For Quick Alerts
ALLOW NOTIFICATIONS  
For Daily Alerts

ಚಳಿಗಾಲದಲ್ಲಿ ಹೆಚ್ಚು ನೀರು ಸೇವನೆ ಏಕೆ ಅತ್ಯವಶ್ಯಕ?

By Super
|

ಚಳಿಗಾಲ ಮೈ ಕೊರೆಯುತ್ತಿದೆ. ಗಡ ಗಡ ಎಂದು ಮೈ ನಡುಗಿಸುವ ಚಳಿಯು ನಮ್ಮನ್ನು ಮನೆಗಳಿಂದ ಹೊರ ಬರದಂತೆ ಮಾಡುತ್ತಿದೆ. ಬೆಚ್ಚಗೆ ಮನೆಯಲ್ಲಿಯೋ, ಆಫೀಸ್‌ನಲ್ಲೋ ಕುಳಿತು ಬಿಸಿ ಬಿಸಿಯಾದ ಹಬೆಯಾಡುವ ಚಹಾ ಅಥವಾ ಕಾಫಿಯನ್ನು ಕುಡಿಯುತ್ತ ಮೈಯನ್ನು ಬೆಚ್ಚಗೆ ಮಾಡಿಕೊಳ್ಳೋಣ ಎಂದು ನಮಗನ್ನಿಸುತ್ತದೆ.

ಇಂತಹ ಆಲೋಚನೆ ನಿಮಗೂ ಬಂದಿರಬಹುದು. ಇದು ಕೇಳಲು ಸ್ನೇಹಶೀಲವಾದ ಮತ್ತು ವಿಶ್ರಾಂತಿದಾಯಕವಾದ ಹವಾಮಾನದಂತೆ ಕಾಣುತ್ತದೆ. ಆದರೆ ಈ ಹವಾಮಾನವು ನಮ್ಮನ್ನು ಒಂದು ಅಂಶದಿಂದ ದೂರ ಇಡುತ್ತದೆ, ಅದು - ನೀರು. ಹೌದು ಚಳಿಗಾಲದಲ್ಲಿ ನಾವು ನೀರು ಕುಡಿಯುವುದನ್ನುಮರೆಯುತ್ತೇವೆ. ಈ ನಡುಗಿಸುವ ಚಳಿಗಾಲದ ತಿಂಗಳುಗಳಲ್ಲಿ ನಾವು ದಿನ ನಿತ್ಯ ಸೇವಿಸುವ ನಮ್ಮ ಪಾಲಿನ ನೀರನ್ನು ಸೇವಿಸಲು ಮರೆಯುತ್ತೇವೆ.

ನೀರಿನಿಂದ ಆರೋಗ್ಯ ಲಭಿಸುತ್ತದೆ ಎಂದು ನಮಗೆ ಗೊತ್ತಿದ್ದರು, ನಾವು ಅದರ ಅಕ್ಕ ಪಕ್ಕ ಸಹ ಸುಳಿಯದೆ ದೂರ ನಿಲ್ಲುತ್ತೇವೆ. ನಮ್ಮ ದೇಹದಲ್ಲಿರುವ ಶೇ.70 ಭಾಗವು ನೀರಿನಿಂದ ತುಂಬಿರುತ್ತದೆ. ತನ್ನ ಎಲ್ಲಾ ಮೂಲಭೂತ ಅಗತ್ಯಗಳಿಗೆ ದೇಹವು ಅವಲಂಬಿಸಿರುವುದು ನೀರನ್ನೆ. ಚಳಿಗಾಲದಲ್ಲಿ ನೀರನ್ನು ಏಕೆ ಕಡಿಮೆ ಸೇವಿಸುತ್ತೇವೆ ಎನ್ನುವ ಮೊದಲು ಈ ಅಂಶಗಳನ್ನು ಒಮ್ಮೆ ನೋಡಿ.

ಚಳಿಗಾಲ ಎಂಬ ಮಾತು ಬಂದ ಕೂಡಲೆ ನಾವು ನಮ್ಮ ದೇಹವನ್ನು ಬೆಚ್ಚಗೆ ಇರಿಸಿಕೊಳ್ಳಲು ಬೇಕಾಗುವ ಅಂಶಗಳ ಬಗ್ಗೆ ಮಾತನಾಡುತ್ತೇವೆ. ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆಂದು ಚಿಂತಿಸುತ್ತೇವೆ. ಅದಕ್ಕಾಗಿ ಸರಿಯಾದ ಆಹಾರವನ್ನು ಸೇವಿಸುತ್ತೇವೆ. ನಮ್ಮ ತಲೆ, ದೇಹ ಮತ್ತು ಕಾಲುಗಳನ್ನು ಸರಿಯಾಗಿ ಮುಚ್ಚಿಕೊಳ್ಳುತ್ತೇವೆ. ಆದರೂ ನೀರನ್ನು ಮಾತ್ರ ಅಪರೂಪವಾಗಿ ಸೇವಿಸುತ್ತೇವೆ.

ಚಳಿಗಾಲದಲ್ಲಿ ನಿರ್ಜಲೀಕರಣದ ಗುರುತುಗಳನ್ನು ನಾವು ಒಡೆದ ತ್ವಚೆ ಮತ್ತು ತುಟಿಗಳ ರೂಪದಲ್ಲಿ ನೋಡಬಹುದು. ನಮ್ಮ ಬಾಯಿ ಒಣಗಿಕೊಂಡು ಹೋಗುವುದನ್ನು ನಾವು ನೋಡಬಹುದು, ಆದರೂ ನಾವು ನೀರು ಕುಡಿಯಲು ಹಿಂದೆ ಮುಂದೆ ಯೋಚಿಸುತ್ತೇವೆ. ಅದರ ಬದಲಿಗೆ ನಾವು ಬಿಸಿ ಬಿಸಿಯಾಗಿರುವ ಪಾನೀಯಗಳನ್ನು ಕುಡಿಯಲು ಹಾತೊರೆಯುತ್ತೇವೆ.

ಆದ್ದರಿಂದ ಕಾಫಿ ಮತ್ತು ಟೀಗಳಂತಹ ಪಾನೀಯಗಳನ್ನು ಕುಡಿಯಲು ಹೋಗುವ ಬದಲು ಗಿಡಮೂಲಿಕೆಗಳಿಂದ ತಯಾರಿಸಿದ ಚಹಾವನ್ನು ಸೇವಿಸುವುದು ಒಳ್ಳೆಯದು. ಇದು ನಿಮ್ಮ ದೇಹವು ಬೆಚ್ಚಗಿನ ಪಾನೀಯವನ್ನು ಸೇವಿಸುವುದರ ಆನಂದವನ್ನು ಅನುಭವಿಸುವ ಜೊತೆಗೆ, ನೀರಿನಿಂದ ದೊರೆಯುವ ಪ್ರಯೋಜನಗಳನ್ನು ಸಹ ತನ್ನದಾಗಿಸಿಕೊಳ್ಳುತ್ತದೆ. ಬನ್ನಿ ಚಳಿಗಾಲದಲ್ಲಿ ನೀರನ್ನು ಸೇವಿಸುವುದರಿಂದ ದೊರೆಯುವ ಪ್ರಯೋಜನಗಳ ಕುರಿತು ತಿಳಿದುಕೊಳ್ಳೋಣ. ಚಳಿಗಾಲದ ತರಕಾರಿ ಬಳಸಿ ತ್ವಚೆಯ ರಕ್ಷಣೆ ಹೇಗೆ?

ದೇಹದ ಆಂತರಿಕ ಕಾರ್ಯ ವಿಧಾನಗಳು
ದೇಹದ ಆಂತರಿಕ ಕಾರ್ಯ ವೈಖರಿಗಳ ವಿಚಾರಕ್ಕೆ ಬಂದರೆ, ನೀರೇ ಅಲ್ಲಿರುವ ಎಲ್ಲಾ ಕಾರ್ಯಗಳನ್ನು ಮಾಡಿ ಮುಗಿಸುತ್ತದೆ. ಇದರಲ್ಲಿ ಸ್ವಲ್ಪ ಭಾಗವು ದೇಹದ ಉಷ್ಣಾಂಶವನ್ನು ನಿರ್ವಹಿಸಿದರೆ, ರಾಸಾಯನಿಕ ಪ್ರಕ್ರಿಯೆಗಳು ಮತ್ತು ಪೋಷಕಾಂಶಗಳ ವರ್ಗಾವಣೆಗೆ ಸ್ವಲ್ಪ ಭಾಗವು ಶ್ರಮಿಸುತ್ತದೆ. ಆಮೇಲೆ ಬಾಯಿಯಲ್ಲಿ ಉತ್ಪತ್ತಿಯಾಗುವ ಲಾಲಾರಸ, ಮೂಳೆಗಳ ನಡುವೆ ಇರುವ ಜಿಡ್ಡಿನಂಶ, ನರ ಮಂಡಲ, ಮ್ಯೂಕಸ ಪೊರೆ ಮತ್ತು ಕಣ್ಣುಗಳಲ್ಲಿ ಉಳಿದ ಭಾಗದ ನೀರು ಶೇಖರಣೆಗೊಂಡಿರುತ್ತದೆ. ನೀರಿನ ಕೊರತೆಯಿಂದಾಗಿ ಇವುಗಳ ಕಾರ್ಯ ವೈಖರಿಯ ಮೇಲೆ ಅಡ್ಡಪರಿಣಾಮ ಬೀರುತ್ತದೆ. ಜೊತೆಗೆ ದೀರ್ಘಕಾಲದಲ್ಲಿ ಇದರಿಂದ ಪ್ರತಿಕೂಲ ಪರಿಣಾಮವನ್ನು ಎದುರಿಸಬೇಕಾಗುತ್ತದೆ.

ದೇಹದ ಸ್ವಚ್ಛತೆಯನ್ನು ಕಾಪಾಡುವುದು
ನೀರಿನಿಂದ ದೊರೆಯುವ ಮತ್ತೊಂದು ಪ್ರಯೋಜನ ಎಂದರೆ ದೇಹದಲ್ಲಿರುವ ಕಶ್ಮಲಗಳನ್ನು ಹೊರಹಾಕುವುದು. ಮೂತ್ರ ಪಿಂಡಗಳು ಮತ್ತು ಕರುಳು ತಮ್ಮ ಕಾರ್ಯವನ್ನು ನಿರ್ವಹಿಸಲು ಒಳ್ಳೆಯ ಪ್ರಮಾಣದ ನೀರನ್ನು ಬಯಸುತ್ತವೆ. ನೀರಿನ ಕೊರತೆಯಾದಾಗ ಅವುಗಳ ಕಾರ್ಯದಲ್ಲಿ ವೈಪರೀತ್ಯ ಕಾಣುತ್ತದೆ. ಇದರಿಂದ ಪ್ರತಿಕೂಲ ಪರಿಣಾಮಗಳು ಕಂಡು ಬರುತ್ತವೆ. ಉಷ್ಣಾಂಶವು ಕೆಳಗೆ ಕುಸಿಯಿತು ಎಂದ ಮಾತ್ರಕ್ಕೆ, ನಮ್ಮ ದೇಹದ ನೀರಿನ ಅಗತ್ಯವು ಇಳಿಕೆಯಾಗುತ್ತದೆ ಎಂದು ಭಾವಿಸುವ ಅಗತ್ಯವಿಲ್ಲ.

ತ್ವಚೆಯ ಮೊಯಿಶ್ಚರೈಸರ್
ಒಣ ಹವೆಯ ಮಾರುತಗಳು ಬೀಸಲಾರಂಭಿಸಿದಾಗ, ಅವು ನಮ್ಮ ತ್ವಚೆಯಲ್ಲಿರುವ ಮೊಯಿಶ್ಚರನ್ನು ಹೀರಿಕೊಳ್ಳಲಾರಂಭಿಸುತ್ತವೆ. ಇದರಿಂದ ಒಣ ತ್ವಚೆ ಮತ್ತು ತ್ವಚೆಯಲ್ಲಿ ಒಡೆತಗಳು ಕಂಡು ಬರುತ್ತವೆ. ಇದರಿಂದ ನಿಮ್ಮ ತ್ವಚೆಯು ಅಸಹ್ಯವಾಗಿ ಕಾಣುವುದರ ಜೊತೆಗೆ, ನೋವು ಸಹ ಉಂಟಾಗುತ್ತದೆ. ಹೀಗಾಗಿ ನಿಮ್ಮ ದೇಹದಲ್ಲಿರುವ ತ್ವಚೆಯನ್ನು ಒಣ ತ್ವಚೆ ಮತ್ತು ಒಡೆಯುವ ಸಮಸ್ಯೆಯಿಂದ ಕಾಪಾಡಬೇಕಾದಲ್ಲಿ, ನೀರನ್ನು ಹೆಚ್ಚಾಗಿ ಸೇವಿಸಿ. ಚಳಿಗಾಲದಲ್ಲಿ ಸಹ ನಿಮ್ಮ ದೇಹಕ್ಕೆ ಎಂಟು ಲೋಟಗಳ ನೀರು ಅಗತ್ಯವಿರುತ್ತದೆ ಎಂಬುದನ್ನು ಮರೆಯಬೇಡಿ. ಚಳಿಗಾಲದ ಋತುವಿನ ಆರೋಗ್ಯದ ಸಲಹೆ ಏನಪ್ಪ ಎಂದರೆ, ತ್ವಚೆಯನ್ನು ಆರೋಗ್ಯವಾಗಿರಿಸಿಕೊಳ್ಳಲು ನೀರನ್ನು ಸೇವಿಸಿ ಎಂಬುದು.

ಜೀರ್ಣ ಪ್ರಕ್ರಿಯೆಗೆ ಉಪಕಾರಿ
ಚಳಿಗಾಲವಿರಲಿ, ಬೇಸಿಗೆಯಿರಲಿ ಅಥವಾ ಮಳೆಗಾಲವಿರಲಿ ನಾವು ಯಾವಾಗಲು ಒಂದೇ ಬಗೆಯ ಆಹಾರವನ್ನು ಸೇವಿಸುತ್ತೇವೆ. ನಮ್ಮ ಜೀರ್ಣ ಪ್ರಕ್ರಿಯೆಗೆ ನೆರವಾಗಲು ನಾವು ಯಾವಾಗಲು ಒಂದೇ ಪ್ರಕಾರದ ನೀರನ್ನು ಸೇವಿಸುವ ಪರಿಪಾಠವನ್ನು ಇರಿಸಿಕೊಳ್ಳಬೇಕಾದುದು ಅತ್ಯಗತ್ಯ. ಆಗಲೇ ಜೀರ್ಣ ಕ್ರಿಯೆಯು ಯಾವಾಗಲು ಆರೋಗ್ಯಕರವಾಗಿ ಕೆಲಸ ಮಾಡುತ್ತದೆ. ಜೀರ್ಣಾಂಗವು ಸರಿಯಾಗಿ ಕೆಲಸ ಮಾಡಿದರೆ, ಸಾಮಾನ್ಯವಾಗಿ ಬರುವ ಕಾಯಿಲೆಗಳು ಮೂಲದಲ್ಲಿಯೇ ನಿವಾರಣೆಯಾಗುತ್ತವೆ.

English summary

Health Benefits Of Drinking Water During Winter

Winter is here. Temperatures are dipping and soon we will find ourselves curled up indoors sipping on a hot cup of tea with a heater warming up the place. Sounds really cozy and relaxing. But in this cozy atmosphere, there is one thing that most of us miss out on – water. Yes, it is water that we tend to forget.
Story first published: Thursday, December 4, 2014, 19:15 [IST]
X
Desktop Bottom Promotion