಗೊಳಿಸುವುದು ಮಾತ್ರವಲ್ಲ ಇದು ದೈಹಿಕ ಕಾಯಿಲೆಗಳನ್ನು ತಂದೊಡ್ಡುತ್ತದೆ. ಒತ್ತಡದಿಂದ ಉಂಟಾಗುವ ಮಾನಸಿಕ ತೊಂದರೆಗಳಾದ ಸುಸ್ತು, ಬಳಲಿಕೆ, ಖಿನ್ನತೆ ದೈಹಿಕ ಅನಾರೋಗ್ಯಗಳು ಉಂಟಾಗುತ್ತದೆ. ಒತ್ತಡವನ್ನು ನಿಭಾಯಿಸುವುದು ತುಸು ಕಷ್ಟ ಆದರೆ ಇದು ಅಸಾಧ್ಯವಲ್ಲ.

ಪ್ರತಿಯೊಬ್ಬರೂ ಅನುಸರಿಬಹುದಾದ ಕೆಲವೊಂದು ಸರಳ ವಿಧಾನಗಳ ಮೂಲಕ ಒತ್ತಡವನ್ನು ನಿಯಂತ್ರಣದಲ್ಲಿಡಬಹುದಾಗಿದೆ. ಪರಿಣಾಮಕಾರಿ ಒತ್ತಡ ನಿರ್ವಹಣೆಯಲ್ಲಿ ನಮಗೆ ಉಪಕಾರಿಯಾಗಿರುವ ಕೆಲವೊಂದು ಒತ್ತಡ ನಿಯಂತ್ರಣ ವಿಧಾನಗಳನ್ನು ಇಲ್ಲಿ ತಿಳಿಸಿದ್ದು ಕೆಳಗಿನ ಸ್ಲೈಡ್‌ಗಳಲ್ಲಿ ನೋಡಿ

ಉಸಿರಾಟ ವ್ಯಾಯಾಮಗಳು

ಉಸಿರಾಟ ವ್ಯಾಯಾಮಗಳು

ಒತ್ತಡ ಮತ್ತು ಚಿಂತೆಯ ಸಮಯದಲ್ಲಿ ದೀರ್ಘ ಉಸಿರಾಟವನ್ನು ತೆಗೆದುಕೊಳ್ಳಿ ಮತ್ತು ಆಶ್ವಾಸನೆಯನ್ನು ಪಡೆದುಕೊಳ್ಳಿ. ಈ ಉಸಿರಾಟ ವ್ಯಾಯಾಮ ನಿಮ್ಮನ್ನು ವಿರಾಮಗೊಳಿಸುತ್ತದೆ. ದೀರ್ಘ ಮತ್ತು ಆಳವಾದ ಉಸಿರಾಟ ಪ್ರಕ್ರಿಯೆ ದೇಹದಲ್ಲಿ ಆಮ್ಲಜನಕದ ಸಂಚಲನೆಯನ್ನು ಹೆಚ್ಚಿಸುತ್ತದೆ, ನಿಮ್ಮನ್ನು ತಾಜಾ ಮತ್ತು ಹೆಚ್ಚು ಚಟುವಟಿಕೆಯಿಂದ ಇರಿಸುತ್ತದೆ.

ಒತ್ತಡದಿಂದ ಮುಕ್ತರಾಗಲು ಮತ್ತು ಮನಸ್ಸನ್ನು ಪ್ರಶಾಂತಗೊಳಿಸಲು ಇದೊಂದು ಉತ್ತಮ ವಿಧಾನ. ಇದು ನಿಮ್ಮ ಭಾವನೆಗಳನ್ನು ನಿಯಂತ್ರಿಸಿಕೊಳ್ಳುವಲ್ಲಿ ಕೂಡ ಪರಿಣಾಮಕಾರಿ. ಇದರಿಂದಾಗಿ ನೀವು ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವುದು ತಪ್ಪುತ್ತದೆ.

ವಿಟಮಿನ್ ಸಿ ಇರುವ ಆಹಾರ ಸೇವಿಸಿ

ವಿಟಮಿನ್ ಸಿ ಇರುವ ಆಹಾರ ಸೇವಿಸಿ

ವಿಟಮಿನ್ ಸಿ ಆರೋಗ್ಯಕಾರಿ ಆ್ಯಂಟಿ ಆ್ಯಂಕ್ಸಿಡೆಂಟ್ ಇದು ಒತ್ತಡವನ್ನು ಸಹಜವಾಗಿ ಕಡಿಮೆಗೊಳಿಸುತ್ತದೆ. ಆದ್ದರಿಂದ ಕ್ಯಾರೆಟ್‌ಗಳು, ಕಿತ್ತಳೆ ಹಣ್ಣು ಮತ್ತು ಸಿಟ್ರಸ್ ಹಣ್ಣುಗಳನ್ನು ನಿಯಮಿತವಾಗಿ ಸೇವಿಸಿ. ಒತ್ತಡದಿಂದ ದೂರವುಳಿಯಿರಿ

ಯೋಗ

ಯೋಗ

ನಿಮ್ಮ ದೇಹದ ಆರೋಗ್ಯವನ್ನು ಮಾತ್ರ ಕಾಪಾಡುವುದಲ್ಲದೆ ಹಿಂದಿನಿಂದಲೂ ಇರುವ ಕಲೆಯಾಗಿರುವ ಯೋಗಾಭ್ಯಾಸ ನಿಮ್ಮಲ್ಲಾ ಚಿಂತೆಗಳನ್ನು ದೂರ ಮಾಡಿ ನಿಮ್ಮನ್ನು ಇನ್ನಷ್ಟು ತಾಜಾಗೊಳಿಸುತ್ತದೆ ಮತ್ತು ಒತ್ತಡವನ್ನು ನಿಯಂತ್ರಿಸಲು ಇದೊಂದು ಪರಿಣಾಮಕಾರಿ ವಿಧಾನವಾಗಿದೆ.

ವಿರಾಮ ತೆಗೆದುಕೊಳ್ಳಿ

ವಿರಾಮ ತೆಗೆದುಕೊಳ್ಳಿ

ಜೀವನವು ನಿಮಗೆ ಕಷ್ಟಗಳನ್ನೇ ನೀಡಿದಾಗ ಅದನ್ನೊಂದು ಸವಾಲಾಗಿ ತೆಗೆದುಕೊಂಡು ನಿಮ್ಮ ಸುಖಕ್ಕೆ ಸೋಪಾನವನ್ನಾಗಿಸಿ. ಕೆಲಸದ ಒತ್ತಡವನ್ನು ದೂರಮಾಡಲು ಹೊರಗಿನ ವಿಹಾರ ನಿಮಗೆ ನೆರವು ನೀಡುತ್ತದೆ. ಆದಷ್ಟು ವಿಹಾರ ಧಾಮಗಳಿಗೆ ಪ್ರಯಾಣಿಸಿ. ಇದು ಜೀವನದಲ್ಲಿ ನಿಮಗೆ ಹೆಚ್ಚಿನ ವಿರಾಮವನ್ನು ನೀಡುತ್ತದೆ.

ನೃತ್ಯ ಮಾಡಿ

ನೃತ್ಯ ಮಾಡಿ

ನೃತ್ಯ ಮಾಡುವುದು ಮೋಜಿನ ವಿಷಯ ಮಾತ್ರವಲ್ಲ ಒತ್ತಡವನ್ನು ನಿಯಂತ್ರಿಸುವ ಅಸ್ತ್ರ ಕೂಡ ಆಗಿದೆ. ನಿಮ್ಮನ್ನು ನೀವೇ ಹಗುರಗೊಳಿಸಲು ನೃತ್ಯ ಮಾಡಿ ಯಾರೂ ನಮ್ಮನ್ನು ನೋಡಿಲ್ಲ ಅಂದುಕೊಂಡು ನೃತ್ಯ ಮಾಡಿ. ಇದು ನಿಮ್ಮ ತೂಕವನ್ನು ಇಳಿಸುವುದರ ಜೊತೆಗೆ ಹೆಚ್ಚು ತಾಜಾ ಮತ್ತು ಚುರುಕು ಉಳ್ಳವರಾಗಿ ನಿಮ್ಮನ್ನು ಮಾರ್ಪಡಿಸುತ್ತದೆ.

ಪ್ರಕೃತಿಯ ಒಡನಾಟ

ಪ್ರಕೃತಿಯ ಒಡನಾಟ

ನಿಮ್ಮ ಸುತ್ತಲೂ ಇರುವ ಹೂವುಗಳು, ಮರಗಳು ಮತ್ತು ಪ್ರಾಣಿಗಳನ್ನು ನೋಡುವುದು ನಮ್ಮ ಒತ್ತಡವನ್ನು ನಿಯಂತ್ರಿಸುತ್ತದೆ. ಬೆಳಗಿನ ಮುಂಜಾನೆಯ ನಡಿಗೆಯು ಒತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಪುಸ್ತಕಗಳನ್ನು ಓದಿ

ಪುಸ್ತಕಗಳನ್ನು ಓದಿ

ಕೆಲವು ಸಮಯಕ್ಕೆ ನಿಮ್ಮ ಚಿಂತೆಯನ್ನು ದೂರಮಾಡುವ ಓದುವಿಕೆ ಚಿಂತೆಯೆಂಬ ಭಯವನ್ನು ನಿಮ್ಮಿಂದ ಹೊಡೆದೋಡಿಸುತ್ತದೆ. ಇದು ಒತ್ತಡವನ್ನು ನಿಯಂತ್ರಿಸುವ ಉತ್ತಮ ಮದ್ದಾಗಿದೆ.

ಸಂಗೀತ

ಸಂಗೀತ

ಸಂಗೀತವು ನಿಮ್ಮನ್ನು ತಾಜಾಗೊಳಿಸಿ ನಿಮ್ಮ ಮನಸ್ಸನ್ನು ಪ್ರಫುಲ್ಲಗೊಳಿಸಿ ನಿಮ್ಮ ಒತ್ತಡವನ್ನು ನಿವಾರಿಸುತ್ತದೆ. ಹೀಗೆ ನೀವು ಹೆಚ್ಚು ಒತ್ತಡ ಚಿಂತೆಯಲ್ಲಿದ್ದಾಗ ಹಾಡು ಆಲಿಸಿ.


English summary

Healthy Ways To Handle Stress

Stress management has become important as it is just not hampering the essence of life but also increasing health disorders. Mental stress causes tiredness, fatigue, depression Handling stress is difficult, but not impossible. Here we shall go through some of these healthy ways to handle stress for an effective stress management.
X
Desktop Bottom Promotion