For Quick Alerts
ALLOW NOTIFICATIONS  
For Daily Alerts

ಆರೋಗ್ಯ ವರ್ಧಕ ಸೊಪ್ಪಿನ ರಸಗಳು

By Poornima Hegde
|

ನಾವು ಸೇವಿಸುವ ಆಹಾರ ಜೀರ್ಣವಾಗುತ್ತದೆ ಎಂದಷ್ಟೇ ನಮಗೆ ಗೊತ್ತು. ಆದರೆ ಅದು ದೇಹದಕ್ಕಿ ಮತ್ತೇನಾದರೂ ರಾಸಾಯನಿಕಗಳನ್ನು ಬಿಡುಗಡೆ ಮಾಡುತ್ತದೆಯೇ ಎಂದು ನಿಮಗೆ ಗೊತ್ತೇ? ನಮ್ಮ ದೈನಂದಿನ ಜೀವನ ಶೈಲಿಯಲ್ಲಿ ಅದೆಷ್ಟೋ ವಿಷಕಾರಕ ವಸ್ತುಗಳು ನಮ್ಮ ದೇಹವನ್ನು ಸೇರಿಕೊಳ್ಳುತ್ತವೆ. ಮದ್ಯಪಾನ, ಧೂಮಪಾನ ಮತ್ತಿತರ ಆರೋಗ್ಯಕರ ವಲ್ಲದ ಅಭ್ಯಾಸಗಳು ನಮ್ಮ ದೇಹಕ್ಕೆ ಅದೆಷ್ಟೊ ಪ್ರಮಾಣದಲ್ಲಿ ವಿಷಕಾರಕ ವಸ್ತುಗಳನ್ನು ಬಿಡುಗಡೆ ಮಾಡುತ್ತವೆ. ಇದು ನಮ್ಮಲ್ಲಿ ಒತ್ತಡವನ್ನು ಸೃಷ್ಟಿಸುತ್ತದೆ. ಜೀರ್ಣಕ್ರಿಯೆ ಕೂಡ ಸರಿಯಾಗಿ ನಡೆಯುವುದಿಲ್ಲ. ಇದರಿಂದೆಲ್ಲಾ ತಪ್ಪಿಸಿಕೊಳ್ಳಲು ಈ ವಿಷಕಾರಕ ವಸ್ತುಗಳನ್ನು ನಮ್ಮ ದೇಹದಿಂದ ಹೊರಹಾಕಬೇಕು.

ಹಲವಾರು ವಿಧಗಳಲ್ಲಿ ನಾವಿದನ್ನು ಸಾಧಿಸಬಹುದಾಗಿದೆ.ಇದನ್ನು ನಾವು ಸೇವಿಸುವ ವಸ್ತುಗಳಲ್ಲಿ ವಿಷಕಾರಕ ವಸ್ತುಗಳು ಇಲ್ಲದಂತೆ ಮಾಡಿ ನಿಯಂತ್ರಣ ಮಾಡಬಹುದು ಅಥವಾ ರಕ್ತದಲ್ಲಿ ಸೇರಿರುವ ವಿಷಕಾರಕ ವಸ್ತುಗಳನ್ನು ಕಡಿಮೆ ಮಾಡುವ ಮೂಲಕ ಮಾಡಬಹುದು. ಇದರಿಂದಾಗಿ ನಮ್ಮ ದೇಹ ಮತ್ತು ನಮ್ಮ ಮನಸ್ಸಿನ ಒತ್ತಡ ನಿವಾರಣೆ ಮಾಡಬಹುದು.

ತರಕಾರಿಗಳು ಮತ್ತು ಹಣ್ಣುಗಳು ಉತ್ತಮವಾಗಿ ಕೆಲಸ ನಿರ್ವಹಿಸಬಲ್ಲುದು. ಇವುಗಳಲ್ಲೂ ಕೆಲವು ತರಕಾರಿಗಳಂತೂ ಬಹಳವೇ ಹೆಚ್ಚು ಪರಿಣಾಮಕಾರಿಯಾಗಿದೆ. ವ್ಯಾಯಾಮ, ಧ್ಯಾನ ಮತ್ತು ಯೋಗ ಕೂಡ ಇದರಲ್ಲಿ ಬಹಳ ನೆರವಾಗುತ್ತದೆ. ಹಣ್ಣಿನ ರಸಗಳು ಮತ್ತು ತರಕಾರಿಗಳು ಬಹಳ ಉತ್ತಮವಾಗಿ ಕೆಲಸ ಮಾಡಬಲ್ಲುದು. ಅವುಗಳೆಂದರೆ:

1.ಪಾಲಕ್ ಸೊಪ್ಪು

1.ಪಾಲಕ್ ಸೊಪ್ಪು

ನಮ್ಮ ದೇಹದಲ್ಲಿ ಇರುವ ವಿಷಕಾರಿ ವಸ್ತುಗಳನ್ನು ನಿರ್ಮೂಲನೆ ಮಾಡುವಲ್ಲಿ ಪಾಲಕ್ ಸೊಪ್ಪು ಬಹಳ ಪರಿಣಾಮಕಾರಿ. ಇದು ಅತ್ಯಂತ ಹೆಚ್ಚು ಜನರು ಬಳಸುವ ಮತ್ತು ಹೆಚ್ಚು ಜನರು ಸಲಹೆ ನೀಡುವ ಸೊಪ್ಪಾಗಿದೆ. ಇದನ್ನು ಲಿಂಬೆ ಹಣ್ಣು ಮತ್ತು ಕಾಳು ಮೆಣಸಿನ ಹುಡಿಯೊಂದಿಗೆ ಸೇವಿಸಬಹುದು. ಪಾಲಕ್ ಸೊಪ್ಪನ್ನು ಪೇಸ್ಟ್ ಮಾಡಿ ಇದಕ್ಕೆ ನೀರನ್ನು ಸೇರಿಸಿ ಇದಕ್ಕೆ ಲಿಂಬೆ ಹಣ್ಣಿನ ರಸವನ್ನು ಸೇರಿಸಿ ಹಾಗೂ ನಂತರ ಕಾಳು ಮೆಣಸಿನ ಹುಡಿಯನ್ನು ಹಾಕಿ. ಇದು ಇತರ ಹಣ್ಣಿನ ರಸಗಳಂತೆ ರುಚಿಕರವಾಗಿರದೇ ಇರಬಹುದು ಆದರೆ ಇದು ಯಾವುದೇ ಹಣ್ಣಿನ ರಸಕ್ಕಿಂತ ಹೆಚ್ಚು ಆರೋಗ್ಯಕರವಾಗಿದೆ.

2.ಹಸಿರು ಸೇಬು

2.ಹಸಿರು ಸೇಬು

ಹಸಿರು ಸೇಬು ಕೂಡ ಪಾಲಕ್ ಸೊಪ್ಪಿನಂತೆಯೇ ಬಹಳ ಪರಿಣಾಮಕಾರಿ. ಹಸಿರು ಸೇಬಿನ ರಸ ಬೇರೆ ಹಣ್ಣುಗಳ ರಸಕ್ಕಿಂತ ಹೆಚ್ಚು ರುಚಿಕರ ಹಾಗೂ ಹೆಚ್ಚು ಪ್ರಯೋಜನಕಾರಿ. ಇದನ್ನು ಜ್ಯೂಸರ್ ಸಹಾಯದಿಂದ ಮಾಡಬಹುದು. ಇದರಲ್ಲಿ ಏನೂ ಹಾಕದೆಯೂ ಜ್ಯೂಸ್ ತಯಾರಿಸಬಹುದು. ಇದಕ್ಕೆ ಸ್ವಲ್ಪ ಜೇನುತುಪ್ಪವನ್ನೂ ಸೇರಿಸಬಹುದು. ಇದನ್ನು ಆದಷ್ಟು ಪ್ರತಿದಿನ ಸೇವಿಸುವ ಅಭ್ಯಾಸ ಮಾಡಿಕೊಳ್ಳಿ ಅದರಲ್ಲೂ ಬೆಳಗ್ಗಿನ ಅವಧಿಯಲ್ಲಿ ಸೇವಿಸಿದರೆ ಉತ್ತಮ.

3.ತೆಂಗಿನಕಾಯಿ

3.ತೆಂಗಿನಕಾಯಿ

ಇದರಲ್ಲಿ ಆಕ್ಸಿಡೀಕಾರಕ ಮತ್ತು ಎಲೆಕ್ಟ್ರೋಲೈಟ್ ಗಳು ಹೆಚ್ಚಿನ ಪ್ರಮಾಣದಲ್ಲಿವೆ. ಇದು ನಮ್ಮ ದೇಹದಿಂದ ವಿಷಕಾರಿ ವಸ್ತುಗಳನ್ನು ಹೊರಹಾಕುತ್ತದೆ. ಎಳೆನೀರು ಮತ್ತಷ್ಟು ಪರಿಣಾಮಕಾರಿ ಮತ್ತು ಬೇರೆ ಆರೋಗ್ಯದ ದೃಷ್ಟಿಯಿಂದಲೂ ಉತ್ತಮ. ಇದು ನೈಸರ್ಗಿಕವಾದ ಪಾನೀಯ ಆಗಿರುವುದರಿಂದ ಹೆಚ್ಚಿನ ಜನರ ಆದ್ಯತೆಯ ಪಾನೀಯವಾಗಿದೆ. ಇದರಲ್ಲಿ ದೇಹವನ್ನು ಸ್ವಚ್ಛಗೊಳಿಸುವ ಅಂಶವೂ ಸೇರಿಕೊಂಡಿದೆ.

4.ಕೋಸುಗಡ್ಡೆ ಎಲೆಗಳು

4.ಕೋಸುಗಡ್ಡೆ ಎಲೆಗಳು

ಹೆಚ್ಚಿನ ಜನರಿಗೆ ಇದು ತಿಳಿದಿರಲಿಕ್ಕಿಲ್ಲ. ಆದರೆ ಕೋಸುಗಡ್ಡೆಯ ಎಲೆಗಳು ಎತೀ ಉತ್ತಮವಾದ ವಿಷಕಾರಕ ಅಂಶ ನಿವಾರಣಾ ಸಾಮರ್ಥ್ಯ ಹೊಂದಿವೆ. ಇದನ್ನು ಪಾಲಕ್, ಸೇಬಿನ ಜೊತೆಗೂ ಸೇವಿಸಬಹುದು.ಕೋಸುಗಡ್ಡೆ ಎಲೆಗಳ ರಸವನ್ನು ಮಾಡುವಾಗ ಅದಕ್ಕೆ ಲಿಂಬೆ ಹಣ್ಣು, ಶುಂಠಿ, ಸ್ವಲ್ಪ ಮುಳ್ಳುಸೌತೆ ಹಾಕಿ ಮಾಡಿದಲ್ಲಿ ರುಚಿಯೂ ಬಹಳ ಚೆನ್ನಾಗಿರುತ್ತದೆ. ಇದನ್ನೂ ಬೆಳಗ್ಗಿನ ಅವಧಿಯಲ್ಲಿ ಸೇವನೆ ಮಾಡಿದರೆ ಬಹಳ ಉತ್ತಮ.

5.ಪುದಿನ ಮತ್ತು ಲಿಂಬೆ

5.ಪುದಿನ ಮತ್ತು ಲಿಂಬೆ

ಪುದಿನ ಬರಿಯ ಸುವಾಸನಾ ವಸ್ತುವಲ್ಲ ಆರೋಗ್ಯದ ದೃಷ್ಟಿಯಿಂದಲೂ ಬಹಳ ಮಹತ್ವದ ಸೊಪ್ಪು. ಇದನ್ನು ಜ್ಯೂಸ್ ಮಾಡಿ ಇದಕ್ಕೆ ಲಿಂಬೆ ಹಣ್ಣಿನ ಹನಿಗಳನ್ನು ಹಾಕಿ ಜ್ಯೂಸ್ ಅನ್ನು ತಯಾರಿಸಬಹುದು. ಇದಕ್ಕೆ ಕಾಳುಮೆಣಸಿನ ಹುಡಿ ಮತ್ತು ಉಪ್ಪು ಹಾಕಿದರೆ ರುಚಿಗೂ ಬಹಳ ಹಿತಕರ.

Read more about: health ಆರೋಗ್ಯ
English summary

Green Juices to detox your body

Our body gets accumulated with a lot of toxins due to our day to day habits and lifestyle. Alcohol consumption, smoking cigarettes and unhealthy eating habits add to the daily amount of toxins in our body.
Story first published: Monday, January 6, 2014, 9:56 [IST]
X
Desktop Bottom Promotion