For Quick Alerts
ALLOW NOTIFICATIONS  
For Daily Alerts

ತ್ವರಿತ ತೂಕ ಇಳಿಕೆಗೆ ಹಸಿರು ಚಹಾವನ್ನು ಒಮ್ಮೆ ಪ್ರಯತ್ನಿಸಿ

|

ಹಸಿರು ಚಹಾ (ಗ್ರೀನ್ ಟೀ) ಮಾರುಕಟ್ಟೆಗಳಲ್ಲಿ ಇತರ ಚಹಾಗಳಿಗಿಂತ ಜನಪ್ರಿಯವಾದುದು. ಹಲವಾರು ಕಾರಣಗಳಿಗಾಗಿ ವಿಶ್ವದ ಹೆಚ್ಚಿನ ಜನರು ಈ ಚಹಾವನ್ನು ದಿನವೂ ಸೇವಿಸುತ್ತಾರೆ. ಬ್ಲ್ಯಾಕ್ ಚಹಾ ಮತ್ತು ಹಾಲಿನ ಚಹಾ ಕೂಡ ಹಸಿರು ಚಹಾಯಿಂದಾಗಿ ಮೂಲೆ ಗುಂಪಾಗಿದೆ ಎಂಬುದು ನಂಬುವ ವಿಷಯವಾಗಿದೆ. ಅಷ್ಟು ಜನಪ್ರಿಯತೆ ಮೆಚ್ಚುಗೆ ಈ ಗ್ರೀನ್ ಟೀ ಗೆ ಇದೆ.

ನಿತ್ಯವೂ ಹಸಿರು ಚಹಾ (ಗ್ರೀನ್ ಟೀ) ಯನ್ನು ಸೇವಿಸುವವರು ಇತರರಿಗಿಂತ ಆರೋಗ್ಯವಂತರು ಮತ್ತು ಉತ್ಸಾಹಿತರಾಗಿರುತ್ತಾರೆ. ಸಂಶೋಧನೆಗಳ ಪ್ರಕಾರ ಹಸಿರು ಚಹಾ ನಿಮ್ಮ ತೂಕವನ್ನು ಇಳಿಸುವಲ್ಲಿ ಸಹಕಾರಿ, ಕ್ಯಾನ್ಸರ್ ರೋಗವನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಮತ್ತು ದೇಹದ ನಿರೋಧಕ ವ್ಯವಸ್ಥೆಯನ್ನು ಸುದೃಢಗೊಳಿಸುತ್ತದೆ ಎಂಬುದು ಸಾಬೀತಾಗಿದೆ.

ನೀವು ತ್ವರಿತವಾಗಿ ತೂಕವನ್ನು ಇಳಿಸಬೇಕೆಂಬ ಯೋಜನೆಯಲ್ಲಿದ್ದರೆ, ನೀವು ಹಸಿರು ಚಹಾಗೆ ನಿಮ್ಮನ್ನು ಒಪ್ಪಿಸಿಕೊಳ್ಳಲೇಬೇಕು. ನಿಮ್ಮ ಅತಿಯಾದ ತೂಕವನ್ನು ಇಳಿಸಲು ಮಾರುಕಟ್ಟೆಯಲ್ಲಿ ಲಭ್ಯವಿರುವ ಉತ್ತಮ ಚಹಾಗಳಲ್ಲಿ ಹಸಿರು ಚಹಾ ಚಮತ್ಕಾರವನ್ನೇ ಮಾಡುತ್ತದೆ.

ನಿಮ್ಮನ್ನು ಆರೋಗ್ಯವಂತರನ್ನಾಗಿಸಿ ಫಿಟ್ ಮಾಡಲು ಹಸಿರು ಚಹಾ ಸಹಾಯಕ. ನಿಮ್ಮ ತೂಕವನ್ನು ಇಳಿಸಲು ಸಹಾಯಕವಾಗಿರುವ ಹಸಿರು ಚಹಾ ಒಂದು ಸರಳವಾದ ಸಲಹೆಯಾಗಿದೆ. ಅತಿಯಾದ ತೂಕವನ್ನು ನಿಯಂತ್ರಣಕ್ಕೆ ತರಲು ಸಹಕಾರಿ ಕಡಿಮೆ ಕ್ಯಾಲೋರಿ ಆಹಾರವನ್ನು ಸೇವಿಸುವುದಾಗಿದೆ.

ಹಸಿರು ಚಹಾ ಸೇವನೆಯು ನಿಮ್ಮ ಚಯಾಪಚಯ ಕ್ರಿಯೆಯನ್ನು ಚುರುಕಾಗಿಸುತ್ತದೆ. ನೀವು ಗ್ರೀನ್ ಚಹಾವನ್ನು ನಿಮ್ಮ ತೂಕ ಇಳಿಸುವಿಕೆಯಲ್ಲಿ ಪ್ರಧಾನ ಪಾನೀಯವಾಗಿ ಆಯ್ಕೆಮಾಡಿಕೊಂಡಿದ್ದರೆ ನಿಮ್ಮ ಹೆಚ್ಚಿನ ಕೊಬ್ಬನ್ನು ಕರಗಿಸುವಲ್ಲಿ ಇದು ಖಂಡಿತ ಸಹಾಯ ಮಾಡುತ್ತದೆ.

ಹಸಿರು ಚಹಾವನ್ನು ಸೇವಿಸಿದ ನಂತರ ನಂತರ 30 ರಿಂದ 40 ನಿಮಿಷಗಳಿಗೆ ನಿಮಗೆ ಹಸಿವು ಉಂಟಾಗುವುದಿಲ್ಲ. ನಿಮ್ಮ ದೇಹಕ್ಕೆ ತಿನ್ನುವ ಚಪಲ ಉಂಟಾಗದೇ ಇದ್ದಲ್ಲಿ ತೂಕ ಸಾಮಾನ್ಯವಾಗಿ ನಿಯಂತ್ರಣಕ್ಕೆ ಬರುತ್ತದೆ. ನೀವು ಹಸಿರು ಚಹಾ ಡಯೆಟ್‌ನಲ್ಲಿದ್ದರೆ ಇಲ್ಲಿ ಕೆಲವೊಂದು ನಿಯಮಗಳಿವೆ.

ಸ್ಲಿಮ್ ಮತ್ತು ಸುಂದರವಾಗಿರಲು ಗ್ರೀನ್ ಟೀ ಕುಡಿಯಿರಿ

ನಿಮ್ಮ ಕಾಫಿ ಸೇವನೆಯನ್ನು ತ್ಯಜಿಸಿ

ನಿಮ್ಮ ಕಾಫಿ ಸೇವನೆಯನ್ನು ತ್ಯಜಿಸಿ

ಕಾಫಿಗಿಂತಲೂ ಹಸಿರು ಚಹಾ ನಿಮ್ಮ ಹೃದಯಕ್ಕೆ ಸಂಜೀವಿನಿಯಾಗಿ ಕೆಲಸ ಮಾಡುತ್ತದೆ. ನಿಮ್ಮನ್ನು ಕ್ರಿಯಾತ್ಮಕವಾಗಿ ಇರಿಸುವಲ್ಲಿ ಹಸಿರು ಚಹಾ ಪರಿಣಾಮಕಾರಿಯಾಗಿದೆ. ನಿಮಗೆ ಹೃದಯಕ್ಕೆ ರಕ್ತವನ್ನು ಪೂರೈಸಿ ಕ್ಯಾಲೋರಿಯನ್ನು ಕರಗಿಸುವಲ್ಲಿ ಸಹಕಾರಿಯಾಗಿದೆ. ನೀವು ವೇಗವಾಗಿ ತೂಕವನ್ನು ಇಳಿಸಬೇಕೆಂಬ ಬಯಕೆಯನ್ನು ಹೊಂದಿದ್ದರೆ ಹಸಿರು ಚಹಾ ಸೇವನೆಯನ್ನು ನಿಯಮಿತವಾಗಿ ಮಾಡಿ.

ನಿಮ್ಮ ಊಟದೊಂದಿಗೆ

ನಿಮ್ಮ ಊಟದೊಂದಿಗೆ

ದೊಡ್ಡ ಗಾತ್ರದ ಪಾತ್ರೆಯಲ್ಲಿ ಹಸಿರು ಚಹಾವನ್ನು ತಯಾರಿಸಿಟ್ಟುಕೊಳ್ಳಿ. ದಿನಪೂರ್ತಿ ಇದನ್ನು ಸೇವಿಸುತ್ತಿರಿ. ಊಟದ ನಡುವೆ ಕೂಡ ಹಸಿರು ಚಹಾವನ್ನು ನೀವು ಸೇವಿಸಬಹುದಾಗಿದೆ.

ಹೆಚ್ಚು ಸೇವಿಸಿ

ಹೆಚ್ಚು ಸೇವಿಸಿ

ನಿಮ್ಮ ಹಸಿವಿನ ತುಡಿತವನ್ನು ಆದಷ್ಟು ಕಡಿಮೆ ಮಾಡಬೇಕೆಂಬ ಬಯಕೆ ನಿಮ್ಮದಾಗಿದ್ದಲ್ಲಿ ದಿನಪೂರ್ತಿ ಇದನ್ನು ಹೆಚ್ಚು ಸೇವಿಸಿ. ಊಟದ ಮುಂಚೆ ಒಂದು ಕಪ್‌ನಷ್ಟು ಹಸಿರು ಚಹಾವನ್ನು ನೀವು ಸೇವಿಸಿದಲ್ಲಿ ಹೆಚ್ಚು ಊಟ ಮಾಡಬೇಕೆನ್ನುವ ನಿಮ್ಮ ತುಡಿತ ನಿಯಂತ್ರಣದಲ್ಲಿರುತ್ತದೆ. ಊಟದ ನಂತರ ಕೂಡ ಒಂದು ಕಪ್‌ನಷ್ಟು ಹಸಿರು ಚಹಾವನ್ನು ಸೇವಿಸಿ ಇದು ನಿಮ್ಮ ಕ್ಯಾಲೋರಿಯನ್ನು ಕರಗಿಸುತ್ತದೆ.

ನೀರನ್ನು ತೆಗೆದುಹಾಕಲು ಸಹಾಯಕ

ನೀರನ್ನು ತೆಗೆದುಹಾಕಲು ಸಹಾಯಕ

ಕಾಫಿಯ ಬದಲಿಗೆ ನೀವು ಹಸಿರು ಚಹಾವನ್ನು (ಗ್ರೀನ್ ಟೀ) ಸೇವಿಸಲು ಪ್ರಯತ್ನಿಸಿ. ಕಾಫಿ ಬ್ರೇಕ್‌ಗೆ ಬದಲಿಗೆ ಹಸಿರು ಚಹಾ ವಿರಾಮವನ್ನು ಘೋಷಿಸಿಕೊಳ್ಳಿ. ತೂಕ ಇಳಿಸುವುದಕ್ಕಾಗಿ, ಕಪ್ ಅಥವಾ ಅರ್ಧ ಕಪ್‌ನಷ್ಟು ಹಸಿರು ಚಹಾವನ್ನು ಸಂಜೆಗಿಂತ ಮುಂಚೆ ಸೇವಿಸಬೇಕು. ದೇಹದಲ್ಲಿ ಶೇಖರವಾಗಿರುವ ನೀರನ್ನು ತೆಗೆದುಹಾಕಲು ಇದು ಸಹಾಯಕವಾಗಿದೆ.

ದೇಹದ ಕೊಬ್ಬನ್ನು ಕರಗಿಸಲು

ದೇಹದ ಕೊಬ್ಬನ್ನು ಕರಗಿಸಲು

ನಿಮ್ಮ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿರಿಸುತ್ತಾ ದೇಹದಲ್ಲಿನ ಕಾರ್ಬೋಹೈಡ್ರೇಟ್ ಅನ್ನು ನಿಧಾನವಾಗಿ ಇದು ಹೊರಬಿಡುತ್ತದೆ. ನಿಮ್ಮ ದೇಹದ ಕೊಬ್ಬನ್ನು ಇದು ಸುಲಭವಾಗಿ ಕರಗಿಸುತ್ತದೆ. ಒಂದು ಕಪ್‌ನಷ್ಟು ನೀರಿಗೆ ಎರಡು ಹಸಿರು ಚಹಾ ಬ್ಯಾಗ್ ಸಾಕು. ಇದು ನಿಮ್ಮ ತೂಕವನ್ನು ಕರಗಿಸುತ್ತದೆ.

ತೂಕ ಹೆಚ್ಚಾಗುವುದಿಲ್ಲ

ತೂಕ ಹೆಚ್ಚಾಗುವುದಿಲ್ಲ

ಹಸಿರು ಚಹಾವನ್ನು ಸೇವಿಸುವುದು ತೂಕ ಏರುವುದನ್ನು ನಿಯಂತ್ರಣದಲ್ಲಿಡುತ್ತದೆ. ನಿಮ್ಮ ಕೊಬ್ಬಿನ ಕೋಶಗಳಲ್ಲಿ ಸಕ್ಕರೆ ಸಂಗ್ರಹವಾಗುವುದನ್ನು ಇದು ತಡೆಗಟ್ಟುತ್ತದೆ. ಅಂದರೆ ನಿಮ್ಮ ತೂಕ ಏರುವುದಿಲ್ಲ ಬದಲಿಗೆ ಇಳಿಯುತ್ತದೆ.

ಕುರುಕಲು ತಿಂಡಿಗಳಿಗೆ ಕಡಿವಾಣ

ಕುರುಕಲು ತಿಂಡಿಗಳಿಗೆ ಕಡಿವಾಣ

ಕುರುಕಲು ಮತ್ತು ಎಣ್ಣೆ ತಿಂಡಿಗಳು ಹೆಚ್ಚಿನ ಕ್ಯಾಲೋರಿಗಳನ್ನು ಹೊಂದಿರುತ್ತದೆ. ನೀವು ಇದನ್ನು ಸೇವಿಸಿದಲ್ಲಿ ನಿಮ್ಮ ತೂಕ ಏರುತ್ತದೆ ಮತ್ತು ನಿಮ್ಮ ಡಯೆಟ್ ಇಲ್ಲಿ ನಿಧಾನವಾಗುತ್ತದೆ. ಹಸಿರು ಚಹಾ ಸೇವನೆಯ ಮೂಲಕ ನಿಮ್ಮ ಕುರುಕಲು ತಿಂಡಿಯ ವಿರಾಮಕ್ಕೆ ಬ್ರೇಕ್ ಬೀಳುವುದು ಖಂಡಿತ.

ನಿಯಮಿತವಾಗಿ ಸೇವಿಸಿ

ನಿಯಮಿತವಾಗಿ ಸೇವಿಸಿ

ನಿಮ್ಮ ತೂಕವನ್ನು ತ್ವರಿತವಾಗಿ ಇಳಿಸಬೇಕೆಂಬ ಬಯಕೆಯನ್ನು ನೀವು ಹೊಂದಿದವರಾಗಿದ್ದಲ್ಲಿ ಹಸಿರು ಚಹಾವನ್ನು ನಿಯಮಿತವಾಗಿ ಸೇವಿಸಬೇಕು. ನೀವು ಇದನ್ನು ನಿಯಮಿತವಾಗಿ ಸೇವಿಸುತ್ತಿದ್ದಲ್ಲಿ ನಿಮ್ಮ ದೇಹ ಈ ಪಾನೀಯಕ್ಕೆ ಹೊಂದಿಕೊಳ್ಳುತ್ತದೆ. ಇದು ದೇಹದಲ್ಲಿ ಕಡಿಮೆ ಕೊಬ್ಬು ಉತ್ಪತ್ತಿಯಾಗುವಂತೆ ನೋಡಿಕೊಳ್ಳುತ್ತದೆ.

ಹಸಿರು ಚಹಾದ ಇತರ ಆರೋಗ್ಯಕಾರಿ ಪ್ರಯೋಜನಗಳು

ಹಸಿರು ಚಹಾದ ಇತರ ಆರೋಗ್ಯಕಾರಿ ಪ್ರಯೋಜನಗಳು

ಗ್ರೀನ್ ಟೀಯು ಕೇವಲ ತೂಕ ಇಳಿಸುವಿಕೆಗೆ ಮಾತ್ರ ಸಹಾಯಕವಲ್ಲದೆ ಇತರ ಹಲವಾರು ರೋಗಗಳಿಗೆ ಪರಿಣಾಮಕಾರಿಯಾದ ಔಷಧವಾಗಿದೆ. ಇನ್ನಷ್ಟು ಮಾಹಿತಿಗಾಗಿ ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಹೊಟ್ಟೆ ನೋವಿಗಾಗಿ

ಹೊಟ್ಟೆ ನೋವಿಗಾಗಿ

ಹಾಲಿನ ಚಹಾದ ಬದಲಿಗೆ ಗ್ರೀನ್ ಟೀಯನ್ನು ಸೇವಿಸುವುದು ಹೊಟ್ಟೆ ನೋವನ್ನು ಹೋಗಲಾಡಿಸುತ್ತದೆ. ಗ್ರೀನ್ ಟೀಯೊಂದಿಗೆ ಸಣ್ಣ ತುಂಡು ಶುಂಠಿಯನ್ನು ಬೆರೆಸಿ ಸೇವಿಸುವುದು ಆರೋಗ್ಯಕ್ಕೆ ಉತ್ತಮ.

ಹೊಟ್ಟೆಯ ಅಲ್ಸರ್‌ಗಾಗಿ

ಹೊಟ್ಟೆಯ ಅಲ್ಸರ್‌ಗಾಗಿ

ಹೊಟ್ಟೆಯ ಅಲ್ಸರ್‌ನಿಂದ ಬಳಲುತ್ತಿರುವ ಹೆಚ್ಚಿನ ಜನರು ಗ್ರೀನ್ ಚಹಾವನ್ನು ತಮ್ಮ ಆಯ್ಕೆಯನ್ನಾಗಿಸಿಕೊಂಡಿದ್ದಾರೆ. ತಂಪಾದ ಗ್ರೀನ್ ಟೀಯಲ್ಲಿ ಉತ್ಕರ್ಷಣ ನಿರೋಧಿ ಅಂಶಗಳಿರುವುದರಿಂದ ಹೊಟ್ಟೆಯ ಅಲ್ಸರ್ ಅನ್ನು ಇದು ದೂರಮಾಡುತ್ತದೆ.

 ಹೊಟ್ಟೆಯಲ್ಲಿ ಕಂಡುಬರುವ ಬ್ಯಾಕ್ಟಿರೀಯಾವನ್ನು ನಿವಾರಿಸಲು

ಹೊಟ್ಟೆಯಲ್ಲಿ ಕಂಡುಬರುವ ಬ್ಯಾಕ್ಟಿರೀಯಾವನ್ನು ನಿವಾರಿಸಲು

ಇತರ ಚಹಾಗಳಿಗಿಂತ ಹೆಚ್ಚಾಗಿ ಜೈವಿಕ ಆಹಾರಗಳು ಗ್ರೀನ್ ಟೀಯಲ್ಲಿ ಇರುವುದರಿಂದ ಗ್ರೀನ್ ಟೀ ಉದರದ ಯಾವುದೇ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ಹೊಟ್ಟೆಯಲ್ಲಿ ಕಂಡುಬರುವ ಬ್ಯಾಕ್ಟಿರೀಯಾ ನಿಮ್ಮನ್ನು ಕಂಗೆಡಿಸಿದ್ದರೆ, ಬಿಸಿಯಾದ ಗ್ರೀನ್ ಟೀಯನ್ನು ಹೀರುವುದರಿಂದ ಕೆಟ್ಟ ಬ್ಯಾಕ್ಟಿರೀಯಾದಿಂದ ಮುಕ್ತಿಯನ್ನು ಹೊಂದಬಹುದು

ಹೊಟ್ಟೆಯ ಉರಿಗಾಗಿ

ಹೊಟ್ಟೆಯ ಉರಿಗಾಗಿ

ಹೊಟ್ಟೆಯ ಉರಿಯನ್ನು ಶಮನ ಮಾಡುವಲ್ಲಿ ಗ್ರೀನ್ ಟೀ ಒಂದು ಉತ್ತಮ ಔಷಧವಾಗಿದೆ. ಎರಡು ಚಮಚದಷ್ಟು ಮಿಂಟ್‌ನೊಂದಿಗೆ ಒಂದು ಕಪ್ ಗ್ರೀನ್ ಟೀಯನ್ನು ಸೇವಿಸುವುದು ಹೊಟ್ಟೆಯ ಉರಿಯನ್ನು ನೀಗಿಸುತ್ತದೆ.

ಕೂದಲು ಉದುರುವ ಸಮಸ್ಯೆಗೆ

ಕೂದಲು ಉದುರುವ ಸಮಸ್ಯೆಗೆ

ತಲೆಗೆ ಹಚ್ಚಿಕೊಳ್ಳುವ ಎಣ್ಣೆಯೊಂದಿಗೆ ಗ್ರೀನ್ ಟೀ ಮಿಶ್ರಣ ಮಾಡಿ ಕೂದಲಿನ ಬುಡಕ್ಕೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿಕೊಳ್ಳಬೇಕು. ಬೆರಳಿನಿಂದ ವರ್ತುಲಾಕಾರವಾಗಿ ಮಸಾಜ್ ಮಾಡಿಕೊಳ್ಳುತ್ತಾ ಇರಬೇಕು. ಹೀಗೆ ಆಗಾಗ್ಗೆ ಮಾಡಿಕೊಳ್ಳುತ್ತಿದ್ದರೆ ಕೂದಲು ಉದುರುವುದು ಕಡಿಮೆಗೊಳ್ಳುತ್ತದೆ.

ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗದಂತೆ ತಡೆಯುತ್ತದೆ

ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗದಂತೆ ತಡೆಯುತ್ತದೆ

ಗ್ರೀನ್ ಟೀ ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗದಂತೆ ತಡೆಯುತ್ತದೆ, ಅಲ್ಲದೆ ಕ್ಯಾನ್ಸರ್ ನಂತಹ ಮಾರಕ ರೋಗವನ್ನು ತಡೆಗಟ್ಟುವ ಔಷಧೀಯ ಗುಣವನ್ನು ಹೊಂದಿದೆ.

English summary

Green Tea Diet For Weight Loss

If you are thinking about losing weight quickly, you can resort to green tea. This is one of the best teas available in the market to drop pounds. So, here are some of the rules to follow when you are on a green tea diet plan to lose weight:
X
Desktop Bottom Promotion