For Quick Alerts
ALLOW NOTIFICATIONS  
For Daily Alerts

ಗೊರಕೆಯ ಅಪಾಯಗಳು ನಿಮಗೆ ತಿಳಿದಿದೆಯೇ?

|

ಗೊರಕೆಯಿಂದ ಬರುವ ಅಪಾಯಕಾರೀ ಅಂಶಗಳು ನಿಮಗೆ ತಿಳಿದಿದೆಯೇ? ನಿದ್ರಾಹೀನತೆಯ ಸಮಸ್ಯೆಯಿಂದ ಗೊರಕೆ ಉಂಟಾಗುತ್ತದೆ. ಈ ನಿದ್ರಾಹೀನತೆ ಹಲವಾರು ಅಪಾಯಗಳನ್ನು ತಂದೊಡ್ಡುತ್ತವೆ. ಹೃದಯ ರೋಗ, ಮಾನಸಿಕ ಅಸಮತೋಲನ ಮುಂತಾದ ಕಾಯಿಲೆಗಳು ಗೊರಕೆಯಿಂದ ಬರುವಂತಹ ಅಪಾಯಗಳು.

ಇದರಿಂದ ತುಸು ದೀರ್ಘ ಕಾಲ ಬದುಕುವವರು ಅಲ್ಪ ಅವಧಿಯಲ್ಲೇ ಸಾವು ತನ್ನ ಕಬಂಧ ಬಾಹುವನ್ನು ತೆರೆಯುತ್ತದೆ. ನಿದ್ರಾ ಹೀನತೆ ಅಥವಾ ಗೊರಕೆಯಿಂದ ಉಂಟಾಗುವ ಅಪಾಯಗಳನ್ನು ನಿಮಗೆ ತಿಳಿದುಕೊಳ್ಳುವ ಹಂಬಲ ನಿಮಗಿದ್ದಲ್ಲಿ ಈ ಲೇಖನವನ್ನು ಮುಂದೆ ಓದಿ.

ಮನೆ ಮದ್ದುಗಳ ಮೂಲಕ ಗೊರಕೆಯಿಂದ ಪರಿಹಾರ

ಸ್ಟ್ರೋಕ್:

ಸ್ಟ್ರೋಕ್:

ಸ್ಟ್ರೋಕ್ ಅಥವಾ ಪಾರ್ಶ್ವವಾಯುವಿನ ತೊಂದರೆಯು ಗೊರಕೆಯಿಂದ ಉಂಟಾಗುತ್ತದೆ. ನೀವು ದೀರ್ಘ ಗೊರಕೆಯನ್ನು ಹೊಡೆದಂತೆ ಇದರ ಅಪಾಯ ಹೆಚ್ಚು ಎಂಬುದು ಸಂಶೋಧನೆಗಳಿಂದ ತಿಳಿದುಬಂದಿದೆ. ರಕ್ತದೊತ್ತಡವನ್ನು ಹೆಚ್ಚಿಸುವ ಅಪಾಯವನ್ನೂ ಗೊರಕೆ ತಂದೊಡ್ಡುತ್ತದೆ. ನಿದ್ರಾಹೀನತೆಗೆ ಗೊರಕೆಗೆ ಮುಖ್ಯ ಕಾರಣವಾದ್ದರಿಂದ ನಿದ್ರೆಯ ಕೊರತೆ ನಿಮ್ಮನ್ನು ಕಾಡದಂತೆ ಎಚ್ಚರವಹಿಸಿ.

ಹೃದಯ ಕಾಯಿಲೆ:

ಹೃದಯ ಕಾಯಿಲೆ:

ಗೊರಕೆಯಿಂದ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚು ಉಂಟಾಗುತ್ತವೆ. ಅಧಿಕ ರಕ್ತದೊತ್ತಡಕ್ಕೆ ಕಾರಣವಾಗುವ ನಿದ್ರಾಹೀನತೆ ಅದರಿಂದ ಉಂಟಾಗುವ ಅಪಾಯವನ್ನೂ ನಿರಾಯಾಸವಾಗಿ ನಿಮಗೆ ತಲುಪಿಸುತ್ತದೆ.

ಸ್ತಂಭನ:

ಸ್ತಂಭನ:

ದೀರ್ಘ ಸಮಯದ ಗೊರಕೆ ಮತ್ತು ನಿದ್ರಾಹೀನತೆಯ ಕೊರತೆಯನ್ನು ಅನುಭವಿಸುವವರಿಗೆ ಸ್ತಂಭನ ಬೇಗನೇ ಉಂಟಾಗುತ್ತದೆ. ಹೃದಯದ ವಾಹಕ ವ್ಯವಸ್ಥೆಗೆ ಅಪಾಯವನ್ನುಂಟು ಮಾಡುವ ಸ್ತಂಭನಕ್ಕೆ ಸೂಕ್ತ ಚಿಕಿತ್ಸೆಯನ್ನು ತುರ್ತಾಗಿ ತೆಗೆದುಕೊಳ್ಳಲೇಬೇಕು.

ಗಾಯ:

ಗಾಯ:

ನಿದ್ರಾಹೀನತೆಯು ನಿಮಗೆ ಹಲವಾರು ಅಪಾಯಗಳನ್ನು ತಂದೊಡ್ಡಬಹುದು. ಮನಸ್ಸಿಗೆ ನೆಮ್ಮದಿ ಇಲ್ಲದಿರುವುದು, ನಿದ್ರೆ ಬಂದಂತಹ ಅನುಭವ ಇವೇ ಮೊದಲಾದ ತೊಂದರೆಗಳು ನಿಮ್ಮನ್ನು ಕಾಡಬಹುದು. ನಿದ್ದೆ ಬರುವ ಸಮಯದಲ್ಲಿ ನೀವು ವೇಗವಾಗಿ ಗಾಡಿ ಚಲಾಯಿಸುವುದರಿಂದ ಅಪಘಾತಗಳು ನಿಮಗೆ ಸಂಭವಿಸಬಹುದು.

ಮಾನಸಿಕ ಆರೋಗ್ಯ ಸಮಸ್ಯೆಗಳು:

ಮಾನಸಿಕ ಆರೋಗ್ಯ ಸಮಸ್ಯೆಗಳು:

ನಿದ್ದೆಯ ಕೊರತಯು ನಿಮ್ಮ ಮಾನಸಿಕ ನೆಮ್ಮದಿ ಭಂಗವಾಗಲು ಕಾರಣವಾಗುತ್ತದೆ. ನೀವು ಹೊಡೆಯುವ ಗೊರಕೆಯು ಇತರರನ್ನು ಬಾಧೆಗೊಳಪಡಿಸಬಹುದು. ಅವರ ಚುಚ್ಚು ನುಡಿಗಳನ್ನು ಒಮ್ಮೊಮ್ಮೆ ನೀವು ಕೇಳಬೇಕಾಗುತ್ತದೆ. ಸಂಬಂಧಗಳು ಒಮ್ಮೊಮ್ಮೆ ಹಾಳಾಗುವ ಪರಿಸ್ಥಿತಿ ಕೂಡ ಎದುರಾಗುತ್ತದೆ.

ತಲೆನೋವು:

ತಲೆನೋವು:

ಗೊರಕೆ ಹೊಡೆಯುವುದು ನಿಮಗೆ ಅಭ್ಯಾಸವಾಗಿಬಿಟ್ಟಿದ್ದರೆ ತಲೆನೋವು ಖಂಡಿತ ನಿಮ್ಮನ್ನು ಬಾಧಿಸದೆ ಬಿಡದು. ನಿದ್ರಾಹೀನತೆಯ ಕೊರತೆಯಿಂದ ಉಂಟಾಗುವ ಗೊರಕೆಯು ನಿಮ್ಮ ತಲೆನೋವಿಗೆ ಮುಖ್ಯ ಕಾರಣವಾಗುತ್ತದೆ.

ಅಧಿಕ ತೂಕ:

ಅಧಿಕ ತೂಕ:

ಗೊರಕೆ ಹೊಡೆಯುವುದರಿಂದ ಅಧಿಕ ತೂಕ ನಿಮ್ಮದಾಗುತ್ತದೆ ಎಂಬುದು ಸಂಶೋಧನೆ ಹೇಳುತ್ತದೆ. ನಿಮ್ಮ ಗೊರಕೆಯಿಂದ ನಿಮ್ಮ ಮನೆಯವರು ಕಂಗಾಲಾಗಿದ್ದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಔಷಧವನ್ನು ಪಡೆದುಕೊಳ್ಳಿ.

English summary

Health Risks Of Snoring

You may think of snoring as a sometimes annoying or embarrassing side effect of sleep. But before you discount your snoring as nothing out of the ordinary, consider this:
Story first published: Tuesday, April 22, 2014, 16:21 [IST]
X
Desktop Bottom Promotion