For Quick Alerts
ALLOW NOTIFICATIONS  
For Daily Alerts

ಸಂಧಿವಾತಕ್ಕೆ ಅತ್ಯುತ್ತಮ ನೈಸರ್ಗಿಕ ಪರಿಹಾರಗಳು

|

ದೇಹದಲ್ಲಿ ಯೂರಿಕ್ ಆಸಿಡ್ ಹೆಚ್ಚಾದಾಗ ಸಂಧಿವಾತ ಕಂಡು ಬರುವುದು. ಪ್ರೊಟೀನ್ ತುಂಬಾ ಅವಶ್ಯಕವಾದ ಪೋಷಕಾಂಶವಾದರೂ ದೇಹದಲ್ಲಿ ಪ್ರೊಟೀನ್ ಅಂಶ ಅತ್ಯಧಿಕವಾದರೆ ಯೂರಿಕ್ ಆಸಿಡ್ ಪ್ರಮಾಣ ಹೆಚ್ಚಾಗುತ್ತದೆ. ಕಿಡ್ನಿ ಅತ್ಯಧಿಕವಾದ ಯೂರಿಕ್ ಆಸಿಡ್ ಅನ್ನು ದೇಹದಿಂದ ಹೊರಹಾಕಲು ವಿಫಲವಾಗುತ್ತದೆ. ಇದರಿಂದಾಗಿ ಸಂಧಿವಾತ ಉಂಟಾಗುವುದು.

ಆಧುನಿಕ ಔಷಧಿಗಳು ಅಸ್ತಿತ್ವಕ್ಕೆ ಬರುವ ಮೊದಲು ಜನರು ನೈಸರ್ಗಿಕವಾಗಿ ಬೆಳೆಯುತ್ತಿದ್ದ ಪ್ರಾಕೃತಿಕ ಸಸ್ಯಗಳು ಮತ್ತು ಮೂಲಿಕೆಗಳ ಸಹಾಯದಿಂದ ಎಲ್ಲಾ ಕಾಯಿಲೆಗಳಿಗೆ ಪರಿಹಾರಗಳನ್ನು ಕಂಡುಕೊಂಡಿದ್ದರು. ಈ ನೈಸರ್ಗಿಕ ಪರಿಹಾರವು ಕೇವಲ ಪರಿಹಾರಕೊಡುತ್ತಿದ್ದಲ್ಲದೇ ಅವು ಸುರಕ್ಷಿತ ಮತ್ತು ಸುಭದ್ರವಾಗಿಯೂ ಇರುತ್ತಿದ್ದವು. ಈ ದಿಸೆಯಲ್ಲಿ ಸಂಧಿವಾತದ ಪರಿಹಾರಕ್ಕೆ ಅತ್ಯುತ್ತಮ ನೈಸರ್ಗಿಕ ಪರಿಹಾರಗಳನ್ನು ನಾವು ಇಲ್ಲಿ ನಿಮ್ಮ ಮುಂದಿಟ್ಟಿದ್ದೇವೆ. ಕೇವಲ 2 ವಾರದಲ್ಲಿ ತೂಕ ಇಳಿಸುವ ಪ್ರಬಲ ವ್ಯಾಯಾಮಗಳು!

ಸಾಸಿವೆ

ನಮ್ಮ ನರಗಳಮೇಲೆ ಸಾಸಿವೆ ಒಂದು ಹಿತವಾದ ಪರಿಣಾಮವನ್ನು ಬೀರುವ ಗುಣಗಳನ್ನು ಹೊಂದಿದೆ. ಸಾಸಿವೆ ಪುಡಿ ಮತ್ತು ಗೋಧಿ ಹಿಟ್ಟು ಇವೆರಡರ ಮಿಶ್ರಣವನ್ನು ನೀರಿನಿಂದ ಪೇಸ್ಟ್ ಮಾಡಿಕೊಂಡು ನೋವಿರುವ ಸ್ಥಳಗಳ ಮೇಲೆ ರಾತ್ರಿ ಮಲಗುವ ಮುನ್ನ ಲೇಪಿಸಿ. ಹೀಗೆ ಒಂದು ರಾತ್ರಿ ಬಿಟ್ಟನಂತರ ನಿಮಗೆ ನೋವು ತ್ವರಿತವಾಗಿ ಪರಿಹಾರಗೊಂಡಿರುವುದನ್ನು ಅನುಭವಿಸುತ್ತೀರಿ.

ಜೇನು ತುಪ್ಪ

ಜೇನು ತುಪ್ಪ ಮತ್ತು ಸೇಬು ಹಣ್ಣಿನ ಸೈಡರ್ ವಿನೇಗರ್ ಎರಡನ್ನೂ ಮಿಶ್ರಮಾಡಿ ಸೇವಿಸಿದರೆ ಸಂಧಿವಾತವನ್ನು ಗುಣಪಡಿಸಲು ಸಾಧ್ಯವಾಗುತ್ತದೆ. ಈ ಮಿಶ್ರಣವನ್ನು ದಿನಕ್ಕೆ ಎರಡುಬಾರಿ ತೆಗೆದುಕೊಳ್ಳಬೇಕು.

ಬಾಳೆಹಣ್ಣು

ವಿಟಮಿನ್ ಸಿ ಬಾಳೆಹಣ್ಣಿನಲ್ಲಿ ಅಧಿಕವಾಗಿ ದೊರೆಯುತ್ತದೆ. ಬಾಳೆಹಣ್ಣು ತಿನ್ನುವುದರಿಂದ ಕೀಲುನೋವುಗಳನ್ನು ನಿವಾರಿಸಲು ಸಹಾಯವಾಗುತ್ತದೆ. ಬಾಳೆಹಾಣ್ಣಿನಲ್ಲಿರುವ ಸಮೃದ್ಧ ಅಂಶಗಳು ದೇಹದಲ್ಲಿರುವ ಯೂರಿಕ್ ಆಮ್ಲದ ಸ್ಫಟಿಕಗಳನ್ನು ದುರ್ಬಲಗೊಳಿಸಿ ದ್ರವರೂಪಕ್ಕೆ ತರುವ ಸಾಮರ್ಥ್ಯವನ್ನು ಹೊಂದಿದೆ ಮತ್ತು ಅದರಿಂದ ಸಂಧಿವಾತದ ನೋವು ನಿವಾರಣೆಯಾಗಲು ಸಹಾಯಮಾಡುತ್ತದೆ.

ನಿಂಬೆ ಹಣ್ಣಿನ ರಸ


ನಿಂಬೆ ಹಣ್ಣಿನ ಪಾನೀಯವು ಸಂಧಿವಾತದ ಲಕ್ಷಣಗಳಿಗೆ ಒಂದು ಪರಿಣಾಮಕಾರಿ ಮತ್ತು ಸರಳ ಚಿಕಿತ್ಸೆ. ಅರ್ಧ ನಿಂಬೆಹಣ್ಣಿನ ರಸವನ್ನು ಒಂದು ಗ್ಲಾಸ್ ನೀರಿಗೆ ಬೆರಸಿ ದಿನಕ್ಕೆ ಮೂರುಬಾರಿ ಸವೆದು ನಿಮ್ಮ ನೋವಿನಲ್ಲಾಗುವ ವ್ಯತ್ಯಾಸವನ್ನು ಗಮನಿಸಿರಿ. ಅಲ್ಲದೆ ನಿಂಬೆಹಣ್ಣಿನ ಪಾನೀಯಕ್ಕೆ ಅರ್ಧ ಚಮಚ ಅಡಿಗೆಸೋಡಾ ಬೆರಸಿ ಕುಡಿಯಿರಿ. ಸಿಹಿ ಬಯಕೆ ನಿಯಂತ್ರಿಸಲು ಟಿಪ್ಸ್: ಡಯಾಬಿಟಿಸ್ ವಿಶೇಷ

ಶುಂಠಿ

ಶುಂಟಿಯು ಮನೆಯ ಒಂದು ಚಿರಪರಿಚಿತ ಪರಿಪೂರ್ಣ ಔಷಧಿ ಮತ್ತು ಅದರಿಂದ ಅನೇಕ ಉಪಯೋಗಗಳಿವೆ. ಕೀಲುನೋವುಗಳನ್ನು ಶುಂಠಿಯಿಂದ ನಿವಾರಿಸಲ್ಪಟ್ಟಿದೆಯೆಂದು ಅನೇಕ ಪ್ರಯೋಗಗಳಿಂದ ತಿಳಿದಿವೆ. ನಿಮ್ಮ ದೈನಂದಿನ ಆಹಾರಗಳಲ್ಲಿ ಶುಂಠಿಯನ್ನು ಸೇರಿಸಿ ಸೇವಿಸಬಹುದು. ಅದನ್ನು ವಿಶೇಷ ಅಡುಗೆಗಳಲ್ಲಿ ಸೇರ್ಪಡೆಮಾಡಬಹುದು. ಬಹಳ ಜನರು ಶುಂಠಿಯ ಬೇರನ್ನು ನೀರಲ್ಲಿ ಟೀ ಪುಡಿಯ ಜೊತೆ ಸೇರಿಸಿ ಕುದಿಸಿ ಟೀ ಮಾಡುತ್ತಾರೆ. ಶುಂಠಿಯನ್ನು ಅರೆದು ಪೇಸ್ಟ್ ಮಾಡಿ ನೋವಿನ ಜಾಗಗಳ ಮೇಲೆ ಹಚ್ಚಿದರೆ ಜಂಟಿ ನೋವು ಶೀಘ್ರ ಪರಿಹಾರವಾಗುತ್ತದೆ.
English summary

Gout treatment natural cures

Gout or gouty arthritis is a disease mainly due to high uric acid levels in the blood. Uric acid is one of the end products of protein metabolism. Here are tips to avoid gout pain.
Story first published: Tuesday, November 11, 2014, 14:48 [IST]
X
Desktop Bottom Promotion