For Quick Alerts
ALLOW NOTIFICATIONS  
For Daily Alerts

ತುಳಸಿ ಚಹಾದಲ್ಲಿ ಅಡಗಿದೆ ಅದ್ಭುತ ಔಷಧೀಯ ಗುಣಗಳು

|

ತುಳಸಿ ಯಾರಿಗೆ ತಾನೇ ಗೊತ್ತಿಲ್ಲ. ಇದೊಂದು ಬಗೆಯ ಸುವಾಸನೆಯನ್ನು ಗಿಡ ಮೂಲಿಕೆಯಾಗಿದ್ದು, ವಿವಿಧ ಬಗೆಯ ತಳಿಗಳಲ್ಲಿ ನಮಗೆ ದೊರೆಯುತ್ತದೆ. ಇದನ್ನು ವಿಶ್ವದ ನಾನಾ ಪ್ರದೇಶಗಳಲ್ಲಿ ನಾವು ಕಾಣಬಹುದು. ಇದನ್ನು ಸಾಮಾನ್ಯವಾಗಿ ಅಡುಗೆಗೆ ಬಹುತೇಕ ಕಡೆಗಳಲ್ಲಿ ಬಳಸುತ್ತಾರೆ. ತುಳಸಿಯು ರುಚಿಕರವಾದ ಸ್ವಾದವನ್ನು ಹೊಂದಿರುವುದರಿಂದ ಮತ್ತು ವಿಟಮಿನ್‍ಗಳಿಂದ ಕೂಡಿರುವುದರಿಂದ, ಇದನ್ನು ಚಹಾ ಮಾಡಲು ಅತ್ಯುತ್ತಮ ಪದಾರ್ಥವನ್ನಾಗಿ ಬಳಸುತ್ತಾರೆ.

ತುಳಸಿಯ ಕಣ ಕಣದಲ್ಲಿ ಸಹ ಆರೋಗ್ಯಕಾರಿ ಪ್ರಯೋಜನಗಳು ಇರುವುದರಿಂದ ಇದನ್ನು ಚಹಾಗೆ ಬಳಸುತ್ತಾರೆ ಎಂದು ಹೇಳಬಹುದು. ಬನ್ನಿ ಅಂತಹ ಪ್ರಯೋಜನಗಳು ಯಾವುದು ಎಂಬುದನ್ನು ತಿಳಿದುಕೊಂಡು ಬರೋಣ. ಬಹುಪಯೋಗಿ ಔಷಧಗಳ ಸಂಜೀವಿನಿ 'ತುಳಸಿ'

ಅತ್ಯುತ್ತಮ ಚಿಕಿತ್ಸಕ ಗುಣಗಳು

ಅತ್ಯುತ್ತಮ ಚಿಕಿತ್ಸಕ ಗುಣಗಳು

ತುಳಸಿಯನ್ನು ಪವಿತ್ರ ತುಳಸಿ ಎಂದು ಸಹ ಕರೆಯುತ್ತಾರೆ. ಈ ಅದ್ಭುತವಾದ ಗಿಡ ಮೂಲಿಕೆಯು ಹಿಂದೂಗಳ ಪಾಲಿಗೆ ದೇವರ ಸಮಾನ ಎಂಬುದು ಗೊತ್ತಿರುವ ವಿಚಾರವೇ. ಬೆಳಗ್ಗೆ, ಸಂಜೆ ತುಳಸಿಗೆ ಕೈ ಮುಗಿಯದಿದ್ದರೆ ಅವರ ದಿನ ಪರಿಪೂರ್ಣವಾಗುವುದೇ ಇಲ್ಲ. ಸರ್ವ ರೋಗಗಳಿಗು ತುಳಸಿ ತೀರ್ಥವನ್ನೆ ಇವರು ಆಂಟಿ ಬಯೋಟಿಕ್ ರೀತಿಯಲ್ಲಿ ಸೇವಿಸುತ್ತಾರೆ. ಇನ್ನು ದೇವಾಲಯದಲ್ಲಿ ಸಹ ಇದೇ ತೀರ್ಥವನ್ನು ನಮಗೆ ಬಹುತೇಕ ಕಡೆ ನೀಡುತ್ತಾರೆ. ಇದಕ್ಕೆ ಕಾರಣ ಇದರಲ್ಲಿರುವ ಚಿಕಿತ್ಸಕ ಗುಣಗಳು. ಅದಕ್ಕೆ ಇದನ್ನು ಪ್ರತಿ ಮನೆಯಲ್ಲೂ ಬೆಳೆಸುವುದು.

ಚಿಕಿತ್ಸೆ

ಚಿಕಿತ್ಸೆ

ತುಳಸಿಯು ಸ್ಮರಣ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ನರಗಳಿಗು ಸಹ ಟಾನಿಕ್‍ನಂತೆ ವರ್ತಿಸುತ್ತದೆ. ಇದು ಶ್ವಾಸಕೋಶದ ನಾಳಗಳಿಂದ ಸಿಂಬಳವನ್ನು ಹೋಗಲಾಡಿಸಲು ಉತ್ತಮವಾಗಿ ನೆರವಾಗುತ್ತದೆ. ಇನ್ನು ತುಳಸಿ ಟೀಯನ್ನು ಸೇವಿಸುವುದರಿಂದ ಜಠರವು ಸದೃಢವಾಗುತ್ತದೆ ಮತ್ತು ಹೊಟ್ಟೆಗೆ ಸಂಬಂಧಿಸಿದ ತೊಂದರೆಗಳು ಬರುವುದಿಲ್ಲ. ಇದನ್ನು ಜೇನು ತುಪ್ಪ ಮತ್ತು ಶುಂಠಿಯ ಜೊತೆಗೆ ಸೇವಿಸುವುದರಿಂದ ಆಸ್ತಮಾ, ಶ್ವಾಸಕೋಶದಲ್ಲಿ ಕಂಡುಬರುವ ಉರಿಯೂತ ಮತ್ತು ಇನ್ನಿತರ ಶ್ವಾಸಕೋಶಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಂಡು ಬರುವುದಿಲ್ಲ.

ನೆಗಡಿ ಮತ್ತು ಜ್ವರ

ನೆಗಡಿ ಮತ್ತು ಜ್ವರ

ಹಿಂದೂ ಸಂಸ್ಕೃತಿಯಲ್ಲಿ, ತುಳಸಿ ಟೀಯನ್ನು ನೆಗಡಿ, ಜ್ವರ ಮತ್ತು ಮಲೇರಿಯಾ ಮತ್ತಿತರ ಗಂಭೀರ ಕಾಯಿಲೆಗಳಿಗೆ ಪರಿಹಾರವಾಗಿ ಬಳಸುತ್ತಾರೆ. ತುಳಸಿಯನ್ನು ಏಲಕ್ಕಿಯ ಜೊತೆಗೆ ಬೆರೆಸಿ ಸೇವಿಸುವುದರಿಂದ ಜ್ವರವು ತಕ್ಷಣ ಉಪಶಮನವಾಗುತ್ತದೆ. ಕೆಮ್ಮನ್ನು ಕಡಿಮೆ ಮಾಡುವ ಸಲುವಾಗಿ ಇದನ್ನು ಹಲವಾರು ಆಯುರ್ವೇದದ ಔಷಧಿಗಳಲ್ಲಿ ಬಳಸುತ್ತಾರೆ. ಗಂಟಲು ನೋವನ್ನು ಸಹ ತುಳಸಿ ಟೀಯಿಂದ ಪರಿಹರಿಸಿಕೊಳ್ಳಬಹುದು.

ಹೃದಯದ ಸಮಸ್ಯೆಗಳು

ಹೃದಯದ ಸಮಸ್ಯೆಗಳು

ತುಳಸಿ ಟೀಯನ್ನು ಸೇವಿಸುವುದರಿಂದ ಹೃದಯದ ಸಮಸ್ಯೆಯಿಂದ ಕಾಡುವ ಸಾಮಾನ್ಯ ಸುಸ್ತು ಮುಂತಾದ ಹೃದ್ರೋಗಗಳನ್ನು ಪರಿಹರಿಸಿಕೊಳ್ಳಬಹುದು. ಇದು ರಕ್ತದಲ್ಲಿರುವ ಕೊಲೆಸ್ಟ್ರಾಲನ್ನು ಕಡಿಮೆ ಮಾಡಲು ಸಹ ನೆರವಾಗುತ್ತದೆ.

ಕಣ್ಣಿನ ಸಮಸ್ಯೆಗಳು

ಕಣ್ಣಿನ ಸಮಸ್ಯೆಗಳು

ತುಳಸಿಯನ್ನು ಸೇವಿಸುವುದರಿಂದ ದೃಷ್ಟಿಯು ಸಹ ಸುಧಾರಣೆಗೊಳ್ಳುತ್ತದೆ. ವಿಶೇಷವಾಗಿ ವಿಟಮಿನ್ ಎ ಸಮಸ್ಯೆ ಇರುವುವರಲ್ಲಿ, ಇದನ್ನು ಸೇವಿಸುವುದರಿಂದ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಇದರ ಜೊತೆಗೆ ಇರುಳಾಂಧತೆಯನ್ನು ಸಹ ಇದು ನಿವಾರಿಸುತ್ತದೆ.

ಕೀಟಾಣುಗಳ ಕಡಿತ

ಕೀಟಾಣುಗಳ ಕಡಿತ

ತುಳಸಿ ಟೀಯನ್ನು ತಯಾರಿಸಲು ಬಳಸುವ ಕ್ಯಾಪ್ಸುಲ್‍ಗಳನ್ನು ಪುಡಿ ಮಾಡಿ ನಿಂಬೆ ರಸದಲ್ಲಿ ಬೆರೆಸಿ ಅದನ್ನು ಕೀಟಗಳು ಕಡಿದಿರುವ ಸ್ಥಳದಲ್ಲಿ ಅಥವಾ ಕೊಂಡಿಗಳು ಸಿಕ್ಕಿಕೊಂಡಿರುವ ಭಾಗದಲ್ಲಿ ಹಚ್ಚಿದರೆ ಗುಣವನ್ನು ಕಾಣಬಹುದು.

ಮಕ್ಕಳಲ್ಲಿ ವೈಧ್ಯಕೀಯ ಸಮಸ್ಯೆಗಳು

ಮಕ್ಕಳಲ್ಲಿ ವೈಧ್ಯಕೀಯ ಸಮಸ್ಯೆಗಳು

ಮಕ್ಕಳಲ್ಲಿ ಜಠರದ ಫ್ಲೂ ಇದ್ದಾಗ ನಾಸಿಯಾ, ವಾಂತಿ ಅಥವಾ ಡಯೆರ್ರಿಯಾಗಳು ಕಂಡು ಬರುತ್ತವೆ. ಇದರ ಜೊತೆಗೆ ಮಕ್ಕಳಲ್ಲಿ ಜಠರದ ವೈರಸ್ ಇದ್ದಾಗ ಕಂಡು ಬರುವ ಜ್ವರವನ್ನು ಸಹ ನಾವು ಕಾಣಬಹುದು. ಈ ಎಲ್ಲಾ ಸಮಸ್ಯೆಗಳು ಕಂಡು ಬಂದಾಗ ತುಳಸಿಯ ಟೀಯನ್ನು ನೀಡಿದರೆ ಅವರು ಗುಣಮುಖರಾಗುತ್ತಾರೆ.

ಬಾಯಿ ಮತ್ತು ಹಲ್ಲಿನ ಸಮಸ್ಯೆಗಳು

ಬಾಯಿ ಮತ್ತು ಹಲ್ಲಿನ ಸಮಸ್ಯೆಗಳು

ಕ್ಯಾಪ್ಸುಲ್‍ಗಳನ್ನು ತೆರೆದು ಪುಡಿ ಮಾಡಿ ಅದನ್ನು ಹಲ್ಲುಗಳಿಗೆ ಬ್ರಷ್ ಮಾಡಲು ಬಳಸಬಹುದು. ಇದರಿಂದ ದವಡೆಗಳಲ್ಲಿರುವ ಸಮಸ್ಯೆಗಳನ್ನು ಹೋಗಲಾಡಿಸಿಕೊಳ್ಳಬಹುದು. ಇದರ ಜೊತೆಗೆ ಬಾಯಿಯಲ್ಲಿರುವ ಇನ್‍ಫೆಕ್ಷನ್‍ಗಳನ್ನು ಸಹ ಹೋಗಲಾಡಿಸಿಕೊಳ್ಳಲು ಸಹ ಇದರಿಂದ ನೆರವಾಗಬಹುದು.

ಒತ್ತಡ ನಿವಾರಕ

ಒತ್ತಡ ನಿವಾರಕ

ತುಳಸಿಯನ್ನು ಶತ ಶತಮಾನಗಳಿಂದ ಒತ್ತಡ ನಿವಾರಕವನ್ನಾಗಿ ಬಳಸಲಾಗುತ್ತದೆ. ತುಳಸಿಯಿಂದ ಮಾಡಿರುವ ಟೀಯನ್ನು ದಿನವು ಸೇವಿಸುವುದರಿಂದ ನಿಮ್ಮ ಒತ್ತಡವನ್ನು ನಿವಾರಿಸಿಕೊಂಡು ವಿಶ್ರಾಂತಿಯನ್ನು ಪಡೆಯಬಹುದು.ಆದ್ದರಿಂದ ನಿಮಗೆ ಒತ್ತಡವು ಯಾವಾಗ ಕಾಡುತ್ತದೋ, ಆಗ ತುಳಸಿ ಟೀಯನ್ನು ಸೇವಿಸಿ. ನಿಮ್ಮನ್ನು ನೀವು ಶಾಂತಗೊಳಿಸಿಕೊಳ್ಳಿ.

ಹೊಟ್ಟೆ ನೋವು

ಹೊಟ್ಟೆ ನೋವು

ನೀವು ಹೊಟ್ಟೆ ನೋವಿನಿಂದ ನರಳುವಾಗ ತುಳಸಿ ಟೀಯನ್ನು ಸೇವಿಸಬಹುದು. ಇದರಿಂದ ಜೀರ್ಣಾಂಗ ವ್ಯೂಹವು ಆರಾಮಗೊಳ್ಳುತ್ತದೆ. ತುಳಸಿ ಟೀಯನ್ನು ಸೇವಿಸುವುದರಿಂದ ನಿಮ್ಮ ದೇಹದಲ್ಲಿ ಪೊಟಾಶಿಯಂನಂತಹ ವಿಟಮಿನ್‍ಗಳು ಹೊಟ್ಟೆನೋವು, ನಾಸಿಯ ಮುಂತಾದ ಸಮಸ್ಯೆಗಳನ್ನು ಹೋಗಲಾಡಿಸುತ್ತದೆ.

ಸದೃಢವಾದ ವಿಟಮಿನ್‍ಗಳು ಮತ್ತು ಆಂಟಿ ಆಕ್ಸಿಡೆಂಟ್‍ಗಳು

ಸದೃಢವಾದ ವಿಟಮಿನ್‍ಗಳು ಮತ್ತು ಆಂಟಿ ಆಕ್ಸಿಡೆಂಟ್‍ಗಳು

ತುಳಸಿಯಲ್ಲಿ ಸಮೃದ್ಧವಾದ ವಿಟಮಿನ್ ಎ, ಸಿ, ಕಬ್ಬಿಣಾಂಶ ಮತ್ತು ಪೊಟಾಶಿಯಂ ಹಾಗು ಮ್ಯೆಗ್ನಿಶಿಯಂಗಳು ಇರುತ್ತವೆ. ಈ ವಿಟಮಿನ್‍ಗಳು ನಿಮ್ಮ ದೇಹದ ಕಾರ್ಯ ವೈಖರಿಯನ್ನು ಸುಧಾರಿಸುತ್ತದೆ. ಈ ಟೀಯಲ್ಲಿರುವ ಸಮೃದ್ಧವಾದ ಆಂಟಿ ಆಕ್ಸಿಡೆಂಟ್‍ಗಳು ನಮ್ಮ ದೇಹಕ್ಕೆ ಒಳ್ಳೆಯ ಪ್ರಯೋಜನಗಳನ್ನು ಒದಗಿಸುತ್ತದೆ. ಈ ಆಂಟಿ ಆಕ್ಸಿಡೆಂಟ್‍ಗಳು ನಮ್ಮ ದೇಹದಲ್ಲಿನ ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ ಮತ್ತು ದೇಹದಲ್ಲಿರುವ ಕಿಣ್ವಗಳನ್ನು ನಂಜು ನಿರೋಧಕಗೊಳಿಸಲು ಸಹಾಯ ಮಾಡುತ್ತದೆ. ಇದರ ಜೊತೆಗೆ ಕ್ಯಾನ್ಸರ್ ನಿವಾರಿಸಲು ಸಹ ತುಳಸಿ ಟೀ ನೆರವಾಗುತ್ತದೆ ಎಂದು ನ್ಯಾಷನಲ್ ಕ್ಯಾನ್ಸರ್ ಇನ್ಸಿಟ್ಯೂಟ್ ಅಧ್ಯಯನಗಳು ಸಾಭೀತು ಮಾಡಿವೆ.

ಆಹ್ಲಾದಕತೆಯ ಪರಿಣಾಮಗಳು

ಆಹ್ಲಾದಕತೆಯ ಪರಿಣಾಮಗಳು

ತುಳಸಿ ಟೀಯು ಅತ್ಯಂತ ಆರೋಗ್ಯಕರ ಮತ್ತು ವಿಟಮಿನ್ ಯುಕ್ತವಾಗಿರುವುದರಿಂದ, ಇದನ್ನು ಸೇವಿಸುವುದರಿಂದ ಆಹ್ಲಾದಕತೆಯನ್ನು ಒದಗಿಸಲು ಪರಿಣಾಮಕಾರಿಯಾಗಿ ನೆರವಾಗುತ್ತದೆ. ಇದರಲ್ಲಿರುವ ಉತ್ತೇಜಕ ಗುಣಗಳು ಸುಸ್ತು ಮತ್ತು ನಿಶ್ಶಕ್ತಿಗಳನ್ನು ನಿವಾರಿಸುತ್ತದೆ. ತುಳಸಿಯು ಸುರಕ್ಷಿತ ಮತ್ತು ಸ್ವಾಭಾವಿಕವಷ್ಟೇ ಅಲ್ಲ, ಆರೋಗ್ಯಕರವು ಹೌದು. ಈ ಟೀಯನ್ನು ನೀವು ಸುಲಭವಾಗಿ ಆನ್‍ಲೈನ್ ಶಾಪಿನಲ್ಲಿ, ಸ್ಥಳೀಯ ಅಂಗಡಿಗಳಲ್ಲಿ ಮತ್ತು ಬುದ್ಧ ಟೀಸ್ ಮುಂತಾದ ಕಡೆಗಳಲ್ಲಿ ಕೊಂಡುಕೊಳ್ಳಬಹುದು. ತುಳಸಿ ಟೀಯನ್ನು ದಿನದ ಯಾವ ಸಮಯದಲ್ಲಿ ಬೇಕಾದರು ನಾವು ಸೇವಿಸಬಹುದು. ನಿಮಗೆ ಯಾವಾಗ ಬೇಕಾದರು ಒಂದು ಬಿಸಿಯಾದ ಪಾನೀಯವನ್ನು ಸೇವಿಸಿ, ನಿಮ್ಮ ಮೈಮನಗಳಿಗೆ ಮುದ ನೀಡಬೇಕು ಹಾಗು ದೇಹಕ್ಕೆ ಶಕ್ತಿಯನ್ನು ಸಹ ನೀಡಬೇಕು ಎಂದುಕೊಂಡಲ್ಲಿ ತುಳಸಿ ಟೀಯನ್ನು ಸೇವಿಸಬಹುದು.

English summary

Health Benefits of Basil Tea

Basil is an aromatic herb that comes in a variety of different species. It is grown widely in various areas of the world and is known most commonly for being used for culinary purposes. However since basil holds a tasteful flavor and is vitamin-filled it has proven itself to be a great ingredient to use in teas as well.
X
Desktop Bottom Promotion