For Quick Alerts
ALLOW NOTIFICATIONS  
For Daily Alerts

ಮಾವಿನ ಹಣ್ಣಿನಿಂದ ಪುರುಷರಿಗಾಗುವ ಆರೋಗ್ಯದ ಲಾಭಗಳು

By Viswanath S
|

ಮಾವಿನ ಹಣ್ಣನ್ನು ಭಾರತದಲ್ಲಿ ಹಣ್ಣುಗಳ ರಾಜ ಎನ್ನುವ ಮಾತು ಸಾಮಾನ್ಯವೇನಲ್ಲ. ಇದು ಸರ್ವೋಚ್ಛ ರುಚಿಕರವಾದ ಹಣ್ಣಾಗಿದ್ದು ಗಾಢ ಹಳದಿ ಬಣ್ಣಕ್ಕೆ ತಿರುಗಿರುವ ಮಾವಿನ ಹಣ್ಣುಗಳಲ್ಲಿ ತುಳುಕುತ್ತಿರುವ ಆರೋಗ್ಯದ ಪ್ರಯೋಜನಗಳು ತುಂಬಿವೆ.

ಮಾವಿನ ಹಣ್ಣಿನ ಆರೋಗ್ಯದ ಲಾಭಗಳು

ಈ ಬೇಸಿಗೆಯಲ್ಲಿ ನಿಮ್ಮ ನೆಚ್ಚಿನ ಮಾವಿನಹಣ್ಣುಗಳನ್ನು ತಿನ್ನುವುದರಿಂದ ನಿಮಗೆ ದೊರಕುವ ಲಾಭಗಳನ್ನು ನೋಡೋಣ ಬನ್ನಿ.

1. ಪ್ರಮುಖ ಖನಿಜಾಂಶಗಳನ್ನು ಹೊಂದಿವೆ:
ನಮ್ಮ ದೇಹಕ್ಕೆ ಅಗತ್ಯವಿರುವ ಅನೇಕ ಖನಿಜಗಳು ಮಾವಿನಹಣ್ಣಿನಲ್ಲಿರುತ್ತವೆ. ಸತು (ಜಿಂಕ್), ಪೊಟಾಸ್ಸಿಯುಮ್, ತಾಮ್ರ (ಕಾಪರ್), ಸೆಲೆನಿಯುಮ್ (ಇದೊಂದು ಉತ್ಕರ್ಷಣ ನಿರೋಧಕ ಕಿಣ್ವಗಳನ್ನು ಕಡಿಮೆ ಮಾಡುವುದಕ್ಕೆ ಸಹಕಾರಿ ಅಂಶ) ಇಂತಹ ಅಗತ್ಯ ಖನಿಜಗಳನ್ನು ಹೊಂದಿದ್ದು ನಮ್ಮ ದೇಹದ ಅರೋಗ್ಯಕ್ಕೆ ಸಹಕಾರಿಯಾಗಿರುವುದಲ್ಲದೇ ಇತರೆ ಕೊರತೆಗಳನ್ನು ತಡೆಯಲು ಸಹಾಯ ಮಾಡುತ್ತದೆ.

Health Benefits Of Mangoes For Indian Men

2. ಚಯಾಪಚಯ (ಮೆಟಬಾಲಿಸಮ್) ಪ್ರಮಾಣವನ್ನು ಅಧಿಕಗೊಳಿಸಲು ಸಹಾಯಮಾಡುತ್ತದೆ:
ಹವಾಮಾನದಲ್ಲಿ ಬಹಳ ಸೆಕೆಯಿದ್ದು ಜಿಮ್ಮಿಗೆ ಹೋಗಲು ಸೋಮಾರಿತನವಿದ್ದರೆ ಒಂದೆರಡು ಮಾವಿನಹಣ್ಣನ್ನು ತಿನ್ನಿ. ಈ ಹಣ್ಣಿನಲ್ಲಿರುವ ಅಧಿಕ ನಾರಿನಂಶವು ನಿಮ್ಮ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಚಯಾಪಚಯದ ಪ್ರಮಾಣವನ್ನು ಹೆಚ್ಚಿಸಿ ನಿಮ್ಮ ಸೊಂಟದ ಸುತ್ತ ಇರುವ ಕೊಬ್ಬನ್ನು ತಗ್ಗಿಸಲು ಸಹಾಯಮಾಡುತ್ತದೆ. ಇದರಿಂದ ನೀವು ಆರಾಮವಾಗಿ ಜಿಮ್ಮಿಗೆ ಹೋಗಬಹುದು.

3. ಕಾನ್ಸರ್ ರೋಗವನ್ನು ನಿಯಂತ್ರಣದಲ್ಲಿಡುತ್ತದೆ:
ಮಾವಿನಹಣ್ಣಿನ ಪ್ರಮುಖ ಪ್ರಯೊಜನಗಳಲ್ಲಿ ಒಂದೆಂದರೆ ತನ್ನಲ್ಲಿರುವ ಅತ್ಯಧಿಕ ವಿರೋಧಿ ಅಕ್ಸಿಡೆಂಟ್ (ಆಂಟಿ ಅಕ್ಸಿಡೆಂಟ್) ಸಹಾಯದಿಂದ ಕ್ಯಾನ್ಸರ್ ವಿರುದ್ಧ ಹೋರಾಡುವ ಗುಣ. ಇತರೆ ಯಾವ ಹಣ್ಣುಗಳಲ್ಲಿ ಇರದ ಈ ಹಣ್ಣು ಗ್ರಂಥಿಯ ಕ್ಯಾನ್ಸರ್ (ಪ್ರಾಸ್ಟೇಟ್ ಕ್ಯಾನ್ಸರ್) ನಿಂದ ಹಿಡಿದು ರಕ್ತ ಕ್ಯಾನ್ಸರ್ (ಲೂಕೋಮಿಯ) ಮತ್ತು ಅನೇಕ ವಿಧದ ಕ್ಯಾನ್ಸರ್ ವಿರುದ್ಧ ಹೋರಾಡುವ ಶಕ್ತಿಯನ್ನು ಹೊಂದಿದೆ. ಹಾಗೂ ನಿಮ್ಮಲ್ಲಿರಬಹುದಾದ ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸಲು ಸಹ ಸಹಾಯಮಾಡುತ್ತದೆ.

4. ಕ್ಷಾರೀಯ ಸಮತೋಲನ (ಆಲ್ಕಲೈನ್ ಬ್ಯಾಲನ್ಸ್) ವನ್ನು ನಿರ್ವಹಿಸುತ್ತದೆ:
ಬೇಸಿಗೆಯಲ್ಲಿ ಸಾಧಾರಣವಾಗಿ ಆಹಾರವನ್ನು ಜೀರ್ಣಿಸಿಕೊಳ್ಳಲು ಬಹಳ ಕಷ್ಟ ಮತ್ತು ಇದರಿಂದ ಹೊಟ್ಟೆಯಲ್ಲಿ ಆಮ್ಲತೆ (ಅಸಿಡಿಟಿ) ಹೆಚ್ಚಾಗುತ್ತದೆ. ಮಾವಿನಹಣ್ಣಿನಲ್ಲಿರುವ ಮ್ಯಾಲಿಕ್ ಆಮ್ಲ ಮತ್ತು ಸಿಟ್ರಿಕ್ ಆಮ್ಲ ಇವುಗಳಿಂದ ನಿಮ್ಮ ದೇಹದ ಕ್ಷಾರೀಯ ಸಮತೋಲನವನ್ನು ನಿರ್ವಹಿಸುತ್ತದೆ.

5. ನಿಮ್ಮ ಲಿಂಗ ಚಾಲನೆಯನ್ನು (ಸೆಕ್ಸ್ ಡ್ರೈವ್) ಹೆಚ್ಚಿಸುತ್ತದೆ:
ಮಾವಿನಹಣ್ಣಿನಲ್ಲಿ ವಿಟಮಿನ್ ಇ ಸಾಕಷ್ಟು ಪ್ರಮಾಣದಲ್ಲಿರುವುದರಿಂದ ನಿಮ್ಮ ಲಿಂಗ ಚಾಲನೆಯನ್ನು ಹೆಚ್ಚಿಸಲು ಸಹಾಯಕಾರಿಯಾಗಿದೆ. ಇದು ಪುರುಷರಲ್ಲಿ ಪುರುಷತ್ವವನ್ನು ಹೆಚ್ಚಿಸುವುದರಿಂದ ಅದರಲ್ಲಿರುವ ಲೈಂಗಿಕ ಬಯಕೆ ಉತ್ತೇಜಿಸುವ ಗುಣಗಳು ಇರುವುದರಿಂದ ಈ ಹಣ್ಣನ್ನು 'ಪ್ರೀತಿ ಹಣ್ಣು' (ಲವ್ ಪ್ರೂಟ್) ಎಂದೂ ಕರೆಯುತ್ತಾರೆ.

English summary

Health Benefits Of Mangoes For Indian Men

Health Benefits Of Mangoes For Indian Men
X
Desktop Bottom Promotion