For Quick Alerts
ALLOW NOTIFICATIONS  
For Daily Alerts

ಆಯಿಲ್ ಪುಲ್ಲಿಂಗ್ ಆರೋಗ್ಯಕರ ಪ್ರಯೋಜನಗಳು

|

ಉತ್ತಮ ಆರೋಗ್ಯವನ್ನು ನಿರ್ವಹಿಸಲು ಮತ್ತು ಹಲವಾರು ಕಾಯಿಲೆಗಳನ್ನು ಗುಣಪಡಿಸಲು ಆಯಿಲ್ ಪುಲ್ಲಿಂಗ್ ಒಂದು ಶಕ್ತಿಯುತ ವಿಧಾನವಾಗಿದೆ. 5000 ವರ್ಷಗಳಷ್ಟು ಹಿಂದೆಯೇ ಆಯುರ್ವೇದದಲ್ಲಿ ಪ್ರಸ್ತುತ ಪಡಿಸಿರುವ ಪುರಾತನ ವಿಧಾನವಾಗಿದೆ. ಮೂತ್ರಪಿಂಡದ ಸಮಸ್ಯೆಗಳು, ಥೈರಾಯ್ಡ್, ಮತ್ತು ಸಂಧಿವಾತಕ್ಕೆ ಇದೊಂದು ಉತ್ತಮ ದಿವ್ಯೌಷಧವಾಗಿದೆ.

ಪುರಾತನ ಆಯುರ್ವೇದೀಯ ವಿಧಾನವಾಗಿರುವ ಆಯಿಲ್ ಪುಲ್ಲಿಂಗ್ ಅಥವಾ ತೈಲ ಹೀರುವಿಕೆ ಹೆಸರುವಾಸಿ ಮತ್ತು ಹೆಚ್ಚು ಫಲಕಾರಿಯಾಗಿರುವ ಔಷಧವಾಗಿದೆ.ಹಾಗಿದ್ದರೆ ಆಯಿಲ್ ಪುಲ್ಲಿಂಗ್ ಎಂದರೇನು? ನಿಮ್ಮ ಬಾಯಿಯಲ್ಲಿ ಹೆಚ್ಚು ಪ್ರಮಾಣದ ತೈಲವನ್ನು ಇರಿಸಿಕೊಂಡು ಬಾಯಿಯನ್ನು ಸ್ವಚ್ಛಗೊಳಿಸುವುದಾಗಿದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಶುಂಠಿ ಚಹಾದ 8 ಆರೋಗ್ಯ ಪ್ರಯೋಜನಗಳು

ನೀವು ಎದ್ದ ನಂತರ ನೀರನ್ನು ಕುಡಿಯುವ ಮೊದಲು ಅಥವಾ ನಿಮ್ಮ ಹಲ್ಲನ್ನು ಉಜ್ಜಿಕೊಂಡ ನಂತರ ಹೆಚ್ಚು ಪ್ರಮಾಣದ ಎಣ್ಣೆಯನ್ನು ಬಾಯಲ್ಲಿ ಹಾಕಿಕೊಂಡು ಬಾಯಿ ಮುಕ್ಕಳಿಸಿ. ಇದು ಬ್ಯಾಕ್ಟೀರಿಯಾ, ಮತ್ತು ವಿಷಕಾರಿ ಅಂಶಗಳನ್ನು ಬಾಯಿಯಿಂದ ಹೊರಹಾಕುವಲ್ಲಿ ಸಹಕಾರಿಯಾಗಿದೆ. ತೆಂಗಿನ ಎಣ್ಣೆ, ವಾಲ್‌ನಟ್ ಎಣ್ಣೆ, ಆಲೀವ್ ಆಯಿಲ್ ಅನ್ನು ಈ ವಿಧಾನಕ್ಕಾಗಿ ನಿಮಗೆ ಬಳಸಿಕೊಳ್ಳಬಹುದು.

ಆಯುರ್ವೇದಲ್ಲಿ ದೇಹವನ್ನು ಸಾಮರ್ಥ್ಯವಾಗಿಡುವಲ್ಲಿ ತೈಲದ ಬಾಯಿ ಮುಕ್ಕಳಿಸುವಿಕೆ ಪರಿಣಾಮಕಾರಿ ವಿಧಾನವಾಗಿದೆ. ಬಾಯಿಯ ಹಾಗೂ ಹೊರಗಿನ ಸ್ವಚ್ಛತೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಮೊಡವೆಯಿಂದ ವಿಷಕಾರಿ ಅಂಶಗಳಿಂದ ಉತ್ತಮ ಪ್ರಯೋಜನವನ್ನು ಉಂಟುಮಾಡುತ್ತದೆ. ಆಯಿಲ್ ಪುಲ್ಲಿಂಗ್‌ನಿಂದ ಉತ್ತಮ ಸ್ವಾಸ್ಥ್ಯ ಹೇಗೆ ಪಡೆದುಕೊಳ್ಳುವುದು ಎಂಬುದನ್ನು ತಿಳಿದುಕೊಳ್ಳಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಲಿಂಬೆ ಹಣ್ಣು ಉಪಯೋಗದ ಹಿಂದಿರುವ ರಹಸ್ಯವೇನು?

ಸೈನಸ್‌ಗೆ ಪರಿಹಾರ

ಸೈನಸ್‌ಗೆ ಪರಿಹಾರ

ಸೈನಸ್ ಮತ್ತು ಇತರ ಕಾಯಿಲೆಗಳನ್ನು ದೂರವಿಡಲು ಆಯಿಲ್ ಪುಲ್ಲಿಂಗ್ ಸಹಕಾರಿಯಾಗಿದೆ. ಬಾಯಿಯಲ್ಲಿರುವ ಬ್ಯಾಕ್ಟೀರಿಯಾ ಮತ್ತು ಇತರ ವಿಷಕಾರಿ ಅಂಶಗಳನ್ನು ಹೊರಹಾಕುವ ಈ ವಿಧಾನ ಮ್ಯೂಕಸ್ ಒಳಚರ್ಮದ ಆರೋಗ್ಯಕ್ಕೆ ರಕ್ಷಕನಾಗಿದೆ.

ಸಂಧಿವಾತ

ಸಂಧಿವಾತ

ಸಂಧಿ ಮತ್ತು ಬೆನ್ನು ನೋವಿನಿಂದ ಪರಿಹಾರ ಕಂಡುಕೊಳ್ಳಲು ಹಲವಾರು ಜನರು ಆಯಿಲ್ ಪುಲ್ಲಿಂಗ್ ಅನ್ನು ತಮ್ಮದಾಗಿಸಿಕೊಂಡಿದ್ದಾರೆ. ಆಯಿಲ್ ಪುಲ್ಲಿಂಗ್ ವಿಧಾನ ಫಲವನ್ನು ಸ್ವಲ್ಪ ನಿಧಾನವಾಗಿ ದಯಪಾಲಿಸುತ್ತದಾದರೂ ಸಂಧಿವಾತವನ್ನು ಬುಡದಿಂದ ಹೊಡೆದೋಡಿಸುತ್ತದೆ.

ದುರ್ವಾಸನೆ

ದುರ್ವಾಸನೆ

ಅಯಿಲ್ ಪುಲ್ಲಿಂಗ್ ಬ್ಯಾಕ್ಟೀರಿಯಾವನ್ನು ಹೇಗೆ ದೂರಮಾಡುತ್ತದೋ ಅಂತೆಯೇ ಬಾಯಿ ವಾಸನೆಯನ್ನು ನಿವಾರಿಸುವಲ್ಲಿ ಸರಳ ಮತ್ತು ನೈಸರ್ಗಿಕ ವಿಧಾನವಾಗಿದೆ.

ರಕ್ತಒಸರುವ ವಸಡುಗಾಗಿ

ರಕ್ತಒಸರುವ ವಸಡುಗಾಗಿ

ಕೆಲವೊಂದು ಶೀತಲ ತೈಲವನ್ನು ಈ ಸಮಸ್ಯೆಯ ಪರಿಹಾರಕ್ಕಾಗಿ ಆಯಿಲ್ ಪುಲ್ಲಿಂಗ್ ವಿಧಾನಕ್ಕೆ ಬಳಸಿಕೊಳ್ಳಲಾಗುತ್ತದೆ. ವಸಡನ್ನು ಸುದೃಢವಾಗಿಸಿ ದಂತಕುಳಿಯ ವಿರುದ್ಧ ಹೋರಾಡುತ್ತದೆ ಮತ್ತು ಸೆನ್ಸಿಟಿವಿಟಿಯನ್ನು ತಗ್ಗಿಸುತ್ತದೆ.

ಥೈರಾಯ್ಡ್ ಉಪಶಮನ

ಥೈರಾಯ್ಡ್ ಉಪಶಮನ

ಆಯಿಲ್ ಪುಲ್ಲಿಂಗ್‌ನ ಆರೋಗ್ಯಕರ ಪ್ರಯೋಜನ ಇದಾಗಿದ್ದು ಥೈರಾಯ್ಡ್ ಅನ್ನು ನೈಸರಗಿಕವಾಗಿ ಶಮನಗೊಳಿಸುತ್ತದೆ. ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳಲು ತೆಂಗಿನೆಣ್ಣೆಯನ್ನು ಬಳಸಿ.

ಬಾಯಿಯ ಆರೋಗ್ಯ

ಬಾಯಿಯ ಆರೋಗ್ಯ

ಸುದೃಢ ಮತ್ತು ಆರೋಗ್ಯಕರ ಹಲ್ಲಿಗಾಗಿ, ಆಯಿಲ್ ಪುಲ್ಲಿಂಗ್ ಅನ್ನು ಅನುಸರಿಸಿ. ಯುಎಸ್ ಮತ್ತು ಇತರ ದೇಶಗಳಲ್ಲಿ ಈ ವಿಧಾನ ಜಾರಿಯಲ್ಲಿದೆ.

.ಒಣ ಕೆಮ್ಮು

.ಒಣ ಕೆಮ್ಮು

ಒಣ ಕೆಮ್ಮಿಗೆ ಶಾಶ್ವತ ಪರಿಹಾರವನ್ನು ನೀಡುವ ಶಕ್ತಿ ಆಯಿಲ್ ಪುಲ್ಲಿಂಗ್‌ಗಿದೆ. ಪ್ರತೀ ದಿನ ಒಂದು ಬಾರಿ ಈ ಚಿಕಿತ್ಸೆಯನ್ನು ಅನುಸರಿಸುವುದು ಇದಕ್ಕೆ ಫಲಕಾರಿಯಾಗಿದೆ.

ಹೊಳೆಯುವ ತ್ವಚೆ

ಹೊಳೆಯುವ ತ್ವಚೆ

ಹೊಳೆಯುವ ತ್ವಚೆಯನ್ನು ಪಡೆಯಲು, ಆಯಿಲ್ ಪುಲ್ಲಿಂಗ್ ವಿಧಾನ ಸಹಕಾರಿಯಾಗಿದೆ. ತ್ವಚೆಯ ಹಾನಿಗೆ ಕಾರಣವಾಗಿರುವ ವಿಷಕಾರಿ ಅಂಶಗಳನ್ನು ಇದು ಹೊರದೂಡುತ್ತದೆ.

ಮೊಡವೆಯೊಡನೆ ಹೋರಾಡುತ್ತದೆ

ಮೊಡವೆಯೊಡನೆ ಹೋರಾಡುತ್ತದೆ

ಮೊಡವೆ ಒಂದು ಸಾಮಾನ್ಯ ತ್ವಚೆಯ ಸಮಸ್ಯೆಯಾಗಿದ್ದು ಪರಿಹಾರ ಕಷ್ಟಸಾಧ್ಯವಾಗಿದೆ. ಆಯಿಲ್ ಪುಲ್ಲಿಂಗ್ ನಿಮ್ಮ ಈ ಸಮಸ್ಯೆಯನ್ನು ದೂರಮಾಡಿ ಮೊಡವೆ ಮುಕ್ತ ತ್ವಚೆಯನ್ನು ದಯಪಾಲಿಸುತ್ತದೆ. ತೆಂಗಿನಣ್ಣೆಯನ್ನು ಆಯಿಲ್ ಪುಲ್ಲಿಂಗ್‌ಗಾಗಿ ಬಳಸುವುದರಿಂದ ಮೊಡವೆ ಸಮಸ್ಯೆ ದೂರವಾಗುತ್ತದೆ.

English summary

Health Benefits Of Oil Pulling

Oil pulling is one of the powerful ways to maintain good health and cure various ailments. It is an ancient method mentioned in Ayurveda about 5,000 years ago. Although it is a weird treatment for various ailments like arthritis, thyroid and kidney problems, the ancient Ayurvedic practice is very effective and gaining popularity.
X
Desktop Bottom Promotion