For Quick Alerts
ALLOW NOTIFICATIONS  
For Daily Alerts

ನಿಮ್ಮ ದೇಹಕ್ಕೆ ಆರೋಗ್ಯಕಾರಿಯಾಗಿರುವ 11 ಸಾಸ್‌ಗಳು

|

ನೀವು ಡಯೆಟ್ ಮಾಡುತ್ತಿದ್ದರೂ ನಿಮ್ಮ ತೂಕ ಏಕೆ ಏರಿಕೆಯಾಗುತ್ತಿದೆ ಎಂಬುದು ನಿಮ್ಮ ಆಲೋಚನೆಯಾಗಿದ್ದರೆ ನೀವು ತೆಗೆದುಕೊಳ್ಳುವ ಆಹಾರದ ಮೇಲೆ ಗಮನ ಕೊಡಿ. ನಿಮ್ಮ ಆಹಾರದಲ್ಲಿ ನೀವು ತಪ್ಪು ಆಹಾರ ಕ್ರಮವನ್ನು ಅನುಸರಿಸುತ್ತಿದ್ದೀರಾ ಎಂಬುದನ್ನು ಗಮನಿಸಿ. ಉದಾಹರಣೆಗೆ, ಸಾಸ್‌ಗಳು ಕೂಡ ನಿಮ್ಮ ತೂಕ ಏರುವಲ್ಲಿ ಪರಿಣಾಮವನ್ನು ಬೀರುತ್ತದೆ.
ಎಣ್ಣೆಯ ಪುನರ್ಬಳಕೆ ಆರೋಗ್ಯಕ್ಕೆ ಏಕೆ ಹಾನಿಕಾರಕ ?

ಕೆಲವೊಂದು ಸಾಸ್‌ಗಳು ನಿಮ್ಮ ದೇಹದ ತೂಕವನ್ನು ಏರಿಸುವಲ್ಲಿ ಪ್ರಮುಖವಾಗಿವೆ. ಆದರೆ ಸಾಸ್‌ಗಳಲ್ಲಿ ಕೆಲವೊಂದು ಆರೋಗ್ಯಕಾರಿ ಸಾಸ್‌ಗಳಿದ್ದು ನಿಮ್ಮ ದೇಹಕ್ಕೆ ಇವು ಹಿತಕಾರಿಯಾಗಿವೆ.

ಕೆಲವೊಂದು ಕಡಿಮೆ ಕ್ಯಾಲೋರಿ ಇರುವ ಸಾಸ್‌ಗಳು ನಿಮ್ಮ ದೇಹದ ತೂಕವನ್ನು ಕಡಿಮೆ ಮಾಡುವಲ್ಲಿ ಸಹಕಾರಿಯಾಗಿವೆ. ನೀವು ಚೀಸ್ ಮತ್ತು ಕ್ರೀಮ್ ಒಳಗೊಂಡಿರುವ ಸಲಾಡ್ ಸೇವಿಸಿ ಕೂಡ ನಿಮ್ಮ ತೂಕ ಏರುತ್ತದೆ ಎಂದಾದಲ್ಲಿ ಸಾಸ್ ಅನ್ನು ನಿಮ್ಮ ಆಯ್ಕೆಯನ್ನಾಗಿಸಿ.

ಎಲ್ಲಾ ಸಾಸ್‌ಗಳು ಕಡಿಮೆ ಕೊಬ್ಬನ್ನು ಹೊಂದಿದ್ದು ನಿಮಗೆ ಆರೋಗ್ಯಕಾರಿಯಾಗಿವೆ. ಕೆಲವೊಂದು ಸಾಸ್‌ಗಳು ನಿಮ್ಮ ಆಹಾರದಲ್ಲಿ ನ್ಯೂಟ್ರಿಟೀವ್ ಮೌಲ್ಯವನ್ನು ಸೇರಿಸಬಹುದು ಮತ್ತು ನಿಮ್ಮ ಸಾಸ್‌ನ ರುಚಿ ಇದರಿಂದ ಹೆಚ್ಚಬಹುದು. ಹಾಗಿದ್ದರೆ ನಿಮ್ಮ ಸಾಸ್‌ಗೆ ನ್ಯೂಟ್ರಿನ್‌ಗಳನ್ನು ಸೇರಿಸಿಕೊಂಡು ಅದನ್ನು ರುಚಿಕರವನ್ನಾಗಿಸುವುದು ಹೇಗೆಂಬುದನ್ನು ಈ ಲೇಖನದಲ್ಲಿ ತಿಳಿಯೋಣ.

ಪುದೀನಾ ಸಾಸ್ ಹೆಚ್ಚಿಸುವುದು ತಿಂಡಿಯ ರುಚಿ

ಪೇಸ್ಟೋ ಸಾಸ್

ಪೇಸ್ಟೋ ಸಾಸ್

ಆಲೀವ್ ಆಯಿಲ್‌ ಕೆಲವೊಂದು ಕೊಬ್ಬಿನ ಅಂಶಗಳನ್ನು ಒಳಗೊಂಡಿರುವ ಪೇಸ್ಟೋ ಸಾಸ್ ನಟ್‌ಗಳ ಉತ್ತಮತೆಯನ್ನು ತನ್ನಲ್ಲಿ ಪಡೆದುಕೊಂಡಿದೆ. ಸಿಲಂತ್ರೋ ಮತ್ತು ಬೇಸಿಲ್ ಗಿಡಮೂಲಿಕೆಗಳು ನಿಮ್ಮ ಕಿಡ್ನಿಯನ್ನು ಆರೋಗ್ಯವಾಗಿರಿಸುತ್ತವೆ.

ಭಾರತೀಯ ಹುಳಿ ಚಟ್ನಿ

ಭಾರತೀಯ ಹುಳಿ ಚಟ್ನಿ

ವಿನೇಗರ್‌ನಲ್ಲಿ ನೆನೆಸಿ ತಯಾರಿಸಲಾದ ಈ ಹುಳಿ ಚಟ್ನಿ ತನ್ನದೇ ವಿಶೇಷ ರುಚಿಯನ್ನು ಒಳಗೊಂಡಿದೆ. ನಿಮ್ಮ ರೋಗನಿರೋಧಕ ಶಕ್ತಿಯನ್ನು ವರ್ಧಿಸುವ ವಿಟಮಿನ್ ಸಿ ಅಂಶ ಇದರಲ್ಲಿ ಹೇರಳವಾಗಿದೆ.

ವಾಸ್ಬಿ

ವಾಸ್ಬಿ

ಸುಶಿ ಫುಡ್ ಅನ್ನು ರುಚಿಕರವನ್ನಾಗಿಸುವ ಜಪಾನಿ ಗಾರ್ನಿಶಿಂಗ್ ಕೋಂಡಿಮೆಂಟ್ ಆಗಿದೆ ವಾಸ್ಬಿ. ಇದು ಕ್ಯಾನ್ಸರ್ ವಿರುದ್ಧ ರಕ್ಷಣೆಯನ್ನು ನೀಡುತ್ತದೆ. ಇದು ಚಿಕನ್‌ನೊಂದಿಗೆ ಚೆನ್ನಾಗಿ ಹೊಂದುವ ಸಾಸ್ ಆಗಿದೆ.

ಸಾಲ್ಸಾ ಸಾಸ್

ಸಾಲ್ಸಾ ಸಾಸ್

ಟೊಮೇಟೊಗಳಿಂದ ಉತ್ಪನ್ನವಾಗುವ ಕ್ಯಾನ್ಸರ್ ನಿರೋಧಕ ಆಂಟಿ - ಆಕ್ಸಿಡೆಂಟ್‌ಗಳು ಇದರಲ್ಲಿರುವುದರಿಂದ ನಿಮಗೆ ಇದು ಆರೋಗ್ಯಕಾರಿಯಾಗಿದೆ.

ಗುಕಾಮೋಲ್

ಗುಕಾಮೋಲ್

ಅವೋಕಾಡೋ ಮತ್ತು ಲೈಮ್‌ನಿಂದ ವಿಭಾಗಿಸಲಾದ ಗುಕಾಮೋಲ್ ಸಾಸ್ ಹೆಲ್ದಿಯಾಗಿದೆ. ಇದರಲ್ಲಿ ವಿಟಮಿನ್ ಇ ಹೇರಳವಾಗಿದೆ.

ಪುದೀನಾ ಚಟ್ನಿ

ಪುದೀನಾ ಚಟ್ನಿ

ನ್ಯೂಟ್ರಿಶಿಯನ್ ಅಂಶಗಳನ್ನು ಹೇರಳವಾಗಿ ಹೊಂದಿರುವ ಭಾರತೀಯ ಸಾಸ್ ಪುದೀನಾ ಚಟ್ನಿಯಾಗಿದೆ.

ಟಬಾಸ್ಕೋ ಸಾಸ್

ಟಬಾಸ್ಕೋ ಸಾಸ್

ಇದು ತುಂಬಾ ಖಾರವಾಗಿರುವುದರಿಂದ ಇದನ್ನು ನೀವು ಟೊಮೇಟೊ ಮತ್ತು ಚಿಲ್ಲಿ ಪೆಪ್ಪರ್ ಸಾಸ್‌ನೊಂದಿಗೆ ಸವಿಯಬಹುದು.

ಟೊಮೇಟೊ ಬೆಳ್ಳುಳ್ಳಿ ಚಟ್ನಿ

ಟೊಮೇಟೊ ಬೆಳ್ಳುಳ್ಳಿ ಚಟ್ನಿ

ಇಂಡಿಯನ್ ಸಿಜ್ವನ್‌ನಲ್ಲಿ ಫೇಮಸ್ ಆಗಿರುವ ಟೋಮೇಟೋ ಬೆಳ್ಳುಳ್ಳಿ ಚಟ್ನಿ ರುಚಿಯಂತೂ ಅಸದಳವಾಗಿದೆ. ಇದು ನಿಮ್ಮ ಹೃದಯವನ್ನು ಆರೋಗ್ಯವಾಗಿರಿಸುತ್ತದೆ.

ಟೋಮೇಟೊ ಕೆಚಪ್

ಟೋಮೇಟೊ ಕೆಚಪ್

ಮನೆಯಲ್ಲೇ ತಯಾರಿಸಬಹುದಾದ ಟೋಮೇಟೊ ಕೆಚಪ್ ಕ್ಯಾನ್ಸರ್ ಅನ್ನು ಬುಡದಿಂದಲೇ ನಿವಾರಿಸುತ್ತದೆ.

ತಡ್ಸಿಕಿ ಸಾಸ್

ತಡ್ಸಿಕಿ ಸಾಸ್

ಯೋಗರ್ಟ್ ಮತ್ತು ಆಲೀವ್ ಆಯಿಲ್‌ನ ಮಿಶ್ರಣದಿಂದ ತಯಾರಿಸಲಾದ ತಡ್ಸಿಕಿ ಸಾಸ್ ಒಮೇಗಾ - 3 ಆಸಿಡ್‌ನಿಂದ ನಿಮ್ಮ ಹೃದಯಕ್ಕೆ ಆರೋಗ್ಯಕಾರವಾಗಿದೆ.

ವರ್ಸಟರ್‌ಶೈರ್ ಸಾಸ್

ವರ್ಸಟರ್‌ಶೈರ್ ಸಾಸ್

ಇದು ಐರನ್ ಮತ್ತು ವಿಟಮಿನ್ ಬಿ6 ಅನ್ನು ಅಧಿಕ ಪ್ರಮಾಣದಲ್ಲಿ ಒಳಗೊಂಡಿರುವುದರಿಂದ ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

X
Desktop Bottom Promotion