For Quick Alerts
ALLOW NOTIFICATIONS  
For Daily Alerts

ತೂಕ ಇಳಿಸಿಕೊಳ್ಳಬೇಕೆಂದರೆ ಇಂತಹ ಆಹಾರ ಮಿಸ್ ಮಾಡಬೇಡಿ!

|

ಚಳಿಗಾಲದ ರಜಾ ದಿನಗಳು ವರ್ಷದ ಅತ್ಯಂತ ಅಮೋಘ ದಿನಗಳಾಗಿರುತ್ತದೆ. ಹೆಚ್ಚುವರಿ ಕ್ಯಾಲೋರಿಗಳು ನಮ್ಮ ದೇಹವನ್ನು ಸೇರುತ್ತಿರುವುದರಿಂದ ಕಠಿಣ ಆಹಾರ ಕ್ರಮಗಳು ಮೂಲೆ ಸೇರಿಬಿಡುತ್ತದೆ. ಕ್ರಿಸ್ಮಸ್ ಮತ್ತು ಹೊಸವರ್ಷದ ಮಧ್ಯೆ ಕಡಿಮೆ ತಿಂದು, ವ್ಯಾಯಾಮ ಮಾಡಬೇಕೆನ್ನುವ ಯೋಜನೆಗಳೆಲ್ಲವೂ ಉಲ್ಟಾಪಲ್ಟಾ ಆಗುತ್ತದೆ.

ಇದರಿಂದ ರಜಾ ದಿನಗಳಲ್ಲಿ ತೂಕ ಹೆಚ್ಚಾಗುವುದನ್ನು ತಡೆಯುವುದು ಹೇಗೆ? ರಜಾ ದಿನಗಳಲ್ಲಿ ಆಹಾರ ಕ್ರಮವನ್ನು ಪಾಲಿಸಿಕೊಂಡು ಹೋಗುವುದು ದೊಡ್ಡ ಸವಾಲಿನ ಕೆಲಸ. ತೂಕ ಹೆಚ್ಚುವುದನ್ನು ತಡೆಯಲು ನೀವು ಆಸೆಗಳನ್ನು ಮಿತಿಯಲ್ಲಿಡಬೇಕಾಗುತ್ತದೆ.

ಸಾಮಾನ್ಯವಾಗಿ ತೂಕ ಇಳಿಸಿಕೊಳ್ಳಬೇಕೆಂದರೆ ಎರಡು ಮಾರ್ಗವಿದೆ. ಒಂದು ಡಯಟ್, ಇಲ್ಲವೆಂದರೆ ವ್ಯಾಯಾಮ. ಆದರೆ ಇವೆರಡರ ಹೊರತಾಗಿಯೂ ಮೂರನೇ ಮಾರ್ಗವೊಂದಿದೆ. ಡಯಟ್, ವ್ಯಾಯಾಮ ಏನೂ ಮಾಡದೆ ತಿನ್ನುತ್ತಾ ತೂಕ ಇಳಿಸಿಕೊಳ್ಳುವ ಮಾರ್ಗವಿದು. ದೇಹದಲ್ಲಿನ ಅಧಿಕ ಕೊಬ್ಬನ್ನು ಬೇಗನೆ ಕರಗಿಸುವ ಇಂತಹ ಆಹಾರ ಸೇವಿಸಿದರೆ ಕೊಬ್ಬು ಕರಗುವುದರೊಂದಿಗೆ ದೇಹಕ್ಕೆ ಒಳ್ಳೆ ಆಕಾರ ಕೂಡ ಸಿಗುತ್ತೆ.

ಮೊಟ್ಟೆ

ಮೊಟ್ಟೆಯನ್ನು ಬೆಳಗಿನ ಉಪಹಾರದ ಸಮಯದಲ್ಲಿ ಸೇವಿಸಿದರೆ ಒಳ್ಳೆಯದು. ಪೋಷಕಾಂಶಯುಕ್ತ ಆಹಾರವೂ ಆದ ಮೊಟ್ಟೆ ಹೊಟ್ಟೆಯಲ್ಲಿ ಮತ್ತು ಸೊಂಟದಲ್ಲಿರುವ ಬೊಜ್ಜನ್ನು ಕರಗಿಸುತ್ತದೆ. ತೂಕ ಕಳೆದುಕೊಳ್ಳುವುದಕ್ಕೋಸ್ಕರ ಉಪಹಾರ ಬಿಡುವವರು ಮೊಟ್ಟೆ ತಿನ್ನುವುದರಿಂದ ಉಪಯೋಗ ಹೊಂದಬಹುದು. ಮೊಟ್ಟೆ ಹೆಚ್ಚಿನ ಕ್ಯಾಲೊರಿ ಕರಗಿಸುವುದರೊಂದಿಗೆ ಹಸಿವನ್ನು ನಿಯಂತ್ರಿಸುತ್ತದೆ. ಇದು ಬೊಜ್ಜನ್ನು ಕರಗಿಸಿ ಅದನ್ನು ಶಕ್ತಿಯನ್ನಾಗಿ ಮಾರ್ಪಾಡು ಮಾಡುತ್ತದೆ.

ಟೊಮೇಟೊ

ನಿಮ್ಮ ಆಹಾರದೊಂದಿಗೆ ಟೊಮೆಟೊ ಹಣ್ಣನ್ನು ಹೆಚ್ಚಾಗಿ ಬಳಸಿ. ಟೊಮೆಟೊದಲ್ಲಿ ದೇಹದಲ್ಲಿನ ಬೊಜ್ಜನ್ನು ಕರಗಿಸುವ ಅಂಶ ಹೆಚ್ಚಿದೆ. ಅಷ್ಟೇ ಅಲ್ಲ, ಕ್ಯಾನ್ಸರನ್ನೂ ನಿವಾರಿಸುತ್ತದೆ. ನಿಮಗೆ ಹಸಿವಾದಾಗ ಹಸಿ ಟೊಮೇಟೊ ತಿಂದರೆ ಹೊಟ್ಟೆ ತುಂಬುವುದರೊಂದಿಗೆ ಅನಗತ್ಯ ಆಹಾರ ಸೇವಿಸಿ ದೇಹದಲ್ಲಿ ಬೊಜ್ಜು ಸೇರುವುದನ್ನೂ ತಡೆಯಬಹುದು.

ಜೇನು

ನೀವು ಬೇಗನೆ ದೇಹದ ಬೊಜ್ಜನ್ನು ಕರಗಿಸಿಕೊಳ್ಳಬೇಕೆಂದಿದ್ದರೆ ಬಿಸಿ ನೀರಿನೊಂದಿಗೆ ಒಂದು ಚಮಚ ಜೇನನ್ನು ಬೆರೆಸಿ ಕುಡಿಯಿರಿ. ಜೇನನ್ನು ಹಾಗೇ ತಿಂದರೂ ಪ್ರಯೋಜನವಿದೆ. ಜೇನಿನಲ್ಲಿರುವ ಕಾರ್ಬೊಹೈಡ್ರೇಟ್ ಜೀರ್ಣಕ್ರಿಯೆ ಹೆಚ್ಚಿಸಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಸಕ್ಕರೆಯ ಬದಲಿಯಾಗಿ ಜೇನನ್ನು ಉಪಯೋಗಿಸಿಕೊಂಡರೆ ತೂಕ ಕ್ರಮೇಣ ಇಳಿಕೆಯಾಗಿರುವುದು ನಿಮಗೆ ಗೋಚರಿಸುತ್ತೆ.

ನಿಂಬೆಹಣ್ಣು


ಕೇವಲ ನಿಂಬೆ ಮಾತ್ರವಲ್ಲ, ವಿಟಮಿನ್ ಸಿ ಹೇರಳವಾಗಿರುವ ಆಹಾರ ಬೊಜ್ಜನ್ನು ಬೇಗನೆ ಕರಗಿಸುತ್ತದೆ. ಡಯಟ್ ಮಾಡಲು ಸಾಧ್ಯವಾಗದಿದ್ದವರು ವಿಟಮಿನ್ ಸಿ ಹೆಚ್ಚಿರುವ ಆಹಾರ ಸೇವಿಸಿದರೆ ಸಾಕು, ಒಳ್ಳೆ ಶೇಪ್ ಪಡೆದುಕೊಳ್ಳಬಹುದು. ನಿಂಬೆ, ದ್ರಾಕ್ಷಿ, ಕಿತ್ತಳೆ, ಕ್ಯಾರೆಟ್, ಎಲೆಕೋಸು, ಹೂಕೋಸು, ಕಲ್ಲಂಗಡಿ ಇವುಗಳ ಸೇವನೆ ಮಾಡಿದರೆ ಕೊಲೆಸ್ಟ್ರಾಲ್ ಬೇಗ ಕರಗುತ್ತದೆ.

ನೀರು


ನೀರು ತೂಕ ಇಳಿಸಿಕೊಳ್ಳಲು ತುಂಬಾ ಉಪಯೋಗಕ್ಕೆ ಬರುತ್ತೆ. ನೀರನ್ನು ಹೆಚ್ಚು ಕುಡಿಯುವುದರಿಂದ ಹಸಿವನ್ನೂ ನಿಯಂತ್ರಿಸಿ ಅನಗತ್ಯವಾಗಿ ಹೆಚ್ಚು ಊಟ ಮಾಡುವುದನ್ನು ತಡೆಯಬಹುದು. ಊಟವಾದ ನಂತರ ಬಿಸಿ ನೀರನ್ನು ಸೇವಿಸುತ್ತಾ ಬಂದರೆ ಕೆಲವೇ ದಿನಗಳಲ್ಲಿ ಫಲಿತಾಂಶವನ್ನು ನಿಮಗೆ ತಿಳಿಯುತ್ತದೆ. ಬಿಸಿ ನೀರಿನೊಂದಿಗೆ ನಿಂಬೆರಸ ಅಥವಾ ಜೇನನ್ನು ಬೆರೆಸಿ ಕುಡಿದರೂ ಬೊಜ್ಜನ್ನು ಬೇಗ ಕರಗಿಸಿಕೊಳ್ಳಬಹುದು.
English summary

Foods that burn body fat naturally

You go to a party and try to resist all the good food around. You succeed mostly but then a helping of extra cheese or that delicious dessert piece cannot be prevented! So here we mentioned such foods which should help you to prevent the weight lose and also body fat, have a look
X
Desktop Bottom Promotion